ನಿಮ್ಮ ಮಕ್ಕಳನ್ನು ರಕ್ತದ ದುರುಪಯೋಗದಿಂದ ರಕ್ಷಿಸುವದು
1 “ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸವ್ಥು.” (ಕೀರ್ತ. 127:3) ಯೆಹೋವನಿಂದ ನಿಮಗೆ ಅಂಥ ಅಮೂಲ್ಯವಾದ ಸ್ವಾಸವ್ಥು ಇರುವದಾದರೆ, ಹೆತ್ತವರೋಪಾದಿ ನಿಮಗೆ, ಸಂತೋಷದ ಆದರೂ ನಿಮ್ಮ ಮಕ್ಕಳನ್ನು ತರಬೇತಿಗೊಳಿಸುವ, ಜತನತಕ್ಕೊಳ್ಳುವ ಮತ್ತು ಸಂರಕ್ಷಿಸುವ ಗಂಭೀರವಾದ ಜವಾಬ್ದಾರಿ ಇದೆ. ಉದಾಹರಣೆಗೆ, ಒಂದು ರಕ್ತ ಪೂರಣದಿಂದ ನಿಮ್ಮ ಎಳೆಯ ಮಕ್ಕಳನ್ನು ಸಂರಕ್ಷಿಸಲು ನೀವು ಸಮಂಜಸವಾಗಿರುವ ಪ್ರತಿಯೊಂದು ಹೆಜ್ಜೆಯನ್ನು ತಕ್ಕೊಂಡಿರುತ್ತೀರೋ? ಒಂದು ಪೂರಣದ ಪ್ರತೀಕ್ಷೆಗಳ ಎದುರಿನಲ್ಲಿ, ನಿಮ್ಮ ಮಕ್ಕಳು ಹೇಗೆ ಪ್ರತಿಕ್ರಿಯಿಸುವರು? ಪೂರಣದ ಬೆದರಿಕೆಯೊಡ್ಡಲ್ಪಟ್ಟ ಒಂದು ತುರ್ತು ಸನ್ನಿವೇಶವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ನೀವೇನು ಮಾಡಬಹುದೆಂದು ಕುಟುಂಬದೋಪಾದಿ ನೀವು ಚರ್ಚಿಸಿರುವಿರೋ?
2 ಅಂಥ ಸನ್ನಿವೇಶಗಳಿಗೆ ನಿಮ್ಮ ಪರಿವಾರವನ್ನು ತಯಾರಿಸುವದು ಉದ್ವೇಗಕ್ಕೆ ಯಾ ಅನಾವಶ್ಯಕ ಒತ್ತಡಕ್ಕೆ ಕಾರಣವಾಗುವ ಅವಶ್ಯವೇನೂ ಇಲ್ಲ. ಜೀವಿತದ ಪ್ರತಿಯೊಂದು ಸಂಭವನೀಯತೆಗಳನ್ನು ನೀವು ನಿರೀಕ್ಷಿಸ ಮತ್ತು ತಯಾರಿಸ ಸಾಧ್ಯವಿಲ್ಲ, ಆದರೆ ಹೆತ್ತವರೋಪಾದಿ ಪೂರಣವೊಂದರಿಂದ ನಿಮ್ಮ ಮಕ್ಕಳನ್ನು ಸಂರಕ್ಷಿಸಲು ಮೊದಲೇ ನೀವು ಮಾಡಬಹುದಾದ ಅನೇಕ ಸಂಗತಿಗಳು ಅಲ್ಲಿರುತ್ತವೆ. ಈ ಜವಾಬ್ದಾರಿಗಳನ್ನು ನಿರ್ಲಕ್ಷ್ಯಿಸುವದರಿಂದ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವಾಗ ನಿಮ್ಮ ಮಗುವಿಗೆ ಪೂರಣ ಕೊಡಲ್ಪಡುವ ಫಲಿತಾಂಶವುಂಟಾಗಬಹುದು. ಏನು ಮಾಡಸಾಧ್ಯವಿದೆ?
3 ದೃಢವಾದ ಮನವರಿಕೆ ಪ್ರಾಮುಖ್ಯ: ರಕ್ತದ ಮೇಲೆ ದೇವರ ನಿಯಮದ ಕುರಿತು ನಿಮ್ಮ ಸ್ವಂತ ಮನವರಿಕೆಗಳು ಎಷ್ಟು ದೃಢವಾಗಿವೆ ಎಂಬುದರ ಕಡೆಗೆ ಗಂಭೀರವಾದ ಯೋಚನೆಯನ್ನು ಹರಿಸತಕ್ಕದ್ದು. ಪ್ರಾಮಾಣಿಕತೆಯ, ನೈತಿಕತೆಯ, ತಾಟಸ್ಥ್ಯತೆಯ, ಮತ್ತು ಜೀವಿತದ ಇತರ ವಿಭಾಗಗಳ ಕಡೆಗೆ ಅವನ ನಿಯಮಗಳನ್ನು ನೀವು ಅವರಿಗೆ ಕಲಿಸುವಂತೆಯೇ, ಈ ವಿಚಾರದಲ್ಲಿಯೂ ಯೆಹೋವನಿಗೆ ವಿಧೇಯರಾಗಲು ನಿಮ್ಮ ಮಕ್ಕಳಿಗೆ ನೀವು ಕಲಿಸುತ್ತಿದ್ದೀರೋ? ಧರ್ಮೋಪದೇಶಕಾಂಡ 12:23 ರಲ್ಲಿ “ರಕ್ತವನ್ನು ಭುಜಿಸಲೇ ಕೂಡದೆಂಬದನ್ನು ಜ್ಞಾಪಕದಲ್ಲಿಡಿರಿ” ಎಂದು ಆಜ್ಞಾಪಿಸಲ್ಪಟ್ಟ ದೇವರ ನಿಯಮದೋಪಾದಿ ನಿಮ್ಮ ಅನಿಸಿಕೆ ಇದೆಯೇ? ವಚನ 25 ಕೂಡಿಸುವದು: “ನೀವು ಅದನ್ನು ಭುಜಿಸದೆ ಯೆಹೋವನಿಗೆ ಮೆಚ್ಚಿಗೆಯಾಗಿರುವದನ್ನು ನಡಿಸಿದರೆ ನಿಮಗೂ ನಿಮ್ಮ ಸಂತತಿಯವರಿಗೂ ಶುಭವುಂಟಾಗುವದು.” ನಿಮ್ಮ ಅನಾರೋಗ್ಯ ಮಗುವಿಗೆ ರಕ್ತದ ಮೂಲಕ ‘ವಿಷಯಗಳು ಒಳಿತಾಗಲಿರುವವು’ ಎಂದು ವೈದ್ಯನೊಬ್ಬನು ವಾದಿಸಬಹುದು, ಆದರೆ ನಿಮಗೂ, ನಿಮ್ಮ ಮಕ್ಕಳಿಗೂ ಯಾವುದೇ ತುರ್ತು ಪರಿಸ್ಥಿತಿ ಬರುವ ಮೊದಲೇ, ಅವನ ದೈವಿಕ ನಿಯಮದ ಉಲ್ಲಂಘಿಸುವಿಕೆಯಿಂದ ಜೀವಿತವನ್ನು ಲಂಬಿಸುತ್ತೇವೆಂದು ಹೇಳಿಕೊಳ್ಳುವದಕ್ಕಿಂತ ಯೆಹೋವನೊಂದಿಗಿನ ನಿಮ್ಮ ಸಂಬಂಧವು ಹೆಚ್ಚು ಮೂಲ್ಯತೆಯದ್ದು ಎಂದೆಣಿಸಿ, ರಕ್ತವನ್ನು ನಿರಾಕರಿಸಲು ದೃಢವಾಗಿ ನಿರ್ಧಾರ ಕೈಗೊಂಡಿರಬೇಕು. ಇದರಲ್ಲಿ ದೇವರೊಂದಿಗೆ ಮೆಚ್ಚಿಗೆ ಮತ್ತು ಭವಿಷ್ಯದಲ್ಲಿ ನಿತ್ಯ ಜೀವವು ಒಳಗೂಡಿರುತ್ತವೆ!
4 ಹೌದು, ಯೆಹೋವನ ಸಾಕ್ಷಿಗಳು ಜೀವಾಭಿಮುಖರಾಗಿರುತ್ತಾರೆ. ಅವರಿಗೆ ಸಾಯುವ ಯಾವುದೇ ಬಯಕೆ ಇರುವದಿಲ್ಲ. ಯೆಹೋವನನ್ನು ಸ್ತುತಿಸಲು ಮತ್ತು ಅವನ ಚಿತ್ತವನ್ನು ಮಾಡಲು ಸಾಧ್ಯವಾಗುವಂತೆ ಅವರು ಜೀವಿಸಲು ಬಯಸುತ್ತಾರೆ. ಅವರು ಆ ಒಂದು ಕಾರಣಕ್ಕಾಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ ಮತ್ತು ಚಿಕಿತ್ಸೆಗಾಗಿ ಅವರ ಮಕ್ಕಳನ್ನು ಕೊಂಡೊಯ್ಯುತ್ತಾರೆ. ಅವರ ಚಿಕಿತ್ಸೆ ಮಾಡುವಂತೆ ವೈದ್ಯರನ್ನು ಅವರು ಕೇಳುತ್ತಾರೆ, ಮತ್ತು ರಕ್ತವು ಒಂದು ಪ್ರಮಾಣವಾಗಿದೆ (ಸ್ಟ್ಯಾಂಡರ್ಡ್) ಯಾ ವೈದ್ಯಕೀಯವಾಗಿ ಚಿಕಿತ್ಸೆಯ ಮಾರ್ಗವೆಂದು ಅವರಿಗೆ ಹೇಳಲ್ಪಡುವಾಗ, ಬದಲಿ ರಕ್ತೇತರ ವೈದ್ಯಕೀಯ ಚಿಕಿತ್ಸೆಗಾಗಿ ಅವರು ವಿನಂತಿಸುತ್ತಾರೆ. ರಕ್ತಕ್ಕೆ ಬದಲಿಯಾಗಿ ಅನೇಕ ಅನ್ಯಮಾರ್ಗಗಳಿವೆ. ಅನುಭವಿ ವೈದ್ಯರು ಅವುಗಳನ್ನು ಬಳಸುತ್ತಾರೆ. ಅಂಥ ಬದಲಿ ಚಿಕಿತ್ಸೆಯು ಒಂದು ಅಳಲೆಕಾಯಿ ಪಂಡಿತರ ಮದ್ದಲ್ಲಿ, ಬದಲು ವೈದ್ಯಕೀಯವಾಗಿ ಗುಣಮಟ್ಟದ ಚಿಕಿತ್ಸೆಗಳು ಮತ್ತು ಕ್ರಮವಿಧಾನಗಳಾಗಿದ್ದು, ಪ್ರಖ್ಯಾತ ವೈದ್ಯಕೀಯ ಪತ್ರಿಕೆಗಳಲ್ಲಿ ಸಾಕ್ಷ್ಯ ಸಂಕಲನಗೊಂಡಿವೆ. ರಕ್ತದ ಬಳಕೆ ಮಾಡದೆ ಉತ್ತಮವಾದ ವೈದ್ಯಕೀಯ ಆರೈಕೆಯನ್ನು ಒದಗಿಸುವದರಲ್ಲಿ ನಮ್ಮೊಂದಿಗೆ ಲೋಕವ್ಯಾಪಕವಾಗಿ ಸಾವಿರಾರು ವೈದ್ಯರು ಸಹಕರಿಸುತ್ತಿದ್ದಾರೆ, ಆದರೂ ರಕ್ತವನ್ನು ಬಳಸದೆ ಸಾಕ್ಷಿಗಳ ಮಕ್ಕಳ ಚಿಕಿತ್ಸೆಯನ್ನು ಮಾಡಬಲ್ಲ ವೈದ್ಯರನ್ನು ಕಂಡುಹಿಡಿಯುವದು ಕೆಲವೊಮ್ಮೆ ಇನ್ನೂ ಸಮಸ್ಯೆಯಾಗಿರುತ್ತದೆ.
