ಕಷ್ಟ-ನೋವಿನ ಸಮಯದಲ್ಲಿ ಜೀವನ ರೀತಿ ಕಾಪಾಡಿಕೊಳ್ಳಲು ಈ ಹೆಜ್ಜೆಗಳನ್ನು ತೆಗೆದುಕೊಳ್ಳಿ, ನೆಮ್ಮದಿಯಾಗಿರಿ
ಖರ್ಚನ್ನು ಕಮ್ಮಿ ಮಾಡಿ
ಬಜೆಟ್ ಮಾಡಿ
ನಿಮಗೆ ಅಗತ್ಯ ಇದ್ರೆ ಮಾತ್ರ ಹೊಸ ಫೋನ್, ಬಟ್ಟೆ ಮತ್ತು ಬೇರೆ ವಸ್ತುಗಳನ್ನು ಖರೀದಿಸಿ. ಉದಾಹರಣೆಗೆ, ಒಂದು ಗಾಡಿ ಖರೀದಿಸೋ ಮುಂಚೆ, ‘ಅದು ಇಲ್ಲದೇ ನನ್ನ ಕೆಲಸ ನಡೆಯುತ್ತಾ’ ಅಂತ ಯೋಚಿಸಿ. ತರಕಾರಿಗಳ ಖರ್ಚನ್ನು ಕಮ್ಮಿ ಮಾಡಕ್ಕೆ ನೀವು ಮನೆಯಲ್ಲೇ ತರಕಾರಿ ಗಿಡಗಳನ್ನು ಬೆಳೆಸಕ್ಕಾಗುತ್ತಾ ನೋಡಿ.
ಯಾವುದೇ ವಸ್ತುವನ್ನು ಖರೀದಿಸೋ ಮುಂಚೆ ‘ಇದರ ಅಗತ್ಯ ನಂಗೆ ನಿಜವಾಗ್ಲೂ ಇದೆಯಾ?’ ‘ಇದಕ್ಕಾಗಿ ಖರ್ಚು ಮಾಡುವಷ್ಟು ದುಡ್ಡು ನನ್ನ ಹತ್ತಿರ ಇದೆಯಾ’ ಅಂತ ಯೋಚಿಸಿ.
ಸರ್ಕಾರ ಅಥವಾ ಖಾಸಗಿ ಸಂಘಟನೆಗಳಿಂದ ಏನಾದ್ರೂ ಸಹಾಯ ಸಿಕ್ಕಿದ್ರೆ ಅದನ್ನ ಪಡೆಯೋಕೆ ಮುಜುಗರ ಪಡಬೇಡಿ.
ಗೀತ ಹೀಗಂತಾರೆ: “ನಮ್ಮ ಖರ್ಚುಗಳನ್ನು ಹೇಗೆ ಕಮ್ಮಿ ಮಾಡಬಹುದು ಅಂತ ನಾವು ಕುಟುಂಬವಾಗಿ ಕೂತು ಮಾತಾಡಿದ್ವಿ. ಹೊರಗೆ ಹೋಗಿ ಸುತ್ತಾಡೋದನ್ನು, ಶಾಪಿಂಗ್ ಮಾಡೋದನ್ನು ಕಮ್ಮಿ ಮಾಡಿದ್ವಿ. ಬೆಲೆ ಜಾಸ್ತಿ ಇರೋ ಆಹಾರ ಖರೀದಿಸೋದನ್ನು ನಿಲ್ಲಿಸಿದ್ವಿ.”
ಬಜೆಟ್ ಮಾಡಿ
ಖರ್ಚನ್ನು ಕಮ್ಮಿ ಮಾಡಿ
ಬೈಬಲಲ್ಲಿ ಹೀಗಿದೆ: “ಕಷ್ಟಪಟ್ಟು ಕೆಲಸ ಮಾಡುವವನ ಯೋಜನೆಗಳು ಯಶಸ್ಸು ಪಡಿಯುತ್ತೆ, ಆದ್ರೆ ಆತುರಪಡುವವರು ಬಡತನಕ್ಕೆ ಬೀಳ್ತಾರೆ.” (ಜ್ಞಾನೋಕ್ತಿ 21:5) ಬಜೆಟ್ ಮಾಡಿದ್ರೆ ನಿಮಗೆ ಬರೋ ಸಂಬಳಕ್ಕಿಂತ ಜಾಸ್ತಿ ಖರ್ಚು ಮಾಡೋದನ್ನ ತಡಿಬಹುದು. ನೀವು ಹೇಗೆ ಬಜೆಟ್ ಮಾಡಬಹುದು?
ಮೊದಲು, ನಿಮಗೆ ಎಷ್ಟು ಸಂಬಳ ಸಿಗುತ್ತೆ ಅಂತ ಬರೆದಿಡಿ.
ಆಮೇಲೆ ಬಾಡಿಗೆಗೆ, ಕರೆಂಟ್ ಬಿಲ್ಗೆ, ರೇಶನ್ಗೆ ಎಷ್ಟು ಖರ್ಚಾಗುತ್ತೆ ಅಂತ ಬರೆದಿಡಿ. ಇದರ ಜೊತೆಗೆ ಬೇರೇನಾದ್ರೂ ಖರ್ಚಿದ್ರೆ ಅದನ್ನೂ ಬರೆದಿಡಿ.
