ನಮ್ಮ ಬೈಬಲಾಧಾರಿತ ಸಾಹಿತ್ಯವನ್ನು ವಿವೇಕಯುತವಾಗಿ ಬಳಸುವುದು
1, 2. ನಮ್ಮ ಸಾಹಿತ್ಯದ ಬಗ್ಗೆ ಅನೇಕ ಜನರಿಗಿರುವ ಅನಿಸಿಕೆಯೇನು, ಮತ್ತು ಇದು ಯಾವ ಪ್ರಶ್ನೆಯನ್ನು ಎಬ್ಬಿಸುತ್ತದೆ?
1 “ನಾನು 1965ರಿಂದ ನಿಮ್ಮ ಪ್ರಕಾಶನಗಳನ್ನು ಓದುತ್ತಿದ್ದೇನೆ. ಹೀಗೆ ಓದುವಾಗ ಬೈಬಲನ್ನು ತೆರೆದು ನೋಡುತ್ತೇನೆ ಮತ್ತು ನಿಮ್ಮ ಸಾಹಿತ್ಯದಲ್ಲಿರುವ ಎಲ್ಲ ವಿಷಯಗಳು ಬೈಬಲಿಗೆ ಹೊಂದಿಕೆಯಲ್ಲಿರುತ್ತವೆ. ನನಗೆ ಯಾವಾಗಲೂ ದೇವರ ಮತ್ತು ಯೇಸುವಿನ ಬಗ್ಗೆ ಸತ್ಯಾಂಶವನ್ನು ತಿಳಿದುಕೊಳ್ಳಬೇಕೆಂಬ ಬಯಕೆಯಿತ್ತು. ನಿಮ್ಮ ಪ್ರಕಾಶನಗಳ ಮೂಲಕ ಮತ್ತು ಬೈಬಲಿನ ಮೂಲಕ ನಾನು ಸತ್ಯವಾದ ಉತ್ತರಗಳನ್ನು ಕಂಡುಕೊಳ್ಳುತ್ತಿದ್ದೇನೆ ಎಂಬುದನ್ನು ನಿಜವಾಗಿಯೂ ಹೇಳಬಲ್ಲೆ.” ಹೀಗೆಂದು ಒಬ್ಬ ವ್ಯಕ್ತಿಯು ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯಕ್ಕೆ ಪತ್ರವನ್ನು ಬರೆದನು. ಅದೇ ಪತ್ರದಲ್ಲಿ ಅವನು ಒಂದು ಬೈಬಲ್ ಅಧ್ಯಯನವನ್ನು ವಿನಂತಿಸಿಕೊಂಡನು.
2 ಕೃತಜ್ಞತಾಭಾವದ ಆ ವ್ಯಕ್ತಿಯಂತೆ ಲೋಕವ್ಯಾಪಕವಾಗಿ ಲಕ್ಷಾಂತರ ಜನರು, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನಿಂದ’ ಒದಗಿಸಲ್ಪಡುವ ಬೈಬಲ್ ಅಧ್ಯಯನ ಸಹಾಯಕಗಳನ್ನು ಗಣ್ಯಮಾಡುತ್ತಾರೆ. (ಮತ್ತಾ. 24:45) ಪ್ರಾಮಾಣಿಕ ಹೃದಯದ ಜನರು “ಸತ್ಯದ [ನಿಷ್ಕೃಷ್ಟ] ಜ್ಞಾನ”ವನ್ನು ಪಡೆಯುವಂತೆ ಸಹಾಯಮಾಡುವ ಸಲುವಾಗಿ ಪ್ರತಿ ವರುಷವೂ ಭಾರಿ ಮೊತ್ತದಲ್ಲಿ ಸಾಹಿತ್ಯವನ್ನು ಪ್ರಕಟಿಸಲಾಗುತ್ತದೆ. (1 ತಿಮೊ. 2:4) ನಮ್ಮ ಬೈಬಲಾಧಾರಿತ ಸಾಹಿತ್ಯವನ್ನು ನಾವು ಹೇಗೆ ವಿವೇಕಯುತವಾಗಿ ಬಳಸಸಾಧ್ಯವಿದೆ?
3. ಸಾಹಿತ್ಯವು ವ್ಯರ್ಥವಾಗದಂತೆ ನಾವು ಹೇಗೆ ತಡೆಯಸಾಧ್ಯವಿದೆ?