5 ಸಹಕರಿಸುವ ವೈದ್ಯನೊಬ್ಬನನ್ನು ಕಂಡುಹಿಡಿಯುವದು: ವೈದ್ಯರಿಗೆ ರೋಗಿಗಳನ್ನು ಉಪಚರಿಸುವದರಲ್ಲಿ ಅನೇಕ ಚಿಂತೆಗಳಿರುತ್ತವೆ. ಮತ್ತು ನಿಮ್ಮ ಮಕ್ಕಳನ್ನು ರಕ್ತರಹಿತವಾಗಿ ಚಿಕಿತ್ಸೆ ನೀಡಲು ನೀವು ಕೇಳುವಾಗ, ಅದು ಅವರ ಪಂಥಾಹ್ವಾನವನ್ನು ಹೆಚ್ಚಿಸುತ್ತದೆ. ಒಂದು ಸ್ವೀಕಾರಾರ್ಹವಾದ ಬಿಡುಗಡೆಯನ್ನು ಫೈಲ್ ಮಾಡಿರುವಲ್ಲಿ ರಕ್ತದ ಮೇಲಿನ ಅವರ ಇಚ್ಛೆಗಳನ್ನು ಗೌರವಿಸಿ, ವಯಸ್ಕರ ಚಿಕಿತ್ಸೆ ನಡಿಸಲು ವೈದ್ಯರು ಇಚ್ಛೆಯುಳ್ಳವರಾಗುವರು. ತಾವು ಪ್ರೌಢ ಅಪ್ರಾಪ್ತ ವಯಸ್ಸಿನವರೆಂದು ತೋರಿಸಿಕೊಟ್ಟಿರುವ ಅಪ್ರಾಪ್ತ ವಯಸ್ಸಿನವರು ಕೆಲವರು ಇದೇ ರೀತಿ ಚಿಕಿತ್ಸೆ ನೀಡಲು ಒಪ್ಪಬಹುದು, ಯಾಕಂದರೆ ಕೆಲವು ಕೋರ್ಟುಗಳು ಈ ಪ್ರೌಢ ಅಪ್ರಾಪ್ತ ವಯಸ್ಕರಿಗೆ ಅವರದ್ದೇ ಸ್ವಂತ ಆಯ್ಕೆಗಳನ್ನು ಮಾಡುವ ಹಕ್ಕಿದೆ ಎಂದು ಅಂಗೀಕರಿಸಿರುತ್ತವೆ. (ದ ವಾಚ್ಟವರ್, ಜೂನ್ 15, 1991, ಪುಟ 16-17, ಪ್ರೌಢ ಅಪ್ರಾಪ್ತ ವಯಸ್ಕನು ಅಂದರೆ ಯಾರು ಎಂಬ ಚರ್ಚೆಗಾಗಿ.) ಆದಾಗ್ಯೂ, ರಕ್ತವನ್ನು ಕೊಡಲು ಪರವಾನಗಿ ಇಲ್ಲದಿದ್ದರೆ, ಎಳೆಯ ಮಕ್ಕಳಿಗೆ ವಿಶೇಷವಾಗಿ ಕೂಸುಗಳಿಗೆ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಬಹುದು. ವಾಸ್ತವದಲ್ಲಿ, ಮಗುವೊಂದಕ್ಕೆ ಚಿಕಿತ್ಸೆ ನೀಡುವಾಗ ಯಾವುದೇ ಸಂದರ್ಭದಲ್ಲಿ ರಕ್ತವನ್ನು ಉಪಯೋಗಿಸುವದೇ ಇಲ್ಲ ಎಂಬ 100 ಪ್ರತಿಶತ ಆಶ್ವಾಸನೆಯನ್ನು ಕೇವಲ ಕೆಲವೇ ವೈದ್ಯರು ಕೊಡುವರು. ವೈದ್ಯಕೀಯ ಮತ್ತು ಕಾನೂನು ಕಾರಣಗಳಿಗಾಗಿ, ಹೆಚ್ಚಿನ ವೈದ್ಯರು ತಾವು ಅಂಥ ಖಾತರಿಯೊಂದನ್ನು ಕೊಡಸಾಧ್ಯವಿಲ್ಲವೆಂದು ಎಣಿಸುತ್ತಾರೆ. ಆದಾಗ್ಯೂ, ರಕ್ತದ ಕುರಿತು ನಮ್ಮ ಇಚ್ಛೆಯನ್ನು ಅವರಿಗೆ ಎಷ್ಟರ ತನಕ ಗೌರವಿಸಲು ಸಾಧ್ಯವಿದೆಯೋ ಅಷ್ಟರ ತನಕ ಯೆಹೋವನ ಸಾಕ್ಷಿಗಳ ಮಕ್ಕಳಿಗೆ ಆರೈಕೆಯನ್ನು ಒದಗಿಸಲು ಏರುತ್ತಿರುವ ಸಂಖ್ಯೆಯಲ್ಲಿ ವೈದ್ಯರು ಬಯಸುತ್ತಾರೆ.
6 ಇದರ ನೋಟದಲ್ಲಿ, ನಿಮ್ಮ ಮಗುವಿಗಾಗಿ ಒಬ್ಬ ಯೋಗ್ಯ ವೈದ್ಯನನ್ನು ನೀವು ಶೋಧಿಸುವಾಗ, ಯೆಹೋವನ ಸಾಕ್ಷಿಗಳೊಂದಿಗೆ ಒಳ್ಳೆಯ ಸಹಕಾರದ ದಾಖಲೆಯಿರುವ ಒಬ್ಬನನ್ನು ನೀವು ಕಂಡುಕೊಳ್ಳುತ್ತೀರಿ ಮತ್ತು ಇತರ ಸಾಕ್ಷಿಗಳ ಮೇಲೆ ರಕ್ತರಹಿತವಾದ ಕ್ರಮವಿಧಾನಗಳನ್ನು ಗತಕಾಲದಲ್ಲಿ ಬಳಸಿರುತ್ತಾನೆ, ಆದರೂ ರಕ್ತವನ್ನು ಉಪಯೋಗಿಸುವದಿಲ್ಲವೆಂಬ ಪೂರ್ಣ ಖಾತರಿಯನ್ನು ನಿಮಗೆ ಕೊಡಲು ಕಾನೂನು ಅನುಮತಿಸುವದಿಲ್ಲವೆಂದು ಅವನು ಭಾವಿಸುವುದಾದರೆ ಆಗ ಏನು? ಆದಾಗ್ಯೂ, ಈಗಲೂ ಕೂಡ ಸಮಸ್ಯೆಯೇನೂ ಇರಲಿಕ್ಕಿಲವ್ಲೆಂದು ಅವನು ಭಾವಿಸುತ್ತಾನೆಂದು ನಿಮಗವನು ಆಶ್ವಾಸನೆಯನ್ನೀಯುತ್ತಾನೆ. ಇದು ನಿಮ್ಮ ಅತ್ಯುತ್ತಮ ಆಯ್ಕೆ ಎಂದು ನೀವು ತೀರ್ಮಾನಿಸಬಹುದು. ಈ ಪರಿಸ್ಥಿತಿಗಳಲ್ಲಿ ಮುಂದರಿಯಲಿಕ್ಕೆ ಅನುಮತಿಯನ್ನು ನೀವು ಕೊಡಸಾಧ್ಯವಿದೆ ಎಂಬ ತೀರ್ಮಾನಕ್ಕೆ ನೀವು ಬರಬಹುದು. ಹೀಗಿದ್ದರೂ, ನಿಮ್ಮ ಮಗುವಿಗೆ ವೈದ್ಯಕೀಯ ಚಿಕಿತ್ಸೆಗೆ ಅನುಮತಿ ಕೊಡುವದೆಂದರೆ, ರಕ್ತ ಪೂರಣಗಳಿಗೆ ಅನುಮತಿ ಕೊಡುವದಲ್ಲ ಎಂದು ಸ್ಪಷ್ಟಪಡಿಸಿರಿ. ನಿಮ್ಮ ತೀರ್ಮಾನವು ಒಂದು ಒಪ್ಪಂದವೆಂದು ಪರಿಗಣಿಸಲ್ಪಡುವದಿಲ್ಲವೆಂಬ ಈ ಮಾರ್ಗಕ್ರಮವನ್ನು ತಕ್ಕೊಳ್ಳುವ ಜವಾಬ್ದಾರಿಕೆಯನ್ನು ನೀವು ಹೊರುತ್ತೀರಿ.
