ಅನೌಪಚಾರಿಕ ಸಾಕ್ಷಿಕಾರ್ಯಕ್ಕೆ ಸಿದ್ಧರಿದ್ದೀರೋ?
1. ಅನೌಪಚಾರಿಕ ಸಾಕ್ಷಿಕಾರ್ಯ ಪರಿಣಾಮಕಾರಿ ಎಂದು ಯಾವ ಉದಾಹರಣೆ ತೋರಿಸುತ್ತದೆ?
1 ಅನೌಪಚಾರಿಕ ಸಾಕ್ಷಿಕಾರ್ಯ ತುಂಬ ಪರಿಣಾಮಕಾರಿ. ಇದರಿಂದ ಒಳ್ಳೇ ಫಲಿತಾಂಶಗಳು ಸಿಕ್ಕಿರುವ ಅನೇಕ ಉದಾಹರಣೆಗಳು ಬೈಬಲಿನಲ್ಲಿವೆ. (ಯೋಹಾ. 4:7-15) ಈ ವಿಧದ ಸಾಕ್ಷಿಕಾರ್ಯಕ್ಕೆ ನಾವು ಹೇಗೆ ಸಿದ್ಧರಾಗಬಹುದು?
2. ಸಾಕ್ಷಿಕೊಡಲು ನಮ್ಮ ಉಡುಪು ಮತ್ತು ಹೊರತೋರಿಕೆ ಹೇಗೆ ಸಹಾಯ ಮಾಡುವುದು?
2 ಉಡುಪು ಮತ್ತು ಹೊರತೋರಿಕೆ: ಎಲ್ಲ ಸಮಯದಲ್ಲೂ ನಮ್ಮ ಉಡುಪು ಮತ್ತು ಹೊರತೋರಿಕೆಗೆ ಸರಿಯಾದ ಗಮನಕೊಡುವಲ್ಲಿ ನಮ್ಮ ನಂಬಿಕೆಯ ಕುರಿತು ಇತರರೊಂದಿಗೆ ಮಾತಾಡಲು ನಾವು ಸಂಕೋಚಪಡುವುದಿಲ್ಲ. (1 ತಿಮೊ. 2:9, 10) ನಮ್ಮ ತೋರಿಕೆ ಬಗ್ಗೆ ನಮಗೇ ಇರಿಸುಮುರಿಸಾಗುವಲ್ಲಿ ಸಾಕ್ಷಿಕೊಡಲು ಹಿಂಜರಿಯುವೆವು. ಅದಕ್ಕೆ ಬದಲು ನಮ್ಮ ತೋರಿಕೆ ನೀಟಾದದ್ದು, ಶುದ್ಧವಾದದ್ದು ಆಗಿರುವಲ್ಲಿ ಅದು ತಾನೇ ಜನರಲ್ಲಿ ಕುತೂಹಲ ಹುಟ್ಟಿಸುವುದು. ಉದಾಹರಣೆಗೆ ಸಭ್ಯ ಉಡುಪು ಧರಿಸಿದ್ದ ಸಾಕ್ಷಿ ದಂಪತಿಯೊಂದು ಪ್ರಯಾಣಿಸುತ್ತಿದ್ದಾಗ ಅವರ ಪಕ್ಕದಲ್ಲಿದ್ದ ಮುಸ್ಲಿಂ ವ್ಯಕ್ತಿಯೊಬ್ಬರು ‘ನೀವು ಕ್ರಿಶ್ಚನ್ರಾ?’ ಎಂದು ಕೇಳಿದರು. ಆ ದಂಪತಿಯ ತೋರಿಕೆ ನೋಡಿಯೇ ಆ ವ್ಯಕ್ತಿ ಹಾಗೆ ಕೇಳಿದ್ದರು. ಹೀಗೆ ಆರಂಭವಾದ ಸಂಭಾಷಣೆ 3 ತಾಸುಗಳ ಬೈಬಲ್ ಚರ್ಚೆಗೆ ನಡೆಸಿತು.
3. ಯೇಸುವಿನ ಮಾದರಿಯನ್ನು ಅನುಸರಿಸುತ್ತಾ ನೀವು ಒಂದು ಸಂಭಾಷಣೆಯನ್ನು ಹೇಗೆ ಆರಂಭಿಸಿದಿರಿ?
