ದೂಷಿಸುವ ಹೆತ್ತವರು ಕಟ್ಟ ಕಡೆಯ ಒತ್ತಡಗಾರರು
“[ಮಕ್ಕಳಿಗೆ] ಕುಟುಂಬದ ಹೊರಗೆ ಅರ್ಥನೀಡಬಲ್ಲ ವ್ಯವಸ್ಥೆ ಕೊಂಚವೇ ಇರುವ ಕಾರಣ, ಮನೆಯಲ್ಲಿ ತಮ್ಮ ಮತ್ತು ಇತರರ ಬಗ್ಗೆ ಅವರು ಕಲಿಯುವ ವಿಷಯಗಳು ಅವರ ಮನಸ್ಸುಗಳಲ್ಲಿ ಆಳವಾಗಿ ಕೊರೆದ ಸಾರ್ವತ್ರಿಕ ಸತ್ಯಗಳಾಗುತ್ತವೆ.”—ಡಾ. ಸೂಜನ್ ಫಾರ್ವರ್ಡ್.
ಒಬ್ಬ ಕುಂಬಾರನು ಜೇಡಿಮಣ್ಣಿನ ರೂಪವಿಲ್ಲದ ಮುದೆಯ್ದನ್ನು ತೆಗೆದುಕೊಂಡು, ತಕ್ಕ ಅಳತೆಯಲ್ಲಿ ನೀರನ್ನು ಬೆರೆಸಿ, ಮತ್ತು ಅದನ್ನು ಒಂದು ಸುಂದರ ಪಾತ್ರೆಯನ್ನಾಗಿ ರೂಪಿಸಬಲ್ಲನು. ಅದೇ ಪ್ರಕಾರ ಹೆತ್ತವರು, ತನ್ನ ಮತ್ತು ಲೋಕದ ಕುರಿತಾಗಿ ಮಗುವಿನ ದೃಷ್ಟಿಯನ್ನು ರೂಪಿಸುತ್ತಾರೆ. ಪ್ರೀತಿ, ಮಾರ್ಗದರ್ಶನ, ಮತ್ತು ಶಿಕ್ಷೆಯೊಂದಿಗೆ, ಮಗುವು ಸ್ಥಿರ ವಯಸ್ಕನಾಗಿ ಬೆಳೆಯುತ್ತಾನೆ.
ಆದಾಗ್ಯೂ, ಅತಿ ಹೆಚ್ಚಿನ ಬಾರಿ, ಮಗುವಿನ ಮನಸ್ಸು ಮತ್ತು ಹೃದಯದ ಮೇಲಿನ ಪರಿಣಾಮಗಳು ದೂಷಿಸುವ ಹೆತ್ತವರಿಂದ ರೂಪಿಸಲ್ಪಟ್ಟಿವೆ. ಭಾವಾತ್ಮಕ, ಶಾರೀರಿಕ, ಮತ್ತು ಲೈಂಗಿಕ ದುರುಪಯೋಗ, ದೃಢವಾಗಿ ಸ್ಥಾಪಿಸಲ್ಪಡುವ ಮತ್ತು ಪುನಃ ರೂಪಿಸಲು ಕಷ್ಟವಾಗುವ ವಿರೂಪ ಆಲೋಚನಾ ನಮೂನೆಗಳನ್ನು ಸೃಷ್ಟಿಸುತ್ತದೆ.
ಭಾವನಾತ್ಮಕ ದೂಷಣೆ
ಮಾತುಗಳು ಮುಷ್ಟಿಗಳಿಗಿಂತ ಬಲವಾಗಿ ಹೊಡೆಯಬಲ್ಲವು. “ನಾನು ಎಂದೂ ಹುಟ್ಟಲೇಬಾರದಿತ್ತೆಂದು ಆಕೆಯು ಇಚ್ಛಿಸುತ್ತಾಳೆಂದು [ನನ್ನ ತಾಯಿಯು] ನನಗೆ ಹೇಳದೇ ಇರುವ ದಿನವು ನನಗೆ ಜ್ಞಾಪಕವಿಲ್ಲ,” ಎಂದು ಜೆಸನ್ ಹೇಳುತ್ತಾನೆ. ಕರೆನಳು ನೆನಪಿಸುವುದು: “ನಾನು ಕೆಟ್ಟವಳಾಗಿದ್ದೆ ಯಾ ಸಾಕಷ್ಟು ಉತ್ತಮಳಲವ್ಲೆಂದು ಯಾವಾಗಲೂ ನನಗೆ ತಿಳಿಯಪಡಿಸಲಾಗುತ್ತಿತ್ತು.”
