1995 “ಹರ್ಷಭರಿತ ಸುತ್ತಿಗಾರರು” ಜಿಲ್ಲಾ ಅಧಿವೇಶನ
1 ಹರ್ಷಭರಿತರಾಗಿರಲು ನಮಗೆಷ್ಟು ಕಾರಣಗಳಿವೆ? ಅವೆಲ್ಲವುಗಳನ್ನು ಪಟ್ಟಿಮಾಡಲು ಪ್ರಾಯಶಃ ನಮ್ಮಲ್ಲಿ ಕೆಲವರೇ ಪ್ರಯತ್ನಿಸಿರಬಹುದು. ಸಂಕಷ್ಟ ಮತ್ತು ಅನಿಶ್ಚಿತತೆಯ ಒಂದು ಲೋಕದಲ್ಲಿ ಜೀವಿಸುತ್ತಿರುವ ಹೊರತಾಗಿಯೂ, ಹರ್ಷಭರಿತರಾಗಿರಲು ನಮಗೆ ಅನೇಕ ಕಾರಣಗಳಿವೆ. ಈ ಮುಂಚೆ ಪ್ರಕಟಿಸಲಾದಂತೆ, 1995ರ ಜಿಲ್ಲಾ ಅಧಿವೇಶನಗಳಿಗಾಗಿರುವ ಉತ್ತೇಜಕ ಶೀರ್ಷಿಕೆಯು “ಹರ್ಷಭರಿತ ಸುತ್ತಿಗಾರರು” ಆಗಿದೆ.
2 ಯೆಹೋವನು ನಮಗೆ ಸತ್ಯವನ್ನು ಕಲಿಸಿದರ್ದಿಂದ ನಾವು ಆತನನ್ನು ಸುತ್ತಿಸುತ್ತೇವೆ. (ಯೆಶಾ. 54:13; ಯೋಹಾನ 8:32) ಸರದಿಯಾಗಿ, ಭದ್ರತೆ ಮತ್ತು ಸಂತೋಷಕ್ಕಾಗಿ ಹುಡುಕುವವರೆಲ್ಲರೊಂದಿಗೆ ನಾವು ಸತ್ಯವನ್ನು ಹರ್ಷಭರಿತರಾಗಿ ಹಂಚುತ್ತೇವೆ. (ಯೆಹೆ. 9:4; ಅ. ಕೃ. 20:35) ನಮ್ಮ ಕ್ರೈಸ್ತ ಸಹೋದರತ್ವವು ಸಹ ನಮಗೆ ಆನಂದವನ್ನು ತರುತ್ತದೆ. ಒಂದು ಪ್ರೀತಿಯ ಆತ್ಮಿಕ ಕುಟುಂಬವು ತೃಪ್ತಿ ಮತ್ತು ಸಂತೋಷವನ್ನು ತರುತ್ತದೆ. ಯೆಹೋವನನ್ನು ಸುತ್ತಿಸಲು ನಮ್ಮನ್ನು ಪ್ರಚೋದಿಸುವ ನಮ್ಮ ಆನಂದಕ್ಕೆ ಇವು ಕೇವಲ ಕೆಲವು ಕಾರಣಗಳಾಗಿವೆ. ಅಧಿವೇಶನದ ಭಾಷಣಗಳು ಮತ್ತು ಪ್ರತ್ಯಕ್ಷಾಭಿನಯಗಳು ಈ ತೊಂದರೆಯುಕ್ತ ಕಡೇ ದಿವಸಗಳಲ್ಲಿ ಆನಂದಕ್ಕಾಗಿ, ಹೆಚ್ಚಿನ ಶಾಸ್ತ್ರೀಯ ಕಾರಣಗಳ ಕಡೆಗೆ ನಮ್ಮ ಗಮನವನ್ನು ಸೆಳೆಯುವುವು.
3 ಮೂರು ದಿನದ ಒಂದು ಅಧಿವೇಶನ: ಅಧಿವೇಶನದ ಎಲ್ಲಾ ಮೂರು ದಿನಗಳಿಗೆ ಹಾಜರಿರಲು ರಜೆ ಸಿಗುವಂತೆ ನೀವು ನಿಮ್ಮ ಧಣಿಯೊಂದಿಗೆ ಏರ್ಪಾಡುಗಳನ್ನು ಮಾಡಿದ್ದೀರೋ? ಶಾಲೆ ನಡೆಯುತ್ತಿರುವಾಗ ಅಧಿವೇಶನಗಳಲ್ಲಿ ಒಂದನ್ನು ಹಾಜರಾಗಲಿರುವ ಶಾಲಾ ವಯಸ್ಸಿನ ಮಕ್ಕಳ ಹೆತ್ತವರು, ಮಕ್ಕಳು ತಮ್ಮ ಧಾರ್ಮಿಕ ಆರಾಧನೆಯ ಈ ಪ್ರಾಮುಖ್ಯ ಭಾಗಕ್ಕಾಗಿ ಶುಕ್ರವಾರ ಮತ್ತು ಶನಿವಾರ ಶಾಲೆಗೆ ಗೈರುಹಾಜರಾಗುವರೆಂದು ಶಿಕ್ಷಕರಿಗೆ ಗೌರವಪೂರ್ವಕವಾಗಿ ತಿಳಿಸಬೇಕು. ನಿಮಗೆ ಅತಿ ಹತ್ತಿರವಿರುವ ಅಧಿವೇಶನ ಯಾವುದು? ಫೆಬ್ರವರಿ 15, 1995ರ ಕಾವಲಿನಬುರುಜು, ಭಾರತದಲ್ಲಿನ ಎಲ್ಲಾ 16 ಅಧಿವೇಶನಗಳ ನಿವೇಶನಗಳನ್ನು ಪಟ್ಟಿಮಾಡಿತ್ತು. ಈ ಸಮಯದಷ್ಟಕ್ಕೆ ನಿಮ್ಮ ಸಭಾ ಸೆಕ್ರಿಟರಿಯು ನಿಮ್ಮ ಸಭೆಗಾಗಿರುವ ವಿವರಗಳ ಕುರಿತಾಗಿ ನಿಮಗೆ ತಿಳಿಸಿರಬೇಕು. ಇಂಗ್ಲಿಷ್ಗೆ ಕೂಡಿಸಿ ಕನ್ನಡ, ಕೊಂಕಣಿ, ಗುಜರಾಥಿ, ತಮಿಳು, ತೆಲುಗು, ಬಂಗಾಲಿ, ಮರಾಠಿ, ಮಲೆಯಾಳಂ, ಮತ್ತು ಹಿಂದಿಯಲ್ಲಿ ಅಧಿವೇಶನಗಳು ಇರುವವು.
4 ಹೆಚ್ಚಿನ ಸ್ಥಳಗಳಲ್ಲಿ ಕಾರ್ಯಕ್ರಮವು ಶುಕ್ರವಾರ ಬೆಳಗ್ಗೆ 9:40ಕ್ಕೆ ಆರಂಭಗೊಳ್ಳುವುದು ಮತ್ತು ಆದಿತ್ಯವಾರ ಸಂಜೆ ಸುಮಾರು 3:50ಕ್ಕೆ ಸಮಾಪ್ತಿಗೊಳ್ಳುವುದು. ಶನಿವಾರ ಮತ್ತು ಆದಿತ್ಯವಾರ, ಕಾರ್ಯಕ್ರಮವು ಬೆಳಗ್ಗೆ 9:30ಕ್ಕೆ ಆರಂಭಗೊಳ್ಳುವುದು. ಸಾಕ್ಷಿಗಳು ಮತ್ತು ಸಾರ್ವಜನಿಕ ಸದಸ್ಯರು ಬೆಳಗ್ಗೆ 8:00 ಗಂಟೆಯಿಂದ ಸ್ವಾಗತಿಸಲ್ಪಡುವರು, ಆದರೆ ನಿರ್ದಿಷ್ಟ ಕೆಲಸ ನೇಮಕಗಳಿರುವವರು ಇದಕ್ಕಿಂತ ಮುಂಚೆ ಪ್ರವೇಶಿಸಲು ಅನುಮತಿಸಲ್ಪಡುವರು.
5 ನೀವು ಹಾಜರಿರುವಿರೋ?: ಅಧಿವೇಶನದ ಎಲ್ಲಾ ಮೂರು ದಿನಗಳನ್ನು ಹಾಜರಾಗುವಂತೆ ನಮ್ಮನ್ನು ಉತ್ತೇಜಿಸಲಾಗುತ್ತದೆ. ಅದು ಯಾಕೆ? ನಾವಲ್ಲಿರುವಂತೆ ಯೆಹೋವನು ಬಯಸುತ್ತಾನೆ. ಇಂದು ನಮ್ಮ ನಂಬಿಕೆ ಮತ್ತು ಆತ್ಮಿಕ ಆರೋಗ್ಯವು ತೀವ್ರ ದಾಳಿಗೊಳಗಾಗಿದೆ. ಯೂದಾಯದಲ್ಲಿದ್ದ ಕ್ರೈಸ್ತರು ಮಹತ್ತಾದ ಒತ್ತಡವನ್ನು ಅನುಭವಿಸುತ್ತಿದ್ದ ಸಮಯವೊಂದರಲ್ಲಿ “ಸಭೆಯಾಗಿ ಕೂಡಿಕೊಳ್ಳುವುದನ್ನು . . . ಬಿಟ್ಟುಬಿಡದೆ” ಇರುವುದರ ಕುರಿತಾಗಿ ಪೌಲನು ಸಲಹೆ ನೀಡಿದನು. (ಇಬ್ರಿ. 3:12, 13; 10:25) ಫಿಲಿಪ್ಪಿಯವರು “ವಕ್ರಬುದ್ಧಿಯುಳ್ಳ ಮೂರ್ಖ ಜಾತಿಯ ಮಧ್ಯದಲ್ಲಿ” ಜೀವಿಸುತ್ತಿದ್ದರು. ಆದರೂ, ಅವರು “ಲೋಕಕ್ಕೆ ಜ್ಯೋತಿರ್ಮಂಡಲಗಳಂತೆ ಪ್ರಕಾಶಿಸು” ತ್ತಿದ್ದರು. (ಫಿಲಿ. 2:15, NW) ಈ ಪ್ರಥಮ ಶತಮಾನದ ಕ್ರೈಸ್ತರು ಏಕೆ ಭಿನ್ನರಾಗಿದ್ದರು? ಏಕಂದರೆ “ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸ”ಲು ಜೊತೆಯಾಗಿ ಕೂಡುವಂತೆ ಅವರಿಗೆ ನಿರ್ದೇಶಿಸಿದ್ದ ಪವಿತ್ರಾತ್ಮದ ಮಾರ್ಗದರ್ಶಕಗಳನ್ನು ಅವರು ವಿಧೇಯತೆಯಿಂದ ಅನುಸರಿಸಿದರು.—ಇಬ್ರಿ. 10:24.
