ಬೇಕಾಗಿದ್ದಾರೆ—4,000 ಆಕ್ಸಿಲಿಯರಿ ಪಯನೀಯರರು
ಮಾರ್ಚ್, ಎಪ್ರಿಲ್, ಮೇ ತಿಂಗಳುಗಳಲ್ಲಿ ನೀವು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಬಲ್ಲಿರೊ?
1 “ಬೇಕಾಗಿದ್ದಾರೆ—1,000 ಸುವಾರ್ತಿಕರು.” ಇದು ವಾಚ್ ಟವರ್ ಪತ್ರಿಕೆಯ ಎಪ್ರಿಲ್ 1881ರ ಸಂಚಿಕೆಯಲ್ಲಿ ಪ್ರಕಾಶಿಸಲ್ಪಟ್ಟ ಒಂದು ಲೇಖನದ ಶೀರ್ಷಿಕೆಯಾಗಿತ್ತು. “ಕರ್ತನು ತನ್ನ ಸತ್ಯದ ಕುರಿತಾದ ಜ್ಞಾನವನ್ನು ವಹಿಸಿಕೊಟ್ಟಿರುವ” ಎಲ್ಲಾ ಸಮರ್ಪಿತ ಸ್ತ್ರೀಪುರುಷರು, ಬೈಬಲ್ ಸತ್ಯವನ್ನು ಹಬ್ಬಿಸುವುದರಲ್ಲಿ ಪಾಲ್ಗೊಳ್ಳಲು, ಸಾಧ್ಯವಿರುವ ಯಾವುದೇ ಸಮಯವನ್ನು ಉಪಯೋಗಿಸುವ ಒಂದು ಬೇಡಿಕೆಯು ಅದರಲ್ಲಿ ಅಡಕವಾಗಿತ್ತು. ಕರ್ತನ ಕೆಲಸಕ್ಕಾಗಿ ಪ್ರತ್ಯೇಕವಾಗಿ ತಮ್ಮ ಸಮಯದಲ್ಲಿ ಅರ್ಧ ಅಥವಾ ಅದಕ್ಕಿಂತ ಹೆಚ್ಚಿನ ಸಮಯವನ್ನು ಕೊಡಲು ಸಾಧ್ಯವಿರುವವರು, ಕಾಲ್ಪೋರ್ಟರ್ ಸೌವಾರ್ತಿಕರು—ಇಂದಿನ ಪಯನೀಯರರ ಅಗ್ರಗಾಮಿಗಳು—ಆಗಲು ಮುಂದೆಬರುವಂತೆ ಉತ್ತೇಜಿಸಲ್ಪಟ್ಟರು.
2 ಇಸವಿ 1800ಗಳಂದಿನಿಂದ ಸಮಯಗಳು ಬದಲಾಗಿವೆಯಾದರೂ, ಒಂದು ವಾಸ್ತವಾಂಶವು ಹಾಗೆಯೇ ಉಳಿದಿರುತ್ತದೆ—ದೇವರ ಸಮರ್ಪಿತ ಸೇವಕರು, ಸುವಾರ್ತೆಯನ್ನು ಹಬ್ಬಿಸುವುದರಲ್ಲಿ ಸಾಧ್ಯವಿರುವಷ್ಟು ಹೆಚ್ಚು ಸಮಯವನ್ನು ಉಪಯೋಗಿಸುತ್ತಾ ಮುಂದುವರಿಯಲು ಬಯಸುತ್ತಾರೆ. ಆಕ್ಸಿಲಿಯರಿ ಪಯನೀರರಾಗಿ ಸೇವೆಸಲ್ಲಿಸುವುದು, ಸಭಾ ಪ್ರಚಾರಕರಿಗೆ, ಅವರು ರಾಜ್ಯ ಶುಶ್ರೂಷೆಯಲ್ಲಿ ಹೆಚ್ಚು ಸಮಯವನ್ನು ವಿನಿಯೋಗಿಸುತ್ತಿರುವಂತೆ ತಮ್ಮ ಪರಿಣಾಮಕಾರಿತ್ವವನ್ನು ಉತ್ತಮಗೊಳಿಸಿಕೊಳ್ಳಲು ಸಹಾಯಮಾಡುತ್ತದೆ.—ಕೊಲೊ. 4:17; 2 ತಿಮೊ. 4:5.
3 ಆಕ್ಸಿಲಿಯರಿ ಪಯನೀಯರ್ ಸೇವೆಯು ಪ್ರಾರಂಭವಾದಂದಿನಿಂದ, ಲೋಕವ್ಯಾಪಕವಾಗಿ ನೂರಾರು ಸಾವಿರ ಸಹೋದರ ಸಹೋದರಿಯರು ಅದರಲ್ಲಿ ಆನಂದಿಸಿದ್ದಾರೆ. ಪಯನೀಯರ್ ಶುಶ್ರೂಷೆಯ ಈ ವೈಶಿಷ್ಟ್ಯಕ್ಕಾಗಿರುವ ಉತ್ಸಾಹವು, ಭಾರತದಲ್ಲಿ ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ, ಎಪ್ರಿಲ್ 1994ರಲ್ಲಿ, ದೇಶದಲ್ಲಿ ಕೇವಲ 14,000 ಪ್ರಚಾರಕರು ಇದ್ದಂತಹ ಒಂದು ಸಮಯದಲ್ಲಿ, ಸುಮಾರು 2,000 ಆಕ್ಸಿಲಿಯರಿ ಪಯನೀಯರರ ಒಂದು ಉಚ್ಛಾಂಕವನ್ನು ತಲಪಲಾಯಿತು! ಆ ಸಮಯದ ವರೆಗೆ ಅದು ಭಾರತದಲ್ಲಿ ಚಟುವಟಿಕೆಯ ಅತಿ ಮಹತ್ತಾದ ತಿಂಗಳಾಗಿತ್ತು. ಶುಶ್ರೂಷೆಯಲ್ಲಿ 3,33,489 ತಾಸುಗಳ ಒಂದು ಉಚ್ಛಾಂಕ ಮತ್ತು 71,998 ಪುಸ್ತಿಕೆಗಳ ಉಚ್ಛಾಂಕ ಹಾಗೂ 3,235 ಚಂದಾಗಳು ನೀಡಲ್ಪಟ್ಟಿರುವುದನ್ನು ಸೇರಿಸಿ, ಶುಶ್ರೂಷೆಯ ಪ್ರತಿಯೊಂದು ಭಾಗದಲ್ಲಿ ಹೊಸ ಉಚ್ಛಾಂಕಗಳನ್ನು ತಲಪಲಾಯಿತು. ಈ ಮೂರು ಉಚ್ಛಾಂಕಗಳು, ಅಂದಿನಿಂದ ಗತಿಸಿರುವ ಎರಡು ವರ್ಷಗಳಲ್ಲಿ ಮೀರಿಸಲ್ಪಟ್ಟಿಲ್ಲ. ದೇಶದಲ್ಲಿ ಈಗ 17,000 ಪ್ರಚಾರಕರು ಇರುವುದರಿಂದ, ಎಪ್ರಿಲ್ 1994ರ ಉತ್ತಮ ಚಟುವಟಿಕೆಯನ್ನು ಅತಿಶಯಿಸುವ—ಇಮ್ಮಡಿಗೊಳಿಸುವುದು ಸಹ—ಸಾಧ್ಯತೆ ನಿಶ್ಚಯವಾಗಿಯೂ ಇದೆ.
