ಆದರ್ಶಪ್ರಾಯವಾದ ಪರಿಹಾರವನ್ನು ಕಂಡುಕೊಳ್ಳುವುದು
ಈಗ ಮೋಟಾರುಗಾಡಿಗಳಿಂದ ಉಂಟುಮಾಡಲ್ಪಡುವ ಮಾಲಿನ್ಯದ ಸಮಸ್ಯೆಯನ್ನು ಒಳಗೊಂಡು, ಮಾನವಕುಲದ ಎಲ್ಲಾ ಸಮಸ್ಯೆಗಳನ್ನು ದೇವರ ಸ್ವರ್ಗೀಯ ಸರಕಾರವು ಪರಿಹರಿಸಿರುವ ಒಂದು ಸಮಯದ ಕುರಿತಾಗಿ ದೇವರ ವಾಕ್ಯವಾದ ಬೈಬಲು ಮಾತಾಡುತ್ತದೆ. ಯಾವುದಕ್ಕಾಗಿ ಅನೇಕ ಜನರು ಪ್ರಾರ್ಥಿಸುವಂತೆ ಕಲಿಸಲ್ಪಟ್ಟಿದ್ದಾರೋ ಆ ಮೆಸ್ಸೀಯಸಂಬಂಧಿತ ರಾಜ್ಯವು, ಸಂಪೂರ್ಣವಾಗಿ ಮಾಲಿನ್ಯ-ಮುಕ್ತವಾಗಿರುವ ಒಂದು ಮೋಟಾರುಗಾಡಿಯನ್ನು ಉತ್ಪಾದಿಸುವ ಮೂಲಕ, ಆದರ್ಶಪ್ರಾಯವಾದ ಪರಿಹಾರವನ್ನು ಒದಗಿಸುವುದೊ? ಅಥವಾ ಭೂಮಿಯಿಂದ ಎಲ್ಲಾ ಮೋಟಾರು ವಾಹನಗಳನ್ನು ತೆಗೆದುಹಾಕುವ ಮೂಲಕ ಆದರ್ಶಪ್ರಾಯ ಪರಿಹಾರವು ಸಾಧಿಸಲ್ಪಡುವುದೊ? ಬೈಬಲು ನಮಗೆ ಯಾವುದೇ ಖಚಿತವಾದ ಉತ್ತರವನ್ನು ನೀಡುವುದಿಲ್ಲವಾದುದರಿಂದ, ಕೇವಲ ಕಾದುನೋಡುವುದಕ್ಕಿಂತ ಹೆಚ್ಚಿನ ವಿಷಯವನ್ನು ನಾವು ಮಾಡಸಾಧ್ಯವಿಲ್ಲ.—ಮತ್ತಾಯ 6:9, 10.
ಆದರೆ ನಾವು ಇದರ ಕುರಿತಾಗಿ ನಿಶ್ಚಿತರಾಗಿರಸಾಧ್ಯವಿದೆ: ಆ ರಾಜ್ಯವು ತರಲಿರುವ ಪುನರ್ಸ್ಥಾಪಿತ ಪ್ರಮೋದವನದಲ್ಲಿ, ಮಾಲಿನ್ಯವು ಸೃಷ್ಟಿಯ ಸೌಂದರ್ಯಗಳನ್ನು ಹಾಳುಮಾಡುವಂತೆ ದೇವರ ಸರಕಾರವು ಅನುಮತಿಸದು.—ಯೆಶಾಯ 35:1, 2, 7; 65:17-25.