6 ಅದಕ್ಕೆ ವಿರುದ್ಧವಾದದ್ದನ್ನು ಮಾಡಲು, ನಮ್ಮ ಸಹೋದರರೊಂದಿಗೆ ಕೂಡುವ ಮತ್ತು ಯೆಹೋವನನ್ನು ಸುತ್ತಿಸುವ ನಮ್ಮ ಬಯಕೆಯನ್ನು ದುರ್ಬಲಗೊಳಿಸುವಂತೆ ಲೋಕವು ನಮ್ಮನ್ನು ಪ್ರಭಾವಿಸುವುದು. ಹೀಗೆ, ಯೆಹೋವನ ಆತ್ಮಕ್ಕೆ ಮಣಿದು, ಅಧಿವೇಶನದ ಎಲ್ಲಾ ಮೂರು ದಿನಗಳನ್ನು ಆನಂದಿಸಲು ನಾವು ಆಮಂತ್ರಿಸಲ್ಪಟ್ಟಿದ್ದೇವೆ. ನಮ್ಮ ಇಡೀ ಕುಟುಂಬದೊಂದಿಗೆ ಹಾಜರಿರಲು ನಾವು ನಿರ್ಧಾರವುಳ್ಳವರಾಗಿದ್ದೇವೊ? ನಾವು ನಮ್ಮ ಪ್ರೀತಿ ಮತ್ತು ನಂಬಿಕೆಯನ್ನು ಒಂದು ಕ್ರಮವಾದ ಮಟ್ಟದಲ್ಲಿ ಬಲಪಡಿಸುವ ಅಗತ್ಯವಿದೆ. ಈ ಸಂಬಂಧದಲ್ಲಿ ನಮಗೆ ಸಹಾಯ ಮಾಡಲು ಯೆಹೋವನು ವಾರ್ಷಿಕ ಅಧಿವೇಶನಗಳನ್ನು ಒದಗಿಸಿದ್ದಾನೆ.
7 ಮನೆಗೆ ಒಂದು ಸಂಪತ್ತನ್ನು ತೆಗೆದುಕೊಂಡು ಹೋಗಿರಿ: ಅಧಿವೇಶನದಿಂದ ನೀವು ಅತಿ ಹೆಚ್ಚಿನ ಪ್ರಯೋಜನವನ್ನು ಹೇಗೆ ಗಳಿಸಬಲ್ಲಿರಿ? ಒಂದು ಶಬ್ದದಲ್ಲಿ ಹೇಳುವುದಾದರೆ, ಉತ್ತರವು “ಚಿತ್ತೈಕಾಗ್ರತೆ” ಆಗಿದೆ. ಇಂದಿನ ತುಡಿಯುವ, ಶೀಘ್ರ ಗತಿಯ ಸಮಾಜದಲ್ಲಿ ಇದು ಸುಲಭದ ಕೆಲಸವಲ್ಲ. ಉತ್ಸಾಹವುಳ್ಳ ಯುವ ಜನರು ಚಿತ್ತೈಕಾಗ್ರತೆಯನ್ನು ಕಷ್ಟಕರವಾಗಿ ಕಂಡುಕೊಳ್ಳಬಹುದು, ಆದರೆ ಅದು, ಒಂದು ಜಿಲ್ಲಾ ಅಧಿವೇಶನವನ್ನು ಹಾಜರಾಗುವಾಗ ನಾವೆಲ್ಲರೂ ಎದುರಿಸುವ ಒಂದು ಪಂಥಾಹ್ವಾನವಾಗಿದೆ. ನಾವು ಮುಂಚಿತವಾಗಿಯೇ ಯೋಜಿಸಿದರೆ ಚಿತ್ತೈಕಾಗ್ರತೆಯನ್ನು ಹೆಚ್ಚು ಸುಲಭವಾದದ್ದಾಗಿ ಕಂಡುಕೊಳ್ಳುವೆವು. ನಿಮ್ಮನ್ನೇ ಕೇಳಿಕೊಳ್ಳಿ, ‘ಅಧಿವೇಶನದ ಮುಖ್ಯ ವಿಷಯವೇನು?’ ಅದರ ಕುರಿತು ಧ್ಯಾನಿಸಿರಿ! ‘ನಾನು ಏಕೆ ಹೋಗುತ್ತಿದ್ದೇನೆ, ಮತ್ತು ಮೂರು ದಿನಗಳಲ್ಲಿ ನಾನು ಏನು ಮಾಡುವೆನು? ನನ್ನ ಸಾಯಂಕಾಲಗಳು ಮನೋರಂಜನೆಯೊಂದಿಗೆ ತುಂಬಿರುವವೊ, ಅಥವಾ ವಿಶ್ರಾಮಕ್ಕಾಗಿ ಮತ್ತು ಅಧಿವೇಶನದ ಮುಖ್ಯಾಂಶಗಳ ಪುನರ್ವಿಮರ್ಶೆಗಾಗಿ ನಾನು ಸಾಕಷ್ಟು ಸಮಯವನ್ನು ಗೊತ್ತುಪಡಿಸಿದ್ದೇನೋ?’
8 “ನೀವು ಧ್ಯಾನಿಸುತ್ತೀರೋ ಅಥವಾ ಕೇವಲ ಹಗಲುಗನಸು ಕಾಣುತ್ತೀರೋ?” ಎಂಬ ಫೆಬ್ರವರಿ 1, 1984ರ ವಾಚ್ಟವರ್ನ ಲೇಖನವು, ನಾವು ಒಂದು ಕೂಟದಿಂದ ಹೆಚ್ಚನ್ನು ಪಡೆಯಬಹುದಾದ ವಿಧದ ಮೇಲೆ ಹಲವಾರು ಸಲಹೆಗಳನ್ನು ನೀಡಿತು ಮತ್ತು ಈ ತೀರ್ಮಾನಕ್ಕೆ ಬಂದಿತ್ತು: “ಮಾನಸಿಕ ಶಿಸ್ತು ಪ್ರಾಯಶಃ ಅತಿ ಪ್ರಾಮುಖ್ಯ ಅಂಶವಾಗಿದೆ.” ಒಬ್ಬ ಭಾಷಣಕರ್ತನು ಆರಂಭಿಸುವಾಗ ನಾವು ಸಾಮಾನ್ಯವಾಗಿ ಗಮನ ಕೊಡುತ್ತಿರುತ್ತೇವೆ, ಆದರೆ ಭಾಷಣದ ಸ್ವಲ್ಪ ಭಾಗಕ್ಕೆ ಕಿವಿಗೊಟ್ಟ ನಂತರ, ನಾವು ನಮ್ಮ ಮನಸ್ಸಿನ “ಚಾಲಕಸಂಬಂಧವು ಜಾರುವಂತೆ” ಬಿಡುತ್ತೇವೆ. ಇದು ಸಂಭವಿಸುವುದನ್ನು ನಾವು ಹೇಗೆ ತಡೆಗಟ್ಟಸಾಧ್ಯವಿದೆ?
9 ಈ ಹಿಂದೆ ನೀಡಲ್ಪಟ್ಟಿರುವ ಸಲಹೆಗಳು ಕಾರ್ಯನಡಿಸುವುದರಿಂದ ಪುನರಾವೃತ್ತಿಗೆ ಸುಸಂಬಂಧದ್ದಾಗಿವೆ. ಸಾಧ್ಯವಿರುವುದಾದರೆ, ಪ್ರತಿ ರಾತ್ರಿ ಸಾಕಷ್ಟು ವಿಶ್ರಾಮವನ್ನು ಪಡೆಯಲು ಪ್ರಯತ್ನಿಸಿರಿ. ಇದು ಯಾವಾಗಲೂ ಸುಲಭವಾಗಿರಲಿಕ್ಕಿಲ್ಲ, ಯಾಕಂದರೆ ಪ್ರಯಾಣವು ಒಳಗೂಡಿರಬಹುದು, ಮತ್ತು ನೀವು ಒಂದು ಹೋಟೆಲಿನಲ್ಲಿ ಉಳಿಯುತ್ತಿರುವಲ್ಲಿ, ನೀವು ಮನೆಯಲ್ಲಿದ್ದಷ್ಟು ಬೇಗ ಅಥವಾ ಚೆನ್ನಾಗಿ ವಿಶ್ರಮಿಸಲಿಕ್ಕಿಲ್ಲ. ಒಳ್ಳೆಯ ಯೋಜನೆಯು ಅಗತ್ಯವಾದ ವಿಶ್ರಾಮವನ್ನು ಪಡೆಯುವಂತೆ ಸಾಮಾನ್ಯವಾಗಿ ನಿಮ್ಮನ್ನು ಅನುಮತಿಸುವುದು.
