“ಯೆಹೋವನ ಮಂದಿರಕ್ಕೆ ಹೋಗೋಣ, ಬಾ”
1 “ಯೆಹೋವನ ಮಂದಿರಕ್ಕೆ ಹೋಗೋಣ, ಬಾ” ಎಂಬ ಅಮಂತ್ರಣಕ್ಕೆ ದಾವೀದನು ಉತ್ಸುಕತೆಯಿಂದ ಪ್ರತಿಕ್ರಿಯಿಸಿದನು. (ಕೀರ್ತ. 122:1) ದೇವಾಲಯದಿಂದ ಪ್ರತಿನಿಧಿಸಲ್ಪಟ್ಟ ಯೆಹೋವನ “ಮಂದಿರ,” ನಿಜ ದೇವರನ್ನು ಆರಾಧಿಸಲು ಬಯಸುವವರೆಲ್ಲರೂ ಒಟ್ಟುಗೂಡುವ ಸ್ಥಳವಾಗಿತ್ತು. ಅದು ಭದ್ರತೆ ಮತ್ತು ಶಾಂತಿಯ ಒಂದು ಆಶ್ರಯ ಸ್ಥಾನವಾಗಿತ್ತು. ಇಂದು, ಲೋಕವ್ಯಾಪಕ ಕ್ರೈಸ್ತ ಸಭೆಯು ದೇವರ “ಮನೆ,” “ಸತ್ಯಕ್ಕೆ ಸ್ತಂಭವೂ ಆಧಾರವೂ” ಆಗಿದೆ. (1 ತಿಮೊ. 3:15) ಈ ಸಂಪರ್ಕಮಾಧ್ಯಮದ ಮೂಲಕ ರಕ್ಷಣೆಯ ಎಲ್ಲಾ ಒದಗಿಸುವಿಕೆಗಳು ದೊರಕುವಂತೆ ಮಾಡಲಾಗಿದೆ. ಆ ಕಾರಣದಿಂದ, ದೇವರ ರಾಜ್ಯಾಳಿಕೆಯ ಕೆಳಗೆ ವಾಗ್ದಾನಿತ ಆಶೀರ್ವಾದಗಳಲ್ಲಿ ಆನಂದಿಸಲು ಬಯಸುವುದಾದರೆ, “ಸಕಲದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರ” ತಕ್ಕದ್ದು.—ಯೆಶಾ. 2:2.
2 ಈ “ಮಂದಿರ”ವು 229 ದೇಶಗಳಲ್ಲಿರುವ 69,000 ಕ್ಕಿಂತಲೂ ಅಧಿಕ ಸಭೆಗಳನ್ನು ಒಳಗೊಂಡಿದೆ. ನಾಲ್ವತ್ತು ಲಕ್ಷಕ್ಕಿಂತಲೂ ಅಧಿಕ ಉತ್ಸಾಹೀ ಕಾರ್ಮಿಕರು ಈ ಆಮಂತ್ರಣವನ್ನು ನೀಡುವುದರೊಂದಿಗೆ, ಲೋಕದ ಸುತ್ತಲೂ ಇರುವ ರಾಜ್ಯ ಸಭಾಗೃಹಗಳ ದ್ವಾರಗಳು ತೆರೆದಿಡಲ್ಪಟ್ಟಿವೆ: “ಬಾ . . . ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.” (ಪ್ರಕ. 22:17) ಅನೇಕರು ಈ ಸಂದೇಶವನ್ನು ಕೇಳಿರುತ್ತಾರೆ ಮತ್ತು ಮೆಚ್ಚುಗೆಯಿಂದ ಪ್ರತಿಕ್ರಿಯಿಸಿದ್ದಾರೆ. ಇತರರು ಸ್ಪರ್ಶಿಸಲ್ಪಟ್ಟಿದ್ದಾರೆ, ಆದರೆ ಕ್ರೈಸ್ತ ಸಭೆಯೊಂದಿಗೆ ಸಹವಾಸ ಮಾಡುವುದರ ಮೂಲಕ ಯೆಹೋವನ ಮಂದಿರಕ್ಕೆ ಇನ್ನು ಬಂದಿರುವುದಿಲ್ಲ. ಸಭೆಯಲ್ಲಿ ಮಾತ್ರವೇ ಕಂಡುಕೊಳ್ಳಬಹುದಾದ ಒದಗಿಸುವಿಕೆಗಳಿಂದ ತೃಪ್ತಿಗೊಳ್ಳಸಾಧ್ಯವಿರುವ “ಆತ್ಮಿಕ ಅಗತ್ಯತೆ”ಯು ಅಂಥವರಿಗಿದೆ. (ಮತ್ತಾ. 5:3, NW) ಈ ವ್ಯವಸ್ಥೆಯ ಅಂತ್ಯ ವೇಗಗತಿಯಿಂದ ಸಮೀಪಿಸುತ್ತಿರುವ ಕಠಿಣಕಾಲಗಳಲ್ಲಿ ನಾವು ಜೀವಿಸುತ್ತಿದ್ದೇವೆ. ಉದಾಸೀನದ ಯಾ ಒಲವಿಲ್ಲದ ಮನೋಭಾವವು ವಿನಾಶಕಾರಿ ತಡವಾಗಿ ಪರಿಣಮಿಸಬಹುದು. ಆತನ ಸಂಸ್ಥೆಗೆ ನಿಕಟವಾಗಿ ಬರುವುದರಿಂದ, ಜನರು “ದೇವರ ಬಳಿಗೆ ಬರು”ವುದು ಅತಿ ತುರ್ತಿನದ್ದಾಗಿದೆ. (ಯಾಕೋ. 4:8, NW) ಅವರಿಗೆ ನಾವು ಹೇಗೆ ಸಹಾಯಿಸಬಲ್ಲೆವು?
