ಶಾಂತಿ ನಿಶಸ್ತ್ರೀಕರಣದಿಂದ ಬರಲಿದೆಯೇ?
“ಶಾಂತಿಯೊಂದಿಗೆ ನಿಶಸ್ತ್ರೀಕರಣವನ್ನು ಮಿಶ್ರಗೊಳಿಸುವುದು ಒಂದು ಮಹಾ ತಪ್ಪಾಗಿರುತ್ತದೆ,” ಎಂದು ಎರಡನೆಯ ಮಹಾ ಯುದ್ಧಕ್ಕೆ ಜನಾಂಗಗಳು ಧುಮುಕುವ ಐದು ವರ್ಷಗಳ ಮೊದಲು ವಿನ್ಸ್ಟನ್ ಚರ್ಚಿಲ್ ಹೇಳಿದ್ದರು. “ನಿಮ್ಮಲ್ಲಿ ಶಾಂತಿಯಿರುವಾಗ, ಆಗಲೇ ನಿಮ್ಮೊಳಗೆ ನಿಶಸ್ತ್ರೀಕರಣವಿರುತ್ತದೆ,” ಎಂದವರು ಕೂಡಿಸಿದರು.
ಎಂಥಹ ಅಸಂಗತೋಕ್ತಿ! ಶಾಂತಿಯು ಖಚಿತ ಮಾಡಿಕೊಳ್ಳಲ್ಪಡುವ ತನಕ ನಿರಾಯುಧರನ್ನಾಗಿ ಮಾಡಿ ಕೊಳ್ಳಲು ಯಾರು ಮುಂದುವರಿಯುತ್ತಾರೆ? ಆದರೆ ಯುದ್ಧಕ್ಕಾಗಿ ಆಯುಧಗಳ ರಾಶಿಸಂಗ್ರಹಣೆಯು ಇರುವಾಗ, ಅಲ್ಲಿ ನಿಜವಾದ ಶಾಂತಿ ಇರಸಾಧ್ಯವಿದೆಯೇ? ಎಂದಿಗೂ ಬಗೆಹರಿಸಲು ರಾಜಕೀಯಸ್ಥರು ದಾರಿಕಾಣದಾದ ಒಂದು ಸನ್ನಿವೇಶ ಅದಾಗಿರುತ್ತದೆ.
ಜನಾಂಗ ಸಂಘದಿಂದ ಕೇವಲ ಎರಡು ವರ್ಷಗಳ ಮೊದಲು ಜರುಗಿಸಲ್ಪಟ್ಟ ನಿಶಸ್ತ್ರೀಕರಣ ಪರಿಷತ್ತಿನ ಮುಕ್ತಾಯವನ್ನು ಹಿಂಬಾಲಿಸಿ, ವಿನ್ಸ್ಟನ್ ಚರ್ಚಿಲ್ ತನ್ನ ಈ ಹೇಳಿಕೆಯನ್ನು 1934 ರಲ್ಲಿ ಮಾಡಿದರು. ಈ ಪರಿಷತ್ತಿನ ಉದ್ದೇಶವು—ಅದನ್ನು ಸಿದ್ಧಗೊಳಿಸುವರೆ 12 ವರ್ಷಗಳು ತಗಲಿದ್ದವು—ಯುರೋಪನ್ನು ಪುನಃ ಶಸ್ತ್ರ ಸನ್ನದ್ಧತೆಯದ್ದಾಗಿ ಮಾಡುವುದನ್ನು ತಡೆಯುವುದೇ ಆಗಿತ್ತು. ಭೂಸುತ್ತಲಿನ ಜನರು ಇನ್ನೂ ಮೊದಲನೆಯ ಲೋಕ ಯುದ್ಧದಲ್ಲಿ 90 ಲಕ್ಷ ಯೋದ್ಧರ ದುರಂತಮಯ ಹತಿಸುವಿಕೆಯನ್ನೂ, ಅದಕ್ಕೆ ಕೂಡಿಸಿ ಲಕ್ಷಾಂತರ ಮಂದಿ ನಾಗರಿಕರು ಗಾಯಗೊಂಡದ್ದನ್ನೂ, ಬಲಿಯಾದದ್ದನ್ನೂ ವೈವಿಧ್ಯಮಯವಾಗಿ ಇನ್ನೂ ನೆನಪಿಸಿಕೊಳ್ಳುತ್ತಿದ್ದರು. ಆದರೂ, ನಿಶಸ್ತ್ರೀಕರಣವು ಎಂದೆಂದೂ ವಾಸ್ತವಿಕ ಸಂಗತಿಯಾಗಲಿಲ್ಲ. ಯಾಕೆ?
