ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g93 11/8 ಪು. 4-5
  • ಚಿಕ್ಕ ಜನರು, ದೊಡ್ಡ ಒತ್ತಡಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಚಿಕ್ಕ ಜನರು, ದೊಡ್ಡ ಒತ್ತಡಗಳು
  • ಎಚ್ಚರ!—1993
  • ಅನುರೂಪ ಮಾಹಿತಿ
  • ನಿಮ್ಮ ಮಗುವನ್ನು ಶೈಶವದಿಂದ ತರಬೇತು ಮಾಡಿರಿ
    ಕುಟುಂಬ ಸಂತೋಷದ ರಹಸ್ಯ
  • ಒತ್ತಡದೊಂದಿಗೆ ಸಹಕರಿಸಲು ನಿಮ್ಮ ಮಕ್ಕಳಿಗೆ ಸಹಾಯ ಮಾಡಿರಿ
    ಎಚ್ಚರ!—1993
  • ಮಾರ್ಗದರ್ಶನದ ಪ್ರಾಮುಖ್ಯತೆ
    ಎಚ್ಚರ!—2019
  • ಮಗುವಿನ ಕಣ್ಣುಗಳ ಮೂಲಕ
    ಎಚ್ಚರ!—1991
ಎಚ್ಚರ!—1993
g93 11/8 ಪು. 4-5

ಚಿಕ್ಕ ಜನರು, ದೊಡ್ಡ ಒತ್ತಡಗಳು

“ಮಕ್ಕಳ ಕೊರಗುಗಳು ಚಿಕ್ಕವು ನಿಜ, ಆದರೆ ಮಗುವೂ ಕೂಡ ಹಾಗೆಯೇ ಇದೆ.”—ಪರ್ಸಿ ಬೈಶ್‌ ಶೆಲ್ಲಿ.

ಕೆಳಗಿನ ರೇಖಾಕೃತಿಯಲ್ಲಿರುವ ಎತ್ತರವಾದ ಪರಂಗಿ ಟೋಪಿಯನ್ನು ನೋಡಿರಿ. ಮೊದಲ ನೋಟಕ್ಕೆ ಅದರ ಚಾಚುಏಣಿನ ಅಗಲಕ್ಕಿಂತ ಟೋಪಿಯು ಎತ್ತರವಿರುವಂತೆ ಕಾಣುತ್ತದೆ. ಆದಾಗ್ಯೂ, ನಿಜತ್ವದಲ್ಲಿ ಎತ್ತರ ಮತ್ತು ಅಗಲಗಳೆರಡೂ ಸಮಾನವಾಗಿವೆ. ಪ್ರಮಾಣಗಳು ಸುಲಭವಾಗಿ ತಪ್ಪು ತೀರ್ಮಾನಿಸಲ್ಪಡಬಲ್ಲವು.

ಒಂದು ಮಗುವಿನ ಒತ್ತಡದ ಪ್ರಮಾಣಗಳನ್ನು ತಪ್ಪಾಗಿ ತೀರ್ಮಾನಿಸಲು ವಯಸ್ಕರಿಗೆ ಅದರಷ್ಟೇ ಸುಲಭವಾಗಿರುವುದು. ‘ಮಕ್ಕಳ ಸಮಸ್ಯೆಗಳು ಎಷ್ಟೊಂದು ಕ್ಷುಲ್ಲಕವಾಗಿವೆ,’ ಎಂದು ಕೆಲವರು ವಿವೇಚಿಸುತ್ತಾರೆ. ಆದರೆ ಈ ಆಲೋಚನೆಯು ಭ್ರಾಂತಿಕಾರಕವಾಗಿದೆ. “ವಯಸ್ಕರು ತೊಂದರೆಗಳನ್ನು ಅವುಗಳ ಗಾತ್ರದ ಮೂಲಕವಲ್ಲ, ಆದರೆ ಅವುಗಳು ಉತ್ಪಾದಿಸುವ ನೋವಿನ ಗಾತ್ರದ ಮೂಲಕ ತೀರ್ಮಾನಿಸಬೇಕು,” ಎಂದು ಚೈಲ್ಡ್‌ಸ್ಟ್ರೆಸ್‌! ಪುಸ್ತಕವು ಎಚ್ಚರಿಸುತ್ತದೆ.

