ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 4/05 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2005 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಏಪ್ರಿಲ್‌ 11ರಿಂದ ಆರಂಭವಾಗುವ ವಾರ
  • ಏಪ್ರಿಲ್‌ 18ರಿಂದ ಆರಂಭವಾಗುವ ವಾರ
  • ಏಪ್ರಿಲ್‌ 25ರಿಂದ ಆರಂಭವಾಗುವ ವಾರ
  • ಮೇ 2ರಿಂದ ಆರಂಭವಾಗುವ ವಾರ
2005 ನಮ್ಮ ರಾಜ್ಯದ ಸೇವೆ
km 4/05 ಪು. 2

ಸೇವಾ ಕೂಟದ ಶೆಡ್ಯೂಲ್‌

ಸೂಚನೆ: ನಮ್ಮ ರಾಜ್ಯದ ಸೇವೆಯು, ಅಧಿವೇಶನದ ತಿಂಗಳುಗಳಲ್ಲಿ ಪ್ರತಿಯೊಂದು ವಾರಕ್ಕಾಗಿ ಒಂದು ಸೇವಾ ಕೂಟವನ್ನು ಶೆಡ್ಯೂಲ್‌ ಮಾಡುವುದು. “ದೈವಿಕ ವಿಧೇಯತೆ” ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು ಅನುಮತಿಸುವಂತೆ ಅಗತ್ಯವಿರುವ ಹೊಂದಾಣಿಕೆಗಳನ್ನು ಸಭೆಗಳು ಮಾಡಿಕೊಳ್ಳಬಹುದು. ಸೂಕ್ತವಾಗಿರುವಲ್ಲಿ, ಅಧಿವೇಶನಕ್ಕೆ ಹಾಜರಾಗುವ ಮುಂಚಿನ ಸೇವಾ ಕೂಟದಲ್ಲಿ, ಈ ತಿಂಗಳ ಪುರವಣಿಯಲ್ಲಿರುವ ಸ್ಥಳಿಕವಾಗಿ ಅನ್ವಯಿಸುವ ನಿರ್ದಿಷ್ಟ ಸಲಹೆಗಳನ್ನು ಪುನರಾವರ್ತಿಸಲು 15 ನಿಮಿಷಗಳನ್ನು ಉಪಯೋಗಿಸಿರಿ. ಅಧಿವೇಶನ ಮುಗಿದ ಒಂದು ಅಥವಾ ಎರಡು ತಿಂಗಳಿನ ನಂತರದ ಒಂದು ಸೇವಾ ಕೂಟದಲ್ಲಿ (ಸ್ಥಳಿಕ ಅಗತ್ಯಗಳು ಎಂಬ ಭಾಗವನ್ನು ಉಪಯೋಗಿಸಬಹುದು) 15ರಿಂದ 20 ನಿಮಿಷಗಳನ್ನು, ಕ್ಷೇತ್ರ ಸೇವೆಗೆ ಉಪಯುಕ್ತವಾಗಿದೆ ಎಂದು ಪ್ರಚಾರಕರು ಕಂಡುಕೊಂಡ ಅಧಿವೇಶನ ಕಾರ್ಯಕ್ರಮದ ಮುಖ್ಯಾಂಶಗಳನ್ನು ಪುನರ್ವಿಮರ್ಶಿಸಲಿಕ್ಕಾಗಿ ಬದಿಗಿರಿಸಿರಿ. ಅಧಿವೇಶನದಲ್ಲಿ ಕಲಿತ ವಿಷಯಗಳನ್ನು ನಾವು ಹೇಗೆ ಅನ್ವಯಿಸಿಕೊಂಡಿದ್ದೇವೆ ಮತ್ತು ಅವು ನಮ್ಮ ಶುಶ್ರೂಷೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಹೇಗೆ ಸಹಾಯಮಾಡಿವೆ ಎಂಬುದನ್ನು ವಿವರಿಸಲು, ಒಂದು ವಿಶೇಷ ಸೇವಾ ಕೂಟದ ಭಾಗವು ನಮಗೆ ಅವಕಾಶವನ್ನು ಒದಗಿಸಲಿದೆ.