ನಿಶಸ್ತ್ರ ರನ್ನಾಗಿ ಮಾಡಲು ಪ್ರಯತ್ನಗಳು
ನಿಶಸ್ತ್ರೀಕರಣದ ಧೋರಣೆಯನ್ನು ಜ್ಯಾರಿಗೊಳಿಸಬಹುದು, ಆದರೆ ಪರಿಣಾಮಕಾರಿಯಾಗುವುದು ವಿರಳವೇ. ಉದಾಹರಣೆಗೆ 1919ರ ವರ್ಸೈಲಿಸ್ ಒಪ್ಪಂದಕ್ಕನುಸಾರ, “ಆಂತರಿಕ ಭದ್ರತೆಗೆ ಅನುಗುಣವಾಗುವಷ್ಟು, ರಾಷ್ಟ್ರೀಯ ಆಯುಧಗಳನ್ನು ಕನಿಷ್ಠ ಮಟ್ಟಕ್ಕೆ ಕಡಿತಗೊಳಿಸಬೇಕು ಎಂಬ ಸಾಕಾಗುವಷ್ಟು ಮಟ್ಟಿನ ಖಾತರಿಗಳು ಕೊಡಲ್ಪಟ್ಟು ಮತ್ತು ತೆಕ್ಕೊಳಲ್ಪಟ್ಟು” ಜರ್ಮನಿಯನ್ನು ನಿಶಸ್ತ್ರೀಕರಣಗೊಳಿಸಲಾಯಿತು. ಇದು ಅಮೆರಿಕದ ಅಧ್ಯಕ್ಷ ವುಡ್ರೋ ವಿಲ್ಸನ್ರ ಪ್ರಸ್ತಾಪನೆಗಳಲ್ಲಿ ಒಂದಕ್ಕೆ ಸಹಮತದಲ್ಲಿದ್ದು, ಕ್ರಮೇಣ ಜನಾಂಗ ಸಂಘದ ಒಡಂಬಡಿಕೆಯ 8 ನೆಯ ಪ್ರಕರಣ ದಲ್ಲಿ ಅದನ್ನು ಸೇರಿಸಲಾಯಿತು. ಆದರೆ ಹಿಟ್ಲರನು ಅಧಿಕಾರಕ್ಕೆ ಬಂದಾಗ ಆ ಧೋರಣೆಯನ್ನು ಅವನು ಧಿಕ್ಕರಿಸಿದನು.
ಎರಡನೆಯ ಲೋಕ ಯುದ್ಧದ ನಂತರ ನಿಶಸ್ತ್ರೀಕರಣಕ್ಕಾಗಿ ಒಂದು ದೃಢವಾದ ಬುನಾದಿಯನ್ನು ಹಾಕುವುದರಲ್ಲಿ ಸಂಯುಕ್ತ ರಾಷ್ಟ್ರ ಸಂಘವು ಹೆಚ್ಚು ಯಶಸ್ವಿಯಾಯಿತೋ? ಇಲ್ಲ, ಆದರೆ ದೃಢನಿಶ್ಚಯದ ಪ್ರಯತ್ನಗಳ ಕೊರತೆಯಿಂದ ಅದು ಯಶಸ್ವಿಯಾಗದಿರಲು ಕಾರಣವಲ್ಲ. ಬಹುಪರಿಮಾಣದ ನಾಶನಕ್ಕೆ ಬೇಕಾದ ಅಣ್ವಸ್ತ್ರಗಳು ಈಗ ದೊರಕುವುದಾದರೂ, ನಿಶಸ್ತ್ರೀಕರಣವು ಈಗ ಒಂದು ತುರ್ತಿನ ವಿವಾದಾಂಶವಾಗಿರುತ್ತದೆ. “ಯುದ್ಧ ಸನ್ನಾಹಗಳು ಆರ್ಥಿಕ ದೃಷ್ಟಿಯಲ್ಲಿ ಅನುಚಿತವಾದದ್ದು ಮತ್ತು ಅದು ಅನಿವಾರ್ಯವಾಗಿ ಯುದ್ಧಕ್ಕೆ ನಡಿಸುತ್ತವೆ ಎಂಬ ಮೊದಲಿನ ವಾದವು, ಭವಿಷ್ಯದಲ್ಲಿ ಅಣ್ವಸ್ತ್ರಗಳ ಅಪಾರ ಬಳಕೆಯು ನಾಗರಿಕತೆಗೆ ಬೆದರಿಕೆಯನ್ನೊಡ್ಡಿವೆ ಎಂಬ ವಾದದಿಂದ ಸ್ಥಾನಪಲ್ಲಟಗೊಂಡಿದೆ” ಎಂದು ದ ನ್ಯೂ ಎನ್ಸೈಕ್ಲೊಪೀಡಿಯಾ ಹೇಳುತ್ತದೆ.