ಅವರ ವಿರುದ್ಧ ಹೇಳಲಾದುದನ್ನು ಮಕ್ಕಳು ಸಾಮಾನ್ಯವಾಗಿ ನಂಬುವರು. ಒಬ್ಬ ಹುಡುಗನನ್ನು ಸಂತತವಾಗಿ ಮೂರ್ಖನೆಂದು ಹೇಳಲ್ಪಡುವಲ್ಲಿ, ಅನಂತರ ಅವನು ಕಟ್ಟಕಡೆಗೆ ತನ್ನನ್ನು ಮೂರ್ಖನೆಂದು ಭಾವಿಸಿಕೊಳ್ಳಬಹುದು. ಒಬ್ಬಾಕೆ ಹುಡುಗಿಗೆ ಅವಳು ಅಯೋಗ್ಯಳೆಂದು ಹೇಳಿರಿ, ಮತ್ತು ಅವಳು ಅದನ್ನೇ ನಂಬುವಳು. ಮಕ್ಕಳು ಮಿತವಾದ ಗ್ರಹಣ ಶಕ್ತಿಯನ್ನು ಪಡೆದಿರುತ್ತಾರೆ ಮತ್ತು ದೂಷ್ಯತನದಿಂದ ಅತಿಶಯ ಮಾಡಲ್ಪಟ್ಟದರ್ದಿಂದ ಯಾ ಸುಳ್ಳಾದುದರಿಂದ ಯಾವುದು ನಿಷ್ಕೃಷ್ಟವೆಂದು ಅನೇಕಬಾರಿ ವಿವೇಚಿಸಲಾರರು.
ಶಾರೀರಿಕ ದೂಷಣೆ
ಜೋ ಶಾರೀರಿಕವಾಗಿ ದೂಷಿಸುವ ತನ್ನ ತಂದೆಯನ್ನು ನೆನಪಿಸುತ್ತಾನೆ: “ನಾನು ಗೋಡೆಗೆ ಹತ್ತಿಕೊಳ್ಳುವಷ್ಟರವರೆಗೆ ಅವನು ನನಗೆ ಗುದ್ದಲಾರಂಭಿಸುತ್ತಿದ್ದನು. ಅವನು ನನಗೆ ಎಷ್ಟು ಗಟ್ಟಿಯಾಗಿ ಕುಟ್ಟುತ್ತಿರುತಿದ್ತನ್ದೆಂದರೆ ನಾನು ಮಂಕುಗವಿಯಲ್ಪಡುತ್ತಿದ್ದೆ. . . . ಅವನ ಭಾವಸ್ಫೋಟನೆಗಳನ್ನು ಯಾವುದು ಕೆರಳಿಸುವುದೆಂದು ಎಂದೂ ತಿಳಿಯಲಾರದೆ ಇರುವುದು ಅದರ ಅತಿ ಭೀತಿಯ ಭಾಗವಾಗಿತ್ತು!”