ದೇವರ ವಾಕ್ಯಕ್ಕೆ ಅಂಟಿಕೊಳ್ಳುವವರು ಈಗಾಗಲೇ ಮಾಲಿನ್ಯ-ಮುಕ್ತ ಹೊಸ ಲೋಕದಲ್ಲಿನ ಜೀವಿತಕ್ಕಾಗಿ ತರಬೇತುಗೊಳಿಸಲ್ಪಡುತ್ತಿರುವುದರಿಂದ, ಇಂದು ಮೋಟಾರುಗಾಡಿಗಳ ಉಪಯೋಗದ ಕುರಿತು ಅವರಿಗೆ ಹೇಗನಿಸಬೇಕು? ಜೂನ್ 22, 1987ರ ಅವೇಕ್! ಪತ್ರಿಕೆಯು, “ನಮ್ಮ ಅರಣ್ಯಗಳಿಗೆ ಏನು ಸಂಭವಿಸುತ್ತಿದೆ?” ಎಂಬ ವಿಷಯವನ್ನು ವಿಶದಪಡಿಸಿತ್ತು. ವಾಹನಗಳ ಬಹಿರ್ಗಮನದಲ್ಲಿ ಸೇರಿರುವ ವಾಯು ಮಲಿನಕಾರಕಗಳು ಹಾಗೂ ನಶಿಸಿಹೋಗುತ್ತಿರುವ ಅರಣ್ಯಗಳ ನಡುವೆ ಒಂದು ಸಂಬಂಧವಿದೆಯೆಂದು ಕೆಲವು ವಿಜ್ಞಾನಿಗಳು ಭಾವಿಸುತ್ತಾರೆಂದು ಅದು ವರದಿಸಿತು. ಇದು ಒಬ್ಬ ಆಸಕ್ತಿಯುಳ್ಳ ಓದುಗನನ್ನು, ಈ ವಾಸ್ತವಾಂಶದ ನೋಟದಲ್ಲಿ ಕಾರ್ಗಳನ್ನು ನಡೆಸುವುದು ಕ್ರೈಸ್ತರಿಗೆ ಸೂಕ್ತವಾದದ್ದಾಗಿರುವುದೋ ಇಲ್ಲವೋ ಎಂದು ಕೇಳುತ್ತಾ, ವಾಚ್ಟವರ್ ಸೊಸೈಟಿಗೆ ಪತ್ರವನ್ನು ಬರೆಯುವಂತೆ ಮಾಡಿತು. ಹಾಗೆ ಮಾಡುವುದು ಯೆಹೋವನ ಸೃಷ್ಟಿಗೆ ಅಗೌರವವನ್ನು ತೋರಿಸುವುದೋ ಎಂದು ಅವನು ಸೋಜಿಗಪಟ್ಟನು.
ಅವನ ಪತ್ರವು ಉತ್ತರಿಸಲ್ಪಟ್ಟಿತು, ಭಾಗಶಃ ಅದು ಈ ಕೆಳಗಿನಂತಿತ್ತು: “ಮಾಲಿನ್ಯವನ್ನು ಕಡಿಮೆಮಾಡಲಿಕ್ಕಾಗಿ ಸರಕಾರದ ಅಧಿಕಾರಿಗಳಿಂದ ವಿಧಿಸಲ್ಪಡುವ ಪರಿಸರೀಯ ನಿಬಂಧನೆಗಳಿಗೆ ಯೆಹೋವನ ಸಾಕ್ಷಿಗಳು ನಂಬಿಗಸ್ತಿಕೆಯಿಂದ ವಿಧೇಯರಾಗುತ್ತಾರೆ. (ರೋಮಾಪುರ 13:1, 7; ತೀತ 3:1) ಸರಕಾರವು ಏನನ್ನು ಅಗತ್ಯಪಡಿಸುತ್ತದೋ ಅದಕ್ಕಿಂತ ಹೊರತಾದ ಸೂಕ್ತಕ್ರಮಗಳನ್ನು ತೆಗೆದುಕೊಳ್ಳುವುದು, ವ್ಯಕ್ತಿಯೊಬ್ಬನ ಸ್ವಂತ ವಿವೇಚನೆಗೆ ಒಳಪಟ್ಟಿದೆ. ಯಾರಾದರೊಬ್ಬನು