ಪಾಠ 14
ಮುಖ್ಯಾಂಶಗಳಿಗೆ ಪ್ರಾಮುಖ್ಯತೆ
ಇಬ್ರಿಯ 8:1
ಏನು ಮಾಡಬೇಕು: ಪ್ರತಿ ಮುಖ್ಯಾಂಶವು ಭಾಷಣದ ಉದ್ದೇಶಕ್ಕೆ ಮತ್ತು ಮುಖ್ಯ ವಿಷಯಕ್ಕೆ ಹೇಗೆ ಸಂಬಂಧಿಸಿದೆ ಎಂದು ತೋರಿಸಿ. ಹೀಗೆ ಮಾಡುವಾಗ ಸಭಿಕರು ಇಡೀ ಭಾಷಣಕ್ಕೆ ಗಮನ ಕೊಡಲು ಸಾಧ್ಯವಾಗುತ್ತದೆ.
ಹೇಗೆ ಮಾಡಬೇಕು:
ಒಂದು ಉದ್ದೇಶ ಇರಬೇಕು. ನಿಮ್ಮ ಭಾಷಣದ ಮೂಲಕ ನೀವು ಮಾಹಿತಿಯನ್ನು ದಾಟಿಸಬೇಕಾ, ಮನವೊಲಿಸಬೇಕಾ ಅಥವಾ ಪ್ರಚೋದಿಸಬೇಕಾ ಎಂದು ಯೋಚಿಸಿ. ಅದಕ್ಕೆ ತಕ್ಕಂತೆ ಭಾಷಣವನ್ನು ನೀಡಿ. ಉದ್ದೇಶವನ್ನು ಪೂರೈಸಲು ಎಲ್ಲಾ ಮುಖ್ಯಾಂಶಗಳು ಸಹಾಯ ಮಾಡುತ್ತಿವೆಯಾ ಎಂದು ನೋಡಿ.
ಭಾಷಣದ ಮುಖ್ಯ ವಿಷಯವನ್ನು ಒತ್ತಿಹೇಳಿ. ಭಾಷಣದ ಉದ್ದಕ್ಕೂ ಆಗಾಗ ಮುಖ್ಯ ವಿಷಯಕ್ಕೆ ಸೂಚಿಸಿ ಮಾತಾಡಿ. ಇದಕ್ಕೆ ನೀವು ಮುಖ್ಯ ವಿಷಯದಲ್ಲಿರುವ ಮುಖ್ಯ ಪದಗಳನ್ನು ಪುನಃಪುನಃ ಹೇಳಬಹುದು ಅಥವಾ ಅದಕ್ಕೆ ಸಂಬಂಧಿಸಿದ ಬದಲಿ ಪದಗಳನ್ನು ಉಪಯೋಗಿಸಬಹುದು.
ಸರಳವಾಗಿ, ಸ್ಪಷ್ಟವಾಗಿ ಹೇಳಿ. ಮುಖ್ಯ ವಿಷಯಕ್ಕೆ ಸಂಬಂಧಿಸಿರುವ ಮತ್ತು ಕೊಟ್ಟಿರುವ ಸಮಯದಲ್ಲಿ ಚೆನ್ನಾಗಿ ಕಲಿಸಲು ಸಾಧ್ಯವಾಗುವ ಮುಖ್ಯಾಂಶಗಳನ್ನು ಮಾತ್ರ ಆರಿಸಿಕೊಳ್ಳಿ. ಕೆಲವು ಮುಖ್ಯಾಂಶಗಳಿದ್ದರೆ ಸಾಕು. ಒಂದೊಂದು ಮುಖ್ಯಾಂಶವನ್ನೂ ಸ್ಪಷ್ಟವಾಗಿ ಹೇಳಿ. ಒಂದರಿಂದ ಇನ್ನೊಂದಕ್ಕೆ ಹೋಗುವಾಗ ಸ್ವಲ್ಪ ಸಮಯ ಕೊಡಿ. ಒಂದರಿಂದ ಇನ್ನೊಂದಕ್ಕೆ ಹಾರಬೇಡಿ.