ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 2/00 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2000 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಫೆಬ್ರವರಿ 14ರಿಂದ ಆರಂಭವಾಗುವ ವಾರ
  • ಫೆಬ್ರವರಿ 21ರಿಂದ ಆರಂಭವಾಗುವ ವಾರ
  • ಫೆಬ್ರವರಿ 28ರಿಂದ ಆರಂಭವಾಗುವ ವಾರ
  • ಮಾರ್ಚ್‌ 6ರಿಂದ ಆರಂಭವಾಗುವ ವಾರ
2000 ನಮ್ಮ ರಾಜ್ಯದ ಸೇವೆ
km 2/00 ಪು. 2

ಸೇವಾ ಕೂಟದ ಶೆಡ್ಯೂಲ್‌

ಫೆಬ್ರವರಿ 14ರಿಂದ ಆರಂಭವಾಗುವ ವಾರ

ಸಂಗೀತ 113 (12)

10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.

15 ನಿ: ‘ದೇವರ ವಾಕ್ಯವನ್ನು . . . ತುರ್ತಿನಿಂದ ಸಾರು.’ ಆರಂಭದ ಹೇಳಿಕೆಗಳನ್ನು ಒಂದು ನಿಮಿಷಕ್ಕಿಂತಲೂ ಕಡಿಮೆ ಸಮಯಕ್ಕೆ ಸೀಮಿತಗೊಳಿಸಿ, ಪ್ರಶ್ನೋತ್ತರ ಚರ್ಚೆಯೊಂದಿಗೆ ಮುಂದುವರಿಸಿರಿ. ನಮ್ಮ ಶುಶ್ರೂಷೆ ಪುಸ್ತಕದ 170ನೆಯ ಪುಟದಲ್ಲಿರುವ ಹೇಳಿಕೆಗಳನ್ನು ಸೇರಿಸಿರಿ. ಸಾರುವ ಚಟುವಟಿಕೆಯನ್ನು ಹೆಚ್ಚಿಸುವ ವಿಷಯದಲ್ಲಿ ಕೆಲವು ಪ್ರಾಯೋಗಿಕ ಸಲಹೆಗಳನ್ನು ನೀಡಿರಿ.

20 ನಿ: “ತರ್ಕಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ವಿಧ.” ಭಾಷಣ ಮತ್ತು ಪ್ರತ್ಯಕ್ಷಾಭಿನಯ. ಶುಶ್ರೂಷೆಯಲ್ಲಿ ತರ್ಕಮಾಡುವ ಸಾಮರ್ಥ್ಯವು ಏಕೆ ಅಷ್ಟೊಂದು ಪ್ರಾಮುಖ್ಯವಾಗಿದೆ ಮತ್ತು ಅದನ್ನು ಹೇಗೆ ಬೆಳೆಸಿಕೊಳ್ಳುವುದೆಂಬುದನ್ನು ವಿವರಿಸಿ. ಲೇಖನದ 3ನೆಯ ಪ್ಯಾರಗ್ರಾಫ್‌ನಲ್ಲಿ ತಿಳಿಸಲ್ಪಟ್ಟ ವಿಧಗಳನ್ನು ಅನುಸರಿಸುವ ಮೂಲಕ, ಶುಶ್ರೂಷೆಗಾಗಿ ಹೇಗೆ ತಯಾರಿಸುವುದೆಂಬುದನ್ನು ಇಬ್ಬರು ಸಮರ್ಥ ಪ್ರಚಾರಕರು ಚರ್ಚಿಸಲಿ, ನಂತರ ತಮ್ಮ ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಲಿ.

ಸಂಗೀತ 182 (24) ಮತ್ತು ಸಮಾಪ್ತಿಯ ಪ್ರಾರ್ಥನೆ.

ಫೆಬ್ರವರಿ 21ರಿಂದ ಆರಂಭವಾಗುವ ವಾರ

ಸಂಗೀತ 17 (7)

10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್‌ ವರದಿ.

