ನಿಮ್ಮ ಮಗುವಿನಲ್ಲಿನ ಒತ್ತಡದ ಸಂಕೇತಗಳನ್ನು ಓದುವುದು
“ಒತ್ತಡದ ಭಾವನೆಗಳು ತಡೆಯಿಲ್ಲದ ತೇಲಿಕೆಯಾಗಿರುವುದು ವಿರಳ: ಅವುಗಳು ಸಾಮಾನ್ಯವಾಗಿ ನಿರ್ದಿಷ್ಟ ಘಟನೆಗಳ ಯಾ ಪರಿಸ್ಥಿತಿಗಳ ಪ್ರತಿಕ್ರಿಯೆಗಳಾಗಿರುತ್ತವೆ.”—ಡಾ. ಲಿಲ್ಯನ್ ಜಿ. ಕ್ಯಾಟ್ಸ್.
ಕತ್ತಲೆಯ, ಮಂಜು ಕವಿದ ರಾತ್ರಿಯಲ್ಲಿ ಒಂದು ವಿಮಾನವನ್ನು ಉಡಾಯಿಸುವಲ್ಲಿ, ತಾನು ಎತ್ತ ಸಾಗುತ್ತಿದ್ದೇನೆಂದು ಪೈಲಟನಿಗೆ ಕಾಣುವುದು ಹೇಗೆ? ಹಾರಾಟದಿಂದ ಇಳಿದಾಣದವರೆಗೆ, ಅವನು ಸಂಕೇತಗಳ ಮೇಲೆ ಆತುಕೊಳ್ಳುತ್ತಾನೆ. ಒಂದು ದೊಡ್ಡ ವಿಮಾನದ ಕಾಕ್ಪಿಟ್ನ ಪ್ಯಾನೆಲ್ಗಳಲ್ಲಿ, ಪ್ರತಿಯೊಂದೂ ಪ್ರಾಮುಖ್ಯ ಮಾಹಿತಿಯನ್ನು ತಿಳಿಸುವ ಮತ್ತು ಪೈಲಟ್ಗೆ ಸಂಭವನೀಯ ಸಮಸ್ಯೆಗಳಿಗೆ ಎಚ್ಚರಿಸುವ, ನೂರಕ್ಕಿಂತಲೂ ಹೆಚ್ಚಿನ ಉಪಕರಣಗಳು ಇವೆ.
ನಮ್ಮ ಒತ್ತಡ ತುಂಬಿರುವ ಲೋಕದಲ್ಲಿ ಬೆಳೆಯುವುದು ಬಿರುಗಾಳಿಯೊಳಗೆ ಹಾರಾಟ ಮಾಡುವಂತಿದೆ. ಬಾಲ್ಯಾವಸ್ಥೆಯಿಂದ ಫ್ರೌಡಾವಸ್ಥೆಗೆ ಒಂದು ನಯವಾದ ಹಾರಾಟವನ್ನು ಹೆತ್ತವರು ಹೇಗೆ ಪೋಷಿಸಸಾಧ್ಯವಿದೆ? ಅನೇಕ ಮಕ್ಕಳು ಅವರ ಒತ್ತಡಗಳ ಕುರಿತು ಮಾತಾಡದೇ ಇರುವುದರಿಂದ, ಹೆತ್ತವರು ಸಂಕೇತಗಳನ್ನು ಓದಲು ಕಲಿಯಬೇಕು.
