ಪಾಠ 11
ಉತ್ಸಾಹ
ರೋಮನ್ನರಿಗೆ 12:11
ಏನು ಮಾಡಬೇಕು: ಉತ್ಸಾಹದಿಂದ ಮಾತಾಡುತ್ತಾ ನಿಮ್ಮ ಕೇಳುಗರನ್ನು ಪ್ರೋತ್ಸಾಹಿಸಿ ಮತ್ತು ಅವರ ಭಾವನೆಗಳನ್ನು ಬಡಿದೆಬ್ಬಿಸಿ.
ಹೇಗೆ ಮಾಡಬೇಕು:
ಮಾಹಿತಿ ಮೊದಲು ನಿಮ್ಮ ಮನಮುಟ್ಟಲಿ. ನಿಮ್ಮ ನೇಮಕವನ್ನು ನೀಡಲು ತಯಾರಿ ಮಾಡುವಾಗ ನೀವು ನೀಡಲಿರುವ ಮಾಹಿತಿ ಎಷ್ಟು ಮುಖ್ಯ ಎಂದು ಯೋಚಿಸಿ. ಮಾಹಿತಿಯನ್ನು ನೀವು ಎಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕೆಂದರೆ, ಅದನ್ನು ಹೇಳುವಾಗ ಅದು ನಿಮ್ಮ ಹೃದಯದಾಳದಿಂದ ಬರಬೇಕು.
ನಿಮ್ಮ ಕೇಳುಗರ ಬಗ್ಗೆ ಯೋಚಿಸಿ. ನೀವು ಓದಲಿರುವ ಅಥವಾ ಕಲಿಸಲಿರುವ ವಿಷಯದಿಂದ ಬೇರೆಯವರಿಗೆ ಹೇಗೆ ಪ್ರಯೋಜನವಾಗುತ್ತದೆ ಎಂದು ಯೋಚಿಸಿ. ನೀವು ಕೊಡುವ ಮಾಹಿತಿಯಿಂದ ಸಿಗುವ ಪ್ರಯೋಜನವನ್ನು ಕೇಳುಗರು ಗ್ರಹಿಸುವಂತೆ ಮಾಡಲು ಅದನ್ನು ಯಾವ ವಿಧದಲ್ಲಿ ಪ್ರಸ್ತುತಪಡಿಸಬಹುದು ಎಂದು ಯೋಚಿಸಿ.
ಜೀವ ತುಂಬಿ. ಲವಲವಿಕೆಯಿಂದ ಮಾತಾಡಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸ್ವಾಭಾವಿಕವಾದ ಸನ್ನೆಗಳನ್ನು ಮತ್ತು ಮುಖಭಾವವನ್ನು ಉಪಯೋಗಿಸಿ.