3 ಸಂಸ್ಥೆಯೆಡೆಗೆ ಆಸಕ್ತಿಯನ್ನು ನಿರ್ದೇಶಿಸಿರಿ: ಆಸಕ್ತ ವ್ಯಕ್ತಿಗಳೊಂದಿಗೆ ನಮ್ಮ ಮೊದಲ ಸಂಪರ್ಕದಿಂದ, ಸಂಸ್ಥೆಯೆಡೆಗೆ ಅವರ ಗಮನವನ್ನು ನಾವು ಮಾರ್ಗದರ್ಶಿಸತಕ್ಕದ್ದು. ಶಾಸ್ತ್ರೀಯ ವಚನಗಳನ್ನು ಹುಡುಕಲು ಮತ್ತು ಮೂಲಭೂತ ಬೋಧನೆಗಳನ್ನು ವೈಯಕ್ತಿಕವಾಗಿ ವಿವರಿಸಲು ನಾವು ಶಕ್ಯರಾಗಿರಬಹುದಾದರೂ, ಅಂಥ ಜ್ಞಾನದ ಮೂಲವು ನಾವಲ್ಲ. ನಾವು ಕಲಿತಿರುವ ಪ್ರತಿಯೊಂದು ವಿಷಯವು “ಹೊತ್ತುಹೊತ್ತಿಗೆ ಆಹಾರವನ್ನು ಒದಗಿಸುವ ಆಳಿನ” ಮೂಲಕ ನಿರ್ದೇಶಿಸಲ್ಪಟ್ಟು, ಸಂಸ್ಥೆಯಿಂದ ಬಂದಿರುತ್ತದೆ. (ಮತ್ತಾ. 24:45-47) ಆರಂಭದಿಂದಲೇ, ಕೇವಲ ನಾವು ಯಾ ಸ್ಥಳೀಕ ಸಭೆಯು ಮಾತ್ರ ಶುದ್ಧಾರಾಧನೆಯೊಂದಿಗೆ ಒಳಗೂಡಿರುವುದಕ್ಕಿಂತಲೂ ಹೆಚ್ಚು ಇದೆ ಎಂದು ಹೊಸಬರು ಅರಿಯುವ ಅಗತ್ಯವಿದೆ; ಯೆಹೋವನ ಮಾರ್ಗದರ್ಶನದ ಕೆಳಗೆ ಒಂದು ವ್ಯವಸ್ಥಿತ, ದೇವಪ್ರಭುತ್ವ, ಲೋಕವ್ಯಾಪಕ ಸಂಸ್ಥೆಯು ಇದೆ.
4 ನಾವು ಪಡೆಯುವ ನಿರ್ದೇಶನವು, ನಮ್ಮನ್ನು ಮಾರ್ಗದರ್ಶಿಸುವೆನು ಮತ್ತು ಬೋಧಿಸುವೆನು ಎಂದು ವಾಗ್ದಾನಿಸಿದ ಯೆಹೋವನಿಂದ ಉಗಮವಾಗುತ್ತದೆ. (ಕೀರ್ತ. 32:8; ಯೆಶಾ. 54:13) ನಮ್ಮ ಸಾಹಿತ್ಯಗಳ ಮೂಲಕ ಈ ಬೋಧನೆಯು ಪ್ರಧಾನವಾಗಿ ಪ್ರಸರಿಸಲ್ಪಡುತ್ತದೆ. ಜೀವರಕ್ಷಕ ಬೋಧನೆಯ ಮೂಲದೋಪಾದಿ ಪರಿಗಣಿಸುತ್ತಾ, ಸಾಹಿತ್ಯಗಳಿಗೆ ಉಚ್ಚ ಮಾನ್ಯತೆಯನ್ನು ಆಸಕ್ತ ಜನರಲ್ಲಿ ಬೆಳಸಲು ನಾವು ಸಹಾಯ ಮಾಡುವುದಾದರೆ, ಅದನ್ನು ತ್ವರಿತವಾಗಿ ತಳ್ಳಿಬಿಡುವ ಬದಲು, ಅದರ ಸಂದೇಶವನ್ನು ಅವರು ಓದುವ ಮತ್ತು ಅನ್ವಯಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅದಕ್ಕಾಗಿ ಮಾನ್ಯತೆಯನ್ನು ಬೆಳಸುವ ರೀತಿಯಲ್ಲಿ ನಾವು ಯಾವಾಗಲೂ ಈ ಸಾಹಿತ್ಯವನ್ನು ಪರಿಚಯಿಸಬೇಕು ಮತ್ತು ಬಳಸಬೇಕು. ಹೊಸಬರು ಸಂಸ್ಥೆಯನ್ನು ಮೆಚ್ಚುವಂತೆ ಮತ್ತು ಅದರ ಒದಗಿಸುವಿಕೆಗಳ ಮೇಲೆ ಆತುಕೊಳ್ಳುವಂತೆ ಇದು ಕಲಿಸುತ್ತದೆ.