ಇನ್ನುಮುಂದೆ ಕಾರನ್ನು ನಡೆಸದಿರಲು ನಿರ್ಧರಿಸುವುದಾದರೆ, ಅದು ಅವನ ಸ್ವಂತ ಖಾಸಗಿ ವಿಷಯವಾಗಿದೆ. ಆದರೂ, ಪುಟ 8ರಲ್ಲಿ ಹೀಗೆ ಹೇಳುವ ಮೂಲಕ, ಕೆಲವು ಜನರು ಹೇಗೆ ಭಾವಿಸುತ್ತಾರೆಂಬುದನ್ನು ಆ ಅವೇಕ್! ಪತ್ರಿಕೆಯು ತೋರಿಸಿತು: ‘ಸಾಧ್ಯವಿರುವಷ್ಟು ನ್ಯಾಯಸಮ್ಮತ ಮಟ್ಟದಲ್ಲಿ ವಾಯು ಮಾಲಿನ್ಯವನ್ನು ಕಡಿತಗೊಳಿಸುವ ಪ್ರಾಯೋಗಿಕವಾದ ಸೂಕ್ತಕ್ರಮಗಳನ್ನು ಅನೇಕರು ಕೈಕೊಳ್ಳುತ್ತಿದ್ದಾರೆ. ಅವರು ಹೆಚ್ಚು ನಿಧಾನವಾಗಿ ವಾಹನವನ್ನು ನಡೆಸುತ್ತಿದ್ದಾರೆ, ಕಡಿಮೆ ಪ್ರಯಾಣಿಸುತ್ತಿದ್ದಾರೆ, ಕಾರ್ ಹಂಚಿಕೊಳ್ಳುವ ಏರ್ಪಾಡುಗಳಲ್ಲಿ ಜೊತೆಗೂಡುತ್ತಿದ್ದಾರೆ, ಸೀಸರಹಿತ ಪೆಟ್ರೋಲನ್ನು ಉಪಯೋಗಿಸುತ್ತಿದ್ದಾರೆ, ಮತ್ತು ಸರಕಾರದಿಂದ ಹಾಕಲ್ಪಟ್ಟ ಪ್ರತಿಮಾಲಿನ್ಯದ ನಿಬಂಧನೆಗಳಿಗೆ ವಿಧೇಯರಾಗುತ್ತಿದ್ದಾರೆ.’”
ಕ್ರೈಸ್ತ ಸಮತೂಕತೆ
ಈ ಉತ್ತರವು ಕ್ರೈಸ್ತ ಸಮತೂಕವನ್ನು ಪ್ರದರ್ಶಿಸಿತು. ಮಾಲಿನ್ಯವನ್ನುಂಟುಮಾಡುವುದರಲ್ಲಿ ಮೋಟಾರುಗಾಡಿಗಳು ಮಾತ್ರವೇ ಒಳಗೊಂಡಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ವಿಮಾನಗಳು ಮತ್ತು ರೈಲುಗಳು—ವಾಸ್ತವವಾಗಿ, ಹೆಚ್ಚಿನ ಅತ್ಯಾಧುನಿಕ ವಾಹನಸೌಕರ್ಯ ಮಾಧ್ಯಮಗಳು—ಮಾಲಿನ್ಯವನ್ನುಂಟುಮಾಡುತ್ತವೆ. ಆದರೆ ವಾಹನಸೌಕರ್ಯದ ಈ ವಿಧಗಳು, ಮಾಲಿನ್ಯವನ್ನುಂಟುಮಾಡುವ ವಿಶೇಷ ಉದ್ದೇಶಕ್ಕಾಗಿ ವಿಕಸಿಸಲ್ಪಡಲಿಲ್ಲ. ಫಲಿತಾಂಶವಾಗಿ ಬರುವ ಮಾಲಿನ್ಯವು ಒಂದು ಅಡ್ಡತೊಡಕಾಗಿದೆ, ವಿಷಾದನೀಯವಾದರೂ ಪರಿಮಿತ ಜ್ಞಾನ ಹಾಗೂ ಅಪರಿಪೂರ್ಣ ಮನೋಭಾವಗಳಿಂದ ಉಂಟಾಗಿದೆ.
