ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ದಾನಿಯೇಲ 6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ದಾನಿಯೇಲ ಮುಖ್ಯಾಂಶಗಳು

      • ಪರ್ಶಿಯದ ಅಧಿಕಾರಿಗಳು ದಾನಿಯೇಲನ ವಿರುದ್ಧ ಮಾಡಿದ ಸಂಚು (1-9)

      • ದಾನಿಯೇಲ ಪ್ರಾರ್ಥನೆ ಮಾಡೋದನ್ನ ಮುಂದುವರಿಸಿದ (10-15)

      • ದಾನಿಯೇಲನನ್ನ ಸಿಂಹದ ಗುಂಡಿಗೆ ಎಸೆದ್ರು (16-24)

      • ರಾಜ ದಾರ್ಯಾವೆಷ ದಾನಿಯೇಲನ ದೇವರನ್ನ ಕೊಂಡಾಡಿದ (25-28)

ದಾನಿಯೇಲ 6:1

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 1:1; ದಾನಿ 9:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2657

    ದಾನಿಯೇಲನ ಪ್ರವಾದನೆ, ಪು. 115

ದಾನಿಯೇಲ 6:2

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 8:36; ಎಸ್ತೇ 8:9; ದಾನಿ 3:2
  • +ದಾನಿ 2:48; 5:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 115-116

ದಾನಿಯೇಲ 6:3

ಮಾರ್ಜಿನಲ್ ರೆಫರೆನ್ಸ್

  • +ದಾನಿ 1:17, 20; 5:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 116

ದಾನಿಯೇಲ 6:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 116-117, 124-125

ದಾನಿಯೇಲ 6:5

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 3:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 125

ದಾನಿಯೇಲ 6:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 117

ದಾನಿಯೇಲ 6:7

ಮಾರ್ಜಿನಲ್ ರೆಫರೆನ್ಸ್

  • +ದಾನಿ 3:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 21, 117-118, 123

    ಕಾವಲಿನಬುರುಜು,

    11/15/1996, ಪು. 8

ದಾನಿಯೇಲ 6:8

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 3:12; 8:10
  • +ಎಸ್ತೇ 1:19; 8:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 118-119

ದಾನಿಯೇಲ 6:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 119

ದಾನಿಯೇಲ 6:10

ಮಾರ್ಜಿನಲ್ ರೆಫರೆನ್ಸ್

  • +1ಅರ 8:44, 45

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2018, ಪು. 10-11

    ಕಾವಲಿನಬುರುಜು,

    9/1/2007, ಪು. 19-20

    ದಾನಿಯೇಲನ ಪ್ರವಾದನೆ, ಪು. 119, 125-126

ದಾನಿಯೇಲ 6:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 119

ದಾನಿಯೇಲ 6:12

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 8:8; ದಾನಿ 6:7, 8

ದಾನಿಯೇಲ 6:13

ಮಾರ್ಜಿನಲ್ ರೆಫರೆನ್ಸ್

  • +ದಾನಿ 1:3, 6; 2:25; 5:13
  • +ಎಸ್ತೇ 3:8; ದಾನಿ 6:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 119-120

ದಾನಿಯೇಲ 6:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 120

ದಾನಿಯೇಲ 6:15

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 8:8; ದಾನಿ 6:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 120

ದಾನಿಯೇಲ 6:16

ಮಾರ್ಜಿನಲ್ ರೆಫರೆನ್ಸ್

  • +ದಾನಿ 6:7; ಇಬ್ರಿ 11:32, 33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 120-122, 126-127

    ಕಾವಲಿನಬುರುಜು,

    11/15/1996, ಪು. 9

ದಾನಿಯೇಲ 6:18

ಪಾದಟಿಪ್ಪಣಿ

  • *

    ಬಹುಶಃ, “ಯಾವುದೇ ಸಂಗೀತಗಾರರನ್ನ ಒಳಗೆ ಸೇರಿಸಲಿಲ್ಲ.”

  • *

    ಅಕ್ಷ. “ಅವನ ನಿದ್ದೆ ಅವನನ್ನ ಬಿಟ್ಟು ಓಡಿಹೋಗಿತ್ತು.”

