ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಪೂರ್ವಕಾಲವೃತ್ತಾಂತ 13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ಕಿರ್ಯತ್ಯಾರೀಮಿನಿಂದ ಮಂಜೂಷ ತರಲಾಯ್ತು (1-14)

        • ಉಜ್ಜನ ಸಾವು (9, 10)

1 ಪೂರ್ವಕಾಲವೃತ್ತಾಂತ 13:1

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 15:25

1 ಪೂರ್ವಕಾಲವೃತ್ತಾಂತ 13:2

ಮಾರ್ಜಿನಲ್ ರೆಫರೆನ್ಸ್

  • +ಅರ 35:2

1 ಪೂರ್ವಕಾಲವೃತ್ತಾಂತ 13:3

ಮಾರ್ಜಿನಲ್ ರೆಫರೆನ್ಸ್

  • +1ಸಮು 7:2
  • +1ಸಮು 14:18

1 ಪೂರ್ವಕಾಲವೃತ್ತಾಂತ 13:5

ಪಾದಟಿಪ್ಪಣಿ

  • *

    ಅಥವಾ “ಶೀಹೋರಿನಿಂದ.”

  • *

    ಅಥವಾ “ಹಾಮಾತಿನ ಬಾಗಿಲ ತನಕ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 6:21-7:1; 2ಸಮು 6:1, 2; 1ಪೂರ್ವ 15:3
  • +ಅರ 34:2, 8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2005, ಪು. 10

1 ಪೂರ್ವಕಾಲವೃತ್ತಾಂತ 13:6

ಪಾದಟಿಪ್ಪಣಿ

  • *

    ಬಹುಶಃ, “ಮಧ್ಯ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 25:22; ಅರ 7:89; 1ಸಮು 4:4; 2ಸಮು 6:2
  • +ಯೆಹೋ 15:9, 12

1 ಪೂರ್ವಕಾಲವೃತ್ತಾಂತ 13:7

ಮಾರ್ಜಿನಲ್ ರೆಫರೆನ್ಸ್

  • +ವಿಮೋ 37:5
  • +2ಸಮು 6:3-8

1 ಪೂರ್ವಕಾಲವೃತ್ತಾಂತ 13:8

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:20
  • +1ಪೂರ್ವ 25:1
  • +2ಪೂರ್ವ 5:13

1 ಪೂರ್ವಕಾಲವೃತ್ತಾಂತ 13:10

ಮಾರ್ಜಿನಲ್ ರೆಫರೆನ್ಸ್

  • +ಅರ 4:15
  • +ಯಾಜ 10:1, 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2005, ಪು. 26-27

1 ಪೂರ್ವಕಾಲವೃತ್ತಾಂತ 13:11

ಪಾದಟಿಪ್ಪಣಿ

  • *

    ಅಥವಾ “ಬೇಜಾರಾಯ್ತು.”

  • *

    ಅರ್ಥ “ಉಜ್ಜನ ವಿರುದ್ಧ ಸಿಡಿದ ಕಡುಕೋಪ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2005, ಪು. 11

1 ಪೂರ್ವಕಾಲವೃತ್ತಾಂತ 13:12

ಮಾರ್ಜಿನಲ್ ರೆಫರೆನ್ಸ್

  • +2ಸಮು 6:9-11

1 ಪೂರ್ವಕಾಲವೃತ್ತಾಂತ 13:14

ಮಾರ್ಜಿನಲ್ ರೆಫರೆನ್ಸ್

  • +ಆದಿ 30:27; 39:5

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಪೂರ್ವ. 13:11ಪೂರ್ವ 15:25
1 ಪೂರ್ವ. 13:2ಅರ 35:2
1 ಪೂರ್ವ. 13:31ಸಮು 7:2
1 ಪೂರ್ವ. 13:31ಸಮು 14:18
1 ಪೂರ್ವ. 13:51ಸಮು 6:21-7:1; 2ಸಮು 6:1, 2; 1ಪೂರ್ವ 15:3
1 ಪೂರ್ವ. 13:5ಅರ 34:2, 8
1 ಪೂರ್ವ. 13:6ವಿಮೋ 25:22; ಅರ 7:89; 1ಸಮು 4:4; 2ಸಮು 6:2
1 ಪೂರ್ವ. 13:6ಯೆಹೋ 15:9, 12
1 ಪೂರ್ವ. 13:7ವಿಮೋ 37:5
1 ಪೂರ್ವ. 13:72ಸಮು 6:3-8
1 ಪೂರ್ವ. 13:8ವಿಮೋ 15:20
1 ಪೂರ್ವ. 13:81ಪೂರ್ವ 25:1
1 ಪೂರ್ವ. 13:82ಪೂರ್ವ 5:13
1 ಪೂರ್ವ. 13:10ಅರ 4:15
1 ಪೂರ್ವ. 13:10ಯಾಜ 10:1, 2
1 ಪೂರ್ವ. 13:122ಸಮು 6:9-11
1 ಪೂರ್ವ. 13:14ಆದಿ 30:27; 39:5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಪೂರ್ವಕಾಲವೃತ್ತಾಂತ 13:1-14

