ತರ್ಕಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ವಿಧ
1 “ತರ್ಕ” ಎಂಬ ಶಬ್ದದ ಒಂದು ಅರ್ಥನಿರೂಪಣೆಯು, “ಒಬ್ಬನ ಕಾರ್ಯಗಳು ಅಥವಾ ಅಭಿಪ್ರಾಯಗಳ ಮೇಲೆ ಪ್ರಭಾವ ಬೀರುವಂತಹ ರೀತಿಯಲ್ಲಿ ಆ ವ್ಯಕ್ತಿಯೊಂದಿಗೆ ಮಾತಾಡುವುದೇ” ಆಗಿದೆ. ಶುಶ್ರೂಷೆಯಲ್ಲಿ ನಿಮ್ಮ ಪರಿಣಾಮಕಾರಿತ್ವವನ್ನು ಉತ್ತಮಗೊಳಿಸಿಕೊಳ್ಳಲಿಕ್ಕಾಗಿ, ನೀವು ಭೇಟಿಯಾಗುವ ಜನರೊಂದಿಗೆ ತರ್ಕಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. (ಅ. ಕೃ. 17:2-4) ಆದರೆ ಈ ಕೌಶಲವನ್ನು ನೀವು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ?
2 ಮೊದಲಾಗಿ ವಿಷಯದ ಕುರಿತು ಮನನಮಾಡಬೇಕು: ಬೈಬಲ್ ಸತ್ಯಗಳನ್ನು ಅಭ್ಯಾಸಿಸುತ್ತಿರುವಾಗ, ನಿರ್ದಿಷ್ಟ ವಿಷಯದ ಕುರಿತು ಪುನರಾಲೋಚಿಸುವುದು ಹೆಚ್ಚು ಸಹಾಯಕಾರಿಯಾಗಿದೆ ಎಂದು ನೀವು ಕಂಡುಕೊಳ್ಳುವಿರಿ. ಒಂದು ವಿಷಯದ ಕೆಲವು ಅಂಶಗಳು ಹೆಚ್ಚು ಕಠಿನವಾಗಿ ಕಂಡುಬರುವಲ್ಲಿ, ಸ್ವಲ್ಪ ಸಂಶೋಧನೆಮಾಡಲು ಸಮಯವನ್ನು ತೆಗೆದುಕೊಳ್ಳಿ ಮತ್ತು ಉತ್ತರಗಳ ಕುರಿತು ಮನನಮಾಡಿರಿ. ಒದಗಿಸಲ್ಪಡುವ ವಿವರಗಳನ್ನು ಮಾತ್ರವಲ್ಲ, ಆ ವಿವರಗಳಿಗಿರುವ ಶಾಸ್ತ್ರೀಯ ಕಾರಣಗಳನ್ನೂ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ.
3 ಶುಶ್ರೂಷೆಗಾಗಿ ತಯಾರಿಮಾಡುವುದು ಸಹ ಒಳಗೂಡಿದೆ: ಬೇರೆ ಬೇರೆ ರೀತಿಯ ಜನರಿಗೆ ನೀವು ಸತ್ಯವನ್ನು ಹೇಗೆ ವಿವರಿಸಬಲ್ಲಿರಿ ಎಂಬುದರ ಕುರಿತು ಆಲೋಚಿಸಿರಿ. ಆಸಕ್ತಿಯನ್ನು ಕೆರಳಿಸುವಂತಹ ಆಲೋಚನಾಪ್ರೇರಕ ಪ್ರಶ್ನೆಯನ್ನು ನಿಮ್ಮ ಮನಸ್ಸಿನಲ್ಲಿ ಸಿದ್ಧಪಡಿಸಿಕೊಂಡಿರಿ. ಒಂದು ಶಾಸ್ತ್ರೀಯ ಅಂಶವನ್ನು ಹೇಳಲಿಕ್ಕಿರುವ ವಿಷಯದೊಂದಿಗೆ ಹೇಗೆ ಜೋಡಿಸುವುದು ಮತ್ತು ಅದರ ಕುರಿತು ಹೇಗೆ ತರ್ಕಿಸುವುದು ಎಂಬುದನ್ನು ಮುಂಚಿತವಾಗಿಯೇ ನಿಶ್ಚಯಿಸಿಕೊಂಡಿರಿ. ಏಳಬಹುದಾದ ಆಕ್ಷೇಪಣೆಗಳನ್ನು ಮುಂದಾಗಿಯೇ ನಿರೀಕ್ಷಿಸಿಕೊಂಡಿರಿ, ಮತ್ತು ಅವುಗಳನ್ನು ಅವರೊಂದಿಗೆ ಹೇಗೆ ಚರ್ಚಿಸುವುದು ಎಂಬುದರ ಕುರಿತು ಆಲೋಚಿಸಿರಿ. ನೀಡಲಾಗುವ ಪ್ರಕಾಶನದಲ್ಲಿ, ಮನೆಯವನಿಗೆ ಅತ್ಯುತ್ತಮವಾಗಿ ಅನ್ವಯವಾಗುವಂತಹ ಒಂದು ಮುಖ್ಯಾಂಶವನ್ನು ಎತ್ತಿತೋರಿಸಿರಿ.
