-
ಬೈಬಲನ್ನು ಏಕೆ ಓದಬೇಕು?ಕಾವಲಿನಬುರುಜು (ಸಾರ್ವಜನಿಕ)—2017 | ನಂ. 1
-
-
ಮುಖಪುಟ ಲೇಖನ | ಬೈಬಲಿನಿಂದ ಪ್ರಯೋಜನ ಪಡೆಯಿರಿ
ಬೈಬಲನ್ನು ಏಕೆ ಓದಬೇಕು?
“ಬೈಬಲ್ ಓದಿದ್ರೆ ಅರ್ಥ ಆಗಲ್ಲ ಅಂತ ನಾನು ಅಂದ್ಕೊಂಡಿದ್ದೆ.”—ಜೂವೀ
“ಅದು ತುಂಬ ಬೋರಿಂಗ್ ಆಗಿರುತ್ತೆ ಅಂತ ಅಂದ್ಕೊಂಡಿದ್ದೆ.”—ಕ್ವೀನೀ
“ಬೈಬಲಿನ ಗಾತ್ರ ನೋಡಿದ ತಕ್ಷಣ ಅದನ್ನ ಓದಬೇಕು ಅನ್ನೋ ಆಸೆನೇ ಹೊರಟೋಯ್ತು.”—ಎಝೆಕ್ಯೆಲ್
ನೀವು ಯಾವತ್ತಾದರೂ ಬೈಬಲನ್ನು ಓದಬೇಕು ಅಂದ್ಕೊಂಡು ಕೊನೆಗೆ ಮೇಲೆ ಹೇಳಿರೋ ರೀತಿ ಯೋಚಿಸಿ ಓದೋದನ್ನೇ ಕೈಬಿಟ್ಟಿದ್ದೀರಾ? ತುಂಬ ಜನರಿಗೆ ಅದನ್ನ ಓದೋದಂದ್ರೆ ಇಷ್ಟ ಆಗಲ್ಲ. ಆದರೆ ನಿಮ್ಮ ಜೀವನದಲ್ಲಿ ಸಂತೋಷ, ನೆಮ್ಮದಿ ತರುವ ವಿಷಯ ಬೈಬಲಿನಲ್ಲಿದೆ ಅಂತ ಗೊತ್ತಾದ್ರೆ, ಆಗ ಅದನ್ನು ಓದ್ತೀರಾ? ಬೈಬಲ್ ಓದೋದನ್ನು ಆಸಕ್ತಿಕರವಾಗಿ ಮಾಡುವುದು ಹೇಗೆ ಅಂತ ಗೊತ್ತಾದ್ರೆ, ನೀವು ಬೈಬಲಿನಲ್ಲಿ ಏನಿದೆ ಅಂತ ತಿಳಿದುಕೊಳ್ಳಲು ಇಷ್ಟಪಡ್ತೀರಾ?
ಬೈಬಲ್ ಓದಲು ಆರಂಭಿಸಿದ ಮೇಲೆ ಕೆಲವರಿಗೆ ಏನು ಅನಿಸಿದೆ ಅಂತ ಅವರ ಮಾತುಗಳಲ್ಲೇ ಕೇಳಿ:
ಹೆಚ್ಚು ಕಡಿಮೆ 20ವರ್ಷದ ಎಝೆಕ್ಯೆಲ್ ಹೀಗೆ ಹೇಳುತ್ತಾನೆ, “ಎಲ್ಲಿಗೆ ಹೋಗ್ಬೇಕು ಅಂತ ಗೊತ್ತು ಗುರಿ ಇಲ್ಲದೆ ಕಾರ್ ಓಡಿಸುವವನ ಹಾಗೆ ನಾನಿದ್ದೆ. ಆದರೆ ಬೈಬಲನ್ನು ಓದೋಕೆ ಶುರುಮಾಡಿದ ಮೇಲೆ ಜೀವನಕ್ಕೊಂದು ಗುರಿ, ಅರ್ಥ ಸಿಕ್ತು. ನಮ್ಮ ಜೀವನಕ್ಕೆ ಬೇಕಾದ ಸಲಹೆಗಳು ಅದರಲ್ಲಿವೆ.”
ಅದೇ ವಯಸ್ಸಿನ ಫ್ರೀಡಾ ಹೀಗೆ ಹೇಳುತ್ತಾಳೆ, “ಮೊದಲು ನನಗೆ ತುಂಬ ಬೇಗ ಕೋಪ ಬರ್ತಿತ್ತು. ಬೈಬಲ್ ಓದೋದ್ರಿಂದ ಈಗ ನನ್ನ ಭಾವನೆಗಳನ್ನ ಹಿಡಿತದಲ್ಲಿಡೋಕೆ ಕಲ್ತಿದ್ದೀನಿ. ಇದ್ರಿಂದ ಎಲ್ಲರ ಜೊತೆ ಚೆನ್ನಾಗಿ ಇರೋಕೆ ಸಾಧ್ಯವಾಗಿದೆ. ನಂಗೀಗ ತುಂಬ ಫ್ರೆಂಡ್ಸ್ ಇದ್ದಾರೆ.”