ಎಪ್ರಿಲ್ 1, 1993ರ ಕಾವಲಿನಬುರುಜು ಪತ್ರಿಕೆಯು, ಹೀಗೆ ಹೇಳುವ ಮೂಲಕ ಈ ವಿಷಯವನ್ನು ಚರ್ಚಿಸಿತು: “ಯೆಹೋವನ ಸಾಕ್ಷಿಗಳೋಪಾದಿ, ನಮ್ಮ ಐಹಿಕ ಗೃಹವನ್ನು ಈಗ ಬಾಧಿಸುತ್ತಿರುವ ಅನೇಕ ಜೀವಿಪರಿಸ್ಥಿತಿಶಾಸ್ತ್ರೀಯ ಸಮಸ್ಯೆಗಳೊಂದಿಗೆ ನಾವು ಆಳವಾದ ಚಿಂತೆಯುಳ್ಳವರಾಗಿದ್ದೇವೆ. ಅಧಿಕಾಂಶ ಜನರಿಗಿಂತಲೂ ಹೆಚ್ಚಾಗಿ, ಈ ಭೂಮಿಯು ಪರಿಪೂರ್ಣ ಮಾನವ ಕುಟುಂಬಕ್ಕೆ ಒಂದು ಪರಿಶುದ್ಧವಾದ, ಆರೋಗ್ಯಕರ ಬೀಡಾಗಿ ಇರುವಂತೆ ಸೃಷ್ಟಿಸಲ್ಪಟ್ಟಿತು ಎಂಬುದನ್ನು ನಾವು ಗಣ್ಯಮಾಡುತ್ತೇವೆ. (ಆದಿಕಾಂಡ 1:31; 2:15-17; ಯೆಶಾಯ 45:18) . . . ಆದಕಾರಣ, ನಮ್ಮ ಭೂಗೋಲದ ಮುಂದರಿಯುತ್ತಿರುವ ಮಾನವನ ಹಾಳುಗೆಡುವಿಕೆಗೆ ಅನಾವಶ್ಯಕವಾಗಿ ಕೂಡಿಸುವುದನ್ನು ಹೋಗಲಾಡಿಸಲು ನಾವು ಸಮತೂಕದ, ಸಮಂಜಸವಾದ ಪ್ರಯತ್ನಗಳನ್ನು ಮಾಡುವುದು ಯುಕ್ತವಾಗಿದೆ. ಆದರೂ ‘ಸಮಂಜಸ’ ಶಬ್ದವನ್ನು ಗಮನಿಸಿರಿ. . . . ದೇವರ ಜನರು ಜೀವಿಪರಿಸ್ಥಿತಿಶಾಸ್ತ್ರೀಯ ವಿಷಯಗಳ ಕುರಿತು ನಗಣ್ಯಭಾವದವರಾಗಿರಕೂಡದು. ಕಚಡಗಳನ್ನು ತೊಲಗಿಸಲು ತಕ್ಕೊಳ್ಳಬೇಕಾದ ಹೆಜ್ಜೆಗಳನ್ನು, ಜೀವಿಪರಿಸ್ಥಿತಿಶಾಸ್ತ್ರೀಯ ಹಾಗೂ ನೈರ್ಮಲ್ಯಸಂಬಂಧವಾದ ಪ್ರಾಮುಖ್ಯತೆಯಿರುವ ಹೆಜ್ಜೆಗಳನ್ನು ತನ್ನ ಪ್ರಾಚೀನ ಜನರಿಂದ ಯೆಹೋವನು ಅಪೇಕ್ಷಿಸಿದ್ದನು. (ಧರ್ಮೋಪದೇಶಕಾಂಡ 23:9-14) ಮತ್ತು ಭೂಮಿಯನ್ನು ವಿನಾಶಗೊಳಿಸುವವರ ಕಡೆಗೆ ಅವನ ದೃಷ್ಟಿಯನ್ನು ನಾವು ತಿಳಿದಿರುವುದರಿಂದ, ಪರಿಸರವನ್ನು ಶುಭ್ರವಾಗಿಡಲು ನಾವು ಮಾಡಸಾಧ್ಯವಿರುವ ವಿಷಯಗಳನ್ನು ಖಂಡಿತವಾಗಿಯೂ ನಾವು ಅಲಕ್ಷಿಸಬಾರದು. . . . ಆದಾಗ್ಯೂ, ಕಾನೂನಿನ ಮೂಲಕ ಅಪೇಕ್ಷಿಸಲ್ಪಡದೆ ಇರುವುದಾದರೆ, ಈ ದಿಸೆಯಲ್ಲಿ ಎಷ್ಟು ದೂರದ ತನಕ ಕ್ರೈಸ್ತನು ಹೋಗುವನು