ಒಂದು 12-ದೇಶಗಳ ನಿಶಸ್ತ್ರೀಕರಣ ನಿಯೋಗವೊಂದು ಪೂರ್ವ ⁄ ಪಶ್ಚಿಮ ಶಸ್ತ್ರಪೈಪೋಟಿಯ ಬೆಳವಣಿಗೆಯನ್ನು ತಡೆಯಲು 1952 ರಲ್ಲಿ ನಿಯುಕ್ತಗೊಂಡಿತು. ಅದು ಮುನ್ನಡೆ ತೆಗೆಯಲು ವಿಫಲಗೊಂಡಿತು, ಮತ್ತು ಕಟ್ಟಕಡೆಗೆ ಎರಡು ಮಹಾ ಶಕ್ತಿಗಳು ಅವರ ವಿರುದ್ಧ ಬಣಗಳಲ್ಲಿ ಇನ್ನಷ್ಟು ಧ್ರುವೀಕರಣಗೊಂಡವು. ಇಂದಿನ ತನಕ ಅನೇಕ ಕರಾರುಗಳು ಮತ್ತು ಒಪ್ಪಂದಗಳು ಮಾಡಲ್ಪಟ್ಟಿವೆ. ಆದರೂ, ಪರಸ್ಪರ ಅಪನಂಬಿಕೆಯ ವಾತಾವರಣವು ಯುದ್ಧದ ಎಲ್ಲಾ ಆಯುಧಗಳನ್ನು ಸಂಪೂರ್ಣವಾಗಿ ನಿರ್ಮೂಲಗೊಳಿಸಲು ಬಿಟ್ಟಿರುವುದಿಲ್ಲ. ಅದು “ಅಸಾಧ್ಯಾದರ್ಶವಾದಿ ವಿಚಾರಕರ” ಒಂದು ವಿಷಯವಾಗಿರುತ್ತದೆ ಎಂದು ದ ಎನ್ಸೈಕ್ಲೊಪಿಡಿಯಾ ಹೇಳುತ್ತದೆ.
ಬೆಲೆಯನ್ನು ಲೆಕ್ಕಿಸುವುದು
ನಿಶಸ್ತ್ರ ರಾಗಿರಬೇಕೋ ಇಲ್ಲವೆ ನಿಶಸ್ತ್ರ ರಾಗಿರಬಾರದೋ—ಯಾವ ಬೆಲೆಯು ಇದರಲ್ಲಿ ಒಳಗೂಡಿದೆ? ಬೆಲೆಯನ್ನು ಯಾವಾಗಲೂ ಹಣದಿಂದಲೇ ತೂಗಿ ನೋಡುವುದಿಲ್ಲ. ಶಸ್ತ್ರ -ಸಂಬಂಧಿ ಕೈಗಾರಿಕೆಗಳಲ್ಲಿ ಉದ್ಯೋಗವು ಕೂಡಾ ಒಂದು ಆದ್ಯತೆಯ ಪರಿಗಣನೆಯಾಗಿದೆ. ಅನೇಕ ದೇಶಗಳಲ್ಲಿ ಕರವಸೂಲಿಯ ಹಣವನ್ನು ಯುದ್ಧದ ಆಯುಧಗಳನ್ನು ಖರೀದಿಸಲು ಬಳಸಲಾಗುತ್ತದೆ, ಇದು ಉದ್ಯೋಗವನ್ನು ಪ್ರಚೋದಿಸುತ್ತದೆ. ಆದುದರಿಂದ ನಿಶಸ್ತ್ರೀಕರಣವು ನಿರುದ್ಯೋಗಕ್ಕೆ ನಡಿಸಬಹುದು. ಆದುದರಿಂದ ರಕ್ಷಣಾ ಆಯವ್ಯಯ ಅಂದಾಜು ಪಟ್ಟಿಯಲ್ಲಿ ಭಾರೀ ಬದ್ಧರಾಗಿರುವ ದೇಶಗಳು ಪೂರ್ಣ ನಿಶಸ್ತ್ರೀಕರಣದ ಯೋಚನೆಯಿಂದ ತತ್ತರಿಸುತ್ತವೆ. ಅಂಥಹ ಯೋಚನೆಯು, ಒಂದು ಅಸಾಧ್ಯಾದರ್ಶವಾದಿ ವಿಚಾರವಾಗಿರುವುದರ ಬದಲಿಗೆ ಒಂದು ದುಸ್ವಪ್ನ ಪಿಶಾಚಿಯಾಗಿರುತ್ತದೆ.