ದಾನಿಯೇಲ 6:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 126-127

    ಕಾವಲಿನಬುರುಜು,

    11/15/1996, ಪು. 9

ದಾನಿಯೇಲ 6:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 122-123

ದಾನಿಯೇಲ 6:22

ಮಾರ್ಜಿನಲ್ ರೆಫರೆನ್ಸ್

  • +1ಸಮು 17:37; ಇಬ್ರಿ 11:32, 33
  • +ಕೀರ್ತ 34:7; 118:5; ದಾನಿ 3:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 122-123

ದಾನಿಯೇಲ 6:23

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 37:40; ಜ್ಞಾನೋ 18:10; ದಾನಿ 3:26, 27

ದಾನಿಯೇಲ 6:24

ಪಾದಟಿಪ್ಪಣಿ

  • *

    ಅಥವಾ “ಚಾಡಿ ಹೇಳಿದ್ದ.”

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 7:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 123-124

ದಾನಿಯೇಲ 6:25

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 8:9; ದಾನಿ 4:1

ದಾನಿಯೇಲ 6:26

ಪಾದಟಿಪ್ಪಣಿ

  • *

    ಅಥವಾ “ಪರಮಾಧಿಕಾರ.”

ಮಾರ್ಜಿನಲ್ ರೆಫರೆನ್ಸ್

  • +ದಾನಿ 3:29
  • +ದಾನಿ 4:34

ದಾನಿಯೇಲ 6:27

ಮಾರ್ಜಿನಲ್ ರೆಫರೆನ್ಸ್

  • +ದಾನಿ 3:28
  • +ಯೆರೆ 32:20; ದಾನಿ 4:3

ದಾನಿಯೇಲ 6:28

ಮಾರ್ಜಿನಲ್ ರೆಫರೆನ್ಸ್

  • +ದಾನಿ 5:31; 6:1, 2
  • +2ಪೂರ್ವ 36:22, 23; ಎಜ್ರ 1:1, 2; ಯೆಶಾ 44:28

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ದಾನಿ. 6:1ಎಸ್ತೇ 1:1; ದಾನಿ 9:1
ದಾನಿ. 6:2ಎಜ್ರ 8:36; ಎಸ್ತೇ 8:9; ದಾನಿ 3:2
ದಾನಿ. 6:2ದಾನಿ 2:48; 5:29
ದಾನಿ. 6:3ದಾನಿ 1:17, 20; 5:12
ದಾನಿ. 6:5ಎಸ್ತೇ 3:8
ದಾನಿ. 6:7ದಾನಿ 3:6
ದಾನಿ. 6:8ಎಸ್ತೇ 3:12; 8:10
ದಾನಿ. 6:8ಎಸ್ತೇ 1:19; 8:8
ದಾನಿ. 6:101ಅರ 8:44, 45
ದಾನಿ. 6:12ಎಸ್ತೇ 8:8; ದಾನಿ 6:7, 8
ದಾನಿ. 6:13ದಾನಿ 1:3, 6; 2:25; 5:13
ದಾನಿ. 6:13ಎಸ್ತೇ 3:8; ದಾನಿ 6:10
ದಾನಿ. 6:15ಎಸ್ತೇ 8:8; ದಾನಿ 6:8
ದಾನಿ. 6:16ದಾನಿ 6:7; ಇಬ್ರಿ 11:32, 33
ದಾನಿ. 6:221ಸಮು 17:37; ಇಬ್ರಿ 11:32, 33
ದಾನಿ. 6:22ಕೀರ್ತ 34:7; 118:5; ದಾನಿ 3:28
ದಾನಿ. 6:23ಕೀರ್ತ 37:40; ಜ್ಞಾನೋ 18:10; ದಾನಿ 3:26, 27
ದಾನಿ. 6:24ಎಸ್ತೇ 7:10
ದಾನಿ. 6:25ಎಸ್ತೇ 8:9; ದಾನಿ 4:1
ದಾನಿ. 6:26ದಾನಿ 3:29
ದಾನಿ. 6:26ದಾನಿ 4:34
ದಾನಿ. 6:27ದಾನಿ 3:28
ದಾನಿ. 6:27ಯೆರೆ 32:20; ದಾನಿ 4:3
ದಾನಿ. 6:28ದಾನಿ 5:31; 6:1, 2
ದಾನಿ. 6:282ಪೂರ್ವ 36:22, 23; ಎಜ್ರ 1:1, 2; ಯೆಶಾ 44:28
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ದಾನಿಯೇಲ 6:1-28