ಅನೇಕ ಸಂದರ್ಭಗಳಲ್ಲಿ ಮಗುವಿನ ನೋವಿನ ಪ್ರಮಾಣಗಳು ವಯಸ್ಕರು ಗ್ರಹಿಸುವುದಕ್ಕಿಂತ ದೊಡ್ಡದಾಗಿರುತ್ತವೆ. ಅವರ ಮಕ್ಕಳ ಭಾವನಾತ್ಮಕ ಸ್ಥಿತಿಯನ್ನು ಅಂದಾಜಿಸಲು ಹೆತ್ತವರು ಕೇಳಿಕೊಳ್ಳಲ್ಪಟ್ಟ ಅಧ್ಯಯನದ ಮೂಲಕ ಇದು ದೃಢೀಕರಿಸಲ್ಪಟ್ಟಿತು. ಹೆಚ್ಚಾಗಿ ಎಲ್ಲರು ತಮ್ಮ ಮಕ್ಕಳು “ಅತಿ ಸಂತೋಷದಿಂದ ಇದ್ದಾರೆ” ಎಂದುತ್ತರಿಸಿದರು. ಆದರೂ, ಅವರ ಹೆತ್ತವರಿಂದ ಪ್ರತ್ಯೇಕವಾಗಿ ಪ್ರಶ್ನಿಸಲ್ಪಟ್ಟಾಗ, ಹೆಚ್ಚಿನ ಮಕ್ಕಳು ತಾವು “ಅಸಂತೋಷಿತರು” ಮತ್ತು “ಸಂಕಟಕ್ಕೆ ಈಡಾದವರು” ಎಂದು ಕೂಡ ತಮ್ಮ ಕುರಿತು ವಿವರಿಸಿಕೊಂಡರು. ಹೆತ್ತವರು ಮಹತ್ತಾಗಿ ಕನಿಷ್ಠವೆಂದೆಣಿಸುವ ಹೆದರಿಕೆಗಳನ್ನು ಮಕ್ಕಳು ಎದುರಿಸುತ್ತಾರೆ.

ಡಾ. ಕಾವೊರು ಯಮಾಮೊಟೊ ನಡೆಸಿದ ಮತ್ತೊಂದು ಅಧ್ಯಯನದಲ್ಲಿ, ಏಳು ಅಂಶದ ಒತ್ತಡ ಪ್ರಮಾಣದ ಮೇಲೆ 20 ಜೀವಿತ ಘಟನೆಗಳನ್ನು ನಿಗದಿಸುವಂತೆ ಒಂದು ಮಕ್ಕಳ ಗುಂಪನ್ನು ಕೇಳಿಕೊಳ್ಳಲಾಯಿತು. ಅನಂತರ ಹೇಗೆ ಒಂದು ಮಗುವು ಬೆಲೆ ನಿಗದಿಸುವುದೆಂದು ಅವರಿಗೆ ಅನಿಸುವುದಕ್ಕನುಸಾರ ಸರಿಯಾಗಿ ಅದೇ ಘಟನೆಗಳನ್ನು ವಯಸ್ಕರ ಒಂದು ಗುಂಪು ಬೆಲೆ ನಿಗದಿಸಿತು. ಆ ವಯಸ್ಕರು 20 ಅಂಶಗಳಲ್ಲಿ 16ನ್ನು ತಪ್ಪಾಗಿ ತೀರ್ಮಾನಿಸಿದರು! “ನಮ್ಮ ಮಕ್ಕಳನ್ನು ತಿಳಿದಿದ್ದೇವೆಂದು ನಾವೆಲ್ಲರು ಆಲೋಚಿಸುತ್ತೇವೆ, ಆದರೆ ಅತಿ ಹೆಚ್ಚಿನ ಬಾರಿ ನಾವು ನಿಜಕ್ಕೂ ನೋಡುವುದಿಲ್ಲ ಯಾ ಕೇಳುವುದಿಲ್ಲ, ಅಥವಾ ಅವರಿಗೆ ನಿಜಕ್ಕೂ ಏನು ತೊಂದರೆಯನ್ನುಂಟು ಮಾಡುತ್ತದೆಂದು ತಿಳಿದುಕೊಳ್ಳುವುದೂ ಇಲ್ಲ,” ಎಂದು ಡಾ. ಯಮಾಮೊಟೊ ಕೊನೆಗೊಳಿಸಿದರು.

