ಒತ್ತಡಕ್ಕೀಡಾಗಿರುವ ಮಕ್ಕಳ ಒಂದು ವ್ಯಾಧಿ
“ರ್ಯಾಂಡಿ!” ರಿಟಾ ತನ್ನ ಮನೆಯನ್ನು ಸಮೀಪಿಸುತ್ತಿರುವಾಗ ಸ್ವಲ್ಪ ದೂರದಿಂದ ಆಕೆ ಏನನ್ನು ಕಂಡಳೊ ಅದರಿಂದ ಗಾಬರಿಗೊಂಡು, ಚೀರಿದಳು. ಅವಳ ಮಗ ರ್ಯಾಂಡಿಯು, ಜಲ್ಲಿಗಾರೆಯ ಅಂಗಳದ 8 ಮೀಟರ್ಗಳಷ್ಟು ಎತ್ತರದಲ್ಲಿ ಮೇಲಂತಸ್ತಿನ ಮಲಗುವ ಕೋಣೆಯ ಕಿಟಕಿಯ ಹೊರಗಿನ ನಡುವೆ, ಅರ್ಧಭಾಗ ನೇಲುತ್ತಿದ್ದನು. ಮನೆಯ ಒಳಗೆ ಲ್ಯಾರಿಯು ತನ್ನ ಹೆಂಡತಿಯ ಅತ್ಯುದ್ರೇಕದ ಕೂಗನ್ನು ಕೇಳಿದನು ಮತ್ತು ಕಾರ್ಯತತ್ಪರನಾಗಲು ಕುಲುಕಲ್ಪಟ್ಟನು. ಮೆಟ್ಟಲಸಾಲಿನಲ್ಲಿ ಮೇಲಕ್ಕೆ ವೇಗವಾಗಿ ಸಾಗುತ್ತಾ, ಅವನು ಮಲಗುವ ಕೋಣೆಯೊಳಗೆ ನೆಗೆದನು ಮತ್ತು ರ್ಯಾಂಡಿಯನ್ನು ಥಟ್ಟನೆ ಹಿಡಿದು, ಅವನನ್ನು ಸುರಕ್ಷಿತವಾಗಿ ಒಳಕ್ಕೆ ಎಳೆದನು. ರ್ಯಾಂಡಿಯ ಹೆತ್ತವರಿಗೆ ಕ್ಷಿಪ್ರ ಉತ್ತರಗಳು ಬೇಕಿದ್ದವು. “ನೀನು ಹಾಗೇಕೆ ಮಾಡಿದೆ? ಯಾಕೆ?” ಎಂದು ನಂಬಲಸಾಧ್ಯವಾದಂತೆ ಕೇಳಿದರು. “ನಿನಗೆ ಪೆಟ್ಟಾಗಸಾಧ್ಯವಿತ್ತು; ನೀನು ಕೊಲ್ಲಲ್ಪಡಸಾಧ್ಯವಿತ್ತು!” “ನಾನು ಸಾಯಬಯಸಿದ್ದೆ,” ರ್ಯಾಂಡಿ ಉದಾಸೀನ ಭಾವದಿಂದುತ್ತರಿಸಿದನು. ರ್ಯಾಂಡಿಯು ಕೇವಲ ಐದು ವರ್ಷ ಪ್ರಾಯದವನಾಗಿದ್ದನು.
ಎಲ್ಲ ಹೊರಗಿನ ತೋರಿಕೆಗಳಲ್ಲಿ, ರ್ಯಾಂಡಿಯು ಸಾಮಾನ್ಯ, ಆರೋಗ್ಯಕರ ಹುಡುಗನಾಗಿದ್ದನು. ಅವನು ರಹಸ್ಯವಾಗಿ ಸಾಯಲು ಬಯಸಿದ್ದನೆಂದು ಯಾರೂ ಸಂದೇಹಿಸಲಿಲ್ಲ. ಆದರೂ, ತರುವಾಯದ ಹೇಳುವಿಕೆಯು, ರ್ಯಾಂಡಿಯು ಆಳವಾದ ಒತ್ತಡಕ್ಕೀಡಾಗಿರುವ ಮಗುವಾಗಿದನ್ದೆಂದು ಹೊರಗೆಡಹಿತು.