ದಾನಿಯೇಲ

6 ದಾರ್ಯಾವೆಷ ಇಡೀ ಸಾಮ್ರಾಜ್ಯದ ಮೇಲೆ 120 ದೇಶಾಧಿಪತಿಗಳನ್ನ ನೇಮಿಸಬೇಕಂತ ನಿರ್ಧರಿಸಿದ.+ 2 ತನಗೆ ಯಾವುದೇ ನಷ್ಟ ಆಗಬಾರದು ಅಂತ ರಾಜ ಈ ದೇಶಾಧಿಪತಿಗಳ+ ಮೇಲೆ ಮೂರು ದೊಡ್ಡ ಅಧಿಕಾರಿಗಳನ್ನ ಇಟ್ಟ. ಆ ಮೂರು ಜನ್ರಲ್ಲಿ ದಾನಿಯೇಲ ಒಬ್ಬ.+ 3 ದಾನಿಯೇಲನಿಗೆ ಅದ್ಭುತ ಬುದ್ಧಿಶಕ್ತಿ ಇತ್ತು. ಬೇರೆ ದೊಡ್ಡ ಅಧಿಕಾರಿಗಳಿಗಿಂತ, ದೇಶಾಧಿಪತಿಗಳಿಗಿಂತ ತುಂಬ ಸಮರ್ಥ ಅಂತ ತೋರಿಸ್ಕೊಟ್ಟ.+ ಹಾಗಾಗಿ ರಾಜನು ದಾನಿಯೇಲನಿಗೆ ಇಡೀ ಸಾಮ್ರಾಜ್ಯದ ಮೇಲೆ ಅಧಿಕಾರ ಕೊಡೋಕೆ ತೀರ್ಮಾನಿಸಿದ.

4 ಅದೇ ಸಮಯದಲ್ಲಿ ದೊಡ್ಡ ಅಧಿಕಾರಿಗಳು, ದೇಶಾಧಿಪತಿಗಳು ಸಾಮ್ರಾಜ್ಯದ ಕೆಲಸಕಾರ್ಯಗಳ ವಿಷ್ಯದಲ್ಲಿ ದಾನಿಯೇಲನ ಮೇಲೆ ದೂರು ಹೊರಿಸೋಕೆ ಸರಿಯಾದ ಅವಕಾಶಕ್ಕಾಗಿ ಕಾಯ್ತಾ ಇದ್ರು. ಆದ್ರೆ ಅವನ ಮೇಲೆ ದೂರು ಹೊರಿಸೋಕೆ ಯಾವುದೇ ಕಾರಣ ಸಿಗಲಿಲ್ಲ, ಅವನು ಭ್ರಷ್ಟಾಚಾರದಿಂದ ನಡ್ಕೊಂಡಿರಲಿಲ್ಲ. ಯಾಕಂದ್ರೆ ಅವನು ತನ್ನ ಕೆಲಸನ ನಿಯತ್ತಿಂದ, ನಂಬಿಗಸ್ತಿಕೆಯಿಂದ ಮಾಡ್ತಿದ್ದ. ಯಾವುದೇ ರೀತಿ ಮೋಸ ಮಾಡ್ತಿರಲಿಲ್ಲ. 5 ಆಮೇಲೆ ಅವರು ಹೀಗೆ ಮಾತಾಡ್ಕೊಂಡ್ರು: “ದಾನಿಯೇಲನ ಕೆಲಸಕಾರ್ಯಗಳ ವಿಷ್ಯದಲ್ಲಿ ಅವನ ಮೇಲೆ ದೂರು ಹೊರಿಸೋಕೆ ನಮಗೆ ಯಾವುದೇ ಕಾರಣ ಸಿಗಲ್ಲ. ಅದಕ್ಕೆ ಅವನ ಮೇಲೆ ದೂರು ಹೊರಿಸೋಕೆ ಅವನ ಧರ್ಮಕ್ಕೆ ಸಂಬಂಧಪಟ್ಟ ಕಾರಣ ಹುಡುಕಬೇಕು.”+