7 ರಕ್ತವನ್ನು ತಕ್ಕೊಳ್ಳುವ ಸಮಸ್ಯೆಯನ್ನು ಕಡಿಮೆಗೊಳಿಸುವ ಯಾ ಸಂಭಾವ್ಯವಾಗಿ ಇಲ್ಲದಂತೆ ಮಾಡುವ ಒಂದು ಸಮಂಜಸವಾದ ಬದಲಿ ಚಿಕಿತ್ಸೆಯ ಆಯ್ಕೆಯನ್ನು ನೀವು ಕಂಡುಕೊಳ್ಳಸಾಧ್ಯವಿದ್ದಲ್ಲಿ, ಆಗ ಕಡಿಮೆ ಅಪಾಯವಿರುವ ಮಾರ್ಗವನ್ನು ನೀವು ಪ್ರಾಯಶಃ ಆರಿಸಬಹುದು. ರಕ್ತವನ್ನು ಕೊಡುವದಿಲ್ಲವೆಂದು ಸಮ್ಮತಿಸುವದನ್ನು ಬಿಟ್ಟು ಹೆಚ್ಚಿನದ್ದನ್ನು ಮಾಡುವ ಒಬ್ಬ ವೈದ್ಯನನ್ನು ಯಾ ಶಸ್ತ್ರ ಚಿಕಿತ್ಸಕನನ್ನು ಹುಡುಕುವದರಲ್ಲಿ ಶ್ರದ್ಧೆಯ ಪ್ರಯತ್ನಗಳನ್ನು ನೀವು ಮಾಡುವಿರಿ ಎಂದು ನಿರೀಕ್ಷಿಸಲಾಗಿದೆ. ಮೊದಲೇ ಸಹಕರಿಸುವ ವೈದ್ಯನನ್ನು ಹುಡುಕಲು ಪ್ರತಿಯೊಂದು ಪ್ರಯತ್ನ ಮಾಡಿರಿ. ಸಾಧ್ಯವಿದ್ದಲ್ಲಿ, ಅಸಹಕಾರ ತೋರಿಸುವ ವೈದ್ಯರುಗಳಿಂದ ಮತ್ತು ಆಸ್ಪತ್ರೆಗಳಿಂದ ದೂರವಿರ್ರಿ.
8 ಕೆಲವು ದೇಶಗಳಲ್ಲಿ ಭಿನ್ನತೆಯನ್ನುಂಟುಮಾಡುವ ಇನ್ನೊಂದು ವಾಸ್ತವಾಂಶವು, ಆಸ್ಪತ್ರೆಯ ಆರೈಕೆಗೆ ಯಾವ ರೀತಿಯಲ್ಲಿ ಹಣಸಂದಾಯ ಮಾಡಲಾಗುತ್ತದೆ ಎಂಬುದರ ಮೇಲೆ ರಕ್ತ ಪೂರಣವು ಕೊಡಬೇಕೊ ಬೇಡವೊ ಎಂಬುದು ಇರುತ್ತದೆ. ಎಲ್ಲಿ ಹೆತ್ತವರಿಗೆ ಆರೋಗ್ಯದ ವಿಮೆ ಇರುತ್ತದೊ ಯಾ ಅವರ ಆಯ್ಕೆಯ ವೈದ್ಯನೊಬ್ಬನನ್ನು ಹುಡುಕಲು ಅನುಮತಿಸುವ ಇತರ ಭದ್ರತೆಗಳು ಇರುತ್ತವೊ, ಅವರ ಮಕ್ಕಳು ಅಸಹಕಾರ ತೋರಿಸುವ ವೈದ್ಯರುಗಳ ಮತ್ತು ಆಸ್ಪತ್ರೆಯ ಸಿಬ್ಬಂದಿಗಳ ಹಸ್ತದಿಂದ ಹೆಚ್ಚು ಸುಲಭವಾಗಿ ದೂರವಿಡಸಾಧ್ಯವಿದೆ. ಸಾಕಷ್ಟು ಆರ್ಥಿಕ ತೆರುವಿಕೆಯು ವೈದ್ಯರುಗಳಿಂದ ಮತ್ತು ಆಸ್ಪತ್ರೆಗಳಿಂದ ಕುಟುಂಬವೊಂದು ಪಡೆಯುವ ಸೇವೆಯ ವಿಧ ಮತ್ತು ಸಹಕಾರವನ್ನು ನಿರ್ಧರಿಸುತ್ತದೆ. ಅಲ್ಲದೆ, ಒಂದು ಆಸ್ಪತ್ರೆ ಯಾ ವೈದ್ಯನು ಮಗುವಿನ ಸ್ಥಳಾಂತರವನ್ನು ಸ್ವೀಕರಿಸಲು ಇಚ್ಛಿಸುವದು, ಆರೈಕೆಗಾಗಿ ತೆರಲು ಹೆತ್ತವರಿಗೆ ಇರುವ ಸಾಮರ್ಥ್ಯದ ಮೇಲೆ ಅನೇಕಾವರ್ತಿ ಹೊಂದಿಕೊಂಡಿರುತ್ತದೆ. ಮತ್ತು ಭಾವಿ ತಾಯಂದಿರೇ, ನೀವು ಗರ್ಭವತಿಯರಾಗಿರುವ ಸಮಯದಲ್ಲಿ ನಿಮ್ಮ ಆರೋಗ್ಯದ ಜಾಗ್ರತೆ ವಹಿಸುವುದು ಬಹಳ ಪ್ರಾಮುಖ್ಯ! ಅದು ಸಮಯಕ್ಕಿಂತ ಮೊದಲ ಜನನ ಮತ್ತು ಅದರೊಂದಿಗೆ ಸೇರಿರುವ ಸಂಕ್ಲಿಷ್ಟತೆಗಳನ್ನು ತಡೆಗಟ್ಟುತ್ತದೆ, ಯಾಕಂದರೆ ಕಾಲಕ್ಕಿಂತ ಮುಂಚಿನ ಜನನದ ಕೂಸುಗಳ ಮತ್ತು ಅವುಗಳ ಸಮಸ್ಯೆಗಳ ಸ್ಟ್ಯಾಂಡರ್ಡ್ ಚಿಕಿತ್ಸೆಗಳಲ್ಲಿ ಅನೇಕ ವೇಳೆ ರಕ್ತವು ಒಳಗೂಡಿರುತ್ತದೆ.
9 ಕೊನೆಯ ಗಳಿಗೆಯ ತನಕ ರಕ್ತದ ತಮ್ಮ ಅಡಿಗ್ಡಳನ್ನು ಯೆಹೋವನ ಸಾಕ್ಷಿಗಳು ಚರ್ಚಿಸುವದಿಲ್ಲವೆಂದು ಕೆಲವೊಮ್ಮೆ ವೈದ್ಯರು ದೂರುತ್ತಾರೆ. ಈ ರೀತಿ ಎಂದಿಗೂ ಇರಕೂಡದು. ಆಸ್ಪತ್ರೆಗೆ ಹೋಗುವಾಗ ಯಾ ವೈದ್ಯನೊಬ್ಬನ ಸೇವೆಯನ್ನು ಬಳಸಲು ತೊಡಗುವಾಗ ರಕ್ತದ ಕುರಿತಾದ ಅವರ ಸ್ಥಾನವನ್ನು ಸಾಕ್ಷಿ ಹೆತ್ತವರು ಚರ್ಚಿಸುವದು ಮಾಡಬೇಕಾದ ಮೊದಲ ಕಾರ್ಯಗಳಲ್ಲಿ ಒಂದಾಗಿದೆ. ಶಸ್ತ್ರ ಚಿಕಿತ್ಸೆಯು ಒಳಗೂಡಿರುವದಾದರೆ, ಅರಿವಳಿಕೆಯ ತಜ್ಞ (ಆ್ಯನಸ್ತೀಸಿಯಾಲಜಿಸ್ಟ್) ನೊಡನೆ ಮೊದಲೇ ಒಂದು ಭೇಟಿಯನ್ನು ಏರ್ಪಡಿಸಿರಿ. ಇದನ್ನು ಮಾಡುವದರಲ್ಲಿ ಶಸ್ತ್ರಚಿಕಿತ್ಸೆಯ ತಜ್ಞನು ನೆರವಾಗಬಹುದು. ಭರ್ತಿಮಾಡುವ ಫಾರ್ಮಗಳನ್ನು ಜಾಗ್ರತೆಯಿಂದ ಪರಿಶೀಲಿಸತಕ್ಕದ್ದು. ಅಡಿಯ್ಡಾಗುವಂಥ ಯಾವುದನ್ನೇ ಹೊಡೆದುಹಾಕುವ ಹಕ್ಕು ನಿಮಗಿದೆ. ಇರಬಹುದಾದ ಯಾವುದೇ ಸಂದೇಹವನ್ನು ಹೋಗಲಾಡಿಸಲು, ಭರ್ತಿಮಾಡುವ ಫಾರ್ಮಿನಲ್ಲಿ ಸ್ಪಷ್ಟವಾಗಿಗಿ, ಧಾರ್ಮಿಕ ಹಾಗೂ ವೈದ್ಯಕೀಯ ಕಾರಣಗಳಿಗಾಗಿ ನಾನು ಯಾವುದೇ ಪರಿಸ್ಥಿತಿಗಳಲ್ಲಿ, ರಕ್ತವನ್ನು ಅಪೇಕ್ಷಿಸುವುದೂ ಇಲ್ಲ, ಅನುಮತಿಸುವದೂ ಇಲ್ಲವೆಂದು ಬರೆಯಿರಿ.
10 ಯೆಹೋವನ ಸಂಸ್ಥಾಪನೆಯಿಂದ ಸಹಾಯ: ರಕ್ತದಿಂದ ನಿಮ್ಮ ಮಕ್ಕಳನ್ನು ಸಂರಕ್ಷಿಸಲು ಸಹಾಯವಾಗುವಂತೆ ಯೆಹೋವನ ಸಂಸ್ಥಾಪನೆಯು ಯಾವ ಒದಗಿಸುವಿಕೆಗಳನ್ನು ಮಾಡಿದೆ? ಅಲ್ಲಿ ಬಹಳಷ್ಟು ಇವೆ. ರಕ್ತದ ಮತ್ತು ರಕ್ತೇತರ ಬದಲಿ ನಿರ್ವಹಣೆಯ ಕುರಿತು ನಮಗೆ ಶಿಕ್ಷಣವನ್ನೀಯಲು ಸೊಸೈಟಿಯು ತುಂಬಾ ಸಮಾಚಾರವನ್ನು ಪ್ರಕಾಶಿಸಿದೆ. ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು? ಎಂಬ ಬ್ರೊಷೂರನ್ನು ಮತ್ತು ಈ ವಿಷಯದ ಮೇಲೆ ಇನ್ನಿತರ ಪ್ರಕಾಶನಗಳನ್ನು ನೀವು ಅಭ್ಯಾಸಿಸಿದ್ದೀರಿ. ಮತ್ತು ನಿಮಗೆ ಬೇಕಾದಷ್ಟು ಸಹಾಯ ಮತ್ತು ಬೆಂಬಲವನ್ನು ಕೊಡಸಾಧ್ಯವಿರುವ ನಿಮ್ಮ ಸಹೋದರರು ಮತ್ತು ಸಹೋದರಿಯರು ಸ್ಥಳೀಕ ಸಭೆಯಲ್ಲಿ ನಿಮಗೆ ಇದ್ದಾರೆ. ವಿಷಮಸ್ಥಿತಿಯು ಬಂದೊದಗಿದಾಗ, ಆಸ್ಪತ್ರೆಯಲ್ಲಿ 24 ತಾಸುಗಳ ಜಾಗರಣೆಯನ್ನು ಇಡಲು, ಮೊದಲ ಆಯ್ಕೆಯಾಗಿ ಹಿರಿಯನೊಬ್ಬನು ಪ್ರಾಯಶಃ ರೋಗಿಯ ಹೆತ್ತವರೊಂದಿಗೆ ಯಾ ಕುಟುಂಬದ ಇನ್ನೊಬ್ಬ ನಿಕಟ ಸದಸ್ಯನೊಂದಿಗೆ ಇರುವಂತೆ, ಏರ್ಪಾಡು ಮಾಡುವದು ಯೋಗ್ಯವೊ ಎಂದು ಹಿರಿಯರು ಪರಿಗಣಿಸಬಹುದು. ರಾತ್ರಿ ಸಮಯದಲ್ಲಿ ಎಲ್ಲಾ ಸಂಬಂಧಿಕರು ಯಾ ಮಿತ್ರರು ಮನೆಗೆ ಹೋದಾಗ ರಕ್ತ ಪೂರಣಗಳು ಹೆಚ್ಚಾಗಿ ಕೊಡಲ್ಪಡುತ್ತವೆ.
