ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/98 ಪು. 2
  • ಜೂನ್‌ಗಾಗಿ ಸೇವಾ ಕೂಟಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೂನ್‌ಗಾಗಿ ಸೇವಾ ಕೂಟಗಳು
  • 1998 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಜೂನ್‌ 1ರಿಂದ ಆರಂಭವಾಗುವ ವಾರ
  • ಜೂನ್‌ 8ರಿಂದ ಆರಂಭವಾಗುವ ವಾರ
  • ಜೂನ್‌ 15ರಿಂದ ಆರಂಭವಾಗುವ ವಾರ
  • ಜೂನ್‌ 22ರಿಂದ ಆರಂಭವಾಗುವ ವಾರ
  • ಜೂನ್‌ 29ರಿಂದ ಆರಂಭವಾಗುವ ವಾರ
1998 ನಮ್ಮ ರಾಜ್ಯದ ಸೇವೆ
km 6/98 ಪು. 2

ಜೂನ್‌ಗಾಗಿ ಸೇವಾ ಕೂಟಗಳು

ಜೂನ್‌ 1ರಿಂದ ಆರಂಭವಾಗುವ ವಾರ

ಸಂಗೀತ 223 (6)

8 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.

15 ನಿ: “ಸಕಲ ಸತ್ಕಾರ್ಯಕ್ಕೆ ಸಂಪೂರ್ಣವಾಗಿ ಸನ್ನದ್ಧರಾಗುವುದು.” ಪ್ರಶ್ನೋತ್ತರಗಳು. 1989, ಫೆಬ್ರವರಿ 15ರ ವಾಚ್‌ಟವರ್‌ ಪತ್ರಿಕೆಯ 22-4ನೆಯ ಪುಟಗಳಲ್ಲಿರುವ ವಿಷಯದ ಕುರಿತು ಸಂಕ್ಷಿಪ್ತ ಹೇಳಿಕೆಗಳನ್ನು ಮಾಡಿರಿ.

22 ನಿ: “‘ಎಲ್ಲಾ ರೀತಿಯ ಮನುಷ್ಯರಿಗೆ’ ಸಾಕ್ಷಿನೀಡುವುದು.” ಒಬ್ಬ ಹಿರಿಯನು ಮತ್ತು ಹಲವಾರು ಅನುಭವಸ್ಥ ಪ್ರಚಾರಕರು ಸೂಚಿಸಲ್ಪಟ್ಟ ನಿರೂಪಣೆಗಳನ್ನು ಚರ್ಚಿಸುತ್ತಾರೆ. ಸ್ಥಳಿಕವಾಗಿ ಯಾವ ಧಾರ್ಮಿಕ ನಂಬಿಕೆಗಳನ್ನು ಎದುರಿಸಲಾಗುತ್ತದೆ ಎಂಬುದನ್ನು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸಿ, ಪ್ರತಿಯೊಂದು ಸಂದರ್ಭದಲ್ಲಿ ಒಂದು ಸಂಭಾಷಣೆಯನ್ನು ಆರಂಭಿಸಲು ಕೆಲವೊಂದು ವಿಷಯಗಳನ್ನು ನಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾದ ಕಾರಣವನ್ನು ವಿವರಿಸಿರಿ. ಒಂದು ಇಲ್ಲವೆ ಎರಡು ಸಂಕ್ಷಿಪ್ತ ಪ್ರತ್ಯಾಕ್ಷಾಭಿನಯಗಳನ್ನು ಏರ್ಪಡಿಸಿರಿ.

ಸಂಗೀತ 112 (16) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜೂನ್‌ 8ರಿಂದ ಆರಂಭವಾಗುವ ವಾರ

ಸಂಗೀತ 209 (4)

10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್‌ ವರದಿ.

15 ನಿ: “ಯಜಮಾನನ ಸ್ವತ್ತುಗಳ ಕಾಳಜಿವಹಿಸುವುದು.” ಪುರವಣಿಯಲ್ಲಿರುವ ಮಾಹಿತಿಯನ್ನು ಆವರಿಸುತ್ತಾ, ಹಿರಿಯನೊಬ್ಬನಿಂದ ಒಂದು ಭಾಷಣ.