6 ಹಾಗಾಗಿ ಈ ದೊಡ್ಡ ಅಧಿಕಾರಿಗಳು, ದೇಶಾಧಿಪತಿಗಳು ಸೇರ್ಕೊಂಡು ರಾಜನ ಹತ್ರ ಹೋಗಿ “ರಾಜ ದಾರ್ಯಾವೆಷನೇ, ಚಿರಂಜೀವಿಯಾಗಿರು. 7 ಒಂದು ರಾಜಾಜ್ಞೆ ತರಬೇಕು, ಒಂದು ನಿಷೇಧ ಹಾಕಬೇಕು ಅಂತ ಆಸ್ಥಾನದ ಅಧಿಕಾರಿಗಳು, ಮುಖ್ಯಸ್ಥರು, ದೇಶಾಧಿಪತಿಗಳು, ಆಸ್ಥಾನದ ದೊಡ್ಡ ಅಧಿಕಾರಿಗಳು, ರಾಜ್ಯಪಾಲರೆಲ್ಲ ಸೇರಿ ಯೋಚಿಸಿದ್ದೀವಿ. ರಾಜ, ಆ ರಾಜಾಜ್ಞೆ ಏನಂದ್ರೆ 30 ದಿನದ ತನಕ ಯಾರಾದ್ರೂ ನಿನ್ನನ್ನ ಬಿಟ್ಟು ಬೇರೆ ದೇವರನ್ನಾಗಲಿ, ಮನುಷ್ಯನನ್ನಾಗಲಿ ಬೇಡ್ಕೊಂಡ್ರೆ ಅವ್ರನ್ನ ಸಿಂಹಗಳ ಗುಂಡಿಗೆ ಹಾಕಬೇಕು.+ 8 ರಾಜನೇ, ಈ ಆಜ್ಞೆ ಜಾರಿ ಮಾಡು, ಇದಕ್ಕೆ ಸಹಿಹಾಕು.+ ಆಗ ಅದನ್ನ ಮೇದ್ಯರ ಮತ್ತು ಪರ್ಶಿಯನ್ನರ ನಿಯಮದ ಪ್ರಕಾರ ಯಾರಿಂದ್ಲೂ ಬದಲಾಯಿಸೋಕೆ ಆಗಲ್ಲ. ರದ್ದು ಮಾಡೋಕೆ ಆಗಲ್ಲ”+ ಅಂದ್ರು.

9 ಹಾಗಾಗಿ ರಾಜ ದಾರ್ಯಾವೆಷ ಆ ಆಜ್ಞೆ, ನಿಷೇಧದ ಮೇಲೆ ಸಹಿಹಾಕಿದ.

10 ಆ ಆಜ್ಞೆಗೆ ಸಹಿಹಾಕಿರೋದು ದಾನಿಯೇಲನಿಗೆ ಗೊತ್ತಾದ ತಕ್ಷಣ, ಅವನು ತನ್ನ ಮನೆಗೆ ಹೋದ. ಮಹಡಿಯ ಮೇಲೆ ಇರೋ ಕೋಣೆಯ ಕಿಟಕಿಗಳು ಯೆರೂಸಲೇಮಿನ ಕಡೆ ತೆರೆದಿತ್ತು.+ ಅವನು ಯಾವಾಗ್ಲೂ ಮಾಡ್ತಿದ್ದ ಹಾಗೇ ದಿನಕ್ಕೆ ಮೂರು ಸಾರಿ ಮಂಡಿಯೂರಿ ತನ್ನ ದೇವರಿಗೆ ಪ್ರಾರ್ಥನೆ ಮಾಡಿ ಹೊಗಳಿದ. 11 ಅದೇ ಸಮಯದಲ್ಲಿ ಆ ಗಂಡಸ್ರು ಒಳಗೆ ನುಗ್ಗಿ, ದಾನಿಯೇಲ ತನ್ನ ದೇವರ ಮುಂದೆ ಬೇಡ್ಕೊಳ್ಳೋದನ್ನ, ಕೃಪೆಗಾಗಿ ಪ್ರಾರ್ಥಿಸೋದನ್ನ ನೋಡಿದ್ರು.