5 ಸಮಾಜದಲ್ಲಿ ಕೇಂದ್ರ ಕೂಟದ ಸ್ಥಳವೊಂದಿದೆ, ಅಲ್ಲಿ ಕ್ರಮವಾಗಿ ಬೋಧನೆಯು ಕೊಡಲ್ಪಡುತ್ತದೆಂದು ಆಸಕ್ತರಿಗೆ ತಿಳಿದಿರಲಿ. ಅವರಿಗೆ ರಾಜ್ಯ ಸಭಾಗೃಹದ ವಿಳಾಸ ಮತ್ತು ಕೂಟದ ಸಮಯಗಳನ್ನು ಕೊಡಿರಿ. ನಮ್ಮ ಕೂಟಗಳ ಮತ್ತು ಗತಕಾಲದಲ್ಲಿ ಅವರು ಹಾಜರಾಗುತ್ತಿದ್ದಿರಬಹುದಾದ ಧಾರ್ಮಿಕ ಒಟ್ಟುಗೂಡುವಿಕೆಗಳ ನಡುವೆ ಇರುವ ವ್ಯತ್ಯಾಸಗಳನ್ನು ವಿವರಿಸಿರಿ. ಪ್ರತಿಯೊಬ್ಬರಿಗೆ ಸುಸ್ವಾಗತವಿದೆ; ಅಲ್ಲಿ ಯಾವುದೇ ವಂತಿಗೆ ವಸೂಲಿ ಇಲ್ಲ ಯಾ ನಿಧಿಗಳಿಗಾಗಿ ವೈಯಕ್ತಿಕವಾಗಿ ಕೇಳಿಕೊಳ್ಳುವಿಕೆ ಇಲ್ಲ. ನೇಮಿತ ಶುಶ್ರೂಷಕರು ಕಾರ್ಯಕ್ರಮಗಳನ್ನು ನಿರ್ವಹಿಸುವುದಾದರೂ, ಕಾರ್ಯಕ್ರಮದ ಭಾಗಗಳಲ್ಲಿ ಹೇಳಿಕೆ ನೀಡುವುದರಿಂದ ಮತ್ತು ಪಾಲು ತೆಗೆದುಕೊಳ್ಳುವದರಿಂದ ಎಲ್ಲರಿಗೆ ಸಹಭಾಗಿಗಳಾಗುವ ಅವಕಾಶವಿರುತ್ತದೆ. ಕುಟುಂಬಗಳಿಗೆ ಸ್ವಾಗತವಿದೆ; ನಮ್ಮ ಬೈಬಲ್ ಚರ್ಚೆಗಳಲ್ಲಿ ಮಕ್ಕಳು ಸೇರ್ಪಡೆಯಾಗುತ್ತಾರೆ. ನಮ್ಮ ಶುಶ್ರೂಷಕರು ವಿಶೇಷ ಉಡುಪುಗಳನ್ನು ಯಾ ಬಟ್ಟೆಗೆಳನ್ನು ತೊಡುವುದಿಲ್ಲ. ರಾಜ್ಯ ಸಭಾಗೃಹವು ಸುಸಂಸ್ಕೃತವಾಗಿ ಶೃಂಗರಿಸಲ್ಪಟ್ಟಿರುತ್ತದೆ ಮತ್ತು ಮೇಣದ ಬತ್ತಿಗಳು, ಪ್ರತಿಮೆಗಳು ಯಾ ಮೂರ್ತಿಗಳು ಅಲ್ಲಿಲ್ಲ. ಅಲ್ಲಿ ಹಾಜರಾಗುವವರು ಪ್ರಧಾನವಾಗಿ ಸ್ಥಳೀಕ ನೆರೆಹೊರೆಯ ನಿವಾಸಿಗಳು ಆಗಿರುತ್ತಾರೆ.
6 ಬೈಬಲ್ ಅಧ್ಯಯನಗಳಲ್ಲಿ ಪ್ರಗತಿಪರವಾಗಿ ಆಸಕ್ತಿಯನ್ನು ಮಾರ್ಗದರ್ಶಿಸಿರಿ: ದೇವರ ವಾಕ್ಯವಾದ ಸತ್ಯವನ್ನು ಕಲಿಸುವುದು ಬೈಬಲ್ ಅಧ್ಯಯನವೊಂದರ ಮೂಲ ಉದ್ದೇಶವಾಗಿರುತ್ತದೆ. ವಿದ್ಯಾರ್ಥಿಗಳಲ್ಲಿ ಯೆಹೋವನ ಸಂಸ್ಥೆಗಾಗಿ ಗಣ್ಯತೆಯನ್ನು ಕೂಡ ಅದು ಬೆಳಸತಕ್ಕದ್ದು ಮತ್ತು ಅದರ ಭಾಗವಾಗುವುದರ ಅತ್ಯಾವಶ್ಯಕತೆಯ ಅರಿವನ್ನು ಅವರಿಗೆ ಉಂಟುಮಾಡಬೇಕು. ಮೊದಲನೆಯ ಶತಕದಲ್ಲಿ ಯೇಸುವಿನಿಂದ ಮತ್ತು ಅವನ ಶಿಷ್ಯರಿಂದ ಮಾಡಲ್ಪಟ್ಟ ಮಹಾ ಕಾರ್ಯವು ಯಥಾರ್ಥ ಜನರನ್ನು ಆಕರ್ಷಿಸಿತು ಮತ್ತು ಒಂದು ಕೇಂದ್ರ ಆಡಳಿತ ಮಂಡಳಿಯ ಕೆಳಗೆ ಕಾರ್ಯಕ್ಕಾಗಿ ಅವರನ್ನು ಒಟ್ಟುಗೂಡಿಸಿತು. ಒಳ್ಳೇ ಪ್ರತಿವರ್ತನೆಯಿರುವ ಸಮುದಾಯಗಳಲ್ಲಿ, ಕ್ರಮದ ತರಬೇತಿ ಮತ್ತು ಬೋಧನೆಯನ್ನು ನೀಡಲು ಸಭೆಗಳು ರಚಿಸಲ್ಪಟ್ಟವು. ಸಹವಾಸ ಮಾಡುತ್ತಿದ್ದವರು ಆತ್ಮಿಕವಾಗಿ ಬಲಗೊಳಿಸಲ್ಪಟ್ಟು, ಇದು ಸಂಕಟದ ಸಮಯಗಳಲ್ಲಿ ತಾಳಿಕೊಳ್ಳಲು ಅವರಿಗೆ ಸಹಾಯ ಮಾಡಿತು. (ಇಬ್ರಿ. 10:24, 25; 1 ಪೇತ್ರ 5:8-10) ನಮ್ಮ ದಿನಗಳಲ್ಲಿ “ಸಮಸ್ತವನ್ನೂ ಕ್ರಿಸ್ತನಲ್ಲಿ ಒಂದಾಗಿ ಕೂಡಿಸಬೇಕೆಂಬದೇ” ಯೆಹೋವನ ಉದ್ದೇಶವಾಗಿದೆ. (ಎಫೆ. 1:9, 10) ಫಲಿತಾಂಶವಾಗಿ, ನಮಗೆ ಒಂದು ಲೋಕವ್ಯಾಪಕ “ಸಹೋದರರ ಸಂಘ” ಇದೆ.—1 ಪೇತ್ರ 2:17, NW.
7 ವಿದ್ಯಾರ್ಥಿಯು ಸಂಸ್ಥೆಯನ್ನು ಗಣ್ಯಮಾಡುವಂತೆ ಮತ್ತು ಅವರ ರಕ್ಷಣೆಗಾಗಿರುವ ಒದಗಿಸುವಿಕೆಗಳ ಸದುಪಯೋಗವನ್ನು ಮಾಡುವಂತೆ, ವಾರದ ಬೈಬಲ್ ಅಭ್ಯಾಸದಲ್ಲಿ ಬೋಧನೆಯು ಸೇರಿರತಕ್ಕದ್ದು. ಪ್ರತಿವಾರ ಸಂಸ್ಥೆಯ ಕುರಿತು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಯಾವುದಾದರೊಂದು ವಿಷಯ ವರ್ಣಿಸಲು ಯಾ ವಿವರಿಸಲು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಿರಿ. ನವಂಬರ 1, 1984ರ ವಾಚ್ಟವರ್ ನಲ್ಲಿ ಕೆಲವು ಸಹಾಯಕಾರಿ ವಿಚಾರಗಳನ್ನು ನೀವು ಕಾಣುವಿರಿ. ಜೆಹೊವಾಸ್ ವಿಟ್ನೆಸಸ್ ಇನ್ ದ ಟ್ವೆಂಟಿಯತ್ ಸೆಂಟ್ಯುರಿ ಮತ್ತು ಜೆಹೊವಾಸ್ ವಿಟ್ನೆಸಸ್—ಯುನೈಟೆಡ್ಲೀ ಡೂಯಿಂಗ್ ಗಾಡ್ಸ್ ವಿಲ್ ವರ್ಲ್ಡ್ವೈಡ್ ಬ್ರೋಷರುಗಳು ಸಂಸ್ಥೆಯ ಬಹುಮುಖಗಳನ್ನು ಮತ್ತು ನಮಗೆ ಅವು ಹೇಗೆ ಪ್ರಯೋಜನದಾಯಕವಾಗಬಲ್ಲವು ಎಂಬುದನ್ನು ಚರ್ಚಿಸುತ್ತವೆ. ಜೆಹೊವಾಸ್ ವಿಟ್ನೆಸೆಸ್—ದ ಆರ್ಗನೈಸೇಷನ್ ಬಿಹೈಂಡ್ ದ ನೇಮ್ [ಯೆಹೋವನ ಸಾಕ್ಷಿಗಳು—ಹೆಸರಿನ ಹಿಂದೆ ಇರುವ ಸಂಸ್ಥೆ] ಎಂಬ ವಿಡಿಯೋವನ್ನು ಬೈಬಲ್ ವಿದ್ಯಾರ್ಥಿಗಳು ವೀಕ್ಷಿಸಲು ಏರ್ಪಡಿಸುವದು, ಏನನ್ನು ಸಾಧಿಸಲಾಗಿದೆಂಬುದನ್ನು ಅವರಾಗಿಯೇ ನೋಡುವಂತೆ ಸಾಧ್ಯಮಾಡುವುದು. ವರ್ಷಪುಸ್ತಕ ದಿಂದ ಆಯ್ದ ವರದಿಗಳು ಮತ್ತು ಅನುಭವಗಳು ನಮ್ಮದೇ ಅಲ್ಲದ ದೇಶಗಳಲ್ಲಿ ಮತ್ತು ಸಂಸ್ಕೃತಿಗಳಲ್ಲಿ ಕಾರ್ಯದ ಯಶಸ್ಸನ್ನು ತೋರಿಸಬಲ್ಲವು. ಇತರ ಪ್ರಕಾಶನಗಳನ್ನು ಸಹ ಬಳಸಬಹುದು. ಸಮಯವು ಗತಿಸಿದಂತೆ, ನಾವು ಮನೆಯಿಂದ ಮನೆಗೆ ಹೋಗುವ ಕಾರಣ, ನಮ್ಮ ಕೂಟಗಳ ಉದ್ದೇಶ, ನಮ್ಮ ಕಾರ್ಯಕ್ಕೆ ಹಣಸಹಾಯ ದೊರಕುವ ವಿಧ, ಮತ್ತು ನಮ್ಮ ಚಟುವಟಿಕೆಯ ಜಗದ್ವ್ಯಾಪಕ ಹರವು ಮುಂತಾದ ಸಂಗತಿಗಳನ್ನು ಪ್ರಗತಿಪರವಾಗಿ ವಿವರಿಸಿರಿ.
8 ಇತರ ಸಾಕ್ಷಿಗಳೊಂದಿಗೆ ಪರಿಚಯಸ್ಥರಾಗುವುದು ಹೊಸಬರ ಮೇಲೆ ಉತ್ತೇಜಕ ಪರಿಣಾಮ ಉಳ್ಳದ್ದಾಗಿದ್ದು, ಸಭೆಯ ಅವರ ಕಲ್ಪನೆಯನ್ನು ವಿಸ್ತಾರಗೊಳಿಸಬಲ್ಲದು. ಅದನ್ನು ಗಮನದಲ್ಲಿಟ್ಟು, ಆಗಿಂದಾಗ್ಗೆ ಇತರ ಪ್ರಚಾರಕರು ಅಧ್ಯಯನದಲ್ಲಿ ಕುಳ್ಳಿರುವಂತೆ ಆಮಂತ್ರಿಸಿರಿ. ನಿಮ್ಮ ಸಭೆಯಲ್ಲಿ ಅಂಥದ್ದೇ ಹಿನ್ನೆಲೆಯುಳ್ಳ ಯಾ ತದ್ರೀತಿಯ ಆಸಕ್ತಿಗಳುಳ್ಳ ಯಾರಾದರೊಬ್ಬರು ನಿಮ್ಮ ವಿದ್ಯಾರ್ಥಿಯ ಹೊರನೋಟದಲ್ಲಿ ಹೊಸ ಆಯಾಮವನ್ನು ಕೂಡಿಸಬಹುದು. ಕೇವಲ ಪರಿಚಯಪಡಿಸಿಕೊಳ್ಳಲು ಪ್ರಾಯಶಃ ಒಬ್ಬ ಹಿರಿಯನು ನಿಮ್ಮೊಂದಿಗೆ ಜತೆಗೂಡಬಹುದು. ಸರ್ಕೀಟ್ ಮೇಲ್ವಿಚಾರಕನು ಯಾ ಅವನ ಹೆಂಡತಿಯು ನಿಮ್ಮ ಅಧ್ಯಯನವನ್ನು ಸಂದರ್ಶಿಸುವಂತೆ ಏರ್ಪಡಿಸುವುದು ಒಂದು ನಿಜ ಆಶೀರ್ವಾದವಾಗಿ ಪರಿಣಮಿಸಬಲ್ಲದು. ಹತ್ತಿರದಲ್ಲಿಯೇ ಸಾಕ್ಷಿಗಳು ಜೀವಿಸುತ್ತಿರುವುದಾದರೆ, ಬೈಬಲ್ ವಿದ್ಯಾರ್ಥಿಗೆ ಅವರ ಪರಿಚಯ ಮಾಡಿಕೊಡಿಸುವುದು ಸಭಾ ಕೂಟಗಳಿಗೆ ವಿದ್ಯಾರ್ಥಿಯು ಹಾಜರಾಗುವಂತೆ ಇನ್ನೊಂದು ಹೆಚ್ಚಿನ ಪ್ರೋತ್ಸಾಹನೆಯನ್ನು ಒದಗಿಸಬಲ್ಲದು.