11 ಭಾರತದಲ್ಲಿ ಬಲುಬೇಗನೆ, ಪ್ರಮುಖ ನಗರಗಳಲ್ಲಿ ಹಾಸ್ಪಿಟಲ್ ಲಿಏಸಾನ್ ಕಮಿಟಿಗಳು ರೂಪಿಸಲ್ಪಡುವವು. ದೇಶದ ಪ್ರತಿಯೊಂದು ಸಭೆಗೆ, ಸಹಾಯ ನೀಡಲು ದೊರೆಯುವ ತರಬೇತಿ ಪಡೆದ ಸಹೋದರರಿಂದ ರಚಿಸಲ್ಪಟ್ಟ ಒಂದು ಕಮಿಟಿಯು ನೇಮಕಾತಿ ಹೊಂದುವದು. ಅವರ ಅಗತ್ಯವಿದ್ದಾಗ, ನಿಮ್ಮ ಹಿರಿಯರ ಮೂಲಕ ಅವರಿಗೆ ಕರೆ ನೀಡಿರಿ. ಚಿಕ್ಕ ಸಮಸ್ಯೆಗಳಿಗಾಗಿ ಅವರನ್ನು ಕರೆಯ ಕೂಡದು, ಆದರೆ ಒಂದು ಗಂಭೀರವಾದ ಸಮಸ್ಯೆಯು ಬೆಳೆಯುತ್ತಲಿದೆ ಎಂದು ಕಂಡುಕೊಳ್ಳಲ್ಪಟ್ಟಲ್ಲಿ, ಕರೆಯಲು ಹೆಚ್ಚು ದೀರ್ಘಕಾಲ ಕಾಯಬೇಡಿರಿ. ಸಹಕರಿಸುವ ವೈದ್ಯರುಗಳ ಹೆಸರನ್ನು ಮತ್ತು ಬದಲಿಗಳ ಮೇಲೆ ಸಲಹೆಗಳನ್ನು ಅವರು ಕೆಲವೊಮ್ಮೆ ಒದಗಿಸಶಕ್ತರು. ಅಗತ್ಯವಿದ್ದಲ್ಲಿ ಮತ್ತು ಸಾಧ್ಯವಿದ್ದಲ್ಲಿ, ಈ ಸಹೋದರರು ಪ್ರತ್ಯಕ್ಷವಾಗಿ ಅಲ್ಲಿರುವಂತೆ ಏರ್ಪಡಿಸುವರು ಮತ್ತು ಸಮಸ್ಯೆಯನ್ನು ನಿರ್ವಹಿಸಲು ಸಹಾಯ ಮಾಡುವರು.
12 ಕೋರ್ಟ್ ಸೇರ್ಪಡೆಯಾಗುವದನ್ನು ನಿರೀಕ್ಷಿಸುವದು ಮತ್ತು ವ್ಯವಹರಿಸುವದು: ನಿಮ್ಮ ಮಗುವಿನ ಮೇಲೆ ರಕ್ತ ಪೂರಣವನ್ನು ಕೊಡಲು ವೈದ್ಯನೊಬ್ಬನು ಯಾ ಆಸ್ಪತ್ರೆಯೊಂದು ಕೋರ್ಟ್ ಆರ್ಡರ್ನ್ನು ಪಡೆಯಲು ಉದ್ದೇಶಿಸುವದಾದರೆ, ಏನು? ಬೇರೇನೂ ಮಾಡಲಿಕ್ಕೆ ಇಲ್ಲವೆಂದು ನೆನಸಿ, ಅದನ್ನು ಅಲ್ಲಿಗೆ ಬಿಟ್ಟುಬಿಡುವ ಸಮಯವು ಇದಾಗಿದೆಯೇ? ಅಲ್ಲವೇ ಅಲ್ಲ! ಈಗಲೂ ರಕ್ತ ಪೂರಣವೊಂದನ್ನು ಹೋಗಲಾಡಿಸುವ ಸಾಧ್ಯತೆ ಅಲ್ಲಿ ಇನ್ನೂ ಇದೆ. ಅಂಥ ಒಂದು ಸಾಧ್ಯತೆಯ ತಯಾರಿಯನ್ನು ಬಹಳಷ್ಟು ಸಮಯದ ಮೊದಲೇ ಮಾಡತಕ್ಕದ್ದು. ಏನು ಮಾಡಸಾಧ್ಯವಿದೆ?
13 ಈ ವಿಷಯಗಳಲ್ಲಿ ಆಸ್ಪತ್ರೆಗಳನ್ನು ಮತ್ತು ನ್ಯಾಯಾಧೀಶರುಗಳನ್ನು ಮಾರ್ಗದರ್ಶಿಸುವ ಯಾ ಪ್ರಭಾವಿಸುವ ಕಾನೂನಿನ ಸೂತ್ರಗಳಲ್ಲಿ ಕೆಲವನ್ನು ತಿಳಿದುಕೊಳ್ಳುವದು, ಪ್ರತಿವಾದ ಮಾಡಲು ನಿಮಗೆ ಬಹಳಷ್ಟು ಸಹಾಯ ಮಾಡುವದು. ಮೂಲಭೂತ ಪ್ರಾಮುಖ್ಯತೆಯ ಅಂಥ ಒಂದು ಸೂತ್ರವು ಅವರ ಮಕ್ಕಳಿಗಾಗಿ ವೈದ್ಯಕೀಯ ಚಿಕಿತ್ಸೆಯನ್ನು ಸ್ವೀಕರಿಸಲು ಯಾ ನಿರಾಕರಿಸಲು ಹೆತ್ತವರಿಗೆ ಕಾನೂನು ಸೀಮಿತವಿಲ್ಲದ ಅಧಿಕಾರವನ್ನು ಕೊಡುವದಿಲ್ಲವೆಂಬದು ವಾಸ್ತವಾಂಶವಾಗಿದೆ. ವಯಸ್ಕರು ತಮಗೆ ಇಚ್ಛೆಯಿರುವ ವೈದ್ಯಕೀಯ ಚಿಕಿತ್ಸೆಯನ್ನು ಸ್ವೀಕರಿಸುವ ಯಾ ನಿರಾಕರಿಸುವ ಹಕ್ಕು ಸಾಮಾನ್ಯವಾಗಿ ಇರುತ್ತದೆಯಾದರೂ, ಅವರು ಯಥಾರ್ಥವಾಗಿ ನೆಚ್ಚಿಕೊಂಡಿರುವ ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ಅವರು ನಿರಾಕರಿಸುವದಾದರೂ, ಅವರ ಮಗುವಿನ ಹಿತಚಿಂತನೆಗೆ ಅಗತ್ಯವೆಂದು ಪರಿಗಣಿಸಲ್ಪಟ್ಟಿರುವ ಚಿಕಿತ್ಸೆಯನ್ನು ನಿರಾಕರಿಸಲು ಹೆತ್ತವರು ಸ್ವತಂತ್ರರಾಗಿರುವದಿಲ್ಲ.
14 ಈ ಮೂಲಭೂತ ತತ್ವವು 1944 ರಲ್ಲಿ ಅಮೆರಿಕ ಸುಪ್ರೀಂ ಕೋರ್ಟಿನ ತೀರ್ಪಿನಲ್ಲಿ ಹೇಳುವಾಗ ಪ್ರತಿಬಿಂಬಿಸಲ್ಪಟ್ಟಿದೆ: “ಹೆತ್ತವರು ತಾವಾಗಿಯೇ ಧರ್ಮಬಲಿಗಳಾಗಲು ಸ್ವತಂತ್ರರಿರಬಹುದು. ಆದರೆ ಅಂಥದ್ದೇ ಪರಿಸ್ಥಿತಿಗಳಲ್ಲಿ, ಅವರ ಮಕ್ಕಳು ತಾವಾಗಿಯೇ ಆಯ್ಕೆಯನ್ನು ಮಾಡಿಕೊಳ್ಳುವ ಪೂರ್ಣ ವಯಸ್ಸಿಗೆ ಮತ್ತು ಕಾನೂನು ನಿರ್ಧಾರ ಸ್ವಾತಂತ್ರ್ಯಕ್ಕೆ ಮುಟ್ಟುವ ಮುಂಚೆ ಅವರ ಮಕ್ಕಳನ್ನು ಧರ್ಮಬಲಿಯಾಗಿ ಅವರು ಮಾಡಲು ಸ್ವತಂತ್ರರಿರುವದಿಲ್ಲ.” ಮಗುವಿನ ದೈಹಿಕ ಆರೋಗ್ಯ ಮತ್ತು ಹಿತಚಿಂತನೆಯ ಆದ್ಯತೆಯ ಅದೇ ಪರಿಗಣನೆಯು ಇಂದಿನ ಶಿಶು ಕಲ್ಯಾಣಾಭಿವೃದ್ಧಿಯಲ್ಲಿ ಒಂದುಗೂಡಿರುತ್ತದೆ. ಈ ಕಾನೂನುಗಳು, ಮಗುವಿನ ಅಪಪ್ರಯೋಗದೆಡೆಗೆ ನಿರ್ದೇಶಿಸಲ್ಪಟ್ಟಿರುತ್ತವೆ, ಆದರೂ ವೈದ್ಯಕೀಯ ಅಲಕ್ಷ್ಯದಿಂದಲೂ ಮಕ್ಕಳನ್ನು ಸಂರಕ್ಷಿಸಲು ರೂಪಿಸಲ್ಪಟ್ಟಿವೆ.
