ಗಿಲ್ಯಡ್ನ 101ನೆಯ ಕ್ಲಾಸ್—ಸತ್ಕ್ರಿಯೆಗಳಲ್ಲಿ ಆಸಕ್ತರು
ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರು ಸತ್ಕಾರ್ಯಗಳಲ್ಲಿ ಆಸಕ್ತನು. ಆತನ ಪುತ್ರನಾದ ಯೇಸು ಕ್ರಿಸ್ತನೂ ಹಾಗೆಯೆ. ನಮ್ಮ ಆದರ್ಶಪ್ರಾಯನಾದ ಯೇಸು ಕ್ರಿಸ್ತನು ತನ್ನ ದೇವದತ್ತ ನೇಮಕವನ್ನು ನೆರವೇರಿಸುವುದರಲ್ಲಿ ಆಸಕ್ತಿ ತೋರಿಸಿದನು. ಇದರಲ್ಲಿ “ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಕೀಯಜನರನ್ನು ತನಗಾಗಿ ಪರಿಶುದ್ಧಮಾಡುವದಕ್ಕೂ ನಮಗೋಸ್ಕರ ತನ್ನನ್ನು ಒಪ್ಪಿಸಿ”ಕೊಡುವುದೂ ಸೇರಿತ್ತು. (ತೀತ 2:14) ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 101ನೆಯ ಕ್ಲಾಸಿನ 48 ಸದಸ್ಯರು, ಸತ್ಕ್ರಿಯೆಗಳಲ್ಲಿ ತಮ್ಮ ಆಸಕ್ತಿಯನ್ನು ನಿಶ್ಚಯವಾಗಿಯೂ ಪ್ರದರ್ಶಿಸಿದ್ದಾರೆ. ಈ ಮಿಷನೆರಿಗಳ ಪದವಿಪ್ರಾಪ್ತಿ ಕಾರ್ಯಕ್ರಮವು, ನ್ಯೂ ಯಾರ್ಕ್ನ ಪ್ಯಾಟರ್ಸನ್ನಲ್ಲಿರುವ ವಾಚ್ಟವರ್ ಎಡ್ಯುಕೇಶನಲ್ ಸೆಂಟರ್ನಲ್ಲಿ, ಸೆಪ್ಟೆಂಬರ್ 7, 1996ರಂದು ಜರಗಿತು.
ಆಸಕ್ತರಾಗಿ ಉಳಿಯಲಿಕ್ಕಾಗಿ ಪ್ರಾಯೋಗಿಕ ಸಲಹೆ
ಆಡಳಿತ ಮಂಡಳಿಯ ಸದಸ್ಯರೂ ಪೂರ್ಣ ಸಮಯದ ಶುಶ್ರೂಷೆಯಲ್ಲಿ 70ಕ್ಕೂ ಹೆಚ್ಚು ವರ್ಷಗಳನ್ನು ಕಳೆದವರೂ ಆದ ಕ್ಯಾರಿ ಬಾರ್ಬರ್, ಪದವಿಪ್ರಾಪ್ತಿ ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು. ತಮ್ಮ ಪೀಠಿಕೆಯಲ್ಲಿ ಸಹೋದರ ಬಾರ್ಬರ್, “ಲೋಕಕ್ಕೆ ಬೆಳಕು” ಆಗಿದ್ದ ಯೇಸುವಿನ ಸಾರುವ ಮತ್ತು ಕಲಿಸುವ ಚಟುವಟಿಕೆಗೆ ಗಮನ ಸೆಳೆದರು. (ಯೋಹಾನ 8:12) ಯೇಸು ಈ ಗೌರವಪೂರ್ಣವಾದ ಪಾತ್ರವನ್ನು ತಾನೇ ಇಟ್ಟುಕೊಳ್ಳದೆ, ತನ್ನ ಶಿಷ್ಯರೂ ಹಾಗೆಯೇ ತಮ್ಮ ಬೆಳಕನ್ನು ಪ್ರಕಾಶಿಸುವಂತೆ ಪ್ರೋತ್ಸಾಹಿಸಿದನು. (ಮತ್ತಾಯ 5:14-16) ಈ ಸೇವಾ ಸುಯೋಗವು ಒಬ್ಬ ಕ್ರೈಸ್ತನ ಜೀವಿತಕ್ಕೆ ಅರ್ಥವನ್ನು ಕೊಟ್ಟು “ಬೆಳಕಿನವರಂತೆ ನಡೆದು”ಕೊಳ್ಳುವ ಸಕಲರ ಭುಜಗಳ ಮೇಲೆ ಭಾರವಾದ ಜವಾಬ್ದಾರಿಯನ್ನು ಹೇರುತ್ತದೆ.—ಎಫೆಸ 5:8.