4 ಮಾರ್ಚ್, ಎಪ್ರಿಲ್, ಮತ್ತು ಮೇ ತಿಂಗಳುಗಳಲ್ಲಿ ಒಂದು ಅಥವಾ ಹೆಚ್ಚು ತಿಂಗಳುಗಳಿಗೆ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವ ಗುರಿಯನ್ನು ಇಡುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ. ಮಾರ್ಚ್ ತಿಂಗಳನ್ನು ಏಕೆ ಸೇರಿಸಬೇಕು? ಏಕೆಂದರೆ ಈ ವರ್ಷ ಕ್ರಿಸ್ತನ ಮರಣದ ಜ್ಞಾಪಕವು, ಮಾರ್ಚ್ 23ರ ಆದಿತ್ಯವಾರದಂದು ಜರಗಲಿದೆ. ಜ್ಞಾಪಕದ ಮುಂಚಿನ ವಾರಗಳಲ್ಲಿ, ನಮ್ಮ ಕರ್ತನೂ, ವಿಮೋಚಕನೂ ಆದ ಯೇಸು ಕ್ರಿಸ್ತನು ಆರಂಭಿಸಿದ ರಾಜ್ಯ ಸಾರುವಿಕೆಯ ಕೆಲಸದಲ್ಲಿ ಹುರುಪಿನಿಂದ ಪಾಲಿಗರಾಗುವುದು, ನಾವು ಮಾಡಬಹುದಾದ ಅತ್ಯುತ್ತಮ ವಿಷಯವಾಗಿದೆ. ಮಾರ್ಚ್ ತಿಂಗಳಿನಲ್ಲಿ ನಾವು ಒಂದು ಮಹತ್ತಾದ ಸಾಕ್ಷಿಯನ್ನು ನೀಡುವಾಗ, ಕ್ರಿಸ್ತನ ಮರಣದ ಸ್ಮಾರಕೋತ್ಸವದಲ್ಲಿ ನಮ್ಮೊಂದಿಗೆ ಜೊತೆಗೂಡಲು ನಾವು ಅನೇಕ ಆಸಕ್ತ ವ್ಯಕ್ತಿಗಳನ್ನು ಆಮಂತ್ರಿಸಸಾಧ್ಯವಿದೆ. ಮಾರ್ಚ್ ತಿಂಗಳು ಈ ಕಾರಣದಿಂದಲೂ ವಿಶೇಷವಾಗಿರುವುದು, ಯಾಕಂದರೆ ಪ್ರಥಮ ಬಾರಿ, ನಾವು ಕುಟುಂಬ ಸಂತೋಷದ ರಹಸ್ಯ ಎಂಬ ಹೊಸ ಪುಸ್ತಕವನ್ನು ನೀಡುತ್ತಿರುವೆವು. ಇದಕ್ಕೆ ಕೂಡಿಸಿ, ಮಾರ್ಚ್ ತಿಂಗಳಿನಲ್ಲಿ ಐದು ಶನಿವಾರಗಳು ಮತ್ತು ಐದು ಆದಿತ್ಯವಾರಗಳು ಇವೆ. ಇದು ಕ್ಷೇತ್ರ ಸೇವೆಯಲ್ಲಿ ವಿಸ್ತೃತವಾದ ವಾರಾಂತ್ಯ ಚಟುವಟಿಕೆಯನ್ನು ಅನುಮತಿಸುವುದು. ನಿಶ್ಚಯವಾಗಿಯೂ, ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ, ಶುಶ್ರೂಷೆಯಲ್ಲಿ ಎಡೆಬಿಡದ ಹುರುಪಿನ ಪ್ರಯತ್ನವು, ಕಂಡುಹಿಡಿಯಲ್ಪಟ್ಟಂತಹ ಆಸಕ್ತಿಯನ್ನು ಮುಂದುವರಿಸಿಕೊಂಡು, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರನ್ನು ಉಪಯೋಗಿಸುತ್ತಾ, ಹೊಸ ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸಲು ನಮ್ಮನ್ನು ಅನುಮತಿಸುವುದು. ವಿಶೇಷವಾಗಿ ವಾರಾಂತ್ಯಗಳಂದು, ನಾವು ನಮ್ಮ ಟೆರಿಟೊರಿಯನ್ನು ಸಮಗ್ರವಾಗಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಸದ್ಯದ ಸಮಯೋಚಿತ ಸಂಚಿಕೆಗಳೊಂದಿಗೆ ಆವರಿಸುವೆವು ಸಹ.
5 ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಯಾರು ಅರ್ಹರಾಗುತ್ತಾರೆ?: ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಎಂಬ ಪುಸ್ತಕವು, 113ನೆಯ ಪುಟದಲ್ಲಿ ವಿವರಿಸುವುದು: “ನಿಮ್ಮ ವೈಯಕ್ತಿಕ ಪರಿಸ್ಥಿತಿ ಏನೇ ಇರಲಿ, ನೀವು ದೀಕ್ಷಾಸ್ನಾನ ಹೊಂದಿದವರೂ ಉತ್ತಮ ನೈತಿಕ ಸ್ಥಿತಿಯಲ್ಲಿರುವವರೂ ಕ್ಷೇತ್ರ ಶುಶ್ರೂಷೆಯಲ್ಲಿ ಪ್ರತಿ ತಿಂಗಳಿಗೆ 60 ತಾಸುಗಳ ಆವಶ್ಯಕತೆಯನ್ನು ಮುಟ್ಟಲು ಸಮಯವನ್ನೇರ್ಪಡಿಸಲು ಮತ್ತು ಒಂದು ಅಥವಾ ಹೆಚ್ಚು ತಿಂಗಳು ಸಹಾಯಕ ಪಯನೀಯರರಾಗಿ ಸೇವೆ ಮಾಡಲು ಸಾಧ್ಯವಿರುವವರೂ ಆಗಿರುವಲ್ಲಿ, ಈ ಸೇವಾ ಸುಯೋಗಕ್ಕೆ ನೀವು ಹಾಕಿರುವ ಅರ್ಜಿಯನ್ನು ಪರಿಗಣಿಸಲು ಸಭಾ ಹಿರಿಯರು ಸಂತೋಷಿಸುವರು.” ನೀವು ಈ ಸುಯೋಗಕ್ಕಾಗಿ ಎಪ್ರಿಲ್ನಲ್ಲಿ ಎಡೆಮಾಡಿಕೊಳ್ಳಬಲ್ಲಿರೊ? ಮತ್ತು ಪ್ರಾಯಶಃ ಮಾರ್ಚ್ನಲ್ಲಿ ಕೂಡ? ಮತ್ತು ಮೇ ತಿಂಗಳಿನಲ್ಲಿ? ಈ ಎಲ್ಲಾ ಮೂರು ತಿಂಗಳುಗಳಲ್ಲಿ ಅಲ್ಲದಿದ್ದರೆ, ಕಡಿಮೆಪಕ್ಷ ಎಪ್ರಿಲ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲಿಕ್ಕಾಗಿ ಒಂದು ವಿಶೇಷ ಪ್ರಯತ್ನವನ್ನು ಮಾಡುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ.
