ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g96 1/8 ಪು. 14-15
  • ಹೂಲ ಹವಾಯೀಯ ನೃತ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹೂಲ ಹವಾಯೀಯ ನೃತ್ಯ
  • ಎಚ್ಚರ!—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮಿಷನೆರಿಗಳ ಪ್ರಭಾವ
  • ಹೂಲದ ಪುನರುಜ್ಜೀವನ
  • ಇಂದು ಹೂಲ
  • ನೀವು ತಿಳಿಯದೇ ಇರಬಹುದಾದ ಒಂದು ಯೊರ್ದನ್‌
    ಕಾವಲಿನಬುರುಜು—1990
  • ನರ್ತಿಸುವುದು ಕ್ರೈಸ್ತರಿಗಾಗಿದೆಯೊ?
    ಎಚ್ಚರ!—1996
ಎಚ್ಚರ!—1996
g96 1/8 ಪು. 14-15

ಹೂಲ ಹವಾಯೀಯ ನೃತ್ಯ

ಹವಾಯೀಯ ಎಚ್ಚರ! ಸುದ್ದಿಗಾರರಿಂದ

ಹವಾಯೀಯ ಉಲ್ಲೇಖ ಮಾಡಿದರೆ ಸಾಕು, ಅನೇಕ ವೇಳೆ ಹೂಲ ಮನಸ್ಸಿಗೆ ಬರುತ್ತದೆ. ಹೂಲ, ಹವಾಯೀಯೊಂದಿಗೆ ಅಪೂರ್ವವಾಗಿ ಸಂಬಂಧಿಸಲ್ಪಟ್ಟಿದ್ದರೂ, ಅದರ ಮೂಲಗಳು ದಕ್ಷಿಣ ಶಾಂತಸಾಗರದಲ್ಲಿವೆ.

ಪ್ರಾಚೀನ ಸಮಯಗಳಲ್ಲಿ, ಹವಾಯೀ ಜನರಿಗೆ ಲಿಖಿತ ಭಾಷೆಯಿರಲಿಲ್ಲ, ಆದುದರಿಂದ ಅವರ ಇತಿಹಾಸ ಮತ್ತು ರೂಢಿಗಳನ್ನು ಕಥಿಸಲು, ಹಾಡುಗಳು ಮತ್ತು ಗಾನಗಳು ಬಳಸಲ್ಪಟ್ಟವು. ಮುಖಭಾವಗಳೊಂದಿಗೆ ಸೊಂಟಗಳ, ಕೈಗಳ, ಮತ್ತು ಪಾದಗಳ ಚಲನೆಗಳನ್ನೊಳಗೊಂಡ ಹೂಲ, ಈ ಗಾನಗಳ ಮತ್ತು ಹಾಡುಗಳ ಜೊತೆಸೇರಿತು.

1778ರ ಮುಂಚೆ—ಕ್ಯಾಪ್ಟನ್‌ ಕುಕ್‌ ಮತ್ತು ಅವನ ಸಂಗಡಿಗರು ಆಗಮಿಸಿದ ಸಮಯ—ಹೂಲದೊಂದಿಗೆ ಸಂಬಂಧಿಸಲ್ಪಟ್ಟ ಯಾವುದೇ ವಿಷಯವನ್ನು ಸಾಕ್ಷ್ಯಪೂರ್ವಕವಾಗಿ ಸ್ಥಾಪಿಸುವ ಯಾವ ಮಾರ್ಗವೂ ಇರುವುದಿಲ್ಲ. ಇಂದು ತಿಳಿದಿರುವ ವಿಷಯವು, 19ನೆಯ ಶತಮಾನದ ಕೊನೆಯ ಭಾಗದ ಆಚರಣೆಗಳ, ಹಾಡುಗಳ ಮತ್ತು ಗಾನಗಳ ಮೇಲೆ ಬಹಳವಾಗಿ ಆಧರಿಸಿದೆ.

ಪ್ರಥಮ ಹೂಲಗಳು ಪವಿತ್ರ ಸಂಸ್ಕಾರಗಳಾಗಿದ್ದಿರಬಹುದು. ಆದರೂ, ಎಲ್ಲ ಹೂಲಗಳು, ಆರಾಧನೆಯ ಕೃತ್ಯಗಳು ಅಥವಾ ಒಂದು ಧಾರ್ಮಿಕ ಸೇವೆಯ ಭಾಗವಾಗಿದ್ದವೆಂದು ಯೋಚಿಸಲ್ಪಡಲಾಗುವುದಿಲ್ಲ.

