ಬಿಸಾಡಲೆಂದು ತಯಾರಿಸಿದ ವಸ್ತು ತೊಲಗಿಸಸಾಧ್ಯವಿಲ್ಲದ ಕಸವಾಗುತ್ತದೆ
ಕಸದ ಬಿಕ್ಕಟ್ಟು ಮತ್ತು ಅದಕ್ಕೆ ಸಹಾಯ ಮಾಡುವ ವಿಷಯವನ್ನು ಗಣನೆಗೆ ತೆಗೆದುಕೊಳ್ಳದಿರುವುದು ನಮ್ಮ ಬಿಸಾಡುವ ಸಮಾಜದ ಆಚಾರಗಳನ್ನು ಅಸಡ್ಡೆ ಮಾಡಿದಂತೆ. ದೃಷ್ಟಾಂತಕ್ಕೆ, ಅಡುಗೆ ಕೋಣೆಯಲ್ಲಿರುವ ಪೇಪರ್ ಟವಲು ಬಟ್ಟೆಯದ್ದಕ್ಕಿಂತ ಹೆಚ್ಚು ಆಕರ್ಷಣೀಯವಾಗಿ ಕಾಣುತ್ತದೆಯೆ? ಊಟದ ಸಮಯದಲ್ಲಿ, ಬಟ್ಟೆಯ ನ್ಯಾಪ್ಕಿನಿನ ಬದಲು ಪೇಪರನ್ನು ನೀವು ಉಪಯೋಗಿಸುತ್ತೀರಾ? ಡಾಯಪರ್ ಚೌಕ ಕಟ್ಟುವ ಕೂಸು ನಿಮಗಿರುವಲ್ಲಿ, ಬಟ್ಟೆಯ ಚೌಕದ ಬದಲು ಬಿಸಾಡಲಾಗುವ ಚೌಕವನ್ನು ಬಳಸುತ್ತೀರಾ? ಬಿಸಾಡಸಾಧ್ಯವಿರುವ ರೇಸರ್ ಮತ್ತು ಕ್ಯಾಮರಗಳನ್ನು ಖರೀದಿಸುವುದು ತೀರಾ ಅನುಕೂಲವೆಂದು ನೀವು ಕಂಡುಹಿಡಿದಿದ್ದೀರಾ? ಇಂದಿನ ಯುವ ಜನರಲ್ಲಿ ಫೌಂಟನ್ ಪೆನ್ನಿನಲ್ಲಿ ಬರೆದಿರುವವರು ವಿರಳ; ಬಿಸಾಡಸಾಧ್ಯವಿರುವ ಅಥವಾ ಬಿಸಾಡುವ ಕಾರ್ಟ್ರಿಜ್ ಇರುವ ಬಾಲ್ಪಾಯಿಂಟ್ ಪೆನ್ನುಗಳು ಅದರ ಸ್ಥಾನವನ್ನು ಆಕ್ರಮಿಸಿವೆ. ವ್ಯಾಪಾರ ಸಂಸ್ಥೆಗಳು ಸಾವಿರಾರು ಬಾಲ್ಪಾಯಿಂಟ್ ಪೆನ್ನುಗಳಿಗಾಗಿ ಆರ್ಡರ್ ಕೊಡುತ್ತವೆ. ಜಾಹೀರಾತುಗಾರರು ಲಕ್ಷಗಟ್ಟಲೆಯಲ್ಲಿ ಅವನ್ನು ಹಂಚುತ್ತಾರೆ.