ಈ ಪೀಠಿಕೆಯ ಮಾತುಗಳ ಬಳಿಕ, ಬ್ರೂಕ್ಲಿನ್ ಮುಖ್ಯಕಾರ್ಯಾಲಯದ ಕಾರ್ಯನಿರ್ವಾಹಕ ಆಫೀಸುಗಳ ಡಾನ್ ಆ್ಯಡಮ್ಸ್ರನ್ನು ಪರಿಚಯಪಡಿಸಲಾಯಿತು. “ಮುಂದುವರಿಯುವುದು, ಹಿಂದೆಸರಿಯುವುದಲ್ಲ,” ಎಂಬ ವಿಷಯದ ಕುರಿತಾಗಿ ಅವರು ಮಾತಾಡಿದರು. ಸಹೋದರ ಆ್ಯಡಮ್ಸ್ ಗಿಲ್ಯಡ್ ಸ್ಕೂಲ್ ಮತ್ತು ಅದರ ಉದ್ದೇಶ—ಸುವಾರ್ತೆಯ ಸಾರುವಿಕೆಯನ್ನು ವಿದೇಶಗಳಿಗೆ ಪ್ರಸರಿಸುವುದು—ಕ್ಕೇ ಗಮನ ಸೆಳೆದರು. ಯಾವುದು ಲೋಕಾದ್ಯಂತ 300ಕ್ಕೂ ಹೆಚ್ಚಿನ ಭಾಷೆಗಳಲ್ಲಿ ಬೈಬಲ್ ಸಾಹಿತ್ಯವನ್ನು ಪ್ರಕಟಿಸಿದೆಯೊ ಆ ದೇವರ ಸಂಸ್ಥೆಯ ಪ್ರಗತಿಹೊಂದುವಿಕೆಯ ಕುರಿತು ಅವರು ಮಾತಾಡಿದರು. 1995ರಲ್ಲಿ ಪ್ರಕಾಶಗೊಂಡ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವು, 111 ಭಾಷೆಗಳಲ್ಲಿ ಆಗಲೇ ದೊರಕುತ್ತಿದ್ದು, ಇನ್ನೂ ಹೆಚ್ಚು ಭಾಷೆಗಳಲ್ಲಿ ಮುದ್ರಿಸಲ್ಪಡಲು ಸಿದ್ಧವಾಗಿದೆ. ಯೇಸುವಿನ ಹೊಸ ಶಿಷ್ಯರು ಕೆಲವೇ ಮಾಸಗಳಲ್ಲಿ ಸಮರ್ಪಣೆ ಮತ್ತು ದೀಕ್ಷಾಸ್ನಾನದ ಹಂತವನ್ನು ಮುಟ್ಟುವಂತೆ ಸಹಾಯಮಾಡುವುದರಲ್ಲಿ ಇದು ಆಗಲೇ ನೆರವಾಗಿದೆ. ಹೀಗೆ ಹೊಸ ಮಿಷನೆರಿಗಳಿಗೆ ಅವರ ಕೆಲಸಕ್ಕೆ ಅತ್ಯಂತ ಸದ್ಯೋಚಿತವಾದ ಬೈಬಲ್ ಅಭ್ಯಾಸ ಸಹಾಯಕಗಳು ಇರುತ್ತವೆ.