10 ಸರಳವಾದ ಟಿಪ್ಪಣಿಬರೆಯುವುದು ಚಿತ್ತೈಕಾಗ್ರತೆಯಲ್ಲಿ ಒಂದು ಸಹಾಯಕವಾಗಿ ಪರಿಣಮಿಸಿದೆ. ನೀವು ತೀರ ಹೆಚ್ಚು ಮಾಹಿತಿಯನ್ನು ಬರೆಯಲು ಪ್ರಯತ್ನಿಸುವಲ್ಲಿ, ಕೆಲವು ಪ್ರಮುಖ ವಿಷಯಗಳು ಪೂರ್ಣವಾಗಿ ತಪ್ಪಿಹೋಗಬಹುದು. ಒಂದು ಸಲಹೆಯೋಪಾದಿ, ಒಬ್ಬ ಬೈಬಲ್ ವಿದ್ಯಾರ್ಥಿಗಾಗಿ ಅಥವಾ ಮನೆಯೊಳಗೆ ಉಳಿಯುವವರಿಗಾಗಿ ಕಾರ್ಯಕ್ರಮದ ಒಂದು ಸಾರಾಂಶವನ್ನು ಸಾದರಪಡಿಸುವ ಹೇತುವಿನೊಂದಿಗೆ ಟಿಪ್ಪಣಿಬರೆದುಕೊಳ್ಳಿರಿ. ನಿಮ್ಮ ಮನಸ್ಸಿನಲ್ಲಿ ಒಬ್ಬ ನಿರ್ದಿಷ್ಟ ವ್ಯಕ್ತಿಯಿಲ್ಲದಿರಬಹುದಾದರೂ, ಟಿಪ್ಪಣಿಬರೆಯುವುದರಲ್ಲಿ ನಿಮಗೆ ಒಂದು ಉದ್ದೇಶವಿರುವುದು, ಮತ್ತು ಅವಿಶ್ವಾಸಿ ಕುಟುಂಬ ಸದಸ್ಯರಿಗೆ ಅನೌಪಚಾರಿಕವಾಗಿ ಸಾಕ್ಷಿ ನೀಡುತ್ತಿರುವಾಗ ಕಾರ್ಯಕ್ರಮದ ಮುಖ್ಯಾಂಶಗಳನ್ನು ಸಾದರಪಡಿಸುವ ಸಂದರ್ಭಗಳನ್ನು ನೀವು ಅಧಿವೇಶನದ ನಂತರ ಕಂಡುಕೊಳ್ಳಬಹುದು. ಟಿಪ್ಪಣಿಬರೆಯುವುದರ ಮೂಲಕ ಮತ್ತು ನೀವೇನನ್ನು ಕೇಳಿಸಿಕೊಂಡಿದ್ದೀರೋ ಅದನ್ನು ಹಂಚಿಕೊಳ್ಳುವ ಮೂಲಕ, ನೀವು ಮಾಹಿತಿಯನ್ನು ಬೇಗನೇ ಮರೆಯುವುದಿಲ್ಲ. ವ್ಯಕ್ತಪಡಿಸುವಿಕೆಯು ಧಾರಣಶಕ್ತಿಯನ್ನು ಹೆಚ್ಚಿಸುತ್ತದೆ.
11 ಧ್ವನಿವರ್ಧಕ ಸಲಕರಣೆ, ಹೆಚ್ಚಿನ ಪೀಠವ್ಯವಸ್ಥೆ, ಇನ್ನು ಮುಂತಾದವುಗಳನ್ನು ಬಾಡಿಗೆಗೆ ತೆಗೆದುಕೊಳ್ಳುವ ಕೂಡಿಸಿದ ವೆಚ್ಚವನ್ನು ಅನೇಕವೇಳೆ ಒಳಗೂಡಿರುವ ಅಧಿವೇಶನದ ಸೌಕರ್ಯದ ಬಾಡಿಗೆಯಲ್ಲಿ ಗಣನೀಯವಾದ ಖರ್ಚು ಸೇರಿರುತ್ತದೆ. ಈ ಖರ್ಚುಗಳು ಹೇಗೆ ತೆರಲ್ಪಡುತ್ತವೆ? ನಮ್ಮ ಸ್ವಯಂಪ್ರೇರಿತ ದಾನಗಳಿಂದ, ಹಣದ ಮೂಲಕ ಅಥವಾ “ವಾಚ್ ಟವರ್ ಸೊಸೈಟಿ”ಗೆ ತೆರಲ್ಪಡುವ ಚೆಕ್ನ ಮೂಲಕ. ಇದು ಕೀರ್ತನೆ 96:8 ಮತ್ತು 2 ಪೂರ್ವಕಾಲವೃತ್ತಾಂತ 31:12ಕ್ಕೆ ಹೊಂದಿಕೆಯಲ್ಲಿದೆ.
12 ಹರ್ಷಭರಿತ ಸುತ್ತಿಗಾರರು ಯೆಹೋವನನ್ನು ದೈವಭಕ್ತಿಯುಳ್ಳ ನಡತೆಯ ಮೂಲಕ ಸನ್ಮಾನಿಸುತ್ತಾರೆ: ಕಳೆದ ವರ್ಷ ಹೋಟೆಲ್ ಸಿಬ್ಬಂದಿವರ್ಗ ಮತ್ತು ಅಧಿವೇಶನ ಸೌಕರ್ಯಗಳ ನೌಕರರಿಂದ ನಮ್ಮ ನಡತೆಯ ಕುರಿತಾಗಿ, ಉತ್ತೇಜನದಾಯಕ ಸಕಾರಾತ್ಮಕ ಹೇಳಿಕೆಗಳನ್ನು ಪಡೆಯಲಾಯಿತು. ಒಬ್ಬ ಹೋಟೆಲ್ ಮ್ಯಾನೇಜರ್ ತಿಳಿಸಿದ್ದು: “ಸಾಕ್ಷಿಗಳಿಗೆ ವಸತಿ ಒದಗಿಸುವುದು ಯಾವಾಗಲೂ ಒಂದು ಆನಂದವಾಗಿರುತ್ತದೆ, ಯಾಕಂದರೆ ಅವರು ತಾಳ್ಮೆಯಿಂದಿರುತ್ತಾರೆ ಮತ್ತು ಸಹಕರಿಸುತ್ತಾರೆ ಮತ್ತು ತಮ್ಮ ಮಕ್ಕಳ ಮೇಲೆ ಜಾಗ್ರತರಾಗಿ ಕಣ್ಣಿಡುತ್ತಾರೆ.” ಸಾಕ್ಷಿಗಳು ಇತರ ಗುಂಪುಗಳಿಗಿಂತ ಹೆಚ್ಚು ಸಂತೋಷಿತರು ಮತ್ತು ತೀರ ಹೆಚ್ಚು ವ್ಯವಸ್ಥಿತರಾಗಿರುವಂತೆ ತೋರುತ್ತಾರೆಂದು ಇನ್ನೊಬ್ಬ ಹೋಟೆಲ್ ಡೈರೆಕ್ಟರ್ ಹೇಳಿದನು. ನಮ್ಮ ಅಧಿವೇಶನವು ಆ ಕ್ಷೇತ್ರದಲ್ಲಿ ನಡಿಸಲ್ಪಟ್ಟವುಗಳಲ್ಲಿ ಅತಿ ದೊಡ್ಡದಾಗಿದ್ದರೂ, ಅವರು ಹೇಳಿದ್ದು: “ಅವರ ಗಾತ್ರದ ಅಂಶಮಾತ್ರದಷ್ಟು ದೊಡ್ಡದಾಗಿರುವ ಗುಂಪುಗಳಿಗಿಂತ ಕಡಿಮೆ ದೂರುಗಳು ಮತ್ತು ಕಷ್ಟಗಳು ನಮಗಿರುತ್ತವೆ.”
13 ನಮ್ಮ ಅಧಿವೇಶನಕ್ಕಿಂತ ಮುಂಚೆ ನಡೆಸಲ್ಪಟ್ಟ ಒಂದು ಇತ್ತೀಚಿಗಿನ ಅಧಿವೇಶನವು, ಸೌಕರ್ಯಗಳಲ್ಲಿ ಎಲ್ಲಾ ನೌಕರರು ಇದ್ದರೂ ತುಂಬ ಹಾನಿ, ಹಾಗೂ ಕಳ್ಳತನದಲ್ಲಿ ಪರಿಣಮಿಸಿತ್ತೆಂದು ಇನ್ನೊಬ್ಬ ಹೋಟೆಲ್ ನೌಕರನು ತಿಳಿಯಪಡಿಸಿದನು. ಆದರೆ ನಮ್ಮ ಅಧಿವೇಶನದ ಕುರಿತಾಗಿ, ಅವನು ತಿಳಿಸುತ್ತಾ ಮುಂದುವರಿದದ್ದು: “ಸಾಕ್ಷಿಗಳೊಂದಿಗೆ ನಾವು ಅದರ ಕುರಿತಾಗಿ ಚಿಂತಿಸಬೇಕಾಗಿಲ್ಲ. . . . ಅವರು ಇಲ್ಲಿರುವಾಗ ನಾವು ಕೇವಲ ಒಂದೆರಡು ಮೇಂಟೆನೆನ್ಸ್ ಜನರನ್ನು ಇಡಬೇಕಾಗುತ್ತದೆ ಮತ್ತು ಅದು ಯಂತ್ರದೊಂದಿಗಿನ ಯಾವುದೇ ತಟ್ಟನೆಯ ಸಮಸ್ಯೆಗಳನ್ನು ದುರಸ್ತಿಮಾಡಲಿಕ್ಕಾಗಿ ಮಾತ್ರ.”
14 ನಾವು ಪಡೆಯುವ ಎಲ್ಲಾ ವರದಿಗಳು ಹಾಗಿರುತ್ತಿದ್ದಲ್ಲಿ ಒಳ್ಳೇದಿತ್ತೆಂದು ನಾವು ಆಶಿಸುತ್ತೇವೆ, ಆದರೆ ದುಃಖಕರವಾಗಿ, ಅದು ಹಾಗಿರುವುದಿಲ್ಲ. ಅಧಿವೇಶನದ ಒಬ್ಬ ಅಧ್ಯಕ್ಷರು ಅವಲೋಕಿಸಿದ್ದು: “ಕಾರ್ಯಕ್ರಮಗಳ ನಂತರ, ಹದಿವಯಸ್ಕರಲ್ಲಿ ಹೆಚ್ಚಿನವರು ಜೋರಾಗಿ ನಗುತ್ತಾ ಕೂಗಾಡುತ್ತಾ [ಹೋಟೆಲಿನ] ಮೊಗಸಾಲೆಯಲ್ಲಿ ದೊಡ್ಡ ಸಂಖ್ಯೆಗಳಲ್ಲಿ ಜೊತೆಗೂಡುತ್ತಾರೆ. ಇದು ಇತರ ಅತಿಥಿಗಳನ್ನು ಉಪದ್ರವಪಡಿಸುತ್ತದೆ . . . ಅವರು ಕಿರುಕುಳಗೊಂಡವರಂತೆ ತೋರುತ್ತಾರೆ. ಕೆಲವು ಯುವ ಜನರು, ಅವರು ಒಬ್ಬರು ಇನ್ನೊಬ್ಬರ ರೂಮುಗಳಲ್ಲಿ ಭೇಟಿಯಾದಂತೆ ಬಾಗಿಲುಗಳನ್ನು ದಢಾರನೆ ಮುಚ್ಚುತ್ತಾ, ರೂಮುಗಳಲ್ಲಿ ತೀರ ಗಟ್ಟಿಯಾಗಿ ಮಾತಾಡುತ್ತಾ, ಮೊಗಸಾಲೆಗಳಲ್ಲಿ ಓಡಾಡುತ್ತಾರೆ.”