ಚಹಾ, ಕಾಫಿ, ಕೋಲ, ಮಿಲ್ಕ್ ಷೇಕ್ ಮತ್ತು ಫಾಸ್ಟ್ ಫುಡ್ ಹ್ಯಾಂಬರ್ಗರ್ಗಳಿಗೆ ಹೊರಗಿಂದ ಬರುವ ಆರ್ಡರ್ಗಳನ್ನು ಈಗ ಪೇಪರ್ ಟ್ರೇಯ ಮೇಲೆ ಪೇಪರ್ ಪಾತ್ರೆಗಳಲ್ಲಿ ಕಳುಹಿಸಲಾಗುವುದಿಲ್ಲ. ಪ್ಲಾಸಿಕ್ಟ್ ಪಾತ್ರೆಗಳು ಅವುಗಳನ್ನು ಲುಪ್ತ ಮಾಡಿವೆ. ಒಮ್ಮೆ ಉಪಯೋಗಿಸಿದ ನಂತರ ಎಲ್ಲವನ್ನು ಕಸವಾಗಿ ಎಸೆಯಲಾಗುವ ಪ್ಲಾಸಿಕ್ಟ್ ಚೂರಿ, ಮುಳ್ಳು ಚಮಚ ಮತ್ತು ಚಮಚಗಳಿವೆ. ಬಿಸಾಡಲು ಅನುಕೂಲವಾಗಿರುವ ವಸ್ತುಗಳ ಸಂಖ್ಯೆ ಮತ್ತು ವೈವಿಧ್ಯ ಅನಂತ. ನ್ಯೂ ಯಾರ್ಕ್ ಸೇಟ್ಟಿನ ಸಾಲಿಡ್ ವೇಸ್ಟ್ ವಿಭಾಗದ ಡೈರೆಕ್ಟರು ಹೇಳಿದ್ದು: “ನಾವು ಬಿಸಾಡಿ ಬಿಡುವ ಸಮಾಜ. ನಮ್ಮ ಮಾರ್ಗಗಳನ್ನು ಬದಲಾಯಿಸಲೇ ಬೇಕು.”
ಗಾಜಿನ ಬದಲಿಗೆ ಪ್ಲಾಸಿಕ್ಟ್ ಹಾಲಿನ ಸೀಸೆ; ಚರ್ಮ ಮತ್ತು ರಬ್ಬರಿನ ಬದಲು ಪ್ಲಾಸಿಕ್ಟ್ ಪಾದರಕ್ಷೆ; ಪ್ರಾಕೃತಿಕ ದಾರಗಳಿಂದ ಮಾಡಿದ ರೆಯ್ನ್ ಕೋಟಿನ ಬದಲು ಪ್ಲಾಸಿಕ್ಟ್ ರೆಯ್ನ್ ಕೋಟು— ಇವುಗಳ ವಿಷಯ ಏನು ಹೇಳಬಹುದು? ಹಲವು ವಾಚಕರು, ಪ್ಲಾಸಿಕ್ಟ್ ಯುಗಕ್ಕೆ ಮೊದಲು ಜಗತ್ತು ಹೇಗೆ ನಡೆಯುತ್ತಿತ್ತೆಂದು ಯೋಚಿಸಬಹುದು. ಸೂಪರ್ ಮಾರ್ಕೆಟುಗಳಲ್ಲಿ ಯಾ ವಸ್ತುಗಳಿಂದ ತುಂಬಿಸಿದ ಪಾತ್ರೆಗಳನ್ನು ಮಾರುವ ಸ್ಥಳಗಳಲ್ಲಿ ಒಂದರ ಹಿಂದೆ ಒಂದು ಸಾಲು ಸಾಲಾಗಿ ದೊಡ್ಡ ಪಾತ್ರೆಗಳಲ್ಲಿ ನಿಂತು ನಿಮ್ಮನ್ನು ಕೂಗಿ ಕರೆಯುವ ವಸ್ತುಗಳನ್ನು ಗಮನಿಸಿರಿ. ಕೋಟ್ಯಂತರ ಪುಟ ಕಾಗದಗಳನ್ನು ಕಕ್ಕುವ ಈ ಕಂಪ್ಯೂಟರ್ ಯುಗ ಆಗಲೆ ಪರ್ವತದಷ್ಟು ಎತ್ತರವಿರುವ ಕಾಗದ ರಾಶಿಗೆ ತನ್ನದನ್ನು ಸೇರಿಸುತ್ತದೆ.