15 ಹೆತ್ತವರ ಅಪಪ್ರಯೋಗದಿಂದ ಮತ್ತು ಅಲಕ್ಷ್ಯದಿಂದ ಮಕ್ಕಳನ್ನು ಸಂರಕ್ಷಿಸುವದು ಖಂಡಿತವಾಗಿಯೂ ಕ್ರೈಸ್ತ ಹೆತ್ತವರಿಗೆ ಆಕ್ಷೇಪಣೀಯವಲ್ಲ. ಆದರೆ ಮಗುವಿನ ಅಲಕ್ಷ್ಯದ ಕಾನೂನುಗಳು ಮತ್ತು ಮೇಲೆ ಉದ್ಧರಿಸಿದ ಸುಪ್ರೀಂ ಕೋರ್ಟ್ ಹೇಳಿಕೆಯು ಯೆಹೋವನ ಸಾಕ್ಷಿಗಳ ಮಕ್ಕಳು ಸೇರಿರುವ ಕೆಲವು ಮೊಕದ್ದಮೆಗಳಿಗೆ ಅಸಮರ್ಪಕವಾಗಿ ಅನ್ವಯಿಸಲ್ಪಟ್ಟಿವೆ. ಯಾಕೆ? ಒಂದು ಸಂಗತಿಯೇನಂದರೆ ಸಾಕ್ಷಿ ಹೆತ್ತವರಿಗೆ ಅವರ ಮಕ್ಕಳನ್ನು “ಧರ್ಮಬಲಿಗಳನ್ನಾಗಿ” ಮಾಡುವ ಯಾವುದೇ ಉದ್ದೇಶವಿರುವದಿಲ್ಲ. ಅವರು ಹಾಗೆ ಮಾಡುವದಾದಲ್ಲಿ, ಮೊದಲ ಹಂತದಲ್ಲಿಯೇ ಅವರು ಯಾಕೆ ಅವರ ಮಕ್ಕಳನ್ನು ಆಸ್ಪತ್ರೆಗಳಿಗೆ ಕೊಂಡೊಯ್ಯುತ್ತಾರೆ? ಅದಕ್ಕೆ ವಿಪರ್ಯಸ್ತವಾಗಿ, ಸಾಕ್ಷಿ ಹೆತ್ತವರು ಅವರ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆಯನ್ನು ಸ್ವ ಇಚ್ಛೆಯಿಂದ ಕೋರುತ್ತಾರೆ. ಅವರ ಮಕ್ಕಳನ್ನು ಅವರು ಪ್ರೀತಿಸುತ್ತಾರೆ ಮತ್ತು ಅವರಿಗೆ ಒಳ್ಳೆಯ ಆರೋಗ್ಯವಿರುವಂತೆ ಅವರು ಬಯಸುತ್ತಾರೆ. ಆದರೆ ಅವರ ಮಕ್ಕಳಿಗಾಗಿ ಅತ್ಯುತ್ತಮವಾದ ವೈದ್ಯಕೀಯ ಚಿಕಿತ್ಸೆಯ ವಿಧವನ್ನು ಜವಾಬ್ದಾರಿಯುತವಾಗಿ ಆರಿಸಲು ಅವರಿಗೆ ದೇವ ದತ್ತ ಹಂಗು ಇದೆ ಎಂದವರು ನಂಬುತ್ತಾರೆ. ರಕ್ತವಿಲ್ಲದೆ ಅವರ ಮಕ್ಕಳ ಆರೋಗ್ಯದ ಸಮಸ್ಯೆಗಳನ್ನು ನಿರ್ವಹಿಸಲು ಅವರು ಬಯಸುತ್ತಾರೆ. ಅಂಥ ಬದಲಿ ರಕ್ತೇತರ ಆರೈಕೆಯು ಉತ್ತಮವಾಗಿರುವದು ಮತ್ತು ಹೆಚ್ಚು ಸುರಕ್ಷಿತವಾಗಿರುವದು ಮಾತ್ರವಲ್ಲ, ಅಧಿಕ ಪ್ರಾಮುಖ್ಯವಾಗಿ, ಅದು ಅವರ ಮಕ್ಕಳನ್ನು ಮಹಾ ಜೀವ ದಾತನಾದ ಯೆಹೋವ ದೇವರ ಮೆಚ್ಚಿಗೆಯಲ್ಲಿ ಇರಿಸುತ್ತದೆ.
16 ರಕ್ತೇತರ ವೈದ್ಯಕೀಯ ನಿರ್ವಹಣೆಯ ಹೊರತಾಗಿಯೂ, ಅನೇಕ ವೈದ್ಯರು ಮತ್ತು ಶಿಶು ಕಲ್ಯಾಣಾಭಿವೃದ್ಧಿಯ ಅಧಿಕಾರಿಗಳು ರಕ್ತ ಪೂರಣವು ಆವಶ್ಯಕವಾದ ಒಂದು ಗುಣಮಟ್ಟದ ವೈದ್ಯಕೀಯ ಪದ್ಧತಿಯೆಂದು ಯಾ ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಜೀವರಕ್ಷಕವೆಂದು ಕೂಡ ದೃಷ್ಟಿಸುತ್ತಾರೆ. ಹೀಗೆ, ಸಾಕ್ಷಿ ಹೆತ್ತವರು ಶಿಫಾರಸು ಮಾಡಲ್ಪಟ್ಟ ರಕ್ತ ಪೂರಣವನ್ನು ನಿರಾಕರಿಸಿದಾಗ, ಸಮಸ್ಯೆಗಳು ಏಳಬಹುದು. ಸಾಮಾನ್ಯವಾಗಿ ಮಾತಾಡುವದಾದರೆ, ವೈದ್ಯರು ಹೆತ್ತವರ ಒಪ್ಪಿಗೆಯಿಲ್ಲದೆ ಮಕ್ಕಳ ಚಿಕಿತ್ಸೆಯನ್ನು ಕಾನೂನುಬದ್ಧವಾಗಿ ಮಾಡಸಾಧ್ಯವಿಲ್ಲ. ರಕ್ತದ ವಿಷಯದಲ್ಲಿ ಹೆತ್ತವರ ಮನ್ನಣೆಯ ಕೊರತೆಯನ್ನು ಜಯಿಸಲು, ವೈದ್ಯರು ಯಾ ಆಸ್ಪತ್ರೆಯ ಇತರ ಸಿಬ್ಬಂದಿಗಳು ಕೋರ್ಟ್ ಆರ್ಡರ್ನ ರೂಪದಲ್ಲಿ ನ್ಯಾಯಾಧೀಶನೊಬ್ಬನಿಂದ ಒಪ್ಪಿಗೆಯನ್ನು ಕೋರಬಹುದು. ವೈದ್ಯಕೀಯ ಅಲಕ್ಷ್ಯದ ಆರೋಪದ ಮೇಲೆ ಮಗುವನ್ನು ಸಂರಕ್ಷಿಸಲು ಅಂಥ ಕೋರ್ಟ್ ಅಧಿಕೃತ ಮನ್ನಣೆಯನ್ನು ಶಿಶು ಕಲ್ಯಾಣಾಭಿವೃದ್ಧಿಯ ಅಧಿಕಾರಿಗಳು ಯಾ ವೈದ್ಯರುಗಳು ಯಾ ಆಸ್ಪತ್ರೆಯ ಅಧಿಕಾರಿಗಳು ಪಡೆಯಬಹುದು.a
17 ಅನೇಕ ಸಮಯಗಳಲ್ಲಿ, ಹೆತ್ತವರಿಗೆ ಕೊಂಚವೆ ಯಾ ಯಾವುದೇ ನೋಟೀಸ್ ಕೊಡದೇ ಅತಿ ಶೀಘ್ರದಲ್ಲಿ ರಕ್ತದ ಉಪಯೋಗವನ್ನು ಮಾಡಲು ಕೋರ್ಟ್ ಆರ್ಡರ್ಗಳನ್ನು ಪಡೆಯಲಾಗಿದೆ. ವೈದ್ಯರು, ಆಸ್ಪತ್ರೆಯ ಕಾರ್ಯಭಾರಿಗಳು, ಯಾ ಶಿಶು ಕಲ್ಯಾಣಾಭಿವೃದ್ಧಿಯ ಅಧಿಕಾರಿಗಳು, ಏನು ಸಂಭವಿಸುತ್ತಾ ಇದೆ ಎಂದು ಪೂರ್ಣವಾಗಿ ಹೆತ್ತವರಿಗೆ ತಿಳಿಸಲು ವೈದ್ಯಕೀಯ ತುರ್ತು ಸ್ಥಿತಿಯು ಸಮಯವನ್ನು ಅನುಮತಿಸಲಿಲ್ಲವೆಂದು ವಾದಿಸುತ್ತಾ ಅಂಥ ಅವಸರದ ಆರ್ಡರುಗಳನ್ನು ಸಮರ್ಥಿಸಲು ಪ್ರಯತ್ನಿಸಿದ್ದಾರೆ. ಆದಾಗ್ಯೂ, ಹೆಚ್ಚಿನ ಕಡೆಗಳಲ್ಲಿ ವಿಚಾರಣೆಯ ಕೆಳಗೆ, ನಿಜವಾದ ತುರ್ತು ಪರಿಸ್ಥಿತಿಯೇನೂ ಇರಲಿಲ್ಲ ಮತ್ತು, ಅವರ ಅಭಿಪ್ರಾಯಕ್ಕನುಸಾರ, ಭವಿಷ್ಯದಲ್ಲಿ “ಒಂದು ವೇಳೆ” ರಕ್ತ ಪೂರಣವು ಅಗತ್ಯವಾದಲ್ಲಿ ಕೋರ್ಟ್ ಆರ್ಡರ್ ಒಂದು ಇರಲು ಬಯಸಿದರು ಎಂದು ವೈದ್ಯರು ಒಪ್ಪಿದರು. ನಿಮ್ಮ ಮಗುವಿನ ಸ್ವಾಭಾವಿಕ ರಕ್ಷಕ ಪಾಲಕರೋಪಾದಿ, ಎಲ್ಲಾ ಸಮಯಗಳಲ್ಲಿ ನಿಮ್ಮ ಮಗುವಿಗೆ ವೈದ್ಯರು, ಆಸ್ಪತ್ರೆಯ ಕಾರ್ಯಭಾರಿಗಳು, ಯಾ ಶಿಶು ಕಲ್ಯಾಣಾಭಿವೃದ್ಧಿ ಅಧಿಕಾರಿಗಳು ಏನು ಮಾಡುತ್ತಾರೆಂದು ತಿಳಿಯುವ ಮೂಲಭೂತ ಹಕ್ಕು ನಿಮಗಿರುತ್ತದೆ. ಸಾಧ್ಯವಿರುವಾಗ, ಕೋರ್ಟ್ ಆರ್ಡರ್ ಪಡೆಯಲು ಪ್ರಯತ್ನಗಳನ್ನು ಮಾಡಲಾಗಿದೆ ಎಂಬುದನ್ನು ನಿಮಗೆ ತಿಳಿಸಬೇಕು ಮತ್ತು ಕೋರ್ಟಿನ ಮುಂದೆ ನಿಮ್ಮ ವಾದವನ್ನು ಸಾದರಪಡಿಸಲು ಅನುಮತಿಸಬೇಕೆಂದು ಕಾನೂನು ಅಪೇಕ್ಷಿಸುತ್ತದೆ.
