ಗೀತೆ 118
ಒಬ್ಬರನ್ನೊಬ್ಬರು ಸ್ವಾಗತಿಸಿರಿ
1. ಇಂದಿಲ್ಲಿ ಕೇಳಲು ದೇವ ವಾಕ್ಯ
ಬಂದಿರುವವರ್ಗೆ ಸ್ವಾಗತ.
ದೇವರ ಸತ್ಯ ಲಭ್ಯವೆಲ್ಲರ್ಗೆ,
ಕೃತಜ್ಞರು ನಾವು ಆತನ ಕರೆಗೆ.
2. ನಾವು ಆಭಾರಿ ಯೆಹೋವನಿಗೆ
ಸೋದರರ ಕೊಟ್ಟಿರೋದಕೆ.
ಪ್ರಿಯರೆಮಗೆ ಇಂತಹ ಜನ,
ಸ್ವಾಗತಿಸುತ್ತೇವೀಗ ಸಂಗಡಿಗರ.
3. ಸರ್ವರಿಗಿದೆ ದೇವರ ಕರೆ,
ಸತ್ಯ ಕಂಡುಹಿಡಿಯಲಿಕೆ.
ಸೆಳೆದನೆಮ್ಮ ಪುತ್ರ ಮೂಲಕ,
ನೀವವರ ಸ್ವಾಗತಿಸಿ ಹೃತ್ಪೂರ್ವಕ.
(ಯೋಹಾ. 6:44; ಫಿಲಿ. 2:29; ಪ್ರಕ. 22:17 ಸಹ ನೋಡಿ.)