ಈ ಹೆಚ್ಚುತ್ತಿರುವ ಕಸದ ಸಮಸ್ಯೆಯಿಂದ ತುಸು ಉಪಶಮನ ಪಡೆಯಲು ನಾವೆಷ್ಟು ಅನನುಕೂಲತೆಯನ್ನು ತಾಳಬಯಸುತ್ತೇವೆ? ಅಮೆರಿಕನರು ತಮ್ಮ ಕಸಕ್ಕೆ ಸರಾಸರಿ ದಿವಸದಲ್ಲಿ 43 ಲಕ್ಷ ಬಿಸಾಡಬಹುದಾದ ಪೆನ್ನುಗಳು ಮತ್ತು 54 ಲಕ್ಷ ಬಿಸಾಡಬಹುದಾದ ರೇಸರ್ಗಳನ್ನು ಎಸೆದರೂ, ಈ ಸಮಾಜವು, ಈ ಅನುಕೂಲತೆಗಳಿಗೆ ನಾವು ತತ್ತರಗೊಳಿಸುವಷ್ಟು ಬೆಲೆ ತೆರಬೇಕಾಗಿ ಬಂದರೂ, ಪಾಸ್ಟಿಕ್ ಮತ್ತು ಎಸೆಯಬಹುದಾದ ವಸ್ತುಗಳನ್ನು ಮಾಡುವ ಉಚ್ಚ ಯಂತ್ರಕಲೆಯ ಈ ಯುಗಕ್ಕಿಂತ ಅರ್ಧ ಶತಕ ಹಿಂದೆ ಸರಿಯುವುದು ಅಸಂಭವನೀಯ.
ಬಿಸಾಡಬಹುದಾದ ಕೂಸುಚೌಕದ ವಿಷಯದಲ್ಲೂ ಇದನ್ನೆ ಹೇಳಬಹುದು. ದ ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡಿದ್ದು: “ಕಡಮೆಯಾಗುತ್ತಿರುವ ಕಸದ ತಿಪ್ಪೆಗಳಲ್ಲಿ ರಾಷ್ಟ್ರವ್ಯಾಪಕವಾಗಿ, ಪ್ರತಿ ವರ್ಷ, 28 ಲಕ್ಷ ಟನ್ನು ಮಲ, ಮೂತ್ರ ತುಂಬಿದೆಯೆಂದು ಅಂದಾಜಾಗಿರುವ 1600 ಕೋಟಿ ಕೂಸುಚೌಕಗಳನ್ನು ಎಸೆಯಲಾಗುತ್ತದೆ.” 42,75,000 ಕ್ಕೂ ಹೆಚ್ಚು ಟನ್ನು ಕಳಚಿದ ಡಾಯಪರ್ ಎಂದು ಹೇಳುವಾಗ ಅತ್ಯಾಶ್ಚರ್ಯವಾಗಬಹುದು. ವಾಷಿಂಗ್ಟನ್ನಲ್ಲಿ ಸಾಲಿಡ್ ವೇಸಿನ್ಟ ಪರಿಣತನೊಬ್ಬರು ಹೇಳಿದ್ದು: “ಪುನರುಪಯೋಗಿಸಬಹುದಾದ ವಸ್ತುವಿನ ಬದಲು ಹೆಚ್ಚು ಬೆಲೆ ತಗಲುವ, ಪರಿಸರೀಯವಾಗಿ ಹೆಚ್ಚು ಅಪಾಯಕಾರಿಯಾದ ಮತ್ತು ನವೀಕರಿಸಲಾಗದ ಸಂಪನ್ಮೂಲಗಳನ್ನು ಉಪಯೋಗಿಸುವ ಎಸೆಯಬಹುದಾದ ವಸ್ತುವನ್ನು ನಾವು ಉಪಯೋಗಿಸುವುದಕ್ಕೆ ಇದೊಂದು ಅನ್ಯೂನ ಮಾದರಿ.” ತಮ್ಮ ಶಿಶುಗಳ ಚೌಕಗಳನ್ನು ತೊಳೆಯುವ ಯಾ ಒಂದು ಡೆಲಿವರಿ ಸರ್ವಿಸಿಗೆ ಚಂದಾ ನೀಡುವ ಅನನುಕೂಲತೆಗಳನ್ನು ಹೆತ್ತ,ವರು ಸಹಿಸುವರೊ? ಅನೇಕರಿಗೆ ಬಿಸಾಡಬಹುದಾದ ಡಾಯಪರ್ಗಳಿಲ್ಲದ ಜಗತ್ತು ಅಚಿಂತ್ಯ.