ಎಂಬುದು ಒಂದು ವೈಯಕ್ತಿಕ ಸಂಗತಿಯಾಗಿದೆ. ಅಪರಿಪೂರ್ಣ ಮಾನವರು ಅತಿರೇಕವಾದಿಗಳಾಗುವ ಪಾಶದೊಳಗೆ ಅತಿ ಸುಲಭವಾಗಿ ಬೀಳುತ್ತಾರೆ. . . . ಮಾಲಿನ್ಯತೆಯ ಸಹಿತವಾಗಿ, ಅದರ ಪ್ರಧಾನ ಜೀವಿಪರಿಸ್ಥಿತಿಶಾಸ್ತ್ರೀಯ ಸಮಸ್ಯೆಗಳನ್ನು ನಿವಾರಿಸಲು ಮಾನವ ಪ್ರಯತ್ನಗಳು ಪೂರ್ಣವಾಗಿ ಯಶಸ್ವಿಗೊಳ್ಳುವುದಿಲ್ಲ. ಅಲ್ಲಿ, ಇಲ್ಲಿ ಸ್ವಲ್ಪ ಪ್ರಗತಿ ಇರಬಹುದು, ಆದರೆ ಬಾಳುವ ಏಕಮಾತ್ರ ಪರಿಹಾರಕ್ಕೆ ದೇವರ ಹಸ್ತಕ್ಷೇಪದ ಜರೂರಿಯಿದೆ. ಈ ಕಾರಣಕ್ಕೋಸ್ಕರ ನಾವು ಮೇಲುಮೇಲಿನ ಲಕ್ಷಣಗಳ ನಿವಾರಣೆಗೆ ಪ್ರಯತ್ನಿಸುವ ಬದಲು, ನಮ್ಮ ಪ್ರಯತ್ನ ಮತ್ತು ಸಾಧನ ಸಂಪತ್ತುಗಳನ್ನು ದೈವಿಕ ಪರಿಹಾರದ ಮೇಲೆ ಕೇಂದ್ರೀಕರಿಸುತ್ತೇವೆ.”
ದೇವರ ರಾಜ್ಯದ ಸಂದೇಶವನ್ನು ಲೋಕದಾದ್ಯಂತವಾಗಿ ಸಾರಲಿಕ್ಕಾಗಿ ತಾವು ಸ್ವೀಕರಿಸಿರುವ ದೈವಿಕ ನಿಯೋಗವನ್ನು ಮನಸ್ಸಿನಲ್ಲಿಟ್ಟುಕೊಂಡವರಾಗಿ, ಕ್ರೈಸ್ತರು ಬೈಬಲ್ ಮೂಲತತ್ವಗಳನ್ನು ಅನುಸರಿಸಿದಂತೆ, ಸಮತೂಕತೆಯುಳ್ಳವರಾಗುತ್ತಾರೆ. (ಮತ್ತಾಯ 24:14) ಯಾವ ವಿಷಯವೂ ಹೆಚ್ಚು ಪ್ರಾಮುಖ್ಯವಾದದ್ದಾಗಿರುವುದಿಲ್ಲ ಅಥವಾ ಅಧಿಕ ಜರೂರಿಯದ್ದಾಗಿರುವುದಿಲ್ಲ! ವಾಹನಸೌಕರ್ಯ ಹಾಗೂ ಸಂವಾದಮಾಡುವಿಕೆಯ ಆಧುನಿಕ ಮಾಧ್ಯಮಗಳು, ಈ ಹಂಗನ್ನು ನೆರವೇರಿಸಲು ಕ್ರೈಸ್ತರಿಗೆ ಸಹಾಯ ಮಾಡಸಾಧ್ಯವಿರುವುದಾದರೆ, ಅವುಗಳನ್ನು ಉಪಯೋಗಿಸಿಕೊಳ್ಳುವುದು ಅವರಿಗೆ ನಿಶ್ಚಯವಾಗಿಯೂ ಸಮಂಜಸವಾದದ್ದಾಗಿದೆ. ಅದೇ ಸಮಯದಲ್ಲಿ, ಅವರು ಅನುಚಿತವಾಗಿ ಅಥವಾ ಉದ್ದೇಶಪೂರ್ವಕವಾಗಿ ಮಾಲಿನ್ಯವನ್ನುಂಟುಮಾಡುವುದರಿಂದ ದೂರವಿರುತ್ತಾರೆ. ಹೀಗೆ ಅವರು ಮನುಷ್ಯರ ಮುಂದೆಯೂ ದೇವರ ಮುಂದೆಯೂ ಒಳ್ಳೆಯ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುತ್ತಾರೆ.
