ಸೇವಾ ಕೂಟದ ಶೆಡ್ಯೂಲ್
ಡಿಸೆಂಬರ್ 8ರಿಂದ ಆರಂಭವಾಗುವ ವಾರ
ಗೀತೆ 27 (221)
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಪುಟ 6ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಅಕ್ಟೋಬರ್-ಡಿಸೆಂಬರ್ ಎಚ್ಚರ! (ಪತ್ರಿಕಾ ಕಾಲಮ್‌ನಲ್ಲಿ ಮೊದಲನೆಯದ್ದು), ಮತ್ತು ಡಿಸೆಂಬರ್ 15ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿ ಒಂದೇ ಒಂದು ಪತ್ರಿಕೆಯ ಕುರಿತು ಮಾತಾಡಲ್ಪಡುವುದಾದರೂ ಎರಡೂ ಪತ್ರಿಕೆಗಳನ್ನು ಒಟ್ಟಾಗಿ ನೀಡತಕ್ಕದ್ದು.
20 ನಿ: “ನಿಜ ಕ್ರೈಸ್ತ ಐಕ್ಯ—ಹೇಗೆ ಸಾಧ್ಯ?”a ಪ್ಯಾರಗ್ರಾಫ್ 5ನ್ನು ಚರ್ಚಿಸುತ್ತಿರುವಾಗ, ನಮ್ಮ ಕ್ರೈಸ್ತ ಐಕ್ಯವನ್ನು ಎತ್ತಿತೋರಿಸುವ ಅಂತಾರಾಷ್ಟ್ರೀಯ ಅಧಿವೇಶನಗಳು, ದೇವಪ್ರಭುತ್ವಾತ್ಮಕ ನಿರ್ಮಾಣ ಯೋಜನೆಗಳು, ಅಥವಾ ದುರಂತ ಪರಿಹಾರ ಕೆಲಸವನ್ನು ಒಳಗೊಂಡ ವೈಯಕ್ತಿಕ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ.
15 ನಿ: “2004ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ.” ಶಾಲಾ ಮೇಲ್ವಿಚಾರಕನಿಂದ ಭಾಷಣ. ಅಕ್ಟೋಬರ್ 2003ರ ನಮ್ಮ ರಾಜ್ಯದ ಸೇವೆಯ ಪುರವಣಿಯ ಕುರಿತ ಹೇಳಿಕೆಗಳನ್ನು ಸೇರಿಸಿಕೊಳ್ಳಿ.
ಗೀತೆ 5 (46) ಮತ್ತು ಸಮಾಪ್ತಿಯ ಪ್ರಾರ್ಥನೆ.
ಡಿಸೆಂಬರ್ 15ರಿಂದ ಆರಂಭವಾಗುವ ವಾರ
ಗೀತೆ 4 (43)
10 ನಿ: ಸ್ಥಳಿಕ ಪ್ರಕಟನೆಗಳು. ಡಿಸೆಂಬರ್ 29ರ ವಾರಕ್ಕಾಗಿರುವ ಸೇವಾ ಕೂಟದ ಚರ್ಚೆಗಾಗಿ ರಕ್ತಪೂರಣಕ್ಕೆ ಬದಲಿಯಾದ ಆರೋಗ್ಯಾರೈಕೆ—ರೋಗಿಯ ಅಗತ್ಯಗಳು ಮತ್ತು ಹಕ್ಕುಗಳನ್ನು ಪೂರೈಸುವುದು (ಇಂಗ್ಲಿಷ್) ಎಂಬ ವಿಡಿಯೋವನ್ನು ನೋಡುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ. “ದಯವಿಟ್ಟು ತಡಮಾಡದೆ ಭೇಟಿಮಾಡಿರಿ” ಎಂಬ ಚೌಕವನ್ನು ಚರ್ಚಿಸಿರಿ. ಲಭ್ಯವಿರುವುದಾದರೆ S-70 ಫಾರ್ಮ್‌ನ ಒಂದು ಉದಾಹರಣೆಯನ್ನು ತೋರಿಸಿರಿ. ಡಿಸೆಂಬರ್ 25 ಮತ್ತು ಜನವರಿ 1ಕ್ಕಾಗಿರುವ ವಿಶೇಷ ಕ್ಷೇತ್ರ ಸೇವಾ ಏರ್ಪಾಡುಗಳ ಕುರಿತು ಸಂಕ್ಷಿಪ್ತವಾಗಿ ತಿಳಿಸಿರಿ.
