ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp17 ನಂ. 1 ಪು. 5-6
  • ಆಸಕ್ತಿಕರವಾಗಿ ಓದಲು ಇನ್ನೇನು ಮಾಡಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಸಕ್ತಿಕರವಾಗಿ ಓದಲು ಇನ್ನೇನು ಮಾಡಬೇಕು?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2017
  • ಅನುರೂಪ ಮಾಹಿತಿ
  • ದೈನಿಕ ಬೈಬಲ್‌ ವಾಚನದಿಂದ ಪ್ರಯೋಜನ ಪಡೆಯುವುದು
    ಕಾವಲಿನಬುರುಜು—1995
  • ಇದನ್ನೂ ನೋಡಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಬೈಬಲನ್ನ ಚೆನ್ನಾಗಿ ಅರ್ಥಮಾಡಿಕೊಳ್ಳೋದು ಹೇಗೆ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • “ಅದು ನನ್ನ ಹೃದಯದ ಶೂನ್ಯತೆಯನ್ನು ತುಂಬಿತು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2017
wp17 ನಂ. 1 ಪು. 5-6
ಸ್ತ್ರೀಯೊಬ್ಬಳು ಬೈಬಲ್‌ ಅಧ್ಯಯನ ಮಾಡುವಾಗ ಬೈಬಲ್‌ ಅಧ್ಯಯನ ಸಹಾಯಕಗಳನ್ನು ಬಳಸುತ್ತಿದ್ದಾಳೆ

ಮುಖಪುಟ ಲೇಖನ | ಬೈಬಲಿನಿಂದ ಪ್ರಯೋಜನ ಪಡೆಯಿರಿ

ಆಸಕ್ತಿಕರವಾಗಿ ಓದಲು ಏನು ಮಾಡಬೇಕು?

ಬೈಬಲ್‌ ಓದುವುದೆಂದರೆ ನಿಮಗೆ ಖುಷಿಯಾಗುತ್ತಾ? ಅಥವಾ ಬೋರಾಗುತ್ತಾ? ಈ ಪ್ರಶ್ನೆಗೆ ಉತ್ತರ, ನೀವು ಹೇಗೆ ಓದುತ್ತೀರಾ ಅನ್ನುವುದರ ಮೇಲೆ ಹೊಂದಿಕೊಂಡಿದೆ. ಆಸಕ್ತಿಕರವಾಗಿ ಮತ್ತು ಖುಷಿ ಖುಷಿಯಾಗಿ ಬೈಬಲ್‌ ಓದಲು ನೀವೇನು ಮಾಡಬಹುದು ಅಂತ ನೋಡೋಣ ಬನ್ನಿ.

ಸರಿಯಾದ ಮತ್ತು ಸರಳ ಭಾಷಾಂತರವನ್ನು ಉಪಯೋಗಿಸಿ. ಹಳೆಯ ಭಾಷೆಯ ಅಥವಾ ಕಷ್ಟದ ಪದಗಳಿರುವ ಬೈಬಲನ್ನು ಓದಿದರೆ ಸಾಕಾಗಿ ಹೋಗುತ್ತದೆ. ಆದ್ದರಿಂದ, ನಿಮಗೆ ಸುಲಭವಾಗಿ ಅರ್ಥವಾಗುವ, ನಿಮ್ಮ ಹೃದಯ ಮುಟ್ಟುವ ಭಾಷಾಂತರವನ್ನು ಹುಡುಕಿ. ಆದರೆ, ಅದು ನಿಖರವಾದ ಅಥವಾ ಸರಿಯಾದ ಭಾಷಾಂತರವಾಗಿರಬೇಕು.a

ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ. ಬೈಬಲ್‌, ಮುದ್ರಿತ ರೂಪದಲ್ಲಿ ಮಾತ್ರವೇ ಅಲ್ಲ ಎಲೆಕ್ಟ್ರಾನಿಕ್‌ ರೂಪದಲ್ಲೂ ಲಭ್ಯವಿದೆ. ಕೆಲವು ಬೈಬಲ್‌ಗಳನ್ನು ಇಂಟರ್‌ನೆಟ್‌ನಲ್ಲಿ ಓದಬಹುದು ಅಥವಾ ಡೌನ್‌ಲೋಡ್‌ ಮಾಡಿಕೊಂಡು ನಿಮ್ಮ ಮೊಬೈಲ್‌, ಟ್ಯಾಬ್‌ ಮತ್ತು ಕಂಪ್ಯೂಟರ್‌ನಲ್ಲಿ ಓದಬಹುದು. ಎಲೆಕ್ಟ್ರಾನಿಕ್‌ ರೂಪದ ಕೆಲವು ಬೈಬಲ್‌ಗಳಲ್ಲಿ ನೀವು ಓದುತ್ತಿರುವ ವಿಷಯಕ್ಕೆ ಸಂಬಂಧಪಟ್ಟ ಬೇರೆ ವಚನಗಳನ್ನು ಕ್ಷಣ ಮಾತ್ರದಲ್ಲೇ ಹುಡುಕುವ ಮತ್ತು ಬೇರೆ ಬೇರೆ ಭಾಷಾಂತರಗಳನ್ನು ಹೋಲಿಸಿ ನೋಡುವ ವೈಶಿಷ್ಟ್ಯಗಳು ಸಹ ಇರುತ್ತವೆ. ಕೆಲವು ಭಾಷೆಗಳಲ್ಲಿ ರೆಕಾರ್ಡ್‌ ಮಾಡಲಾಗಿರುವ ಬೈಬಲ್‌ಗಳೂ ಇವೆ. ಹಾಗಾಗಿ ನೀವು ಓದುವ ಬದಲು ಕೇಳಿಸಿಕೊಳ್ಳಲೂಬಹುದು. ತುಂಬ ಜನ, ಪ್ರಯಾಣಿಸುವಾಗ ಅಥವಾ ಬೇರೆ ಕೆಲಸಗಳನ್ನು ಮಾಡುವಾಗ ಕೇಳಿಸಿಕೊಳ್ಳುತ್ತಾರೆ. ಬೈಬಲ್‌ ಓದಲು ಈ ವಿಧಾನಗಳಲ್ಲಿ ನಿಮಗೆ ಸೂಕ್ತವಾದ ಯಾವುದಾದರೂ ಒಂದು ವಿಧಾನವನ್ನು ಆರಿಸಿಕೊಳ್ಳಿ.

ಅಧ್ಯಯನ ಸಹಾಯಕಗಳನ್ನು ಉಪಯೋಗಿಸಿ. ಬೈಬಲ್‌ ಓದುವುದರಿಂದ ಹೆಚ್ಚು ಪ್ರಯೋಜನ ಪಡೆಯಲು ಬೈಬಲ್‌ ಅಧ್ಯಯನ ಸಹಾಯಕಗಳು ನಿಮಗೆ ಸಹಾಯ ಮಾಡುತ್ತವೆ. ಯಾವ ಸ್ಥಳದಲ್ಲಿ ಏನಾಯಿತು ಎಂದು ಚೆನ್ನಾಗಿ ಅರ್ಥಮಾಡಿಕೊಳ್ಳಲು ಇವುಗಳಲ್ಲಿ ಬೈಬಲಿನಲ್ಲಿ ತಿಳಿಸಿರುವ ದೇಶಗಳ ಭೂಪಟಗಳಿವೆ. ಈ ಪತ್ರಿಕೆಯಲ್ಲಿರುವ ಲೇಖನಗಳು ಮತ್ತು jw.org ವೆಬ್‌ಸೈಟ್‌ನಲ್ಲಿರುವ ಇತರ ಲೇಖನಗಳು ಬೈಬಲಿನ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ.

ವಿಭಿನ್ನ ವಿಧಾನಗಳನ್ನು ಬಳಸಿ. ಬೈಬಲಿನ ಮೊದಲ ಪುಟದಿಂದ ಕೊನೆಯ ಪುಟದವರೆಗೆ ಓದುವುದು ಅಸಾಧ್ಯ ಎಂದು ನಿಮಗನಿಸಿದರೆ ಬೇರೆ ವಿಧಾನ ಬಳಸಿ. ಉದಾಹರಣೆಗೆ, ನಿಮಗಿಷ್ಟವಾದ ಬೈಬಲಿನ ಭಾಗವನ್ನು ಆರಿಸಿ ಓದಿ. ಬೈಬಲಿನಲ್ಲಿ ತಿಳಿಸಿರುವ ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ತಿಳಿಯಲು ಇಷ್ಟವಿದ್ದರೆ, ನೀವು ಅವರ ವಿವರಗಳಿರುವ ಭಾಗಗಳನ್ನು ಓದಿ. ಒಂದರ ನಂತರ ಒಂದು ವಿಷಯವನ್ನು ಓದಬಹುದು. ಇದನ್ನು ಹೇಗೆ ಮಾಡಬಹುದು ಎಂದು “ಬೈಬಲ್‌ ಬಗ್ಗೆ ಹೆಚ್ಚನ್ನು ತಿಳಿಯಲು ಅದರಲ್ಲಿನ ಜನರ ಬಗ್ಗೆ ತಿಳಿಯಿರಿ” ಎಂಬ ಚೌಕದಲ್ಲಿ ಕೊಡಲಾಗಿದೆ. ಅಥವಾ ಘಟನೆಗಳು ನಡೆದ ಕ್ರಮದಲ್ಲಿ ಓದಬಹುದು. ಇವುಗಳಲ್ಲಿ ಒಂದನ್ನು ನೀವು ಪ್ರಯತ್ನಿಸಿ ನೋಡಬಹುದಲ್ಲವೇ?

a ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ ಎಂಬ ಬೈಬಲ್‌ ನಿಖರವಾದ, ಭರವಸಾರ್ಹ ಮತ್ತು ಸರಳ ಭಾಷಾಂತರವಾಗಿದೆ ಎಂದು ತುಂಬ ಜನ ಕಂಡುಕೊಂಡಿದ್ದಾರೆ. ಈ ಬೈಬಲನ್ನು ಯೆಹೋವನ ಸಾಕ್ಷಿಗಳು ಭಾಷಾಂತರಿಸಿದ್ದು, ಇದೀಗ 130ಕ್ಕಿಂತ ಹೆಚ್ಚಿನ ಭಾಷೆಗಳಲ್ಲಿ ಲಭ್ಯವಿದೆ. jw.org ವೆಬ್‌ಸೈಟಿಂದ ಅಥವಾ JW ಲೈಬ್ರರಿ ಆ್ಯಪ್‌ನಿಂದ ನೀವು ಈ ಬೈಬಲನ್ನು ಡೌನ್‌ಲೋಡ್‌ಮಾಡಿಕೊಳ್ಳಬಹುದು. ನೀವು ಇಷ್ಟಪಟ್ಟರೆ, ಯೆಹೋವನ ಸಾಕ್ಷಿಗಳಲ್ಲೊಬ್ಬರು ನಿಮ್ಮ ಮನೆಗೆ ಬಂದು ಈ ಭಾಷಾಂತರದ ಒಂದು ಪ್ರತಿಯನ್ನು ಉಚಿತವಾಗಿ ಕೊಡುವರು.

ಬೈಬಲ್‌ ಬಗ್ಗೆ ಹೆಚ್ಚನ್ನು ತಿಳಿಯಲು ಅದರಲ್ಲಿನ ಜನರ ಬಗ್ಗೆ ತಿಳಿಯಿರಿ

ಕೆಲವು ನಂಬಿಗಸ್ತ ಸ್ತ್ರೀಯರು

ಅಬೀಗೈಲ್‌

1 ಸಮುವೇಲ ಅಧ್ಯಾಯ 25

ಎಸ್ತೇರ್‌

ಎಸ್ತೇರಳು ಅಧ್ಯಾಯ 2-5, 7-9

ಹನ್ನ

1 ಸಮುವೇಲ ಅಧ್ಯಾಯ 1-2

ಮರಿಯ

(ಯೇಸುವಿನ ತಾಯಿ) ಮತ್ತಾಯ ಅಧ್ಯಾಯ 1-2; ಲೂಕ ಅಧ್ಯಾಯ 1-2; ಇವುಗಳನ್ನು ಸಹ ನೋಡಿ: ಯೋಹಾನ 2:1-12; ಅಪೊಸ್ತಲರ ಕಾರ್ಯಗಳು 1:12-14; 2:1-4

ರಾಹಾಬ

ಯೆಹೋಶುವ ಅಧ್ಯಾಯ 2, 6; ಇವುಗಳನ್ನು ಸಹ ನೋಡಿ: ಇಬ್ರಿಯ 11:30, 31; ಯಾಕೋಬ 2:24-26

ರೆಬೆಕ್ಕ

ಆದಿಕಾಂಡ ಅಧ್ಯಾಯ 24-27

ಸಾರ

ಆದಿಕಾಂಡ ಅಧ್ಯಾಯ 17-18, 20-21, 23; ಇವುಗಳನ್ನು ಸಹ ನೋಡಿ: ಇಬ್ರಿಯ 11:11; 1 ಪೇತ್ರ 3:1-6

ಕೆಲವು ನಂಬಿಗಸ್ತ ಪುರುಷರು

ಅಬ್ರಹಾಮ

ಆದಿಕಾಂಡ ಅಧ್ಯಾಯ 11-24; ಇವುಗಳನ್ನು ಸಹ ನೋಡಿ: 25:1-11

ದಾವೀದ

1 ಸಮುವೇಲ ಅಧ್ಯಾಯ 16-30; 2 ಸಮುವೇಲ ಅಧ್ಯಾಯ 1-24; 1 ಅರಸುಗಳು ಅಧ್ಯಾಯ 1-2

ಯೇಸು

ಮತ್ತಾಯ, ಮಾರ್ಕ, ಲೂಕ ಮತ್ತು ಯೋಹಾನ

ಮೋಶೆ

ವಿಮೋಚನಕಾಂಡ ಅಧ್ಯಾಯ 2-20, 24, 32-34; ಅರಣ್ಯಕಾಂಡ ಅಧ್ಯಾಯ 11-17, 20, 21, 27, 31; ಧರ್ಮೋಪದೇಶಕಾಂಡ ಅಧ್ಯಾಯ 34