ಪರಿಸರವಾದಿಗಳಿಗೆ ಕಚಡದ ಪೂರ್ತಿ ಸಮಸ್ಯೆಯಲ್ಲಿ ಈ ಬಿಸಾಡಬಹುದಾದ ಕೂಸುಚೌಕಗಳು ಒಂದು ಪ್ರತೀಕವಾಗಿವೆ. ಯು. ಎಸ್. ನ್ಯೂಸ್ ಎಂಡ್ ವರ್ಲ್ಡ್ ರಿಪೋರ್ಟ್ ಬರೆಯುವುದು: “ಇದಕ್ಕಿಂತಲೂ ಕೆಟ್ಟ ವಿಷಯವೇನಂದರೆ, 1961ರಲ್ಲಿ ಪ್ರಥಮವಾಗಿ ಪರಿಚಯಿಸಲ್ಪಟ್ಟು ತಯಾರಿಸಲ್ಪಟ್ಟ ಪ್ರತಿಯೊಂದು ಪ್ಲಾಸಿಕ್ಟ್ ಡಾಯಪರ್ ಇನ್ನೂ ಇದೆ. ಅವು ನೆಲಸಮವಾಗಲು ಸುಮಾರು 500 ವರುಷಗಳು ಹಿಡಿಯುತ್ತವೆ.”
ಆದರೂ, ಪರಿಸರೀಯ ಪರಿಣತರು ಮತ್ತು ಸರಕಾರಿ ಅಧಿಕಾರಿಗಳು, ನಾವು ಒಂದೇ ನಮ್ಮ ರೂಢಿಯನ್ನು ಬದಲಾಯಿಸಬೇಕು ಇಲ್ಲವೆ ನಮ್ಮ ಸ್ವಂತ ಕಚಡದಿಂದ ಜೀವಸಹಿತ ಹೂಳಲ್ಪಡಬೇಕು ಎಂದು ಹೇಳುತ್ತಾರೆ. ಆಧುನಿಕ ಎಸೆಯಬಹುದಾದ ವಸ್ತುಗಳು ಬಳಕೆದಾರರಿಗೆ ಒಂದು ಅನುಗ್ರಹವಾಗಿರಬಹುದು, ಆದರೆ ಭೂಮಿಯ ಕಸದ ತಿಪ್ಪೆಗಳಿಗೆ ಅವು ಬಾಂಬಿಗೆ ಸಮಾನ. ತ್ಯಜಿಸಲ್ಪಟ್ಟ ಪಾಸ್ಲಿಕ್ಟಿನ ಜೀವನಕ್ಕೆ ಅಂತ್ಯವೇ ಕಾಣುವುದಿಲ್ಲ. ಸಾಂಪ್ರದಾಯಿಕ ವಿವೇಕಕ್ಕೆ ಪ್ರತಿಕೂಲವಾಗಿ, ಅಮೆರಿಕನರು ಪ್ರತಿದಿನ ಬಿಸಾಡುವ 16 ಕೋಟಿ ಕಿಲೊಗ್ರಾಮ್ ಕಾಗದ ಮತ್ತು ಲೋಕವ್ಯಾಪಕವಾಗಿ ಬಿಸಾಡುವ ಇನ್ನೆಷ್ಟೊ ಅಜ್ಞಾತ ಟನ್ನುಗಳು ಎಷ್ಟೊ ಟನ್ನು ಕಸದ ಕೆಳಗೆ ವರ್ಷಗಟ್ಟಲೆ ಇರುವುದಾದರೂ ಅದು ಒಡೆದು ತಿಪ್ಪೆಗಳಲ್ಲಿ ಕಾಣದೆ ಹೋಗುವುದಿಲ್ಲ. 35 ವರುಷಗಳಿಗೂ ಹೆಚ್ಚು ಕಾಲ ಹುಗಿಯಲ್ಪಟ್ಟಿದ್ದು ಬಳಿಕ ಮೇಲೆ ತೆಗೆದ ವಾರ್ತಾ ಪತ್ರಿಕೆಗಳನ್ನು ಅವು ಪ್ರಕಟವಾದ ದಿನದಷ್ಟೆ ಸ್ಪಷ್ಟವಾಗಿ ಓದಸಾಧ್ಯವಾಗಿತ್ತು.