ಏಪ್ರಿಲ್‌ 11ರಿಂದ ಆರಂಭವಾಗುವ ವಾರ

ಗೀತೆ 4

10 ನಿ:  ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಏಪ್ರಿಲ್‌-ಜೂನ್‌ ಎಚ್ಚರ! ಮತ್ತು ಏಪ್ರಿಲ್‌ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಲಿಕ್ಕಾಗಿ ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವುದಾದರೆ) ಉಪಯೋಗಿಸಿರಿ. ಸೂಕ್ತವಾಗಿರುವ ಇತರ ನಿರೂಪಣೆಗಳನ್ನೂ ಉಪಯೋಗಿಸಬಹುದು. ಒಂದು ಪ್ರತ್ಯಕ್ಷಾಭಿನಯದಲ್ಲಿ, ಬೀದಿಸಾಕ್ಷಿ ಕಾರ್ಯದಲ್ಲಿ ಒಳಗೂಡಿರುವ ದೃಶ್ಯವನ್ನು ತೋರಿಸಿರಿ.

15 ನಿ:  “ಸಾರುವುದರಲ್ಲಿ ಪಟ್ಟುಹಿಡಿದು ಮುಂದುವರಿಯಿರಿ.”a ಸಮಯ ಅನುಮತಿಸುವುದಾದರೆ, ಉಲ್ಲೇಖಿಸಲ್ಪಟ್ಟಿರುವ ವಚನಗಳ ಕುರಿತು ಹೇಳಿಕೆಯನ್ನು ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ.

20 ನಿ:  “ಹೊಸ ಬ್ರೋಷರನ್ನು ವಿತರಿಸಲು ವಿಶೇಷ ಕಾರ್ಯಾಚರಣೆ.”b ಸೇವಾ ಮೇಲ್ವಿಚಾರಕನಿಂದ ನಿರ್ವಹಿಸಲ್ಪಡಬೇಕು. ಸೂಚಿತ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸುವಂತೆ ಏರ್ಪಡಿಸಿರಿ. ಒಂದು ಪ್ರತ್ಯಕ್ಷಾಭಿನಯದಲ್ಲಿ, ಮನೆಯವರು ಕಡಿಮೆ ಆಸಕ್ತಿಯನ್ನು ತೋರಿಸುತ್ತಾರೆ ಮತ್ತು ಅವರಿಗೆ ಬ್ರೋಷರಿನ ಬದಲಿಗೆ ಟ್ರ್ಯಾಕ್ಟ್‌ ನೀಡಲಾಗುತ್ತದೆ.

ಗೀತೆ 219 ಮತ್ತು ಸಮಾಪ್ತಿಯ ಪ್ರಾರ್ಥನೆ.

ಏಪ್ರಿಲ್‌ 18ರಿಂದ ಆರಂಭವಾಗುವ ವಾರ

ಗೀತೆ 127

10 ನಿ:  ಸ್ಥಳಿಕ ಪ್ರಕಟನೆಗಳು. ಹೊಸ ಬ್ರೋಷರನ್ನು ವಿತರಿಸಲು ಏರ್ಪಡಿಸಿರುವ ವಿಶೇಷ ಕಾರ್ಯಾಚರಣೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿರಿ. ಸ್ಥಳಿಕ ಕ್ಷೇತ್ರದಲ್ಲಿ ಪ್ರತಿಫಲದಾಯಕವಾಗಿರುವ ನಿರೂಪಣೆಯನ್ನು ಉಪಯೋಗಿಸಿ ಹೊಸ ಬ್ರೋಷರನ್ನು ಹೇಗೆ ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.

20 ನಿ:  “ಪ್ರಗತಿಪರ ಬೈಬಲ್‌ ಅಧ್ಯಯನಗಳನ್ನು ನಡೆಸುವುದು​—⁠ಭಾಗ 8.”c ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯವನ್ನು ಸೇರಿಸಿರಿ. ಇದರಲ್ಲಿ, ಒಬ್ಬ ಪ್ರಚಾರಕನು ಹೊಸ ಬೈಬಲ್‌ ವಿದ್ಯಾರ್ಥಿಗೆ ಯೆಹೋವನ ಸಾಕ್ಷಿಗಳು​—⁠ಅವರು ಯಾರು? ಅವರು ಏನನ್ನು ನಂಬುತ್ತಾರೆ? ಎಂಬ ಬ್ರೋಷರನ್ನು ನೀಡುತ್ತಾನೆ. ಅವನು ಆ ಬ್ರೋಷರಿನ 20ನೇ ಪುಟದಲ್ಲಿರುವ ಚಿತ್ರದ ಕಡೆಗೆ ವಿದ್ಯಾರ್ಥಿಯ ಗಮನವನ್ನು ಸೆಳೆಯುತ್ತಾನೆ ಹಾಗೂ ಸಂಕ್ಷಿಪ್ತವಾಗಿ ಸಾರ್ವಜನಿಕ ಕೂಟದ ಬಗ್ಗೆ ವಿವರಿಸುತ್ತಾನೆ. ಮತ್ತು ಮುಂದಿನ ಸಾರ್ವಜನಿಕ ಭಾಷಣದ ಶೀರ್ಷಿಕೆಯನ್ನು ತಿಳಿಸುತ್ತಾ, ಅದಕ್ಕೆ ಹಾಜರಾಗುವಂತೆ ವಿದ್ಯಾರ್ಥಿಯನ್ನು ಆಮಂತ್ರಿಸುತ್ತಾನೆ.

