ಏಪ್ರಿಲ್ಗಾಗಿ ಸೇವಾ ಕೂಟಗಳು
ಏಪ್ರಿಲ್ 5ರಿಂದ ಆರಂಭವಾಗುವ ವಾರ
ಸಂಗೀತ 55
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. “ನಿರ್ಮಾಣಿಕ ಪುಸ್ತಕವನ್ನು ನಾವು ನೀಡಬಹುದೋ?” ಎಂಬ ಲೇಖನವನ್ನು ಪುನರ್ವಿಮರ್ಶಿಸಿರಿ. ಏಪ್ರಿಲ್ 18ರಂದು ನೀಡಲಿರುವ ವಿಶೇಷ ಭಾಷಣಕ್ಕೆ ಹಾಜರಾಗಲು ಆಸಕ್ತ ಜನರೆಲ್ಲರನ್ನು ಆಮಂತ್ರಿಸಿರಿ. “ದೇವರೊಂದಿಗೆ ಮತ್ತು ನೆರೆಯವರೊಂದಿಗೆ ನಿಜ ಮಿತ್ರತ್ವ” ಎಂಬುದು ಈ ಭಾಷಣದ ಶೀರ್ಷಿಕೆಯಾಗಿದೆ.
15 ನಿ: “ಅತ್ಯಾಸಕ್ತಿಯಿಂದ ಸುವಾರ್ತೆಯನ್ನು ಸಾರಿರಿ.” ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಲೇಖನದ ಪೀಠಿಕೆಯನ್ನು ಕೊಡಿರಿ ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ. ಸ್ಕೂಲ್ ಗೈಡ್ಬುಕ್, ಪುಟಗಳು 191-2, ಪ್ಯಾರಗ್ರಾಫ್ಗಳು 12-13ರ ಮೇಲೆ ಆಧಾರಿಸಿ ಉತ್ತೇಜನವನ್ನು ನೀಡುತ್ತಾ ಸಮಾಪ್ತಿಗೊಳಿಸಿರಿ.
20 ನಿ: “ಕುಟುಂಬ ಸದಸ್ಯರು ಪೂರ್ಣವಾಗಿ ಪಾಲ್ಗೊಳ್ಳುವುದಕ್ಕಾಗಿ ಸಹಕರಿಸುವ ವಿಧ—ಶುಶ್ರೂಷೆಯಲ್ಲಿ.” ಕುಟುಂಬ ಚರ್ಚೆ. ಕುಟುಂಬವು ಕ್ರಮವಾಗಿ ಪ್ರತಿ ವಾರ ಕ್ಷೇತ್ರ ಸೇವೆಯಲ್ಲಿ ಏಕೆ ಭಾಗವಹಿಸಬೇಕು ಎಂಬುದಕ್ಕೆ ಕಾರಣಗಳನ್ನು ಪರಿಗಣಿಸಿರಿ. ಸೆಪ್ಟೆಂಬರ್ 1, 1993, ವಾಚ್ಟವರ್, ಪುಟಗಳು 17-19, ಪ್ಯಾರಗ್ರಾಫ್ಗಳು 9-12ರಲ್ಲಿ ನೀಡಲಾಗಿರುವ ಪ್ರೋತ್ಸಾಹನೆಯನ್ನು ಪುನರ್ವಿಮರ್ಶಿಸಿರಿ. ಸಭಿಕರ ಮಧ್ಯದಲ್ಲಿರುವ ಹೆತ್ತವರು ತಮ್ಮ ಕುಟುಂಬಕ್ಕಾಗಿ ಸಾಪ್ತಾಹಿಕ ಸೇವಾ ಚಟುವಟಿಕೆಯನ್ನು ಹೇಗೆ ಯಶಸ್ವಿಕರವಾಗಿ ಏರ್ಪಡಿಸುತ್ತಾರೆಂಬುದನ್ನು ಹೇಳುವಂತೆ ಆಮಂತ್ರಿಸಿರಿ.
ಸಂಗೀತ 67 ಮತ್ತು ಸಮಾಪ್ತಿಯ ಪ್ರಾರ್ಥನೆ.
ಏಪ್ರಿಲ್ 12ರಿಂದ ಆರಂಭವಾಗುವ ವಾರ
ಸಂಗೀತ 112
10 ನಿ:ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
15 ನಿ: ಸ್ಥಳಿಕ ಅಗತ್ಯಗಳು.