ದೇಹವು “ಮಾತಾಡುತ್ತದೆ”
ಮಗುವಿನ ಒತ್ತಡವು ಅನೇಕಬಾರಿ ದೇಹದ ಮೂಲಕ ನಿವೇದಿಸಲ್ಪಡುತ್ತದೆ. ಉದರ ಸಮಸ್ಯೆಗಳು, ತಲೆ ನೋವುಗಳು, ಬಳಲಿಕೆ, ನಿದ್ರಾ ಅವ್ಯವಸ್ಥೆ, ಮತ್ತು ವಿಸರ್ಜನೆಯೊಂದಿಗಿನ ಸಮಸ್ಯೆಗಳು ಸೇರಿ, ಮನಶಾರೀರಿಕ ಪ್ರತಿಕ್ರಿಯೆಗಳು, ಏನೋ ತಪ್ಪಿದೆ ಎಂಬ ಸಂಕೇತಗಳಾಗಿರಬಹುದು.a
ಶ್ಯಾರನಳ ಕೇಳುವ ಶಕ್ತಿಯ ಕಳಕೊಳ್ಳುವಿಕೆಯು, ಗಾಢ ಏಕಾಂತತೆಯ ಅವಧಿಯ ಪರಮಾವಧಿಯಾಗಿತ್ತು. ಏಮಿಯು ಶಾಲೆಗೆ ಹೋದಾಗ, ಆಕೆಯ ಉದರ ಸೆಡೆತವು ಅವಳ ತಾಯಿಯಿಂದ ಅಗಲಿದರ್ದ ಭಯದ ಮೂಲಕ ಪ್ರೇರಿಸಲ್ಪಟ್ಟಿತ್ತು. ಜಾನ್ನ ಮಲಬದ್ಧತೆಯು ಅವನ ಹೆತ್ತವರ ಮಧ್ಯೆ ಘೋರ ಜಗಳವನ್ನು ನೋಡಿದರ್ದ ಉದ್ವೇಗದಿಂದ ಫಲಿಸಿತ್ತು.
ಹತ್ತು ವರ್ಷ ಪ್ರಾಯದ ಆ್ಯಶ್ಲಿಗೆ ಲೈಂಗಿಕ ಪೀಡಿಸುವಿಕೆಯಿಂದಾಗಿ ಶಾರೀರಿಕ ಪರಿಣಾಮಗಳಿದ್ದವು. “ನಾನು ಅಸೌಖ್ಯಳಾಗಿದ್ದುದರ ಕಾರಣ [ಬಲಾತ್ಕಾರ ಸಂಭೋಗದ ಅನಂತರದ] ಒಂದು ವಾರ ಶಾಲೆಗೆ ಹೋಗದೇ ಇದ್ದದ್ದು ನನಗೆ ನೆನಪಿದೆ,” ಎಂದು ಅವಳು ಜ್ಞಾಪಿಸಿಕೊಳ್ಳುತ್ತಾಳೆ. ಹೆನ್ವ್ ಯೂಅರ್ ಚೈಲ್ಡ್ ಹ್ಯಾಸ್ ಬೀನ್ ಮೊಲೆಸ್ಟೆಡ್ ಪುಸ್ತಕ ವಿವರಿಸುವುದು: “ದೈಹಿಕ ಪೀಡನೆಯನ್ನು ಅನುಭವಿಸಿದ ಹೊರೆಯು ಮಗುವನ್ನು ಅನಾರೋಗ್ಯಗೊಳಗಾಗುವಂತೆ ಒತ್ತಡ ಹಾಕಬಹುದು.” ಅಂಥಾ ದೈಹಿಕವಾಗಿ ಕಂಡುಬರಸಾಧ್ಯವಿರುವ ರೋಗಾವಸ್ಥೆಯ ಸಂಕೇತಗಳಲ್ಲಿ ವಿಕಾರತೆಗಳು, ವಿಸರ್ಜನೆಯ ಸಮಯದಲ್ಲಿ ನೋವು, ಮರುಕೊಳಿಸುವ ಹೊಟ್ಟೆ ನೋವುಗಳು, ತಲೆಬೇನೆಗಳು, ಮತ್ತು ಯಾವುದೇ ವ್ಯಕ್ತ ಕಾರಣವಿಲ್ಲದ ಎಲುಬು ಯಾ ಸ್ನಾಯು ನೋವುಗಳು ಸೇರಿವೆ.
ಕಾಯಿಲೆಯು ಮನಶಾರೀರಿಕವೆಂದು ಕಂಡುಬರುವಾಗ, ಹೆತ್ತವರು ಆ ಸಂಕೇತವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. “ಮಗುವು ಮೋಸ ಮಾಡುತ್ತದೋ ಇಲ್ಲವೋ ಎಂಬುದು ವಿಷಯವಾಗಿರುವುದಿಲ್ಲ, ಪ್ರಾಮುಖ್ಯವೇನಂದರೆ ಮೂಲಭೂತವಾಗಿರುವ ಸಮಸ್ಯೆಯೆ,” ಎಂದು ಡಾ. ಆ್ಯಲಿಸ್ ಎಸ್. ಹಾನಿಗ್ ಹೇಳುತ್ತಾರೆ.