15 ಹಲವಾರು ವರ್ಷಗಳಿಂದ ಇರುವ ಇನ್ನೊಂದು ಸಮಸ್ಯೆಯು ಏನೆಂದರೆ, ಸಹೋದರರ ದೊಡ್ಡ ಸಂಖ್ಯೆಯು ಕಾರ್ಯಕ್ರಮದ ಸಮಯದಲ್ಲಿ ಮೊಗಸಾಲೆಗಳಲ್ಲಿ ಮತ್ತು ಸಭಾಗೃಹದ ಹೊರಗೆ ಹರಟೆ ಹೊಡೆಯುತ್ತಿರುವುದೇ. ಕಳೆದ ವರ್ಷ ಒಂದು ಅಧಿವೇಶನದಲ್ಲಿ, ಬೈಬಲನ್ನು ಅಧ್ಯಯನಿಸುತ್ತಿರುವವನೊಬ್ಬನಿಂದ ಒಂದು ಪತ್ರವು ಕಾಣಿಕೆಯ ಪೆಟ್ಟಿಗೆಯಲ್ಲಿ ಸಿಕ್ಕಿತು. ಅದು ಹೀಗೆ ಹೇಳಿತು: “ಭಾಷಣಗಳ ಸಮಯದಲ್ಲಿ ಮೊಗಸಾಲೆಗಳಲ್ಲಿ ನಡೆಯುತ್ತಿದ್ದ ಶಬ್ದ, ಚಟುವಟಿಕೆ, ಮಾತಾಡುವಿಕೆ ಮತ್ತು ಅಯೋಗ್ಯ ವರ್ತನೆಯಿಂದ ನಾನು ಹಿಂದೆಂದೂ ಇಷ್ಟು ದಿಗಿಲುಪಟ್ಟಿಲ್ಲ . . . ನಾನು ಇನ್ನೂ ಒಬ್ಬ ಸಾಕ್ಷಿಯಾಗಿಲ್ಲ, ಕೇವಲ ಅಧ್ಯಯನಿಸುತ್ತಿದ್ದೇನೆ ಮತ್ತು ದಿವ್ಯ ಭಯ ಮತ್ತು ಗೌರವವನ್ನು ಕಲಿಯುತ್ತಿದ್ದೇನೆ.” ಯೆಹೋವನ ಒದಗಿಸುವಿಕೆಗಳಿಗಾಗಿ ನಮಗೆ ಗಣ್ಯತೆಯ ಕೊರತೆಯಿದೆಯೆಂಬ ಗುರುತನ್ನು ನಮ್ಮಲ್ಲಿ ಯಾರೂ ಬಿಟ್ಟುಹೇಗಲು ಬಯಸೆವು, ನಿಶ್ಚಯ.
16 ಎಲ್ಲಾ ಸಮಯಗಳಲ್ಲಿ ನಾವು ಸ್ವತಃ ಕೇಳಿಕೊಳ್ಳಬೇಕು: ‘ನಾನು ಯಾರನ್ನು ಪ್ರತಿನಿಧಿಸುತ್ತೇನೆ, ಮತ್ತು ನಾನು ಈ ಅಧಿವೇಶನವನ್ನು ಏಕೆ ಹಾಜರಾಗುತ್ತಿದ್ದೇನೆ?’ ನಮ್ಮ ಆತ್ಮಿಕತೆ ಮತ್ತು ದೈವಭಕ್ತಿಯು, ನಮ್ಮ ಭಾಷೆ, ನಡತೆ ಮತ್ತು ಆತ್ಮಿಕ ಒದಗಿಸುವಿಕೆಗಳಿಗಾಗಿರುವ ಗಣ್ಯತೆಯಲ್ಲಿ ಪ್ರತಿಬಿಂಬಿಸಲ್ಪಡುತ್ತದೆ. (ಯಾಕೋ. 3:13; 1 ಪೇತ್ರ 2:2, 3, 12) ಹಲವಾರು ವರ್ಷಗಳ ನಿರ್ಬಂಧ ಮತ್ತು ನಿಷೇಧಗಳನ್ನು ತಾಳಿಕೊಂಡಿರುವ ಸಹೋದರರು, ತಮ್ಮ ಆಸನಗಳಲ್ಲಿ ಉಳಿಯುತ್ತಾ, ಭಾಷಣಗಳು ಮತ್ತು ಪ್ರತ್ಯಕ್ಷಾಭಿನಯಗಳಲ್ಲಿ ತಲ್ಲೀನರಾಗಿರುತ್ತಾ, ಅಧಿವೇಶನಗಳಲ್ಲಿ ಹೆಚ್ಚು ಗಮನ ಕೊಡುವವರು ಮತ್ತು ಗೌರವಪೂರ್ವಕರಾಗಿರುವದನ್ನು ಹೆಚ್ಚಾಗಿ ಗಮನಿಸಲಾಗಿದೆ.
17 ನಿಮ್ಮ ಉಡುಪು ಮತ್ತು ಕೇಶಶೈಲಿ ಒಂದು ಸಂದೇಶವನ್ನು ಕಳುಹಿಸುತ್ತದೆ: 1 ಸಮುವೇಲ 16:7 ರಲ್ಲಿ “ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ” ಎಂದು ನಮಗೆ ನೆನಪಿಸಲಾಗಿದೆ. ಹೀಗೆ, ಜನರು ಹೆಚ್ಚಾಗಿ ನಮಗೆ ನಮ್ಮ ತೋರಿಕೆಯ ಆಧಾರದ ಮೇಲೆ ತೀರ್ಪು ಮಾಡುತ್ತಾರೆ. ಆರಾಧನೆ ಮತ್ತು ಕ್ರಿಸ್ತೀಯ ಜೀವಿತದಲ್ಲಿ ಉಪದೇಶಕ್ಕಾಗಿ ಒಂದು ಅಧಿವೇಶನವನ್ನು ನಾವು ಹಾಜರಾಗುತ್ತಿರುವಾಗ, ವಿಶೇಷವಾಗಿ ನಮ್ಮ ಉಡುಪು ಮತ್ತು ಕೇಶಶೈಲಿಯನ್ನು ನಿಕಟವಾಗಿ ಗಮನಿಸಲಾಗುತ್ತದೆ. ಶಾಲೆಗೆ ಹೋಗುತ್ತಿರುವ ಒಬ್ಬ ಯುವ ವ್ಯಕ್ತಿ ನೀವಾಗಿರುವಲ್ಲಿ ಅಥವಾ ನಿಮ್ಮ ಐಹಿಕ ಉದ್ಯೋಗವು ನಿಮ್ಮನ್ನು ಲೌಕಿಕ ಶೈಲಿಗಳನ್ನು ಅನುಸರಿಸುವ ಜನರೊಂದಿಗೆ ನಿಕಟವಾದ ಸಂಪರ್ಕದಲ್ಲಿ ಹಾಕುವಲ್ಲಿ, ಆಡಂಬರವಿಲ್ಲದ ಉಡುಪಿಗಾಗಿರುವ ಕ್ರೈಸ್ತ ಮಟ್ಟಗಳಿಗೆ ಅಂಟಿಕೊಳ್ಳುವುದು ಒಂದು ಪಂಥಾಹ್ವಾನವಾಗಿರಬಹುದು.
18 ಉಡುಪು ಮತ್ತು ಕೇಶಶೈಲಿಯ ಮಟ್ಟಗಳು ಲೋಕದಾದ್ಯಂತ ವ್ಯತ್ಯಾಸವನ್ನು ಹೊಂದಿರುತ್ತವೆ. ಕ್ರೈಸ್ತರು ಮಾನಮರ್ಯಾದೆಯುಳ್ಳ, ಸುವ್ಯವಸ್ಥಿತ ಬಟ್ಟೆಯನ್ನು ಧರಿಸುವಂತೆ ನಿರೀಕ್ಷಿಸಲ್ಪಡುತ್ತಾರೆ. ಇದನ್ನು ಯಾರು ನಿರ್ಧರಿಸಬೇಕು? ತಮ್ಮ ಹದಿವಯಸ್ಕ ಮಕ್ಕಳು ಶಾಲೆಯಲ್ಲಿರುವ ಲೌಕಿಕ ಯುವಕರಂತೆ ಉಡುಪನ್ನು ಧರಿಸುವುದಿಲ್ಲವೆಂದು ಹೆತ್ತವರು ಖಚಿತರಾಗಿರಬೇಕು. ಈ ಸೂಕ್ಷ್ಮಗ್ರಾಹಿ ವಿಷಯದಲ್ಲಿ ಸ್ಪಷ್ಟ ನಿರ್ಣಯಗಳನ್ನು ಮಾಡುವಂತೆ ನಮಗೆ ಸಹಾಯ ನೀಡಲು ಸಹಾಯಕ ನಿರ್ದೇಶನಗಳು ಒದಗಿಸಲ್ಪಟ್ಟಿವೆ. “ಬಟ್ಟೆಗೆಳು ನಿಮಗೆ ಯಾವ ಅರ್ಥದಲ್ಲಿವೆ?” ಎಂಬ ಫೆಬ್ರವರಿ 8, 1987ರ ಅವೇಕ್! ಲೇಖನದ ಪುನರ್ವಿಮರ್ಶೆಯನ್ನು ನಾವು ಉತ್ತೇಜಿಸುತ್ತೇವೆ. ಕಳೆದ ವರ್ಷ ನಮ್ಮ ಕೆಲವು ಅಧಿವೇಶನಗಳಲ್ಲಿ ಏನನ್ನು ಅವಲೋಕಿಸಲಾಯಿತು?