ನಿಮ್ಮ ಸಂಬಳಕ್ಕಿಂತ ಖರ್ಚು ಜಾಸ್ತಿ ಆಗುತ್ತಿದ್ದರೆ ಬೇಡದ ವಸ್ತುಗಳನ್ನು ಖರೀದಿಸಬೇಡಿ.
ಕಿರಣ್ ಹೀಗಂತಾರೆ: “ಪ್ರತಿ ತಿಂಗಳು ನಮಗೆ ಎಷ್ಟು ಸಂಬಳ ಬರುತ್ತೆ, ಎಷ್ಟು ಖರ್ಚಿರುತ್ತೆ ಅಂತ ಲಿಸ್ಟ್ ಮಾಡ್ತೀವಿ. ಮುಂದೆ ಏನಾದ್ರೂ ತುರ್ತು ಪರಿಸ್ಥಿತಿ ಬಂದಾಗ ಬಳಸೋಕ್ಕೆ ಅಂತ ಸ್ವಲ್ಪ ಹಣವನ್ನು ನಾವು ತೆಗೆದಿಡುತ್ತೇವೆ. ಬಜೆಟ್ ಮಾಡೋದ್ರಿಂದ ನಮ್ಮ ದುಡ್ಡು ಎಲ್ಲಿ, ಹೇಗೆ ಖರ್ಚು ಆಗ್ತಾ ಇದೆ ಅಂತ ಗೊತ್ತಾಗುತ್ತೆ. ಇದರಿಂದ ನಾವು ಜಾಸ್ತಿ ತಲೆ ಕೆಡಿಸಿಕೊಳ್ಳಲ್ಲ.”
ಹಣ ಉಳಿಸಿ, ಸಾಲ ಮಾಡಬೇಡಿ
ಶ್ರಮಪಟ್ಟು ಕೆಲಸ ಮಾಡಿ
ಬೈಬಲಲ್ಲಿ ಹೀಗಿದೆ: “ಕಷ್ಟಪಟ್ಟು ಮಾಡೋ ಪ್ರತಿಯೊಂದು ಕೆಲಸದಲ್ಲಿ ಪ್ರಯೋಜನ ಇರುತ್ತೆ.”—ಜ್ಞಾನೋಕ್ತಿ 14:23.
ಶ್ರಮಪಟ್ಟು ಕೆಲಸ ಮಾಡಿ
ನೀವು ಮಾಡೋ ಕೆಲಸ ನಿಮಗೆ ಇಷ್ಟ ಇಲ್ಲ ಅಂದ್ರೂ ಅದರ ಕಡೆ ಒಳ್ಳೇ ಮನೋಭಾವ ಇರಲಿ. ಯಾಕೆಂದ್ರೆ ನಿಮಗಿರೋ ಕೆಲಸದಿಂದ ನಿಮ್ಮ ಮನೆ ನಡೆಸೋಕೆ ಆಗ್ತಿದೆ.
ಶ್ರಮಪಟ್ಟು ಮತ್ತು ನಿಯತ್ತಿನಿಂದ ಕೆಲಸ ಮಾಡಿದಾಗ ನಿಮ್ಮ ಕೆಲಸವನ್ನು ಉಳಿಸಿಕೊಳ್ಳೋಕೆ ಆಗುತ್ತೆ. ಒಂದುವೇಳೆ ಕೆಲಸ ಕಳಕೊಂಡ್ರು ಬೇರೆ ಕಡೆ ಸುಲಭವಾಗಿ ಕೆಲಸ ಸಿಗುತ್ತೆ.
ದಿಲಿಪ್ ಹೀಗಂತಾರೆ: “ನಾನು ಇಷ್ಟಪಡೋ ಕೆಲಸ ಮತ್ತು ನಾನು ನೆನಸಿದಷ್ಟು ಸಂಬಳ ಸಿಕ್ಕಿಲ್ಲ ಅಂದ್ರೂ ನಾನು ಆ ಕೆಲಸ ಮಾಡ್ತಿನಿ. ನಾನು ಯಾವುದೇ ಕೆಲಸ ಮಾಡಿದ್ರೂ ಶ್ರಮಪಟ್ಟು ಪ್ರಾಮಾಣಿಕವಾಗಿ ಮಾಡ್ತಿನಿ.”
ನೀವು ಕೆಲಸ ಹುಡುಕ್ತಾ ಇರೋದಾದ್ರೆ ಏನು ಮಾಡಬಹುದು?
ನೀವೇ ಮೊದಲ ಹೆಜ್ಜೆ ತಗೊಳ್ಳಿ. ನಿಮಗೆ ಎಲ್ಲಿ ಕೆಲಸ ಸಿಗುತ್ತೆ ಅಂತ ಅನಿಸುತ್ತೋ ಅಂತ ಕಂಪನಿಗಳಿಗೆ ಫೋನ್ ಮಾಡಿ. ನಿಮ್ಮ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ನೀವು ಕೆಲಸ ಹುಡುಕ್ತಾ ಇದ್ದೀರಾ ಅಂತ ತಿಳಿಸಿಡಿ.
ನಮಗಿಷ್ಟ ಇರೋ ಕೆಲಸನೇ ಸಿಗೋದು ತುಂಬ ಕಷ್ಟ. ಇರೋ ಕೆಲಸದಲ್ಲಿ ತೃಪ್ತರಾಗಿರಿ.