6 ಉಳಿದ ಪ್ರಚಾರಕರ ಪೂರ್ಣಹೃದಯದ ಬೆಂಬಲದೊಂದಿಗೆ, ಹಿರಿಯರ ಮಂಡಲಿಗಳ ವತಿಯಿಂದ ತೋರಿಸಲ್ಪಡುವ ಸಕಾರಾತ್ಮಕ ಮನೋಭಾವವು, 4,000 ಆಕ್ಸಿಲಿಯರಿ ಪಯನೀಯರರಿಗಾಗಿರುವ ಈ ಕರೆಯ ಕಡೆಗಿನ ಪ್ರತಿಕ್ರಿಯೆಯನ್ನು ಒಂದು ಜನಜನಿತ ಯಶಸ್ಸನ್ನಾಗಿ ಮಾಡಬೇಕು. ಪ್ರತಿಯೊಂದು ಸಭೆಯು ತನ್ನ ಪ್ರಚಾರಕರಲ್ಲಿ ಕಡಿಮೆಪಕ್ಷ 25ರಿಂದ 30 ಪ್ರತಿಶತ ಮಂದಿ ಪ್ರಚಾರಕರನ್ನು, ಎಪ್ರಿಲ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರರಾಗಿ ನಮೂದಿಸಿಕೊಳ್ಳುವ ಧ್ಯೇಯವನ್ನಿಡಸಾಧ್ಯವಿದೆ; ಕೆಲವು ಸಭೆಗಳಲ್ಲಿ ಇನ್ನೂ ಹೆಚ್ಚು ಪ್ರತಿಶತ ಮಂದಿ ಈ ಸುಯೋಗದಲ್ಲಿ ಪಾಲಿಗರಾಗಲು ಶಕ್ತರಾಗಬಹುದು. ಹಿರಿಯರು ಮತ್ತು ಶುಶ್ರೂಷಾ ಸೇವಕರು, ನಮೂದಿಸಿಕೊಳ್ಳುವವರಲ್ಲಿ ಮೊದಲಿಗರಾಗಿರುವ ಮೂಲಕ ಒಂದು ಒಳ್ಳೆಯ ಮಾದರಿಯನ್ನು ಇಡಬಲ್ಲರು. (ಇಬ್ರಿ. 13:7) ಎಲ್ಲಾ ಕುಟುಂಬ ತಲೆಗಳು, ಎಪ್ರಿಲ್ ತಿಂಗಳಿನಲ್ಲಿ ಅಥವಾ ಮುಂದಿನ ಹೆಚ್ಚಿನ ತಿಂಗಳುಗಳಲ್ಲಿ, ತಮ್ಮ ಮನೆವಾರ್ತೆಯಲ್ಲಿ ಎಷ್ಟು ಮಂದಿ ಆಕ್ಸಿಲಿಯರಿ ಪಯನೀಯರ್ ಸೇವೆಯ ಪಂಕ್ತಿಗಳನ್ನು ಸೇರಸಾಧ್ಯವಿದೆಯೆಂಬುದನ್ನು ಖಚಿತಪಡಿಸಿಕೊಳ್ಳುವಂತೆ ಉತ್ತೇಜಿಸಲ್ಪಡುತ್ತಾರೆ.—ಕೀರ್ತ. 148:12, 13; ಅ. ಕೃತ್ಯಗಳು 21:8, 9ನ್ನು ಹೋಲಿಸಿರಿ.
7 ನಿಮ್ಮ ಪೂರ್ಣ ಸಮಯದ ಐಹಿಕ ಕೆಲಸ, ಶಾಲಾ ಕಾರ್ಯತಖ್ತೆ, ಕುಟುಂಬ ಜವಾಬ್ದಾರಿಗಳು ಅಥವಾ ಇತರ ಶಾಸ್ತ್ರೀಯ ಹಂಗುಗಳ ಕಾರಣದಿಂದ, ಆಕ್ಸಿಲಿಯರಿ ಪಯನೀಯರ್ ಸೇವೆಯು ನಿಮ್ಮ ನಿಲುಕಿಗೆ ಮೀರಿದಂತಹದ್ದಾಗಿದೆಯೆಂಬ ತೀರ್ಮಾನಕ್ಕೆ ಬರಲು ತ್ವರಿತರಾಗದಿರಿ. ಕೆಲವರಿಗೆ ಭಾಗವಹಿಸುವುದು ಸುಲಭವಾಗಿರಲಿಕ್ಕಿಲ್ಲ; ಹಾಗಿದ್ದರೂ, ಒಳ್ಳೆಯ ಸಂಘಟನೆ ಮತ್ತು ಯೆಹೋವನ ಆಶೀರ್ವಾದದಿಂದ ಅವರು ಯಶಸ್ವಿಯಾಗಬಲ್ಲರು. (ಕೀರ್ತ. 37:5; ಜ್ಞಾನೋ. 16:3) ಪಯನೀಯರ್ ಸೇವೆಯಲ್ಲಿ ಭಾಗವಹಿಸುವ ಬಯಕೆಯು ನಿಮ್ಮ ಪರಿಸ್ಥಿತಿಗಳನ್ನು ನಿಯಂತ್ರಿಸಲಿ; ನಿಮ್ಮ ಪರಿಸ್ಥಿತಿಗಳು ಪಯನೀಯರ್ ಸೇವೆಯನ್ನು ಮಾಡುವ ನಿಮ್ಮ ಬಯಕೆಯನ್ನು ನಿಯಂತ್ರಿಸಲು ಬಿಡಬೇಡಿರಿ. (ಜ್ಞಾನೋ. 13:19ಎ) ಆದುದರಿಂದ, ಯೆಹೋವನಿಗಾಗಿ ಮತ್ತು ಜೊತೆ ಮಾನವರಿಗಾಗಿರುವ ಬಲವಾದ ಪ್ರೀತಿಯಿಂದಾಗಿ, ಅನೇಕರು ಆಗಾಗ ಒಂದು ತಿಂಗಳಿನಲ್ಲಿ ತಮ್ಮ ಶುಶ್ರೂಷೆಯನ್ನು ವಿಸ್ತರಿಸಲು ಸಾಧ್ಯವಾಗುವಂತೆ, ತಮ್ಮ ಸಾಪ್ತಾಹಿಕ ಜೀವನ ಕ್ರಮವನ್ನು ಅಳವಡಿಸಿಕೊಳ್ಳಲು ಶಕ್ತರಾಗಿರುತ್ತಾರೆ. (ಲೂಕ 10:27, 28) ರಾಜ್ಯ ಸೇವೆಯಲ್ಲಿ ತಮ್ಮನ್ನು ಕಠಿನವಾಗಿ ದುಡಿಸಿಕೊಳ್ಳುವವರಿಗಾಗಿ ಅನೇಕ ಆಶೀರ್ವಾದಗಳು ಶೇಖರಿಸಿಡಲ್ಪಟ್ಟಿವೆ.—1 ತಿಮೊ. 4:10.