19 “ದಿವ್ಯ ಭಯ” ಜಿಲ್ಲಾ ಅಧಿವೇಶನಗಳಲ್ಲಿ ಒಂದರ ನಂತರ, ನಾವು ಈ ಅವಲೋಕನವನ್ನು ಪಡೆದೆವು: “ಈ ವರ್ಷ ಅಧಿವೇಶನದಲ್ಲಿ ಸಹೋದರರು ಮತ್ತು ಸಹೋದರಿಯರು ತಮ್ಮ ಉಡುಪು, ಕೇಶಶೈಲಿ ಮತ್ತು ನಡತೆಯಲ್ಲಿ ತುಂಬಾ ಅಭಿವೃದ್ಧಿ ಮಾಡಿದ್ದಾರೆ. . . . ಆದಾಗಲೂ, ಇನ್ನೂ ಹೆಚ್ಚಿನ ಅಭಿವೃದ್ಧಿಯ ಅಗತ್ಯವಿರುವ ನಿರ್ದಿಷ್ಟವಾದ ಪರಿಸ್ಥಿತಿಗಳು ಮತ್ತು ಹವ್ಯಾಸಗಳು ಇನ್ನೂ ಇವೆ.” ಇನ್ನೊಂದು ಅಧಿವೇಶನದ ನಂತರ, ಮರ್ಯಾದೆಗೆಟ್ಟ ಉಡುಪು ತೀರ ಗಮನಾರ್ಹವಾಗಿತ್ತೆಂದು ವರದಿಸಲಾಯಿತು. ಕೆಲವರ ಉಡುಪು ಇತರರಿಗೆ ಅಸಹ್ಯಕರವಾಗಿತ್ತು ಎಂದು ವರದಿಯು ತಿಳಿಸಿತು. ಉಪಸ್ಥಿತರಿದ್ದ ಕೆಲವು ಹೊರಗಿನವರು ಸಹ ಆ ಮರ್ಯಾದೆಗೆಟ್ಟ ಉಡುಪನ್ನು ಗಮನಿಸಿದರು. ಕೆಲವರ ಬಟ್ಟೆಯು ದೇಹವನ್ನು ತೀರ ಹೆಚ್ಚಾಗಿ ಬಯಲುಪಡಿಸುವಂತಹದ್ದೂ ತೀರ ಬಿಗುಪಾದದ್ದಾಗಿಯೂ ಇತ್ತು.
20 ಸಹೋದರಸಹೋದರಿಯರಲ್ಲಿ ಅಧಿಕಾಂಶ ಜನರು ಅಧಿವೇಶನದ ನಿವೇಶನದಲ್ಲಿ ನಿರಾಡಂಬರದ, ಗೌರವಪೂರ್ಣ ಉಡಿಗೆಯನ್ನು ಧರಿಸುತ್ತಾರೆ. ಆದಾಗಲೂ, ಅನಂತರ ಹೋಟೆಲುಗಳು ಅಥವಾ ರೆಸ್ಟೋರಂಟ್ಗಳಲ್ಲಿ, ಇನ್ನೂ ತಮ್ಮ ಬ್ಯಾಡ್ಚ್ಗಳನ್ನು ಧರಿಸಿರುವ ಕೆಲವು ಸಹೋದರಸಹೋದರಿಯರು, “ದೇವರ ಜನರಿಗೆ ಯೋಗ್ಯವಾಗಿರದಂತಹ, ತೋಳುಗಳು ಕತ್ತುಪಟ್ಟಿಗಳಿಲ್ಲದ ಭುಜದಲ್ಲಿ ಸ್ಟ್ರ್ಯಾಪುಗಳುಳ್ಳ ಶರ್ಟುಗಳು, ಹಳೆಯ ಜೀನ್ಸ್ಗಳು, ತೀರ ಗಿಡ್ಡ ಚಲ್ಲಣಗಳು ಮತ್ತು . . . ಗೀಳಿನ ವಸ್ತ್ರಗಳನ್ನು” ಧರಿಸಿದ್ದರು. ಬಿಡುವಿನ ಚಟುವಟಿಕೆಯಲ್ಲಿ ಕೆಲವರಿಗೆ ಈ ರೀತಿಯಲ್ಲಿ ಉಡುಪನ್ನು ಧರಿಸುವ ಪ್ರವೃತ್ತಿಯಿರುವುದನ್ನು ಹಿರಿಯರು ಗಮನಿಸುವಲ್ಲಿ—ವಿಶೇಷವಾಗಿ ಒಂದು ಕ್ರೈಸ್ತ ಅಧಿವೇಶನವನ್ನು ಹಾಜರಾಗುತ್ತಿರುವ ಅಭ್ಯರ್ಥಿಗಳಾಗಿ—ಅಂತಹ ಉಡುಪು ಯೋಗ್ಯವಲ್ಲ ಎಂಬ, ದಯೆಯ ಆದರೆ ದೃಢವಾದ ಸಲಹೆಯನ್ನು ಅಧಿವೇಶನದ ಮುಂಚೆ ಅವರು ನೀಡುವುದು ತಕ್ಕದ್ದಾಗಿರುವುದು. ಅಧಿವೇಶನವನ್ನು ಹಾಜರಾಗಲಿರುವ ನಿಮ್ಮ ಬೈಬಲ್ ವಿದ್ಯಾರ್ಥಿಗಳೊಂದಿಗೆ, ಮೇಲೆ ಸೂಚಿಸಲ್ಪಟ್ಟಿರುವ ನಡತೆ ಮತ್ತು ಉಡುಪಿನ ಕುರಿತಾದ ನಿರ್ದೇಶನಗಳನ್ನು ದಯವಿಟ್ಟು ಪುನರ್ವಿಮರ್ಶಿಸಿರಿ.
21 ಹೋಟೆಲುಗಳು: ಯಾರ ಮೇಲೂ ಹಣಕಾಸಿನ ಒಂದು ಹೊರೆಯನ್ನು ಹೇರದಂತೆ ಕಡಿಮೆಗೊಳಿಸಲ್ಪಟ್ಟ ಬೆಲೆಗಳಲ್ಲಿ ವಸತಿಗಳನ್ನು ಒದಗಿಸಲು ಪ್ರತಿ ವರ್ಷ ಗಣನೀಯವಾದ ಪ್ರಯತ್ನವನ್ನು ಮಾಡಲಾಗುತ್ತದೆ. ಹೋಟೆಲಿನ ನೌಕರರೊಂದಿಗೆ ವ್ಯವಹರಿಸುವಾಗ ತಾಳ್ಮೆಯುಳ್ಳವರೂ ದಯೆಯುಳ್ಳವರೂ ಆಗಿರುವಂತೆ ದಯವಿಟ್ಟು ನೆನಪಿನಲ್ಲಿಡಿರಿ. ನಾವು ಪ್ರಯಾಣದಿಂದ ದಣಿದಿರಬಹುದು ಮತ್ತು ವಸತಿಗಾಗಿ ಕಾಯುತ್ತಿರುವವರ ಸಾಲು ದೊಡ್ಡದಿರಬಹುದು, ಆದರೆ ನಿಮ್ಮ ತಾಳ್ಮೆಯು ಗಮನಿಸಲ್ಪಡದೇ ಹೋಗಲಾರದು. ತಕ್ಕದಾದ್ದ ರೀತಿಯಲ್ಲಿ ಬಕ್ಷೀಸು ಕೊಡುವ ಅಗತ್ಯವನ್ನು ಸಹ ನಾವು ನೆನಪಿನಲ್ಲಡಬೇಕು.—ಜೂನ್ 22, 1986, ಅವೇಕ್!
22 ಕ್ಯಾಮರಾಗಳು ಮತ್ತು ರೆಕಾರ್ಡಿಂಗ್ ಉಪಕರಣಗಳು: ಕ್ಯಾಮರಾಗಳು ಮತ್ತು ರೆಕಾರ್ಡಿಂಗ್ ಉಪಕರಣಗಳ ಕುರಿತಾಗಿ ದಯೆಯ ಮರುಜ್ಞಾಪನಗಳನ್ನು ನೀಡುವುದು ತಕದ್ದಾಗ್ದಿದೆ. ದಯವಿಟ್ಟು ನೆನಪಿನಲ್ಲಿಡಿರಿ, ನೀವು ಕ್ಯಾಮರಾಗಳು, ವಿಡಿಯೊ ಕ್ಯಾಮರಾಗಳು, ಅಥವಾ ಬೇರೆ ಯಾವುದೇ ವಿಧದ ರೆಕಾರ್ಡಿಂಗ್ ಉಪಕರಣವನ್ನು ಬಳಸಲು ಯೋಜಿಸುವಲ್ಲಿ, ನಿಮ್ಮ ಸುತ್ತಲಿರುವವರಿಗಾಗಿ ಪರಿಗಣನೆಯನ್ನು ತೋರಿಸಿರಿ. ಕಾರ್ಯಕ್ರಮದ ಸಮಯದಲ್ಲಿ ಸುತ್ತಮುತ್ತಲೂ ಚಲಿಸುತ್ತಿರುವುದು ಅಥವಾ ನಿಮ್ಮ ಆಸನದಿಂದಲೇ ರೆಕಾರ್ಡ್ ಮಾಡುವುದು ಇತರರಿಗೆ ಅಪಕರ್ಷಣೆಯಾಗಿರಸಾಧ್ಯವಿದೆ. ರೆಕಾರ್ಡ್ ಮಾಡುವ ಯಾವುದೇ ಸಾಧನಗಳು ವಿದ್ಯುತ್ತಿನ ಅಥವಾ ಧ್ವನಿವರ್ಧಕ ವ್ಯವಸ್ಥೆಗಳಿಗೆ ಸೇರಿಸಲ್ಪಡಬಾರದು, ಅಥವಾ ಉಪಕರಣವು ದಾರಿಗಳನ್ನು ಅಥವಾ ಸಂಚಾರ ಸ್ಥಳಗಳನ್ನು ತಡೆಗಟ್ಟಬಾರದು. ನೀವು ಒಂದು ವಿಡಿಯೊ ಕ್ಯಾಮರಾದೊಂದಿಗೆ ಅಥವಾ ಒಂದು ಆಡಿಯೋಕ್ಯಾಸೆಟ್ ರೆಕಾರ್ಡರ್ನೊಂದಿಗೆ ಕಾರ್ಯಕ್ರಮದ ಚಿತ್ರಗಳನ್ನು ತೆಗೆಯಲು ನಿರ್ಧರಿಸಲಿ ಅಥವಾ ಕೆಲವು ಭಾಗಗಳನ್ನು ರೆಕಾರ್ಡ್ ಮಾಡಲು ನಿರ್ಧರಿಸಲಿ, ಅದು ಒಂದು ವೈಯಕ್ತಿಕ ವಿಷಯ. ಅನಂತರ ಒಂದು ದಿನಾಂಕದಲ್ಲಿ ವೀಕ್ಷಿಸಲ್ಪಟ್ಟಾಗ ಚಿತ್ರಗಳು ಮತ್ತು ರೆಕಾರ್ಡಿಂಗ್ಗಳು ಮೆಚ್ಚಿನ ಸ್ಮರಣೆಗಳನ್ನು ಜ್ಞಾಪಿಸಿಕೊಳ್ಳುವಂತೆ ಮಾಡಬಲ್ಲವು. ಅಂತಹ ಎಲ್ಲಾ ಉಪಕರಣವು, ಅದು ಇತರರನ್ನು ಅಪಕರ್ಷಿಸುವುದರಿಂದ ಅಥವಾ ಕಾರ್ಯಕ್ರಮದಿಂದ ಅತಿ ಹೆಚ್ಚಿನ ಲಾಭವನ್ನು ಗಳಿಸುವುದರಿಂದ ನಿಮ್ಮನ್ನು ತಡೆಗಟ್ಟುವ ರೀತಿಯಲ್ಲಿ ಮಿತವಾಗಿ ಉಪಯೋಗಿಸಲ್ಪಡಬೇಕು. ನೀವು ಮನೆಗೆ ಹಿಂದಿರುಗಿದ ಮೇಲೆ ರೆಕಾರ್ಡಿಂಗ್ಗಳನ್ನು ಪುನರ್ವಿಮರ್ಶಿಸಲು ಸಮಯವಿರುವುದೊ? ಟಿಪ್ಪಣಿಬರೆಯುವುದು ಸಾಕೆಂದು ನೀವು ಕಂಡುಕೊಳ್ಳಬಹುದು.