ಜೇಕನು ಅವನ ತಂದೆಯಿಂದ ನಿಯತಕ್ರಮದಲ್ಲಿ ಹೊಡೆಯಲ್ಪಡುತಿದ್ದನು. ಜೇಕನು ಕೇವಲ ಆರು ವರುಷದವನಿದ್ದಾಗ, ಅಂಥ ಒಂದು ಹೊಡೆಯುವಿಕೆಯಲ್ಲಿ ಅವನ ತೋಳು ಮುರಿಯಲ್ಪಟ್ಟಿತು. “ಅವನಾಗಲಿ ಯಾ ನನ್ನ ತಂಗಿಯರಾಗಲಿ ಅಥವಾ ತಾಯಿಯಾಗಲಿ ನಾನು ಅಳುವುದನ್ನು ನೋಡಲು ನಾನು ಬಿಡುತ್ತಿರಲಿಲ್ಲ,” ಎಂದು ಜೇಕ್ ನೆನಪಿಸುತ್ತಾನೆ. “ನನಗೆ ಉಳಿದಿದ್ದ ಒಂದೇ ದುರಭಿಮಾನವು ಅದಾಗಿತ್ತು.”
ಬಾಲ್ಯಾವಸ್ಥೆಯ ಶಾರೀರಿಕ ದೂಷಣೆಯು “ಪ್ರತಿ ದಿನ, ಪ್ರತಿ ವಾರ ಯಾ ಪ್ರತಿ ತಿಂಗಳಲ್ಲಿ ವಾಹನ ಅಪಘಾತವನ್ನು ಹೊಂದುವುದಕ್ಕೆ” ಸದೃಶವಾಗಿದೆ ಎಂದು ಸ್ಟ್ರಾಂಗ್ ಆ್ಯಟ್ ದ ಬ್ರೋಕನ್ ಪೇಸ್ಲಸ್ ಎಂಬ ಪುಸ್ತಕ ಸೂಚಿಸುತ್ತದೆ. ಅಂಥಾ ದುರುಪಯೋಗವು, ಲೋಕವು ಅಸುರಕ್ಷಿತವಾಗಿದೆ ಮತ್ತು ಯಾರನ್ನೂ ನಂಬಸಾಧ್ಯವಿಲ್ಲವೆಂದೂ ಮಗುವಿಗೆ ಕಲಿಸುತ್ತದೆ. ಇನ್ನೂ, ಹಿಂಸೆಯು ಯಾವಾಗಲೂ ಹಿಂಸೆಯನ್ನೇ ಉಂಟುಮಾಡುತ್ತದೆ. “ಮಕ್ಕಳನ್ನು ಅವರ ದೂಷಕರು ರಕ್ಷಿಸದೆ ಇರುವಲ್ಲಿ, ಒಂದು ದಿನ ಸಾರ್ವಜನಿಕರು ಮಕ್ಕಳಿಂದ ರಕ್ಷಿಸಲ್ಪಡಬೇಕಾಗುವುದು,” ಎಂದು ಟಯಿಮ್ ಪತ್ರಿಕೆಯು ಎಚ್ಚರಿಸುತ್ತದೆ.
ಲೈಂಗಿಕ ದೂಷಣೆ
ಒಂದು ಅಂದಾಜಿನ ಪ್ರಕಾರ, 3ರಲ್ಲಿ 1 ಹುಡುಗಿ ಮತ್ತು 7ರಲ್ಲಿ 1 ಹುಡುಗ, ಅವರು 18 ವರುಷ ಪ್ರಾಯದವರಾಗುವಷ್ಟರೊಳಗೆ ಲೈಂಗಿಕ ಅನುಭವದೊಳಗೆ ಬಲಾತ್ಕರಿಸಲ್ಪಟ್ಟಿರುತ್ತಾರೆ. ಹೆಚ್ಚಿನ ಮಕ್ಕಳು ಮೌನವಾಗಿ ಬಾಧೆಯನ್ನನುಭವಿಸುತ್ತಾರೆ. “ಕಾರ್ಯಾಚರಣೆಯ ವೇಳೆ ಕಳೆದುಹೋದ ಸೈನಿಕರಂತೆ, ದೂಷಿಸಲ್ಪಟ್ಟ ಮಕ್ಕಳು ಭೀತಿ ಮತ್ತು ಅಪರಾಧದ ಒಂದು ವ್ಯಕ್ತಿಗತ ಅರಣ್ಯದಲ್ಲಿ ಅನೇಕ ವರ್ಷಗಳ ವರೆಗೆ ಕಳೆದುಹೋದವರಾಗಿರುತ್ತಾರೆ” ಎಂದು ದ ಚೈಲ್ಡ್ ಇನ್ ಕ್ರೈಸಿಸ್ ಪುಸ್ತಕ ಸೂಚಿಸುತ್ತದೆ.
