ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 25:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಹಾಗಾಗಿ ನಾನು ಯೆಹೋವನ ಕೈಯಿಂದ ಆ ಬಟ್ಟಲನ್ನ ತಗೊಂಡೆ, ಯೆಹೋವ ನನ್ನನ್ನ ಯಾವ್ಯಾವ ದೇಶಗಳ ಹತ್ರ ಕಳಿಸಿದ್ನೋ ಆ ಎಲ್ಲ ದೇಶಗಳಿಗೆ ಆ ಬಟ್ಟಲಲ್ಲಿರೋದನ್ನ ಕುಡಿಸಿದೆ.+

  • ಯೆರೆಮೀಯ 25:22
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ಆಮೇಲೆ ತೂರಿನ ಎಲ್ಲ ರಾಜರಿಗೆ, ಸೀದೋನಿನ ಎಲ್ಲ ರಾಜರಿಗೆ,+ ಸಮುದ್ರದಲ್ಲಿರೋ ದ್ವೀಪದ ರಾಜರಿಗೆ ಅದನ್ನ ಕುಡಿಸಿದೆ.

  • ಯೆರೆಮೀಯ 47:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ಯಾಕಂದ್ರೆ ಆ ದಿನದಲ್ಲಿ ಎಲ್ಲ ಫಿಲಿಷ್ಟಿಯರು ನಾಶ ಆಗ್ತಾರೆ,+

      ಅದು ತೂರ್‌,+ ಸೀದೋನಿನ+ ಉಳಿದ ಎಲ್ಲ ಮಿತ್ರರಾಷ್ಟ್ರಗಳನ್ನ ನಾಶ ಮಾಡಿಬಿಡುತ್ತೆ.

      ಕಫ್ತೋರ್‌*+ ದ್ವೀಪದಿಂದ ಬಂದ ಫಿಲಿಷ್ಟಿಯರಲ್ಲಿ ಉಳಿದವ್ರನ್ನ ಯೆಹೋವ ನಾಶ ಮಾಡ್ತಾನೆ.

  • ಯೆಹೆಜ್ಕೇಲ 26:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ತೂರ್‌ ಅನ್ನೋಳೇ, ನಾನು ನಿನಗೆ ವಿರುದ್ಧವಾಗಿ ಇದ್ದೀನಿ. ಸಮುದ್ರ ಅಲೆಗಳನ್ನ ಎಬ್ಬಿಸೋ ಹಾಗೆ ನಿನ್ನ ಮೇಲೆ ದಾಳಿ ಮಾಡೋಕೆ ನಾನು ತುಂಬ ಜನಾಂಗಗಳನ್ನ ಎಬ್ಬಿಸ್ತೀನಿ.

  • ಯೆಹೆಜ್ಕೇಲ 27:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 “ಮನುಷ್ಯಕುಮಾರನೇ, ನೀನು ತೂರಿನ ಬಗ್ಗೆ ಒಂದು ಶೋಕಗೀತೆ ಹಾಡು.+

  • ಯೋವೇಲ 3:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ತೂರ್‌ ಮತ್ತು ಸೀದೋನೇ, ಫಿಲಿಷ್ಟಿಯದ ಎಲ್ಲ ಪ್ರದೇಶಗಳೇ,

      ನಿಮಗೆಷ್ಟು ಧೈರ್ಯ? ನೀವು ನನಗೇ ಹೀಗೆ ಮಾಡಿದ್ದೀರಲ್ಲ?

      ನೀವೇನು ನನಗೆ ಸೇಡು ತೀರಿಸ್ತಿದ್ದೀರಾ?

      ನೀವು ನನಗೆ ಸೇಡು ತೀರಿಸ್ತಾ ಇದ್ರೆ ಅದನ್ನ ನಿಮ್ಮ ತಲೆ ಮೇಲೆನೇ ಬರೋ ತರ ಮಾಡ್ತೀನಿ.

      ಅದು ತಕ್ಷಣ, ಬೇಗ ಬರೋ ತರ ಮಾಡ್ತೀನಿ.+

  • ಆಮೋಸ 1:9, 10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  9 ಯೆಹೋವ ಹೀಗೆ ಹೇಳ್ತಾನೆ:

      ‘ತೂರ್‌ ಪದೇಪದೇ* ದಂಗೆ ಎದ್ದಿದೆ.+ ಹಾಗಾಗಿ ಅದಕ್ಕೆ ಕೊಡಬೇಕಂತಿರೋ ಶಿಕ್ಷೆಯನ್ನ ನಾನು ತಪ್ಪಿಸೋದೇ ಇಲ್ಲ,

      ಅವರು ಸೆರೆವಾಸಿಗಳನ್ನೆಲ್ಲ ಎದೋಮಿನ ಕೈಗೊಪ್ಪಿಸಿದ್ರು,

      ಸಹೋದರರ ಒಪ್ಪಂದವನ್ನ ಅವರು ನೆನಪಿಸ್ಕೊಳ್ಳಲೇ ಇಲ್ಲ.+

      10 ಹಾಗಾಗಿ ನಾನು ತೂರಿನ ಗೋಡೆ ಮೇಲೆ ಬೆಂಕಿ ಕಳಿಸ್ತೀನಿ,

      ಆ ಬೆಂಕಿ ಅದ್ರ ಭದ್ರ ಕೋಟೆಗಳನ್ನ ಸುಟ್ಟುಬಿಡುತ್ತೆ.’+

  • ಜೆಕರ್ಯ 9:3, 4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ತೂರ್‌ ತನಗಾಗೇ ರಕ್ಷಣೆಯ ಮಣ್ಣುದಿಬ್ಬವನ್ನ* ಕಟ್ಕೊಂಡಿದೆ.

      ಅದು ಬೆಳ್ಳಿಯನ್ನ ಧೂಳಿನ ತರ ಶೇಖರಿಸಿದೆ

      ಬಂಗಾರವನ್ನ ಬೀದಿಯ ಕಸದ ತರ ಗುಡ್ಡೆಹಾಕಿದೆ.+

       4 ನೋಡು! ಯೆಹೋವ ಅದ್ರ ಆಸ್ತಿಯನ್ನ ಕಿತ್ಕೊಳ್ತಾನೆ.

      ಅದ್ರ ಸೈನ್ಯವನ್ನ ಸಮುದ್ರಕ್ಕೆ ಎಸೆದು ನಾಶ ಮಾಡ್ತಾನೆ,+

      ಅದನ್ನ ಬೆಂಕಿಯಿಂದ ಸುಟ್ಟುಬಿಡ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