3 ವ್ಯರ್ಥವಾಗದಂತೆ ನೋಡಿಕೊಳ್ಳಿ: ಕೆಲವು ಸಮಯಗಳಲ್ಲಿ ನಾವು ನಿಜವಾಗಿಯೂ ಉಪಯೋಗಿಸುವುದಕ್ಕಿಂತ ಹೆಚ್ಚು ಸಾಹಿತ್ಯವನ್ನು ಶೇಖರಿಸಿಡಬಹುದು. ನಮ್ಮ ಬೆಲೆಬಾಳುವ ಪ್ರಕಾಶನಗಳು ವ್ಯರ್ಥವಾಗದಂತೆ ತಡೆಯಲು ನಾವೇನು ಮಾಡಸಾಧ್ಯವಿದೆ? ಶುಶ್ರೂಷೆಯಲ್ಲಿ ಉಪಯೋಗಿಸಲಿಕ್ಕಾಗಿ ಸಾಹಿತ್ಯವನ್ನು ತೆಗೆದುಕೊಳ್ಳುವಾಗ ವಿವೇಚನೆಯ ಅಗತ್ಯವಿದೆ. ನಾವು ನೀಡಲಿರುವ ಪ್ರಕಾಶನದ ಅನೇಕ ಪ್ರತಿಗಳನ್ನು ಪಡೆದುಕೊಳ್ಳುವುದಕ್ಕೆ ಬದಲಾಗಿ ಕೇವಲ ಒಂದು ಅಥವಾ ಎರಡು ಪ್ರತಿಗಳನ್ನು ತೆಗೆದುಕೊಳ್ಳಬಹುದು. ಮತ್ತು ಅವನ್ನು ಜನರಿಗೆ ನೀಡಿದ ಬಳಿಕ ಇನ್ನೂ ಹೆಚ್ಚು ಪ್ರತಿಗಳನ್ನು ಪಡೆದುಕೊಳ್ಳಬಹುದು. ಇದು ನಮ್ಮ ಮನೆಗಳಲ್ಲಿ ಸಾಹಿತ್ಯದ ಒಂದು ದೊಡ್ಡ ಸರಬರಾಜನ್ನು ಶೇಖರಿಸಿಡುವುದನ್ನು ತಡೆಯುತ್ತದೆ. ತದ್ರೀತಿಯಲ್ಲಿ, ನಮ್ಮ ಬಳಿ ಬಹಳಷ್ಟು ಪತ್ರಿಕೆಗಳು ಬಳಸಲ್ಪಡದೇ ಉಳಿದಿರುವಲ್ಲಿ, ನಾವು ವಿನಂತಿಸಿಕೊಂಡಿರುವ ಪತ್ರಿಕೆಗಳನ್ನು ಕಡಿಮೆಗೊಳಿಸುವುದು ಸೂಕ್ತವಾದದ್ದಾಗಿದೆ.
4. ಒಂದು ಸಭೆಯಲ್ಲಿ ಯಾವುದೇ ಪ್ರಕಾಶನವು ಹೆಚ್ಚು ಸ್ಟಾಕ್ನಲ್ಲಿರುವುದಾದರೆ ಏನು ಮಾಡಸಾಧ್ಯವಿದೆ?
4 ಹೆಚ್ಚಾಗಿ ಸ್ಟಾಕ್ನಲ್ಲಿರುವ ಪ್ರಕಾಶನಗಳು: ಸಭೆಯಲ್ಲಿ ಯಾವುದೇ ಪ್ರಕಾಶನವು ಹೆಚ್ಚು ಸ್ಟಾಕ್ನಲ್ಲಿರುವುದಾದರೆ, ಸಾಹಿತ್ಯ ಸಂಯೋಜಕನು ಆ ಕ್ಷೇತ್ರದಲ್ಲಿರುವ ಇತರ ಸಭೆಗಳು ಉಳಿದಿರುವ ಆ ಸಾಹಿತ್ಯವನ್ನು ಉಪಯೋಗಿಸಸಾಧ್ಯವಿದೆಯೊ ಎಂದು ವಿಚಾರಿಸಿನೋಡಸಾಧ್ಯವಿದೆ. ಪ್ರಚಾರಕರು ಹಳೆಯ ಪ್ರಕಾಶನಗಳನ್ನು ನಂಬಿಕೆಯಲ್ಲಿಲ್ಲದಿರುವ ಕುಟುಂಬ ಸದಸ್ಯರಿಗೆ, ಬೈಬಲ್ ವಿದ್ಯಾರ್ಥಿಗಳಿಗೆ ಮತ್ತು ಇತರರಿಗೆ ನೀಡಸಾಧ್ಯವಿದೆ. ಸಭೆಯೊಂದಿಗೆ ಹೊಸದಾಗಿ ಸಹವಾಸಿಸುತ್ತಿರುವವರು ತಮ್ಮ ವೈಯಕ್ತಿಕ ದೇವಪ್ರಭುತ್ವಾತ್ಮಕ ಲೈಬ್ರರಿಗಾಗಿ ಈ ಹಳೆಯ ಪ್ರಕಾಶನಗಳನ್ನು ಪಡೆದುಕೊಳ್ಳಲು ಬಯಸಬಹುದು.