12 ಆಮೇಲೆ ಅವರು ರಾಜನ ಹತ್ರ ಬಂದು, ಅವನು ಹಾಕಿದ ನಿಷೇಧದ ಬಗ್ಗೆ ನೆನಪಿಸ್ತಾ “ರಾಜ, 30 ದಿನ ತನಕ ಯಾರಾದ್ರೂ ನಿನ್ನನ್ನ ಬಿಟ್ಟು ಬೇರೆ ದೇವರನ್ನಾಗಲಿ, ಮನುಷ್ಯನನ್ನಾಗಲಿ ಬೇಡ್ಕೊಂಡ್ರೆ ಅವರನ್ನ ಸಿಂಹಗಳ ಗುಂಡಿಗೆ ಹಾಕಬೇಕು ಅನ್ನೋ ನಿಷೇಧದ ಮೇಲೆ ನೀನು ಸಹಿಹಾಕಿದ್ದೆ ಅಲ್ವಾ” ಅಂತ ಕೇಳಿದ್ರು. ಅದಕ್ಕೆ ರಾಜ “ಹೌದು ಮಾಡಿದ್ದೆ. ಮೇದ್ಯರ ಮತ್ತು ಪರ್ಶಿಯನ್ನರ ನಿಯಮ ಯಾರಿಂದ್ಲೂ ಬದಲಾಯಿಸೋಕೆ ಆಗಲ್ಲ. ಹಾಗಾಗಿ ಈ ಆಜ್ಞೆಯನ್ನ ಯಾರು ಸಹ ರದ್ದು ಮಾಡೋಕೆ ಆಗಲ್ಲ”+ ಅಂದ. 13 ಕೂಡ್ಲೇ ಅವರು ರಾಜನಿಗೆ “ಯೆಹೂದದಿಂದ ಕೈದಿಯಾಗಿ ಬಂದಿದ್ದ ದಾನಿಯೇಲ+ ನಿನಗಾಗಲಿ, ನೀನು ಸಹಿಹಾಕಿದ ನಿಷೇಧಕ್ಕಾಗಲಿ ಗೌರವ ತೋರಿಸ್ತಿಲ್ಲ. ಅವನು ದಿನಕ್ಕೆ ಮೂರು ಸಾರಿ ತನ್ನ ದೇವರಿಗೆ ಪ್ರಾರ್ಥನೆ ಮಾಡ್ತಾನೆ”+ ಅಂದ್ರು. 14 ಈ ವಿಷ್ಯ ಕೇಳಿಸ್ಕೊಂಡ ಕೂಡ್ಲೇ ರಾಜನಿಗೆ ತುಂಬ ಬೇಜಾರಾಯ್ತು. ದಾನಿಯೇಲನನ್ನ ಕಾಪಾಡೋಕೆ ಏನಾದ್ರೂ ದಾರಿ ಇದ್ಯಾ ಅಂತ ಯೋಚ್ನೆ ಮಾಡ್ದ. ಅವನನ್ನ ಕಾಪಾಡೋಕೆ ಸೂರ್ಯ ಮುಳುಗೋ ತನಕ ಎಲ್ಲ ಪ್ರಯತ್ನ ಮಾಡಿದ. 15 ಕೊನೆಗೆ ಆ ಗಂಡಸ್ರು ರಾಜನ ಮುಂದೆ ಬಂದು “ರಾಜ, ಮೇದ್ಯರ ಮತ್ತು ಪರ್ಶಿಯನ್ನರ ನಿಯಮದ ಪ್ರಕಾರ ರಾಜ ಏನಾದ್ರೂ ನಿಷೇಧ ಹಾಕಿದ್ರೆ, ಆಜ್ಞೆ ಕೊಟ್ರೆ ಯಾರಿಗೂ ಬದಲಾಯಿಸೋಕೆ ಆಗಲ್ಲ ಅಂತ ಮರಿಬೇಡ”+ ಅಂದ್ರು.