ಹೆತ್ತವರು ಹೊಸ ಯಥಾದೃಷ್ಟರೋಪಣದ ಮೂಲಕ ಜೀವಿತದ ಅನುಭವಗಳನ್ನು ವೀಕ್ಷಿಸಲು ಕಲಿಯಬೇಕು: ಮಗುವಿನ ನೇತ್ರಗಳಿಂದ. (ಚೌಕಟ್ಟನ್ನು ನೋಡಿರಿ.) ಇದು ವಿಶೇಷವಾಗಿ ಇಂದು ಪ್ರಾಮುಖ್ಯವಾಗಿದೆ. ಬೈಬಲ್‌ ಮುಂತಿಳಿಸಿದ್ದು, “ಕಡೇ ದಿವಸಗಳಲ್ಲಿ ಮಹಾ ಒತ್ತಡದ . . . ವ್ಯವಹರಿಸಲು ಕಷ್ಟವಾದ ಮತ್ತು ಸಹಿಸಲು ಕಷ್ಟವಾದ . . . ಆಪತ್ತಿನ ಕಾಲಗಳು ಬರುವವು.” (2 ತಿಮೊಥೆಯ 3:1, ದಿ ಆ್ಯಂಪಿಫ್ಲೈಡ್‌ ಬೈಬಲ್‌) ಅಂಥ ಒತ್ತಡಕ್ಕೆ ಮಕ್ಕಳು ಸೋಂಕು ರಕ್ಷೆಯನ್ನು ಹೊಂದಿರುವುದಿಲ್ಲ; ಅನೇಕಬಾರಿ, ಅವರು ಅದರ ಆದ್ಯ ಬಲಿಗಳಾಗಿದ್ದಾರೆ. ಮಕ್ಕಳ ಒತ್ತಡಗಳಲ್ಲಿ ಕೆಲವು ಕೇವಲ “ಯೌವನದ” ಸಂಭವನೀಯತೆಗಳಾಗಿರುವಾಗ, ಇತರ ಒತ್ತಡಗಳು ತೀರ ಅಸಾಮಾನ್ಯ ಮತ್ತು ವಿಶೇಷ ಗಮನಕ್ಕೆ ಅರ್ಹವಾದವುಗಳಾಗಿವೆ.—2 ತಿಮೊಥೆಯ 2:22.

[ಪುಟ 5 ರಲ್ಲಿರುವ ಚೌಕ]

ಮಗುವಿನ ನೇತ್ರಗಳ ಮೂಲಕ

ಹೆತ್ತವರಲ್ಲೊಬ್ಬರ ಮರಣ = ಅಪರಾಧಿತನ. ಹೆತ್ತವರಲ್ಲೊಬ್ಬರ ಕಡೆಗೆ ಕ್ಷಣಮಾತ್ರದ ಕೋಪದ ಆಲೋಚನೆಗಳನ್ನು ಜ್ಞಾಪಕಕ್ಕೆ ತರುವುದು, ಹೆತ್ತವರಲ್ಲೊಬ್ಬರ ಮರಣಕ್ಕೆ ಹೊಣೆಯ ಗೋಪ್ಯ ಭಾವನೆಗಳಿಗೆ ಮಗುವು ಎಡೆಗೊಡಬಹುದು.

