“ಪತ್ರಿಕೆಗಳನ್ನು ನೀಡಲು ಸಲಹೆಗಳು” ಎಂಬ ಸೇವಾ ಕೂಟದ ಭಾಗ
ಪತ್ರಿಕೆಗಳನ್ನು ನೀಡುವ ಬಗ್ಗೆ ಸಲಹೆಗಳಿಗೆಂದೇ ಸೇವಾ ಕೂಟದಲ್ಲಿ ಪ್ರತೀ ತಿಂಗಳು ಒಂದು ಭಾಗವಿರುತ್ತೆ. ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬ ವಿಷ್ಯದಲ್ಲಿ ಸಲಹೆಗಳನ್ನು ವಿನಿಮಯ ಮಾಡಿಕೊಳ್ಳುವುದೇ ಈ ಭಾಗದ ಉದ್ದೇಶ. ಪತ್ರಿಕೆಗಳಲ್ಲಿ ಏನಿದೆ ಅನ್ನೋದನ್ನು ಚರ್ಚಿಸುವುದಲ್ಲ. ಈ ನಿಟ್ಟಿನಲ್ಲಿ, ಅದನ್ನು ನಿರ್ವಹಿಸಲು ನಿರ್ದೇಶನಗಳು ಹೀಗಿವೆ: ಭಾಗ ನಿರ್ವಹಿಸುವ ಸಹೋದರ ಪತ್ರಿಕೆಗಳ ಬಗ್ಗೆ ಆಸಕ್ತಿಭರಿತವಾದ ಒಂದು ಚಿಕ್ಕ ಪೀಠಿಕೆ ಕೊಡುತ್ತಾರೆ. ನಂತರ, ಒಂದೊಂದೇ ಲೇಖನ/ಲೇಖನಮಾಲೆಯನ್ನು ಆರಿಸಿಕೊಳ್ಳುತ್ತಾರೆ. ಇದರಿಂದ ಸಭಿಕರಿಗೆ ಗ್ರಹಿಸಲು ಮತ್ತು ಅವರು ಅಳವಡಿಸಿಕೊಳ್ಳಲು ಬಯಸುವ ವಿಷ್ಯಗಳನ್ನು ಬರೆದುಕೊಳ್ಳಲು ಸಮಯ ಸಿಗುತ್ತೆ. ಮನೆಯವರ ಬಳಿ ಆರಂಭದಿಂದ ಕೊನೆತನಕ ಹೇಗೆ ಮಾತಾಡಬೇಕೆಂದು ಸಭಿಕರನ್ನು ಕೇಳುವುದಿಲ್ಲ. ಬದಲಿಗೆ ಕುತೂಹಲ ಕೆರಳಿಸುವಂಥ ಯಾವ್ಯಾವ ಪ್ರಶ್ನೆಗಳನ್ನು ಉಪಯೋಗಿಸಬಹುದೆಂದು ಕೇಳುತ್ತಾರೆ. ನಂತರ ಯಾವ ವಚನ ಓದಬಹುದೆಂದು ಕೇಳುತ್ತಾರೆ. ಪ್ರತೀ ಪತ್ರಿಕೆಯನ್ನು ಹೇಗೆ ನೀಡಬೇಕೆಂಬ ಪ್ರಾತ್ಯಕ್ಷಿಕೆಯೊಂದಿಗೆ ತಮ್ಮ ಭಾಗವನ್ನು ಕೊನೆಗೊಳಿಸುತ್ತಾರೆ. ಆದ್ದರಿಂದ ನಾವು ಮೊದಲೇ ಪತ್ರಿಕೆಗಳನ್ನು ಓದಿ ಸಲಹೆಗಳನ್ನು ಕೊಡಲು ತಯಾರಿ ಮಾಡಬೇಕು. ಹೀಗೆ ಮಾಡಿದರೆ ನಮಗೂ ಪ್ರಯೋಜನವಾಗುತ್ತೆ, ಇತರರಿಗೂ ಪ್ರಯೋಜನವಾಗುತ್ತೆ.—ಜ್ಞಾನೋ. 27:17.