ಆದರೂ, ಒಂದು ಯುದ್ಧಯಂತ್ರವನ್ನು ನಡಿಸುವುದರಲ್ಲಿ ಅಧಿಕ ಪ್ರಮಾಣದ ಹಣವು ಒಳಗೂಡಿದೆ ಎಂಬುದನ್ನು ನಾವು ಅಲಕ್ಷ್ಯಿಸಸಾಧ್ಯವಿಲ್ಲ. ಲೋಕದ ಜುಮ್ಲಾ ಉತ್ಪಾದನೆಯ ಮೌಲ್ಯದ ಶೇಕಡಾ 10 ರಷ್ಟು ಯುದ್ಧ ಸನ್ನಾಹಗಳಲ್ಲಿ ವ್ಯಯಿಸಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಅದು ಎಷ್ಟು ಆಗುತ್ತದೆ? ಹಣದುಬ್ಬರದ ಕಾರಣ ನಿಜ ಸಂಖ್ಯೆಗಳು ಏರುಪೇರಾಗುತ್ತವೆ, ಆದರೂ ಒಂದು ಮಿಲಿಯ ಬ್ರಿಟಿಷ್ ಪೌಂಡುಗಳು (ಸುಮಾರು ಎರಡು ಕೋಟಿ 78 ಲಕ್ಷ ರೂಪಾಯಿಗಳಷ್ಟು) ಈ ರೀತಿಯಲ್ಲಿ ದಿನದ ಪ್ರತಿ ನಿಮಿಷಕ್ಕೆ ವ್ಯಯಿಸಲ್ಪಡುತ್ತದೆ ಎಂಬುದನ್ನು ಎಣಿಸಿರಿ! ನಿಮ್ಮ ಹತ್ತಿರ ಅಪ್ಟೊಂದು ಹಣವಿರುವುದಾದರೆ ಯಾವುದನ್ನು ಆದ್ಯತೆಯ ಪ್ರಕಾರ ಮಾಡಲು ಆರಿಸುವಿರಿ? ಕ್ಷಾಮ ಪರಿಹಾರವೋ? ಆರೋಗ್ಯ ಹಿತವೋ? ಮಕ್ಕಳ ಕ್ಷೇಮಾಭಿವೃದ್ಧಿಯೋ? ಜೀವಿ ಪರಿಸ್ಥಿತಿ ಶಾಸ್ತ್ರವೋ? ಮಾಡಲಿಕ್ಕಾದರೋ ಬಹಳಷ್ಟು ಇದೆ!