23 ಪೀಠವ್ಯವಸ್ಥೆ: 1994ರ “ದಿವ್ಯ ಭಯ” ಜಿಲ್ಲಾ ಅಧಿವೇಶನದಲ್ಲಿ, ಆಸನಗಳನ್ನು ಕಾದಿರಿಸುವ ವಿಷಯದಲ್ಲಿ ನೀವು ಅಭಿವೃದ್ಧಿಯನ್ನು ಗಮನಿಸಿದಿರೋ? ಸ್ವಲ್ಪ ಪ್ರಗತಿಯು ಮಾಡಲ್ಪಟ್ಟಿದೆ, ಆದರೆ ನಾವು ಈ ಮರುಜ್ಞಾಪನದ ಕುರಿತಾಗಿ ಇನ್ನೂ ಪ್ರಜ್ಞೆಯುಳ್ಳವರಾಗಿರಬೇಕು: ನಿಮ್ಮ ಅತಿ ಸಮೀಪದ ಕುಟುಂಬ ಸದಸ್ಯರಿಗೆ ಮತ್ತು ನಿಮ್ಮೊಂದಿಗೆ ನಿಮ್ಮ ಗುಂಪಿನಲ್ಲಿ ಪ್ರಯಾಣಿಸುತ್ತಿರಬಹುದಾದವರಿಗೆ ಮಾತ್ರ ಆಸನಗಳನ್ನು ಕಾದಿರಿಸಬಹುದು. ನಾವು ಅಲ್ಲಿ ಸಂಸ್ಥೆಯ ಅತಿಥಿಗಳಂತೆ ಇದ್ದೇವೆ. ಸಭಾಂಗಣದ ಬಾಡಿಗೆಯು ಸ್ವಯಂಪ್ರೇರಿತ ದಾನಗಳಿಂದ ತೆರಲ್ಪಟ್ಟಿದೆ. ಉಪಯೋಗಿಸಲ್ಪಡುವುದೆಂದು ನಮಗೆ ನಿಶ್ಚಯವಿರದಂತಹ ಒಂದು ಆಸನವನ್ನು ಕಾದಿರಿಸುವುದು ಪ್ರೀತಿಪೂರ್ಣವೂ ಪರಿಗಣನೀಯವೂ ಆಗಿರುವುದೋ? ಅಲರ್ಜಿಗಳಂತಹ, ಪರಿಸರೀಯ ಸಮಸ್ಯೆಗಳಿರುವವರಿಗೆ ಪ್ರತ್ಯೇಕವಾದ ಕ್ಷೇತ್ರಗಳು ಅಥವಾ ರೂಮುಗಳಿಗಾಗಿರುವ ಬೇಡಿಕೆಗಳಿಗೆ ನಾವು ಎಡೆಕೊಡಸಾಧ್ಯವಿಲ್ಲದ್ದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ.
24 ವೃದ್ಧರು ಮತ್ತು ಶಾರೀರಿಕವಾಗಿ ಅಶಕ್ತರಾಗಿರುವಂತಹ, ವಿಶೇಷ ಆವಶ್ಯಕತೆಯಿರುವವರಿಗಾಗಿ ಹೆಚ್ಚಿನ ಅಧಿವೇಶನಗಳು ಒದಗಿಸುವಿಕೆಗಳನ್ನು ಮಾಡುತ್ತವೆ. ನೀವು ಇದಕ್ಕೆ ಅರ್ಹರಾಗದಿದ್ದಲ್ಲಿ, ಈ ವಿಭಾಗಗಳೊಂದರಲ್ಲಿ ಆಸನಗಳನ್ನು ಆಕ್ರಮಿಸದಂತೆ ದಯವಿಟ್ಟು ನಿಶ್ಚಯಮಾಡಿಕೊಳ್ಳಿರಿ. ಹಾಗೂ, ವಿಶೇಷ ಆವಶ್ಯಕತೆಗಳಿರುವವರಿಗೆ, ಅವರನ್ನು ನೋಡಿಕೊಳ್ಳಲಿಕ್ಕಾಗಿ ಜವಾಬ್ದಾರರಾದ ಯಾರಾದರೊಬ್ಬರು ಅವರೊಂದಿಗೆ ಇರದಿದ್ದಲ್ಲಿ, ಒಂದು ಆಸನವನ್ನು ಕಂಡುಕೊಳ್ಳಲಿಕ್ಕಾಗಿ ಸಹಾಯ ನೀಡಲು ಸಿದ್ಧರಾಗಿರಿ.
25 ನಿಮ್ಮ ಅಧಿವೇಶನದ ಆಹಾರ ಅಗತ್ಯಗಳಿಗಾಗಿ ಪರಾಮರಿಸುವುದು: ನಿಮಗೆ ತಿಳಿದಿರುವಂತೆ, ಜೂನ್ 1995ರ ನಮ್ಮ ರಾಜ್ಯದ ಸೇವೆಯು ಪ್ರಕಟಿಸಿದ್ದು: “ಇನ್ನುಮುಂದೆ, ಜಿಲ್ಲಾ ಅಧಿವೇಶನ, ಸರ್ಕಿಟ್ ಸಮ್ಮೇಳನ, ಮತ್ತು ವಿಶೇಷ ಸಮ್ಮೇಳನ ದಿನಗಳಲ್ಲಿ ಕೇವಲ ಲಘು ಉಪಾಹಾರವನ್ನು ದೊರಕಿಸಲಾಗುವುದು. ಕ್ಯಾಫಿಟೀರಿಯ ರೀತಿಯ ಊಟಗಳಿರುವುದಿಲ್ಲ. ಅವರು ಬಯಸುವುದಾದರೆ, ಉಪಾಹಾರ ಸ್ಥಳಗಳಲ್ಲಿ ಏನು ದೊರಕುತ್ತದೋ, ಅದಕ್ಕೆ ಹೆಚ್ಚನ್ನು ದೊರಕಿಸಲು ಹಾಜರಾಗುವವರು ತಮ್ಮ ಸ್ವಂತ ಆಹಾರವನ್ನು ತರಬಹುದು.” ಅನಂತರ ಜುಲೈ 1995ರ ನಮ್ಮ ರಾಜ್ಯದ ಸೇವೆಯ ಪುರವಣಿಯು, ಈ ಅಳವಡಿಸುವಿಕೆ ಏಕೆ ಮಾಡಲ್ಪಟ್ಟಿತು ಎಂಬುದನ್ನು ವಿವರಿಸಿತು ಮತ್ತು ಅಧಿವೇಶನದಲ್ಲಿ ತಮ್ಮ ಸ್ವಂತ ಆಹಾರದ ಅಗತ್ಯಗಳಿಗಾಗಿ ಎಲ್ಲರೂ ಹೇಗೆ ಪರಾಮರಿಸಸಾಧ್ಯವಿದೆಯೆಂದು ಉತ್ತಮ ಸಲಹೆಗಳನ್ನು ಕೊಟ್ಟಿತು. ಎಲ್ಲರೂ ಸ್ವತಃ ಆ ಪುರವಣಿಯನ್ನು ಪುನರ್ವಿಮರ್ಶಿಸುವುದು ಮಾತ್ರವಲ್ಲ, ಅವರು ಅಧಿವೇಶನಕ್ಕೆ ಹಾಜರಾಗಲು ತಯಾರಿಸುತ್ತಿರುವಂತೆ ತಮ್ಮ ಬೈಬಲ್ ವಿದ್ಯಾರ್ಥಿಗಳೊಂದಿಗೂ ಅದನ್ನು ಚರ್ಚಿಸಬೇಕು. ಉಪಾಹಾರ ಇಲಾಖೆಯಿಂದ ಒದಗಿಸಲ್ಪಟ್ಟಿರುವಂಥದಕ್ಕಿಂತ ಹೆಚ್ಚು ಸತ್ವವುಳ್ಳದರ್ದ ಅಗತ್ಯವಿದೆಯೆಂದು ಅವರಿಗೆ ಅನಿಸುವಲ್ಲಿ, ಎಲ್ಲರೂ ಅಧಿವೇಶನಕ್ಕೆ ತಮ್ಮ ಸ್ವಂತ ಆಹಾರವನ್ನು ತರಸಾಧ್ಯವಿದೆಯೆಂದು ಬೈಬಲ್ ವಿದ್ಯಾರ್ಥಿಗಳಿಗೆ ತಿಳಿಸುವುದು ಪ್ರಾಮುಖ್ಯ.