15 ನಿ: “ಕರ್ತನ ಸೇವೆಯಲ್ಲಿ ಪರಿಶ್ರಮಿಸುತ್ತಿರುವ ಸ್ತ್ರೀಯರು.” ಆರಂಭದ ಹೇಳಿಕೆಗಳನ್ನು ಒಂದು ನಿಮಿಷಕ್ಕಿಂತಲೂ ಕಡಿಮೆ ಸಮಯಕ್ಕೆ ಸೀಮಿತಗೊಳಿಸಿ, ಪ್ರಶ್ನೋತ್ತರ ಚರ್ಚೆಯೊಂದಿಗೆ ಮುಂದುವರಿಸಿರಿ. ಸೆಪ್ಟೆಂಬರ್‌ 15, 1996ರ ಕಾವಲಿನಬುರುಜು ಪತ್ರಿಕೆಯ, ಪುಟ 14-15ರಲ್ಲಿರುವ 18-19ನೆಯ ಪ್ಯಾರಗ್ರಾಫ್‌ಗಳ ಹೇಳಿಕೆಗಳನ್ನು ಒಳಗೂಡಿಸಿರಿ. ಸಹೋದರಿಯರ ಸ್ವ-ಇಚ್ಛೆಯ ಬೆಂಬಲಕ್ಕಾಗಿ, ಇತರರಿಗಾಗಿ ಅವರು ಮಾಡುವ ಪ್ರಯೋಜನಕಾರಿ ಸೇವೆಗಳಿಗಾಗಿ ಹಾಗೂ ಅವರ ಹುರುಪಿನ ಸಾರುವ ಚಟುವಟಿಕೆಗಾಗಿ ಅವರನ್ನು ಹೃತ್ಪೂರ್ವಕವಾಗಿ ಪ್ರಶಂಸಿಸಿರಿ.

20 ನಿ: “ನಂಬಿಕೆಯಲ್ಲಿ ದೃಢರಾಗಿ ನಿಲ್ಲುವಂತೆ ನಮಗೆ ಯಾವುದು ಸಹಾಯಮಾಡಬಲ್ಲದು?” ಒಬ್ಬ ಹಿರಿಯನಿಂದ ಭಾಷಣ. ನಾವು ಕಠಿಣ ಸಮಯಗಳಲ್ಲಿ ಜೀವಿಸುತ್ತಿದ್ದೇವೆ, ಆದುದರಿಂದ ನಮಗೆಲ್ಲರಿಗೂ ಯಾವುದಾದರೊಂದು ರೀತಿಯಲ್ಲಿ ಸಹಾಯದ ಅಗತ್ಯವಿದೆ. ನಿರುತ್ತೇಜಿಸುವ ಸಮಸ್ಯೆಗಳಿಂದ ಸುತ್ತುವರಿಯಲ್ಪಟ್ಟಿರುವವರನ್ನು ಬಲಪಡಿಸಲು ಹಿರಿಯರು ಮತ್ತು ಶುಶ್ರೂಷಾ ಸೇವಕರು ಏನು ಮಾಡಸಾಧ್ಯವಿದೆ ಎಂಬುದನ್ನು ಪುನರ್ವಿಮರ್ಶಿಸಿರಿ. (ಸೆಪ್ಟೆಂಬರ್‌ 15, 1993ರ ಕಾವಲಿನಬುರುಜು ಪತ್ರಿಕೆಯ ಪುಟ 21-3ರಲ್ಲಿರುವ “ಭಕ್ತಿವೃದ್ಧಿಯನ್ನುಂಟು ಮಾಡುವ ಪಾಲನೆ” ಎಂಬ ಉಪಶೀರ್ಷಿಕೆಯನ್ನು ನೋಡಿರಿ.) ನಮ್ಮನ್ನು ಆತ್ಮಿಕವಾಗಿ ದೃಢವಾಗಿಟ್ಟುಕೊಳ್ಳಲಿಕ್ಕಾಗಿ ನಾವು ಯಾವ ವಿಧಗಳಲ್ಲಿ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಸಾಧ್ಯವಿದೆ ಎಂಬುದನ್ನು ವಿವರಿಸಿರಿ.—ರೋಮಾ. 1:11, 12.