ಮುಂದಕ್ಕೆ, ಆಡಳಿತ ಮಂಡಳಿಯ ಸದಸ್ಯರಾದ ಲೈಮನ್ ಸ್ವಿಂಗ್ಲ್, ಪ್ರಕಟನೆ 7:15ರ ಮೇಲೆ ಆಧಾರಿತವಾದ, “ನಿಮ್ಮ ಪವಿತ್ರ ಸೇವೆಯನ್ನು ಯೆಹೋವನಿಗೆ ಸಲ್ಲಿಸುತ್ತ ಹೋಗಿರಿ,” ಎಂಬ ವಿಷಯದ ಕುರಿತು ಮಾತಾಡಿದರು. ಯೆಹೋವನು ತಾನೇ ಸಂತೋಷವುಳ್ಳ ದೇವರಾಗಿರುವುದರಿಂದ, ಆತನನ್ನು ಸೇವಿಸುತ್ತ ಮುಂದುವರಿಯುವುದೇ ಒಬ್ಬನನ್ನು ಸಂತುಷ್ಟನನ್ನಾಗಿ ಮಾಡುತ್ತದೆ. (1 ತಿಮೊಥೆಯ 1:11) ಈ ಹರ್ಷಕರ ಸೇವೆಯ ಫಲಿತಾಂಶವಾಗಿ, ಭೂಮಿಯ ಸಕಲ ಭಾಗಗಳಿಂದ ಬಂದಿರುವ ವ್ಯಕ್ತಿಗಳ ಮಹಾ ಸಮೂಹವೊಂದು ಆತನನ್ನು ಆರಾಧಿಸಲಿಕ್ಕಾಗಿ ಕೂಡಿಬಂದಿದೆ. ಅನೇಕ ವರ್ಷಗಳಿಂದ, ಗಿಲ್ಯಡ್ ಸ್ಕೂಲ್ನಲ್ಲಿ ತರಬೇತುಹೊಂದಿರುವವರಿಗೆ ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದಿರುವ ಅನೇಕರಿಗೆ ಸಹಾಯಮಾಡುವುದರಲ್ಲಿ ಒಂದು ಪಾಲಿತ್ತು. ಆದಕಾರಣ, ಹೆಚ್ಚುತ್ತಿರುವ ಮಹಾ ಸಮೂಹಕ್ಕೆ ಹೆಚ್ಚು ಸದಸ್ಯರನ್ನು ಕೂಡಿಸಲಿಕ್ಕಾಗಿ ಈಗ ಕಳುಹಿಸಲ್ಪಡುತ್ತಿರುವವರನ್ನು ಯೆಹೋವನು ಆಶೀರ್ವದಿಸುತ್ತ ಮುಂದುವರಿಯುವನೆಂದು ನಂಬಲು ಸಕಲ ಸಕಾರಣಗಳೂ ನಮಗಿವೆ.
ಡ್ಯಾನಿಯೆಲ್ ಸಿಡ್ಲಿಕ್—ಇವರೂ ಆಡಳಿತ ಮಂಡಳಿಯ ಸದಸ್ಯರು—ಎತ್ತಿಹೇಳಿದ ಮುಖ್ಯ ವಿಷಯವು, “ಯೆಹೋವನ ಆನಂದವನ್ನು ಪ್ರತಿಬಿಂಬಿಸುವುದು” ಎಂದಾಗಿತ್ತು. ದೇವರ ಸೇವಕರಲ್ಲಿ ಸಕಲರಿಗೂ—ಮಿಷನೆರಿಗಳು ಸೇರಿ—ನಿತ್ಯಜೀವದ ದಾರಿಯನ್ನು ಮತ್ತು ಜೀವದಿಂದ ಈಗ ಅತ್ಯುತ್ತಮವಾದುದನ್ನು ಪಡೆದುಕೊಳ್ಳುವ ದಾರಿಯನ್ನು ಜನರಿಗೆ ಕಲಿಸುವ ಸುಯೋಗವಿದೆ. ಸಹೋದರ ಸಿಡ್ಲಿಕ್ ಹೇಳಿದ್ದು: “ಕಲಿಸುವಿಕೆಯು ಸ್ವತಃ ಪ್ರತಿಫಲ ದೊರೆಯುವ ವೃತ್ತಿ. ಅದು ಕಲಿಸುವವರ ಹಾಗೂ ಕಲಿಯುವವರ ಮುಖಗಳಲ್ಲಿ ಪ್ರತಿಬಿಂಬಿಸುತ್ತದೆ.” (ಕೀರ್ತನೆ 