50 ವರ್ಷದ ಯೂನಿಸ್ ಎಂಬವರು ಹೀಗನ್ನುತ್ತಾರೆ, “ಕೆಟ್ಟ ಅಭ್ಯಾಸಗಳನ್ನು ಬಿಟ್ಟು, ಒಳ್ಳೇ ವ್ಯಕ್ತಿಯಾಗಲು ಇದು ನನಗೆ ಸಹಾಯ ಮಾಡಿದೆ.”
ಇವರಿಗೆ ಮತ್ತು ಇವರಂಥ ಲಕ್ಷಾಂತರ ಜನರಿಗೆ ಬೈಬಲ್ ಓದುವುದರಿಂದ ಹೆಚ್ಚು ಸಂತೋಷದ ಜೀವನ ನಡೆಸಲು ಸಾಧ್ಯವಾಗಿದೆ. ನಿಮಗೂ ಸಾಧ್ಯವಾಗುತ್ತದೆ. (ಯೆಶಾಯ 48:17, 18) ಇದರ ಸಹಾಯದಿಂದ (1) ಒಳ್ಳೇ ನಿರ್ಣಯ ಮಾಡಬಹುದು, (2) ಒಳ್ಳೇ ಸ್ನೇಹಿತರನ್ನು ಮಾಡಿಕೊಳ್ಳಬಹುದು, (3) ಒತ್ತಡವನ್ನು ನಿಭಾಯಿಸಬಹುದು, (4) ಎಲ್ಲಕ್ಕಿಂತ ಹೆಚ್ಚಾಗಿ ದೇವರ ಬಗ್ಗೆ ಸತ್ಯವನ್ನು ತಿಳಿದುಕೊಳ್ಳಬಹುದು. ಹೀಗೆ ಬೈಬಲಿನಿಂದ ನಮಗೆ ಅನೇಕ ಪ್ರಯೋಜನಗಳಿವೆ. ಬೈಬಲನ್ನು ಬರೆಸಿರುವುದು ದೇವರೇ. ಆದ್ದರಿಂದ ಅದನ್ನು ಪಾಲಿಸುವುದರಿಂದ ನಿಮಗೆ ಯಾವ ಕೇಡೂ ಆಗುವುದಿಲ್ಲ. ಕಾರಣ ದೇವರು ಯಾವತ್ತೂ ಕೆಟ್ಟ ಸಲಹೆ ಕೊಡುವುದಿಲ್ಲ.
ಆದ್ದರಿಂದ ಬೈಬಲನ್ನು ಓದುವುದು ತುಂಬ ಪ್ರಾಮುಖ್ಯ. ನಿಮಗೆ ಬೈಬಲ್ ಓದುವುದು ಸುಲಭವಾಗಲು ಮತ್ತು ಇಷ್ಟವಾಗಲು ಸಹಾಯ ಮಾಡುವ ಕೆಲವು ವಿಷಯಗಳು ಮುಂದಿನ ಲೇಖದಲ್ಲಿವೆ.
-
-
ಬೈಬಲನ್ನು ಓದೋದು ಹೇಗೆ?ಕಾವಲಿನಬುರುಜು (ಸಾರ್ವಜನಿಕ)—2017 | ನಂ. 1
-
-
ಮುಖಪುಟ ಲೇಖನ | ಬೈಬಲಿನಿಂದ ಪ್ರಯೋಜನ ಪಡೆಯಿರಿ
ಬೈಬಲನ್ನು ಓದುವುದು ಹೇಗೆ?
ಬೈಬಲ್ ಓದುವುದನ್ನು ಆನಂದಿಸಲು ಮತ್ತು ಅದರಿಂದ ಹೆಚ್ಚು ಪ್ರಯೋಜನ ಪಡೆಯಲು ಏನು ಮಾಡಬೇಕು? ಈ ವಿಷಯದಲ್ಲಿ ಹಲವರಿಗೆ ಸಹಾಯ ಮಾಡಿರುವ ಐದು ಸಲಹೆಗಳನ್ನು ನೋಡೋಣ.
ಪರಿಸರ ಪ್ರಶಾಂತವಾಗಿರಲಿ. ನಿಮ್ಮ ಸುತ್ತಮುತ್ತ ಗಲಾಟೆ, ಸದ್ದುಗದ್ದಲ ಇಲ್ಲದಿರುವಂತೆ ನೋಡಿಕೊಳ್ಳಿ. ಆಗ ನೀವು ಓದುವುದರ ಕಡೆಗೆ ಗಮನಕೊಡಲು ಸಾಧ್ಯವಾಗುತ್ತದೆ. ಬೈಬಲ್ ಓದುವಾಗ ಸಾಕಷ್ಟು ಗಾಳಿ, ಬೆಳಕು ಇದ್ದರೆ ಹೆಚ್ಚು ಪ್ರಯೋಜನ ಪಡೆಯಲು ಸಾಧ್ಯ.