18 ಈ ಕಾನೂನು ವಾಸ್ತವ್ಯಗಳು ಒಬ್ಬ ಸಹಕರಿಸುವ ವೈದ್ಯನನ್ನು ಹುಡುಕುವ ಮೌಲ್ಯವನ್ನು ಎತ್ತಿತೋರಿಸುತ್ತವೆ. ಅವನೊಂದಿಗೆ ಕಾರ್ಯವೆಸಗಿರಿ, ಮತ್ತು ನಿಮ್ಮ ಹಾಸ್ಪಿಟಲ್ ಲಿಏಸಾನ್ ಕಮಿಟಿಯ ಸದಸ್ಯರ ಸಹಾಯದೊಂದಿಗೆ, ನಿಮ್ಮ ಮಗುವಿನ ವೈದ್ಯಕೀಯ ಸಮಸ್ಯೆಯನ್ನು ರಕ್ತೇತರ ನಿರ್ವಹಣೆಯಿಂದ ಬೆನ್ನಟಲ್ಟು ಅವನಿಗೆ ಸಹಾಯ ಮಾಡಿರಿ ಯಾ ಅಂಥ ಚಿಕಿತ್ಸೆಯನ್ನು ನೀಡುವ ವೈದ್ಯನ ಬಳಿಗೆ ಯಾ ಆಸ್ಪತ್ರೆಗೆ ನಿಮ್ಮ ಮಗುವನ್ನು ಸ್ಥಳಾಂತರಿಸಿರಿ. ಆದರೆ ವೈದ್ಯರು, ಆಸ್ಪತ್ರೆಯ ಕಾರ್ಯಭಾರಿ, ಯಾ ಶಿಶು ಕಲ್ಯಾಣಾಭಿವೃದ್ಧಿಯ ಅಧಿಕಾರಿಯು ಕೋರ್ಟ್ ಆರ್ಡರನ್ನು ಪಡೆಯುವ ಸೂಚನೆಗಳು ಅಲ್ಲಿರುವದಾದರೆ, ಇದನ್ನು ಯೋಜಿಸಲಾಗಿದೆಯೇ ಎಂದು ವಿಚಾರಿಸಲು ಜಾಗೃತರಾಗಿರತಕ್ಕದ್ದು. ಕೆಲವೊಮ್ಮೆ ಇದನ್ನು ಟೆಲಿಪೊನ್ ಮೂಲಕ ರಹಸ್ಯವಾಗಿ ಮಾಡಲಾಗುತ್ತದೆ. ಕೋರ್ಟ್ಗೆ ಹೋಗುವ ಯೋಜನೆಯೊಂದು ಅಲ್ಲಿರುವದಾದರೆ, ನ್ಯಾಯಾಧೀಶರ ಮುಂದೆ ನಿಮ್ಮ ದೃಷ್ಟಿಯನ್ನು ಸಾದರಪಡಿಸಲು ಸಾಧ್ಯವಾಗುವಂತೆ, ನೀವು ಅದನ್ನು ತಿಳಿದು ಕೊಳ್ಳಲು ಬಯಸುವಿರಿ ಎಂದು ಒತ್ತಿಹೇಳಿರಿ. (ಜ್ಞಾನೋ. 18:17) ಸಮಯವು ಅಲ್ಲಿರುವುದಾದರೆ, ಒಬ್ಬ ವಕೀಲರ ಸಹಾಯವನ್ನು ಪಡೆಯುವದು ಕೆಲವೊಮ್ಮೆ ಲಾಭದಾಯಕವು. ಕೆಲವು ಸಂದರ್ಭಗಳಲ್ಲಿ ಕೋರ್ಟ್ನಿಂದ ನೇಮಿತರಾದ ವಕೀಲರಿರುತ್ತಾರೆ. ನೀವು ಸ್ವಂತವಾಗಿಯೇ ಯಾ ಕೋರ್ಟ್ ನೇಮಿತ ವಕೀಲರ ಮೂಲಕ ಮಾಡುವುದಾದರೆ, ಅಂಥ ಪರಿಸ್ಥಿತಿಗಳಲ್ಲಿ ಸಾಧ್ಯವಿರುವಷ್ಟು ಅತ್ಯುತ್ತಮ ಪ್ರತಿವಾದವನ್ನು ಮಾಡಲು ಅವನಿಗೆ ಸಹಾಯವಾಗಲು, ಸೊಸೈಟಿಯ ಕಾನೂನು ಖಾತೆಯು ಅವನೊಂದಿಗೆ ಸಮಾಚಾರದಲ್ಲಿ ಭಾಗಿಯಾಗಬಲ್ಲದು.
19 ರಕ್ತದ ನಿಮ್ಮ ನಿರಾಕರಣೆಯು ಕೋರ್ಟಿಗೆ ಕೊಂಡೊಯ್ಯಲ್ಪಟ್ಟಲ್ಲಿ, ನಿಮ್ಮ ಮಗುವಿನ ಜೀವ ಯಾ ಆರೋಗ್ಯವನ್ನು ಕಾಪಾಡಲು ರಕ್ತವು ಅತ್ಯಾವಶ್ಯಕವೆನ್ನುವ ವೈದ್ಯರ ಅಭಿಪ್ರಾಯವು ಬಲು ಪ್ರೇರಕವಾಗಿರಬಲ್ಲದು. ಒಬ್ಬ ವೈದ್ಯಕೀಯ ಪಾಂಡಿತ್ಯವಿಲ್ಲದ ನ್ಯಾಯಾಧಿಪತಿಯೊಬ್ಬನು ವೈದ್ಯನ ವೈದ್ಯಕೀಯ ನಿಪುಣತೆಗೆ ಸಾಮಾನ್ಯವಾಗಿ ಮನ್ನಣೆಯನ್ನೀಯುತ್ತಾನೆ. ಮೊಕದ್ದಮೆಯ ಅವರ ಪಕ್ಕವನ್ನು ಸಾದರಪಡಿಸಲು ಕೊಂಚವೇ ಯಾ ಯಾವುದೇ ಸಂದರ್ಭ ಹೆತ್ತವರಿಗೆ ಕೊಡದೆ ಇರುವಲ್ಲಿ ಮತ್ತು ಪಂಥಾಹ್ವಾನಕ್ಕೊಡ್ಡಲ್ಪಡದೆ ರಕ್ತದ “ತುರ್ತಿನ” ಕುರಿತಾಗಿ ಅವನ ವಾದವನ್ನು ವ್ಯಕ್ತಪಡಿಸಲು ವೈದ್ಯನಿಗೆ ಅನುಮತಿಯನ್ನಿತ್ತಾಗ ಇದು ವಿಶೇಷವಾಗಿ ಸತ್ಯ. ಸತ್ಯವನ್ನು ನಿರ್ಧರಿಸಲು ಇಂಥ ಒಮ್ಮುಖದ ನಡೆವಳಿಗಳು ಅನುಕೂಲವಲ್ಲ. ವಾಸ್ತವತೆಯೇನಂದರೆ, ಯಾವಾಗ ಮತ್ತು ಯಾಕೆ ರಕ್ತವು ಬೇಕೆಂದು ವೈದ್ಯರು ಭಾವಿಸುವದು ವಿಶೇಷವಾಗಿ ಸ್ವಾನುಭವದ್ದೂ, ಅನಿಶ್ಚಯತೆಯದ್ದೂ ಆಗಿರುತ್ತದೆ. ಕೆಲವೊಮ್ಮೆ ಮಗುವಿನ ಜೀವವನ್ನು ಉಳಿಸಲು ರಕ್ತವು ಖಂಡಿತವಾಗಿಯೂ ಅತ್ಯಾವಶ್ಯಕವೆಂದು ಒಬ್ಬ ವೈದ್ಯನು ಹೇಳುವಾಗ, ಅಂಥದ್ದೇ ವೈದ್ಯಕೀಯ ಸಮಸ್ಯೆಯನ್ನು ರಕ್ತರಹಿತವಾಗಿ ನಿರ್ವಹಿಸುವದರಲ್ಲಿ ಅನುಭವವಿದ್ದ ಇನ್ನೊಬ್ಬ ವೈದ್ಯನು, ರೋಗಿಯ ಚಿಕಿತ್ಸೆಯನ್ನು ಮಾಡುವದರಲ್ಲಿ ರಕ್ತವು ಆವಶ್ಯಕವಲ್ಲವೆಂದು ಹೇಳುವನು.
20 ನಿಮ್ಮ ಮಗುವಿಗೆ “ಜೀವರಕ್ಷಕ” ರಕ್ತ ಪೂರಣವನ್ನು ನೀವು ಯಾಕೆ ನಿರಾಕರಿಸುತ್ತೀರಿ ಎಂದು ಒಬ್ಬ ವಕೀಲನು ಯಾ ನ್ಯಾಯಾಧಿಪತಿಯೊಬ್ಬನು ಕೇಳುವಲ್ಲಿ, ನೀವೇನು ಮಾಡುವಿರಿ? ಪುನರುತ್ಥಾನದಲ್ಲಿನ ನಿಮ್ಮ ನಂಬಿಕೆಯನ್ನು ವಿವರಿಸಲು ಮತ್ತು ಅವನು ಸತ್ತರೆ ದೇವರು ನಿಮ್ಮ ಮಗುವನ್ನು ಹಿಂದಕ್ಕೆ ತರುವನು ಎಂಬ ನಿಮ್ಮ ಬಲವಾದ ನಂಬಿಕೆಯನ್ನು ವ್ಯಕ್ತ ಪಡಿಸಲು ನಿಮಗೆ ಮೊದಲು ಒಲವು ಇರುವುದಾದರೂ, ಮಗುವಿನ ದೈಹಿಕ ಹಿತಕಾಂಕ್ಷೆಯು ಪರಮ ಪ್ರಾಮುಖ್ಯತೆಯಾಗಿರುವ ನ್ಯಾಯಾಧಿಪತಿಗೆ, ಅಂಥ ಉತ್ತರವು ನೀವೊಬ್ಬ ಮತಭ್ರಾಂತನಾಗಿದ್ದೀರಿ ಮತ್ತು ಅವನು ನಿಮ್ಮ ಮಗುವನ್ನು ಸಂರಕ್ಷಿಸಲು ಹೆಜ್ಜೆಗಳನ್ನು ಕೈಗೊಳ್ಳತಕ್ಕದ್ದು ಎಂಬ ಮನವರಿಕೆಯುಂಟಾಗುವಂತೆ ಮಾಡುವದಲ್ಲದೆ ಬೇರೆ ಹೆಚ್ಚೇನೂ ಮಾಡುವದಿಲ್ಲ.