9 ಕೂಟಗಳಿಗೆ ಬರುವಂತೆ ಹೊಸಬರನ್ನು ಉತ್ತೇಜಿಸಿರಿ: ಕೂಟಗಳಿಗೆ ಹಾಜರಾಗುವುದು ಎಷ್ಟು ಮಹತ್ವದ್ದು ಎಂದು ಹೊಸಬರು ಅರಿತುಕೊಳ್ಳುವ ಜರೂರಿಯಿದೆ. ಅವರ ಆಸಕ್ತಿಯನ್ನು ಪ್ರಚೋದಿಸಲು ಪ್ರಯತ್ನಿಸಿರಿ. ಕಾವಲಿನಬುರುಜು ಅಧ್ಯಯನದಲ್ಲಿ ಆವರಿಸಲ್ಪಡುವ ಲೇಖನಗಳನ್ನು ತೋರಿಸಿರಿ. ಬರಲಿರುವ ಸಾರ್ವಜನಿಕ ಭಾಷಣಗಳ ಮೇಲಿಷ್ವಯಗಳನ್ನು ಹೇಳಿರಿ. ದೇವಪ್ರಭುತ್ವ ಶುಶ್ರೂಷೆ ಶಾಲೆಯಲ್ಲಿ ಮತ್ತು ಸಭಾ ಪುಸ್ತಕ ಅಧ್ಯಯನದಲ್ಲಿ ಆವರಿಸಲ್ಪಡುವ ಸಮಾಚಾರದ ಅತ್ಯುಜ್ಜಲ್ವ ಭಾಗಗಳನ್ನು ವರ್ಣಿಸಿರಿ. ಈ ಕೂಟಗಳಲ್ಲಿ ನೀವೇನು ಕಲಿಯುತ್ತೀರೋ ಅದರ ಕುರಿತು ನಿಮ್ಮ ಸ್ವಂತ ಮನೋಇಂಗಿತಗಳನ್ನು ಮತ್ತು ಹಾಜರಾಗುವ ಆವಶ್ಯಕತೆ ಯಾಕೆಂಬ ನಿಮ್ಮ ಭಾವನೆಯನ್ನು ವ್ಯಕ್ತಪಡಿಸಿರಿ. ನಿಮಗೆ ಸಾಧ್ಯವಿರುವಲ್ಲಿ, ವಾಹನ ಸೌಕರ್ಯ ಒದಗಿಸಿರಿ. ಕೂಟದ ಮುಂಚೆ ಒಂದು ಟೆಲಿಪೋನ್ ಕರೆಯು ಹಾಜರಾಗಲು ಒಂದು ಹೆಚ್ಚಿನ ಪ್ರೋತ್ಸಾಹಕವಾಗಬಹುದು.
10 ಬೈಬಲ್ ವಿದ್ಯಾರ್ಥಿಯೊಬ್ಬನು ಕೂಟವೊಂದಕ್ಕೆ ಬರುವುದಾದರೆ, ಅವನು ಸುಸ್ವಾಗತಿಸಲ್ಪಟ್ಟಿದ್ದಾನೆಂಬ ಭಾವನೆ ಬರುವಂತೆ ಮಾಡಿರಿ. ಹಿರಿಯರುಗಳ ಸಹಿತ ಇತರರಿಗೆ ಅವನನ್ನು ಪರಿಚಯಪಡಿಸಿರಿ. ಅವನು ಸಾರ್ವಜನಿಕ ಭಾಷಣವೊಂದಕ್ಕೆ ಹಾಜರಾಗುವುದಾದರೆ, ಅವನನ್ನು ಭಾಷಣಕರ್ತನೊಡನೆ ಪರಿಚಯ ಪಡಿಸಿರಿ. ರಾಜ್ಯ ಸಭಾಗೃಹದ ಸುತ್ತಲೂ ಅವನನ್ನು ಕರೆದೊಯ್ದು ತೋರಿಸಿರಿ. ಸಾಹಿತ್ಯಗಳ ಮತ್ತು ಪತ್ರಿಕೆಗಳ ಕೌಂಟರುಗಳ, ಕಾಣಿಕೆ ಪೆಟ್ಟಿಗೆಗಳ, ಪುಸ್ತಕ ಸಂಗ್ರಹಾಲಯ, ಮತ್ತು ವರ್ಷವಚನದ ಉದ್ದೇಶವನ್ನು ವಿವರಿಸಿರಿ. ಸಭಾಗೃಹವು ಒಂದು ಆರಾಧನಾ ಮಂದಿರವಾಗಿರುವುದು ಮಾತ್ರವಲ್ಲ, ಸ್ಥಳೀಕವಾಗಿ ಸಂಘಟಿಸಲ್ಪಡುವ ಸಾರುವ ಕಾರ್ಯದ ಕೇಂದ್ರವಾಗಿಯೂ ಇದೆ ಎಂದು ಅವನಿಗೆ ತಿಳಿಯಲಿ.