4 ಯೇಸುವಿನ ಮಾದರಿಯನ್ನು ಅನುಸರಿಸಿರಿ: ಶಾಸ್ತ್ರವಚನಗಳಿಂದ ಪರಿಣಾಮಕರವಾದ ರೀತಿಯಲ್ಲಿ ತರ್ಕಿಸುವುದರ ಅತ್ಯುತ್ತಮ ಮಾದರಿಯನ್ನು ಯೇಸು ತೋರಿಸಿದನು. ಅವನು ಹೇಗೆ ಕಲಿಸಿದನು ಎಂಬುದನ್ನು ಸವಿವರವಾಗಿ ಪರಿಶೀಲಿಸಲಿಕ್ಕಾಗಿ, ಲೂಕ 10:25-37ರಲ್ಲಿ ಕಂಡುಬರುವ ವೃತ್ತಾಂತವನ್ನು ಪರಿಗಣಿಸಿರಿ. ಈ ವಿಧಾನವನ್ನು ಗಮನಿಸಿರಿ: (1) ಜನರ ಪ್ರಶ್ನೆಗಳಿಗೆ ಉತ್ತರಿಸುವಾಗ, ಶಾಸ್ತ್ರವಚನಗಳ ಕಡೆಗೆ ಅವರ ಗಮನವನ್ನು ಸೆಳೆಯಿರಿ. (2) ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವಂತೆ ಅವರಿಗೆ ಹೇಳಿರಿ, ಮತ್ತು ಅವರು ವಿವೇಚನಾಶಕ್ತಿಯನ್ನು ತೋರಿಸುವ ಹೇಳಿಕೆಗಳನ್ನು ವ್ಯಕ್ತಪಡಿಸುವಾಗ ಅವರನ್ನು ಪ್ರಶಂಸಿಸಿರಿ. (3) ಪ್ರಶ್ನೆ ಹಾಗೂ ಶಾಸ್ತ್ರವಚನಗಳ ನಡುವಿನ ಸಂಬಂಧದ ಮೇಲೆಯೇ ಗಮನವನ್ನು ಕೇಂದ್ರೀಕರಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. (4) ಉತ್ತರದ ನಿಜವಾದ ಪ್ರಮುಖತೆಯು ಅರ್ಥಮಾಡಿಕೊಳ್ಳಲ್ಪಟ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ, ಮನಸ್ಸಿನ ಮೇಲೆ ಪ್ರಭಾವ ಬೀರುವಂತಹ ಒಂದು ದೃಷ್ಟಾಂತವನ್ನು ಉಪಯೋಗಿಸಿರಿ.—ಮಾರ್ಚ್ 1, 1986ರ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯ 27-8ನೆಯ ಪುಟಗಳಲ್ಲಿರುವ 8-10ನೆಯ ಪ್ಯಾರಗ್ರಾಫ್ಗಳನ್ನು ನೋಡಿರಿ.
5 ನಮಗೆ ಕೊಡಲ್ಪಟ್ಟಿರುವ ಸಾಧನವನ್ನು ಉಪಯೋಗಿಸುವುದು: ರೀಸನಿಂಗ್ ಫ್ರಮ್ ದ ಸ್ಕ್ರಿಪ್ಚರ್ಸ್ ಎಂಬ ಪುಸ್ತಕವು ಕ್ಷೇತ್ರ ಸೇವೆಯ ಕೈಪಿಡಿಯೋಪಾದಿ ಪ್ರಕಾಶಿಸಲ್ಪಟ್ಟಿತು. ಅದರಲ್ಲಿರುವ ಪೀಠಿಕೆಗಳು, ಸಂಭವನೀಯ ಸಂಭಾಷಣಾ ತಡೆಗಟ್ಟುಗಳಿಗೆ ಪ್ರತಿಕ್ರಿಯಿಸುವುದು, ಮತ್ತು ತರ್ಕಿಸುವ ಅಂಶಗಳು ನಮಗೆ ತಾರ್ಕಿಕ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ಸಹಾಯ ಮಾಡುತ್ತವೆ. ರೀಸನಿಂಗ್ ಪುಸ್ತಕವು ಒಂದು ಅಮೂಲ್ಯ ಸಾಧನವಾಗಿರುವುದರಿಂದ, ನಾವು ಯಾವಾಗಲೂ ಕ್ಷೇತ್ರ ಸೇವೆಗೆ ಹೋಗುವಾಗ ಅದನ್ನು ನಮ್ಮೊಂದಿಗೆ ಕೊಂಡೊಯ್ಯಬೇಕು ಮತ್ತು ಬೈಬಲ್ ಚರ್ಚೆಗಳಲ್ಲಿ ಒಳಗೂಡುವಾಗ ಅದನ್ನು ಉಪಯೋಗಿಸಲು ಹಿಂಜರಿಯಬಾರದು. ಅತ್ಯುತ್ತಮವಾದ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ಈ ಪುಸ್ತಕವನ್ನು ಹೇಗೆ ಉಪಯೋಗಿಸುವುದು ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ, ಅದರ 7-8ನೆಯ ಪುಟಗಳಲ್ಲಿರುವ ವಿಚಾರವನ್ನು ಪುನರ್ವಿಮರ್ಶಿಸಿರಿ.
6 ನಿಮ್ಮ ತರ್ಕಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು, ಸಾರುವ ಮತ್ತು ಕಲಿಸುವ ಕೆಲಸದಲ್ಲಿ ನಿಮ್ಮ ಕೌಶಲವನ್ನು ಹೆಚ್ಚಿಸುವುದು. ಇದರ ಫಲಿತಾಂಶವಾಗಿ, ನಿಮಗೂ ಶುಶ್ರೂಷೆಯಲ್ಲಿ ನೀವು ಭೇಟಿಯಾಗುವ ಜನರಿಗೂ ಅತ್ಯಧಿಕ ಆಶೀರ್ವಾದಗಳು ದೊರಕುವವು.