ಸರಿಯಾದ ಮನೋಭಾವ ಇರಲಿ. ತಂದೆಯಿಂದ ಕಲಿಯಲು ಬಯಸುವ ಮಗುವಿನಲ್ಲಿರುವ ಮನೋಭಾವ ನಿಮ್ಮಲ್ಲಿರಬೇಕು. ಕಾರಣ, ಬೈಬಲ್ ನಮ್ಮೆಲ್ಲರ ತಂದೆಯಾದ ದೇವರಿಂದ ಬಂದಿದೆ. ಆದ್ದರಿಂದ ಬೈಬಲಿನ ಬಗ್ಗೆ ನಿಮಗೆ ಅಷ್ಟು ಒಳ್ಳೇ ಅಭಿಪ್ರಾಯ ಇಲ್ಲದಿದ್ದರೂ ಅಥವಾ ತಪ್ಪಭಿಪ್ರಾಯ ಇದ್ದರೂ ಅದನ್ನೆಲ್ಲಾ ಪಕ್ಕಕ್ಕಿಟ್ಟು ಓದಲು ಪ್ರಯತ್ನಿಸಿ. ಆಗ ದೇವರು ಹೇಳುವುದು ಸರಿ ಅಂತ ಗೊತ್ತಾಗುತ್ತೆ, ಹೆಚ್ಚು ಕಲಿಯಲೂ ಸಾಧ್ಯವಾಗುತ್ತದೆ.—ಕೀರ್ತನೆ 25:4.
ಓದುವ ಮುಂಚೆ ಪ್ರಾರ್ಥಿಸಿ. ಬೈಬಲಿನಲ್ಲಿ ಇರೋದೆಲ್ಲಾ ದೇವರ ಆಲೋಚನೆಗಳೇ. ಅವುಗಳನ್ನು ಅರ್ಥಮಾಡಿಕೊಳ್ಳಲು ದೇವರ ಸಹಾಯ ಬೇಕು. ಅದಕ್ಕಾಗಿ, ‘ಪವಿತ್ರಾತ್ಮವನ್ನು ಕೊಡುತ್ತೇನೆ’ ಎಂದು ಸ್ವತಃ ದೇವರೇ ಮಾತುಕೊಟ್ಟಿದ್ದಾನೆ. (ಲೂಕ 11:13) ಈ ಪವಿತ್ರಾತ್ಮ ದೇವರ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಕ್ರಮೇಣ ‘ದೇವರ ಅಗಾಧವಾದ ವಿಷಯಗಳನ್ನು’ ಸಹ ಅರ್ಥಮಾಡಿಕೊಳ್ಳಲು ನಿಮ್ಮ ಮನಸ್ಸನ್ನು ತೆರೆಯುತ್ತದೆ.—1 ಕೊರಿಂಥ 2:10.
ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಮೇಲೆ ಮೇಲೇ ಓದಬೇಡಿ ಅಥವಾ ಓದಿ ಮುಗಿಸಿಬಿಡಬೇಕು ಅಂತ ಓದಬೇಡಿ. ನೀವು ಓದುತ್ತಿರುವ ವಿಷಯದ ಬಗ್ಗೆ ಯೋಚಿಸಿ. ‘ನಾನು ಓದುತ್ತಿರುವ ಭಾಗದಲ್ಲಿರುವ ಈ ವ್ಯಕ್ತಿಯಲ್ಲಿ ಯಾವ ಗುಣಗಳಿವೆ?’ ‘ಇವುಗಳನ್ನು ನನ್ನ ಜೀವನದಲ್ಲಿ ಹೇಗೆ ಅನ್ವಯಿಸಬಹುದು?’ ಎಂದು ಕೇಳಿಕೊಳ್ಳಿ.
ನಿರ್ದಿಷ್ಟ ಗುರಿಯಿಡಿ. ಯಾವುದಾದರೂ ಅಂಶವನ್ನು ಕಲಿಯುವ ಗುರಿಯಿಟ್ಟು ಓದಿ. ಆ ಅಂಶ ನಿಮ್ಮ ಜೀವನವನ್ನು ಉತ್ತಮಗೊಳಿಸುವ ವಿಷಯವಾಗಿರಬೇಕು. ಆಗ ಬೈಬಲಿನಿಂದ ಹೆಚ್ಚು ಪ್ರಯೋಜನ ಪಡೆಯಲು ಸಾಧ್ಯ. ಉದಾಹರಣೆಗೆ, ‘ನಾನು ದೇವರ ಬಗ್ಗೆ ಹೆಚ್ಚನ್ನು ಕಲಿಯಬೇಕು,’ ‘ನಾನು ಒಳ್ಳೇ ವ್ಯಕ್ತಿ, ಗಂಡ ಅಥವಾ ಹೆಂಡತಿ ಆಗಬೇಕು’ ಎಂಬಂಥ ಗುರಿಗಳನ್ನು ಇಟ್ಟುಕೊಳ್ಳಬಹುದು. ನಂತರ, ಇವುಗಳನ್ನು ಮುಟ್ಟಲು ಸಹಾಯ ಮಾಡುವ ಬೈಬಲಿನ ಭಾಗಗಳನ್ನು ಆರಿಸಿ ಅವುಗಳನ್ನು ಓದಿ.a
ಈ ಐದು ವಿಷಯಗಳು ಬೈಬಲ್ ಓದುವುದನ್ನು ಆರಂಭಿಸಲು ನಿಮಗೆ ಸಹಾಯ ಮಾಡುತ್ತವೆ. ಆದರೆ ಬೈಬಲ್ ಓದುವುದನ್ನು ಆಸಕ್ತಿಕರವಾಗಿ ಮಾಡುವುದು ಹೇಗೆ? ಮುಂದಿನ ಲೇಖನ ಅದನ್ನು ತಿಳಿಸುತ್ತದೆ.