11 ನಮ್ಮ ಕೂಟಗಳು ನಡಿಸಲ್ಪಡುವ ವಿಧವನ್ನು ವಿವರಿಸಿರಿ. ನಾವು ಉಪಯೋಗಿಸುವ ಪ್ರಕಾಶನಗಳನ್ನು ವಿದ್ಯಾರ್ಥಿಗೆ ತೋರಿಸಿರಿ. ಬೈಬಲು ನಮ್ಮ ಪ್ರಧಾನ ಪಠ್ಯಪುಸ್ತಕವಾಗಿದೆ. ಎಳೆಯ ಮಕ್ಕಳ ಸಹಿತ ಪ್ರತಿಯೊಬ್ಬನೂ ಭಾಗವಹಿಸಬಹುದು. ನಮ್ಮ ಆರಾಧನೆಯಲ್ಲಿ ಉಪಯೋಗಕ್ಕಾಗಿ ನಮ್ಮ ಹಾಡು-ಪುಸ್ತಕದಲ್ಲಿರುವ ಗಾಯನ ಮತ್ತು ಭಾವಗೀತೆಗಳು ಯೆಹೋವನ ಸಾಕ್ಷಿಗಳಿಂದಲೇ ರಚಿಸಲ್ಪಟ್ಟವು ಎಂದು ತಿಳಿಸಿರಿ. ಹಾಜರಾಗುವವರ ವಿವಿಧ ಹಿನ್ನೆಲೆಗಳ ಕಡೆಗೆ ಗಮನ ಸೆಳೆಯಿರಿ. ಮಿತ್ರತ್ವದ ಮತ್ತು ಆದರಾತಿಥ್ಯದ ಆತ್ಮದ ಕುರಿತು ಸಕಾರಾತ್ಮಕ ಹೇಳಿಕೆಗಳನ್ನು ಮಾಡಿರಿ. ಈ ದಯಾಭರಿತ, ಯಥಾರ್ಥ ಆಸಕ್ತಿಯು ಪುನಃ ವಿದ್ಯಾರ್ಥಿಯು ಬರುವಂತೆ ಮಾಡುವ ಬಲವಾದ ವಾಸ್ತವಾಂಶಗಳಲ್ಲೊಂದಾಗಿರಬಹುದು.
12 ಕೆಲವರು ಹಿಂದಕ್ಕೆ ಸರಿಯುವ ಕಾರಣ: ಅನೇಕ ಬಾರಿ, ನೀವು ಎಷ್ಟು ಪ್ರಯತ್ನಿಸಿದರೂ, ಕೆಲವರು ಸಂಸ್ಥೆಯ ಹತ್ತಿರ ಬರುವ ಒಲವಿಲ್ಲದವರಾಗಿರುತ್ತಾರೆ. ಬೇಗನೇ ಬಿಟ್ಟುಕೊಡದಿರ್ರಿ. ಅವರ ಸ್ಥಳದಲ್ಲಿ ಸ್ವತಃ ನಿಮ್ಮನ್ನು ಇಟ್ಟುಕೊಳ್ಳಲು ಪ್ರಯತ್ನಿಸಿರಿ. ಇಷ್ಟರ ತನಕ, ವಿಶೇಷ ಸಂದರ್ಭಗಳ ಹೊರತಾಗಿ ಧಾರ್ಮಿಕ ಸಂಸ್ಕಾರಗಳಿಗೆ ಹಾಜರಾಗುವ ಅಗತ್ಯವನ್ನು ನಿಜವಾಗಿಯೂ ಅವರು ಎಣಿಸದೆ ಇದ್ದಿರಬಹುದು. ಕುಟುಂಬದ ಯಾ ನಿಕಟ ಸ್ನೇಹಿತರು ಅವರನ್ನು ಒತ್ತಡಕ್ಕೆ ಹಾಕುತ್ತಿರಬಹುದು. ಅವಹೇಳನದ ಠೀಕೆಗಳನ್ನು ಮಾಡುವ ನೆರೆಹೊರೆಯವರಿಂದ ಅವರು ಹೆದರಿಸಲ್ಪಟ್ಟಿರುವ ಭಾವನೆಯುಳ್ಳವರಾಗಿರಬಹುದು. ಮತ್ತು, ನಿಶ್ಚಯವಾಗಿಯೂ ಸಾಮಾಜಿಕ ಮತ್ತು ಮನೋರಂಜನಾ ಬೆನ್ನಟ್ಟುವಿಕೆಗಳೊಂದಿಗೆ ಜತೆಯಾಗಿರುವ ವಿವಿಧ ವಿಕರ್ಷಣೆಗಳಿಗೆ ಅವರು ಮಣಿದಿರಲೂ ಬಹುದು. ಇವುಗಳು ದುಸ್ತರವಾದ ಅಡತ್ಡಡೆಗಳು ಎಂಬಂತೆ ಅವರು ವೀಕ್ಷಿಸಬಹುದು; ಯೋಗ್ಯ ಯಥಾದೃಷ್ಟಿಯಲ್ಲಿ ಸಂಗತಿಗಳನ್ನು ನೋಡಲು ಮತ್ತು “ಹೆಚ್ಚು ಪ್ರಾಮುಖ್ಯ ಕಾರ್ಯಗಳನ್ನು ಖಚಿತಮಾಡಿಕೊಳ್ಳಲು” ಅವರಿಗೆ ನೀವು ಸಹಾಯ ಮಾಡುವ ಅಗತ್ಯವಿದೆ.—ಫಿಲಿ. 1:10, NW.