“ನನ್ನನ್ನು ದೂಷಿಸಿದಕ್ಕಾಗಿ ನಾನು ನನ್ನ ತಂದೆಯನ್ನು ಎಷ್ಟೊಂದು ದ್ವೇಷಿಸುತ್ತಿದ್ದೆನು ಮತ್ತು ಅವನನ್ನು ದ್ವೇಷಿಸುತ್ತಿದ್ದದ್ದರಿಂದ ನನಗೆಷ್ಟು ಅಪರಾಧದ ಭಾವನೆ ಇತ್ತು. ನನಗೆ ಅಂಥ ನಾಚಿಕೆಯ ಭಾವನೆಯಾಯಿತು ಯಾಕಂದರೆ, ಮಗುವು ತನ್ನ ಹೆತ್ತವರನ್ನು ಪ್ರೀತಿಸಬೇಕಾಗಿತ್ತು ಆದರೆ ನನ್ನ ಹೆತ್ತವರನ್ನು ನಾನೆಂದೂ ಪ್ರೀತಿಸಲಿಲ್ಲ,” ಎಂದು ಲವಿಜ್ಳು ಹೇಳುತ್ತಾಳೆ. ಮಗುವಿನ ಆದ್ಯ ಸಂರಕ್ಷಕನು ಅಪರಾಧ ಮಾಡುವದಕ್ಕೆ ತಿರುಗುವಾಗ ಇಂಥ ದಿಗ್ಭ್ರಮೆಗೊಳಿಸುವ ಭಾವನೆಗಳು ಅರ್ಥಮಾಡಿಕೊಳ್ಳುವಂಥವುಗಳಾಗಿವೆ. ಬೆವರ್ಲಿ ಎನಲ್ಗ್, ದ ರೈಟ್ ಟು ಇನೊಸೆನ್ಸ್ನಲ್ಲಿ ಕೇಳುವುದು: “ನಮ್ಮನ್ನು ಪ್ರೀತಿಸಿ, ಲಕ್ಷಿಸಬೇಕಾಗಿದವ್ದರಾದ ನಮ್ಮ ಸ್ವಂತ ಹೆತ್ತವರು ನಮ್ಮ ಕುರಿತು ಸ್ವಲ್ಪವಾದರೂ ಗಮನವನ್ನು ಕೊಡದೇ ಇರುವುದನ್ನು ನಾವು ಹೇಗೆ ಒಪ್ಪಿಕೊಳ್ಳಬಲ್ಲೆವು?”
ಲೈಂಗಿಕ ದೂಷಣೆಯು ಜೀವಿತದ ಬಗ್ಗೆ ಮಗುವಿನ ಇಡೀ ನೋಟವನ್ನು ವಕ್ರಗೊಳಿಸಬಲ್ಲದು. “ಮಗುವಾಗಿರುವಾಗ ಕಾಡಿಸಲ್ಪಟ್ಟಿರುವ ಪ್ರತಿಯೊಬ್ಬ ವಯಸ್ಕರು ಅವನ ಯಾ ಅವಳ ಬಾಲ್ಯಾವಸ್ಥೆಯಿಂದ ನಿರೀಕ್ಷಾಹೀನವಾಗಿ ಕೊರತೆಯ, ಅಯೋಗ್ಯತೆಯ, ಮತ್ತು ನಿಜವಾಗಿಯೂ ಕೆಟ್ಟವರಾಗಿದ್ದೇವೆಂಬ ಅಪಪ್ರಯೋಗದ ಭಾವನೆಗಳನ್ನು ಹೊರತರುತ್ತಾರೆ,” ಎಂದು ಡಾ. ಸೂಜನ್ ಫಾರ್ವರ್ಡ್ ಬರೆಯುತ್ತಾರೆ.