ಪುನರುಪಯೋಗ ಸಮಸ್ಯೆ
ಕಸವನ್ನು ನಿಭಾಯಿಸಲು ಕೇವಲ ನಾಲ್ಕು ಮಾರ್ಗಗಳಿವೆಯೆಂದು ಬರೆಯಲಾಗಿದೆ: “ಹೂಳಿರಿ, ಸುಡಿರಿ, ಪುನರುಪಯೋಗಿಸಿರಿ—ಯಾ ಅಷ್ಟು ಕಸ ಉತ್ಪನ್ನ ಮಾಡಬೇಡಿರಿ.” ತಿಪ್ಪೆಗಳಲ್ಲಿ ಹುಗಿದಿರುವ ಕಸ ಕಣ್ಣಿಗೆ ಅಸಹ್ಯವಷ್ಟೇಯಲ್ಲ, ಅದು ಆರೋಗ್ಯಕ್ಕೆ ಹಾನಿಕಾರಕವೂ ಆಗಬಲ್ಲದು. ತಿಪ್ಪೆಗಳಲ್ಲಿ ಕಚಡವು ಕೊಳೆಯುವಾಗ ಅದು ಮೆತೇನ್ ಎಂಬ ವರ್ಣರಹಿತ, ಗಂಧರಹಿತ, ಸುಲಭವಾಗ ಸುಡುವ ಅನಿಲವನ್ನು ಉತ್ಪಾದಿಸುತ್ತದೆ. ನಿಯಂತ್ರಿಸದಿರುವಲ್ಲಿ, ಈ ಮೆತೇನ್ ನೆಲದಡಿಯಲ್ಲಿ ತಿಪ್ಪೆಯಿಂದ ದೂರ ಹೊರಟು ಹೋಗಿ, ಸಸ್ಯಗಳನ್ನು ಕೊಂದು, ಹತ್ತಿರದ ಕಟ್ಟಡಗಳಿಗೆ ತೂರಿ ಹೋಗಿ ಹೊತ್ತಿಕೊಳ್ಳುವಲ್ಲಿ ಸಿಡಿಯಬಲ್ಲದು. ಕೆಲವು ಸಂದರ್ಭಗಳಲ್ಲಿ ಇದರಿಂದ ಮರಣ ಸಂಭವಿಸಿದೆ. ಹಾನಿಕಾರಕ ರಸಾಯನಗಳು ಭೂಮಿಯನ್ನು ತೂರಿ ಮನುಷ್ಯನ ಜಲ ಸಂಗ್ರಹವನ್ನು ಮಲಿನ ಮಾಡುವಾಗ ನೆಲದಡಿಯ ಜಲಾಶಯಗಳು ಯಾ ಜಲವಾಹಕಗಳು ಅಪಾಯಕ್ಕೊಳಗಾಗುತ್ತವೆ.
ಪತ್ರಿಕಾ ಕಾಗದಮ್ನ ಪುನರುಪಯೋಗಿಸುವುದರಲ್ಲಿ ವಿಶೇಷವಾಗಿರುವ ಸಮಸ್ಯೆ ಅದರ ಅತಿರೇಕ ಸರಬರಾಯಿಯೆ. ಅಮೆರಿಕನ್ ಪೇಪರ್ ಇನ್ಸಿಟ್ಟ್ಯೂಟಿನ ಒಬ್ಬ ಪ್ರತಿನಿಧಿ ಹೇಳಿದ್ದು: “ಉಪಯೋಗಕ್ಕೆ ಬಾರದ ವಾರ್ತಾ ಕಾಗದದ ವಿವರ ಪಟ್ಟಿಯ ಮೊತ್ತ ಎಲ್ಲ ಸಮಯಗಳಿಗಿಂತ ಉನ್ನತ. ಕಾರ್ಖಾನೆ ಮತ್ತು ಕಾಗದ ವ್ಯಾಪಾರಿಗಳ ಸಂಗ್ರಹಾಲಯಗಳಲ್ಲಿ ವರ್ಷದ ಉತ್ಪಾದನೆಯಲ್ಲಿ ಮೂರರಲ್ಲಿ ಒಂದು ಪಾಲನ್ನು ಪ್ರತಿನಿಧೀಕರಿಸುವ, 10 ಲಕ್ಷಕ್ಕೂ ಹೆಚ್ಚು ಟನ್ನು ಕಾಗದವಿದೆ. ಸಂಗ್ರಹಾಲಯದ ಸ್ಥಳವು ಪೂರ್ತಿ ತುಂಬಿ ಹೋಗುವ ಸಮಯ ಬರುತ್ತದೆ.” ಈ ಅತಿರೇಕ ಕಾಗದದ ಕಾರಣವಾಗಿ, ಒಂದು ವರ್ಷಕ್ಕೆ ಹಿಂದೆ, ಟನ್ನಿಗೆ 40 ಡಾಲರು ಕೊಟ್ಟು ಕಾಗದ ಕೊಳ್ಳುತ್ತಿದ್ದ ಅನೇಕ ನಗರಗಳು, ಈಗ ಕಂಟ್ರಾಕ್ಟರರಿಗೆ ಟನ್ನಿಗೆ 25 ಡಾಲರು ಕೊಟ್ಟು ಅವರು ಅದನ್ನು ಸುಡಲು ಯಾ ತಿಪ್ಪೆಗಳಲ್ಲಿ ಎಸೆಯಲು ಕೊಂಡೊಯ್ಯುವಂತೆ ಮಾಡುತ್ತಾರೆ.