16 ಆಗ ರಾಜ ಆಜ್ಞೆ ಕೊಟ್ಟುಬಿಟ್ಟ. ದಾನಿಯೇಲನನ್ನ ಕರ್ಕೊಂಡು ಹೋಗಿ ಸಿಂಹಗಳ ಗುಂಡಿಗೆ ಎಸೆದ್ರು.+ ರಾಜ ದಾನಿಯೇಲನಿಗೆ “ನೀನು ಯಾವಾಗ್ಲೂ ಆರಾಧಿಸೋ ನಿನ್ನ ದೇವರು ನಿನ್ನನ್ನ ಕಾಪಾಡ್ತಾನೆ” ಅಂದ. 17 ಆಮೇಲೆ ಒಂದು ಕಲ್ಲು ತಂದು ಗುಂಡಿ ಬಾಯಿ ಮುಚ್ಚಿದ್ರು. ದಾನಿಯೇಲನ ವಿಷ್ಯದಲ್ಲಿ ಯಾವುದೇ ಬದಲಾವಣೆ ಆಗಬಾರದು ಅಂತ ರಾಜ ಆ ಕಲ್ಲಿನ ಮೇಲೆ ತನ್ನ, ತನ್ನ ಪ್ರಧಾನರ ಮುದ್ರೆ ಉಂಗುರದಿಂದ ಮುದ್ರೆ ಒತ್ತಿದ.

18 ಆಮೇಲೆ ರಾಜ ಅರಮನೆಗೆ ಹೋದ. ಅವನು ಉಪವಾಸ ಮಾಡ್ತಾ ಆ ರಾತ್ರಿ ಕಳೆದ. ಯಾವ ಮನರಂಜನೆಯನ್ನೂ ಬೇಡ ಅಂದುಬಿಟ್ಟ.* ಅವನಿಗೆ ಆ ರಾತ್ರಿ ನಿದ್ದೆ ಬರಲಿಲ್ಲ.* 19 ಇನ್ನೂ ಬೆಳಗಾಗ್ತಾ ಇರುವಾಗ್ಲೇ ಎದ್ದು ಸಿಂಹಗಳ ಗುಂಡಿ ಹತ್ರ ಗಡಿಬಿಡಿಯಿಂದ ಓಡಿದ. 20 ಹತ್ರ ಹೋದ ಕೂಡ್ಲೇ, ತುಂಬ ಬೇಜಾರಿಂದ ದಾನಿಯೇಲನನ್ನ ಕೂಗ್ತಾ “ದಾನಿಯೇಲ, ಜೀವ ಇರೋ ದೇವರ ಸೇವಕ, ನೀನು ಯಾವಾಗ್ಲೂ ಆರಾಧಿಸ್ತಿದ್ದ ನಿನ್ನ ದೇವರು ನಿನ್ನನ್ನ ಸಿಂಹಗಳಿಂದ ಕಾಪಾಡಿದ್ನಾ?” ಅಂತ ಕೇಳಿದ. 21 ತಕ್ಷಣ ದಾನಿಯೇಲ ರಾಜನಿಗೆ “ರಾಜ, ಚಿರಂಜೀವಿಯಾಗಿರು. 22 ನನ್ನ ದೇವರು ತನ್ನ ದೂತರನ್ನ ಕಳಿಸಿ ಸಿಂಹಗಳ ಬಾಯಿ ಮುಚ್ಚಿದನು.+ ಅವುಗಳು ನನಗೆ ಏನೂ ಮಾಡಿಲ್ಲ.+ ಯಾಕಂದ್ರೆ ನಾನು ಆತನ ಮುಂದೆ ತಪ್ಪು ಮಾಡಿಲ್ಲ. ಅಷ್ಟೇ ಅಲ್ಲ, ನಿನ್ನ ವಿರುದ್ಧನೂ ತಪ್ಪು ಮಾಡಿಲ್ಲ” ಅಂದ.