ಅದು ಹೊರಟು ಹೋಗುವುದಿಲ್ಲ
“ಕೇವಲ ಮಗುವಿನ ದೇಹವು ದೂಷಿಸಲ್ಪಟ್ಟದ್ದು ಯಾ ಅಲಕ್ಷಿಸಲ್ಪಟ್ಟದ್ದಲ್ಲ,” ಎಂದು ಸಂಶೋಧಕಿ ಲಿಂಡ ಟಿ. ಸ್ಯಾನ್ಫರ್ಡ್ ಬರೆಯುತ್ತಾರೆ. “ತೊಂದರೆಗೊಳಪಟ್ಟ ಕುಟುಂಬಗಳು ಮಗುವಿನ ಮನಸ್ಸನ್ನು ಅಪಪ್ರಯೋಗಿಸುತ್ತಾರೆ.” ಒಂದು ಮಗುವು, ಭಾವನಾತ್ಮಕವಾಗಿಯಾಗಲಿ, ಶಾರೀರಿಕವಾಗಿಯಾಗಲಿ, ಯಾ ಲೈಂಗಿಕವಾಗಿ ದೂಷಿಸಲ್ಪಟ್ಟಾಗ, ಪ್ರೀತಿಯೋಗ್ಯವಲ್ಲದ ಮತ್ತು ಅಯೋಗ್ಯತೆಯ ಭಾವನೆಗಳೊಂದಿಗೆ ಅವನು ಯಾ ಅವಳು ಬೆಳೆಯಬಹುದು.
ಈ ಮುಂಚೆ ತಿಳಿಸಲಾದ ಜೇಸನನು, ವಯಸ್ಕನಾಗಿ ಎಷ್ಟೊಂದು ಕೀಳು ಸ್ವಗೌರವವನ್ನು ಹೊಂದಿದ್ದನೆಂದರೆ ಅವನನ್ನು ಆತ್ಮಹತ್ಯೆಯ ಅಪಾಯವಿದವ್ದನೆಂದು ಘೋಷಿಸಲಾಗಿತ್ತು. ಅವನು ತನ್ನನ್ನೇ ಅನಾವಶ್ಯಕವಾಗಿ ಜೀವಕ್ಕೆ ಬೆದರಿಕೆಯನ್ನೊಡ್ಡುವ ಪರಿಸ್ಥಿತಿಗಳಲ್ಲಿ ಹಾಕಿಕೊಳ್ಳುತ್ತಾ, ‘ನೀನೆಂದಿಗೂ ಹುಟ್ಟಬಾರದಿತ್ತು’ ಎಂದು ಅವನ ತಾಯಿಯು ಅವನಿಗೆ ಕಲಿಸಿರುವ ಹಾಗೆ ಅವನ ಜೀವಿತಕ್ಕೆ ಲೆಕ್ಕ ಹಾಕಿ ಬೆಲೆ ಕಟ್ಟಿದನು.
ಮಗುವಾಗಿರುವಾಗ ಶಾರೀರಿಕವಾಗಿ ದೂಷಿಸಲ್ಪಡುತ್ತಿದ್ದ ಪರಿಣಾಮಗಳ ಮೇಲೆ ಪ್ರತಿಬಿಂಬಿಸುತ್ತಾ ಜೋ ಹೇಳುವುದು: “ಮನೆಯನ್ನು ಬಿಟ್ಟ ಯಾ ಮದುವೆಯಾದ ಕಾರಣ ದೂಷಣೆಯಿಂದುಂಟಾದ ಪರಿಣಾಮಗಳು ತನ್ನಷ್ಟಕ್ಕೆ ಹೊರಟು ಹೋಗುವುದಿಲ್ಲ. ನಾನು ಯಾವಾಗಲೂ ಯಾವದಾದರೂ ವಿಷಯಕ್ಕೆ ಹೆದರುತ್ತೇನೆ, ಮತ್ತು ಅದಕ್ಕಾಗಿ ನಾನು ನನ್ನನ್ನೇ ದ್ವೇಷಿಸಿಕೊಳ್ಳುತ್ತೇನೆ.” ಶಾರೀರಿಕವಾಗಿ ದೂಷಿಸುವ ಮನೆತನದ ತುಯ್ತವು ಅನೇಕ ಮಕ್ಕಳು, ಸಂರಕ್ಷಣೆಯ ಬದಲಿಗೆ ಸೆರೆಯಲ್ಲಿಡಲ್ಪಟ್ಟ ನಕಾರಾತ್ಮಕ ನಿರೀಕ್ಷಿಸುವಿಕೆಗಳೊಂದಿಗೆ ಮತ್ತು ಕಟ್ಟುನಿಟ್ಟಿನ ಆತ್ಮರಕ್ಷಣೋಪಾಯಗಳೊಂದಿಗೆ ಬೆಳೆಯುತ್ತಾರೆ.