20 ನಿ: “ಕೆಲಸವನ್ನು ಮಾಡಿಮುಗಿಸಲು ನಮ್ಮೆಲ್ಲರ ಅಗತ್ಯವಿದೆ.” ಪ್ರಶ್ನೋತ್ತರಗಳು. ಆವಶ್ಯಕವಾದ ಕೆಲಸಗಳನ್ನು ಮಾಡಿಮುಗಿಸಲು ಹಿರಿಯರು ಅನೇಕ ಸ್ವಇಚ್ಛೆಯುಳ್ಳ ಸ್ವಯಂಸೇವಕರ ಮೇಲೆ ಅವಲಂಬಿಸುವುದು ಏಕೆಂದು ವಿವರಿಸಿರಿ. ರಾಜ್ಯ ಸಭಾಗೃಹದ ಶುಚಿಮಾಡುವಿಕೆ ಹಾಗೂ ದುರಸ್ತಿ, ಅಸ್ವಸ್ಥರಿಗೆ ಮತ್ತು ವೃದ್ಧರಿಗೆ ಸಹಾಯಮಾಡುವುದು, ಮತ್ತು ಟೆರಿಟೊರಿಯನ್ನು ಆವರಿಸುವಂತಹ ಸ್ಥಳಿಕ ಅಗತ್ಯಗಳನ್ನು ಪುನರ್ವಿಮರ್ಶಿಸಿರಿ. ಅನೇಕ ಪ್ರಚಾರಕರು ನೀಡುವ ಸ್ವಇಚ್ಛೆಯ ನೆರವನ್ನು ಹೇಗೆ ಗಣ್ಯಮಾಡುತ್ತಾರೆಂಬುದನ್ನು ಹೇಳುವಂತೆ ಹಿರಿಯರನ್ನು ಆಮಂತ್ರಿಸಿರಿ. ಪ್ರತಿಯೊಬ್ಬರ ಪ್ರಯತ್ನವು ಎಷ್ಟೊಂದು ಅಗತ್ಯವೆಂಬುದನ್ನು ಒತ್ತಿಹೇಳಿರಿ.

ಸಂಗೀತ 153 (6) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜೂನ್‌ 15ರಿಂದ ಆರಂಭವಾಗುವ ವಾರ

ಸಂಗೀತ 7 (17)

10 ನಿ: ಸ್ಥಳಿಕ ತಿಳಿಸುವಿಕೆಗಳು. “ಪ್ರಚಾರಕರ ಕ್ರೆಡಿಟ್‌ ವ್ಯವಸ್ಥೆಯಲ್ಲಿ ಒಂದು ಬದಲಾವಣೆ” ಎಂಬ ವಿಷಯವನ್ನು ಚರ್ಚಿಸಿರಿ.

20 ನಿ: “ಅತ್ಯಂತ ಹುರುಪಿನಿಂದ ಪ್ರಯಾಸಪಡಿರಿ.” 1986, ಜನವರಿ 15ರ ವಾಚ್‌ಟವರ್‌ ಪತ್ರಿಕೆಯ, 10-14ನೆಯ ಪುಟಗಳ ಮೇಲಾಧಾರಿತ ಭಾಷಣ. ಕ್ರಮದ ಪಯನೀಯರ್‌ ಸೇವೆಯ ಮಹತ್ವವನ್ನು ಚರ್ಚಿಸಿ, ಸೆಪ್ಟೆಂಬರ್‌ 1ರ ಮುಂಚೆ ತಮ್ಮ ಹೆಸರುಗಳನ್ನು ನಮೂದಿಸಿಕೊಳ್ಳುವಂತೆ ಉತ್ತೇಜಿಸಿರಿ.

15 ನಿ: “ಸುನಡತೆಯ ಮೂಲಕ ಸಾಕ್ಷಿನೀಡುವುದು.” ಪ್ರಶ್ನೋತ್ತರಗಳು. ಕೆಲವು ಆದರ್ಶಪ್ರಾಯ ಯುವ ಜನರನ್ನು ಇಂಟರ್‌ವ್ಯೂ ಮಾಡಿರಿ. ತಮ್ಮ ಕ್ರೈಸ್ತ ನಡತೆಯಿಂದ ಇತರರು ಯಾವ ರೀತಿಯಲ್ಲಿ ಅನುಕೂಲಕರವಾಗಿ ಪ್ರಭಾವಿತರಾಗಿದ್ದಾರೆ ಎಂಬುದನ್ನು ಅವರು ಹೇಳುತ್ತಾರೆ. 1995, ಜನವರಿ 1ರ ಕಾವಲಿನಬುರುಜು ಪತ್ರಿಕೆಯ, 24-5ನೆಯ ಪುಟಗಳಲ್ಲಿರುವ ಒಂದೆರಡು ಅನುಭವಗಳನ್ನು ತಿಳಿಸಿರಿ.