ವಿವಾಹ ವಿಚ್ಛೇದ = ತೊರೆಯಲ್ಪಡುವಿಕೆ. ಹೆತ್ತವರು ಒಬ್ಬರಿಗೊಬ್ಬರು ಪ್ರೀತಿಸುವುದನ್ನು ನಿಲ್ಲಿಸಬಹುದಾದಲ್ಲಿ, ಅವರು ಅವನನ್ನು ಪ್ರೀತಿಸುವುದನ್ನು ಕೂಡ ನಿಲ್ಲಿಸಬಹುದು ಎಂದು ಮಗುವಿನ ತರ್ಕಪದ್ಧತಿಯು ಹೇಳುತ್ತದೆ.

ಮದ್ಯವ್ಯಸನ = ಉದ್ವೇಗ. ಕ್ಲಾಡಿಯ ಬ್ಲ್ಯಾಕ್‌ ಬರೆಯುವುದು: “ಭಯ, ತೊರೆಯಲ್ಪಡುವಿಕೆ, ನಿರಾಕರಣೆ, ಅಸಾಮಂಜಸ್ಯತೆಯ ನಿತ್ಯದ ಪರಿಸರ ಮತ್ತು ಮದ್ಯವ್ಯಸನಿ ಮನೆಯಲ್ಲಿ ಸಂಭವನೀಯ ಹಿಂಸೆಗೆ ಇಂಬುಗೊಡುವಿಕೆಯು ನೈಜ ಯಾ ಸಾಧ್ಯತೆಯು ಒಂದು ಆಚಾರಾರ್ಥಕ, ಆರೋಗ್ಯಕರ ಪರಿಸರವಾಗಿರುವುದಿಲ್ಲ.”

ಹೆತ್ತವರ ಜಗಳ = ಭೀತಿ. ಹೆತ್ತವರ ಜಗಳಗಳು ಎಷ್ಟೊಂದು ಒತ್ತಡಪೂರ್ಣವಾಗಿರುವುವೆಂದರೆ, ವಾಂತಿಯ ಕೆರಳಿಸುವಿಕೆ, ಪುಕ್ಕಲು ಮುಖದ ಸ್ನಾಯು ಸೆಳೆತ, ಕೂದಲು ನಷ್ಟ, ತೂಕ ನಷ್ಟ ಯಾ ಗಳಿಕೆ, ಮತ್ತು ಹುಣ್ಣು ಕೂಡ ಪರಿಣಾಮಗಳಾಗಿದ್ದವೆಂದು 24 ವಿದ್ಯಾರ್ಥಿಗಳ ಒಂದು ಅಧ್ಯಯನವು ತೋರಿಸಿಕೊಟ್ಟಿತು.

ಮಿತಿಮೀರಿದ ಸಾಧನೆ = ಆಶಾಭಂಗ. “ಮಕ್ಕಳು ಎಲಿಯ್ಲೆ ತಿರುಗಲಿ, ವಯಸ್ಕರ ಮೂಲಕ ಅವರಿಗಾಗಿ ಏರ್ಪಡಿಸಲ್ಪಟ್ಟ ಸಂತತ ಸ್ಪರ್ಧೆಯಲ್ಲಿ ಅವರು ಒಳಗೂಡಿರುವಂತೆ ಕಾಣುತ್ತಾರೆ,” ಎಂದು ಮೇರಿ ಸೂಸನ್‌ ಮಿಲ್ಲರ್‌ ಬರೆಯುತ್ತಾರೆ. ಶಾಲೆಯಲ್ಲಿ, ಮನೆಯಲ್ಲಿ, ಮತ್ತು ಆಟದಲ್ಲಿ ಕೂಡ ಅತಿ ಉತ್ತಮವಾಗಿರುವಂತೆ ಒತ್ತಡಕ್ಕೊಳಪಡಿಸಲ್ಪಟ್ಟಿದ್ದಾರೆ, ಮಗುವು ಎಂದೂ ಜಯಿಸುವುದಿಲ್ಲ, ಮತ್ತು ಪಂದ್ಯವು ಎಂದೂ ಕೊನೆಗೊಳ್ಳುವುದಿಲ್ಲ.