ಸಂಗೀತ 82 (10) ಮತ್ತು ಸಮಾಪ್ತಿಯ ಪ್ರಾರ್ಥನೆ.

ಫೆಬ್ರವರಿ 28ರಿಂದ ಆರಂಭವಾಗುವ ವಾರ

ಸಂಗೀತ 46 (5)

10 ನಿ: ಸ್ಥಳಿಕ ತಿಳಿಸುವಿಕೆಗಳು. ಫೆಬ್ರವರಿ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಎಲ್ಲರಿಗೂ ಜ್ಞಾಪಕಹುಟ್ಟಿಸಿರಿ. ಜ್ಞಾನ ಪುಸ್ತಕವನ್ನು ಪರಿಚಯಿಸಲಿಕ್ಕಾಗಿ ಶಾಂತಿಭರಿತ ಹೊಸ ಲೋಕ ಎಂಬ ಟ್ರ್ಯಾಕ್ಟ್‌ ಅನ್ನು ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಟ್ರ್ಯಾಕ್ಟ್‌ನ ಆರಂಭದ ಪ್ಯಾರಗ್ರಾಫ್‌ನಿಂದ ಪ್ರಶ್ನೆಗಳನ್ನು ಕೇಳಿದ ನಂತರ, 3ನೆಯ ಪುಟದಲ್ಲಿರುವ ಮೊದಲನೆಯ ಪ್ಯಾರಗ್ರಾಫನ್ನು ಓದಿ, ಅದರೊಂದಿಗೆ ಕೀರ್ತನೆ 37:29ನ್ನು ಒಳಗೂಡಿಸಿರಿ. ಆಸಕ್ತಿಯು ತೋರಿಸಲ್ಪಟ್ಟಲ್ಲಿ, ಜ್ಞಾನ ಪುಸ್ತಕದ ಪುಟ 5ನ್ನು ತೆರೆದು, ರೇಖಾಚೌಕದಲ್ಲಿರುವ ಮಾಹಿತಿಯನ್ನು ಓದಿರಿ ಮತ್ತು ಒಂದು ಅಭ್ಯಾಸದ ನೀಡಿಕೆಯನ್ನು ಮಾಡಿರಿ. ಈ ತಿಂಗಳು, ಪ್ರತಿಯೊಬ್ಬರೂ ಹೊಸ ಮನೆ ಬೈಬಲ್‌ ಅಭ್ಯಾಸಗಳನ್ನು ನಡೆಸಲಿಕ್ಕಾಗಿ ವಿಶೇಷ ಪ್ರಯತ್ನವನ್ನು ಮಾಡಬೇಕು.

5 ನಿ: ಪ್ರಶ್ನಾ ರೇಖಾಚೌಕ. ಒಬ್ಬ ಹಿರಿಯನಿಂದ ಭಾಷಣ.