21 ಕೋರ್ಟು ಏನನ್ನು ತಿಳಿಯಲು ಬಯಸುತ್ತದೆ ಅಂದರೆ, ಆಳವಾದ ಧಾರ್ಮಿಕ ನೆಲೆಗಳ ಮೇಲೆ ನೀವು ರಕ್ತವನ್ನು ನಿರಾಕರಿಸುವದಾದರೂ, ನಿಮ್ಮ ಮಗುವಿಗೆ ವೈದ್ಯಕೀಯ ಚಿಕಿತ್ಸೆಯನ್ನು ನೀವು ನಿರಾಕರಿಸುವದಿಲ್ಲ ಎಂದೇ. ನೀವೊಬ್ಬ ಅಲಕ್ಷ್ಯದ ಯಾ ಅಪಪ್ರಯೋಗಮಾಡುವ ಹೆತ್ತವರಲ್ಲ, ಆದರೆ ಬದಲಿಗೆ ಅವರ ಮಗುವಿಗೆ ಚಿಕಿತ್ಸೆಯನ್ನು ಕೊಡಲು ಬಯಸುವ ಪ್ರೀತಿಯ ಹೆತ್ತವರು ಎಂದು ನ್ಯಾಯಾಧಿಪತಿಯು ನೋಡುವ ಅಗತ್ಯವಿದೆ. ಅದರ ಸಂಭಾವ್ಯ ಮಾರಕ ಅಪಾಯಗಳಿಗಿಂತ ಮತ್ತು ಸಂಕ್ಲಿಷ್ಟತೆಗಳಿಗಿಂತ, ಹೇಳಲ್ಪಡುವ ರಕ್ತದ ಲಾಭಗಳು ಹೆಚ್ಚು ತೂಕದ್ದಾಗಿ ಮಾಡುತ್ತವೆ ಎಂಬುದಾಗಿ ನೀವು ಒಪ್ಪುವದೇ ಇಲ್ಲ, ವಿಶೇಷವಾಗಿ ಅಂಥ ವೈದ್ಯಕೀಯ ಬದಲಿಗಳು ದೊರೆಯುವಾಗ.
22 ಸನ್ನಿವೇಶದ ಮೇಲೆ ಹೊಂದಿಕೊಂಡು, ನ್ಯಾಯಾಧಿಪತಿಗೆ ನೀವು ಇದನ್ನು ತಿಳಿಯುವಂತೆ ಮಾಡಬಹುದು ಏನಂದರೆ ರಕ್ತವು ಬೇಕೆಂಬುದು ಒಬ್ಬ ವೈದ್ಯನ ಅಭಿಪ್ರಾಯವಾಗಿದೆ ಆದರೆ ಅವರ ಚಿಕಿತ್ಸಾವಿಧಾನಗಳಲ್ಲಿ ವೈದ್ಯರು ಭಿನ್ನತೆಯುಳ್ಳವರಾಗಿದ್ದಾರೆ, ಮತ್ತು ವ್ಯಾಪಕವಾಗಿ ದೊರೆಯುವ ರಕ್ತೇತರ ನಿರ್ವಹಣೆಯ ವಿಧಾನಗಳಿಂದ ನಿಮ್ಮ ಮಗುವಿನ ಆರೈಕೆಯನ್ನು ತಕ್ಕೊಳ್ಳುವ ಒಬ್ಬ ವೈದ್ಯನನ್ನು ಹುಡುಕಲು ಅವಕಾಶಕೊಡುವಂತೆ ನೀವು ಬಯಸುತ್ತೀರಿ. ಹಾಸ್ಪಿಟಲ್ ಲಿಏಸಾನ್ ಕಮಿಟಿಯ ಸಹಾಯದೊಂದಿಗೆ, ರಕ್ತರಹಿತವಾಗಿ ನಿಮ್ಮ ಮಗುವಿನ ಚಿಕಿತ್ಸೆ ಮಾಡುವ ಒಬ್ಬ ವೈದ್ಯನನ್ನು ನೀವು ಈಗಾಗಲೇ ಕಂಡುಕೊಂಡಿರಬಹುದು ಮತ್ತು ಅವನು ಕೋರ್ಟಿಗೆ, ಪ್ರಾಯಶಃ ಟೆಲಿಪೊನ್ ಮೂಲಕ ಸಹಾಯಕಾರಿ ಸಾಕ್ಷ್ಯವನ್ನು ಕೊಡಬಹುದು. ನ್ಯಾಯಾಧಿಪತಿಯೊಂದಿಗೆ—ಕೋರ್ಟ್ ಆರ್ಡರ್ಗಾಗಿ ಒತ್ತಾಯಿಸುವ ವೈದ್ಯನು ಕೂಡ—ಲಿಏಸಾನ್ ಕಮಿಟಿಯು, ರಕ್ತದ ಉಪಯೋಗವಿಲ್ಲದೆ ನಿಮ್ಮ ಮಗುವಿನ ವೈದ್ಯಕೀಯ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಹೇಗೆ ನಿರ್ವಹಿಸಬಹುದು ಎಂದು ತೋರಿಸುವ ವೈದ್ಯಕೀಯ ಲೇಖನಗಳಲ್ಲಿ ಪಾಲಿಗರಾಗಬಹುದು.
23 ಅವಸರದಿಂದ ಕೋರ್ಟ್ ಆರ್ಡರುಗಳನ್ನು ನೀಡಲು ನ್ಯಾಯಾಧೀಶರುಗಳಿಗೆ ಕರೆಯನ್ನಿತ್ತಾಗ, ಕೆಲವೊಮ್ಮೆ ಏಯ್ಡ್ಸ್, ಹೆಪಟೈಟಿಸ್, ಮತ್ತು ಇನ್ನಿತರ ಅನೇಕಾನೇಕ ಕೇಡುಸಂಭವಗಳ ಸಹಿತ, ರಕ್ತದ ಅಧಿಕ ಅಪಾಯಗಳನ್ನು ಅವರು ಪರಿಗಣಿಸಿರುವದಿಲ್ಲ ಯಾ ಅವರ ನೆನಪಿಗೆ ತರಲ್ಪಟ್ಟಿರುವದಿಲ್ಲ. ಇದನ್ನು ನೀವು ನ್ಯಾಯಾಧೀಶರಿಗೆ ತೋರಿಸಬಹುದಾಗಿದೆ, ಮತ್ತು ಒಬ್ಬ ಕ್ರೈಸ್ತ ಹೆತ್ತವನೋಪಾದಿ, ಜೀವವನ್ನು ಪೋಷಿಸುವ ಪ್ರಯತ್ನದಲ್ಲಿ ಇನ್ನೊಬ್ಬ ವ್ಯಕ್ತಿಯ ರಕ್ತವನ್ನು ಬಳಸುವದು ದೇವರ ನಿಯಮದ ಒಂದು ಗಂಭೀರ ಉಲ್ಲಂಘನೆಯಾಗಿದೆ ಎಂದು ಎಣಿಸುತ್ತೇನೆಂದೂ ಮತ್ತು ನಿಮ್ಮ ಮಗುವಿನ ಮೇಲೆ ಅದನ್ನು ಬಲಾತ್ಕರಿಸುವದು, ಬಲಾತ್ಕಾರಸಂಭೋಗಕ್ಕೆ ಸರಿಸಮಾನವಾಗಿದೆ ಎಂದು ದೃಷ್ಟಿಸಲ್ಪಡುತ್ತದೆಂದೂ, ನೀವು ಅದನ್ನು ಅವರಿಗೆ ತಿಳಿಸಲೂ ಸಾಧ್ಯವಿದೆ. ನೀವು ಮತ್ತು ನಿಮ್ಮ ಮಗು (ಅವನ ಸ್ವಂತ ಮನವರಿಕೆಗಳು ಇರುವಷ್ಟು ವಯಸ್ಕನಾಗಿರುವದಾದರೆ) ಅಂಥ ದೈಹಿಕ ಆಕ್ರಮಣಗಳ ಕಡೆಗೆ ನಿಮ್ಮ ಹೇಸಿಗೆಯನ್ನು ವಿವರಿಸಬಹುದು ಮತ್ತು ಆರ್ಡರನ್ನು ನೀಡದಂತೆ, ಆದರೆ ನಿಮ್ಮ ಮಗುವಿಗೆ ಬದಲಿ ವೈದ್ಯಕೀಯ ನಿರ್ವಹಣೆಯನ್ನು ಅನುಸರಿಸಲು ಅನುಮತಿಸುವಂತೆ ನ್ಯಾಯಾಧೀಶರಿಗೆ ಮನವಿ ಮಾಡಬಹುದು.
24 ಯೋಗ್ಯವಾದ ಪ್ರತಿವಾದವನ್ನು ಮಾಡಿದಾಗ, ಇನ್ನೊಂದು ಪಕ್ಕವನ್ನು—ಹೆತ್ತವರೋಪಾದಿ ನಿಮ್ಮ ಪಕ್ಕವನ್ನು—ಹೆಚ್ಚು ಸ್ಪಷ್ಟವಾಗಿಗಿ ನೋಡಲು ನ್ಯಾಯಾಧಿಪತಿಗಳಿಗೆ ಸಾಧ್ಯವಾಗುತ್ತದೆ. ಅನಂತರ ರಕ್ತ ಪೂರಣವನ್ನು ಕೊಡಲು ಅವರು ಬಲುಬೇಗನೆ ಅಧಿಕಾರವನ್ನೀಯುವದಿಲ್ಲ. ಕೆಲವು ಮೊಕದ್ದಮೆಗಳಲ್ಲಿ, ರಕ್ತವನ್ನು ಬಳಸುವದರಲ್ಲಿ ವೈದ್ಯನ ಸ್ವಾತಂತ್ರ್ಯವನ್ನು ನ್ಯಾಯಾಧೀಶರುಗಳು ತೀವ್ರವಾಗಿ ಮೊಟಕುಗೊಳಿಸಿ, ಮೊದಲು ಬದಲಿಗಳನ್ನು ಗಮನಿಸುವಂತೆ ಮಾಡಿದ್ದಾರೆ, ಯಾ ಹೆತ್ತವರಿಗೆ ರಕ್ತರಹಿತವಾಗಿ ಚಿಕಿತ್ಸೆ ನೀಡುವ ವೈದ್ಯರನ್ನು ಹುಡುಕುವಂತೆ ಅವಕಾಶವನ್ನು ಕೊಟ್ಟಿರುತ್ತಾರೆ.
