“ಇಂಥವರನ್ನು ಸನ್ಮಾನಿಸಿರಿ”
ಕೊರಿಂಥದ ಸಭೆಯಲ್ಲಿ ಎಲ್ಲಾ ವಿಚಾರಗಳು ಸಂತೃಪ್ತಿಕರವಾದ ಸ್ಥಿತಿಯಲ್ಲಿರಲಿಲ್ಲ. ಅದರಲ್ಲಿ ಆಘಾತಗೊಳಿಸುವ ಅನೈತಿಕತೆಯ ವಿದ್ಯಮಾನವಿತ್ತು, ಮತ್ತು ಸಹೋದರರ ನಡುವೆ ವೈಮನಸ್ಯಗಳು ಅಸ್ತಿತ್ವದಲ್ಲಿದ್ದವು. ಕೆಲವರು ಗಂಭೀರವಾದ ವೈಯಕ್ತಿಕ ಸಮಸ್ಯೆಗಳನ್ನು ಎದುರಿಸಿದರು ಅಥವಾ ಉತ್ತರಿಸಲ್ಪಡುವ ಅಗತ್ಯವಿದ್ದ ಪ್ರಶ್ನೆಗಳು ಅವರಿಗಿದ್ದವು. ಕೆಲವು ಸಹೋದರರು ಒಬ್ಬರು ಇನ್ನೊಬ್ಬರನ್ನು ಕೋರ್ಟಿಗೆ ಕರೆದೊಯ್ಯುತ್ತಿದ್ದರು; ಇತರರು ಪುನರುತ್ಥಾನವನ್ನೂ ಅಲ್ಲಗಳೆಯುತ್ತಿದ್ದರು.
ಗಂಭೀರವಾದ ಪ್ರಶ್ನೆಗಳು ಸಹ ಎದ್ದವು. ಧಾರ್ಮಿಕವಾಗಿ ವಿಭಜಿತಗೊಂಡಿರುವ ಮನೆವಾರ್ತೆಗಳಲ್ಲಿರುವವರು, ತಮ್ಮ ಅವಿಶ್ವಾಸಿ ಸಂಗಾತಿಗಳೊಂದಿಗಿರಬೇಕೊ ಅಥವಾ ಅವರು ಪ್ರತ್ಯೇಕವಾಗಬೇಕೊ? ಸಭೆಯಲ್ಲಿ ಸಹೋದರಿಯರ ಪಾತ್ರವೇನಾಗಿತ್ತು? ವಿಗ್ರಹಕ್ಕೆ ನೈವೇದ್ಯಮಾಡಿರುವ ಮಾಂಸದಲ್ಲಿ ಪಾಲುತೆಗೆದುಕೊಳ್ಳುವುದು, ಸೂಕ್ತವಾಗಿತ್ತೊ? ಕರ್ತನ ಸಂಧ್ಯಾ ಭೋಜನವನ್ನು ಒಳಗೊಂಡು, ಕೂಟಗಳು ಹೇಗೆ ನಡೆಸಲ್ಪಡಬೇಕು?—1 ಕೊರಿಂಥ 1:12; 5:1; 6:1; 7:1-3, 12, 13; 8:1; 11:18, 23-26; 14:26-35.