ಆದುದರಿಂದ, ಮಾಲಿನ್ಯ ಮತ್ತು ಮೋಟಾರುಗಾಡಿಗಳ ಸಮಸ್ಯೆಯು ಅಂತಿಮವಾಗಿ ಹೇಗೆ ಪರಿಹರಿಸಲ್ಪಡುವುದೆಂಬುದು ನಮಗೆ ನಿಜವಾಗಿಯೂ ತಿಳಿದಿಲ್ಲವಾದರೂ, ಅದು ಪರಿಹರಿಸಲ್ಪಡುವುದೆಂಬುದು ನಮಗೆ ತಿಳಿದಿದೆ. ವಾಸ್ತವವಾಗಿ, ಆದರ್ಶಪ್ರಾಯವಾದ ಪರಿಹಾರವು ಬಹಳ ಹತ್ತಿರದಲ್ಲಿದೆ.
[ಪುಟ 0 ರಲ್ಲಿರುವ ಚೌಕ]
ಮಾಲಿನ್ಯವನ್ನು ಎದುರಿಸುವುದು
• ಸಾಧ್ಯವಿರುವಾಗ ನಡೆಯುವುದು ಅಥವಾ ಸೈಕಲ್ಸವಾರಿಮಾಡುವುದು
• ಕಾರ್ ಹಂಚಿಕೊಳ್ಳುವ ಏರ್ಪಾಡುಗಳಲ್ಲಿ ಭಾಗವಹಿಸುವುದು
• ಮೋಟಾರು ವಾಹನಗಳನ್ನು ಕ್ರಮವಾಗಿ ಸರ್ವಿಸ್ಮಾಡಿಸುವುದು
• ಕಡಿಮೆ ಮಾಲಿನ್ಯವನ್ನುಂಟುಮಾಡುವ ಇಂಧನವನ್ನು ಉಪಯೋಗಿಸುವುದರ ಕುರಿತಾಗಿ ಹಿತಾಸಕ್ತಿಯುಳ್ಳವರಾಗಿರುವುದು
• ಅನಗತ್ಯವಾದ ಪ್ರಯಾಣವನ್ನು ತೊರೆಯುವುದು
• ಮಿತವಾದ ಆದರೆ ಏಕಪ್ರಕಾರದ ವೇಗಗಳಲ್ಲಿ ವಾಹನನಡೆಸುವುದು
• ಸಾಧ್ಯವಿರುವಾಗ ಹಾಗೂ ಅನುಕೂಲಕರವಾಗಿರುವಾಗ ಸಾರ್ವಜನಿಕ ವಾಹನಸೌಕರ್ಯವನ್ನು ಉಪಯೋಗಿಸುವುದು
• ವಾಹನವು ಎಷ್ಟೇ ಸಮಯ ನಿಲ್ಲುವುದಾದರೂ, ಇಂಜಿನನ್ನು ಆನ್ಮಾಡಿ ಇಡುವುದಕ್ಕೆ ಬದಲಾಗಿ ಅದನ್ನು ಆಫ್ಮಾಡುವುದು