ಹೆತ್ತವರೇ—ನಿಮ್ಮ ಮಕ್ಕಳಿಗೆ ಸಾರಲು ಕಲಿಸಿರಿ
1 ದೇವರಿಗೆ ಸೇವೆ ಸಲ್ಲಿಸುವ ಒಂದು ಪ್ರಾಮಾಣಿಕ ಅಪೇಕ್ಷೆಯಿರುವ ಅನೇಕ ಮಕ್ಕಳೊಂದಿಗೆ ನಮ್ಮ ಸಭೆಗಳು ಆಶೀರ್ವದಿಸಲ್ಪಟ್ಟಿವೆ. (ಪ್ರಸಂ. 12:1) ಯೆಹೋವನನ್ನು ಸ್ತುತಿಸುವುದರಲ್ಲಿ ಪಾಲ್ಗೊಳ್ಳಲು ಆತನಿಂದ ಆಮಂತ್ರಿಸಲ್ಪಟ್ಟವರಲ್ಲಿ ಅವರೂ ಸೇರಿದ್ದಾರೆ. (ಕೀರ್ತ. 148:12-14) ಹೀಗಿರುವುದರಿಂದ, ಹೆತ್ತವರು ತಮ್ಮ ಮಕ್ಕಳಿಗೆ ಕೊಡುವ ದೈನಂದಿನ ತರಬೇತಿಯಲ್ಲಿ, ರಾಜ್ಯ ಸಾರುವಿಕೆಯ ಕಾರ್ಯದಲ್ಲಿ ಅವರು ಇತರರೊಂದಿಗೆ ತಮ್ಮ ನಂಬಿಕೆಯನ್ನು ಹಂಚಿಕೊಳ್ಳುವ ವಿಧದ ಕುರಿತಾದ ಉಪದೇಶವು ಒಳಗೂಡಿರಬೇಕು.—ಧರ್ಮೋ. 6:6, 7.
2 ಮಕ್ಕಳನ್ನು ಪ್ರಗತಿಪರ ಹೆಜ್ಜೆಗಳಲ್ಲಿ ತರಬೇತುಗೊಳಿಸಿರಿ: ಮಕ್ಕಳು ತಮ್ಮ ಹೆತ್ತವರೊಂದಿಗೆ ಶುಶ್ರೂಷೆಯಲ್ಲಿ ಜೊತೆಗೂಡುವಂತೆ ತೀರ ಎಳೆಯ ಪ್ರಾಯದಲ್ಲಿಯೇ ತರಬೇತುಗೊಳಿಸಲ್ಪಡಲು ಅರ್ಹರಾಗಿದ್ದಾರೆ. ಸೇವೆಗೆ ಹೋಗುವ ಮುಂಚೆ, ನಿಮ್ಮ ಮಕ್ಕಳು ಒಂದು ಅರ್ಥಪೂರ್ಣ ವಿಧದಲ್ಲಿ ಭಾಗವಹಿಸುವಂತೆ ಅವರನ್ನು ತಯಾರಿಸಿರಿ. ಮನೆಬಾಗಿಲಲ್ಲಿ ಅವರು ಏನು ಮಾಡುವಂತೆ ನೀವು ಅಪೇಕ್ಷಿಸುತ್ತೀರೆಂಬುದನ್ನು ಮುಂಚಿತವಾಗಿ ನಿರ್ಧರಿಸಿರಿ. ತೀರ ಎಳೆಯ ಮಕ್ಕಳು ಕಿರುಹೊತ್ತಗೆಗಳನ್ನು ಮತ್ತು ಕರಪತ್ರಗಳನ್ನು ಕೊಟ್ಟು, ಜನರನ್ನು ರಾಜ್ಯ ಸಭಾಗೃಹಕ್ಕೆ ಆಮಂತ್ರಿಸಸಾಧ್ಯವಿದೆ. ಚೆನ್ನಾಗಿ ಓದುವ ಎಳೆಯರು, ಮನೆಬಾಗಿಲಲ್ಲಿ ವಚನಗಳನ್ನು ಓದುವಂತೆ ಆಮಂತ್ರಿಸಲ್ಪಡಬಹುದು. ಅವರು ಒಂದು ಸಂಕ್ಷಿಪ್ತ ನಿರೂಪಣೆಯನ್ನು ಉಪಯೋಗಿಸುತ್ತಾ, ಪತ್ರಿಕೆಗಳನ್ನು ನೀಡಸಾಧ್ಯವಿದೆ. ಅವರು ಅನುಭವವನ್ನು ಗಳಿಸಿದಂತೆ, ತಮ್ಮ ನಿರೂಪಣೆಯಲ್ಲಿ ಬೈಬಲನ್ನು ಉಪಯೋಗಿಸುವಂತೆ ಅವರಿಗೆ ತರಬೇತಿ ನೀಡಿರಿ. ಅನೇಕ ಯುವ ಪ್ರಚಾರಕರು, ತಮ್ಮ ಸ್ವಂತ ಪತ್ರಿಕಾ ಮಾರ್ಗವನ್ನು ಆರಂಭಿಸಿದ್ದಾರೆ ಮತ್ತು ಕ್ರಮವಾಗಿ ಪುನರ್ಭೇಟಿಗಳನ್ನು ಮಾಡುತ್ತಾರೆ. ಒಂದು ಮಗು ಇನ್ನೊಬ್ಬ ಎಳೆಯನೊಂದಿಗೆ ಕೆಲಸಮಾಡುವುದಕ್ಕಿಂತ ಒಬ್ಬ ವಯಸ್ಕನೊಂದಿಗೆ ಕೆಲಸಮಾಡುವುದು ಉತ್ತಮ. ಈ ಎಳೆಯನು, ಶುಶ್ರೂಷೆಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾನೆಂದು, ವಯಸ್ಕನು ಮನೆಯವನಿಗೆ ವಿವರಿಸಸಾಧ್ಯವಿದೆ.