15 ನಿ: ವೈಯಕ್ತಿಕ ಅಧ್ಯಯನ—ಆರಾಧನೆಯ ಒಂದು ಭಾಗ. ಅಕ್ಟೋಬರ್ 1, 2000, ಕಾವಲಿನಬುರುಜು ಪತ್ರಿಕೆಯ 14-15ನೇ ಪುಟಗಳ 6-10ನೇ ಪ್ಯಾರಗ್ರಾಫ್‌ಗಳ ಮೇಲಾಧಾರಿತವಾದ ಭಾಷಣ.
20 ನಿ: “‘ಯೋಗ್ಯ ಪ್ರವೃತ್ತಿಯುಳ್ಳ’ವರಿಗೆ ಸಹಾಯಮಾಡಿರಿ.”b ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ. ಪುನರ್ಭೇಟಿಗಳನ್ನು ಮಾಡಲಿಕ್ಕಾಗಿ ಮಾರ್ಚ್ 1997 ನಮ್ಮ ರಾಜ್ಯದ ಸೇವೆಯ 3ನೇ ಪುಟದಲ್ಲಿ ಕೊಡಲ್ಪಟ್ಟಿರುವ ಸಲಹೆಗಳ ಪಟ್ಟಿಯನ್ನು ಪುನರ್ವಿಮರ್ಶಿಸಿರಿ.
ಗೀತೆ 21 (191) ಮತ್ತು ಸಮಾಪ್ತಿಯ ಪ್ರಾರ್ಥನೆ.
ಡಿಸೆಂಬರ್ 22ರಿಂದ ಆರಂಭವಾಗುವ ವಾರ
ಗೀತೆ 3 (32)
12 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ. ಪುಟ 6ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಅಕ್ಟೋಬರ್-ಡಿಸೆಂಬರ್ ಎಚ್ಚರ! (ಪತ್ರಿಕಾ ಕಾಲಮ್‌ನಲ್ಲಿ ಮೂರನೆಯದ್ದು), ಮತ್ತು ಜನವರಿ 1ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಮುಂದಿನ ವಾರದಲ್ಲಿರುವ ವಿಶೇಷ ಸೇವಾ ಕೂಟದ ಕುರಿತು ಎಲ್ಲರಿಗೂ ಜ್ಞಾಪಕ ಹುಟ್ಟಿಸಿರಿ. ಇದರಲ್ಲಿ ನಾವು, ರೋಗಿಯ ಅಗತ್ಯಗಳು ಮತ್ತು ಹಕ್ಕುಗಳು ವಿಡಿಯೋವನ್ನು ಪುನರ್ವಿಮರ್ಶಿಸುವೆವು ಮತ್ತು ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್/ರಿಲೀಸ್ ಕಾರ್ಡ್‌ನ ಕುರಿತು ಚರ್ಚಿಸುವೆವು ಮತ್ತು ಅದನ್ನು ವಿತರಿಸುವೆವು.
15 ನಿ: ಸ್ಥಳಿಕ ಅಗತ್ಯಗಳು.
18 ನಿ: “ಯೋಗ್ಯರಾದವರನ್ನು ಹುಡುಕುವುದು.”c ವಿಷಯಭಾಗವನ್ನು ಸ್ಥಳಿಕ ವಿಷಯಗಳಿಗೆ ಅನ್ವಯಿಸಿರಿ. ಮನೆಯವರು ಸಾಮಾನ್ಯವಾಗಿ ಯಾವಾಗ ಮನೆಯಲ್ಲಿರುವುದು ಹೆಚ್ಚು ಸಂಭಾವ್ಯ? ಅಪರಾಹ್ನದ ಅಥವಾ ಸಾಯಂಕಾಲದ ಸಾಕ್ಷಿಕಾರ್ಯದಲ್ಲಿ ತೊಡಗುವ ಮೂಲಕ ಯಾವ ಫಲಿತಾಂಶಗಳನ್ನು ಗಳಿಸಲಾಗಿದೆ? ಮನೆಯಲ್ಲಿ ಅಪರೂಪಕ್ಕೆ ಕಂಡುಬರುವ ಜನರನ್ನು ಸಂಪರ್ಕಿಸಲಿಕ್ಕಾಗಿ ಯಾವ ವಿಧಾನಗಳನ್ನು ಉಪಯೋಗಿಸಬಹುದು?
ಗೀತೆ 4 (43) ಮತ್ತು ಸಮಾಪ್ತಿಯ ಪ್ರಾರ್ಥನೆ.