12 ನಿ: ದಾನಿಯೇಲನ ಪ್ರವಾದನೆ ಪುಸ್ತಕವನ್ನು ಪುನರ್ವಿಮರ್ಶಿಸಿರಿ. ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಹೊಸ ಪುಸ್ತಕದ ಮುಖ್ಯಾಂಶಗಳನ್ನು ಪುನರ್ವಿಮರ್ಶಿಸಿರಿ: ಅಧ್ಯಾಯಗಳ ಮನಮುಟ್ಟುವಂತಹ ಶೀರ್ಷಿಕೆಗಳು, ನೈಜವಾಗಿರುವ ದೃಷ್ಟಾಂತಗಳು, ಪ್ರತಿ ಚರ್ಚೆಯ ನಂತರ ಪರೀಕ್ಷಕ ಪ್ರಶ್ನೆಗಳನ್ನೊಳಗೊಂಡ ರೇಖಾಚೌಕಗಳು, ವಿವರಗಳನ್ನು ಸ್ಪಷ್ಟಗೊಳಿಸುವಂಥ ನಕ್ಷೆಗಳು ಮತ್ತು ಚಾರ್ಟುಗಳು. ಮೀಕಾಯೇಲನು ಒಂದು ವಿಶೇಷ ರೀತಿಯಲ್ಲಿ ಹೇಗೆ “ಎದ್ದುನಿಲ್ಲುವನು” ಎಂಬ ಪ್ರೋತ್ಸಾಹದಾಯಕ ವಿವರಣೆಯನ್ನು ಪರಿಗಣಿಸಿರಿ (288-90ನೆಯ ಪುಟಗಳು). ದೇವರ ವಾಕ್ಯದ ಬೋಧಕರೋಪಾದಿ ನಮ್ಮ ತಾಳ್ಮೆಯು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಚರ್ಚಿಸಿರಿ (311-12ನೆಯ ಪುಟಗಳು). ನಮ್ಮಲ್ಲಿ ಪ್ರತಿಯೊಬ್ಬರೂ ಆ ಪುಸ್ತಕವನ್ನು ಗಮನಕೊಟ್ಟು ಓದಬೇಕು ಮತ್ತು ಹಾಗೆ ಮಾಡುವಂತೆ ಆಸಕ್ತ ವ್ಯಕ್ತಿಗಳನ್ನೂ ಉತ್ತೇಜಿಸಬೇಕು.

18 ನಿ: “ದೃಢ ವಿಶ್ವಾಸದಿಂದ ಸುವಾರ್ತೆಯನ್ನು ಪ್ರಚುರಪಡಿಸುವುದು.” ಈ ವಿಷಯದ ಮೇಲೆ ಆಧರಿತವಾದ ಎರಡು ಇಲ್ಲವೆ ಮೂರು ನಿಮಿಷಗಳ ಹೃತ್ಪೂರ್ವಕ ಪೀಠಿಕೆಯನ್ನು ನೀಡಿ, 1-2ನೆಯ ಪ್ಯಾರಗ್ರಾಫ್‌ಗಳಲ್ಲಿ ಉಲ್ಲೇಖಿಸಲ್ಪಟ್ಟ ಹಾಗೂ ಉದ್ಧರಿಸಲ್ಪಟ್ಟಿರುವ ಶಾಸ್ತ್ರವಚನಗಳನ್ನು ಸಹ ಒಳಗೂಡಿಸಿರಿ. ನಂತರ 3-12 ಪ್ಯಾರಗ್ರಾಫ್‌ಗಳನ್ನು ಪ್ರಶ್ನೋತ್ತರ ಚರ್ಚೆಯೊಂದಿಗೆ ಆವರಿಸಿರಿ.

ಸಂಗೀತ 61 (16) ಮತ್ತು ಸಮಾಪ್ತಿಯ ಪ್ರಾರ್ಥನೆ.

ಮಾರ್ಚ್‌ 6ರಿಂದ ಆರಂಭವಾಗುವ ವಾರ

ಸಂಗೀತ 116 (23)

5 ನಿ: ಸ್ಥಳಿಕ ತಿಳಿಸುವಿಕೆಗಳು.

10 ನಿ: ಸ್ಥಳಿಕ ಅಗತ್ಯಗಳು.