ಕ್ರಿಯೆಗಳು ಮಾತುಗಳಿಗಿಂತ ಗಟ್ಟಿಯಾಗಿ ಮಾತಾಡುತ್ತವೆ
ಸ್ವಭಾವದಲ್ಲಿ ಅಕಸ್ಮಾತ್ತಾದ ಬದಲಾವಣೆಯು ಅನೇಕಬಾರಿ ಸಹಾಯಕ್ಕಾಗಿ ಕರೆಯಾಗಿರುತ್ತದೆ. ಗಿವಿಂಗ್ ಸಾರೋ ವರ್ಡ್ಸ್ ಪುಸ್ತಕವು ನಮೂದಿಸುವುದು: “ಉತ್ತಮ ವಿದ್ಯಾರ್ಥಿಯು ತೇರ್ಗಡೆಯಾಗದಿರುವ ದರ್ಜೆಗಳನ್ನು ಪಡೆಯಲಾರಂಭಿಸುವಾಗ, ಅದಕ್ಕೆ ಗಮನದ ಆವಶ್ಯಕತೆ ಇದೆ, ಮತ್ತು ಈ ಮುಂಚೆ ತೊಂದರೆಯನ್ನುಂಟು ಮಾಡುವ ಮಗುವು ದೇವದೂತನಾಗಿ ಬದಲಾದಾಗಲೂ ಇದು ಸತ್ಯವಾಗಿರುತ್ತದೆ.”
ಅವನ ತಾಯಿ ಅವಳ ಕೆಲಸದಲ್ಲಿ ಪೂರ್ಣವಾಗಿ ಒಳಗೂಡಿದಾಗ ಏಳು ವರ್ಷದ ಟಿಮ್ಮಿಯ ಹಠಾತ್ತಾದ ಸುಳ್ಳು ಹೇಳುವ ವಿಧಾನವು ಆರಂಭವಾಯಿತು. ಆರು ವರ್ಷದ ಆ್ಯಡಮ್ನ ಹಠಾತ್ತಾದ ಒರಟು ಸ್ವಭಾವವು ಶಾಲೆಯಲ್ಲಿ ಕೊರತೆಯ ಭಾವನೆಗಳಲ್ಲಿ ಬೇರೂರಿತು. ಏಳು ವರ್ಷದ ಕಾರ್ಲ್ನ ಹಾಸಿಗೆ ತೋಯಿಸುವಿಕೆಗೆ ಮರಳುವಿಕೆಯು, ಅವನ ತಂಗಿಯ ಕಡೆಗೆ ಈಗ ತಿರುಗಲ್ಪಟ್ಟಿದೆ ಎಂದು ಕಂಡುಬಂದ ಹೆತ್ತವರ ಸ್ವೀಕಾರತೆಗಾಗಿರುವ ಕಡು ಬಯಕೆಯನ್ನು ತೋರಿಸಿಕೊಟ್ಟಿತು.