ನಿಸ್ಸಂದೇಹವಾಗಿ, ಅಂತಹ ಒಂದು ತೊಂದರೆಭರಿತ ಆತ್ಮಿಕ ಪರಿಸರದಲ್ಲಿರುವ ತಮ್ಮ ಸಹೋದರರ ಕ್ಷೇಮದ ಕುರಿತಾಗಿ ಚಿಂತಿತರಾಗಿದ್ದು, ಅಖಾಯಿಕ, ಫೊರ್ತುನಾತ, ಮತ್ತು ಸ್ತೆಫನ [“ಸ್ತೆಫಾನಸ್,” NW]ರು, ಎಫೆಸದಲ್ಲಿದ್ದ ಅಪೊಸ್ತಲ ಪೌಲನನ್ನು ಸಂದರ್ಶಿಸಲಿಕ್ಕಾಗಿ ಒಂದು ಪ್ರಯಾಣವನ್ನು ಕೈಕೊಂಡರು. ಅಂತಹ ಕ್ಷೋಭೆಗೊಳಿಸುವ ವಾರ್ತೆಯನ್ನು ತರುತ್ತಿರುವುದರೊಂದಿಗೆ, ಈ ವಾದಾಂಶಗಳ ಕುರಿತಾದ ಪ್ರಶ್ನೆಗಳನ್ನು ಒಳಗೊಂಡಿದ್ದ, ಸಭೆಯಿಂದ ಪತ್ರವೊಂದನ್ನು ಅವರು ಪೌಲನಿಗೆ ಕೊಂಡೊಯ್ಯುತ್ತಿದ್ದಿರಸಾಧ್ಯವಿದೆ. (1 ಕೊರಿಂಥ 7:1; 16:17) ಸುವ್ಯಕ್ತವಾಗಿಯೇ, ಈ ಮೂವರು ಸಹೋದರರು ಮಾತ್ರವೇ, ಇಂತಹ ಸನ್ನಿವೇಶದ ಕುರಿತಾಗಿ ಚಿಂತಿತರಾಗಿರಲಿಲ್ಲ. ವಾಸ್ತವವಾಗಿ ಸಭೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಅಸ್ತಿತ್ವದಲ್ಲಿದ್ದವು ಎಂಬ ವಾರ್ತೆಯನ್ನು, ಪೌಲನು ಈಗಾಗಲೇ “ಖ್ಲೋಯೆಯ ಮನೆಯವ”ರಿಂದ ಪಡೆದುಕೊಂಡಿದ್ದನು. (1 ಕೊರಿಂಥ 1:11) ನಿಸ್ಸಂದೇಹವಾಗಿ, ಸನ್ನಿವೇಶದ ಹೆಚ್ಚು ಸ್ಪಷ್ಟವಾದ ತಿಳಿವಳಿಕೆಯನ್ನು ಪಡೆದುಕೊಳ್ಳಲು, ಯಾವ ಸಲಹೆಯನ್ನು ನೀಡಬೇಕೆಂಬುದನ್ನು, ಹಾಗೂ ಎಬ್ಬಿಸಲ್ಪಟ್ಟ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕೆಂಬುದನ್ನು ನಿರ್ಧರಿಸಲು, ಸಂದೇಶವಾಹಕರ ವರದಿಯು ಪೌಲನಿಗೆ ಸಹಾಯ ಮಾಡಿತು. ಈಗ ಒಂದನೆಯ ಕೊರಿಂಥವೆಂದು ನಮಗೆ ವಿದಿತವಾಗಿರುವ ಆ ಪತ್ರವು, ದೇವರ ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟ ಪೌಲನ ಉತ್ತರವಾಗಿದೆಯೆಂಬಂತೆ ತೋರುತ್ತದೆ. ಆ ಪತ್ರವನ್ನು ಕೊರಿಂಥದವರಿಗೆ ಒಪ್ಪಿಸಿದವರು, ಅಖಾಯಿಕ, ಫೊರ್ತುನಾತ, ಮತ್ತು ಸ್ತೆಫಾನಸರಾಗಿದ್ದಿರಬಹುದು.
ಅಖಾಯಿಕ, ಫೊರ್ತುನಾತ, ಮತ್ತು ಸ್ತೆಫಾನಸ್‌ರು ಯಾರಾಗಿದ್ದರು? ಅವರ ಕುರಿತಾಗಿ ಶಾಸ್ತ್ರವಚನಗಳು ಹೇಳುವ ವಿಷಯವನ್ನು ಅಭ್ಯಾಸಿಸುವುದರಿಂದ ನಾವೇನನ್ನು ಕಲಿಯಬಲ್ಲೆವು?