25 ರಕ್ತ ಪೂರಣವನ್ನು ಬಲಾತ್ಕರಿಸುವಂತೆ ಹುಡುಕುವವರೊಂದಿಗೆ ವ್ಯವಹರಿಸುವಾಗ, ನಿಮ್ಮ ಮನವರಿಕೆಗಳಲ್ಲಿ ಚಂಚಲತೆಯ ಯಾವುದೇ ಪುರಾವೆಯನ್ನು ನೀವು ಎಂದೂ ಕೊಡದಂತೆ ಇರುವದು ಅತಿ ಆವಶ್ಯಕವಾಗಿದೆ. ರಕ್ತ ಪೂರಣವನ್ನು ಮಾಡುವ ತೀರ್ಮಾನದ ಜವಾಬ್ದಾರಿಕೆಯನ್ನು ಅವರಿಗೆ “ವರ್ಗಾಯಿಸುವ”ದರಲ್ಲಿ ಏನಾದರೂ ಸಮಸ್ಯೆ ಹೆತ್ತವರಿಗೆ ಇದೆಯೋ ಎಂದು ನ್ಯಾಯಾಧೀಶರುಗಳು (ಮತ್ತು ವೈದ್ಯರು) ಕೆಲವೊಮ್ಮೆ ವಿಚಾರಿಸುತ್ತಾರೆ, ಆ ಮೂಲಕ ಹೆತ್ತವರು ಅವರ ಮನಸ್ಸಾಕ್ಷಿಯೊಂದಿಗೆ ಜೀವಿಸಲು ಸುಲಭವಾಗುತ್ತದೆಂದು ಭಾವಿಸುತ್ತಾರೆ. ಆದರೆ ಹೆತ್ತವರೋಪಾದಿ ನೀವು ರಕ್ತ ಪೂರಣವೊಂದನ್ನು ಹೋಗಲಾಡಿಸಲು ಏನೆಲ್ಲಾ ಮಾಡಲು ನಿಮಗೆ ಸಾಧ್ಯವಿದೆಯೋ ಅದೆಲ್ಲಾವನ್ನು ಮಾಡುವದನ್ನು ಮುಂದರಿಸುವ ಹಂಗು ಇದೆ ಎಂದು ಭಾವಿಸುತ್ತೀರಿ ಎಂದು ಒಳಗೂಡಿರುವ ಎಲ್ಲರಿಗೆ ಇದನ್ನು ಸೃಷ್ಟಗೊಳಿಸಬೇಕು. ಇದು ನಿಮ್ಮ ದೇವ ದತ್ತ ಜವಾಬ್ದಾರಿಯಾಗಿದೆ. ಅದನ್ನು ವರ್ಗಾಯಿಸಸಾಧ್ಯವಿಲ್ಲ.
26 ಆದುದರಿಂದ, ವೈದ್ಯರು ಮತ್ತು ನ್ಯಾಯಾಧೀಶರುಗಳೊಂದಿಗೆ ಮಾತಾಡುವಾಗ, ನಿಮ್ಮ ನಿಲುವನ್ನು ಸ್ಪಷ್ಟವಾಗಿಗಿ ಮತ್ತು ಮನವರಿಕೆಯಿಂದ ನಮೂದಿಸಲು ತಯಾರಿರುವ ಅಗತ್ಯ ನಿಮಗಿದೆ. ನಿಮ್ಮ ಅತ್ಯುತ್ತಮ ಪ್ರಯತ್ನಗಳ ನಡುವೆಯೂ ಕೋರ್ಟ್ ಆರ್ಡರ್ ಒಂದು ಕೊಡಲ್ಪಟ್ಟಲ್ಲಿ, ರಕ್ತ ಪೂರಣವನ್ನು ಕೊಡದಂತೆ ವೈದ್ಯನಿಗೆ ಮನವೆ ಮಾಡಿರಿ ಮತ್ತು ಬದಲಿ ಚಿಕಿತ್ಸೆಯನ್ನು ಒತ್ತಾಯಿಸಿರಿ. ರಕ್ತವನ್ನು ಹೋಗಲಾಡಿಸುವಂತೆ ಈ ವೈದ್ಯಕೀಯ ಸಮಸ್ಯೆಯ ಮೇಲೆ ಪರಿಹಾರ ಸೂಚಿಸುವ ವೈದ್ಯಕೀಯ ಲೇಖನಗಳನ್ನು ಮತ್ತು ಬೇರೆ ಯಾವುದೇ ವೈದ್ಯರ ಸಲಹೆಯನ್ನು ಪರಿಗಣಿಸಲು ಅವನು ಇಚ್ಛಿಸುವಂತೆ ಮಾಡುವದನ್ನು ಮುಂದರಿಸಿರಿ. ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ, ಆಪರೇಶನ್ ಕೋಣೆಯಿಂದ ಬಗ್ಗದವನೆಂದು ತೋರುವ ವೈದ್ಯನು ಹೊರಗೆ ಬರುತ್ತಾನೆ ಮತ್ತು ಹೆಮ್ಮೆಯಿಂದ ತಾನು ರಕ್ತವನ್ನು ಉಪಯೋಗಿಸಲಿಲ್ಲವೆಂದು ಪ್ರಕಟಿಸುತ್ತಾನೆ. ಆದುದರಿಂದ, ಕೋರ್ಟ್ ಆರ್ಡರ್ ನೀಡಲ್ಪಟ್ಟಾಗ್ಯೂ, ಏನೇ ಆದರೂ ಪ್ರಯತ್ನಿಸುವದನ್ನು ತೊರೆಯಬೇಡಿರಿ!—ಜೂನ್ 15, 1991 ರ ದ ವಾಚ್ಟವರ್ ಸಂಚಿಕೆಯಲ್ಲಿ “ವಾಚಕರಿಂದ ಪ್ರಶ್ನೆಗಳು” ನೋಡಿರಿ.
27 ನೆನಪಿಡಿರಿ, ಯೇಸು ಅಂದದ್ದು: “ಇದಲ್ಲದೆ ಜನರ ವಿಷಯದಲ್ಲಿ ಎಚ್ಚರಿಕೆಯಾಗಿರ್ರಿ; ಅವರು ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳಕೊಂಡು ಹೋಗುವರು. . . . ನಿಮ್ಮನ್ನು ಅಧಿಪತಿಗಳ ಮುಂದಕ್ಕೂ ಅರಸುಗಳ ಮುಂದಕ್ಕೂ ತೆಗೆದುಕೊಂಡು ಹೋಗುವರು. ಹೀಗೆ ಅವರಿಗೂ ಅನ್ಯ ಜನಗಳಿಗೂ ಸಾಕ್ಷಿಯಾಗುವದು.” ಅಂಥ ಪರಿಸ್ಥಿತಿಗಳಲ್ಲಿ ನಮ್ಮ ಸಂತೈಸುವಿಕೆಗಾಗಿ, ಅಂಥ ಸಂದರ್ಭಗಳಲ್ಲಿ ತಕ್ಕದ್ದಾಗಿರುವದನ್ನು ಮತ್ತು ಪ್ರಯೋಜನದಾಯಕವಾಗಿರುವದನ್ನು ಹೇಳಲು ಪವಿತ್ರಾತ್ಮವು ನಮ್ಮ ನೆನಪಿಗೆ ತರುವಂತೆ ಸಹಾಯ ಮಾಡುವನು.—ಮತ್ತಾ. 10:16-20.
28 “ವಿಷಯದ ಮೇಲೆ ಒಳನೋಟವನ್ನು ತೋರಿಸುವವನು ಸುಕ್ಷೇಮವನ್ನು ಪಡೆಯುವನು; ಯೆಹೋವನಲ್ಲಿ ಭರವಸವಿಡುವವನು ಭಾಗ್ಯವಂತನು.” (ಜ್ಞಾನೋ 16:20) ಹೆತ್ತವರೇ, ಆತ್ಮಿಕವಾಗಿ ದೂಷಿತಗೊಳಿಸುವ ರಕ್ತ ಪೂರಣವೊಂದರಿಂದ ನಿಮ್ಮ ಮಗುವನ್ನು ಸಂರಕ್ಷಿಸಲು ಮೊದಲೇ ಆವಶ್ಯಕವಾದ ಸಿದ್ಧತೆಗಳನ್ನು ಮಾಡಿರಿ. (ಜ್ಞಾನೋ. 22:3) ಮಕ್ಕಳೇ, ಈ ಸಿದ್ಧತೆಗಳನ್ನು ಮಾಡುವದರಲ್ಲಿ ನಿಮ್ಮ ಹೆತ್ತವರ ತರಬೇತಿಗೆ ಪ್ರತಿವರ್ತಿಸಿರಿ, ಮತ್ತು ನಿಮ್ಮ ಹೃದಯಕ್ಕೆ ಅವುಗಳನ್ನು ಅನ್ವಯಿಸಿರಿ. ಕುಟುಂಬದೋಪಾದಿ, “ರಕ್ತವನ್ನು ಭುಜಿಸಲೇ ಕೂಡದು ಎಂದು ದೃಢವಾಗಿ ನಿರ್ಧರಿಸಿರಿ.” . . . ಆಗ ಯೆಹೋವನ ಆಶೀರ್ವಾದ ಮತ್ತು ಮೆಚ್ಚುಗೆಯ ನಸುನಗೆಯಿಂದಾಗಿ “ನಿಮಗೆ ಶುಭವುಂಟಾಗುವದು.”—ಧರ್ಮೋ. 12:23-25.
[ಪಾದಟಿಪ್ಪಣಿಗಳು]
a ಸದ್ಯದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾತ್ರ, ವೈದ್ಯರ ಅಭಿಪ್ರಾಯದಲ್ಲಿ ಮಗುವಿನ ಜೀವ ಯಾ ಆರೋಗ್ಯಕ್ಕೆ ಅಗತ್ಯವೆಂದು ಭಾಸವಾಗುವ ಚಿಕಿತ್ಸೆಯ ಶೀಘ್ರ ಗಮನವು (ರಕ್ತ ಪೂರಣ ಸಹಿತ) ಆವಶ್ಯಕವಾದುದನ್ನು ಹೆತ್ತವರಲ್ಲಿ ಯಾರೇ ಒಬ್ಬರ ಯಾ ನ್ಯಾಯಾಧಿಕಾರದ ಮನ್ನಣೆಯಿಲ್ಲದೆ ಕೊಡಬಹುದು. ಕಾನೂನಿನ ಈ ತುರ್ತು ಅಧಿಕಾರದಲ್ಲಿ ವೈದ್ಯನೊಬ್ಬನು ಆತುಕೊಳ್ಳುವಾಗ ಅವನು ಹೊಣೆಗಾರನಾಗಿರುತ್ತಾನೆಂಬುದು ಖಂಡಿತ.