ಸಂಗೀತ 170 (21) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜೂನ್‌ 22ರಿಂದ ಆರಂಭವಾಗುವ ವಾರ

ಸಂಗೀತ 61 (16)

10 ನಿ: ಸ್ಥಳಿಕ ತಿಳಿಸುವಿಕೆಗಳು. ಸಭಾ ಅಕೌಂಟುಗಳ ಆಡಿಟ್‌ ಯಾವಾಗ ಮುಗಿಯಿತೆಂಬುದನ್ನು ತಿಳಿಸಿರಿ.

15 ನಿ: ಪತ್ರಿಕಾ ಪಥವನ್ನು ಆರಂಭಿಸುವ ವಿಧ. ಅಗತ್ಯವಾದ ವಿಷಯಗಳನ್ನು ತಿಳಿಯಪಡಿಸಿರಿ: ಎಲ್ಲ ಕೊಡಿಕೆಗಳನ್ನು ಬರೆದಿಟ್ಟುಕೊಂಡು, ಎರಡು ವಾರಗಳೊಳಗೆ ಹಿಂದಿರುಗಿ, ಆಸಕ್ತಿಯನ್ನು ಸಜೀವವಾಗಿಡಲು ಪ್ರಚಲಿತ ಪತ್ರಿಕೆಗಳಿಂದ ಹೊಸ ವಿಚಾರಗಳನ್ನು ಪ್ರಸ್ತುತಪಡಿಸಿರಿ. ಪತ್ರಿಕಾ ಪಥದಲ್ಲಿ, ನೆರೆಯವರು, ಜೊತೆಕೆಲಸಗಾರರು, ಅಂಗಡಿಯ ಗುಮಾಸ್ತರು, ವಾಹನಗಳ ಸರ್ವಿಸ್‌ ಮಾಡುವ ಸೇವಕರು, ಇನ್ನು ಮುಂತಾದವರನ್ನು ಸೇರಿಸಿಕೊಳ್ಳಬಹುದು. ದೀರ್ಘ ಸಮಯದ ವರೆಗೆ ಆಸಕ್ತಿಯನ್ನು ತೋರಿಸುವವರಿಗೆ ಚಂದಾಗಳನ್ನು ನೀಡಿರಿ. ಪತ್ರಿಕಾ ಪಥಗಳ ಕುರಿತು ಒಳ್ಳೆಯ ಅನುಭವವನ್ನು ತಿಳಿಸುವಂತೆ ಒಂದಿಬ್ಬರು ಪ್ರಚಾರಕರನ್ನು ಆಮಂತ್ರಿಸಿರಿ.

20 ನಿ: ಪಯನೀಯರರು ಇತರರಿಗೆ ನೆರವು ನೀಡುತ್ತಾರೆ. ಸೇವಾ ಮೇಲ್ವಿಚಾರಕರಿಂದ ಭಾಷಣ. ಪಯನೀಯರರು ವೈಯಕ್ತಿಕವಾಗಿ ಇತರರಿಗೆ ಸಹಾಯಮಾಡುವಂತಹ ಏರ್ಪಾಡುಗಳನ್ನು ಅವರು ಪುನರ್ವಿಮರ್ಶಿಸುತ್ತಾರೆ. ಹಿಂದಿನ ಸಮಯದಲ್ಲಿ ನೆರವು ನೀಡುವ ಕಾರ್ಯಕ್ರಮಗಳು ಹೇಗೆ ಆರಂಭಿಸಲ್ಪಟ್ಟವು ಎಂಬುದನ್ನು ವಿವರಿಸಿರಿ. (jv 100; km 8/79 1, 3) ಕಳೆದ ಮೂರು ವರ್ಷಗಳಲ್ಲಿ ದೀಕ್ಷಾಸ್ನಾನ ಪಡೆದುಕೊಂಡ ಹತ್ತು ಲಕ್ಷಕ್ಕಿಂತಲೂ ಹೆಚ್ಚಿನ ಜನರಿಗೆ ತರಬೇತಿಯ ಅಗತ್ಯವಿದೆ. “ಪಯನೀಯರರು ಇತರರಿಗೆ ನೆರವು ನೀಡುತ್ತಾರೆ” ಎಂಬ ಈ ಕಾರ್ಯಕ್ರಮವು, ಪಯನೀಯರ್‌ ಸೇವಾ ಶಾಲೆಗೆ ಹಾಜರಾಗಿರುವ ಕ್ರಮದ ಹಾಗೂ ವಿಶೇಷ ಪಯನೀಯರರ ಅನುಭವ ಮತ್ತು ತರಬೇತಿಯನ್ನು ಉಪಯೋಗಿಸಿಕೊಳ್ಳುತ್ತದೆ. ಪ್ರತಿಯೊಬ್ಬ ಪಯನೀಯರನು ಪ್ರತಿ ವರ್ಷ ಇಬ್ಬರು ಪ್ರಚಾರಕರಿಗೆ, ಶುಶ್ರೂಷೆಯಲ್ಲಿ ಹೆಚ್ಚು ನಿಪುಣರಾಗುವಂತೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಲು ಪ್ರಯತ್ನಿಸುವಂತೆ ಸಹಾಯಮಾಡುವುದೇ ಗುರಿಯಾಗಿದೆ. ನೆರವು ಪಡೆದುಕೊಳ್ಳುತ್ತಿರುವವರು ಭಯಪಡುವ ಕಾರಣವಿಲ್ಲ; ಏಕೆಂದರೆ ಪ್ರೀತಿಪೂರ್ಣ, ದಯಾಪರ ಉತ್ತೇಜನವನ್ನು ನೀಡುವುದರ ಮೇಲೆ ಒತ್ತು ನೀಡಲ್ಪಟ್ಟಿದೆ. ನೂರಾರು ಸಾವಿರ ಜನರು ಹೆಚ್ಚು ಪರಿಣಾಮಕಾರಿ ಶುಶ್ರೂಷಕರಾಗುವಂತೆ, ಈ ಹೊಸ ಕಾರ್ಯಕ್ರಮವು ಒಂದು ಸಂಭವನೀಯತೆಯನ್ನು ಒದಗಿಸುತ್ತದೆ.