ಸ್ತೆಫಾನಸ್‌ನ ಮನೆವಾರ್ತೆ
ಸ್ತೆಫಾನಸ್‌ನ ಮನೆವಾರ್ತೆಯು, ಸುಮಾರು ಸಾ.ಶ. 50ನೆಯ ವರ್ಷದಲ್ಲಿ, ದಕ್ಷಿಣ ಗ್ರೀಸ್‌ನ, ರೋಮಾಪುರದ ಅಖಾಯ ಸೀಮೆಯಲ್ಲಿನ ಪೌಲನ ಶುಶ್ರೂಷೆಯ ‘ಪ್ರಥಮಫಲಗಳಾ’ಗಿದ್ದು, ಮನೆವಾರ್ತೆಯವರು ಸ್ವತಃ ಪೌಲನಿಂದ ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದರು. ಸುವ್ಯಕ್ತವಾಗಿಯೇ, ಪೌಲನು ಅವರನ್ನು, ಕೊರಿಂಥದವರಿಗೆ ಆದರ್ಶಪ್ರಾಯ ಅಂಶದೋಪಾದಿ, ಒಂದು ಪ್ರೌಢವಾದ ಸ್ಥಿರಗೊಳಿಸುವ ಪ್ರಭಾವದೋಪಾದಿ ಪರಿಗಣಿಸಿದನು. ಸಭೆಯ ಪರವಾಗಿ ಅವರು ನಡಿಸಿದ ಚಟುವಟಿಕೆಯ ಕಾರಣದಿಂದ, ಅವನು ಅವರನ್ನು ಹೃತ್ಪೂರ್ವಕವಾಗಿ ಹೀಗೆ ಹೊಗಳಿದನು: “ಸ್ತೆಫನನ [“ಸ್ತೆಫಾನಸ್‌ನ,” NW] ಮನೆಯವರು [“ಮನೆವಾರ್ತೆಯವರು,” NW] ಅಖಾಯದಲ್ಲಿನ ಪ್ರಥಮಫಲವೆಂದೂ ಅವರು ದೇವಜನರಿಗೆ ಸೇವೆಮಾಡುವದಕ್ಕಾಗಿ ಕೈಹಾಕಿದರೆಂದೂ ನೀವು ಬಲ್ಲಿರಷ್ಟೆ. ಸಹೋದರರೇ, ನೀವು ಇಂಥವರಿಗೂ ಕೆಲಸದಲ್ಲಿ ಸಹಾಯಮಾಡುತ್ತಾ ಪ್ರಯಾಸಪಡುತ್ತಾ ಇರುವವರೆಲ್ಲರಿಗೂ ಒಳಗಾಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.” (1 ಕೊರಿಂಥ 1:16; 16:15, 16) ನಿರ್ದಿಷ್ಟವಾಗಿ ಸ್ತೆಫಾನಸ್‌ನ “ಮನೆವಾರ್ತೆಯವರು” ಯಾರಿಂದ ರಚಿತರಾಗಿದ್ದರೆಂಬುದು ಹೇಳಲ್ಪಟ್ಟಿಲ್ಲ. ಆ ಅಭಿವ್ಯಕ್ತಿಯು ಕುಟುಂಬ ಸದಸ್ಯರನ್ನು ಮಾತ್ರವೇ ಅರ್ಥೈಸಸಾಧ್ಯವಿರುವುದಾದರೂ, ಇದು ಗುಲಾಮರನ್ನು ಅಥವಾ ನೌಕರರನ್ನೂ ಒಳಗೊಳ್ಳಸಾಧ್ಯವಿದೆ. ಅಖಾಯಿಕ ಎಂಬುದು, ಗುಲಾಮನೊಬ್ಬನ ಸಾಮಾನ್ಯವಾದ ಲ್ಯಾಟಿನ್ ಹೆಸರೂ, ಫೊರ್ತುನಾತ ಎಂಬುದು, ಮುಕ್ತ ದಾಸನೊಬ್ಬನ ಸಾಮಾನ್ಯ ಹೆಸರೂ ಆಗಿತ್ತಾದುದರಿಂದ, ಅವರಿಬ್ಬರೂ ಅದೇ ಮನೆವಾರ್ತೆಯ ಸದಸ್ಯರಾಗಿದ್ದಿರಬಹುದೆಂದು ಕೆಲವು ವಿಮರ್ಶಕರು ಊಹಿಸುತ್ತಾರೆ.