3 ಒಬ್ಬ ಚಿಕ್ಕ ಹುಡುಗಿಯು, ತಾನು ಒಬ್ಬ ರಾಜ್ಯ ಪ್ರಚಾರಕಳಾಗಿ ಅರ್ಹಳಾಗಲು ಸಹಾಯ ಮಾಡುವಂತೆ ಹಿರಿಯರನ್ನು ಕೇಳಿಕೊಂಡಳು. ಆ ಸಮಯದಲ್ಲಿ ಅವಳು ಕೇವಲ ಐದು ವರ್ಷ ಪ್ರಾಯದವಳಾಗಿದ್ದು, ಅವಳಿಗೆ ಓದಲು ಬರದಿದ್ದರೂ, ಅವಳು ಮನೆಬಾಗಿಲುಗಳಲ್ಲಿ ರಾಜ್ಯ ಸಂದೇಶವನ್ನು ಪರಿಣಾಮಕಾರಿಯಾಗಿ ಸಾದರಪಡಿಸಶಕ್ತಳಿದ್ದಳು. ಅವಳು ಪ್ರಕಾಶನದಲ್ಲಿ ಶಾಸ್ತ್ರವಚನಗಳಿರುವ ಪುಟವನ್ನು ನೆನಪಿನಲ್ಲಿಟ್ಟುಕೊಂಡು, ಆ ಪುಟವನ್ನು ತೆರೆದು, ಅವುಗಳನ್ನು ಓದುವಂತೆ ಮನೆಯವನಿಗೆ ಕೇಳುತ್ತಿದ್ದಳು ಮತ್ತು ಅನಂತರ ಅವಳು ವಿವರಣೆಯನ್ನು ಕೊಡುತ್ತಿದ್ದಳು.
4 ಶುಶ್ರೂಷೆಯಲ್ಲಿ ಕ್ರಮವಾಗಿ ಪಾಲ್ಗೊಳ್ಳುವುದಕ್ಕಾಗಿ ಒಂದು ಒಳ್ಳೆಯ ಕಾರ್ಯತಖ್ತೆಯಿರುವುದರ ಮೌಲ್ಯವು, ಹೆತ್ತವರ ಮಾದರಿಯ ಮೂಲಕವೂ ಮಕ್ಕಳಿಗೆ ಕಲಿಸಲ್ಪಡಬೇಕು. ವಾರದ ಯಾವ ಸಮಯವು ಸಾರುವ ಕಾರ್ಯಕ್ಕಾಗಿ ಯಾವಾಗಲೂ ಬದಿಗಿರಿಸಲ್ಪಡುತ್ತದೆಂಬುದನ್ನು ಮಕ್ಕಳು ತಿಳಿಯುವಂತೆ, ಹೆತ್ತವರು ಸೇವೆಗಾಗಿ ಒಂದು ಹೊಂದಿಕೆಯುಳ್ಳ ನಿಯತಕ್ರಮವನ್ನು ಸ್ಥಾಪಿಸಿ, ಅದಕ್ಕೆ ಅಂಟಿಕೊಳ್ಳಬೇಕು.
5 ಎಳೆಯ ಪ್ರಾಯದಿಂದಲೇ ಮಕ್ಕಳು, ಶುಶ್ರೂಷೆಯನ್ನು ಪ್ರೀತಿಸಿ, ಅದರಲ್ಲಿ ಆನಂದಿಸುವಂತೆ ತರಬೇತುಗೊಳಿಸಲ್ಪಟ್ಟಾಗ, ಅವರು ಭವಿಷ್ಯತ್ತಿನಲ್ಲಿ, ಪ್ರಾಯಶಃ ಪಯನೀಯರ್ ಸೇವೆಯನ್ನು ಸೇರಿಸಿ, ಹೆಚ್ಚಿನ ಸುಯೋಗಗಳಿಗಾಗಿ ಎಟುಕಿಸಿಕೊಳ್ಳುವಂತೆ ಪ್ರಚೋದಿಸಲ್ಪಡುವರು. (1 ಕೊರಿಂ. 15:58) ನಮ್ಮ ನಡುವೆಯಿರುವ ಮಕ್ಕಳು, ಯೆಹೋವನ ಸ್ತುತಿಗಾರರಾಗಿ ಒಳ್ಳೆಯ ಪ್ರಗತಿಯನ್ನು ಮಾಡುವಂತೆ ನಾವೆಲ್ಲರೂ ಅವರನ್ನು ಉತ್ತೇಜಿಸಬೇಕು.