a ಬೈಬಲಿನ ಯಾವ ಭಾಗ ಓದಬೇಕೆಂದು ನಿಮಗೆ ಗೊತ್ತಿಲ್ಲದೆ ಇದ್ದರೆ, ಯೆಹೋವನ ಸಾಕ್ಷಿಗಳು ನಿಮಗೆ ಸಹಾಯ ಮಾಡುತ್ತಾರೆ.
-
-
ಆಸಕ್ತಿಕರವಾಗಿ ಓದಲು ಇನ್ನೇನು ಮಾಡಬೇಕು?ಕಾವಲಿನಬುರುಜು (ಸಾರ್ವಜನಿಕ)—2017 | ನಂ. 1
-
-
ಮುಖಪುಟ ಲೇಖನ | ಬೈಬಲಿನಿಂದ ಪ್ರಯೋಜನ ಪಡೆಯಿರಿ
ಆಸಕ್ತಿಕರವಾಗಿ ಓದಲು ಏನು ಮಾಡಬೇಕು?
ಬೈಬಲ್ ಓದುವುದೆಂದರೆ ನಿಮಗೆ ಖುಷಿಯಾಗುತ್ತಾ? ಅಥವಾ ಬೋರಾಗುತ್ತಾ? ಈ ಪ್ರಶ್ನೆಗೆ ಉತ್ತರ, ನೀವು ಹೇಗೆ ಓದುತ್ತೀರಾ ಅನ್ನುವುದರ ಮೇಲೆ ಹೊಂದಿಕೊಂಡಿದೆ. ಆಸಕ್ತಿಕರವಾಗಿ ಮತ್ತು ಖುಷಿ ಖುಷಿಯಾಗಿ ಬೈಬಲ್ ಓದಲು ನೀವೇನು ಮಾಡಬಹುದು ಅಂತ ನೋಡೋಣ ಬನ್ನಿ.
ಸರಿಯಾದ ಮತ್ತು ಸರಳ ಭಾಷಾಂತರವನ್ನು ಉಪಯೋಗಿಸಿ. ಹಳೆಯ ಭಾಷೆಯ ಅಥವಾ ಕಷ್ಟದ ಪದಗಳಿರುವ ಬೈಬಲನ್ನು ಓದಿದರೆ ಸಾಕಾಗಿ ಹೋಗುತ್ತದೆ. ಆದ್ದರಿಂದ, ನಿಮಗೆ ಸುಲಭವಾಗಿ ಅರ್ಥವಾಗುವ, ನಿಮ್ಮ ಹೃದಯ ಮುಟ್ಟುವ ಭಾಷಾಂತರವನ್ನು ಹುಡುಕಿ. ಆದರೆ, ಅದು ನಿಖರವಾದ ಅಥವಾ ಸರಿಯಾದ ಭಾಷಾಂತರವಾಗಿರಬೇಕು.a
ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ. ಬೈಬಲ್, ಮುದ್ರಿತ ರೂಪದಲ್ಲಿ ಮಾತ್ರವೇ ಅಲ್ಲ ಎಲೆಕ್ಟ್ರಾನಿಕ್ ರೂಪದಲ್ಲೂ ಲಭ್ಯವಿದೆ. ಕೆಲವು ಬೈಬಲ್‌ಗಳನ್ನು ಇಂಟರ್‌ನೆಟ್‌ನಲ್ಲಿ ಓದಬಹುದು ಅಥವಾ ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಮೊಬೈಲ್, ಟ್ಯಾಬ್ ಮತ್ತು ಕಂಪ್ಯೂಟರ್‌ನಲ್ಲಿ ಓದಬಹುದು. ಎಲೆಕ್ಟ್ರಾನಿಕ್ ರೂಪದ ಕೆಲವು ಬೈಬಲ್‌ಗಳಲ್ಲಿ ನೀವು ಓದುತ್ತಿರುವ ವಿಷಯಕ್ಕೆ ಸಂಬಂಧಪಟ್ಟ ಬೇರೆ ವಚನಗಳನ್ನು ಕ್ಷಣ ಮಾತ್ರದಲ್ಲೇ ಹುಡುಕುವ ಮತ್ತು ಬೇರೆ ಬೇರೆ ಭಾಷಾಂತರಗಳನ್ನು ಹೋಲಿಸಿ ನೋಡುವ ವೈಶಿಷ್ಟ್ಯಗಳು ಸಹ ಇರುತ್ತವೆ. ಕೆಲವು ಭಾಷೆಗಳಲ್ಲಿ ರೆಕಾರ್ಡ್ ಮಾಡಲಾಗಿರುವ ಬೈಬಲ್‌ಗಳೂ ಇವೆ. ಹಾಗಾಗಿ ನೀವು ಓದುವ ಬದಲು ಕೇಳಿಸಿಕೊಳ್ಳಲೂಬಹುದು. ತುಂಬ ಜನ, ಪ್ರಯಾಣಿಸುವಾಗ ಅಥವಾ ಬೇರೆ ಕೆಲಸಗಳನ್ನು ಮಾಡುವಾಗ ಕೇಳಿಸಿಕೊಳ್ಳುತ್ತಾರೆ. ಬೈಬಲ್ ಓದಲು ಈ ವಿಧಾನಗಳಲ್ಲಿ ನಿಮಗೆ ಸೂಕ್ತವಾದ ಯಾವುದಾದರೂ ಒಂದು ವಿಧಾನವನ್ನು ಆರಿಸಿಕೊಳ್ಳಿ.