16:8-11) ಎಸ್ಟೋನಿಯದ ಒಬ್ಬ ಮಿಷನೆರಿ ಹೀಗೆಂದುದನ್ನು ಅವರು ಉಲ್ಲೇಖಿಸಿದರು: “ಭೂಮುಖದಲ್ಲಿರುವ ಅತ್ಯಂತ ಮಹಾ ಸಂದೇಶ ನಮ್ಮಲ್ಲಿದೆ ಮತ್ತು ಇದನ್ನು ತೋರಿಸುವುದು ನಮ್ಮ ಮುಖವೇ.” ನಮ್ಮ ಮುಖಭಾವವು ಅನೇಕ ದ್ವಾರಗಳನ್ನು ತೆರೆದು ಆಸಕ್ತಿಯನ್ನು ಎಬ್ಬಿಸಬಹುದು. ಯೆಹೋವನ ಸೇವಕರನ್ನು ಸಂತೋಷಿತರನ್ನಾಗಿ ಮಾಡುವುದು ಏನೆಂದು ಜನರು ತಿಳಿಯಬಯಸುತ್ತಾರೆ. “ಆದುದರಿಂದ ನಿಮ್ಮ ಮುಖಕ್ಕೆ ಗಮನ ಕೊಡಿರಿ,” ಎಂದು ಸಹೋದರ ಸಿಡ್ಲಿಕ್ ಸಲಹೆಕೊಟ್ಟರು. “ಸಂತೋಷಿಗಳಾದ ಜನರನ್ನು ನೋಡಿ ಜನರು ಆನಂದಿಸುತ್ತಾರೆ.”
1949ರಲ್ಲಿ 12ನೆಯ ಕ್ಲಾಸ್ನಿಂದ ಗಿಲ್ಯಡ್ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವುದರಲ್ಲಿ ಭಾಗಿಯಾಗಿದ್ದ ಯುಲೀಸಸ್ ಗ್ಲಾಸ್, ಸಭಿಕರನ್ನು ಉದ್ದೇಶಿಸಿ, “ತಾಳ್ಮೆಯಿಂದ ನಿಮ್ಮ ಪ್ರಾಣಗಳನ್ನು ಕಾಪಾಡಿಕೊಳ್ಳಿರಿ” ಎಂಬ ವಿಷಯದ ಕುರಿತು ಮಾತಾಡಿದರು. ತಾಳ್ಮೆಯೆಂದರೇನು? ಯಾವುದಕ್ಕಾದರೂ ಶಾಂತಭಾವದಿಂದ ಕಾದುಕೊಂಡಿರುವ, ಉದ್ರೇಕಿಸಲ್ಪಟ್ಟಾಗ ಅಥವಾ ಪ್ರಯಾಸದ ಸಮಯದಲ್ಲಿ ಸಹಿಷ್ಣುತೆಯನ್ನು ಪ್ರದರ್ಶಿಸುತ್ತಿರುವ ವಿಚಾರವನ್ನು ಅದು ವ್ಯಕ್ತಪಡಿಸುತ್ತದೆ. ತಾಳ್ಮೆಯುಳ್ಳ ವ್ಯಕ್ತಿ ಸಮಚಿತ್ತನಾಗಿರುತ್ತಾನೆ; ಅಸಹನೆಯುಳ್ಳ ವ್ಯಕ್ತಿ ದುಡುಕುವವನೂ ಸಿಟ್ಟಿಗೇಳುವವನೂ ಆಗುತ್ತಾನೆ. “ತಾಳ್ಮೆಯು ಬಲಹೀನತೆಯನ್ನು ಅಥವಾ ಅನಿರ್ಧಾರವನ್ನು ಸೂಚಿಸುತ್ತದೆಂದು ಅನೇಕರು ಯೋಚಿಸುತ್ತಾರೆ,” ಎಂದು ಸಹೋದರ ಗ್ಲಾಸ್ ಅವಲೋಕಿಸಿದರು. ಆದರೆ “ಯೆಹೋವನಿಗೋ ಅದು ಶಕ್ತಿ ಮತ್ತು ಸಂಕಲ್ಪದ ಲಾಂಛನವುಳ್ಳದ್ದಾಗಿರುತ್ತದೆ.” (ಜ್ಞಾನೋಕ್ತಿ 16:32) ತಾಳ್ಮೆಯು ತೆರುವ ಬಹುಮಾನಗಳೇನು? “ಸಿಟ್ಟಿನ ಒಂದು ಕ್ಷಣದಲ್ಲಿ ತೋರಿಸುವ ತಾಳ್ಮೆಯು, ನಿನ್ನನ್ನು ನೂರು ದಿನಗಳ ಸಂಕಟದಿಂದ ತಪ್ಪಿಸುವುದು,” ಎನ್ನುತ್ತದೆ ಒಂದು ಚೈನೀಸ್ ನಾಣ್ಣುಡಿ. ಸಹೋದರ ಗ್ಲಾಸ್ ಹೇಳಿದ್ದು: “ತಾಳ್ಮೆಯು ಒಬ್ಬನ ವ್ಯಕ್ತಿತ್ವವನ್ನು ಅಧಿಕಗೊಳಿಸುತ್ತದೆ. ಕಾರ್ಯತಃ, ಅದು ಇತರ ಉತ್ತಮ ಗುಣಗಳಿಗೆ ಶಾಶ್ವತತೆಯ ಮೆರುಗೆಣ್ಣೆಯನ್ನು ಬಳಿಯುತ್ತದೆ. ಅದು ನಂಬಿಕೆಯನ್ನು ಅಪೇಕ್ಷಣೀಯವೂ, ಶಾಂತಿಯನ್ನು ದೀರ್ಘ ಬಾಳಿಕೆಯದ್ದೂ ಮತ್ತು ಪ್ರೀತಿಯನ್ನು ನಿಶ್ಚಲವಾಗಿಯೂ ಮಾಡುತ್ತದೆ.”
“ಯೆಹೋವ ದೇವರಿಂದ ಆತನ ಸಂಸ್ಥೆಯ ಮೂಲಕ ನೇಮಕವನ್ನು ಪಡೆಯುವುದು ಒಂದು ಸುಯೋಗ,” ಎಂದರು 11 ವರ್ಷಕಾಲ ಕೆನ್ಯದಲ್ಲಿ ಮಿಷನೆರಿ ಸೇವೆಮಾಡಿ, ಈಗ ಗಿಲ್ಯಡ್ ಶಿಕ್ಷಕರಾಗಿರುವ ಮಾರ್ಕ್ ನೂಮ್ಯಾರ್. “ನಿಮಗೆ ನಂಬಿಕೆಯಿದ್ದ ಹೊರತು, ನೀವು ದೀರ್ಘಾವಧಿಯವರಲ್ಲ,” ಎಂಬ ವಿಷಯವನ್ನು ವಿಕಸಿಸಿದಾಗ, ಸಹೋದರ ನೂಮ್ಯಾರ್, ಯೆಹೂದದ ಆಹಾಜ ರಾಜನ ಮಾದರಿಗೆ ಗಮನ ಸೆಳೆದರು. ಆ ಅರಸನಿಗೆ ಕೊಡಲ್ಪಟ್ಟ ನೇಮಕದಲ್ಲಿ ಯೆಶಾಯನು ಯೆಹೋವನ ಬೆಂಬಲದ ಆಶ್ವಾಸನೆ ಕೊಟ್ಟರೂ, ಆಹಾಜನು ಆತನಲ್ಲಿ ಭರವಸೆಯಿಡುವುದರಲ್ಲಿ ತಪ್ಪಿಹೋದನು. (ಯೆಶಾಯ 7:2-9) ಸಹೋದರ ನೂಮ್ಯಾರ್ ಆ ಬಳಿಕ ತೋರಿಸಿಕೊಟ್ಟದ್ದೇನಂದರೆ, ಮಿಷನೆರಿಗಳಿಗೆ—ಹೌದು ನಮ್ಮೆಲ್ಲರಿಗೂ—ನಾವು ನಮ್ಮ ದೇವಪ್ರಭುತ್ವಾತ್ಮಕ ನೇಮಕಗಳಲ್ಲಿ ದೀರ್ಘಕಾಲ ಇರುವರೆ, ಯೆಹೋವನಲ್ಲಿ ನಂಬಿಕೆಯು ಅತ್ಯಾವಶ್ಯಕ. ಮಿಷನೆರಿ ನೇಮಕದ ವಿಶಿಷ್ಟ ಪಂಥಾಹ್ವಾನಗಳು, ಬಲವಾದ ನಂಬಿಕೆಯನ್ನು ಕೇಳಿಕೊಳ್ಳುತ್ತವೆ. “ಈ ವಿಷಯಗಳ ವ್ಯವಸ್ಥೆಯಲ್ಲಿ ಪರಿಪೂರ್ಣವಾದ ಪರಿಸ್ಥಿತಿ ಎಂಬುದೇ ಇಲ್ಲವೆಂಬುದನ್ನು ಸದಾ ಮನಸ್ಸಿನಲ್ಲಿಡಿರಿ,” ಎಂದರು ಸಹೋದರ ನೂಮ್ಯಾರ್.
