ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಏಪ್ರಿ.-ಜೂನ್
“ನಮ್ಮ ಮಕ್ಕಳನ್ನು ರೂಪಿಸುವುದರಲ್ಲಿ ಅರ್ಹ ಶಿಕ್ಷಕರ ಪಾತ್ರವು ತುಂಬ ಪ್ರಾಮುಖ್ಯವಾದದ್ದೆಂಬ ಮಾತನ್ನು ನೀವು ಒಪ್ಪಿಕೊಳ್ಳುವಿರೆಂಬ ಖಾತ್ರಿ ನನಗಿದೆ. ನಮ್ಮ ಶಾಲೆಗಳಲ್ಲಿನ ಕಲಿಸುವಿಕೆಯ ಗುಣಮಟ್ಟವು ಇನ್ನೂ ಉತ್ತಮಗೊಳ್ಳಬೇಕೆಂದು ನೀವು ನೆನಸುತ್ತೀರೊ? [ಜ್ಞಾನೋಕ್ತಿ 2:10, 11ನ್ನು ಓದಿರಿ.] ಎಚ್ಚರ! ಪತ್ರಿಕೆಯು, ಶಿಕ್ಷಕರ ಮಹತ್ವಪೂರ್ಣ ಪಾತ್ರವನ್ನೂ, ಅವರು ತಮ್ಮ ಕಷ್ಟಕರವಾದ ಪಂಥಾಹ್ವಾನವನ್ನು ಎದುರಿಸಲು ಹೆತ್ತವರು ಅವರಿಗೆ ಯಾವ ಸಹಾಯವನ್ನು ನೀಡಬಲ್ಲರೆಂಬುದನ್ನು ಎತ್ತಿತೋರಿಸುತ್ತದೆ.”
ಕಾವಲಿನಬುರುಜು ಮೇ15
“ದೇವರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಿದೆಯೆಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಮಗೆ ಯಾರ ಬಗ್ಗೆ ತೀರ ಕಡಿಮೆ ತಿಳಿದಿದೆಯೊ ಅಂಥ ವ್ಯಕ್ತಿಯನ್ನು ನಂಬುವುದು ಕಷ್ಟಕರವೆಂಬುದನ್ನು ನೀವು ಒಪ್ಪಿಕೊಳ್ಳುವಿರಿ. ವಾಸ್ತವದಲ್ಲಿ, ನಾವು ದೇವರನ್ನು ಹುಡುಕುವಂತೆ ಬೈಬಲ್ ನಮ್ಮನ್ನು ಉತ್ತೇಜಿಸುತ್ತದೆ. [ಅ. ಕೃತ್ಯಗಳು 17:27ನ್ನು ಓದಿರಿ.] ನಾವು ದೇವರ ಬಗ್ಗೆ ಹೆಚ್ಚು ಉತ್ತಮವಾಗಿ ಹೇಗೆ ತಿಳಿದುಕೊಳ್ಳಬಲ್ಲೆವು ಎಂಬುದನ್ನು ಈ ಲೇಖನಗಳು ತೋರಿಸುತ್ತವೆ.”
ಎಚ್ಚರ! ಏಪ್ರಿ.-ಜೂನ್
“ಕೆಲವೊಮ್ಮೆ ಅಪರಾಧಿ ಭಾವನೆಗಳು, ಒಬ್ಬ ವ್ಯಕ್ತಿಯು ತನ್ನ ಸನ್ನಿವೇಶವು ನಿರೀಕ್ಷಾಹೀನವಾಗಿದೆ ಎಂದು ನೆನಸುವಂತೆ ಮಾಡಬಹುದು. ಇಂಥ ಭಾವನೆಗಳಿಂದ ನಮಗೇನಾದರೂ ಒಳಿತಾಗುವುದೆಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಯ ನಂತರ, ಕೀರ್ತನೆ 32:3, 5ನ್ನು ಓದಿರಿ.] ಇಂಥ ಭಾವನೆಗಳು ನಾವು ಸಕಾರಾತ್ಮಕವಾಗಿ ಕ್ರಿಯೆಗೈಯುವಂತೆ ಹೇಗೆ ಪ್ರಚೋದಿಸಬಲ್ಲವು ಎಂಬುದನ್ನು ಎಚ್ಚರ! ಪತ್ರಿಕೆಯ ಈ ಸಂಚಿಕೆಯು ತಿಳಿಯಪಡಿಸುತ್ತದೆ.”
ಕಾವಲಿನಬುರುಜು ಜೂನ್1
“ಇತ್ತೀಚಿನ ಘಟನೆಗಳು, ಮುಗ್ಧರು ಅಕಾಲಿಕ ಮರಣಕ್ಕೆ ಏಕೆ ತುತ್ತಾಗುತ್ತಾರೆ ಎಂದು ಅನೇಕರು ಯೋಚಿಸುವಂತೆ ಮಾಡುತ್ತಿವೆ. ಜನರು ಏಕೆ ಸಾಯುತ್ತಾರೆಂಬುದರ ಬಗ್ಗೆ ನೀವು ಯೋಚಿಸಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ, ಮತ್ತು ಅನಂತರ ಪುಟ 7ರಲ್ಲಿರುವ ಚಾರ್ಟ್ಗೆ ತಿರುಗಿಸಿರಿ.] ಈ ಸಾಮಾನ್ಯ ಮಿಥ್ಯಾಕಲ್ಪನೆಗಳಲ್ಲಿ ಒಂದರ ಬಗ್ಗೆ ಬೈಬಲ್ ಏನು ಹೇಳುತ್ತದೆಂಬುದನ್ನು ನೀವು ನೋಡಲು ಬಯಸುತ್ತೀರೊ?” ಸಾಧ್ಯವಿರುವಲ್ಲಿ, ಅಲ್ಲಿ ಉಲ್ಲೇಖಿಸಲ್ಪಟ್ಟಿರುವ ಒಂದು ವಚನವನ್ನು ಓದಿರಿ.