ಸ್ವ-ನಾಶಕಾರಕ ಸ್ವಭಾವವು ವಿಶೇಷವಾಗಿ ಕ್ಷೋಭೆಗೊಳಿಸುವಂಥದ್ದಾಗಿದೆ. ಹನ್ನೆರಡು ವರ್ಷದ ಸಾರಳ ಅಡಿಗಡಿಗೆ ಸಂಭವಿಸುವ ಅಪಘಾತಗಳು ಕೇವಲ ಅಚತುರತೆಗೆ ಆರೋಪಿಸಲಾಗುವುದಿಲ್ಲ. ಅವಳ ಹೆತ್ತವರ ವಿವಾಹ ವಿಚ್ಛೇದದಂದಿನಿಂದ, ತನ್ನನ್ನೇ ಗಾಯಪಡಿಸಿಕೊಳ್ಳುವುದು, ಅವಳ ಗೈರುಹಾಜರಾದ ತಂದೆಯ ವಾತ್ಸಲ್ಯವನ್ನು ಪುನಃ ಸೆರೆಹಿಡಿಯಲು ಪ್ರಯತ್ನಿಸಲು ಅವಳು ಅರಿವಿಲ್ಲದೆ ಬಳಸಿದ ಮಾರ್ಗವಾಗಿತ್ತು. ಸ್ವಯಂಕೃತ ಸರಳವಾದಂಥ ಚಿಕ್ಕ ಗಾಯಗಳಂತಹದ್ದೆ ಇರಲಿ ಯಾ ಆತ್ಮಹತ್ಯೆಯ ಪ್ರಯತ್ನದಂಥ ಗಂಭೀರವಾದಂತಹದ್ದೆ ಇರಲಿ, ಸ್ವ-ನಾಶಕಾರಕ ಸ್ವಭಾವದ ಮೂಲಕ ಅಂತರ್ಮುಖಿಯಾದ ಆಕ್ರಮಣ ಪ್ರವೃತ್ತಿಯು ಗಾಢ ಒತ್ತಡದ ಸಂಕೇತವಾಗಿದೆ.
ಹೃದಯದೊಳಗಿಂದ ಮಾತಾಡುವುದು
“ಹೃದಯದಲ್ಲಿ ತುಂಬಿರುವುದೇ ಬಾಯಲ್ಲಿ ಹೊರಡುವದು” ಎಂದು ಯೇಸು ಕ್ರಿಸ್ತನು ಅಂದನು. (ಮತ್ತಾಯ 12:34) ನಕಾರಾತ್ಮಕ ಭಾವನೆಗಳ ಮೂಲಕ ಅಧಿಕಾರಕ್ಕೊಳಗಾದ ಹೃದಯವು ಸರ್ವಸಾಧಾರಣವಾಗಿ ಮಗುವು ಏನನ್ನು ಹೇಳುತ್ತದೋ ಅದರ ಮೂಲಕ ಪ್ರಕಟವಾಗುತ್ತದೆ.
“‘ಯಾರೂ ನನ್ನನ್ನು ಮೆಚ್ಚುವುದಿಲ್ಲ’ ಎಂದು ಹೇಳುತ್ತಾ ಮನೆಗೆ ಬರುವ ಮಕ್ಕಳು ನಿಜಕ್ಕೂ ಅವರು ತಮ್ಮನ್ನು ತಾವೇ ಮೆಚ್ಚುವುದಿಲ್ಲವೆಂದು ನಿಮಗೆ ಹೇಳುತ್ತಾರೆ,” ಎಂದು ಡಾ. ಲರೇನ್ ಸ್ಟರ್ನ್ ಹೇಳುತ್ತಾಳೆ. ಜಂಬಕೊಚ್ಚಿಕೊಳ್ಳುವುದರ ಕುರಿತೂ ಇದು ಸತ್ಯವಾಗಿರಬಹುದು. ಕೀಳು ಸ್ವ-ಗೌರವದ ವಿರುದ್ಧವಾದುದನ್ನು ವ್ಯಕ್ತಪಡಿಸುವಂತೆ ತೋರುವುದಾದರೂ, ನಿಜ ಯಾ ಕಾಲ್ಪನಿಕ ಪೂರೈಸುವಿಕೆಗಳ ಕುರಿತು ಜಂಬಕೊಚ್ಚಿಕೊಳ್ಳುವುದು ಅಯೋಗ್ಯತೆಯ ಆಳವಾದ ಭಾವನೆಗಳನ್ನು ಜಯಿಸುವ ಒಂದು ಪ್ರಯತ್ನವಾಗಿರಬಹುದು.