ಸಂಗೀತ 207 (1) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜೂನ್‌ 29ರಿಂದ ಆರಂಭವಾಗುವ ವಾರ

ಸಂಗೀತ 114 (23)

10 ನಿ: ತಿಳಿಸುವಿಕೆಗಳು. ಜೂನ್‌ ತಿಂಗಳಿಗಾಗಿ ಕ್ಷೇತ್ರ ಸೇವೆಯ ವರದಿಗಳನ್ನು ಹಾಕುವಂತೆ ಎಲ್ಲರಿಗೂ ಜ್ಞಾಪಕಹುಟ್ಟಿಸಿರಿ. ಜುಲೈ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯನ್ನು ಚರ್ಚಿಸಿರಿ.

15 ನಿ: ಸ್ಥಳಿಕ ಅಗತ್ಯಗಳು ಅಥವಾ ನನ್ನ ಗತಿಯು ನಿಧಾನಗೊಂಡಿದೆಯೊ? ಹಿರಿಯನಿಂದ 1987, ಡಿಸೆಂಬರ್‌ 15ರ ವಾಚ್‌ಟವರ್‌ ಪತ್ರಿಕೆಯ 18-19ನೆಯ ಪುಟಗಳು, 14-16ನೆಯ ಪ್ಯಾರಗ್ರಾಫ್‌ಗಳ ಮೇಲಾಧಾರಿತವಾದ ಒಂದು ಭಾಷಣ. ಹಲವಾರು ವರ್ಷಗಳಿಂದ ಸಕ್ರಿಯರಾಗಿರುವವರು, ತಮ್ಮ ಪವಿತ್ರ ಸೇವೆಯ ಗುಣಮಟ್ಟ ಹಾಗೂ ಪ್ರಮಾಣದ ಕುರಿತು ಪರ್ಯಾಲೋಚಿಸುವಂತೆ ಉತ್ತೇಜಿಸಿರಿ.

20 ನಿ: ನಾವೆಲ್ಲರೂ ಅನೌಪಚಾರಿಕವಾಗಿ ಸಾಕ್ಷಿನೀಡಬಲ್ಲೆವು. 1987, ಅಕ್ಟೋಬರ್‌ 15ರ ವಾಚ್‌ಟವರ್‌ ಪತ್ರಿಕೆಯ 22-7ನೆಯ ಪುಟಗಳ ಮೇಲಾಧಾರಿತ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಐಹಿಕ, ಕೌಟುಂಬಿಕ, ಇಲ್ಲವೆ ವೈಯಕ್ತಿಕ ಜವಾಬ್ದಾರಿಗಳಲ್ಲಿ ಯಾರು ವ್ಯಸ್ತರಾಗಿರುತ್ತಾರೊ ಅವರು, ಇತರರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳಲು ಪ್ರತಿದಿನ ಅನೇಕ ಅವಕಾಶಗಳನ್ನು ಕಂಡುಕೊಳ್ಳಸಾಧ್ಯವಿದೆ ಎಂಬುದನ್ನು ತೋರಿಸಿರಿ. ಕೆಲವು ಸ್ಥಳೀಯ ಅನುಭವಗಳನ್ನು ಸೇರಿಸಿರಿ.

ಸಂಗೀತ 76 (9) ಮತ್ತು ಸಮಾಪ್ತಿಯ ಪ್ರಾರ್ಥನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