23 ಅದನ್ನ ಕೇಳಿ ರಾಜನಿಗೆ ತುಂಬ ಖುಷಿ ಆಯ್ತು. ಅವನು ದಾನಿಯೇಲನನ್ನ ಗುಂಡಿಯಿಂದ ಮೇಲಕ್ಕೆ ಎತ್ತೋಕೆ ಹೇಳಿದ. ಆಗ ಅವನನ್ನ ಗುಂಡಿಯಿಂದ ಮೇಲಕ್ಕೆ ಎತ್ತಿದ್ರು. ಅವನ ಮೈ ಮೇಲೆ ಒಂದೇ ಒಂದು ಚಿಕ್ಕ ಗಾಯನೂ ಇರಲಿಲ್ಲ. ಯಾಕಂದ್ರೆ ಅವನು ತನ್ನ ದೇವರಲ್ಲಿ ನಂಬಿಕೆ ಇಟ್ಟಿದ್ದ.+

24 ಆಮೇಲೆ ರಾಜನ ಆಜ್ಞೆ ಪ್ರಕಾರ, ದಾನಿಯೇಲನ ಮೇಲೆ ಆರೋಪ ಹೊರಿಸಿದ್ದ* ಗಂಡಸ್ರನ್ನ ಕರ್ಕೊಂಡು ಬಂದ್ರು. ಅವ್ರನ್ನ ಅವ್ರ ಹೆಂಡತಿ ಮಕ್ಕಳ ಸಮೇತ ಸಿಂಹಗಳ ಗುಂಡಿಗೆ ಎಸೆದ್ರು. ಅವರು ಇನ್ನೂ ಗುಂಡಿ ತಳ ಮುಟ್ಟೋ ಮುಂಚೆನೇ ಸಿಂಹಗಳು ಅವ್ರ ಮೇಲೆ ದಾಳಿ ಮಾಡಿ, ಅವ್ರ ಮೂಳೆಗಳನ್ನ ಚೂರುಚೂರು ಮಾಡಿದ್ವು.+

25 ಆಮೇಲೆ ರಾಜ ದಾರ್ಯಾವೆಷ ಭೂಮಿಯಲ್ಲಿರೋ ಎಲ್ಲ ಜನ್ರಿಗೆ, ದೇಶಗಳಿಗೆ, ಬೇರೆಬೇರೆ ಭಾಷೆ ಮಾತಾಡೋ ಗುಂಪುಗಳಿಗೆ ಈ ಸಂದೇಶ ಕಳಿಸಿದ:+ “ನಿಮಗೆ ಒಳ್ಳೇದಾಗ್ಲಿ! 26 ನನ್ನ ಸಾಮ್ರಾಜ್ಯದಲ್ಲಿರೋ ಎಲ್ಲ ಜನ್ರು ದಾನಿಯೇಲನ ದೇವರ ಮುಂದೆ ಭಯದಿಂದ ನಡುಗಬೇಕಂತ ನಾನು ಅಪ್ಪಣೆ ಕೊಡ್ತಾ ಇದ್ದೀನಿ.+ ಯಾಕಂದ್ರೆ ಆತನು ಜೀವ ಇರೋ ದೇವರು, ಸದಾಕಾಲ ಇರೋ ದೇವರು. ಆತನ ಸಾಮ್ರಾಜ್ಯ ಯಾವತ್ತೂ ನಾಶ ಆಗಲ್ಲ. ಆತನ ಆಡಳಿತ* ಶಾಶ್ವತವಾಗಿ ಇರುತ್ತೆ.+ 27 ಆತನು ತನ್ನ ಜನ್ರನ್ನ ಬಿಡಿಸ್ತಾನೆ,+ ಕಾಪಾಡ್ತಾನೆ. ಆಕಾಶದಲ್ಲೂ ಭೂಮಿಯಲ್ಲೂ ಸೂಚಕಕಾರ್ಯಗಳನ್ನ, ಅದ್ಭುತಗಳನ್ನ ಮಾಡ್ತಾನೆ.+ ಆತನೇ ದಾನಿಯೇಲನನ್ನ ಸಿಂಹಗಳ ಕೈಯಿಂದ ತಪ್ಪಿಸಿದನು.”

28 ಹೀಗೆ ದಾನಿಯೇಲ ದಾರ್ಯಾವೆಷನ+ ಸಾಮ್ರಾಜ್ಯದಲ್ಲಿ, ಪರ್ಶಿಯದವನಾದ ಕೋರೆಷನ+ ಸಾಮ್ರಾಜ್ಯದಲ್ಲಿ ಅಭಿವೃದ್ಧಿ ಹೊಂದಿದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