13 ತಾಳಿಕೊಳ್ಳಲು ಶಾಸ್ತ್ರೀಯ ಕಾರಣಗಳನ್ನು ಕೊಡಿರಿ. ಒಟ್ಟಿಗೆ ನಮ್ಮ ಸಹವಾಸದಿಂದ ನಾವು ಪಡೆಯುವ ಪ್ರೋತ್ಸಾಹ ಮತ್ತು ಆತ್ಮಿಕ ಬಲವರ್ಧನ ನಮ್ಮೆಲ್ಲರಿಗೆ ಜರೂರಾಗಿ ಬೇಕಾಗಿದೆ ಎಂಬುದನ್ನು ಒತ್ತಿಹೇಳಿರಿ. (ರೋಮಾ. 1:11, 12) ಕುಟುಂಬದ ವಿರೋಧವು ಹಿಂದಕ್ಕೆ ಸರಿಯಲು ಸಕಾರಣವಲ್ಲವೆಂದು ಯೇಸುವು ಸೃಷ್ಟಗೊಳಿಸಿದನು. (ಮತ್ತಾ. 10:34-39) ಯೇಸುವಿನ ಶಿಷ್ಯರಾಗಿ ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ನಾವು ಲಜ್ಜೆಪಡಬಾರದು ಎಂದು ಪೌಲನು ನಮಗೆ ಒತ್ತಾಯಿಸಿದನು. (2 ತಿಮೊ. 1:8, 12-14) ವೈಯಕ್ತಿಕ ಬೆನ್ನಟ್ಟುವಿಕೆಗಳನ್ನು ಮತ್ತು ಅಪಕರ್ಷಣೆಗಳನ್ನು ನಿಯಂತ್ರಿಸಲೇ ಬೇಕು; ಇಲ್ಲದಿದ್ದಲ್ಲ, ಅವು ಪಾಶವಾಗುತ್ತವೆ. (ಲೂಕ 21:34-36) ಯೆಹೋವನ ಆಶೀರ್ವಾದಗಳನ್ನು ಗಳಿಸುವವರೆಲ್ಲರೂ ಪೂರ್ಣಾತ್ಮದವರಾಗಿರಬೇಕು, ಎಂದಿಗೂ ಅರೆಹೃದಯದವರಲ್ಲ. (ಕೊಲೊ. 3:23, 24) ಅಂತಹ ಬೈಬಲ್ ಸೂತ್ರಗಳಿಗೆ ಗಣ್ಯತೆಯನ್ನು ಮೂಡಿಸುವುದು, ಆತ್ಮಿಕವಾಗಿ ಪ್ರಗತಿಯನ್ನು ಮಾಡಲು ಅವರಿಗೆ ದಾರಿಯನ್ನು ತೆರೆಯಬಹುದು.
14 ದ್ವಾರಗಳು ತೆರೆದಿವೆ: ಯೆಹೋವನ ಸತ್ಯಾರಾಧನೆಯ ಮಂದಿರವು ಬೇರೆ ಎಲ್ಲವುಗಳಿಗಿಂತ ಉನ್ನತ ಮಾಡಲ್ಪಟ್ಟಿದೆ. ಲೋಕದ ಸುತ್ತಲೂ 229 ದೇಶಗಳಲ್ಲಿ ಆಮಂತ್ರಣವು ಧ್ವನಿಸಲ್ಪಡುತ್ತಾ ಇದೆ: “ಬನ್ನಿರಿ, . . . ಯೆಹೋವನ ಪರ್ವತಕ್ಕೆ . . . ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು.” (ಯೆಶಾ. 2:3) ಹೊಸಬರಿಂದ ಸಕಾರಾತ್ಮಕವಾದ ಒಂದು ಪ್ರತಿವರ್ತನೆಯು ಅವರ ಜೀವಗಳನ್ನು ರಕ್ಷಿಸಬಲ್ಲದು. ಯೆಹೋವನ ಸಂಸ್ಥೆಯ ಕಡೆಗೆ ಅವರ ಆಸಕ್ತಿಯನ್ನು ಮಾರ್ಗದರ್ಶಿಸುವುದು, ನಾವು ಅವರಿಗೆ ಸಹಾಯ ಮಾಡುವ ಅತ್ಯುತ್ತಮ ಮಾರ್ಗಗಳಲ್ಲೊಂದಾಗಿದೆ.