ಪಾಸ್ಲಿಕ್ಟಿನ ವಿಷಯ ಏನು ಹೇಳಬಹುದು? ಯು. ಎಸ್ ನ್ಯೂಸ್ ಎಂಡ್ ವರ್ಲ್ಡ್ ರಿಪೋರ್ಟ್ ಹೇಳಿದ್ದು: “ಪ್ಲಾಸಿಕ್ಟ್ ಉದ್ಯಮ, ಅಧಿಕಾಂಶ, ತನ್ನ ಸರ್ವವ್ಯಾಪಕವಾದ ಉತ್ಪಾದನೆ ಇಲ್ಲವೆ ನಿಷೇಧಿಸಲ್ಪಡುವುದು ಎಂಬ ಭಯದಿಂದ, ಪುನರುಪಯೋಗಕ್ಕೆ ಬೆಂಬಲವನ್ನು ಕೊಡಲು ತವಕಪಟ್ಟಿದೆ.” ಉದಾಹರಣೆಗೆ, ಪ್ಲಾಸಿಕ್ಟ್ ಸೀಸೆಗಳನ್ನು ಪಾಲಿಯೆಸ್ಟರ್ ಜಮಖಾನೆ ತಯಾರಿಸಲು ದಾರವಾಗಿ ಯಾ ಪಾರ್ಕ ಉಡುಪಿನ ಒಳಮುಚ್ಚಾಗಿ ಮತ್ತು ಇನ್ನೆಷ್ಟೊ ವಸ್ತುಗಳಾಗಿ ಪರಿವರ್ತಿಸಬಹುದು. ಆದರೂ, ಈ ಉದ್ಯಮ ತನಗೆ ಗಿರಿಕಿಗಳಿದ್ದಾರೊ ಎಂದು ಚಿಂತಿಸುವುದು ಹಿತಕರ. ಕೆಲವು ಸ್ಥಳಗಳು ಆಗಲೆ ಚಿಲ್ಲರ ಆಹಾರ ಮಾರಾಟ ಸಂಘಗಳಲ್ಲಿ ಎಲ್ಲ ಪಾಲಿಸ್ಟೈರೀನ್ ಮತ್ತು ಪಿವಿಸಿ(ಪಾಲಿವೈನಿಲ್ ಕ್ಲೋರೈಡ್) ಪ್ಲಾಸಿಕ್ಟ್ ವಸ್ತುಗಳನ್ನು ನಿಷೇಧಿಸಲು ಶಾಸನವನ್ನು ಜಾರಿಗೆ ತಂದಿವೆ. ಈ ನಿಷೇಧದಲ್ಲಿ ಪ್ಲಾಸಿಕ್ಟ್ ಕಿರಾಣಿ ಚೀಲಗಳು, ಪಾಲಿಸ್ಟೈರಿನ್ ಪಾತ್ರೆ, ಮಾಂಸ ತಟ್ಟೆ ಮತ್ತು ಫಾಸ್ಟ್ ಫುಡ್ ಹ್ಯಾಂಬರ್ಗರನ್ನು ಇಡುವ ತಟ್ಟೆಗಳು ಸೇರಿವೆ.