3 ಸಂಭಾಷಣೆಯ ಆರಂಭ: ಯಾಕೋಬನ ಬಾವಿಯ ಬಳಿ ಬಂದ ಸಮಾರ್ಯದ ಸ್ತ್ರೀಯೊಂದಿಗೆ ಯೇಸು ಸಂಭಾಷಣೆ ಆರಂಭಿಸಿದ್ದು ಹೇಗೆ? ನೀರು ಕೇಳಿಯಷ್ಟೇ. ನಾವು ಸಹ ಒಂದು ಚುಟುಕಾದ ಹೇಳಿಕೆ ಇಲ್ಲವೆ ಸರಳ ಪ್ರಶ್ನೆಯ ಮೂಲಕ ಸಂಭಾಷಣೆ ಆರಂಭಿಸಬಹುದು. ಕೆಲವೊಮ್ಮೆ ನಾವು ಅಂಜಬಹುದಾದರೂ ಯೆಹೋವನ ಸಹಾಯದ ಮೇಲೆ ಆತುಕೊಳ್ಳುವಲ್ಲಿ ಸಂಭಾಷಣೆ ಆರಂಭಿಸಲು “ಧೈರ್ಯವನ್ನು” ತಂದುಕೊಳ್ಳಬಲ್ಲೆವು. ವ್ಯಕ್ತಿಯ ಪ್ರತಿಕ್ರಿಯೆಗೆ ಜಾಗ್ರತೆಯಿಂದ ಕಿವಿಗೊಡುವುದರಿಂದ ಅವನಿಗೆ ಆಸಕ್ತಿಯಿದೆಯೋ, ನಾವು ಸಂಭಾಷಣೆ ಮುಂದುವರಿಸಬೇಕೋ ಎಂದು ತಿಳುಕೊಳ್ಳಬಹುದು.—1 ಥೆಸ. 2:2.
4. ಅನೌಪಚಾರಿಕ ಸಾಕ್ಷಿಕಾರ್ಯಕ್ಕೆ ನಾವು ಹೇಗೆ ಸಿದ್ಧರಾಗಬಲ್ಲೆವು?
4 ಅವಕಾಶ ಹುಡುಕಿರಿ: ಅನೇಕ ಪ್ರಚಾರಕರು ಅನೌಪಚಾರಿಕವಾಗಿ ಸಾಕ್ಷಿಕೊಡಲು ಬೇರೆ ಬೇರೆ ವಿಧಗಳನ್ನು ಹುಡುಕಿದ್ದಾರೆ. ನಿಮ್ಮ ಸನ್ನಿವೇಶಗಳನ್ನು ಪರಿಶೀಲಿಸಿ ದಿನನಿತ್ಯ ಎದುರಾಗುವ ಜನರ ಕುರಿತು ಯೋಚಿಸಿ. ಸೂಕ್ತ ಸಾಹಿತ್ಯ ಮತ್ತು ಚಿಕ್ಕ ಬೈಬಲನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. ಗಮನಿಸುವವರಾಗಿರಿ ಹಾಗೂ ಜನರಲ್ಲಿ ಆಸಕ್ತಿ ತೋರಿಸಿರಿ. ನೀವು ದಿನದಾದ್ಯಂತ ಭೇಟಿಯಾಗುವ ಜನರ ಬಗ್ಗೆ ಮೊದಲೇ ಯೋಚಿಸುವಲ್ಲಿ ಉತ್ತಮ ಸಾಕ್ಷಿನೀಡಲು ಸಿದ್ಧರಿರುವಿರಿ.—ಫಿಲಿ. 1:12-14; 1 ಪೇತ್ರ 3:15.
5. ಅನೌಪಚಾರಿಕ ಸಾಕ್ಷಿಕೊಡಲು ನಾವೇಕೆ ಯೋಜನೆ ಮಾಡಬೇಕು?
5 ಅನೌಪಚಾರಿಕವಾಗಿ ಸಾಕ್ಷಿಕೊಡಲು ಪ್ರತಿಯೊಂದು ಅವಕಾಶವನ್ನು ಬಳಸಲು ನಮಗೆ ಎರಡು ಸಕಾರಣಗಳಿವೆ. ದೇವರ ಮೇಲಿನ ಪ್ರೀತಿ ಮತ್ತು ನೆರೆಯವರ ಮೇಲಿನ ಪ್ರೀತಿಯೇ ಅವು. (ಮತ್ತಾ. 22:37-39) ಸಾರುವ ಕೆಲಸವು ಬಹಳ ತುರ್ತಿನದ್ದಾಗಿರುವುದರಿಂದ ಅನೌಪಚಾರಿಕ ಸಾಕ್ಷಿಕೊಡಲು ಯೋಜನೆ ಮಾಡಿ. ರಾಜ್ಯದ ಸುವಾರ್ತೆಯನ್ನು ಇತರರಿಗೆ ತಿಳಿಸಲು ಉಳಿದಿರುವ ಸಮಯದಲ್ಲಿ ನಮಗೆ ಸಿಗುವ ಪ್ರತಿಯೊಂದು ಸೂಕ್ತ ಅವಕಾಶವನ್ನು ಬಳಸಲು ನಾವು ಸದಾ ಸಿದ್ಧರಾಗಿರಬೇಕು.—ರೋಮ. 10:13, 14; 2 ತಿಮೊ. 4:2.