ಮಿಷನೆರಿಗಳ ಪ್ರಭಾವ

ಹೂಲ, 18ನೆಯ ಮತ್ತು 19ನೆಯ ಶತಮಾನಗಳಲ್ಲಿ ಪ್ರವಾಸಿ ಹಡಗುಗಳಲ್ಲಿದ್ದ ಶೋಧಕರು ಮತ್ತು ನಾವಿಕರಿಗಾಗಿ ಮಾಡಲ್ಪಡುತ್ತಿತ್ತು. ಹೂಲಗಳು ಲೈಂಗಿಕವಾಗಿ ಸುವ್ಯಕ್ತವಾಗಿರುವಂತೆ ಹಣಕೊಡುವ ಈ ಗಿರಾಕಿಗಳು ಬಯಸಿದ್ದು ಸಂಭವನೀಯವಾಗಿದೆ.

1820ರಲ್ಲಿ ಮಿಷನೆರಿಗಳು ಬಂದು ತಲಪಿದಾಗ, ಹೂಲವನ್ನು ಖಂಡಿಸಲು ಅವರಿಗೆ ಬಲವಾದ ಕಾರಣವಿತ್ತು. ಮುಖ್ಯಸ್ಥರ ಸಮ್ಮತಿಯನ್ನು ಗಳಿಸಿಕೊಂಡ ತರುವಾಯ, ಮಿಷನೆರಿಗಳು ಹೂಲವನ್ನು ವಿಧರ್ಮಿಯೆಂದು, ಅಸಭ್ಯವೆಂದು ಮತ್ತು ಪಿಶಾಚನ ಕೆಲಸವೆಂದು ದೂಷಿಸಿದರು. ಇದಕ್ಕೂ ಮುಂಚಿತವಾಗಿ, 1819ರಲ್ಲಿ, ರಾಜ Iನೆಯ ಕಾಮೆಹಾಮೆಹಾನ ವಿಧವೆ, ರಾಜಪ್ರತಿನಿಧಿಯಾದ ರಾಣಿ ಕಾಆಹೂಮಾನೂ ಎಂಬವಳಿಂದ ಪ್ರಾಚೀನ ಧಾರ್ಮಿಕ ಆಚರಣೆಗಳಲ್ಲಿ ಬದಲಾವಣೆಗಳು ತರಲ್ಪಟ್ಟವು. ಇವುಗಳಲ್ಲಿ ಮೂರ್ತಿಗಳ ಕಿತ್ತುಹಾಕುವಿಕೆ ಮತ್ತು ಜಟಿಲವಾದ ಸಂಸ್ಕಾರಗಳ ನಿರ್ಮೂಲನವು ಒಳಗೊಂಡಿತ್ತು. ಅಗಣಿತ ನೃತ್ಯಗಳು ಮತ್ತು ಗಾನಗಳು ಸಹ ಅನಂತವಾಗಿ ನಷ್ಟಹೊಂದಿದ್ದವು.

ಕಾಆಹೂಮಾನೂ, 1825ರಲ್ಲಿ ಚರ್ಚಿನೊಳಗೆ ಸ್ವೀಕರಿಸಲ್ಪಟ್ಟಳು. 1830ರಲ್ಲಿ, ಹೂಲದ ಸಾರ್ವಜನಿಕ ಪ್ರದರ್ಶನಗಳನ್ನು ನಿಷೇಧಿಸಿದ ಒಂದು ಆಜ್ಞೆಯನ್ನು ಆಕೆ ಹೊರಡಿಸಿದಳು. 1832ರಲ್ಲಿ, ಅವಳ ಮರಣದ ತರುವಾಯ, ಕೆಲವು ಮುಖ್ಯಸ್ಥರು ಆ ಆಜ್ಞೆಯನ್ನು ಅಲಕ್ಷಿಸಿದರು. ಒಂದೆರಡು ವರ್ಷಗಳ ವರೆಗೆ, ಯುವ ರಾಜ IIIನೆಯ ಕಾಮೆಹಾಮೆಹಾ ಮತ್ತು ಅವನ ಸಂಗಾತಿಗಳಿಂದ ನೈತಿಕ ನಿರ್ಬಂಧಗಳು ಮುಕ್ತವಾಗಿ ಕಡೆಗಣಿಸಲ್ಪಟ್ಟಾಗ, ಸ್ವಲ್ಪ ಸಮಯಕ್ಕಾಗಿ ಹೂಲ ಮತ್ತೆ ಜನಪ್ರಿಯವಾಯಿತು. ಆದರೆ 1835ರಲ್ಲಿ, ತನ್ನ ಮಾರ್ಗಗಳು ತಪ್ಪಾಗಿದ್ದವೆಂದು ರಾಜನು ಒಪ್ಪಿಕೊಂಡನು ಮತ್ತು ರಾಜ್ಯವು ಕ್ಯಾಲ್ವಿನ್‌ ಮತದ ಅನುಯಾಯಿಗಳ ವಶಕ್ಕೆ ಹಿಂದಿರುಗಿತು.