ಯುನೊಯಿಟೆಡ್ ಸ್ಟೇಟ್ಸಿನ ಮ್ಯುನಿಸಿಪಲ್ ಘನ ಕಚಡದಲ್ಲಿ 75 ಪ್ರತಿಶತವನ್ನು ಪುನರುಪಯೋಗಿಸಬಹುದೆಂದು ಅಂದಾಜು ಮಾಡಲಾಗುತ್ತದೆ. ಆದರೂ, ಸಾರ್ವಜನಿಕರ ಔದಾಸೀನ್ಯ ಮತ್ತು ಯಂತ್ರಕಲಾ ನ್ಯೂನತೆಯ ಕಾರಣ ಈ ಸಾಧ್ಯತೆಯನ್ನು ಈಗ ಸಾಧಿಸಲಾಗುತ್ತಿಲ್ಲ. ಒಬ್ಬ ಪುನರುಪಯೋಗ ನಿಪುಣರು ಹೇಳಿದ್ದು: “ಪುನರುಪಯೋಗವು ಅತ್ಯಪಾಯಕಾರಿ ಸಮಯವನ್ನು ಪ್ರವೇಶಿಸುತ್ತಿದೆ. ಈ ಕುಸಿತವನ್ನು ಹತೋಟಿಗೆ ತರಲು ಅನೇಕ ಸರಕಾರಗಳಿಗೆ ಕಷ್ಟವಾಗಬಹುದು.”
ಬೃಹದಾಕಾರದ ಮ್ಯುನಿಸಿಪಲ್ ದಹನ ಕುಂಡಗಳಲ್ಲಿ ಕಚಡವನ್ನು ಸುಡುವುದೇ ಇದಕ್ಕಿರುವ ಉತ್ತರವೆಂದು ಕೆಲವು ಅಧಿಕಾರಿಗಳ ಹೇಳಿಕೆ. ಆದರೆ ಇಲಿಯ್ಲೂ ಸಮಸ್ಯೆಗಳಿವೆ. ಪ್ಲಾಸಿಕ್ಟ್ ಮತ್ತು ಇತರ ಕಚಡವನ್ನು ಸುಡುವುದರಿಂದ ಡಯಾಕ್ಸಿನ್ ಸೇರಿರುವ ವಿಷ ರಸಾಯನಗಳು ಹೊರಟುಬಂದು ಗಾಳಿಯನ್ನು ಸೇರುತ್ತವೆ ಎಂದು ಪರಿಸರವಾದಿಗಳು ಎಚ್ಚರಿಸುತ್ತಾರೆ. “ದಹನ ಕುಂಡವನ್ನು ಡಯಾಕ್ಸಿನ್ ತಯಾರಿಸುವ ಕಾರ್ಖಾನೆಯೆಂದೇ ನೀವು ಭಾವಿಸಬಹುದು” ಎಂದರು ಒಬ್ಬ ಪ್ರಸಿದ್ಧ ಪರಿಸರವಾದಿ. ನ್ಯೂಸ್ವೀಕ್ ಪತ್ರಿಕೆ ವರದಿ ಮಾಡಿದ್ದು: “ಈ ದಹನ ಕುಂಡವು ಅನೇಕ ವೇಳೆ, ಟನ್ನುಗಟ್ಟಲೆ ಬೂದಿಯೊಂದಿಗೆ ಸೀಸ ಮತ್ತು ಕ್ಯಾಡ್ಮಿಯಂ ಲೋಹವನ್ನೂ ಉತ್ಪನ್ನ ಮಾಡುತ್ತವೆ.” ಯೋಜಿಸಲ್ಪಟ್ಟಿರುವ ದಹನ ಕುಂಡ ನಿವೇಶನಗಳ ಬಳಿ ಜೀವಿಸುವ ನಾಗರಿಕರಿಂದ ಅಬ್ಬರ ಕೇಳಿ ಬರುತ್ತದೆ. ತಮ್ಮ ನೆರೆಹೊರೆಯಲ್ಲಿ ಅವಿರುವುದು ಯಾರಿಗೂ ಬೇಡವಾಗಿದೆ. ಅವನ್ನು ಆರೋಗ್ಯ ಮತ್ತು ಪರಿಸರಕ್ಕೆ ಹಾನಿಕಾರಕವಾಗಿ ನೋಡಲಾಗುತ್ತದೆ. ಹೀಗೆ, ಕಸದ ಬಿಕ್ಕಟ್ಟು ಹೆಚ್ಚುತ್ತಾ ಹೋಗುತ್ತಿದೆ. ಯಾರಲ್ಲಿಯಾದರೂ ಇದಕ್ಕೆ ಉತ್ತರವಿದೆಯೆ? (g90 9/22)