ಒಂದನೇ ಪೂರ್ವಕಾಲವೃತ್ತಾಂತ

13 ದಾವೀದ ಸಾವಿರ ಜನ್ರ ಮೇಲೆ, ನೂರು ಜನ್ರ ಮೇಲೆ ಮುಖ್ಯಸ್ಥರಾಗಿದ್ದ+ ಎಲ್ಲ ನಾಯಕರ ಜೊತೆ ಮಾತಾಡಿದ. 2 ಆಮೇಲೆ ದಾವೀದ ಎಲ್ಲ ಇಸ್ರಾಯೇಲ್ಯರ ಮುಂದೆ ಹೀಗಂದ: “ನಿಮಗೆ ಇದು ಒಳ್ಳೇದಂತ ಅನಿಸಿದ್ರೆ, ನಮ್ಮ ದೇವರಾದ ಯೆಹೋವನಿಗೆ ಇಷ್ಟ ಇದ್ರೆ ಎಲ್ಲ ಪ್ರದೇಶಗಳಲ್ಲಿರೋ ನಮ್ಮ ಸಹೋದರರಾದ ಬೇರೆ ಇಸ್ರಾಯೇಲ್ಯರಿಗೂ, ಪುರೋಹಿತರಿಗೂ, ಹುಲ್ಲುಗಾವಲುಗಳಿರೋ ಪಟ್ಟಣಗಳಲ್ಲಿ ವಾಸ ಮಾಡ್ತಿರೋ ಲೇವಿಯರಿಗೂ+ ಸಂದೇಶ ಕಳಿಸೋಣ. ಅವರೂ ಬಂದು ನಮ್ಮ ಜೊತೆ ಸೇರಲಿ. 3 ಆಗ ನಾವು ಹೋಗಿ ದೇವರ ಮಂಜೂಷವನ್ನ+ ವಾಪಸ್‌ ತರೋಣ.” ಯಾಕಂದ್ರೆ ಸೌಲ+ ಇದ್ದಾಗ ಅವರು ಅದನ್ನ ಚೆನ್ನಾಗಿ ನೋಡ್ಕೊಳ್ಳಲಿಲ್ಲ. 4 ದಾವೀದನ ಮಾತುಗಳನ್ನ ಎಲ್ಲ ಜನ್ರೂ ಒಪ್ಪಿದ್ರು. ಯಾಕಂದ್ರೆ ಅದು ಅವ್ರಿಗೆಲ್ಲ ಸರಿ ಅನಿಸ್ತು. 5 ಹಾಗಾಗಿ ದಾವೀದ ಕಿರ್ಯತ್‌-ಯಾರೀಮಿಂದ+ ಸತ್ಯ ದೇವರ ಮಂಜೂಷವನ್ನ ತರೋಕೆ ಈಜಿಪ್ಟಿನ ನದಿಯಿಂದ* ಹಿಡಿದು ಲೆಬೋ-ಹಾಮಾತಿನ ತನಕ*+ ಇದ್ದ ಎಲ್ಲ ಇಸ್ರಾಯೇಲ್ಯರನ್ನ ಒಟ್ಟುಸೇರಿಸಿದ.