26 ಕೇವಲ ಕೆಲವು ವಿಷಯಗಳನ್ನು ಒತ್ತಿಹೇಳಲು, ನಿಮ್ಮ ಮಧ್ಯಾಹ್ನದ ಊಟಕ್ಕಾಗಿ ತರುವಂತೆ ಸಲಹೆ ಕೊಡಲ್ಪಟ್ಟ ಈ ವಸ್ತುಗಳನ್ನು ತರಲಿಕ್ಕಾಗಿ ನೆನಪಿನಲ್ಲಿಡಲು ನೀವು ಬಯಸುವಿರಿ: ಸ್ಯಾಂಡ್ವಿಚ್ಗಳು, ಬೇಯಿಸಿ ಬತ್ತಿಸಿದ ತರಕಾರಿಗಳೊಂದಿಗೆ ಚಪಾತಿಗಳು, ಬಿಸ್ಕಿಟುಗಳು, ಸುಡಲ್ಪಟ್ಟಿರುವ ಆಹಾರ ಮತ್ತು ತಾಜಾ ಹಣ್ಣುಗಳಂತಹ ಸುಲಭವಾಗಿ ಜೀರ್ಣವಾಗುವ, ಸರಳ, ಪೋಷಕ, ಜನರು ಐಹಿಕ ಉದ್ಯೋಗಕ್ಕೆ ತೆಗೆದುಕೊಂಡು ಹೋಗುವಂತಹ ಆಹಾರ ಪದಾರ್ಥಗಳು. ಅಧಿವೇಶನಗಳ ನಿವೇಶನದಲ್ಲಿ ಲಭ್ಯವಿರುವ ಪಾನೀಯಗಳಲ್ಲಿ ಚಹಾ, ಕಾಫಿ, ತಂಪು ಪಾನೀಯಗಳು ಮತ್ತು ಹಣ್ಣಿನ ರಸಗಳು ಸೇರಿರಬಹುದು. ನೀವು ನಿಮ್ಮ ಸ್ವಂತ ಮುರಿಯಲಾರದ ನೀರಿನ ಬಾಟಲಿಗಳನ್ನು ತರಲು ಇಷ್ಟಪಡುವಲ್ಲಿ, ಅವು ನಿಮ್ಮ ಆಸನದ ಕೆಳಗೆ ಸೇರಬಹುದಾದರೆ ಅದು ಸ್ವೀಕರಣೀಯ. ಆದಾಗಲೂ, ದೊಡ್ಡದಾದ ಕುಟುಂಬ ಗಾತ್ರದ ನೀರಿನ ಕಂಟೇನರ್ಗಳು, ಮದ್ಯಪಾನೀಯಗಳು, ಅಥವಾ ಗಾಜಿನ ಕಂಟೇನರ್ಗಳು ಅಧಿವೇಶನದ ಸೌಕರ್ಯದೊಳಗೆ ತರಲ್ಪಡಬಾರದು. ಕಾರ್ಯಕ್ರಮಾವಧಿಗಳ ಸಮಯದಲ್ಲಿ ತಿನ್ನುವುದು ಅಥವಾ ಉಪಾಹಾರ ಸೇವಿಸುವುದು ಹೋಗಲಾಡಿಸಲ್ಪಡಬೇಕು. ಇದು ಬಡಿಸಲಾಗುತ್ತಿರುವ ಆತ್ಮಿಕ ಊಟಕ್ಕಾಗಿ ಅಗೌರವವನ್ನು ತೋರಿಸುವುದು.
27 ಕೂಡಿಸಬೇಕಾದ ಇನ್ನೊಂದು ಎಚ್ಚರಿಕೆಯು ಏನೆಂದರೆ, ಇದು ಹೋಟೆಲಿನ ಅಧಿಕಾರಿಗಳಿಂದ ಅನುಮತಿಸಲ್ಪಟ್ಟು, ಅವರು ಆ ಉದ್ದೇಶಕ್ಕಾಗಿ ಒದಗಿಸುವಿಕೆಯನ್ನು ಮಾಡಿರುವ ಹೊರತು, ಹೋಟೆಲ್ ರೂಮುಗಳಲ್ಲಿ ಯಾವುದೇ ಅಡಿಗೆ ಮಾಡಲ್ಪಡಬಾರದು. ಮಧ್ಯಾಹ್ನದ ವಿರಾಮಕ್ಕಾಗಿ ಅನುಮತಿಸಲ್ಪಟ್ಟಿರುವ ಸಮಯವು, ನಾವು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಲು ಮತ್ತು ನಮ್ಮ ಸಹೋದರಸಹೋದರಿಯರೊಂದಿಗೆ ದೇವಪ್ರಭುತ್ವ ಸಹವಾಸದಲ್ಲಿ ಆನಂದಿಸಲು ರಚಿಸಲ್ಪಟ್ಟಿದೆಯೆಂಬ ವಾಸ್ತವಾಂಶದ ಮೇಲೆ ಪ್ರತಿಬಿಂಬಿಸುವುದು ಒಳ್ಳೆಯದು. ಯೆಹೋವನ ಜನರೋಪಾದಿ, ಭೌತಿಕ ವಸ್ತುಗಳಿಗೆ ಹೋಲಿಕೆಯಲ್ಲಿ ಅಧಿವೇಶನಗಳಲ್ಲಿನ ಆತ್ಮಿಕ ಆಹಾರವು ಪ್ರಮುಖ ಮಹತ್ವದ್ದಾಗಿದೆಯೆಂದು ನಾವು ಅಂಗೀಕರಿಸುತ್ತೇವೆ, ಮತ್ತು ಅದರಂತೆಯೇ ನಾವು ಯೋಜಿಸತಕ್ಕದ್ದು.
28 ಅಕ್ಟೋಬರ್ 20, 1995 ರಂದು ಭಾರತದಲ್ಲಿನ “ಹರ್ಷಭರಿತ ಸುತ್ತಿಗಾರರು” ಜಿಲ್ಲಾ ಅಧಿವೇಶನಗಳಲ್ಲಿ ಮೊದಲನೆಯದ್ದು ಆರಂಭಗೊಳ್ಳಲಿದೆ. ನೀವು ನಿಮ್ಮ ತಯಾರಿಗಳನ್ನು ಪೂರ್ಣಗೊಳಿಸಿದ್ದೀರೋ, ಮತ್ತು ಸಂತೋಷದ ಒಡನಾಟ ಹಾಗೂ ಒಳ್ಳೆಯ ಆತ್ಮಿಕ ವಿಷಯಗಳ ಮೂರು ದಿನಗಳನ್ನು ಆನಂದಿಸಲು ನೀವು ಈಗ ಸಿದ್ಧರಿದ್ದೀರೊ? ನಾವು ಯೆಹೋವನ ಹರ್ಷಭರಿತ ಸುತ್ತಿಗಾರರಾಗಿರುವ ವಿಧದ ಕುರಿತಾಗಿ ಲಕ್ಷ್ಯವಿಡುವಾಗ, ನಿಮ್ಮ ಸಹೋದರಸಹೋದರಿಯರೊಂದಿಗೆ ಈ ಅಧಿವೇಶನವನ್ನು ಹಾಜರಾಗುವ ನಿಮ್ಮ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸಲಿ ಎಂಬುದು ನಮ್ಮ ಯಥಾರ್ಥ ಪ್ರಾರ್ಥನೆಯಾಗಿದೆ.
[ಪುಟ 6ರಲ್ಲಿರುವಚೌಕ]
ಜಿಲ್ಲಾ ಅಧಿವೇಶನ ಮರುಜ್ಞಾಪನಗಳು
ದೀಕ್ಷಾಸ್ನಾನ: ಶನಿವಾರ ಬೆಳಗ್ಗೆ ಕಾರ್ಯಕ್ರಮವು ಆರಂಭವಾಗುವ ಮುಂಚೆ, ದೀಕ್ಷಾಸ್ನಾನದ ಅಭ್ಯರ್ಥಿಗಳು ನಿರ್ದಿಷ್ಟವಾಗಿ ನಮೂದಿಸಲ್ಪಟ್ಟ ತಮ್ಮ ಆಸನಗಳಲ್ಲಿ ಇರತಕ್ಕದ್ದು. ದೀಕ್ಷಾಸ್ನಾನ ಪಡೆಯಲು ಯೋಜಿಸುವ ಪ್ರತಿಯೊಬ್ಬರಿಂದ ಒಂದು ಯೋಗ್ಯವಾದ ಸ್ನಾನದ ಉಡುಪು ಮತ್ತು ಒಂದು ಟವಲು ತರಲ್ಪಡತಕ್ಕದ್ದು. ಭಾಷಣಕಾರರಿಂದ ದೀಕ್ಷಾಸ್ನಾನದ ಭಾಷಣ ಮತ್ತು ಪ್ರಾರ್ಥನೆಯ ನಂತರ, ಕಾರ್ಯಕ್ರಮಾವಧಿಯ ಅಧ್ಯಕ್ಷನು ದೀಕ್ಷಾಸ್ನಾನದ ಅಭ್ಯರ್ಥಿಗಳಿಗೆ ಸಂಕ್ಷಿಪ್ತ ಸೂಚನೆಗಳನ್ನು ಕೊಡುವನು ಮತ್ತು ತದನಂತರ ಹಾಡಿಗಾಗಿ ಕರೆ ನೀಡುವನು. ಕೊನೆಯ ಶ್ಲೋಕದ ತರುವಾಯ, ಅಭ್ಯರ್ಥಿಗಳನ್ನು ದೀಕ್ಷಾಸ್ನಾನ ಪಡೆಯುವ ಸ್ಥಳಕ್ಕೆ ಅಟೆಂಡೆಂಟರು ನಡೆಸುವರು. ಒಬ್ಬನ ಸಮರ್ಪಣೆಯ ಚಿಹ್ನೆಯಾಗಿರುವ ದೀಕ್ಷಾಸ್ನಾನವು ಯೆಹೋವನ ಮತ್ತು ಆ ವ್ಯಕ್ತಿಯ ನಡುವಿನ ಒಂದು ಆಪ್ತವಾದ ಮತ್ತು ವೈಯಕ್ತಿಕವಾದ ವಿಷಯವಾಗಿರುವುದರಿಂದ, ಇಬ್ಬರು ಅಥವಾ ಹೆಚ್ಚು ದೀಕ್ಷಾಸ್ನಾನದ ಅಭ್ಯರ್ಥಿಗಳು ದೀಕ್ಷಾಸ್ನಾನ ಪಡೆಯುವಾಗ, ಅಪ್ಪಿಕೊಳ್ಳುವ ಅಥವಾ ಕೈಗಳನ್ನು ಹಿಡಿಯುವ ಸಹಭಾಗಿ ದೀಕ್ಷಾಸ್ನಾನಗಳು ಎಂಬುದಾಗಿ ಕರೆಯಲ್ಪಡುವ ದೀಕ್ಷಾಸ್ನಾನಗಳ ಏರ್ಪಾಡು ಇರುವುದಿಲ್ಲ.