ಹೂಲದ ಪುನರುಜ್ಜೀವನ

ರಾಜ ಕಾಲಾಕಾವುಆನ ಆಳಿಕೆಯ ಸಮಯದಲ್ಲಿ (1874-91), ಸಾರ್ವಜನಿಕ ಪ್ರದರ್ಶನಗಳಲ್ಲಿ ಹೂಲದ ಪೂರ್ಣ ಪುನರ್‌ಸ್ವೀಕರಣೆಯೊಂದಿಗೆ, ಪುನರುಜ್ಜೀವನವು ಸಂಭವಿಸಿತು. 1883ರಲ್ಲಿ ಅವನ ಪಟ್ಟಾಭಿಷೇಕಕ್ಕೆ, ಅನೇಕ ಗಾನಗಳ ಮತ್ತು ಹೂಲಗಳ—ಕೆಲವು ವಿಶೇಷವಾಗಿ ಆ ಸಂದರ್ಭಕ್ಕಾಗಿ ಬರೆಯಲ್ಪಟ್ಟವುಗಳಾಗಿದ್ದವು—ಸಾರ್ವಜನಿಕ ಪ್ರದರ್ಶನದಲ್ಲಿ, ಅನೇಕ ತಿಂಗಳುಗಳ ತರಬೇತಿ ಮತ್ತು ಸಂಭ್ರಮವು ತುತ್ತತುದಿಗೇರಿತು. 1891ರಲ್ಲಿ ಅವನ ಮರಣದ ಸಮಯದೊಳಗಾಗಿ, ಹೂಲ, ಕುಣಿತದ ಹೆಜ್ಜೆಗಳಲ್ಲಿ ಮತ್ತು ದೇಹದ ಚಲನೆಗಳಲ್ಲಿ ಅನೇಕ ಬದಲಾವಣೆಗಳನ್ನು ಅನುಭವಿಸಿತ್ತು, ಮತ್ತು ಯೂಕಲೆಲೀ, ಗಿಟಾರ್‌ ಮತ್ತು ಪಿಟೀಲಿನಂಥ ವಾದ್ಯಗಳೊಂದಿಗೆ ಪರಿಕರವು ಪರಿಚಯಿಸಲ್ಪಟ್ಟಿತ್ತು.

1893ರಲ್ಲಿ ರಾಜಪ್ರಭುತ್ವದ ಅಂತ್ಯದ ಬಳಿಕ, ಹೂಲ ಪುನಃ ಅವನತಿ ಹೊಂದಿತು. ಆದರೆ 20ನೆಯ ಶತಮಾನದ ಮಧ್ಯ ಭಾಗದೊಳಗಾಗಿ, ಅದು ಏಳ್ಗೆ ಹೊಂದುತ್ತಿತ್ತು. ಹೆಚ್ಚು ವಿವಿಧವಾದ ಸಭೆಯನ್ನು ಆಕರ್ಷಿಸಲು, ಹಲವಾರು ಬದಲಾವಣೆಗಳು ಮಾಡಲ್ಪಟ್ಟವು. ಹವಾಯೀ ಭಾಷೆಯನ್ನು ಅನೇಕರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲದಿದ್ದ ಕಾರಣ, ಇಂಗ್ಲಿಷ್‌ ಪದಗಳನ್ನು ಬಳಸಲಾಯಿತು. ಆಧುನಿಕ ಹೂಲ ಸ್ವತಃ ನೃತ್ಯದ ಮೇಲೆ ಅಧಿಕ ಒತ್ತನ್ನು ಇರಿಸುತ್ತದೆ—ಕೈಗಳ ಮತ್ತು ಪಾದಗಳ ಚಲನೆಗಳು, ಸೊಂಟಗಳ ತೂಗಾಟ, ಮತ್ತು ಮುಖದ ಭಾವನೆ.