ಎಲ್ಲ ಮಕ್ಕಳು ಅಸ್ವಸ್ಥರಾಗುತ್ತಾರೆ, ಕೆಲವೊಮ್ಮೆ ಅಯೋಗ್ಯವಾಗಿ ವರ್ತಿಸುತ್ತಾರೆ, ಮತ್ತು ತಮ್ಮೊಂದಿಗೆಯೆ ನಿಯತಕಾಲಿಕ ಆಶಾಭಂಗವನ್ನು ಅನುಭವಿಸುತ್ತಾರೆ ಎಂಬುದು ನಿಜ. ಆದರೆ ಅಂಥ ಸಮಸ್ಯೆಗಳು ಒಂದು ನಮೂನೆಯನ್ನುಂಟು ಮಾಡುವಾಗ ಮತ್ತು ನೇರವಾದ ಕಾರಣವು ವ್ಯಕ್ತವಾಗದಿರುವಾಗ, ಹೆತ್ತವರು ಆ ಸಂಕೇತಗಳ ಅರ್ಥವನ್ನು ತೂಗಬೇಕು.
ಒಂದು ಅತ್ಯಂತ ಹಿಂಸಾತ್ಮಕ ಆಕ್ರಮಣದ ಅಪರಾಧವನ್ನು ನಡೆಸಿದವರಾದ ಆರು ಹದಿವಯಸ್ಕರ ಬಾಲ್ಯಾವಸ್ಥೆಯ ಸ್ವಭಾವದ ನಮೂನೆಗಳನ್ನು ಪರಿಶೀಲಿಸಿದ ಅನಂತರ, ಮೇರಿ ಸೂಜನ್ ಮಿಲ್ಲರ್ ಸೂಚಿಸಿದ್ದು: “ಎಲ್ಲ ಚಿಹ್ನೆಗಳು ಇದ್ದವು. ಆ ಹುಡುಗರು ಅನೇಕ ವರ್ಷಗಳಿಂದ ಅವರ ಜೀವಿತದ ನಮೂನೆಗಳಲ್ಲಿ ಆ ಚಿಹ್ನೆಗಳನ್ನು ವ್ಯಕ್ತಪಡಿಸಿದ್ದರು, ಅದರೆ ಯಾರೂ ಯಾವುದೇ ಗಮನವನ್ನೀಯಲಿಲ್ಲ. ವಯಸ್ಕರು ಅವಲೋಕಿಸಿದರು, ಆದರೆ ಅವರು ಉದಾಸೀನ ಭಾವದವರಾಗಿದ್ದರು.”
ಈಗ ಎಂದಿಗಿಂತಲೂ ಹೆಚ್ಚು, ಹೆತ್ತವರು ಬಾಲ್ಯಾವಸ್ಥೆಯ ಒತ್ತಡದ ಸಂಕೇತಗಳ ಗುರುತು ಹಿಡಿಯಲು ಎಚ್ಚರಿಕೆಯಿಂದಿರಬೇಕು ಮತ್ತು ಅವುಗಳ ಮೇಲೆ ಕ್ರಿಯೆಕೈಕೊಳ್ಳಬೇಕು.
[ಪುಟ 8 ರಲ್ಲಿರುವ ಚೌಕ]
ಗರ್ಭಾಶಯದಲ್ಲಿ ಒತ್ತಡ?
ಒಂದು ಭ್ರೂಣವು ಕೂಡ ಅದರ ತಾಯಿಯು ರಕ್ತಪ್ರವಾಹದಲ್ಲಿನ ರಾಸಾಯನಿಕ ಬದಲಾವಣೆಗಳ ಮೂಲಕ ಸಂಸರ್ಗಿಸುವ ಒತ್ತಡ, ಭೀತಿ, ಮತ್ತು ಚಿಂತೆಯನ್ನು ಗೊತ್ತುಹಚ್ಚುತ್ತದೆ. “ಗರ್ಭವತಿಯಾದ ಹೆಂಗಸು ಅನುಭವಿಸುವ ಉದ್ವೇಗದ ಪ್ರತಿಯೊಂದು ಅಂಶವನ್ನು ಬೆಳೆಯುತ್ತಿರುವ ಭ್ರೂಣವು ಅರಿಯುತ್ತದೆ,” ಎಂದು ಲಿಂಡ ಬರ್ಡ್ ಫ್ರಾಂಕ, ಗ್ರೋವಿಂಗ್ ಅಪ್ ಡಿವೂರ್ಸ್ಡ್ ಪುಸ್ತಕದಲ್ಲಿ ಬರೆಯುತ್ತಾಳೆ. “ಭ್ರೂಣದ ಮತ್ತು ಹೆಂಗಸಿನ ನರಗಳ ವ್ಯವಸ್ಥೆಯ ನೇರವಾಗಿ ಜೋಡಿಸಲ್ಪಟ್ಟಿರದಿದ್ದರೂ, ಆ ಇಬ್ಬರ ಮಧ್ಯೆ ಅಗಲಿಸಲಾಗದ ಏಕ ಮಾರ್ಗ ಸಂಬಂಧವಿದೆ.” ಟಯಿಮ್ ಪತ್ರಿಕೆಗನುಸಾರ, 18 ತಿಂಗಳು ಮತ್ತು ಅದಕ್ಕಿಂತ ಸಣ್ಣ ಕೂಸುಗಳಲ್ಲಿ 30 ಪ್ರತಿಶತ ಭಾವಗಳ ಹಿಂದೆಗೆತ ಮತ್ತು ಚಿಂತೆಯ ಆಕ್ರಮಣಗಳ ವರೆಗಿನ ಒತ್ತಡಕ್ಕೆ ಸಂಬಂಧಿಸಿದ ತೊಂದರೆಗಳನ್ನು ಅನುಭವಿಸುತ್ತವೆಂದು ಅಂದಾಜಿಸಿದ್ದು, ಇದರ ಕಾರಣವನ್ನು ವಿವರಿಸಬಹುದು. “ಅಸುಖಿ, ವ್ಯಥೆಯುಳ್ಳ ಹೆಂಗಸಿಗೆ ಹುಟ್ಟಿದ ಕೂಸುಗಳು ತಾವೇ ಅನೇಕಬಾರಿ ಅಸುಖಿ ಮತ್ತು ವ್ಯಥೆಯುಳ್ಳವುಗಳಾಗಿರುತ್ತವೆ,” ಎಂದು ಫ್ರಾಂಕ ಕೊನೆಗೊಳಿಸುತ್ತಾಳೆ.
[ಪುಟ 9 ರಲ್ಲಿರುವ ಚೌಕ]
ಮಗುವು ಎಲ್ಲವನ್ನು ಅಂತ್ಯಗೊಳಿಸಲು ಪ್ರಯತ್ನಿಸುವಾಗ
“ನಾನು ನೂರು ವರುಷಗಳ ವರೆಗೆ ಮಲಗುವಲ್ಲಿ ಏನಾಗಬಲ್ಲದು?” ಲೆಟ್ಟಿ ತನ್ನ ತಂದೆಯನ್ನು ಕೇಳಿದಳು. ಒಂದು ಹುಡುಗಾಟಿಕೆಯ ಪ್ರಶ್ನೆ ಎಂದಾತನು ಆಲೋಚಿಸಿದನು. ಆದರೆ ಲೆಟ್ಟಿ ಹುಡುಗಾಟಿಕೆಯವಳಾಗಿರಲಿಲ್ಲ. ಅನೇಕ ದಿನಗಳ ಅನಂತರ ಒಂದು ಇಡೀ ಬಾಟಲಿ ತುಂಬಾ ನಿದ್ರಾ ಗುಳಿಗೆಗಳನ್ನು ನುಂಗಿದರ್ದ ಕಾರಣ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ನಿಮ್ಮ ಮಗುವು ಆತ್ಮಹತ್ಯೆಯ ಬಗ್ಗೆ ಆಲೋಚಿಸುತ್ತದೆ ಯಾ ವಾಸ್ತವವಾಗಿ ಪ್ರಯತ್ನಿಸುವುದಾದರೆ, ನೀವೇನನ್ನು ಮಾಡಬೇಕು? “ತತ್ಕ್ಷಣ ವೃತ್ತಿಗೆ ಸಂಬಂಧಪಟ್ಟವರ ಸಹಾಯವನ್ನು ಹುಡುಕಿರಿ,” ಎಂದು ಡಿಪ್ರೆಷನ್—ಹ್ವಾಟ್ ಫ್ಯಾಮಿಲಿಸ್ ಷೂಡ್ಡ್ ನೋ ಪುಸ್ತಕವು ಉತ್ತೇಜಿಸುತ್ತದೆ. “ಸಂಭವನೀಯ ಆತ್ಮಹತ್ಯೆಗಳು, ಖಿನ್ನ ವ್ಯಕ್ತಿಯ ಬಹುವಾದ ಜಾಗ್ರತೆಯನ್ನು ತೆಗೆದುಕೊಳ್ಳುವವರ, ಮತ್ತು ಹವ್ಯಾಸಿಗಳ ಕೆಲಸವಾಗಿರುವುದಿಲ್ಲ. ಅವನು ಯಾ ಅವಳು ಸುಮ್ಮನಿದ್ದು, ಎಲ್ಲ ಭಾವನೆಗಳನ್ನು ಗಾಬರಿಪಡಿಸುವ ಫಲಿತಾಂಶಗಳೊಂದಿಗೆ ಅವರು ಆಸ್ಫೋಟಿಸುವ ವರೆಗೆ ಒಳಗಿಟ್ಟಿರುವಾಗ, ಆತ್ಮಹತ್ಯೆ ಕೈಕೊಳ್ಳಬಾರದೆಂದು ನೀವು ನಿಮ್ಮ ಕುಟುಂಬ ಸದಸ್ಯರನ್ನು ಮನಗಾಣಿಸಿರುವಿರೆಂದು ನೀವು ನೆನಸಬಹುದು.”
ಯೋಗ್ಯ ಚಿಕಿತ್ಸೆಯೊಂದಿಗೆ, ಎಲ್ಲವನ್ನು ಅಂತ್ಯಗೊಳಿಸಲು ಪ್ರಯತ್ನಿಸುವ ಮಗುವಿಗೆ ನಿರೀಕ್ಷೆಯು ಇದೆ. “ಆತ್ಮಹತ್ಯೆಗೆ ಪ್ರಯತ್ನಿಸುವ ಹೆಚ್ಚಿನ ಜನರಿಗೆ ನಿಜಕ್ಕೂ ತಮ್ಮನ್ನು ಹತಿಸಿಕೊಳ್ಳುವುದು ಬೇಡವಾಗಿರುತ್ತದೆ,” ಎಂದು ಮೇಲೆ ಉಲ್ಲೇಖಿಸಿಲಾದ ಪುಸ್ತಕವು ಹೇಳುತ್ತದೆ. “ಅವರು ಕೇವಲ ನೋವನ್ನು ನಿಲ್ಲಿಸಬಯಸುತ್ತಾರೆ. ಅವರ ಪ್ರಯತ್ನಗಳು ಸಹಾಯಕ್ಕಾಗಿರುವ ಕೂಗಾಗಿರುತ್ತವೆ.” ಕ್ರೈಸ್ತ ಸಭೆಯೊಳಗೆ, ಆತ್ಮಹತ್ಯೆಯ ಒಲವುಗಳನ್ನು ನಿರ್ವಹಿಸಲು ಪ್ರತಿಕೂಲ ಪರಿಸ್ಥಿತಿಯಲ್ಲಿರುವ ಹೆತ್ತವರು ಪ್ರೀತಿಪೂರ್ವಕ ಬೆಂಬಲವನ್ನು ಮತ್ತು ಉತ್ತಮ ಶಾಸ್ತ್ರೀಯ ಸಲಹೆಯನ್ನು ಹಿರಿಯರಿಂದ ಪಡೆಯಬಹುದು.
[ಅಧ್ಯಯನ ಪ್ರಶ್ನೆಗಳು]
a ಕಾಲ್ಪನಿಕ ಅಸ್ವಾಸ್ಥವನ್ನು ಒಳಗೂಡಿರುವ ವ್ಯಾಧಿಭ್ರಾಂತಿ ವಿಷಣ್ಣತೆಯಂತಿರದೆ, ಒಂದು ಮನಶಾರೀರಿಕ ರೋಗಾವಸ್ಥೆಯು ನೈಜವಾದುದ್ದಾಗಿರುತ್ತದೆ. ಆದಾಗ್ಯೂ ಅದರ ಕಾರಣಗಳು ಶಾರೀರಿಕವಾಗಿರುವುದಕ್ಕಿಂತ ಭಾವನಾತ್ಮಕವಾಗಿರುತ್ತವೆ.