10 ನಿ: “ನೀವು ಹೇಗೆ ಕಿವಿಗೊಡುತ್ತೀರಿ ಎಂಬುದರ ಕಡೆಗೆ ಗಮನಹರಿಸಿರಿ.” ಸಭಾ ಕೂಟಗಳು, ಸಮ್ಮೇಳನಗಳು ಮತ್ತು ಅಧಿವೇಶನಗಳಿಂದ ಸಂಪೂರ್ಣವಾಗಿ ಪ್ರಯೋಜನವನ್ನು ಪಡೆದುಕೊಳ್ಳಲು ಏನು ಮಾಡಸಾಧ್ಯವಿದೆ ಎಂಬುದನ್ನು ಕುಟುಂಬದ ತಲೆಯು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಚರ್ಚಿಸುತ್ತಾನೆ. ಕುಟುಂಬದ ಪ್ರತಿ ಸದಸ್ಯನು ಹೆಚ್ಚು ಉತ್ತಮವಾಗಿ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಿದೆಯೆಂದು ಅವನು ಭಾವಿಸುತ್ತಾನೆ. ಪಟ್ಟಿಮಾಡಲ್ಪಟ್ಟಿರುವ ಸಲಹೆಗಳನ್ನು ಅವರು ಪುನರ್ವಿಮರ್ಶಿಸುತ್ತಾರೆ ಮತ್ತು ಕಲಿತಿರುವ ವಿಷಯಗಳ ಕುರಿತು ಹೆಚ್ಚಿನ ಚರ್ಚೆಗಳನ್ನು ನಡೆಸುವ ಅಗತ್ಯದೊಂದಿಗೆ, ಪ್ರತಿಯೊಂದು ವಿಷಯವನ್ನು ಹೇಗೆ ಅನ್ವಯಿಸಿಕೊಳ್ಳಸಾಧ್ಯವಿದೆ ಎಂಬುದನ್ನು ಪರಿಗಣಿಸುತ್ತಾರೆ. ಯಾವುದೇ ಕೂಟವನ್ನು ಇಲ್ಲವೇ ಸಮ್ಮೇಳನ ಅಥವಾ ಅಧಿವೇಶನದ ಯಾವ ಭಾಗವನ್ನೂ, ಸಾಧ್ಯವಿರುವಷ್ಟು ಮಟ್ಟಿಗೆ ತಪ್ಪಿಸಿಕೊಳ್ಳದೇ ಇರುವ ತಮ್ಮ ದೃಢನಿರ್ಧಾರಕ್ಕೆ ಹೊಂದಿಕೆಯಲ್ಲಿ ಹೇಗೆ ಕಾರ್ಯನಡಿಸಸಾಧ್ಯವಿದೆ ಎಂಬುದನ್ನು ಅವರು ಪರಿಗಣಿಸುತ್ತಾರೆ.

20 ನಿ: “ದೃಢ ವಿಶ್ವಾಸದಿಂದ ಸುವಾರ್ತೆಯನ್ನು ಪ್ರಚುರಪಡಿಸುವುದು.” ಹಿಂದಿನ ವಾರ ಚರ್ಚಿಸಿದ ಪುರವಣಿಯ ಮೊದಲ 12 ಪ್ಯಾರಗ್ರಾಫ್‌ಗಳನ್ನು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸಿದ ನಂತರ, 13-24 ಪ್ಯಾರಗ್ರಾಫ್‌ಗಳ ಪ್ರಶ್ನೋತ್ತರ ಚರ್ಚೆಯನ್ನು ಮುಂದುವರಿಸಿರಿ. ಉದ್ಧರಿಸಲ್ಪಟ್ಟ ಮತ್ತು ಉಲ್ಲೇಖಿಸಲ್ಪಟ್ಟಿರುವ ಶಾಸ್ತ್ರವಚನಗಳನ್ನು ಅಲಕ್ಷಿಸದೆ, ಅವುಗಳ ಉತ್ತಮ ಉಪಯೋಗವನ್ನು ಮಾಡಿರಿ.

ಸಂಗೀತ 186 (22) ಮತ್ತು ಸಮಾಪ್ತಿಯ ಪ್ರಾರ್ಥನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