ಅಧ್ಯಯನ ಸಹಾಯಕಗಳನ್ನು ಉಪಯೋಗಿಸಿ. ಬೈಬಲ್ ಓದುವುದರಿಂದ ಹೆಚ್ಚು ಪ್ರಯೋಜನ ಪಡೆಯಲು ಬೈಬಲ್ ಅಧ್ಯಯನ ಸಹಾಯಕಗಳು ನಿಮಗೆ ಸಹಾಯ ಮಾಡುತ್ತವೆ. ಯಾವ ಸ್ಥಳದಲ್ಲಿ ಏನಾಯಿತು ಎಂದು ಚೆನ್ನಾಗಿ ಅರ್ಥಮಾಡಿಕೊಳ್ಳಲು ಇವುಗಳಲ್ಲಿ ಬೈಬಲಿನಲ್ಲಿ ತಿಳಿಸಿರುವ ದೇಶಗಳ ಭೂಪಟಗಳಿವೆ. ಈ ಪತ್ರಿಕೆಯಲ್ಲಿರುವ ಲೇಖನಗಳು ಮತ್ತು jw.org ವೆಬ್‌ಸೈಟ್‌ನಲ್ಲಿರುವ ಇತರ ಲೇಖನಗಳು ಬೈಬಲಿನ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ.
ವಿಭಿನ್ನ ವಿಧಾನಗಳನ್ನು ಬಳಸಿ. ಬೈಬಲಿನ ಮೊದಲ ಪುಟದಿಂದ ಕೊನೆಯ ಪುಟದವರೆಗೆ ಓದುವುದು ಅಸಾಧ್ಯ ಎಂದು ನಿಮಗನಿಸಿದರೆ ಬೇರೆ ವಿಧಾನ ಬಳಸಿ. ಉದಾಹರಣೆಗೆ, ನಿಮಗಿಷ್ಟವಾದ ಬೈಬಲಿನ ಭಾಗವನ್ನು ಆರಿಸಿ ಓದಿ. ಬೈಬಲಿನಲ್ಲಿ ತಿಳಿಸಿರುವ ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ತಿಳಿಯಲು ಇಷ್ಟವಿದ್ದರೆ, ನೀವು ಅವರ ವಿವರಗಳಿರುವ ಭಾಗಗಳನ್ನು ಓದಿ. ಒಂದರ ನಂತರ ಒಂದು ವಿಷಯವನ್ನು ಓದಬಹುದು. ಇದನ್ನು ಹೇಗೆ ಮಾಡಬಹುದು ಎಂದು “ಬೈಬಲ್ ಬಗ್ಗೆ ಹೆಚ್ಚನ್ನು ತಿಳಿಯಲು ಅದರಲ್ಲಿನ ಜನರ ಬಗ್ಗೆ ತಿಳಿಯಿರಿ” ಎಂಬ ಚೌಕದಲ್ಲಿ ಕೊಡಲಾಗಿದೆ. ಅಥವಾ ಘಟನೆಗಳು ನಡೆದ ಕ್ರಮದಲ್ಲಿ ಓದಬಹುದು. ಇವುಗಳಲ್ಲಿ ಒಂದನ್ನು ನೀವು ಪ್ರಯತ್ನಿಸಿ ನೋಡಬಹುದಲ್ಲವೇ?
a ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ ಎಂಬ ಬೈಬಲ್ ನಿಖರವಾದ, ಭರವಸಾರ್ಹ ಮತ್ತು ಸರಳ ಭಾಷಾಂತರವಾಗಿದೆ ಎಂದು ತುಂಬ ಜನ ಕಂಡುಕೊಂಡಿದ್ದಾರೆ. ಈ ಬೈಬಲನ್ನು ಯೆಹೋವನ ಸಾಕ್ಷಿಗಳು ಭಾಷಾಂತರಿಸಿದ್ದು, ಇದೀಗ 130ಕ್ಕಿಂತ ಹೆಚ್ಚಿನ ಭಾಷೆಗಳಲ್ಲಿ ಲಭ್ಯವಿದೆ. jw.org ವೆಬ್‌ಸೈಟಿಂದ ಅಥವಾ JW ಲೈಬ್ರರಿ ಆ್ಯಪ್‌ನಿಂದ ನೀವು ಈ ಬೈಬಲನ್ನು ಡೌನ್‌ಲೋಡ್‌ಮಾಡಿಕೊಳ್ಳಬಹುದು. ನೀವು ಇಷ್ಟಪಟ್ಟರೆ, ಯೆಹೋವನ ಸಾಕ್ಷಿಗಳಲ್ಲೊಬ್ಬರು ನಿಮ್ಮ ಮನೆಗೆ ಬಂದು ಈ ಭಾಷಾಂತರದ ಒಂದು ಪ್ರತಿಯನ್ನು ಉಚಿತವಾಗಿ ಕೊಡುವರು.
-
-
ಬೈಬಲಿನಿಂದ ನಿಮಗೇನು ಪ್ರಯೋಜನ?ಕಾವಲಿನಬುರುಜು (ಸಾರ್ವಜನಿಕ)—2017 | ನಂ. 1
-
-
ಮುಖಪುಟ ಲೇಖನ | ಬೈಬಲಿನಿಂದ ಪ್ರಯೋಜನ ಪಡೆಯಿರಿ
ಬೈಬಲಿನಿಂದ ಯಾವ ಪ್ರಯೋಜನವಿದೆ?
ಬೈಬಲ್ ಬೇರೆ ಪುಸ್ತಕಗಳ ಹಾಗೆ ಅಲ್ಲ, ಅದರಲ್ಲಿ ನಮ್ಮನ್ನು ಸೃಷ್ಟಿಸಿದ ದೇವರು ಕೊಟ್ಟ ಸಲಹೆಗಳಿವೆ. (2 ತಿಮೊಥೆಯ 3:16) ಇದರಲ್ಲಿನ ಸಂದೇಶ ನಮ್ಮನ್ನು ಗಾಢವಾಗಿ ಪ್ರಭಾವಿಸುತ್ತದೆ. “ದೇವರ ವಾಕ್ಯವು ಸಜೀವವಾದದ್ದೂ ಪ್ರಬಲವಾದದ್ದೂ” ಆಗಿದೆ ಎಂದು ಬೈಬಲೇ ಹೇಳುತ್ತದೆ. (ಇಬ್ರಿಯ 4:12) ಬೈಬಲಿನಿಂದ ನಮಗೆ ಎರಡು ಮುಖ್ಯ ಪ್ರಯೋಜನಗಳಿವೆ. ಒಂದು, ಬೈಬಲ್ ಸಂತೃಪ್ತಿಯ ಜೀವನ ನಡೆಸಲು ಸಹಾಯ ಮಾಡುತ್ತದೆ. ಎರಡು, ದೇವರ ಬಗ್ಗೆ ಮತ್ತು ಆತನು ನಮಗೆ ಕೊಟ್ಟಿರುವ ಮಾತಿನ ಬಗ್ಗೆ ತಿಳಿಸುತ್ತದೆ.—1 ತಿಮೊಥೆಯ 4:8; ಯಾಕೋಬ 4:8.
ಸಂತೃಪ್ತಿಯ ಜೀವನ ನಡೆಸಲು. ಬೈಬಲ್ ನಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಷಯಗಳಲ್ಲೂ ಸಲಹೆ ಕೊಡುತ್ತದೆ. ಅದು ಸಲಹೆ ಕೊಡುವ ವಿಷಯಗಳಲ್ಲಿ ಕೆಲವು:
ಕುಟುಂಬ ಮತ್ತು ಇತರರೊಂದಿಗಿನ ಸಂಬಂಧ.—ಎಫೆಸ 4:31, 32; 5:22, 25, 28, 33.
ಭಾವನೆಗಳು ಮತ್ತು ಆರೋಗ್ಯ.—ಕೀರ್ತನೆ 37:8; ಜ್ಞಾನೋಕ್ತಿ 17:22.
ನಡತೆ.—1 ಕೊರಿಂಥ 6:9, 10.
