ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 5/09 ಪು. 1
  • ಸರಳ ಮಾತುಗಳಿಂದ ಬೋಧಿಸಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸರಳ ಮಾತುಗಳಿಂದ ಬೋಧಿಸಿರಿ
  • 2009 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಬೋಧನಾ ರೀತಿ ಉತ್ತಮಗೊಳಿಸಲು ಮೂರು ಸಲಹೆ
    2012 ನಮ್ಮ ರಾಜ್ಯದ ಸೇವೆ
  • ಮಹಾ ಬೋಧಕನನ್ನು ಅನುಕರಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಇತರರಿಗೆ ಅರ್ಥವತ್ತಾದದ್ದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • “ಅವನು ಮಾತಾಡಿದ ರೀತಿಯಲ್ಲಿ ಯಾವ ಮನುಷ್ಯನೂ ಎಂದೂ ಮಾತಾಡಿದ್ದಿಲ್ಲ”
    “ನನ್ನನ್ನು ಹಿಂಬಾಲಿಸಿರಿ”
ಇನ್ನಷ್ಟು
2009 ನಮ್ಮ ರಾಜ್ಯದ ಸೇವೆ
km 5/09 ಪು. 1

ಸರಳ ಮಾತುಗಳಿಂದ ಬೋಧಿಸಿರಿ

1. ಬೋಧನೆಯು ಸ್ಪಷ್ಟವೂ ಪರಿಣಾಮಕಾರಿಯೂ ಆಗಬೇಕಾದರೆ ಪ್ರಾಮುಖ್ಯ ಅಂಶ ಯಾವುದು?

1 ಪರಿಣಾಮಕಾರಿಯಾದ ಬೋಧನೆಯಲ್ಲಿ ಸರಳತೆ ಅತಿ ಪ್ರಾಮುಖ್ಯ ಅಂಶ. ಮಹಾ ಬೋಧಕನಾದ ಯೇಸು ಬೋಧಿಸಿದ ರೀತಿಗೆ ಗಮನವನ್ನು ಕೊಡುವುದಾದರೆ ನಮ್ಮ ‘ಬೋಧಿಸುವ ಕಲೆಯನ್ನು’ ನಾವು ಪ್ರಗತಿಗೊಳಿಸಬಲ್ಲೆವು.—2 ತಿಮೊ. 4:2; ಯೋಹಾ. 13:13.

2. ಸರಳತೆಯಿಂದ ಬೋಧಿಸುವಾಗ ಏನನ್ನು ಉಪಯೋಗಿಸಬೇಕೆಂದಿಲ್ಲ ಮತ್ತು ಅಂಥ ಕಲಿಸುವಿಕೆಯ ಪರಿಣಾಮಗಳೇನು?

2 ಸರಳವಾಗಿ ಮಾತಾಡಿರಿ: ಯಾರೂ ಎಂದೂ ತಿಳಿಸದಂಥ ಕೆಲವು ಅತ್ಯಂತ ಪರಮ ಸತ್ಯಗಳು ಯೇಸುವಿನ ಪರ್ವತ ಪ್ರಸಂಗದಲ್ಲಿ ಅಡಕವಾಗಿವೆ. ಆದರೂ ಅವೆಲ್ಲವು ಸರಳವೂ ತಿಳಿಯಲು ಸುಲಭವೂ ಆದ ಮಾತುಗಳು. (ಮತ್ತಾ. ಅಧ್ಯಾ. 5-7) ಯೇಸುವಿಗೆ ಕಿವಿಗೊಡುತ್ತಿದ್ದ ಜನರ ಗುಂಪುಗಳು ಅವನು “ಬೋಧಿಸುವ ರೀತಿಯನ್ನು ಕಂಡು ಅತ್ಯಾಶ್ಚರ್ಯಪಟ್ಟವು.” ಆತನನ್ನು ಹಿಡಿದುತರಲು ಕಳುಹಿಸಲ್ಪಟ್ಟ ಅಧಿಕಾರಿಗಳು ಎಷ್ಟು ಪ್ರಭಾವಿತರಾದರೆಂದರೆ “ಅವನು ಮಾತಾಡಿದ ರೀತಿಯಲ್ಲಿ ಯಾವ ಮನುಷ್ಯನೂ ಎಂದೂ ಮಾತಾಡಿದ್ದಿಲ್ಲ” ಎಂದು ಹೇಳಿದರು. (ಮತ್ತಾ. 7:28; ಯೋಹಾ. 7:46) ಸತ್ಯವನ್ನು ಇತರರಿಗೆ ಸರಿಯಾಗಿ ಮನಗಾಣಿಸಲು ಶಬ್ದಾಡಂಬರದ ಮಾತುಗಳನ್ನು, ಜಟಿಲವಾದ ವಾಕ್ಯಗಳನ್ನು ಅಥವಾ ಸವಿವರ ದೃಷ್ಟಾಂತಗಳನ್ನು ಉಪಯೋಗಿಸಬೇಕೆಂದಿಲ್ಲ. ಸುಲಭವಾದ ಚಿರಪರಿಚಿತ ಮಾತುಗಳನ್ನೇ ಬಳಸಿ ಸತ್ಯವನ್ನು ಸ್ಪಷ್ಟವಾಗಿ ವಿವರಿಸಲು ಸಾಧ್ಯವಿದೆ.