ದ್ವೀಪಗಳಿಗೆ ಸಂದರ್ಶಕರ ಸಂಖ್ಯೆಯು ಹೆಚ್ಚಾದಂತೆ, ಹೂಲ ಹೆಚ್ಚು ಹೆಚ್ಚಾಗಿ ಜನಪ್ರಿಯವಾಯಿತು. ಉತ್ತರ ಅಮೆರಿಕದಿಂದ ಬಂದ ಪ್ರಯಾಣಿಕರು, ತಾವು ಕಲಿತಿದ್ದ ನೃತ್ಯಗಳನ್ನು ತಮ್ಮೊಂದಿಗೆ ಹಿಂದೆ ಕೊಂಡೊಯ್ದರು ಮತ್ತು ಹವಾಯೀಯವರಲ್ಲದ ನೃತ್ಯಗಾರರೊಂದಿಗೆ ಹಾಲಿವುಡ್‌ ಚಿತ್ರಗಳಲ್ಲಿ ಅವುಗಳನ್ನು ಪ್ರದರ್ಶಿಸಲಾರಂಭಿಸಿದರು. 1935ರಲ್ಲಿ, ತನ್ನ ಸ್ಟೀಲ್‌ ಗಿಟಾರನ್ನು ನುಡಿಸಿದ ಮಿಕ್ಕಿಗಾಗಿ, ಮಿನಿ ಮೌಸ್‌ ಸಹ ಹೂಲ ನೃತ್ಯವನ್ನು ಮಾಡಿತು.

ಇಂದು ಹೂಲ

1970ಗಳಲ್ಲಿ “ಹವಾಯೀಯ ಪುನರುಜ್ಜೀವನ”ದೊಂದಿಗೆ, ಕೊಂಚ ಮಂದಿ ಗಾಯಕರ, ನರ್ತಕರ ಮತ್ತು ನುರಿತ ಶಿಕ್ಷಕರ ಜ್ಞಾನವು, ಹಳೆಯ ಹೂಲ ರೂಪಗಳನ್ನು ಪುನರುಜ್ಜೀವಿಸಲಿಕ್ಕಾಗಿ ಆಧಾರವಾಯಿತು. ಇಂದು ಹಳೆಯ ನೃತ್ಯಗಳನ್ನು ಪುನರುತ್ಪನ್ನಮಾಡುವ ಮತ್ತು ಹೊಸ ನೃತ್ಯಗಳನ್ನು ಸೃಷ್ಟಿಸುವ ಹೂಲ ಗುರುಗಳಿದ್ದಾರೆ. ಎರಡೂ ವಿದ್ಯಮಾನದಲ್ಲಿ, ಅವರ ಪ್ರಯತ್ನಗಳು ಅಮಿತ ಹಾಗೂ ಪ್ರೇಕ್ಷಣೀಯ ಪ್ರದರ್ಶನಗಳಲ್ಲಿ ಫಲಿಸಿವೆ.