ರ್ಯಾಂಡಿಯಂತೆಯೆ ಅಸಂಖ್ಯಾತ ಮಕ್ಕಳು ವಿಪರೀತ ಸಂಕ್ಷೋಭೆಗೆ ಇಂದು ಬಲಿಯಾಗಿರುತ್ತಾರೆ. ಅವರ ಸಂಕಟದೊಂದಿಗೆ ವ್ಯವಹರಿಸಲು ಆರೋಗ್ಯಕರ ವಿಧಾನಗಳನ್ನು ಕಂಡುಕೊಳ್ಳಲು ಸಾಧ್ಯವಾಗದೆ, ಕೆಲವರು ತಮ್ಮ ಚಿಂತೆಯನ್ನು ನಿಗ್ರಹಿಸಲು ವ್ಯರ್ಥ ಪ್ರಯತ್ನ ನಡೆಸುತ್ತಾರೆ. ಆದರೆ ಅದುಮಿಟ್ಟ ಒತ್ತಡವು ಕ್ರಮೇಣ ಹೊರಕ್ಕೆ ಹೋಗುವ ಒಂದು ದಾರಿಯನ್ನು ಕಂಡುಕೊಳ್ಳುತ್ತದೆ. ಕೆಲವರಿಗೆ, ಹೊರಗೆಡಹಲಾರದಂಥ ಚಿಂತೆಯು, ದೈಹಿಕ ಅನಾರೋಗ್ಯತೆ ಯಾ ಅಪರಾಧಿ ವರ್ತನೆಯಲ್ಲಿ ಫಲಿಸುತ್ತದೆ. ಇನ್ನಿತರರಿಗೆ, ಸ್ವಯಂಕೃತ ಕೆಡುಕುಗಳು, ತಿನ್ನುವ ಅವ್ಯವಸ್ಥೆ, ಅಮಲೌಷಧಗಳ ದುರುಪಯೋಗ, ಮತ್ತು ಆತ್ಮಹತ್ಯೆಯನ್ನೂ ಸೇರಿಸಿ, ಸ್ವ-ಘಾತಕ ಕೃತ್ಯಗಳ ಮೂಲಕವಾಗಿ ಒತ್ತಡವು ಅಂತಸ್ಥವಾಗುವುದು. ದ ಚೈಲ್ಡ್ ಇನ್ ಕ್ರೈಸಿಸ್ ಗಮನಿಸುವುದು: “ಈ ಸಮಸ್ಯೆಗಳಲ್ಲಿ—ವಿಶೇಷವಾಗಿ ಆತ್ಮಹತ್ಯೆ—ಅನೇಕವು ವಯಸ್ಕರ ಮತ್ತು ಪ್ರಾಯದ ತರುಣಾವಸ್ಥೆಯಲ್ಲಿರುವವರ ಪ್ರತ್ಯೇಕ ಪ್ರಾಂತವೆಂದು ಒಮ್ಮೆ ಗ್ರಹಿಸಲಾಗಿದ್ದವು. ಈಗ ಅವು ಅತಿ ಎಳೆಯರಲ್ಲೂ ತೂರಿಹೋಗುವುದು ಭಾಸವಾಗುತ್ತದೆ.”
‘ಇದು ಹೇಗೆ ಸಂಭವಿಸಬಲ್ಲದು?’ ಎಂದು ತಬ್ಬಿಬ್ಬಾದ ವಯಸ್ಕರು ಕೇಳುತ್ತಾರೆ. ‘ಬಾಲ್ಯಾವಸ್ಥೆಯು ಆಟಿಕೆಗಳ ಮತ್ತು ಆಟಗಳ ಸಮಯ, ನಗು ಮತ್ತು ವಿನೋದದ ಒಂದು ಸಮಯವಾಗಿ ಇರುವುದಿಲ್ಲವೊ?’ ಅನೇಕ ಮಕ್ಕಳಿಗೆ ಉತ್ತರವು ಇಲ್ಲವೆಂದಾಗಿರುತ್ತದೆ. “ಬಾಲ್ಯಾವಸ್ಥೆಯು ನಿಸ್ಸಾರಮಾಡಲ್ಪಡದ ಸುಖಾನುಭವಗಳ ಒಂದು ಸಮಯವೆಂದು ವಯಸ್ಕರ ಮೂಲಕ ಸೃಷ್ಟಿಸಲ್ಪಟ್ಟ ಒಂದು ಕಲ್ಪನಾ ಕಥೆಯಾಗಿದೆ,” ಎಂದು ಡಾ. ಜೂಲಿಯಸ್ ಸೆಗಲ್ ವಾದಿಸುತ್ತಾರೆ. ಮಗುವಿನ ಚಿಕಿತ್ಸಕ ಜೊಸೆಫ್ ಲುಪೊರಿಂದ ಈ ದುಃಖಕರ ನಿಜತ್ವವು ದೃಢೀಕರಿಸಲ್ಪಟ್ಟಿದೆ: “ಇಪ್ಪತ್ತೈದು ವರ್ಷಗಳಿಂದ ನಾನು ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವೆನು. ಇಂದು ನಾಲ್ಕು ಪಟ್ಟು ಖಿನ್ನರಾದ ಶಿಶು ಮತ್ತು ತರುಣ ಪ್ರಾಯದ ರೋಗಿಗಳನ್ನು ನಾನು ನೋಡುತ್ತೇನೆ.”
ಮಕ್ಕಳಲ್ಲಿ ಹಿಂದೆಂದೂ ಕಂಡಿಲ್ಲದ ಅಂಥ ಒತ್ತಡಕ್ಕೆ ಕಾರಣವೇನು? ಎಚ್ಚರಿಕೆಯ ಸಂಕೇತಗಳ್ಯಾವುವು? ಒತ್ತಡಕ್ಕೀಡಾಗಿರುವ ಮಕ್ಕಳಿಗೆ ಹೇಗೆ ಸಹಾಯ ಮಾಡಸಾಧ್ಯವಿದೆ? ಮುಂದಿನ ಲೇಖನಗಳಲ್ಲಿ ಈ ಪ್ರಶ್ನೆಗಳು ನಿವೇದಿಸಲ್ಪಡುವವು.