ಆಸಕ್ತಿಕರವಾದ ಚಟುವಟಿಕೆಯನ್ನು ಪ್ರೋತ್ಸಾಹಿಸುವ ಅನುಭವಗಳು
ಗಿಲ್ಯಡ್ ತರಬೇತಿನ ಅವಧಿಯಲ್ಲಿ, ವಿದ್ಯಾರ್ಥಿಗಳು ಪ್ರತಿ ವಾರಾಂತ್ಯದಲ್ಲಿ ಸಾರ್ವಜನಿಕ ಶುಶ್ರೂಷೆಯಲ್ಲಿ ಸಮಯವನ್ನು ಕಳೆದರು. ಇದು ಅವರ ಮಿಷನೆರಿ ನೇಮಕಗಳಲ್ಲಿಯೂ ಅವರ ಮುಖ್ಯ ಚಿಂತೆಯಾಗಿರುವುದು. ಗಿಲ್ಯಡ್ ವ್ಯಾಸಂಗ ವಿಭಾಗದ ಸದಸ್ಯರಾದ, ವಾಲೆಸ್ ಲಿವರ್ಯಾನ್ಸ್, ತಮ್ಮ ಅನುಭವಗಳನ್ನು ಹೇಳಿದ 15 ಮಂದಿ ವಿದ್ಯಾರ್ಥಿಗಳನ್ನು ಇಂಟರ್ವ್ಯೂ ಮಾಡಿದರು. ಸರ್ವಿಸ್ ಡಿಪಾರ್ಟ್ಮೆಂಟ್ ಕಮಿಟಿಯ ಲೀಆನ್ ವೀವರ್ ಮತ್ತು ಬೆತೆಲ್ ಆಪರೇಷನ್ಸ್ ಕಮಿಟಿಯ ಲಾನ್ ಷಿಲಿಂಗ್ ಆ ಬಳಿಕ ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕದ ಬ್ರಾಂಚ್ ಕಮಿಟಿ ಸದಸ್ಯರನ್ನು ಇಂಟರ್ವ್ಯೂ ಮಾಡಿದರು. ಅವರು ಮಿಷನೆರಿ ಕ್ಷೇತ್ರದ ಅನುಭವಗಳನ್ನು ಕೊಟ್ಟದ್ದಲ್ಲದೆ ಪದವಿಪಡೆಯುತ್ತಿದ್ದ ಮಿಷನೆರಿಗಳಿಗಾಗಿ ಅವರಲ್ಲಿ ಕೆಲವು ಉತ್ತಮ ಸಲಹೆಗಳಿದ್ದವು. ಸೀಎರ ಲೀಯೋನ್ನಲ್ಲಿ, 1995ರ ಸೇವಾ ವರುಷದಲ್ಲಿ ದೀಕ್ಷಾಸ್ನಾನವಾದವರ ಪೈಕಿ 90 ಪ್ರತಿಶತ, ಮಿಷನೆರಿಗಳಿಂದ ಸಹಾಯಿಸಲ್ಪಟ್ಟಿದ್ದರೆಂದು ತೋರಿಸಿಕೊಡಲಾಯಿತು. ಆಸಕ್ತಿಯ ಚಟುವಟಿಕೆಯ ಎಷ್ಟು ಉತ್ತಮ ದಾಖಲೆ!