ನೋಹ

ಆದಿಕಾಂಡ ಅಧ್ಯಾಯ 5-9

ಪೌಲ

ಅಪೊಸ್ತಲರ ಕಾರ್ಯಗಳು ಅಧ್ಯಾಯ 7-9, 13-28

ಪೇತ್ರ

ಮತ್ತಾಯ ಅಧ್ಯಾಯ 4, 10, 14, 16-17, 26; ಅಪೊಸ್ತಲರ ಕಾರ್ಯಗಳು ಅಧ್ಯಾಯ 1-5, 8-12

ಯೆಹೋವನ ಸಾಕ್ಷಿಗಳು ಪ್ರಕಾಶಿಸಿದ ಬೈಬಲ್‌ ಅಧ್ಯಯನ ಸಹಾಯಕಗಳು

  • JW.ORG—ಈ ವೆಬ್‌ಸೈಟ್‌ನಲ್ಲಿ “ಬೈಬಲ್‌ ಕ್ವೆಸ್ಚನ್ಸ್‌ ಆನ್ಸರ್ಡ್‌” ಎಂಬ ವೈಶಿಷ್ಟ್ಯ ಮತ್ತು ಇತರ ಅನೇಕ ಸಹಾಯಕಗಳು ಲಭ್ಯವಿವೆ. JW ಲೈಬ್ರರಿ ಆ್ಯಪನ್ನು ಹೇಗೆ ಡೌನ್‌ಲೋಡ್‌ ಮಾಡಿಕೊಳ್ಳಬಹುದೆಂಬ ಮಾಹಿತಿ ಕೂಡ ಇದೆ

  • ‘ಒಳ್ಳೆಯ ದೇಶವನ್ನು ನೋಡಿ’— ಬೈಬಲಿನಲ್ಲಿ ಕೊಡಲಾಗಿರುವ ಸ್ಥಳಗಳ ಭೂಪಟ ಮತ್ತು ಚಿತ್ರಗಳು ಈ ಕಿರುಹೊತ್ತಗೆಯಲ್ಲಿವೆ

  • ಇನ್‌ಸೈಟ್‌ ಆನ್‌ ದಿ ಸ್ಕ್ರಿಪ್ಚರ್ಸ್‌—ಇದು ಎರಡು ಸಂಪುಟಗಳಿರುವ ಬೈಬಲಿನ ವಿಶ್ವಕೋಶ. ಇದರಲ್ಲಿ ಬೈಬಲಿನಲ್ಲಿರುವ ಜನರ, ಸ್ಥಳಗಳ ಮತ್ತು ಪದಗಳ ವಿವರಣೆ ಇದೆ

  • “ಶಾಸ್ತ್ರವೆಲ್ಲವೂ” ವಿಶ್ವಾಸಾರ್ಹ ಮತ್ತು ಪ್ರಯೋಜನಕರ—ಈ ಕಿರುಹೊತ್ತಗೆಗಳು ಬೈಬಲಿನ ಪ್ರತಿಯೊಂದು ಪುಸ್ತಕವನ್ನು ಎಲ್ಲಿ, ಯಾವಾಗ ಮತ್ತು ಯಾಕೆ ಬರೆಯಲಾಯಿತು ಎಂದು ತಿಳಿಸುತ್ತವೆ. ಜೊತೆಗೆ, ಪ್ರತಿ ಪುಸ್ತಕದ ಸಾರಾಂಶವನ್ನು ತಿಳಿಸುತ್ತವೆ

  • ಬೈಬಲಿನ ಅಧ್ಯಯನ ಕೈಪಿಡಿ—ಈ ಪುಸ್ತಿಕೆಯಲ್ಲಿ ಇಸ್ರಾಯೇಲ್ಯರ ಇತಿಹಾಸದ ಬಗ್ಗೆ, ಯೇಸುವಿದ್ದ ಸಮಯದ ಬಗ್ಗೆ ಆಸಕ್ತಿಕರ ಮಾಹಿತಿ ಹಾಗೂ ಭೂಪಟ ಇದೆ

  • ಬೈಬಲ್‌ —ಅದರಲ್ಲಿ ಏನಿದೆ?—32 ಪುಟಗಳ ಈ ಕಿರುಹೊತ್ತಗೆ ಬೈಬಲಿನ ಮುಖ್ಯ ವಿಷಯದ ಸಾರಾಂಶವನ್ನು ಕೊಡುತ್ತದೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