ಡಿಸೆಂಬರ್ 29ರಿಂದ ಆರಂಭವಾಗುವ ವಾರ
ಗೀತೆ 23 (200)
5 ನಿ: ಸ್ಥಳಿಕ ಪ್ರಕಟನೆಗಳು. ಡಿಸೆಂಬರ್ ತಿಂಗಳಿಗಾಗಿರುವ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಎಲ್ಲಾ ಪ್ರಚಾರಕರನ್ನು ಪ್ರೋತ್ಸಾಹಿಸಿರಿ. ಜನವರಿ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯ ಕುರಿತು ತಿಳಿಸಿರಿ.
17 ನಿ: “ಒಂದು ಪ್ರಾಮುಖ್ಯ ವೈದ್ಯಕೀಯ ರೂಢಿಯನ್ನು ಎತ್ತಿತೋರಿಸುವ ವಿಡಿಯೋ.” ಒಬ್ಬ ಸಮರ್ಥ ಹಿರಿಯನಿಂದ ನಿರ್ವಹಿಸಲ್ಪಡತಕ್ಕದ್ದು. ಅಪೊಸ್ತಲರ ಕೃತ್ಯಗಳು 15:28, 29ನ್ನು ಓದಿ, ಮತ್ತು ಕ್ರೈಸ್ತರು ಏಕೆ ರಕ್ತಪೂರಣಗಳನ್ನು ನಿರಾಕರಿಸುತ್ತಾರೆ ಎಂಬುದಕ್ಕೆ ಮುಖ್ಯ ಕಾರಣವು ರಕ್ತದ ಪಾವಿತ್ರ್ಯದ ಕುರಿತ ದೇವರ ನಿಯಮವನ್ನು ಅವರು ಗೌರವಿಸುವುದರಿಂದಲೇ ಎಂಬುದನ್ನು ಸಂಕ್ಷಿಪ್ತವಾಗಿ ಒತ್ತಿಹೇಳಿರಿ. ನಂತರ, ಲೇಖನದಲ್ಲಿ ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸುತ್ತಾ, ರೋಗಿಯ ಅಗತ್ಯಗಳು ಮತ್ತು ಹಕ್ಕುಗಳು ವಿಡಿಯೋವಿನ ಚರ್ಚೆಯನ್ನು ಕೂಡಲೆ ಆರಂಭಿಸಿರಿ. ಕೊನೆಯ ಪ್ಯಾರಗ್ರಾಫನ್ನು ಓದುವ ಮೂಲಕ ಸಮಾಪ್ತಿಗೊಳಿಸಿ.
23 ನಿ: ವೈದ್ಯಕೀಯ ಪಂಥಾಹ್ವಾನಗಳನ್ನು ದೃಢಭರವಸೆಯೊಂದಿಗೆ ಎದುರಿಸುವುದು. ಬ್ರಾಂಚ್ ಆಫೀಸ್‌ನಿಂದ ಒದಗಿಸಲ್ಪಟ್ಟ ಹೊರಮೇರೆಯನ್ನು ಉಪಯೋಗಿಸುತ್ತಾ, ಒಬ್ಬ ಸಮರ್ಥ ಹಿರಿಯನಿಂದ ಭಾಷಣ. “ರಕ್ತವನ್ನು ವಿಸರ್ಜಿಸುವುದರಲ್ಲಿ ನಮಗೆ ಸಹಾಯಮಾಡುವ ಒದಗಿಸುವಿಕೆಗಳು” ಎಂಬ ಚೌಕದಲ್ಲಿರುವ ಮುಖ್ಯ ಅಂಶಗಳನ್ನು ಪುನರ್ವಿಮರ್ಶಿಸಿರಿ.
ಗೀತೆ 24 (185) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 5ರಿಂದ ಆರಂಭವಾಗುವ ವಾರ
ಗೀತೆ 11 (85)
5 ನಿ: ಸ್ಥಳಿಕ ಪ್ರಕಟನೆಗಳು.