8 ಆಕ್ಸಿಲಿಯರಿ ಪಯನೀಯರ್ ಸೇವೆಯು ಪೂರೈಸುವ ಸಂಗತಿ: ದೇವರ ಸೇವಕರಲ್ಲಿ ಸಾವಿರಾರು ಮಂದಿ, ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಹಾಕುವಂತಹ ಪೂರ್ಣಪ್ರಾಣದ ಪ್ರಯತ್ನವು, ಯೆಹೋವನಿಗೆ ಸ್ತುತಿಯ ಒಂದು ಮಹಾ ಘೋಷದಲ್ಲಿ ಫಲಿಸುತ್ತದೆ. ಈ ರಾಜ್ಯ ಘೋಷಕರು, ಹೆಚ್ಚೆಚ್ಚು ಜನರಿಗೆ ಸುವಾರ್ತೆಯನ್ನು ಹಬ್ಬಿಸಲು ತಮ್ಮನ್ನು ದುಡಿಸಿಕೊಳ್ಳುವಾಗ, ಅವರು ಯೆಹೋವನ ಆತ್ಮ ಮತ್ತು ಆಶೀರ್ವಾದಕ್ಕಾಗಿ ಆತನ ಮೇಲೆ ಹೆಚ್ಚು ಅವಲಂಬಿತರಾಗಿರಲು ಕಲಿಯುವುದರಿಂದ, ಅವರು ವೈಯಕ್ತಿಕವಾಗಿ ಯೆಹೋವನೆಡೆಗೆ ಹೆಚ್ಚು ಆಪ್ತತೆಗೆ ಸೆಳೆಯಲ್ಪಡುತ್ತಾರೆ.
9 ನಮ್ಮ ನಡುವೆ ಆಕ್ಸಿಲಿಯರಿ, ಕ್ರಮದ ಮತ್ತು ವಿಶೇಷ ಪಯನೀಯರರು ಸಕ್ರಿಯರಾಗಿರುವುದು, ಸಭೆಯಲ್ಲಿ ಚೈತನ್ಯದ ಒಂದು ನವೀನ ಆತ್ಮವನ್ನು ಉತ್ಪಾದಿಸುತ್ತದೆ. ತಮ್ಮ ಕ್ಷೇತ್ರದ ಅನುಭವಗಳ ಕುರಿತಾಗಿ ಮಾತಾಡುವಾಗ ಅವರ ಉತ್ಸಾಹವು ಹರಡುವಂತಹದ್ದಾಗಿದೆ. ಇದು ಇತರರನ್ನು, ಶುಶ್ರೂಷೆಯೆಂಬ ಸರ್ವಪ್ರಾಮುಖ್ಯ ಕೆಲಸದಲ್ಲಿ ಒಂದು ವಿಸ್ತಾರವಾದ ಪಾಲನ್ನು ಹೊಂದುವ ತಮ್ಮ ಸ್ವಂತ ಆದ್ಯತೆಗಳನ್ನು ಮತ್ತು ಸಾಧ್ಯತೆಯನ್ನು ಪುನರ್ಪರಿಶೀಲಿಸುವಂತೆ ಪ್ರಚೋದಿಸುತ್ತದೆ. 70ರ ವಯಸ್ಸಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡ ಒಬ್ಬ ಸಹೋದರಿಯು, ತತ್ಕ್ಷಣವೇ ನಿರಂತರವಾದ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಆರಂಭಿಸಿದರು. ಆ ಪ್ರಾಯದಲ್ಲಿ, ಅವರು ಪ್ರತಿ ತಿಂಗಳು ಒಬ್ಬ ಆಕ್ಸಿಲಿಯರಿ ಪಯನೀಯರರೋಪಾದಿ ಶುಶ್ರೂಷೆಯಲ್ಲಿ ಇನ್ನೂ ಏಕೆ ದುಡಿಯುತ್ತಿದ್ದಾರೆಂದು ಅವರಿಗೆ ಕೆಲವು ವರ್ಷಗಳ ನಂತರ ಕೇಳಲ್ಪಟ್ಟಾಗ, ಅವರು ಹೇಳಿದ್ದೇನೆಂದರೆ, ಅವರ ಜೀವನದ ಪ್ರಥಮ 70 ವರ್ಷಗಳು ವ್ಯರ್ಥವಾಗಿ ಕಳೆದಿದ್ದವು ಮತ್ತು ತಮ್ಮ ಜೀವನದ ಉಳಿದಿರುವ ವರ್ಷಗಳಲ್ಲಿ ಅವರು ಯಾವುದನ್ನೂ ವ್ಯರ್ಥಗೊಳಿಸಲು ಬಯಸಲಿಲ್ಲ!
10 ಆಕ್ಸಿಲಿಯರಿ ಪಯನೀಯರ್ ಕೆಲಸದಲ್ಲಿನ ಪ್ರತಿಯೊಬ್ಬ ಭಾಗಿಯು, ಶುಶ್ರೂಷೆಯಲ್ಲಿ ಒಂದು ಉತ್ತಮಗೊಳಿಸಲ್ಪಟ್ಟ ಕೌಶಲವನ್ನು ವಿಕಸಿಸಿಕೊಳ್ಳುತ್ತಾನೆ. ಒಬ್ಬ ಯುವ ಸಾಕ್ಷಿಯು ಒಪ್ಪಿಕೊಂಡದ್ದು: ‘ನನ್ನ ಬಾಲ್ಯಾವಸ್ಥೆಯ ಆರಂಭದಲ್ಲಿ, ನಾನು ನನ್ನ ಹೆತ್ತವರೊಂದಿಗೆ ಅವರ ಸಾರುವ ಚಟುವಟಿಕೆಗಳಲ್ಲಿ ಜೊತೆಗೂಡುತ್ತಿದ್ದೆ. ಕ್ಷೇತ್ರ ಸೇವೆಯು ನಿಜವಾಗಿ ಮೋಜಿನ ಸಂಗತಿಯಾಗಿತ್ತು. ಆದಾಗಲೂ, ನಾನು ಶಾಲೆಯಲ್ಲಿ ಇತರ ವಿದ್ಯಾರ್ಥಿಗಳಿಗಿಂತ ಭಿನ್ನನಾಗಿದ್ದೆನೆಂದು ನನಗೆ ಸಮಯಾನಂತರ ಅರಿವಾಯಿತು. ಆಗ ನನಗೆ ಸತ್ಯದ ಕುರಿತಾಗಿ ಜೊತೆ ವಿದ್ಯಾರ್ಥಿಗಳೊಂದಿಗೆ ಮಾತಾಡುವುದು ಮುಜುಗರದ ವಿಷಯವಾಯಿತು. ಮನೆಯಿಂದ ಮನೆಗೆ ಸಾರುತ್ತಿದ್ದಾಗ, ಶಾಲೆಯಲ್ಲಿ ನನಗೆ ತಿಳಿದಿರುವ ಯಾರಾದರೊಬ್ಬರನ್ನು ಭೇಟಿಯಾಗುವುದರ ಕುರಿತಾಗಿ ನೆನಸಿ, ಹೆದರತೊಡಗಿದೆ. ನನ್ನ ವಿಷಯದಲ್ಲಿ ಮನುಷ್ಯನ ಭಯವೇ ಸಮಸ್ಯೆಯಾಗಿತ್ತೆಂದು ನನ್ನೆಣಿಕೆ. [ಜ್ಞಾನೋ. 29:25] ಶಾಲೆಯನ್ನು ಮುಗಿಸಿದ ನಂತರ, ನಾನು ಪಯನೀಯರ್ ಸೇವೆಯನ್ನು ತಾತ್ಕಾಲಿಕವಾಗಿ ಪ್ರಯತ್ನಿಸಲು ನಿರ್ಣಯಿಸಿದೆ. ಫಲಸ್ವರೂಪವಾಗಿ, ಸಾರುವಿಕೆಯು ನನಗೆ ಹಿಂದೆಂದೂ ಆಗಿರದಿದ್ದಷ್ಟು ಆಕರ್ಷಕವಾಯಿತು. ಇನ್ನು ಮುಂದೆ ನಾನು ಅದನ್ನು ಒಂದು ಮೋಜಿನ ಚಟುವಟಿಕೆಯೋಪಾದಿ ವೀಕ್ಷಿಸಲಿಲ್ಲ, ಅಥವಾ ಅದು ಒಂದು ಭಾರವಾದ ಹೊರೆಯಾಗಿರಲೂ ಇಲ್ಲ. ನನ್ನ ಬೈಬಲ್ ವಿದ್ಯಾರ್ಥಿಗಳು ಸತ್ಯದಲ್ಲಿ ಪ್ರಗತಿಮಾಡುವುದನ್ನು ನೋಡಿದಾಗ, ಯೆಹೋವ ದೇವರು ನನ್ನ ಪ್ರಯತ್ನಗಳನ್ನು ಬೆಂಬಲಿಸುತ್ತಿದ್ದಾನೆಂಬ ಪುರಾವೆಯ ವಿಷಯದಲ್ಲಿ ನಾನು ಗಾಢವಾದ ತೃಪ್ತಿಯ ಪ್ರಜ್ಞೆಯನ್ನು ಅನುಭವಿಸಿದೆ.’ ಈ ಯೌವನಸ್ಥನು ಒಬ್ಬ ಕ್ರಮದ ಪಯನೀಯರನೋಪಾದಿ ಸೇವೆ ಸಲ್ಲಿಸಲು ಮುಂದುವರಿದನು.