20 ನಿ: “ಅಂತ್ಯವು ನಿಕಟವಾಗುತ್ತಿರುವಂತೆ ಸಾಕ್ಷಿಕಾರ್ಯವನ್ನು ತೀವ್ರಗೊಳಿಸುವುದು.” ಪ್ರಶ್ನೋತ್ತರಗಳು. ಸಾಕ್ಷಿಕಾರ್ಯದಲ್ಲಿ ತಾವು ಪಾಲ್ಗೊಳ್ಳುತ್ತೇವೆಂದು ಊಹಿಸಿರದ, ಆದರೆ ರಾಜ್ಯದ ಸಂದೇಶವನ್ನು ಹಬ್ಬಿಸುವ ತುರ್ತಿನ ಅಗತ್ಯವನ್ನು ಗಣ್ಯಮಾಡಿ, ಈಗ ಕ್ರಮವಾಗಿ ಪಾಲ್ಗೊಳ್ಳುತ್ತಿರುವ ಒಂದಿಬ್ಬರು ಪ್ರಚಾರಕರನ್ನು ಸಂದರ್ಶಿಸಿರಿ. ಸಮಯವಿದ್ದರೆ, ಹೇಗೆ ಪ್ರಚಾರಕರು ಜನರಿರುವ ಬಳಿ ಹೋಗಿ ಸಾಕ್ಷಿಕಾರ್ಯವನ್ನು ತೀವ್ರಗೊಳಿಸಿದ್ದಾರೆ ಎಂಬುದನ್ನು ತೋರಿಸುತ್ತಾ, 1997 ಯಿಯರ್ಬುಕ್ನಿಂದ ಸಂಕ್ಷಿಪ್ತ ಅನುಭವಗಳನ್ನು ಸೇರಿಸಿರಿ.
ಸಂಗೀತ 93 ಮತ್ತು ಸಮಾಪ್ತಿಯ ಪ್ರಾರ್ಥನೆ.
ಏಪ್ರಿಲ್ 19ರಿಂದ ಆರಂಭವಾಗುವ ವಾರ
ಸಂಗೀತ 79
5 ನಿ: ಸ್ಥಳಿಕ ತಿಳಿಸುವಿಕೆಗಳು.
10 ನಿ: “ನಿಮ್ಮ ಬಳಿ ಪತ್ರಿಕಾ ಆರ್ಡರ್ ಇದೆಯೋ?” ಪತ್ರಿಕೆಗಳನ್ನು ನೋಡಿಕೊಳ್ಳುವ ಹಿರಿಯನು ಅಥವಾ ಶುಶ್ರೂಷಾ ಸೇವಕನಿಂದ ಒಂದು ಭಾಷಣ. ಪ್ರತಿ ತಿಂಗಳು ಎಷ್ಟು ಪತ್ರಿಕೆಗಳನ್ನು ಸಭೆಯು ಪಡೆದುಕೊಳ್ಳುತ್ತಿದೆ ಮತ್ತು ಕೊಡಿಕೆಯಾಗಿ ಎಷ್ಟು ಪತ್ರಿಕೆಗಳು ವರದಿಸಲ್ಪಡುತ್ತಿವೆ ಎಂಬ ಸರಾಸರಿ ಸಂಖ್ಯೆಯನ್ನು ಸಭೆಗೆ ತಿಳಿಸಿರಿ. ಪತ್ರಿಕೆಗಳು ನಿಷ್ಪ್ರಯೋಜಕವಾಗಿ ಉಳಿಯುವಂತೆ ನಾವು ಬಿಡಬಾರದು. ಹಳೆಯ ಪ್ರತಿಗಳನ್ನು ಹೇಗೆ ವಿತರಿಸಸಾಧ್ಯವಿದೆ ಎಂಬುದನ್ನು ತೋರಿಸುತ್ತಾ ಸೂಚನೆಗಳನ್ನು ನೀಡಿರಿ.—ಜುಲೈ 1993 ನಮ್ಮ ರಾಜ್ಯದ ಸೇವೆ, (ಇಂಗ್ಲಿಷ್) ಪುಟ 1ನ್ನು ನೋಡಿರಿ.
30 ನಿ: “ಪಯನೀಯರ್ ಸೇವೆ—ಸಮಯದ ವಿವೇಕಯುಕ್ತ ಬಳಕೆ!” ಪ್ರಶ್ನೋತ್ತರಗಳು. 5-7ರ ಪ್ಯಾರಾಗ್ರಾಫ್ಗಳಲ್ಲಿ ಕೊಡಲ್ಪಟ್ಟಿರುವ ಅನುಭವಗಳನ್ನು ಮೂವರು ವಿವಿಧ ವ್ಯಕ್ತಿಗಳು ತಿಳಿಸುವಂತೆ ನೇಮಿಸಿರಿ. ಆಕ್ಸಿಲಿಯರಿ ಅಥವಾ ಕ್ರಮದ ಪಯನೀಯರ್ ಸೇವೆಗಾಗಿ ಅರ್ಜಿಹಾಕುವಂತೆ ಎಲ್ಲರನ್ನೂ ಆಮಂತ್ರಿಸುತ್ತಾ, ಮುಕ್ತಾಯಗೊಳಿಸಿರಿ. ಸಭೆಯ ಸೇವಾ ಕಮಿಟಿಯ ಯಾವನೇ ಸದಸ್ಯನಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು. ಮೇ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಗೆ ಅರ್ಜಿಯನ್ನು ಕೊಡಲು ಸಮಯವು ಇನ್ನೂ ಇದೆ ಎಂಬುದನ್ನು ತಿಳಿಸಿರಿ.
ಸಂಗೀತ 165 ಮತ್ತು ಸಮಾಪ್ತಿಯ ಪ್ರಾರ್ಥನೆ.
ಏಪ್ರಿಲ್ 26ರಿಂದ ಆರಂಭವಾಗುವ ವಾರ
ಸಂಗೀತ 70
10 ನಿ: ಸ್ಥಳಿಕ ತಿಳಿಸುವಿಕೆಗಳು. ಏಪ್ರಿಲ್ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಎಲ್ಲರಿಗೂ ಜ್ಞಾಪಿಸಿರಿ. ಮೇ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲಿರುವವರ ಹೆಸರುಗಳನ್ನು ಪ್ರಕಟಿಸಿರಿ ಮತ್ತು ಅರ್ಜಿಹಾಕುವಂತೆ ಇತರರಿಗೆ ಪ್ರೋತ್ಸಾಹಿಸಿರಿ. ಪ್ರಸ್ತುತ ಪತ್ರಿಕೆಗಳನ್ನು ನೀಡಲಿಕ್ಕಾಗಿ ಕೆಲವು ಸಹಾಯಕಾರಿ ಸಲಹೆಗಳನ್ನು ನೀಡಿರಿ.—ಅಕ್ಟೋಬರ್ 1996ರ ನಮ್ಮ ರಾಜ್ಯದ ಸೇವೆ, ಪುಟ 8ನ್ನು ನೋಡಿರಿ.
17 ನಿ: “ಮುಂದೆ ನಾನೇನಾಗಬೇಕು?” ಸಭಿಕರೊಂದಿಗೆ ಲೇಖನವನ್ನು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸಿದ ಬಳಿಕ, ಒಬ್ಬ ಹದಿವಯಸ್ಕ ವ್ಯಕ್ತಿ ಪ್ರೌಢ ಶಾಲೆಯನ್ನು ಉತ್ತೀರ್ಣಗೊಂಡ ನಂತರ ಭವಿಷ್ಯತ್ತಿಗಾಗಿ ಯೋಜನೆಗಳನ್ನು ಮಾಡುವುದರ ಕುರಿತಾಗಿ ತನ್ನ ಹೆತ್ತವರೊಡನೆ ಚರ್ಚಿಸುತ್ತಿರುವುದರ ಪ್ರತ್ಯಕ್ಷಾಭಿನಯವಿರಲಿ. ಅವರು ಜುಲೈ 1998ರ ನಮ್ಮ ರಾಜ್ಯದ ಸೇವೆಯನ್ನು ಒಟ್ಟಿಗೆ ಪುನರ್ವಿಮರ್ಶಿಸುತ್ತಾರೆ. ಕಾವಲಿನಬುರುಜು ಪತ್ರಿಕೆಯ ಫೆಬ್ರವರಿ 1, 1996, ಪುಟ 14 ಮತ್ತು ಡಿಸೆಂಬರ್ 1, 1996, ಪುಟಗಳು 17-19ರಲ್ಲಿರುವ ಉತ್ತೇಜನಕ್ಕನುಸಾರ ಹೆತ್ತವರು ಸಲಹೆಯನ್ನು ನೀಡುತ್ತಾರೆ. ಪಯನೀಯರ್ ಸೇವೆಯ ತಾಸಿನ ಆವಶ್ಯಕತೆಗಳನ್ನು ಈಗ ಕಡಿಮೆಮಾಡಲಾಗಿರುವುದರಿಂದ, ಶಿಕ್ಷಣವನ್ನು ಪೂರ್ಣಗೊಳಿಸುತ್ತಿರುವಾಗಲೇ ಪಯನೀಯರ್ ಸೇವೆಯನ್ನು ಮಾಡುವ ಸಾಧ್ಯತೆಯ ಬಗ್ಗೆ ಹದಿವಯಸ್ಕನು ಪರಿಗಣಿಸುತ್ತಾನೆ.
18 ನಿ: ಆಕ್ಸಿಲಿಯರಿ ಪಯನೀಯರುಗಳೊಂದಿಗೆ ಸಂದರ್ಶನ. ಈ ತಿಂಗಳು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುತ್ತಿರುವ ಮತ್ತು ಈ ಹಿಂದೆ ಮಾಡಿರುವ ಕೆಲವು ಪ್ರಚಾರಕರೊಂದಿಗೆ ಸೇವಾ ಮೇಲ್ವಿಚಾರಕನು ಸಂದರ್ಶನಗಳನ್ನು ಮಾಡುತ್ತಾನೆ. ಅವರು ಅನುಭವಿಸಿರುವ ಕೆಲವೊಂದು ಆಶೀರ್ವಾದಗಳನ್ನು, ಅವರು ಮಾಡಿರುವ ಸಾಧನೆಗಳನ್ನು ಮತ್ತು ಪ್ರತಿ ವರ್ಷ ಒಂದೆರಡು ತಿಂಗಳುಗಳು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಪುನಃ ಮಾಡಲು ಏಕೆ ಅವರು ಮುನ್ನೋಡುತ್ತಾರೆ ಎಂಬುದನ್ನು ತಿಳಿಸುವಂತೆ ಅವರನ್ನು ಆಮಂತ್ರಿಸಿರಿ.
ಸಂಗೀತ 69 ಮತ್ತು ಸಮಾಪ್ತಿಯ ಪ್ರಾರ್ಥನೆ.