20 ನಿ: ನಿಮ್ಮ ಪ್ರಯಾಸವು ನಿಷ್ಫಲವಾಗುವದಿಲ್ಲ. (1 ಕೊರಿಂ. 15:58) ಸಭಿಕರೊಂದಿಗಿನ ಚರ್ಚೆ. ಅನೇಕ ವರುಷಗಳಿಗೆ ಕ್ರಿಯಾಶೀಲರಾಗಿದ್ದ ಪ್ರಚಾರಕರು, ಆ ಪ್ರಾರಂಭಿಕ ದಿನಗಳ ಸಾಕ್ಷಿಕಾರ್ಯದ ಕುರಿತು ವಿವರಣೆಗಳನ್ನು ನೀಡುವಂತೆ ಅವರೊಂದಿಗೆ ಮುಂಚಿತವಾಗಿಯೇ ಏರ್ಪಾಡು ಮಾಡಿರಿ. ಆಗ ಸಭೆಯೊಂದಿಗೆ ಎಷ್ಟು ಮಂದಿ ಜೊತೆಗೂಡಿದ್ದರು? ಸಭೆಗೆ ಎಷ್ಟು ಟೆರಿಟೊರಿ ನೇಮಿಸಲ್ಪಟ್ಟಿತ್ತು? ಜನರು ರಾಜ್ಯ ಸಂದೇಶಕ್ಕೆ ಹೇಗೆ ಪ್ರತಿಕ್ರಿಯಿಸಿದರು? ಯಾವ ರೀತಿಯ ವಿರೋಧವನ್ನು ನೀವು ಎದುರಿಸಿದಿರಿ? ಈ ಎಲ್ಲಾ ವರ್ಷಗಳಲ್ಲಿ ರಾಜ್ಯ ಕೆಲಸವು ಸ್ಥಳಿಕ ಕ್ಷೇತ್ರದಲ್ಲಿ ಹೇಗೆ ಬೆಳೆದಿದೆ?
20 ನಿ: ಯೆಹೋವನ ಆರಾಧನೆಯು ನಮ್ಮ ಜೀವನಗಳನ್ನು ಸಮೃದ್ಧಗೊಳಿಸುವುದು ಹೇಗೆ? ಸಭಿಕರೊಂದಿಗಿನ ಚರ್ಚೆ. ಒಂದು ಸಂತೋಷವುಳ್ಳ, ಅರ್ಥಭರಿತ ಜೀವನಕ್ಕೆ ಕೀಲಿ ಕೈ ಸತ್ಯ ಆರಾಧನೆಯೇ ಆಗಿದೆ. (1) ಜೀವನದ ಸಮಸ್ಯೆಗಳು ಮತ್ತು ಚಿಂತೆಗಳನ್ನು ನಿಭಾಯಿಸುವಂತೆ ಅದು ಸಹಾಯಮಾಡುತ್ತದೆ. (ಫಿಲಿ. 4:6, 7) (2) ದೈವಿಕ ಗುಣಗಳನ್ನು ಬೆಳೆಸಿಕೊಳ್ಳುವಂತೆ ಅದು ನಮ್ಮನ್ನು ಪ್ರೋತ್ಸಾಹಿಸುತ್ತದೆ. (2 ಪೇತ್ರ 1:5-8) (3) ನಮ್ಮ ಸಮಯ ಮತ್ತು ಸಂಪನ್ಮೂಲಗಳನ್ನು ಅತಿ ಸಾರ್ಥಕ ರೀತಿಯಲ್ಲಿ ಉಪಯೋಗಿಸುವಂತೆ ಅದು ಸಹಾಯಮಾಡುವುದು. (1 ತಿಮೊ. 6:17-19) (4) ಅದು ಭವಿಷ್ಯತ್ತಿಗಾಗಿ ನಿಶ್ಚಿತ ನಿರೀಕ್ಷೆಯನ್ನು ಕೊಡುತ್ತದೆ. (2 ಪೇತ್ರ 3:13) (5) ಅದು ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ನಮಗೆ ಸಾಧ್ಯಗೊಳಿಸುತ್ತದೆ. (ಯಾಕೋ. 4:8) ಯೆಹೋವನ ಕುರಿತು ತಿಳಿದಿರದ ಅಥವಾ ಆತನನ್ನು ಸೇವಿಸದವರ ಮಧ್ಯೆ ಈ ವಿಷಯಗಳು ಹೇಗೆ ಕೊರತೆಪಡುತ್ತವೆ ಎಂಬುದನ್ನು ವ್ಯತ್ಯಾಸಪಡಿಸಿ ತೋರಿಸಿ.
ಗೀತೆ 26 (212) ಮತ್ತು ಸಮಾಪ್ತಿಯ ಪ್ರಾರ್ಥನೆ.
[ಅಧ್ಯಯನ ಪ್ರಶ್ನೆಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.