ಹೊಸ ಬಂಧು ಹುಟ್ಟಿದಾಗ = ನಷ್ಟ. ಹೆತ್ತವರ ಗಮನ ಮತ್ತು ವಾತ್ಸಲ್ಯವನ್ನು ಈಗ ಹಂಚಿಕೊಳ್ಳಬೇಕಾಗಿರುವುದರಿಂದ, ಒಂದು ಮಗುವು ತಾನು ಬಂಧುವೊಬ್ಬನನ್ನು ಗಳಿಸಿರುವುದಕ್ಕಿಂತ ಹೆತ್ತವರಲ್ಲೊಬ್ಬರನ್ನು ಕಳೆದುಕೊಂಡಿರುವೆನೆಂದು ಭಾವಿಸಬಹುದು.

ಶಾಲೆ = ಅಗಲಿಕೆಯ ಚಿಂತೆ. ಏಮಿಗೆ, ತನ್ನ ತಾಯಿಯನ್ನು ಬಿಟ್ಟು ಶಾಲೆಗೆ ಹೋಗುವುದು ಪ್ರತಿದಿನ ಮೆಲ್ಲಮೆಲ್ಲನೆ ಸಾಯುವಂತೆ ಇತ್ತು.

ತಪ್ಪುಗಳು = ಅಪಮಾನ. ಅವರ ಅಸ್ಥಿರ ಸ್ವ-ಪ್ರತೀಕದೊಂದಿಗೆ, ಮಕ್ಕಳು “ಕೆಲವು ವಿಷಯಗಳನ್ನು ಅವುಗಳು ನಿಜತ್ವದಲ್ಲಿ ಇರುವುದಕ್ಕಿಂತ ಹೆಚ್ಚು ಗಂಭೀರ ಸಮಸ್ಯೆಗಳನ್ನಾಗಿ ವೀಕ್ಷಿಸುವ ಪ್ರವೃತ್ತಿಯುಳ್ಳವರಾಗಿರುತ್ತಾರೆ,” ಎಂದು ಡಾ. ಆ್ಯನ್‌ ಎಪ್‌ಸ್ಟೀನ್‌ ಹೇಳುತ್ತಾರೆ. ಶಿಶು ಆತ್ಮಹತ್ಯೆಯ ಹೆಚ್ಚು ಸಾಮಾನ್ಯ ಕೆರಳಿಸುವಿಕೆಗಳಲ್ಲಿ ಅಪಮಾನ ಒಂದಾಗಿತ್ತೆಂದು ಆಕೆ ಕಂಡುಹಿಡಿದಳು.

ನ್ಯೂನತೆಗಳು = ಆಶಾಭಂಗ. ಸಹಾನುಭೂತಿ ಇಲ್ಲದ ಸಮಾನಸ್ಕರ ಕುಚೋದ್ಯದ ಹೊರತು, ಶಾರೀರಿಕವಾಗಿ ಯಾ ಮಾನಸಿಕವಾಗಿ ನ್ಯೂನತೆ ಹೊಂದಿರುವ ಮಗುವು ಅವನ ಸಾಮರ್ಥ್ಯಕ್ಕೆ ಕೇವಲ ಮೀರಿರುವಂತಹದರ್ದ ಮೇಲೆ ಆಶಾಭಂಗವನ್ನು ವ್ಯಕ್ತಪಡಿಸುವ ಶಿಕ್ಷಕರ ಮತ್ತು ಕುಟುಂಬ ಸದಸ್ಯರ ಅಸಮಾಧಾನವನ್ನು ಸಹಿಸಿಕೊಳ್ಳಬೇಕಾಗಿರಬಹುದು.

[ಪುಟ 5 ರಲ್ಲಿರುವ ಚಿತ್ರ]

ಹಳೇ ಫ್ಯಾಷನ್ನಿನ ಎತ್ತರದ ಪರಂಗಿ ಟೋಪಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