5. ನಮ್ಮ ಸಾಹಿತ್ಯಕ್ಕಾಗಿ ನಾವು ಹೇಗೆ ಗಣ್ಯತೆಯನ್ನು ತೋರಿಸಸಾಧ್ಯವಿದೆ?
5 ನಮ್ಮ ಸಾಹಿತ್ಯವು ಯಾವ ಉದ್ದೇಶಕ್ಕಾಗಿ ತಯಾರಿಸಲ್ಪಟ್ಟಿದೆಯೋ ಆ ಉದ್ದೇಶವನ್ನು ಸಾಧಿಸಬೇಕೆಂದು ಅಂದರೆ ಪ್ರಾಮಾಣಿಕ ಜನರು ಯೆಹೋವನ ಅದ್ಭುತಕರ ಉದ್ದೇಶಗಳ ಬಗ್ಗೆ ತಿಳಿದುಕೊಳ್ಳುವಂತೆ ಅದು ಸಹಾಯಮಾಡಬೇಕೆಂದು ನಾವು ಬಯಸುತ್ತೇವೆ. ಯೇಸು ಅದ್ಭುತಕರವಾಗಿ ಜನಸಮೂಹದವರಿಗೆ ಉಣಿಸಿದ ಬಳಿಕ ಉಳಿದ ಆಹಾರವನ್ನು ಹಾಳುಮಾಡಲಿಲ್ಲ. ತದ್ರೀತಿಯಲ್ಲಿ, ಒದಗಿಸಲ್ಪಡುವ ಬೆಲೆಬಾಳುವಂಥ ಬೈಬಲ್ ಆಧಾರಿತ ಪ್ರಕಾಶನಗಳನ್ನು ಸಾಧ್ಯವಾದಷ್ಟು ಅತ್ಯುತ್ತಮ ವಿಧದಲ್ಲಿ ಉಪಯೋಗಿಸುವುದೇ ನಮ್ಮ ಗುರಿಯಾಗಿರಬೇಕು. (ಯೋಹಾ. 6:11-13) ನಮ್ಮ ಪ್ರಕಾಶನಗಳು ನಮ್ಮ ಮನೆಯ ಕಪಾಟುಗಳಲ್ಲೋ ನಮ್ಮ ಬ್ಯಾಗ್ಗಳಲ್ಲೋ ಉಳಿಯುವುದಾದರೆ, ಅವುಗಳಲ್ಲಿರುವ ಜೀವರಕ್ಷಕ ಸಂದೇಶವು ನೀತಿಪ್ರಿಯರ ಹೃದಯಗಳನ್ನು ಸ್ಪರ್ಶಿಸಸಾಧ್ಯವಿಲ್ಲ. ಆದುದರಿಂದ, ನಾವು ಶುಶ್ರೂಷೆಗಾಗಿ ಸಾಹಿತ್ಯವನ್ನು ತೆಗೆದುಕೊಳ್ಳುವಾಗ ವಿವೇಚನೆಯುಳ್ಳವರಾಗಿರಬೇಕು ಮತ್ತು ಇತರರಿಗೆ ಪ್ರಯೋಜನಕರವಾಗಿರುವಂತೆ ಅದನ್ನು ವಿವೇಕಯುತವಾಗಿ ಬಳಸಬೇಕು.—ಫಿಲಿ. 4:5.