11 ಒಂದು ವ್ಯಾವಹಾರಿಕ ದೃಷ್ಟಿಕೋನದಿಂದ, ಸಭೆಯಲ್ಲಿ ಅನೇಕರು ಆಕ್ಸಿಲಿಯರಿ ಪಯನೀಯರರೋಪಾದಿ ಸೇವೆಸಲ್ಲಿಸುವಾಗ, ಟೆರಿಟೊರಿಯ ಒಂದು ಸಮಗ್ರವಾದ ಆವರಿಸುವಿಕೆಯು ಫಲಿಸುತ್ತದೆ. ಟೆರಿಟೊರಿಗಳನ್ನು ನೇಮಿಸುವುದನ್ನು ನಿರ್ವಹಿಸುವ ಸಹೋದರನು, ವಿರಳವಾಗಿ ಕೆಲಸ ಮಾಡಲ್ಪಟ್ಟಿರುವ ವಿಭಾಗಗಳನ್ನು ಆವರಿಸುವುದರಲ್ಲಿ ನೆರವು ನೀಡುವಂತೆ ಆಕ್ಸಿಲಿಯರಿ ಪಯನೀಯರರನ್ನು ಕೇಳಿಕೊಳ್ಳಬಹುದು. ಊಟವನ್ನು ಕಟ್ಟಿಕೊಂಡು ಹೋಗಿ, ಇಡೀ ದಿನವನ್ನು ಸೇವೆಯಲ್ಲಿ ಕಳೆಯುವುದು, ಟೆರಿಟೊರಿಯ ಅತಿ ದೂರದ ಮೂಲೆಗಳಲ್ಲೂ ಕೆಲಸ ಮಾಡುವುದನ್ನು ಸಾಧ್ಯವನ್ನಾಗಿ ಮಾಡುವುದು.
12 ಹಿರಿಯರು ಮುಂಗಡ ತಯಾರಿಗಳನ್ನು ಮಾಡಬೇಕು: ಮುಂದಿನ ಮೂರು ತಿಂಗಳುಗಳಾದ್ಯಂತ, ವಾರದ ವಿವಿಧ ಸಮಯಗಳಲ್ಲಿ ವಿಭಿನ್ನ ರೀತಿಯ ಸಾಕ್ಷಿನೀಡುವಿಕೆಯ ಚಟುವಟಿಕೆಯನ್ನು ಗೊತ್ತುಪಡಿಸಲು ಏರ್ಪಾಡುಗಳು ಮಾಡಲ್ಪಡಬೇಕು. ಸಾಧ್ಯವಿರುವಷ್ಟು ಹೆಚ್ಚು ಪ್ರಚಾರಕರು ಭಾಗವಹಿಸಲು ಸಾಧ್ಯವಾಗುವಂತೆ, ಇದರಲ್ಲಿ ಮಧ್ಯಾಹ್ನದ ಕೊನೆಭಾಗ ಮತ್ತು ಸಾಯಂಕಾಲದ ಆದಿಭಾಗವೂ ಸೇರಿರಬೇಕು. ಕ್ರಮವಾಗಿ ಮನೆಯಿಂದ ಮನೆಯ ಕೆಲಸವನ್ನು ಮಾಡುವುದಕ್ಕೆ ಕೂಡಿಸಿ, ಬೀದಿ ಸಾಕ್ಷಿಕಾರ್ಯ, ವ್ಯಾಪಾರ ಟೆರಿಟೊರಿಯನ್ನು ಆವರಿಸಲಿಕ್ಕಾಗಿ ಮತ್ತು ಮನೆಯಲ್ಲಿಲ್ಲದವರನ್ನು ಸಂದರ್ಶಿಸಲಿಕ್ಕಾಗಿ ಕಾಲಾವಧಿಗಳನ್ನು ಸೇರಿಸಿರಿ. ಹೀಗೆ ಮಾಡುವ ಮೂಲಕ, ಪಯನೀಯರರಿಗೆ ಅತಿ ವ್ಯಾವಹಾರಿಕವಾದ ಮತ್ತು ಅನುಕೂಲವಾಗಿರುವ ಒಂದು ಸಮಯದಲ್ಲಿ, ಸಭೆಯೊಂದಿಗೆ ಸೇವೆಯಲ್ಲಿ ಪಾಲಿಗರಾಗಲು ಪಯನೀಯರ್ ಸೇವೆಯನ್ನು ಮಾಡುವವರಿಗೆ ಹಿರಿಯರು ಸಹಾಯ ಮಾಡುತ್ತಾರೆ. ಎಲ್ಲಾ ಕ್ಷೇತ್ರ ಸೇವಾ ಏರ್ಪಾಡುಗಳ ಕುರಿತಾಗಿ ಸಭೆಗೆ ಚೆನ್ನಾಗಿ ತಿಳಿದಿರಬೇಕು. ಸೇವೆಗಾಗಿರುವ ಕೂಟಗಳ ನಿರ್ವಹಣೆಯು ಚೆನ್ನಾಗಿ ವ್ಯವಸ್ಥಿತಗೊಳಿಸಲ್ಪಟ್ಟಿರಬೇಕು. ಇದಕ್ಕೆ ಕೂಡಿಸಿ, ಸಾಕಷ್ಟು ಟೆರಿಟೊರಿಯು ಲಭ್ಯಗೊಳಿಸಲ್ಪಡಬೇಕು ಮತ್ತು ಬೇಕಾದಷ್ಟು ಪತ್ರಿಕೆಗಳು ಮತ್ತು ಇತರ ಸಾಹಿತ್ಯ ಸರಬರಾಯಿಗಳು ತಡವಿಲ್ಲದೆ ಅರ್ಡರ್ ಮಾಡಲ್ಪಡಬೇಕು.