ಕೊನೆಯದಾಗಿ, ಸೊಸೈಟಿಯ ಅಧ್ಯಕ್ಷರಾದ ಮಿಲ್ಟನ್ ಹೆನ್ಶೆಲ್, 2,734 ಜನರಿದ್ದ ಸಭೆಗೆ, “ಯೆಹೋವನ ದೃಶ್ಯ ಸಂಸ್ಥೆಯು ಅದ್ವಿತೀಯ,” ಎಂಬ ವಿಷಯದ ಕುರಿತು ಮಾತನಾಡಿದರು. ದೇವರ ಸಂಸ್ಥೆಯನ್ನು ಯಾವುದು ಅತುಲ್ಯವಾಗಿಸುತ್ತದೆ? ಅದರ ಗಾತ್ರವಲ್ಲ, ಶಕ್ತಿಯೂ ಅಲ್ಲ. ದೇವರ ನೀತಿಯ ಕಟ್ಟಳೆಗಳು ಮತ್ತು ನ್ಯಾಯವಿಧಿಗಳಿಂದ ಅದು ನಡೆಸಲ್ಪಡುವ ನಿಜತ್ವವೇ. ಪೂರ್ವಕಾಲದಲ್ಲಿ ಯೆಹೋವನ ಜನರಾದ ಇಸ್ರಾಯೇಲ್ ಜನಾಂಗಕ್ಕೆ ದೈವೋಕ್ತಿಗಳು ಒಪ್ಪಿಸಲ್ಪಟ್ಟಿದ್ದವು ಮತ್ತು ಇದು ಆ ಜನಾಂಗವನ್ನು ಅದ್ವಿತೀಯವಾದುದಾಗಿ ಮಾಡಿತು. (ರೋಮಾಪುರ 3:1, 2) ಇಂದು ಯೆಹೋವನ ಸಂಸ್ಥೆಯು ಯೇಸು ಕ್ರಿಸ್ತನ ಮಾರ್ಗದರ್ಶನೆಯಲ್ಲಿ ಕಾರ್ಯನಡೆಸುತ್ತಿರುವಾಗ ಐಕ್ಯವಾಗಿದೆ. (ಮತ್ತಾಯ 28:19, 20) ಅದು ಏಳಿಗೆ ಹೊಂದುತ್ತಿದೆ, ಬೆಳೆಯುತ್ತಿದೆ. ಪ್ರಾಮುಖ್ಯ ನಿರ್ಣಯಗಳನ್ನು ಮಾಡುವ ಮೊದಲು, ದೇವರ ವಾಕ್ಯವಾದ ಬೈಬಲನ್ನು ವಿಚಾರಿಸುವ ಆಡಳಿತ ಮಂಡಳಿಯಿರುವ ಇನ್ನೊಂದು ಸಂಸ್ಥೆಯು ಭೂಮಿಯಲ್ಲಿದೆಯೊ? ಈ ರೀತಿಯಲ್ಲಿ ಮತ್ತು ಇನ್ನಿತರ ರೀತಿಗಳಲ್ಲಿ ಯೆಹೋವನ ದೃಶ್ಯ ಸಂಸ್ಥೆಯು ನಿಜವಾಗಿಯೂ ಅದ್ವಿತೀಯವಾಗಿದೆ.
ಪದವಿ ಪತ್ರಗಳ ನೀಡಿಕೆ ಮತ್ತು ವಿಶೇಷ ತರಬೇತಿಗಾಗಿ ಗಣ್ಯತೆಯನ್ನು ವ್ಯಕ್ತಪಡಿಸಿದ ಕ್ಲಾಸಿನ ಒಂದು ಪತ್ರದ ವಾಚನದಿಂದ, ಈ ಆನಂದದಾಯಕ ಕಾರ್ಯಕ್ರಮವು ಮುಕ್ತಾಯಗೊಂಡಿತು.