ವಿದ್ಯಮಾನವು ಏನೇ ಆಗಿರಲಿ, ಪೌಲನು ಸ್ತೆಫಾನಸ್‌ನ ಮನೆವಾರ್ತೆಯನ್ನು ಆದರ್ಶಪ್ರಾಯವಾದದ್ದಾಗಿ ಪರಿಗಣಿಸಿದನು. ಅದರ ಸದಸ್ಯರು ಸ್ವತಃ “ದೇವಜನರಿಗೆ ಸೇವೆಮಾಡುವದಕ್ಕಾಗಿ ಕೈಹಾಕಿ”ದ್ದರು. ಸಭೆಯ ಒಳಿತಿಗಾಗಿ ಮಾಡಲ್ಪಡಬೇಕಾಗಿದ್ದ ಕೆಲಸವಿತ್ತು ಎಂಬುದನ್ನು ಸ್ತೆಫಾನಸ್‌ನ ಕುಟುಂಬವು ಗ್ರಹಿಸಿಕೊಂಡು, ಈ ಸೇವೆಯನ್ನು ಒಂದು ವೈಯಕ್ತಿಕ ಜವಾಬ್ದಾರಿಯೋಪಾದಿ ಸ್ವಯಂ ಆಗಿ ಅಂಗೀಕರಿಸಿದ್ದಿರಬೇಕು. ಅಂತಹ ಸೇವೆಯನ್ನು ಪವಿತ್ರ ಜನರಿಗೆ ಸಲ್ಲಿಸಲಿಕ್ಕಾಗಿರುವ ಅವರ ಅಪೇಕ್ಷೆಯು, ನೈತಿಕ ಬೆಂಬಲ ಹಾಗೂ ಅಂಗೀಕಾರಕ್ಕೆ ಅರ್ಹವಾಗಿತ್ತೆಂಬುದು ನಿಶ್ಚಯ.
“ಅವರು ನನ್ನ ಆತ್ಮವನ್ನೂ ನಿಮ್ಮ ಆತ್ಮಗಳನ್ನೂ ಉಪಶಮನಮಾಡಿದರು”
ಕೊರಿಂಥದಲ್ಲಿನ ಸನ್ನಿವೇಶದ ಕುರಿತಾಗಿ ಪೌಲನು ಚಿಂತಿತನಾಗಿದ್ದರೂ, ಆ ಮೂವರು ಸಂದೇಶವಾಹಕರ ಆಗಮನವು, ಅವನ ಆತ್ಮೋನ್ನತಿ ಮಾಡಲು ಕಾರ್ಯನಡಿಸಿತು. ಪೌಲನು ಹೇಳುವುದು: “ಸ್ತೆಫನನೂ [“ಸ್ತೆಫಾನಸ್‌ನು,” NW] ಫೊರ್ತುನಾತನೂ ಅಖಾಯಿಕನೂ ಬಂದದರಿಂದ ನನಗೆ ಸಂತೋಷವಾಯಿತು. ನೀವು ಇಲ್ಲದ್ದರಿಂದ ನನಗುಂಟಾದ ಕೊರತೆಯನ್ನು ಅವರು ನೀಗಿದರು; ಅವರು ನನ್ನ ಆತ್ಮವನ್ನೂ ನಿಮ್ಮ ಆತ್ಮಗಳನ್ನೂ ಉಪಶಮನಮಾಡಿದರು.” (1 ಕೊರಿಂಥ 16:17, 18) ಕೊರಿಂಥದಲ್ಲಿನ ಸನ್ನಿವೇಶವನ್ನು ಪರಿಗಣಿಸುತ್ತಾ, ಕೊರಿಂಥದವರಿಂದ ಶಾರೀರಿಕ ಪ್ರತ್ಯೇಕತೆಯು ಪೌಲನಿಗೆ ವ್ಯಾಕುಲತೆಯ ಒಂದು ಮೂಲವಾಗಿದ್ದಿರಬಹುದಾದರೂ, ಇಡೀ ಸಭೆಯ ಅನುಪಸ್ಥಿತಿಗಾಗಿ ಈಗ ಪ್ರತಿನಿಧಿಗಳ ಪ್ರತ್ಯಕ್ಷತೆಯು ನಷ್ಟಭರ್ತಿಮಾಡಿತು. ಅವರ ವರದಿಯು ಪೌಲನಿಗೆ ಸನ್ನಿವೇಶದ ಪೂರ್ಣ ವರ್ತಮಾನವನ್ನು ಕೊಟ್ಟಿತು ಮತ್ತು ಕಡಿಮೆಪಕ್ಷ ಅವನ ಸ್ವಲ್ಪ ಭಯವನ್ನು ಹೋಗಲಾಡಿಸಿಕೊಳ್ಳಲು ಕಾರ್ಯನಡಿಸಿತು ಎಂಬುದು ಸಂಭವನೀಯ. ಹೇಗಿದ್ದರೂ ವಿಷಯಗಳು ಪ್ರಾಯಶಃ ಅವನು ಊಹಿಸಿಕೊಂಡಿದ್ದಷ್ಟು ಹೆಚ್ಚಾಗಿ ಕೆಟ್ಟವುಗಳಾಗಿರಲಿಲ್ಲ.