6 ಕೆರೂಬಿಯರ ಮೇಲೆ* ಕೂತಿರೋ ಸತ್ಯ ದೇವರ ಮಂಜೂಷವನ್ನ+ ಅಂದ್ರೆ ಜನ್ರು ಯಾವುದ್ರ ಮುಂದೆ ನಿಂತು ಯೆಹೋವನ ಹೆಸ್ರಲ್ಲಿ ಪ್ರಾರ್ಥನೆ ಮಾಡ್ತಿದ್ರೋ ಆ ಮಂಜೂಷವನ್ನ ಯೆಹೂದಕ್ಕೆ ಸೇರಿದ ಬಾಳಾ+ ಅನ್ನೋ ಜಾಗ ಅಂದ್ರೆ ಕಿರ್ಯತ್‌-ಯಾರೀಮಿಂದ ತಗೊಂಡು ಬರೋಕೆ ದಾವೀದ ಮತ್ತು ಇಸ್ರಾಯೇಲ್ಯರೆಲ್ಲ ಅಲ್ಲಿಗೆ ಹೋದ್ರು. 7 ಅವರು ಸತ್ಯ ದೇವರ ಮಂಜೂಷವನ್ನ ಅಬೀನಾದಾಬನ ಮನೆಯಿಂದ ತಗೊಂಡು ಬರೋಕೆ ಒಂದು ಹೊಸ ಬಂಡಿ ತಂದ್ರು.+ ಆ ಬಂಡಿಯನ್ನ ಉಜ್ಜ, ಅಹಿಯೋವ ಮುನ್ನಡಿಸ್ತಿದ್ರು.+ 8 ದಾವೀದ, ಎಲ್ಲ ಇಸ್ರಾಯೇಲ್ಯರು ಹಾಡು ಹಾಡ್ತಾ, ತಂತಿವಾದ್ಯಗಳನ್ನ, ದಮ್ಮಡಿಗಳನ್ನ,+ ಝಲ್ಲರಿಗಳನ್ನ ಬಾರಿಸ್ತಾ,+ ತುತ್ತೂರಿಗಳನ್ನ+ ಊದ್ತಾ ತಮ್ಮೆಲ್ಲ ಶಕ್ತಿಯಿಂದ ಸತ್ಯ ದೇವರ ಮುಂದೆ ಸಂತೋಷಪಡ್ತಿದ್ರು. 9 ಆದ್ರೆ ಅವರು ಕೀದೋನನ ಕಣಕ್ಕೆ ಬಂದಾಗ ಎತ್ತುಗಳು ಬಂಡಿಯನ್ನ ಇನ್ನೇನು ಮಗುಚಿ ಹಾಕುತ್ತೆ ಅನ್ನುವಾಗ ಉಜ್ಜ ಸತ್ಯ ದೇವರ ಮಂಜೂಷದ ಕಡೆಗೆ ಕೈಚಾಚಿ ಹಿಡಿದ. 10 ಆಗ ಉಜ್ಜನ ಮೇಲೆ ಯೆಹೋವನಿಗೆ ತುಂಬ ಕೋಪ ಬಂತು. ಅವನು ಕೈಚಾಚಿ ಮಂಜೂಷವನ್ನ ಹಿಡಿದಿದ್ರಿಂದ ದೇವರು ಅವನನ್ನ ಅಲ್ಲೇ ಕೊಂದುಬಿಟ್ಟನು.+ ದೇವರ ಮುಂದೆನೇ ಉಜ್ಜ ಸತ್ತುಹೋದ.+ 11 ಯೆಹೋವನ ಕೋಪ ಉಜ್ಜನ ಮೇಲೆ ಬಂದಿದ್ರಿಂದ ದಾವೀದನಿಗೆ ಸಿಟ್ಟು ಬಂತು.* ಹಾಗಾಗಿ ಆ ಜಾಗವನ್ನ ಇವತ್ತಿಗೂ ಪೆರೆಚ್‌-ಉಜ್ಜ* ಅಂತ ಕರಿತಾರೆ.

12 ಆ ದಿನ ದಾವೀದ ಸತ್ಯ ದೇವರಿಗೆ ಹೆದರಿ “ಸತ್ಯ ದೇವರ ಮಂಜೂಷವನ್ನ ನಾನು ಹೇಗೆ ತಗೊಂಡು ಹೋಗ್ಲಿ?”+ ಅಂದ. 13 ಅವನು ತಾನಿದ್ದ ದಾವೀದಪಟ್ಟಣಕ್ಕೆ ಮಂಜೂಷವನ್ನ ತಗೊಂಡು ಹೋಗಲಿಲ್ಲ. ಅದನ್ನ ಗಿತ್ತೀಯನಾದ ಓಬೇದೆದೋಮನ ಮನೆಗೆ ಕಳಿಸ್ಕೊಟ್ಟ. 14 ಸತ್ಯ ದೇವರ ಮಂಜೂಷ ಮೂರು ತಿಂಗಳು ಗಿತ್ತೀಯನಾದ ಓಬೇದೆದೋಮನ ಮನೆಯಲ್ಲೇ ಇತ್ತು. ಯೆಹೋವ ಓಬೇದೆದೋಮನನ್ನ, ಅವನಿಗಿದ್ದ ಎಲ್ಲವನ್ನ ಆಶೀರ್ವದಿಸ್ತಾ ಹೋದನು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