13 ನಿಮ್ಮ ವೈಯಕ್ತಿಕ ಸೇವಾ ಕಾರ್ಯತಖ್ತೆಯನ್ನು ಯೋಜಿಸಿರಿ: ಆಕ್ಸಿಲಿಯರಿ ಪಯನೀಯರ್ ಸೇವೆಯ ಕುರಿತಾಗಿ ಆರಂಭದಲ್ಲಿ ಶಂಕೆಪಡುತ್ತಿದ್ದ ಒಬ್ಬ ಸಹೋದರನು ಹೇಳಿದ್ದು: “ಅದು ನಿಜವಾಗಿ ನಾನು ನೆನಸಿದ್ದಕ್ಕಿಂತಲೂ ತುಂಬ ಸುಲಭವಾಗಿದೆ. ಅದಕ್ಕೆ ಕೇವಲ ಒಂದು ಒಳ್ಳೆಯ ಕಾರ್ಯತಖ್ತೆಯ ಅಗತ್ಯವಿದೆ.” ಈ ಪುರವಣಿಯ ಹಿಂದಿನ ಪುಟದಲ್ಲಿ, ನಿಮಗೆ ವ್ಯಾವಹಾರಿಕವಾಗಿರಬಹುದಾದ ಆಕ್ಸಿಲಿಯರಿ ಪಯನೀಯರ್ ಕಾರ್ಯತಖ್ತೆಯ ಒಂದು ನಮೂನೆಯನ್ನು ನೀವು ನೋಡುತ್ತೀರೊ? ಪ್ರತಿ ವಾರ ಶುಶ್ರೂಷೆಗಾಗಿ ಕೇವಲ ಹದಿನೈದು ತಾಸುಗಳು, ಆಕ್ಸಿಲಿಯರಿ ಪಯನೀಯರರಿಂದ ಅಪೇಕ್ಷಿಸಲ್ಪಡುವ ಸಮಯವಾಗಿದೆ.
14 ಆಕ್ಸಿಲಿಯರಿ ಪಯನೀಯರರೋಪಾದಿ ಸೇವೆಸಲ್ಲಿಸಲಿಕ್ಕಾಗಿ, ಗೃಹಿಣಿಯರು ಮತ್ತು ಸೆಕೆಂಡ್ ಷಿಫ್ಟ್ನ ಕಾರ್ಮಿಕರು, ಅನೇಕಸಲ ತಮ್ಮ ಬೆಳಗ್ಗೆಗಳನ್ನು ಕ್ಷೇತ್ರ ಸೇವೆಗಾಗಿ ಗೊತ್ತುಪಡಿಸಬಲ್ಲರು. ಶಾಲಾಮಕ್ಕಳು ಮತ್ತು ತರ್ಡ್ ಷಿಫ್ಟ್ನ ಕಾರ್ಮಿಕರು, ಸಾಮಾನ್ಯವಾಗಿ ಮಧ್ಯಾಹ್ನಗಳ ಕೊನೆಯ ಭಾಗವನ್ನು ಸಾರುವ ಕಾರ್ಯಕ್ಕಾಗಿ ಮೀಸಲಾಗಿಡಬಲ್ಲರು. ಪೂರ್ಣ ಸಮಯದ ಐಹಿಕ ಕೆಲಸಗಾರರು, ಸಂಜೆ ಸಾಕ್ಷಿಕಾರ್ಯವನ್ನು ಮಾಡುವುದಕ್ಕೆ ಕೂಡಿಸಿ, ವಾರಕ್ಕೆ ಒಂದು ದಿನ ರಜೆಯನ್ನು ತೆಗೆದುಕೊಳ್ಳಲು ಅಥವಾ ಶುಶ್ರೂಷೆಗೆ ಇಡೀ ವಾರಾಂತ್ಯಗಳನ್ನು ಮೀಸಲಾಗಿಡಲು ಸಾಧ್ಯವಿದೆಯೆಂಬುದನ್ನು ಕಂಡುಕೊಂಡಿದ್ದಾರೆ. ಯಾರ ಕ್ಷೇತ್ರ ಸೇವೆಯು ಹೆಚ್ಚಾಗಿ ವಾರಾಂತ್ಯದ ಚಟುವಟಿಕೆಗೆ ಸೀಮಿತವಾಗಿದೆಯೊ ಅವರಲ್ಲಿ ಅನೇಕರು, ಐದು ಪೂರ್ಣ ವಾರಾಂತ್ಯಗಳಿರುವ ತಿಂಗಳುಗಳನ್ನು ಆರಿಸಿಕೊಳ್ಳುತ್ತಾರೆ. ಈ ವರ್ಷ ಅದು, ಮಾರ್ಚ್ ಹಾಗೂ ಆಗಸ್ಟ್ ಮತ್ತು ನವೆಂಬರ್ ತಿಂಗಳುಗಳ ವಿಷಯದಲ್ಲಿ ಸತ್ಯವಾಗಿದೆ. 6ನೆಯ ಪುಟದಲ್ಲಿ ಒಂದು ಮಾರ್ಗದರ್ಶಿಯೋಪಾದಿ ಒದಗಿಸಲ್ಪಟ್ಟಿರುವ ಖಾಲಿ ಕಾರ್ಯತಖ್ತೆಯನ್ನು ಉಪಯೋಗಿಸುತ್ತಾ, ನಿಮ್ಮ ವ್ಯಕ್ತಿಗತ ಸನ್ನಿವೇಶಕ್ಕೆ ಯಾವುದು ಒಂದು ವ್ಯಾವಹಾರಿಕ ವೈಯಕ್ತಿಕ ಸೇವಾ ಕಾರ್ಯತಖ್ತೆಯಾಗಿರುವುದೊ ಅದಕ್ಕೆ, ಜಾಗರೂಕವಾದ ಮತ್ತು ಪ್ರಾರ್ಥನಾಪೂರ್ವಕವಾದ ಗಮನವನ್ನು ಕೊಡಿರಿ.
15 ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವ ಒದಗಿಸುವಿಕೆಯ ಒಂದು ಪ್ರಯೋಜನವೇನೆಂದರೆ, ಅದರ ಸುಲಭ ಹೊಂದಿಸಿಕೊಳ್ಳುವಿಕೆಯೆ. ನೀವು ಪಯನೀಯರ್ ಸೇವೆಯನ್ನು ಮಾಡಲಿರುವ ತಿಂಗಳುಗಳನ್ನು ಆರಿಸಿಕೊಳ್ಳಬಲ್ಲಿರಿ, ಮತ್ತು ನಿಮಗೆ ಇಷ್ಟವಿರುವಷ್ಟು ಸಲ ನೀವು ಸೇವೆಸಲ್ಲಿಸಬಲ್ಲಿರಿ. ನೀವು ಸತತವಾಗಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಇಷ್ಟಪಡುವುದಾದರೂ ಅದನ್ನು ಮಾಡಲು ಸಾಧ್ಯವಾಗದಿದ್ದರೆ, ವರ್ಷದಾದ್ಯಂತ ಒಂದು ತಿಂಗಳನ್ನು ಬಿಟ್ಟು ಒಂದು ತಿಂಗಳಿಗೆ ನಮೂದಿಸಿಕೊಳ್ಳುವುದರ ಕುರಿತಾಗಿ ನೀವು ಯೋಚಿಸಿದ್ದೀರೊ? ಇನ್ನೊಂದು ಬದಿಯಲ್ಲಿ, ವಿಸ್ತೃತ ಸಮಯಾವಧಿಗಳಿಗೆ ನಿರಂತರವಾಗಿ ಆಕ್ಸಿಲಿಯರಿ ಪಯನೀಯರರಾಗಿ ಸೇವೆಸಲ್ಲಿಸಲು ಕೆಲವರು ಶಕ್ತರಾಗಿದ್ದಾರೆ.