ಪೌಲನಿಗನುಸಾರ, ಮೂವರು ಸಂದೇಶವಾಹಕರ ಮಂಡಲಿಯು, ಅವನ ಆತ್ಮಕ್ಕೆ ಚೈತನ್ಯನೀಡಿತು ಮಾತ್ರವಲ್ಲ, ಕೊರಿಂಥದ ಸಭೆಯ ಆತ್ಮೋನ್ನತಿ ಮಾಡಲು ಸಹ ಕಾರ್ಯನಡಿಸಿತು. ಸನ್ನಿವೇಶದ ಪ್ರತಿಯೊಂದು ಅಂಶವನ್ನೂ ತಮ್ಮ ಪ್ರತಿನಿಧಿಗಳು ಸ್ಪಷ್ಟವಾಗಿ ಪೌಲನಿಗೆ ವಿವರಿಸಿದ್ದರು ಹಾಗೂ ಅವನ ಬುದ್ಧಿವಾದದೊಂದಿಗೆ ಹಿಂದಿರುಗುವರು ಎಂಬುದನ್ನು ತಿಳಿದುಕೊಳ್ಳುವುದು, ಕೊರಿಂಥದ ಸಭೆಯವರಿಗೆ ಒಂದು ಉಪಶಮನವಾಗಿತ್ತೆಂಬುದರಲ್ಲಿ ಸಂದೇಹವಿಲ್ಲ.
ಆದುದರಿಂದ ಸ್ತೆಫಾನಸ್‌ನೂ ಅವನ ಇಬ್ಬರು ಸಂಗಡಿಗರೂ, ಕೊರಿಂಥದವರ ಪರವಾಗಿ ಮಾಡಿದ ತಮ್ಮ ಕಾರ್ಯಗಳಿಗಾಗಿ ಹೃತ್ಪೂರ್ವಕವಾಗಿ ಶಿಫಾರಸ್ಸು ಮಾಡಲ್ಪಟ್ಟರು. ಈ ಪುರುಷರಿಗಾಗಿ ಪೌಲನ ಪರಿಗಣನೆಯು ಹೇಗಿತ್ತೆಂದರೆ, ಅವರ ಹಿಂದಿರುಗುವಿಕೆಯ ಬಳಿಕ, ಅವರು ವಿಭಜಿತಗೊಂಡಿದ್ದ ಕೊರಿಂಥ ಸಭೆಯಲ್ಲಿ ಮುಂದಾಳುತ್ವವನ್ನು ಒದಗಿಸಬೇಕಾಗಿತ್ತು. ಅಪೊಸ್ತಲನು ಸಹೋದರರಿಗೆ ಪ್ರಚೋದಿಸುವುದು: “ನೀವು ಇಂಥವರಿಗೂ ಕೆಲಸದಲ್ಲಿ ಸಹಾಯಮಾಡುತ್ತಾ ಪ್ರಯಾಸಪಡುತ್ತಾ ಇರುವವರೆಲ್ಲರಿಗೂ ಒಳಗಾಗಬೇಕೆಂದು . . . ಇಂಥವರನ್ನು ಸನ್ಮಾನಿಸಿರಿ.” (1 ಕೊರಿಂಥ 16:16, 18) ಅಂತಹ ಪ್ರಬಲ ಶಿಫಾರಸ್ಸುಗಳು, ಸಭೆಯೊಳಗಿನ ಬಿಕ್ಕಟ್ಟುಗಳ ಹೊರತಾಗಿ ಈ ಪುರುಷರು ತೋರಿಸಿದ ಸಂಪೂರ್ಣ ನಿಷ್ಠೆಯನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ಅಂಥವರನ್ನು ಆತ್ಮೀಯರನ್ನಾಗಿ ಪರಿಗಣಿಸತಕ್ಕದ್ದು.—ಫಿಲಿಪ್ಪಿ 2:29.