ಹವಾಯೀಯ ಅನೇಕ ದೇವತೆಗಳೊಂದಿಗಿನ ಒಂದು ಆತ್ಮಿಕ ಸಂಬಂಧವು, ಆಧುನಿಕ ಸಮಯಗಳಲ್ಲಿ ಒಂದಿಷ್ಟು ಮಟ್ಟಿಗೆ ಮುಂದರಿಸಲ್ಪಟ್ಟಿದೆ. ಪ್ರತಿ ವರ್ಷ, ಹವಾಯೀಯ ಹೀಲೊದಲ್ಲಿ ನಡೆಸಲ್ಪಡುವ ಮೆರೀ ಮೋನರ್ಕ್‌ ಉತ್ಸವವು ಆರಂಭವಾಗುವ ಮುಂಚೆ, ಹೂಲ ಶಾಲೆಗಳು ಪೇಲೇ ದೇವತೆಯ ಅಗ್ನಿಹೊಂಡಕ್ಕೆ ಅಥವಾ ಇತ್ತೀಚಿನ ಶಿಲಾಪ್ರವಾಹದ ನಿವೇಶನಕ್ಕೆ ತಮ್ಮ ತೀರ್ಥಯಾತ್ರೆಯನ್ನು ಮಾಡುತ್ತವೆ. ಸ್ಪರ್ಧೆಗಾಗಿರುವ ತಮ್ಮ ಪ್ರಯತ್ನಗಳ ಮೇಲೆ ಆಕೆಯ ಆಶೀರ್ವಾದಗಳನ್ನು ಕೇಳಿಕೊಳ್ಳುತ್ತಾ, ಅವರು ಗಾಯನ ಮಾಡುತ್ತಾರೆ, ನರ್ತಿಸುತ್ತಾರೆ, ಮತ್ತು ಹೂವುಗಳ, ಸಣ್ಣ ಹಣ್ಣುಗಳ ಮತ್ತು ಜಿನ್‌ ಮದ್ಯದ ಅರ್ಪಣೆಗಳನ್ನು ಮಾಡುತ್ತಾರೆ. ಹೂಲದ ಒಲಿಂಪಿಕ್‌ ಸ್ಪರ್ಧೆಗಳು ಎಂಬುದಾಗಿ ವೀಕ್ಷಿಸಲ್ಪಡುವ ಸ್ಪರ್ಧೆಯ ಮೂರು ರಾತ್ರಿಗಳಲ್ಲಿ, ಲೋಕದ ಸುತ್ತಲಿಂದ ಬಂದ ಗುಂಪುಗಳು ಸ್ಪರ್ಧಿಸುತ್ತವೆ.

ಹೂಲ, ಹವಾಯೀಯಲ್ಲಿ ಸಂಸ್ಕೃತಿಯ ಪುನರ್ಜನ್ಮದ ಒಂದು ದೊಡ್ಡ ಭಾಗವಾಗಿ ಪರಿಣಮಿಸಿದೆ. ದೇವದೇವತೆಗಳಿಗೆ ಪೂಜ್ಯಭಾವನೆಯ ಗಾನಗಳು ಅಷ್ಟೇ ಅಲ್ಲದೆ ಯಾವ ಧಾರ್ಮಿಕ ಮಹತ್ವವೂ ಇರದಂತಹ, ದ್ವೀಪಗಳಲ್ಲಿನ ಪ್ರತಿದಿನದ ಜೀವಿತದ ಸರಳವಾದ ಅಭಿವ್ಯಕ್ತಿಗಳೊಂದಿಗೆ ಜೊತೆಸೇರುವ ದುಃಖದ ನೃತ್ಯಗಳನ್ನೂ ಅದು ಒಳಗೊಳ್ಳುತ್ತದೆ.

ನಿರ್ದಿಷ್ಟವಾದ ಹೂಲಗಳ ನರ್ತನ ಮಾಡುವುದರಲ್ಲಿ ಅಥವಾ ವೀಕ್ಷಿಸುವುದರಲ್ಲಿ ಕ್ರೈಸ್ತರು ಆಯ್ಕೆಮಾಡುವವರಾಗಿರತಕ್ಕದ್ದು. ತಿಳಿಯದೆಯೇ ಅವರು ಒಬ್ಬ ದೇವ ಅಥವಾ ದೇವತೆಗೆ ಗೌರವ ಸಲ್ಲಿಸುತ್ತಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ. ಹಾಡುಗಳನ್ನು ಅಥವಾ ಗಾನಗಳನ್ನು ಆಲಿಸುವಾಗ ಇಲ್ಲವೆ ಹಾಡುವಾಗ ಸಹ ಜಾಗ್ರತೆ ವಹಿಸಬೇಕು. ಇವುಗಳಲ್ಲಿ ಹೆಚ್ಚಿನವು ಅಡಗಿರುವ ಅಥವಾ ದ್ವಂದ್ವಾರ್ಥವುಳ್ಳ ನುಡಿಗಳನ್ನು ಹೊಂದಿವೆ. ಇದನ್ನು ಮನಸ್ಸಿನಲ್ಲಿಡುವುದಾದರೆ, ಒಬ್ಬ ವೀಕ್ಷಕನು ಅಥವಾ ಸಹಭಾಗಿಯೊಬ್ಬನು, ಹೂಲವನ್ನು ಮನೋರಂಜನೆಯ ಹಿತಕರವಾದೊಂದು ರೂಪವಾಗಿ ಆನಂದಿಸಬಲ್ಲನು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