ಕೊನೀಗೆ, ಅಗಮ್ಯಗಮನವು ಅವಳ ಪ್ರಾಯದ ವಯಸ್ಸನ್ನು ಘನೀಕರಿಸಿದ ವಿಕೃತ ಸ್ವ-ಪ್ರತೀಕವನ್ನು ಸೃಷ್ಟಿಸಿತು: “ಜನರು ನೇರವಾಗಿ ನನ್ನೊಳಗೆ ನೋಡಿ, ನಾನು ಎಷ್ಟು ಅಸಹ್ಯಳಾಗಿರುವೆನೆಂದು ನೋಡಬಲ್ಲರೆಂದು ನಾನು ಇನ್ನೂ ಅನೇಕ ಬಾರಿ ಆಲೋಚಿಸುತ್ತೇನೆ.”
ಎಲ್ಲ ತರಹದ ದೂಷಿಸುವಿಕೆಗಳು ತರುಣಾವಸ್ಥೆಯ ಸಮಯದಷ್ಟರೊಳಗೆ ಆಳವಾಗಿ ಅತಿಕ್ರಮಿಸಲ್ಪಡಬಹುದಾದ ವಿಷಕಾರಿ ಪಾಠಗಳನ್ನು ಕಲಿಸುತ್ತವೆ. ನಿಜ, ಏನನ್ನು ಕಲಿತಿದ್ದೇವೊ ಅದನ್ನು ಬಿಟ್ಟುಬಿಡಬಹುದು. ಬಾಲ್ಯಾವಸ್ಥೆಯ ದೂಷಣೆಯಿಂದ ಚೇತರಿಸಲ್ಪಟ್ಟ ಅಸಂಖ್ಯಾತ ಪಾರಾದವರು ಆ ನಿಜತ್ವಕ್ಕೆ ಸಾಕ್ಷಿಗಳಾಗಿರುತ್ತಾರೆ. ಆದರೆ ಹೆತ್ತವರು ತಮ್ಮ ಮಗುವಿನ ಜನನದಂದಿನಿಂದ ಅವನ ಮತ್ತು ಲೋಕದ ಕುರಿತು ಅವನ ಹೆಚ್ಚಿನ ಭಾವನೆಯನ್ನು ಅವರು ರೂಪಿಸುತ್ತಾರೆ ಎಂದು ಅರಿತುಕೊಳ್ಳುವಲ್ಲಿ ಎಷ್ಟೊಂದು ಉತ್ತಮವಾಗಿರುವುದು. ಒಂದು ಮಗುವಿನ ಶಾರೀರಿಕ ಮತ್ತು ಭಾವನಾತ್ಮಕ ಒಳಿತು ಹೆಚ್ಚಾಗಿ ಅವನ ಹೆತ್ತವರ ಕೈಯಲ್ಲಿರುತ್ತದೆ.
[ಪುಟ 7 ರಲ್ಲಿರುವ ಚಿತ್ರ]
ಮಾತುಗಳು ಮುಷ್ಟಿಗಳಿಗಿಂತ ಬಲವಾಗಿ ಹೊಡೆಯಬಲ್ಲವು