ನಂಬಿಗಸ್ತ ಸಹಕಾರವು ಅತ್ಯುತ್ತಮ ಫಲಿತಾಂಶಗಳನ್ನು ಉತ್ಪಾದಿಸುತ್ತದೆ
ಯೆಹೋವನ ಸಂಸ್ಥೆ ಮತ್ತು ಅದರ ಪ್ರತಿನಿಧಿಗಳೊಂದಿಗಿನ ಆಪ್ತ ಸಹಕಾರವು, ಅತ್ಯುತ್ತಮ ಫಲಿತಾಂಶಗಳನ್ನು ಉತ್ಪಾದಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಒಂದನೆಯ ಪತ್ರವನ್ನು ಬರೆದಾದ ಸ್ವಲ್ಪ ಸಮಯದ ಬಳಿಕ, ಈಗ ಎರಡನೆಯ ಕೊರಿಂಥವೆಂದು ವಿದಿತವಾಗಿರುವ ಪತ್ರವನ್ನು ಪೌಲನು ಬರೆದಾಗ, ಸಭೆಯಲ್ಲಿನ ವಿಚಾರಗಳು ಈಗಾಗಲೇ ಹೆಚ್ಚು ಉತ್ತಮವಾಗುತ್ತಿದ್ದವು. ಅಖಾಯಿಕ, ಫೊರ್ತುನಾತ, ಮತ್ತು ಸ್ತೆಫಾನಸರಂತಹ ಸಹೋದರರ ಸತತವಾದ ತಾಳ್ಮೆಯ ಚಟುವಟಿಕೆ, ಹಾಗೂ ತೀತನ ಸಂದರ್ಶನವು, ಒಂದು ಒಳ್ಳೆಯ ಪರಿಣಾಮವನ್ನು ಉತ್ಪಾದಿಸಿತು.—2 ಕೊರಿಂಥ 7:8-15; ಹೋಲಿಸಿರಿ ಅ. ಕೃತ್ಯಗಳು 16:4, 5.
ಯೆಹೋವನ ಜನರ ಆಧುನಿಕ ದಿನದ ಸಭೆಗಳ ಸದಸ್ಯರು, ಶಾಸ್ತ್ರವಚನಗಳಲ್ಲಿನ ಈ ನಂಬಿಗಸ್ತ ಪುರುಷರ ಸಂಕ್ಷಿಪ್ತ ಉಲ್ಲೇಖವನ್ನು ಕುರಿತು ಮನನ ಮಾಡುವ ಮೂಲಕ ಪ್ರಯೋಜನವನ್ನು ಪಡೆದುಕೊಳ್ಳಬಲ್ಲರು. ಉದಾಹರಣೆಗಾಗಿ, ಸ್ಥಳಿಕ ಸಭೆಯೊಳಗಿನ ಮುಂದುವರಿಯುತ್ತಿರುವ ಸನ್ನಿವೇಶವನ್ನು, ಯಾವುದೋ ಕಾರಣದಿಂದ ಶೀಘ್ರವಾಗಿ ಬಗೆಹರಿಸಲು ಸಾಧ್ಯವಿರುವುದಿಲ್ಲ ಹಾಗೂ ಅದು ಸಹೋದರರಿಗೆ ಚಿಂತೆಯನ್ನುಂಟುಮಾಡುತ್ತಿದೆ ಎಂದು ಭಾವಿಸಿಕೊಳ್ಳಿರಿ. ಏನು ಮಾಡತಕ್ಕದ್ದು? ಆ ಸನ್ನಿವೇಶದ ಕುರಿತಾಗಿ ಪೌಲನಿಗೆ ಸುದ್ದಿಮುಟ್ಟಿಸುವ ತಮ್ಮ ಜವಾಬ್ದಾರಿಯಿಂದ ಹಿಂಜರಿಯದಿದ್ದ, ಸ್ತೆಫಾನಸ್, ಫೊರ್ತುನಾತ, ಮತ್ತು ಅಖಾಯಿಕರನ್ನು ಅನುಕರಿಸಿರಿ ಮತ್ತು ಆ ಮೇಲೆ ಭರವಸೆಯಿಂದ ವಿಷಯಗಳನ್ನು ಯೆಹೋವನ ಕೈಗಳಲ್ಲಿ ಒಪ್ಪಿಸಿಬಿಡಿರಿ. ನೀತಿಗಾಗಿರುವ ಹುರುಪು ಅವರನ್ನು ಸ್ವತಂತ್ರವಾಗಿ ಕ್ರಿಯೆ ಕೈಕೊಳ್ಳುವಂತೆ ಅಥವಾ “ಯೆಹೋವನ ಮೇಲೆ ಕುದಿ”ಯುವವರಾಗಿ ಪರಿಣಮಿಸುವಂತೆ ಅನುಮತಿಸಲಿಲ್ಲ ಎಂಬುದು ನಿಶ್ಚಯ.—ಜ್ಞಾನೋಕ್ತಿ 19:3.
ಸಭೆಗಳು ಯೇಸು ಕ್ರಿಸ್ತನಿಗೆ ಸೇರಿದವುಗಳಾಗಿವೆ, ಮತ್ತು ಕೊರಿಂಥದಲ್ಲಿ ಮಾಡಿದಂತೆಯೇ, ತನ್ನ ಸ್ವಂತ ಸೂಕ್ತ ಸಮಯದಲ್ಲಿ, ಅವರ ಆತ್ಮಿಕ ಕ್ಷೇಮ ಮತ್ತು ಶಾಂತಿಗೆ ಬೆದರಿಕೆಯೊಂದನ್ನು ಒಡ್ಡಬಹುದಾದ ಯಾವುದೇ ತೊಂದರೆಗಳನ್ನು ಬಗೆಹರಿಸಲು ಅವನು ಕ್ರಿಯೆಗೈಯುವನು. (ಎಫೆಸ 1:22; ಪ್ರಕಟನೆ 1:12, 13, 20; 2:1-4) ಈ ಮಧ್ಯೆ, ಸ್ತೆಫಾನಸ್, ಫೊರ್ತುನಾತ, ಮತ್ತು ಅಖಾಯಿಕರಿಂದ ಇಡಲ್ಪಟ್ಟಿರುವ ಅತ್ಯುತ್ತಮ ಮಾದರಿಯನ್ನು ನಾವು ಅನುಸರಿಸುವುದಾದರೆ, ಮತ್ತು ನಮ್ಮ ಸಹೋದರರ ಸೇವೆಯಲ್ಲಿ ಪರಿಶ್ರಮಿಸುತ್ತಾ ಮುಂದುವರಿಯುವುದಾದರೆ, ನಾವು ಸಹ ನಮ್ಮ ಸಹೋದರರ ಆತ್ಮೋನ್ನತಿಮಾಡುತ್ತಾ, ಸಭಾ ಏರ್ಪಾಡನ್ನು ನಿಷ್ಠೆಯಿಂದ ಬೆಂಬಲಿಸುತ್ತಿರುವೆವು, ಮತ್ತು ‘ಅವರನ್ನು ಪ್ರೀತಿ ಮತ್ತು ಸತ್ಕಾರ್ಯಗಳಿಗಾಗಿ ಪ್ರೇರಿಸುತ್ತಾ’ ಇರುವೆವು.—ಇಬ್ರಿಯ 10:24, 25.