ಬ್ಯಾಡ್ಜ್ ಕಾರ್ಡ್ಸ್: ಅಧಿವೇಶನದಲ್ಲಿ ಮತ್ತು ಅಧಿವೇಶನದ ಸ್ಥಳಕ್ಕೆ ಮತ್ತು ಅಧಿವೇಶನದಿಂದ ಪ್ರಯಾಣಿಸುವಾಗ, 1995ರ ಬ್ಯಾಡ್ಜ್ ಕಾರ್ಡನ್ನು ದಯವಿಟ್ಟು ಧರಿಸಿಕೊಳ್ಳಿರಿ. ಇದು ಅನೇಕವೇಳೆ ನಮಗೆ, ಪ್ರಯಾಣಮಾಡುವಾಗ ಒಂದು ಉತ್ತಮ ಸಾಕ್ಷಿಯನ್ನು ನೀಡಲು ಸಾಧ್ಯಮಾಡುತ್ತದೆ. ಬ್ಯಾಡ್ಜ್ ಕಾರ್ಡುಗಳು ಮತ್ತು ಹೋಲ್ಲರುಗಳು ಅಧಿವೇಶನದಲ್ಲಿ ದೊರೆಯದೆ ಇರುವ ಕಾರಣ, ಅವುಗಳನ್ನು ನಿಮ್ಮ ಸಭೆಯ ಮುಖಾಂತರ ಪಡೆಯತಕ್ಕದ್ದು. ನಿಮ್ಮ ಪ್ರಸ್ತುತ ಮೆಡಿಕಲ್ ಡಿರೆಕ್ಟಿವ್/ರಿಲೀಸ್ ಕಾರ್ಡನ್ನು ಕೊಂಡೊಯ್ಯಲು ನೆನಪಿಡಿರಿ. ಬೆತೆಲ್ ಕುಟುಂಬದ ಸದಸ್ಯರು ಮತ್ತು ಪಯನೀಯರರು ತಮ್ಮೊಂದಿಗೆ ತಮ್ಮ ಐಡೆಂಟಿಫಿಕೇಷನ್ ಕಾರ್ಡ್ಗಳನ್ನು ಹೊಂದಿರತಕ್ಕದ್ದು.
ರೂಮಿಂಗ್: ಹೋಟೆಲೊಂದರೊಂದಿಗೆ ಒಂದು ಸಮಸ್ಯೆಯನ್ನು ನೀವು ಅನುಭವಿಸುವುದಾದರೆ, ಆ ವಿಷಯವನ್ನು ಅಧಿವೇಶನದ ರೂಮಿಂಗ್ ಇಲಾಖೆಯ ಮೇಲ್ವಿಚಾರಕರು ಆಗಲೇ ಪರಿಹರಿಸುವುದರಲ್ಲಿ ನಿಮಗೆ ಸಹಾಯ ಮಾಡಶಕ್ತರಾಗುವಂತೆ ಅವರ ಗಮನಕ್ಕೆ ಅದನ್ನು ತರಲು ದಯವಿಟ್ಟು ಹಿಂಜರಿಯದಿರಿ. ರೂಮ್ ವಿನಂತಿ ಫಾರ್ಮ್ಗಳು ತಡೆಯಿಲ್ಲದೆ ಸೂಕ್ತವಾದ ಅಧಿವೇಶನ ವಿಳಾಸಗಳಿಗೆ ಸರಿಯಾಗಿ ಕಳುಹಿಸಲ್ಪಟ್ಟಿವೆ ಎಂಬ ವಿಷಯದಲ್ಲಿ ಸಭಾ ಸೆಕ್ರಿಟರಿಗಳು ಖಚಿತರಾಗಿರಬೇಕು. ಕಾದಿರಿಸಲ್ಪಟ್ಟ ಯಾವುದೇ ವಸತಿಯನ್ನು ನೀವು ರದ್ದು ಮಾಡಬೇಕಾಗಿದ್ದರೆ, ಕೋಣೆಯನ್ನು ಪುನಃ ನೇಮಿಸಸಾಧ್ಯವಾಗುವಂತೆ ಕೂಡಲೆ ಹೋಟೆಲ್ ಮತ್ತು ಅಧಿವೇಶನದ ರೂಮಿಂಗ್ ಇಲಾಖೆಗೆ ತಿಳಿಯಪಡಿಸತಕ್ಕದ್ದು.
ಸ್ವಯಂ ಸೇವೆ: ಅಧಿವೇಶನದ ಇಲಾಖೆಗಳಲ್ಲೊಂದರಲ್ಲಿ ನೆರವು ನೀಡಲಿಕ್ಕಾಗಿ ಸ್ವಲ್ಪ ಸಮಯವನ್ನು ನೀವು ಬದಿಗಿರಿಸಬಲ್ಲಿರೋ? ಕೇವಲ ಕೆಲವು ತಾಸುಗಳ ಮಟ್ಟಿಗಾದರೂ, ನಮ್ಮ ಸಹೋದರರ ಸೇವೆ ಮಾಡುವುದು ತುಂಬಾ ಸಹಾಯಕಾರಿಯಾಗಿರಸಾಧ್ಯವಿದೆ ಮತ್ತು ಸಾಕಷ್ಟು ಸಂತೃಪ್ತಿಯನ್ನು ತರಬಲ್ಲದು. ನೀವು ಸಹಾಯ ಮಾಡಬಲ್ಲಿರಾದರೆ, ಅಧಿವೇಶನದ ಸ್ವಯಂ ಸೇವಕರ ಇಲಾಖೆಗೆ ದಯವಿಟ್ಟು ವರದಿಮಾಡಿ. 16 ವರ್ಷ ಪ್ರಾಯಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳು ಸಹ, ಹೆತ್ತವರಲ್ಲೊಬ್ಬರ ಅಥವಾ ಇತರ ಜವಾಬ್ದಾರ ವಯಸ್ಕರ ಮಾರ್ಗದರ್ಶನೆಯ ಕೆಳಗೆ ಕೆಲಸ ಮಾಡುವ ಮೂಲಕ ನೆರವಾಗಬಲ್ಲರು.
ಎಚ್ಚರಿಕೆಯ ಮಾತುಗಳು: ಸಂಭಾವ್ಯ ಸಮಸ್ಯೆಗಳಿಗೆ ಎಚ್ಚರವಾಗಿರಿಸಿಕೊಳ್ಳುವ ಮೂಲಕ, ಅನಗತ್ಯವಾದ ತೊಂದರೆಯಿಂದ ನಾವು ನಮ್ಮನ್ನು ರಕ್ಷಿಸಿಕೊಳ್ಳಬಲ್ಲೆವು. ಅನೇಕವೇಳೆ ಕಳ್ಳರು ಮತ್ತು ಇತರ ನೀತಿ ನಿಷ್ಠೆಗಳಿಲ್ಲದ ವ್ಯಕ್ತಿಗಳು, ತಮ್ಮ ಮನೆ ಪರಿಸರದಿಂದ ದೂರವಿರುವ ಜನರನ್ನು ಸುಲಿಗೆ ಮಾಡುವರು. ದೊಡ್ಡ ಕೂಟಗಳಲ್ಲಿ ಕಳ್ಳರು ಮತ್ತು ಜೇಬುಗಳ್ಳರು ಅತ್ಯುತ್ತಮವಾದ ಲಾಭವನ್ನು ಕಂಡುಕೊಳ್ಳುತ್ತಾರೆ. ಬೆಲೆಯುಳ್ಳ ಯಾವುದೇ ವಸ್ತುಗಳನ್ನು ನಿಮ್ಮ ಆಸನಗಳ ಮೇಲೆ ಬಿಡುವುದು ವಿವೇಕವುಳ್ಳದ್ದಾಗಿರುವುದಿಲ್ಲ. ನಿಮ್ಮ ಸುತ್ತಲಿರುವ ಪ್ರತಿಯೊಬ್ಬನೂ ಕ್ರೈಸ್ತನೆಂದು ನೀವು ಖಾತ್ರಿಯಿಂದಿರಸಾಧ್ಯವಿಲ್ಲ. ಯಾವುದೇ ದುಷ್ಪ್ರೇರಣೆಗೆ ಯಾಕೆ ಅವಕಾಶ ಕೊಡಬೇಕು? ಮಕ್ಕಳನ್ನು ಆಕರ್ಷಿಸಲಿಕ್ಕಾಗಿ ಹೊರಗಿನ ಕೆಲವು ವ್ಯಕ್ತಿಗಳಿಂದ ಮಾಡಲ್ಪಟ್ಟ ಪ್ರಯತ್ನಗಳ ಕುರಿತು ಸಹ ವರದಿಗಳು ಬಂದಿವೆ. ಎಲ್ಲಾ ಸಮಯಗಳಲ್ಲಿ ನಿಮ್ಮ ಮಕ್ಕಳ ಮೇಲೆ ದೃಷ್ಟಿಯಿಡಿರಿ.
ಅನೇಕ ಹೋಟೆಲುಗಳಲ್ಲಿ ಲಭ್ಯವಿರುವ ಕೇಬಲ್ ಟಿವಿ ಕೆಲವೊಮ್ಮೆ ತುಚ್ಛವಾದ, ಲಂಪಟ ವರ್ಣನೆಯ ಚಲನ ಚಿತ್ರಗಳನ್ನು ಪ್ರದರ್ಶಿಸುತ್ತದೆ. ಈ ಪಾಶಕ್ಕೆ ಎಚ್ಚರಿಕೆಯಿಂದಿರಿ, ಮತ್ತು ಕೋಣೆಯಲ್ಲಿ ಮೇಲ್ವಿಚಾರಣೆಯಿಲ್ಲದೆ ಟಿವಿಯ ಬಳಿಗೆ ಹೋಗುವಂತೆ ಮಕ್ಕಳಿಗೆ ಅನುಮತಿಸದಿರಿ.
ಅಧಿವೇಶನದ ಯಾವುದೇ ವಿಷಯದ ಕುರಿತು ಮಾಹಿತಿಯನ್ನು ಪಡೆಯಲಿಕ್ಕಾಗಿ ಅಧಿವೇಶನ ಸಭಾಂಗಣದ ನಿರ್ವಾಹಕ ಮಂಡಳಿಗೆ ದಯವಿಟ್ಟು ಫೋನ್ ಮಾಡಬೇಡಿ. ಅಗತ್ಯವಾದ ಮಾಹಿತಿಯು ಹಿರಿಯರಿಂದ ದೊರಕದಿರುವುದಾದರೆ, ದಯವಿಟ್ಟು ಅಧಿವೇಶನ ವಿಳಾಸಕ್ಕೆ ಬರೆಯಿರಿ.