ಹಣಕಾಸು.—ಜ್ಞಾನೋಕ್ತಿ 10:4; 28:19; ಎಫೆಸ 4:28.a
ಬೈಬಲಿನಲ್ಲಿನ ಇಂತಹ ಸಲಹೆಗಳಿಂದ ಪ್ರಯೋಜನ ಪಡೆದ ಗಂಡ-ಹೆಂಡತಿ ಇಬ್ಬರೂ ಅದರಲ್ಲಿನ ವಿವೇಕವನ್ನು ತುಂಬ ಪ್ರಶಂಸಿಸುತ್ತಾರೆ. ಹೊಸದಾಗಿ ಮದುವೆಯಾದವರಿಗೆ ಹೊಂದಿಕೊಳ್ಳಲು, ಮನಸ್ಸು ಬಿಚ್ಚಿ ಮಾತಾಡಲು ಮೊದ ಮೊದಲು ಕಷ್ಟವಾಗುವಂತೆ ಇವರಿಗೂ ಆಯಿತು. ಆಗ ಅವರು ಬೈಬಲಿನಲ್ಲಿರುವ ಸಲಹೆಯನ್ನು ಅನ್ವಯಿಸಿದರು. ಇದರಿಂದ ಏನಾದರೂ ಪ್ರಯೋಜನ ಆಯಿತಾ? ಈ ಪ್ರಶ್ನೆಗೆ ಗಂಡ ವಿಸೆಂಟ್ ಉತ್ತರ ಗಮನಿಸಿ, “ಬೈಬಲಿನಲ್ಲಿ ನಾನು ಓದಿದ ವಿಷಯ ನಮ್ಮ ಸಮಸ್ಯೆಗಳನ್ನು ಪ್ರೀತಿಯಿಂದ ಬಗೆಹರಿಸಿಕೊಳ್ಳಲು ಸಹಾಯ ಮಾಡಿತು. “ಬೈಬಲ್ ಹೇಳಿದಂತೆ ನಡೆಯುತ್ತಿರುವುದರಿಂದ ನಾವಿಬ್ಬರೂ ಜೀವನದಲ್ಲಿ ಸಂತೋಷದಿಂದ ಇದ್ದೇವೆ.” ಅವರ ಹೆಂಡತಿ ಆನಾಲೂ, “ಬೈಬಲಿನಲ್ಲಿನ ಜನರ ಅನುಭವಗಳನ್ನು ಓದಿದ್ದು ನಮಗೆ ತುಂಬ ಸಹಾಯ ಮಾಡಿದೆ. ಈಗ ನಮ್ಮ ಜೀವನದಲ್ಲಿ ಸರಿಯಾದ ಗುರಿಗಳಿವೆ. ನಾನು ನನ್ನ ವಿವಾಹಬಂಧದಲ್ಲಿ ಸಂತೃಪ್ತಿ ಮತ್ತು ಆನಂದ ಪಡೆದಿದ್ದೇನೆ” ಎಂದು ಹೇಳುತ್ತಾರೆ.
ದೇವರ ಬಗ್ಗೆ ತಿಳಿದುಕೊಳ್ಳಲು. ವಿಸೆಂಟ್‌ರಿಗೆ ಬೈಬಲ್, ಮದುವೆಯ ವಿಷಯದಲ್ಲಿ ಮಾತ್ರ ಸಹಾಯ ಮಾಡಲಿಲ್ಲ. ಅವರು ಹೇಳ್ತಾರೆ, ‘ಬೈಬಲ್ ಓದೋದ್ರಿಂದ ಯೆಹೋವ ದೇವರು ನನಗೆ ಈಗ ಹೆಚ್ಚು ಆಪ್ತರಾಗಿದ್ದಾರೆ ಅಂತ ಅನಿಸುತ್ತೆ.’ ವಿಸೆಂಟ್‌ರ ಮಾತಿನಲ್ಲಿನ ಮುಖ್ಯ ಅಂಶವನ್ನು ಗಮನಿಸಿದಿರಾ? ಬೈಬಲ್ ಓದುವುದರಿಂದ ನಾವು ದೇವರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬಹುದು. ಹಾಗೆ ತಿಳಿದುಕೊಳ್ಳುವಾಗ ಆತನ ಸಲಹೆಗಳಿಂದ ಪ್ರಯೋಜನ ಪಡೆಯುವುದು ಮಾತ್ರ ಅಲ್ಲ, ದೇವರನ್ನು ನಮ್ಮ ಆಪ್ತ ಸ್ನೇಹಿತನನ್ನಾಗಿಯೂ ಮಾಡಿಕೊಳ್ಳಬಹುದು. ಜೊತೆಗೆ, “ವಾಸ್ತವವಾದ ಜೀವನ” ಅಂದರೆ, ಸಾವಿಲ್ಲದ ನಿತ್ಯ ನಿರಂತರ ಜೀವನವನ್ನು ಆನಂದಿಸುವಂಥ ಸುಂದರ ಭವಿಷ್ಯತ್ತಿನ ಬಗ್ಗೆ ದೇವರು ಹೇಳಿರೋ ಮಾಹಿತಿಯನ್ನು ತಿಳಿದುಕೊಳ್ಳಬಹುದು. (1ತಿಮೊಥೆಯ 6:19) ಜಗತ್ತಿನ ಯಾವ ಪುಸ್ತಕದಲ್ಲೂ ಇಂಥ ವಿಷಯ ಸಿಗುವುದಿಲ್ಲ!