3. ಕೆಲವರು ಮಾಹಿತಿಯ ಸುರಿಮಳೆಯಿಂದ ಜನರನ್ನು ತಬ್ಬಿಬ್ಬುಗೊಳಿಸಬಹುದೇಕೆ, ಇದನ್ನು ಹೇಗೆ ವರ್ಜಿಸಸಾಧ್ಯವಿದೆ?

3 ಬೇಕಾದಷ್ಟನ್ನೇ ತಿಳಿಸಿ: ಒಂದು ಸಲಕ್ಕೆ ಜನರಿಗೆ ಎಷ್ಟು ಮಾಹಿತಿಬೇಕೋ ಅಷ್ಟನ್ನು ಮಾತ್ರ ತಿಳಿಸಬೇಕೆಂಬ ವಿಷಯಕ್ಕೆ ಯೇಸು ಗಮನಕೊಟ್ಟನು. (ಯೋಹಾ. 16:12) ಹಾಗೆಯೇ ನಾವು ಕೂಡ ವಿಶೇಷವಾಗಿ ಸಂಬಂಧಿಕರಿಗೆ, ಹೊಸಾಸಕ್ತರಿಗೆ ಅಥವಾ ಮಕ್ಕಳಿಗೆ ಸಾಕ್ಷಿಕೊಡುವಾಗ ಈ ವಿಷಯಕ್ಕೆ ಹೆಚ್ಚು ಗಮನಕೊಟ್ಟು ಹೊಂದಾಣಿಕೆಗಳನ್ನು ಮಾಡಬೇಕು. ಅವರು ಬಹಳ ಕಿವಿಗೊಟ್ಟು ಕೇಳುವಂತೆ ಕಂಡರು ಸಹ ಮಾಹಿತಿಯ ಸುರಿಮಳೆಯಿಂದ ಅವರನ್ನು ತಬ್ಬಿಬ್ಬುಗೊಳಿಸದಂತೆ ನಾವು ಜಾಗ್ರತೆವಹಿಸಬೇಕು. ಪ್ರಾಮಾಣಿಕ ಹೃದಯದ ಜನರು ಸತ್ಯದೇವರಾದ ಯೆಹೋವನ ಜ್ಞಾನವನ್ನು ಪಡಕೊಳ್ಳುತ್ತಾ ಮುಂದರಿಯುವರು.—ಯೋಹಾ. 17:3; 1 ಕೊರಿಂ. 3:6.

4. ಅನಾವಶ್ಯಕ ವಿವರಣೆಗಳನ್ನು ಕೊಡುವ ಬದಲಾಗಿ ಮುಖ್ಯ ವಿಷಯದ ಮೇಲೆ ಗಮನ ಕೇಂದ್ರೀಕರಿಸುವುದು ಏಕೆ ಪ್ರಯೋಜನಕಾರಿ?

4 ಮುಖ್ಯ ವಿಷಯಗಳ ಮೇಲೆ ಕೇಂದ್ರೀಕರಿಸಿ: ಯೇಸು ಬೋಧಿಸುವಾಗ ಅತಿ ಹೆಚ್ಚು ವಿವರಗಳನ್ನು ಕೊಟ್ಟು ಜನರನ್ನು ತಬ್ಬಿಬ್ಬುಗೊಳಿಸಲಿಲ್ಲ. “ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರೂ . . . ಹೊರಗೆ ಬರುವ ಕಾಲ ಬರುತ್ತದೆ” ಎಂದು ಆತನಂದಾಗ ಬರೇ ಪುನರುತ್ಥಾನದ ಕುರಿತು ತಿಳಿಸಿದನು. ಆ ಪುನರುತ್ಥಾನವಾಗುವವರಿಗೆ ಎರಡು ವಿಧದ ಭವಿಷ್ಯತ್ತುಗಳಿವೆ ಎಂಬ ಸವಿವರಣೆ ಕೊಡುವ ಸಮಯ ಅದಾಗಿರಲಿಲ್ಲ. (ಯೋಹಾ. 5:28, 29) ಅಂತೆಯೇ ಬೈಬಲ್‌ ಅಧ್ಯಯನಗಳನ್ನು ನಡೆಸುವಾಗ ನಾವು ಮುಖ್ಯ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು. ಅನಾವಶ್ಯಕವಾದ ಬೇರೆ ವಿಷಯಗಳನ್ನು ಚರ್ಚಿಸಬಾರದು.

5. ಸರಳ ಮಾತುಗಳಿಂದ ಬೋಧಿಸುವ ಮೂಲಕ ಯಾವ ಆಶೀರ್ವಾದವನ್ನು ನಾವು ಪಡೆಯಬಹುದು?

5 ನಾವು ತಿಳಿಯತಕ್ಕ ಎಲ್ಲ ವಿಷಯವನ್ನು ಯೆಹೋವನು ಸರಳ ಮಾತುಗಳಿಂದ ಬೋಧಿಸಿರುವುದಕ್ಕೆ ನಾವೆಷ್ಟು ಆಭಾರಿಗಳು! (ಮತ್ತಾ. 11:25) ನಾವು ಸಹ ಸರಳವಾಗಿ ಬೋಧಿಸುವ ಕಲೆಯನ್ನು ನಮ್ಮದಾಗಿ ಮಾಡೋಣ ಮತ್ತು ಫಲದಾಯಕ ಶುಶ್ರೂಷೆಯ ಸಂತೋಷವನ್ನು ಸವಿಯೋಣ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