ಪಾಠ 9
ಸೂಕ್ತವಾದ ಚಿತ್ರ ಮತ್ತು ವಿಡಿಯೋ
ಆದಿಕಾಂಡ 15:5
ಏನು ಮಾಡಬೇಕು: ಪ್ರಾಮುಖ್ಯ ಅಂಶಗಳು ಮನಸ್ಸಲ್ಲಿ ಉಳಿಯಲು ಚಿತ್ರ, ವಿಡಿಯೋ ಮತ್ತು ಬೇರೆ ವಸ್ತುಗಳನ್ನು ಉಪಯೋಗಿಸಿ.
ಹೇಗೆ ಮಾಡಬೇಕು:
ನಿಮ್ಮ ಬೋಧನೆಯನ್ನು ಉತ್ತಮಗೊಳಿಸಲು ಈ ಸಾಧನಗಳನ್ನು ಉಪಯೋಗಿಸಿ. ಚಿತ್ರ, ಭೂಪಟ, ಕಾಲರೇಖೆ ಅಥವಾ ಬೇರೆ ವಸ್ತುಗಳನ್ನು ಪ್ರಾಮುಖ್ಯ ಅಂಶಗಳಿಗೆ ಒತ್ತು ಕೊಡಲಿಕ್ಕಾಗಿ ಉಪಯೋಗಿಸಬಹುದು. ಸಣ್ಣ-ಪುಟ್ಟ ಅಂಶಗಳಿಗೆಲ್ಲ ಇವನ್ನು ಉಪಯೋಗಿಸುವ ಆವಶ್ಯಕತೆ ಇಲ್ಲ. ನೀವು ತೋರಿಸುವ ಸಾಧನವನ್ನು ಮಾತ್ರವಲ್ಲ ಅದರ ಮೂಲಕ ನೀವು ಹೇಳಲು ಬಯಸುವ ಅಂಶವನ್ನೂ ಕೇಳುಗರು ಮನಸ್ಸಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡಿ.
ನೀವು ತೋರಿಸುವ ಸಾಧನ ನಿಮ್ಮ ಸಭಿಕರಿಗೆ ಕಾಣಿಸುವ ತರ ಇರಬೇಕು. ಉದಾಹರಣೆಗೆ, ನೀವು ವೇದಿಕೆಯಿಂದ ಒಂದು ಚಿತ್ರವನ್ನು ತೋರಿಸುವುದಾದರೆ ಅದು ಸಭಿಕರಿಗೆ ಕಾಣಿಸುವಷ್ಟು ದೊಡ್ಡದಾಗಿರಬೇಕು.