[ಪುಟ 22 ರಲ್ಲಿರುವ ಚೌಕ]
ಕ್ಲಾಸಿನ ಸಂಖ್ಯಾಸಂಗ್ರಹಣಗಳು
ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 9
ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 12
ವಿದ್ಯಾರ್ಥಿಗಳ ಸಂಖ್ಯೆ: 48
ಸರಾಸರಿ ಪ್ರಾಯ: 31.7
ಸತ್ಯದಲ್ಲಿ ಸರಾಸರಿ ವರ್ಷಗಳು: 13.8
ಪೂರ್ಣ-ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 9.8
[ಪುಟ 23 ರಲ್ಲಿರುವ ಚಿತ್ರ]
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 101ನೆಯ ಪದವಿಪಡೆದುಕೊಳ್ಳುತ್ತಿರುವ ಕ್ಲಾಸ್
ಕೆಳಗಣ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು, ಪ್ರತಿ ಸಾಲಿನಲ್ಲಿ ಹೆಸರುಗಳು ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ.
(1) ಸ್ವಿಂಟ್, ಎಚ್.; ಸಸಿಂಸ್ಕಿ, ಎ.; ಹೈಫೀಲ್ಡ್, ಎಲ್.; ಮೇರ್ಕಾಡೊ, ಎಸ್.; ಡೀಲ್, ಎ.; ಚಾವಸ್, ವಿ.; ಸ್ಮಿತ್, ಜೆ.; ಸಲೀನ್ಯಸ್, ಎಸ್. (2) ಕುರ್ಟ್ಸ್, ಡಿ.; ಕ್ಲಾರ್ಕ್, ಸಿ.; ಲೀಸ್ಬಾರ್ನ್, ಜೆ.; ಮಾರ್ಟನ್ಸನ್, ಡಬ್ಲ್ಯೂ.; ಬ್ರಾಮಲಿ, ಎ.; ಟಯಿಕ, ಎಲ್.; ಮಾರ್ಟನ್, ಎ.; ಸ್ಮಿತ್, ಡಿ. (3) ಸಸಿಂಸ್ಕಿ, ಡಿ.; ಬ್ಯೆರ್ಗಾರ್, ಎಲ್.; ಗರಾಫಲೊ, ಬಿ.; ಕ್ಯಾಲ್ಡ್ಯಾಲ್, ಎಲ್.; ಚಾವಸ್, ಇ.; ಫ್ರೋಡಿಂಗ್, ಎಸ್.; ಕಾನ್, ಆರ್.; ಸಲೀನ್ಯಸ್, ಆರ್. (4) ಸ್ವಿಂಟ್, ಬಿ.; ಬ್ಯೆರ್ಗಾರ್, ಎಮ್.; ಗರಾಫಲೊ, ಪಿ.; ಹಾಮ್ಬ್ಲಾಡ್, ಎಲ್.; ಕೈಸರ್, ಎಮ್.; ಫ್ರೋಡಿಂಗ್, ಟಿ.; ಪಾಲ್ಫ್ರೀಮನ್, ಜೆ.; ಪಾಲ್ಫ್ರೀಮನ್, ಡಿ. (5) ಮಿಂಗ್ವೇಸ್, ಎಲ್.; ಲೀಸ್ಬಾರ್ನ್, ಎಮ್.; ಮೇರ್ಕಾಡೊ, ಎಮ್.; ಕುರ್ಟ್ಸ್, ಎಮ್.; ಡೀಲ್, ಏಚ್.; ಟಯಿಕ, ಜೆ.; ಕ್ಲಾರ್ಕ್, ಎಸ್.; ಕಾನ್, ಎ. (6) ಮಿಂಗ್ವೇಸ್, ಎಫ್.; ಮಾರ್ಟನ್, ಬಿ.; ಹೈಫೀಲ್ಡ್, ಎಲ್.; ಹಾಮ್ಬ್ಲಾಡ್, ಬಿ.; ಬ್ರಾಮಲಿ, ಕೆ.; ಕ್ಯಾಲ್ಡ್ಯಾಲ್, ಏಚ್.; ಮಾರ್ಟನ್ಸನ್, ಪಿ.; ಕೈಸರ್, ಆರ್.