16 ಪೂರ್ಣ ಸಮಯದ ಪಯನೀಯರ್ ಸೇವೆಗಾಗಿ ಅಣಿಗೊಳಿಸುವ ಒಂದು ಚಟುವಟಿಕೆ: ಪಯನೀಯರ್ ಆತ್ಮವಿರುವ ಅನೇಕರು, ಕ್ರಮದ ಪಯನೀಯರರಾಗಿ ಸೇವೆಸಲ್ಲಿಸಲು ಇಷ್ಟಪಡುವರು, ಆದರೆ ಅದಕ್ಕಾಗಿ ತಮ್ಮಲ್ಲಿ ಸಮಯ, ಪರಿಸ್ಥಿತಿಗಳು ಅಥವಾ ಶಕ್ತಿಯಿದೆಯೊ ಎಂದು ಅವರು ಸೋಜಿಗಪಡುತ್ತಾರೆ. ಈಗ ಕ್ರಮದ ಪಯನೀಯರ್ ಸೇವೆ ಮಾಡುತ್ತಿರುವವರಲ್ಲಿ ಹೆಚ್ಚಿನವರು, ನಿಸ್ಸಂದೇಹವಾಗಿ ಆರಂಭದಲ್ಲಿ ಪೂರ್ಣ ಸಮಯದ ಕೆಲಸಕ್ಕಾಗಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು, ಅಣಿಗೊಳಿಸುವ ಒಂದು ಚಟುವಟಿಕೆಯೋಪಾದಿ ಉಪಯೋಗಿಸಿದರು. ಒಬ್ಬರ ಆಕ್ಸಿಲಿಯರಿ ಪಯನೀಯರ್ ಕಾರ್ಯತಖ್ತೆಯನ್ನು, ಪ್ರತಿ ದಿನ ಕೇವಲ ಒಂದು ತಾಸು ಅಥವಾ ಪ್ರತಿ ವಾರ ಒಂದು ಇಡೀ ದಿನ ಹೆಚ್ಚಿಸುವ ಮೂಲಕ, ಕ್ರಮದ ಪಯನೀಯರ್ ಕಾರ್ಯತಖ್ತೆಯನ್ನು ಪೂರೈಸುವುದು ಶಕ್ಯ. ಅದು ನಿಮಗೆ ಶಕ್ಯವೊ ಎಂಬುದನ್ನು ನೋಡಲು, ಆಕ್ಸಿಲಿಯರಿ ಪಯನೀಯರ್ ಸೇವೆಯ ಒಂದು ಅಥವಾ ಹೆಚ್ಚು ತಿಂಗಳುಗಳಲ್ಲಿ, ಶುಶ್ರೂಷೆಯಲ್ಲಿ 90 ತಾಸುಗಳನ್ನು ವಿನಿಯೋಗಿಸಲು ಏಕೆ ಪ್ರಯತ್ನಿಸಬಾರದು? ಅದೇ ಸಮಯದಲ್ಲಿ, ನೀವು ಪುನರ್ಭೇಟಿಗಳನ್ನು ಮತ್ತು ಬೈಬಲ್ ಅಭ್ಯಾಸಗಳನ್ನು ವಿಕಸಿಸುತ್ತಿರುವಿರಿ. ಇದು ನಿಮಗೆ ಒಂದು ವೈವಿಧ್ಯಮಯ ಮತ್ತು ಸಮತೋಲನದ ಪಯನೀಯರ್ ಶುಶ್ರೂಷೆಯಲ್ಲಿ ಆನಂದಿಸುವಂತೆ ಅನುಮತಿಸುವುದು.
17 ಒಬ್ಬ ಸಹೋದರಿಯು ಆರು ವರ್ಷಗಳ ಸತತ ಆಕ್ಸಿಲಿಯರಿ ಪಯನೀಯರ್ ಸೇವೆಯಲ್ಲಿ ಆನಂದಿಸಿದಳು. ಆ ಎಲ್ಲಾ ಸಮಯದಲ್ಲಿ ಅವಳ ಗುರಿಯು, ಕ್ರಮದ ಪಯನೀಯರ್ ಸೇವೆಯನ್ನು ಪ್ರವೇಶಿಸುವುದಾಗಿತ್ತು. ಅದಕ್ಕೋಸ್ಕರ ಅವಳು, ಕ್ರಮದ ಪಯನೀಯರರಿಗಾಗಿರುವ 90 ತಾಸುಗಳ ಆವಶ್ಯಕತೆಯನ್ನು ತಲಪಲು ಸಾಧ್ಯವನ್ನಾಗಿ ಮಾಡುವ ಒಂದು ಪರಿಸ್ಥಿತಿಯನ್ನು ರಚಿಸುವ ನಿರೀಕ್ಷೆಯಲ್ಲಿ, ನಾಲ್ಕು ವಿಭಿನ್ನ ಐಹಿಕ ಕೆಲಸಗಳನ್ನು ಪ್ರಯತ್ನಿಸಿ ನೋಡಿದಳು. ಅದು ಶಕ್ಯವೊ ಎಂಬುದನ್ನು ಲೆಕ್ಕಹಾಕಲು ಅವಳು ಪ್ರತಿ ತಿಂಗಳು ಒಂದು ಅಥವಾ ಎರಡು ಕಾರ್ಯತಖ್ತೆಗಳನ್ನು ತಯಾರಿಸಿದಳು. ಆದರೆ ಅವುಗಳನ್ನು ಪರೀಕ್ಷಿಸಿದಾಗ, ಪೂರ್ಣ ಸಮಯದ ಶುಶ್ರೂಷೆಯು ಅವಳ ನಿಲುಕಿಗೆ ಮೀರಿದ ಸಂಗತಿಯಾಗಿತ್ತೆಂದು ಅವಳಿಗೆ ಅನಿಸಿತು. ಆದರೂ, ಅವಳು ಮಾರ್ಗದರ್ಶನಕ್ಕಾಗಿ ಯೆಹೋವನಿಗೆ ಬೇಡುವುದನ್ನು ಮುಂದುವರಿಸಿದಳು. ಅನಂತರ ಒಂದು ದಿನ ಸೇವಾ ಕೂಟಕ್ಕಾಗಿ ತಯಾರಿಸುತ್ತಿದ್ದಾಗ, ಅಕ್ಟೋಬರ್ 1991ರ ನಮ್ಮ ರಾಜ್ಯದ ಸೇವೆಯಲ್ಲಿನ ಒಂದು ಲೇಖನವನ್ನು ಅವಳು ಓದಿದಳು. ಅದು ತಿಳಿಸಿದ್ದು: “ತಾಸಿನ ಆವಶ್ಯಕತೆಗೆ ಅಯೋಗ್ಯವಾದ ಮಹತ್ವವನ್ನು ಕೊಡುವ ಬದಲಿಗೆ, ಒಟ್ಟುಗೂಡಿಸುವ ಕೆಲಸದಲ್ಲಿ ಭಾಗಿಗಳಾಗಲು ಇರುವ ಹೆಚ್ಚಿನ ಅವಕಾಶದ ಮೇಲೆ ಗಮನವನ್ನು ಏಕೆ ಕೇಂದ್ರೀಕರಿಸಬಾರದು? (ಯೋಹಾ. 