ಉದಾಹರಣೆಗೆ ರಶ್ಯಾದಲ್ಲಿ ಇತ್ತೀಚೆಗೆ ಪ್ರಕಟಿಸಿದ “ಯುದ್ಧದ ಟ್ಯಾಂಕ್ಗಳಿಂದ ಟ್ರ್ಯಾಕ್ಟರ್ಸ್ಗಳಿಗೆ” ಕಾರ್ಯಕ್ರಮ ತೆಗೆದುಕೊಳ್ಳಿರಿ, ಅಲ್ಲಿ ಕೆಲವು ಶಸ್ತ್ರಗಳ ತಯಾರಿಕೆಯ ಕಾರ್ಯಾಗಾರಗಳನ್ನು 200 ವಿಧದ “ವ್ಯವಸಾಯ-ಯಾಂತ್ರೀಕೃತ ಮುಂದುವರಿದ ಸಲಕರಣೆಗಳನ್ನು” ತಯಾರಿಸಲು ಪರಿವರ್ತನೆ ಮಾಡಲಾಯಿತು. ವ್ಯವಸಾಯದ ಈ ಸಾಧನಗಳು ಅಷ್ಟೊಂದು ಜರೂರಿಯದ್ದಾಗಿರುವುದು ಯಾಕೆ? ಯಾಕಂದರೆ ಬ್ರಿಟನಿನ ಫಾರ್ಮಿಂಗ್ ನ್ಯೂಸ್ ಗನುಸಾರ “ರಾಷ್ಟ್ರೀಯ ಗದ್ದೆಗಳಲ್ಲಿ ಬೆಳೆಸಲ್ಪಟ್ಟ ಹಣ್ಣು ಮತ್ತು ತರಕಾರಿಗಳ ಮೂರನೆಯ ಒಂದು ಪಾಲು ಮಾತ್ರ ಬಳಕೆದಾರರಿಗೆ ಹೋಗಿ ತಲುಪುತ್ತದೆ, ಉಳಿದದ್ದು ಗದ್ದೆಗಳಲ್ಲಿ ಕೊಳೆತು ಹೋಗುವಂತೆ ಬಿಡಲ್ಪಡುತ್ತದೆ ಅಥವಾ ಸಾಗಣೆಯ ಬಿಂದುಗಳಲ್ಲಿ ಯಾ ದಾಸ್ತಾನುಗೃಹಗಳಲ್ಲಿ ಹಾಳಾಗಲ್ಪಡುತ್ತವೆ.”
ಟ್ಯಾಂಕುಗಳ ಬದಲು ಟ್ರ್ಯಾಕ್ಟರುಗಳನ್ನು ಉತ್ಪಾದಿಸುವುದು ಶ್ಲಾಘನೀಯವಾಗಿರಬಹುದಾದರೂ, ಅದು ತಲೇಪಂಕ್ತಿಗಳನ್ನುಂಟುಮಾಡುತ್ತದೆ, ಯಾಕಂದರೆ ಅದು ಅಷ್ಟು ಅಸಾಮಾನ್ಯವಾದದ್ದಾಗಿದೆ. ಇನ್ನೂ ಹೆಚ್ಚಾಗಿ, ಜುಮ್ಲಾ ಯುದ್ಧ ಶಸ್ತ್ರಗಳ ಉತ್ಪಾದನೆಯಲ್ಲಿ ಇದರ ಪರಿಣಾಮವು ಬರೇ ಸ್ವಲ್ಪ. ಪ್ರಪಂಚದ ಯುದ್ಧ ಸನ್ನಾಹದಲ್ಲಿ ಲೆಕ್ಕವಿಲ್ಲದಷ್ಟು ನೂರಾರು ಲಕ್ಷಗಟ್ಟಲೆ (ಬ್ರಿಟಿಷ್) ಪೌಂಡುಗಳು, (ರಶ್ಯಾ) ರೂಬೆಲ್ಸ್ಗಳು ಮತ್ತು (ಅಮೆರಿಕ) ಡಾಲರುಗಳು ವ್ಯಯಿಸಲ್ಪಡುತ್ತಾ ಇವೆ, ಆ ಮೂಲಕ ಯೇಸು ಕ್ರಿಸ್ತನು ಮುನ್ನುಡಿದಂತೆ “ಆಕಾಶದ ಶಕ್ತಿಗಳು ಕದಲುವದರಿಂದ ಲೋಕಕ್ಕೆ ಏನು ಬರುವುದೋ ಎಂದು ಎದುರುನೋಡುತ್ತಾ ಪ್ರಾಣ ಹೋದಂತಾಗುವರು.” ಇಂತಹ ಭೀತಿಯನ್ನು ಹೇಗೆ ಹೋಗಲಾಡಿಸಸಾಧ್ಯವಿದೆ? ಸಂಪೂರ್ಣ ನಿಶಸ್ತ್ರೀಕರಣವು ಕೇವಲ ಒಂದು ಪ್ನವಾಗಿ ಉಳಿಯುವುದೋ? ಇಲ್ಲದಿದ್ದರೆ, ಅದನ್ನು ತರಲು ಯಾವುದರ ಆವಶ್ಯಕತೆಯಿದೆ?—ಲೂಕ 21:26. (W89 12/15)