ಬೈಬಲ್ ಓದುತ್ತಾ ಅದರಲ್ಲಿನ ಸಲಹೆಗಳನ್ನು ಅನ್ವಯಿಸಿದರೆ, ನಿಮ್ಮ ಜೀವನದಲ್ಲಿ ಸಂತೃಪ್ತಿ ಮತ್ತು ದೇವರ ಸ್ನೇಹ ಎರಡೂ ಸಿಗುತ್ತದೆ. ಆದರೆ, ನೀವು ಬೈಬಲ್ ಓದುವಾಗ ನಿಮ್ಮ ಮನಸ್ಸಿಗೆ ಹತ್ತು ಹಲವು ಪ್ರಶ್ನೆಗಳು ಬರಬಹುದು. ಆಗ, ಬೈಬಲಿನಲ್ಲಿ ತಿಳಿಸಿರುವ ಸುಮಾರು 2000 ವರ್ಷಗಳ ಹಿಂದೆ ಇದ್ದ ಇಥಿಯೋಪ್ಯದ ಅಧಿಕಾರಿಯ ಮಾದರಿಯನ್ನು ಅನುಸರಿಸಿ. ಬೈಬಲ್ ಓದಿದಾಗ ಅವನಿಗೂ ಹಲವಾರು ಪ್ರಶ್ನೆಗಳು ಬಂದವು. ಓದುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯಾ ಎಂದು ಕೇಳಿದ್ದಕ್ಕೆ ಆತ, “ಯಾವನಾದರೂ ಮಾರ್ಗದರ್ಶನ ನೀಡದಿದ್ದರೆ ನನಗೆ ಹೇಗೆ ಅರ್ಥವಾದೀತು?” ಎಂದು ಹೇಳಿದನು.b ತಕ್ಷಣವೇ ಅವನು ಬೈಬಲನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದ ಯೇಸುವಿನ ಶಿಷ್ಯ ಫಿಲಿಪ್ಪನ ಸಹಾಯ ಪಡೆದುಕೊಂಡನು. (ಅಪೊಸ್ತಲರ ಕಾರ್ಯಗಳು 8:30, 31, 34) ಅದೇ ರೀತಿ, ನಿಮಗೂ ಬೈಬಲಿನ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಮನಸ್ಸಿದ್ದರೆ, www.pr2711.com ವೆಬ್‌ಸೈಟ್ ಮೂಲಕ ಅಥವಾ ಈ ಪತ್ರಿಕೆಯಲ್ಲಿ ಕೊಡಲ್ಪಟ್ಚಿರುವ ವಿಳಾಸದ ಮೂಲಕ ನಿಮ್ಮ ಬಯಕೆಯನ್ನು ಬರೆದು ಕಳುಹಿಸಿ. ಇಲ್ಲವೆ, ನಿಮಗೆ ಹತ್ತಿರವಿರುವ ಯೆಹೋವನ ಸಾಕ್ಷಿಗಳನ್ನು ಅಥವಾ ಅವರ ರಾಜ್ಯ ಸಭಾಗೃಹವನ್ನು ಭೇಟಿಮಾಡಿ. ಬೈಬಲಿನಿಂದ ಖಂಡಿತ ಪ್ರಯೋಜನವಿದೆ ಎಂದು ತಿಳಿದ ಮೇಲೆ ನೀವೂ ಒಂದು ಬೈಬಲನ್ನು ಪಡೆದು, ಓದಿ, ನಿತ್ಯ ಜೀವದ ಹಾದಿಯಲ್ಲಿ ನಡೆಯಬಹುದಲ್ಲವೇ? ▪
ಬೈಬಲನ್ನು ನಿಜವಾಗಿಯೂ ನಂಬಬಹುದಾ ಎಂಬ ಪ್ರಶ್ನೆ ನಿಮಗಿದ್ದರೆ, ಬೈಬಲ್‌ನಲ್ಲಿರುವ ವಿಷಯಗಳು ಸತ್ಯವೆಂದು ನಾವು ಹೇಗೆ ನಂಬಬಹುದು? ಎಂಬ ವಿಡಿಯೋ ನೋಡಿ. ಈ ವಿಡಿಯೋವನ್ನು ನೋಡಲು ಇಲ್ಲಿನ ಕೋಡ್ ಸ್ಕ್ಯಾನ್ ಮಾಡಿ ಅಥವಾ jw.org ವೆಬ್‌ಸೈಟಲ್ಲಿ PUBLICATIONS > VIDEOS > THE BIBLE ಎಂಬಲ್ಲಿ ನೋಡಿ.
a ಬೈಬಲಿನಲ್ಲಿರುವ ಇತರ ಸಲಹೆಗಳನ್ನು ತಿಳಿಯಲು ನಮ್ಮ jw.org ವೈಬ್‌ಸೈಟ್‌ನಲ್ಲಿ BIBLE TEACHINGS > BIBLE QUESTIONS ANSWERED ಎಂಬ ವಿಭಾಗವನ್ನು ನೋಡಿ.
b ಇದೇ ಪತ್ರಿಕೆಯಲ್ಲಿರುವ “ಸರಿಯಾಗಿ ಅರ್ಥಮಾಡಿಕೊಳ್ಳುವುದು ಯಾಕಷ್ಟು ಪ್ರಾಮುಖ್ಯ?” ಎಂಬ ಲೇಖನವನ್ನು ಸಹ ನೋಡಿ.
-