ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ
“ಎಲ್ಲವನ್ನು ಸುವಾರ್ತೆಗೋಸ್ಕರವೇ ಮಾಡಿರಿ” (NW) ಎಂಬುದು, ಈ ತಿಂಗಳು ಭಾರತದಲ್ಲಿ ಆರಂಭವಾಗುವ ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮದ ಮುಖ್ಯ ಶೀರ್ಷಿಕೆಯಾಗಿದೆ. (1 ಕೊರಿಂ. 9:23) ರಾಜ್ಯದ ಸುವಾರ್ತೆಯು ಇಂದು ಕೇಳಲ್ಪಡುವ ವಾರ್ತೆಗಳಲ್ಲೇ ಅತಿ ಪ್ರಾಮುಖ್ಯವಾಗಿದೆ. ಈ ಅದ್ಭುತಕರ ವಾರ್ತೆಯ ವಾಹಕರೋಪಾದಿ ನಮಗಿರುವ ಈ ಅಸಾಧಾರಣ ಸುಯೋಗವನ್ನು ನಾವು ಗಣ್ಯಮಾಡುವಂತೆ ಈ ಕಾರ್ಯಕ್ರಮವು ಸಹಾಯ ಮಾಡುವುದು. ಮತ್ತು ಸುವಾರ್ತೆಯನ್ನು ಎಡೆಬಿಡದೆ ಸಾರುತ್ತಾ ಇರುವಂತೆಯೂ ಅದು ನಮ್ಮನ್ನು ಹುರಿದುಂಬಿಸುವುದು.—ಅ. ಕೃ. 5:42.
ನಾವು ಶುಶ್ರೂಷೆಯಲ್ಲಿ ಅತ್ಯಂತ ಹೆಚ್ಚನ್ನು ಸಾಧಿಸಲು ಸಾಧ್ಯವಾಗುವಂತೆ ನಮ್ಮ ದೇವಪ್ರಭುತ್ವ ತರಬೇತಿಯನ್ನು ನಾವು ಹೇಗೆ ಪೂರ್ಣವಾಗಿ ಉಪಯೋಗಿಸಬೇಕೆಂಬುದನ್ನು ಆ ಕಾರ್ಯಕ್ರಮವು ನಮಗೆ ತೋರಿಸುವುದು. ಸುವಾರ್ತೆಯನ್ನು ಮುಂದುವರಿಸಲು ತಮ್ಮಲ್ಲಿರುವ ಎಲ್ಲವನ್ನು ಕೊಡುತ್ತಿರುವ ಯುವ ಜನರನ್ನು ಸೇರಿಸಿ, ತಮ್ಮ ಸೇವೆಯನ್ನು ವಿಸ್ತರಿಸಲು ಹೊಂದಾಣಿಕೆಗಳನ್ನು ಮಾಡಿರುವ ಕೆಲವರಿಂದ ನಾವು ಅನುಭವಗಳನ್ನು ಕೇಳಿಸಿಕೊಳ್ಳುವೆವು.—ಹೋಲಿಸಿ ಫಿಲಿಪ್ಪಿ 2:22.
ಅತಿಥಿ ಭಾಷಣಕರ್ತನಿಂದ ಕೊಡಲ್ಪಡಲಿರುವ ಪ್ರಧಾನ ಭಾಷಣವು, “ಸುವಾರ್ತೆಯನ್ನು ನಮ್ಮ ವಶಕ್ಕೆ ಒಪ್ಪಿಸಲು ಯೋಗ್ಯ”ರಾಗಿ (NW) ಉಳಿಯುವುದರ ಅಗತ್ಯವನ್ನು ನಮಗೆ ಒತ್ತಿಹೇಳುವುದು. (1 ಥೆಸ. 2:4) ಇತರರೊಂದಿಗೆ ಸುವಾರ್ತೆಯನ್ನು ಸಾರುವ ಸುಯೋಗವನ್ನು ನಾವು ಕಾಪಾಡಿಕೊಳ್ಳಬೇಕಾದರೆ, ನಮ್ಮ ಯೋಚನೆ ಹಾಗೂ ನಡತೆಯಲ್ಲಿ ನಾವು ಯಾವಾಗಲೂ ದೇವರ ಆವಶ್ಯಕತೆಗಳು ಹಾಗೂ ಮಟ್ಟಗಳಿಗೆ ಅನುಸಾರವಾಗಿರಬೇಕು ಎಂಬುದನ್ನು ನೋಡಲು ನಮಗೆ ಸಹಾಯ ಮಾಡಲಾಗುವುದು. ಇದನ್ನು ಮಾಡುವುದರಿಂದ ನಮಗೆ ಸಿಗುವ ಆಶೀರ್ವಾದಗಳೂ ಎತ್ತಿತೋರಿಸಲ್ಪಡುವವು.
ಈ ಅತಿಮುಖ್ಯವಾದ ಕಾರ್ಯಕ್ರಮವನ್ನು ಮಿಸ್ ಮಾಡಬೇಡಿ. ವಿಶೇಷ ಸಮ್ಮೇಳನ ದಿನದಂದು ದೀಕ್ಷಾಸ್ನಾನ ಪಡೆದುಕೊಳ್ಳಲು ಬಯಸುವ ಹೊಸ ಸಮರ್ಪಿತರು, ಅಧ್ಯಕ್ಷ ಮೇಲ್ವಿಚಾರಕರಿಗೆ ಕೂಡಲೆ ತಿಳಿಸಬೇಕು. ನೀವು ಯಾರೊಂದಿಗೆ ಅಧ್ಯಯನಮಾಡುತ್ತೀರೊ ಅವರೆಲ್ಲರನ್ನು ಹಾಜರಾಗುವಂತೆ ಆಮಂತ್ರಿಸಿರಿ. ಸುವಾರ್ತೆಗೋಸ್ಕರ ಎಲ್ಲವನ್ನು ಮಾಡಲು ಮತ್ತು ಅರ್ಮಗೆದೋನಿನ ಮೊದಲು ಈ ಅತ್ಯಂತ ದೊಡ್ಡ ಕೆಲಸವನ್ನು ಪೂರ್ಣಗೊಳಿಸಲು ನಮ್ಮನ್ನು ಯೆಹೋವನು ಬಲಪಡಿಸುವಂತೆ ನಾವು ಬಿಡೋಣ.