4:35, 36)” ಅವಳು ತಿಳಿಸುವುದು: “ನಾನು ಈ ವಾಕ್ಯವನ್ನು ಐದಾರು ಸಲ ಪುನಃ ಓದಿದೆ, ಮತ್ತು ಇದು ಯೆಹೋವನ ಉತ್ತರವೆಂದು ನನಗೆ ನಿಶ್ಚಯವಾಯಿತು. ಆ ಕ್ಷಣದಲ್ಲಿ ನಾನು ಕ್ರಮದ ಪಯನೀಯರ್ ಸೇವೆಯನ್ನು ಪ್ರವೇಶಿಸುವ ನಿರ್ಣಯವನ್ನು ಮಾಡಿದೆ.” ಅವಳ ಐಹಿಕ ಅಂಶಕಾಲಿಕ ಕೆಲಸವು ಅತ್ಯುತ್ತಮವಾದದ್ದಾಗಿ ಇರಲಿಲ್ಲವಾದರೂ, ಕ್ರಮದ ಪಯನೀಯರ್ ಸೇವೆಯನ್ನು ಮಾಡಲು ಅವಳು ತನ್ನ ಅರ್ಜಿಯನ್ನು ಸಲ್ಲಿಸಿದಳು. ಒಂದು ವಾರದ ನಂತರ ಅವಳ ಕಾರ್ಯತಖ್ತೆಯು ಬದಲಾಯಿಸಲ್ಪಟ್ಟು, ಅವಳಿಗೆ ತಕ್ಕದ್ದಾಗಿದ್ದಂತಹ ಐಹಿಕ ಕೆಲಸದ ಸಮಯವನ್ನು ಕೊಡಲಾಯಿತು. ಅವಳು ಸಮಾಪ್ತಿಗೊಳಿಸಿದ್ದು, “ಇದು ಯೆಹೋವನ ಹಸ್ತ ಅಲ್ಲವೇ?” ಮತ್ತು ಕೂಡಿಸಿದ್ದು: “ನೀವು ಯೆಹೋವನ ಬಳಿ ಮಾರ್ಗದರ್ಶನಕ್ಕಾಗಿ ಕೇಳಿಕೊಂಡಿದ್ದು, ಅದನ್ನು ಪಡೆಯುವಾಗ, ಅದನ್ನು ತಿರಸ್ಕರಿಸಬೇಡಿರಿ—ಅದನ್ನು ಸ್ವೀಕರಿಸಿರಿ.” ಕ್ರಮದ ಪಯನೀಯರ್ ಸೇವೆಯನ್ನು ಮಾಡುವುದು ನಿಮ್ಮ ಶ್ರದ್ಧಾಪೂರ್ವಕ ಬಯಕೆಯಾಗಿರುವಲ್ಲಿ, ಪ್ರಾಯಶಃ ಈ ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯ ಮೂರು ತಿಂಗಳುಗಳ ಅಂತ್ಯದಲ್ಲಿ, ನೀವು ಕೂಡ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಯಶಸ್ವಿಯಾಗಬಲ್ಲಿರೆಂಬ ವಿಷಯದಲ್ಲಿ ನೀವು ಮನಗಾಣಿಸಲ್ಪಡುವಿರಿ.
18 ತನ್ನ ಜನರು, ಈ ವಿಶೇಷವಾದ ವಸಂತಕಾಲದ ಚಟುವಟಿಕೆಯ ಅವಧಿಯ ಸಮಯದಲ್ಲಿ ರಕ್ಷಣೆಯ ಸುವಾರ್ತೆಯನ್ನು ಪ್ರಕಾಶಿಸಿದಂತೆ, ಯೆಹೋವನು ಅವರ ಹುರುಪನ್ನು ಆಶೀರ್ವದಿಸಿ, ಅವರ ಪ್ರಯತ್ನಗಳನ್ನು ಬೆಂಬಲಿಸುವನೆಂಬ ವಿಷಯದಲ್ಲಿ ನಾವು ನಿಶ್ಚಿತರಾಗಿದ್ದೇವೆ. (ಯೆಶಾ. 52:7; ರೋಮಾ. 10:15) ಎಪ್ರಿಲ್, ಪ್ರಾಯಶಃ ಮಾರ್ಚ್ ತಿಂಗಳಿನಲ್ಲೂ ಮತ್ತು ಮೇ ತಿಂಗಳಿನಲ್ಲಿ ಒಂದು ಪಾಲನ್ನು ಹೊಂದಿರುವ ಮೂಲಕ, 4,000 ಆಕ್ಸಿಲಿಯರಿ ಪಯನೀಯರರಿಗಾಗಿರುವ ಕರೆಗೆ ನೀವು ಓಗೊಡುವಿರೊ?
[ಪುಟ 3ರಲ್ಲಿರುವಚೌಕ]
ಒಬ್ಬ ಆಕ್ಸಿಲಿಯರಿ ಪಯನೀಯರರಾಗಿ ಯಶಸ್ಸನ್ನು ಗಳಿಸುವ ವಿಧ
■ ನಿಮ್ಮ ಪ್ರತೀಕ್ಷೆಗಳ ಕುರಿತು ಸಕಾರಾತ್ಮಕರಾಗಿರಿ
■ ನಿಮ್ಮ ಪ್ರಯತ್ನಗಳನ್ನು ಆಶೀರ್ವದಿಸುವಂತೆ ಯೆಹೋವನಿಗೆ ಪ್ರಾರ್ಥಿಸಿರಿ
■ ನಿಮ್ಮೊಂದಿಗೆ ಪಯನೀಯರ್ ಸೇವೆಯನ್ನು ಮಾಡುವಂತೆ ಇನ್ನೊಬ್ಬ ಪ್ರಚಾರಕನನ್ನು ಆಮಂತ್ರಿಸಿರಿ
■ ಒಂದು ವ್ಯಾವಹಾರಿಕ ಸೇವಾ ಕಾರ್ಯತಖ್ತೆಯನ್ನು ಯೋಜಿಸಿರಿ
■ ಬೇಕಾದಷ್ಟು ಪತ್ರಿಕೆಗಳನ್ನು ಆರ್ಡರ್ ಮಾಡಿರಿ
■ ಸೇವೆಗಾಗಿರುವ ಸಭಾ ಏರ್ಪಾಡುಗಳನ್ನು ಬೆಂಬಲಿಸಿರಿ
■ ಅನೌಪಚಾರಿಕವಾಗಿ ಸಾಕ್ಷಿನೀಡಲು ಅವಕಾಶಗಳನ್ನು ಹುಡುಕಿರಿ