15 ನಿ:  ಸ್ಥಳಿಕ ಅನುಭವಗಳು. ಹೊಸ ಬ್ರೋಷರನ್ನು ವಿತರಿಸಲು ಏರ್ಪಡಿಸಲಾದ ವಿಶೇಷ ಕಾರ್ಯಾಚರಣೆಯಲ್ಲಿ ಇಷ್ಟರ ತನಕ ದೊರೆತ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ. ಗಮನಾರ್ಹವಾದ ಅನುಭವಗಳನ್ನು ಪುನರಭಿನಯಿಸುವಂತೆ ಮುಂಚಿತವಾಗಿಯೇ ಏರ್ಪಡಿಸಿರಿ. ಒಂದುವೇಳೆ ಸಭೆಯಲ್ಲಿ ಬ್ರೋಷರಿನ ಸರಬರಾಯಿ ತೀರ ಕಡಿಮೆಯಾದರೆ, ಯಾರ ಬಳಿ ಹೆಚ್ಚಿನ ಪ್ರತಿಗಳಿವೆಯೊ ಅವರು ಅವನ್ನು ಸಾಹಿತ್ಯ ಕೌಂಟರಿಗೆ ಹಿಂದಿರುಗಿಸುವಂತೆ ವಿನಂತಿಸಿರಿ.

ಗೀತೆ 169 ಮತ್ತು ಸಮಾಪ್ತಿಯ ಪ್ರಾರ್ಥನೆ.

ಏಪ್ರಿಲ್‌ 25ರಿಂದ ಆರಂಭವಾಗುವ ವಾರ

ಗೀತೆ 111

15 ನಿ:  ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿಯನ್ನು ಮತ್ತು ಬ್ರಾಂಚಿಗೆ ಕಳುಹಿಸಿದ ದಾನದ ಅಂಗೀಕಾರ ಪತ್ರಗಳನ್ನು ಓದಿ ಹೇಳಿರಿ. ಏಪ್ರಿಲ್‌ ತಿಂಗಳಿಗಾಗಿರುವ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ. ಏಪ್ರಿಲ್‌-ಜೂನ್‌ ಎಚ್ಚರ! ಮತ್ತು ಮೇ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಲಿಕ್ಕಾಗಿ ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವುದಾದರೆ) ಉಪಯೋಗಿಸಿರಿ. ಸೂಕ್ತವಾಗಿರುವ ಇತರ ನಿರೂಪಣೆಗಳನ್ನೂ ಉಪಯೋಗಿಸಬಹುದು. ಒಂದು ಪ್ರತ್ಯಕ್ಷಾಭಿನಯದಲ್ಲಿ, “ನನಗೆ ಅಭಿರುಚಿ ಇಲ್ಲ” (ಬೈಬಲ್‌ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯ, ಪು. 8ನ್ನು ನೋಡಿ.) ಎಂಬ ಸಂಭಾಷಣಾ ತಡೆಗಟ್ಟನ್ನು ಹೇಗೆ ನಿಭಾಯಿಸುವುದು ಎಂಬುದನ್ನು ತೋರಿಸಿರಿ. ನಿಮ್ಮ ಕ್ಷೇತ್ರದಲ್ಲಿರುವ ಜನರಿಗೆ ಹೆಚ್ಚು ಆಸಕ್ತಿಕರವಾಗಿರುವ ಲೇಖನಗಳನ್ನು ತೋರಿಸಿರಿ.

30 ನಿ:  “ಮಹಾಸಭೆಯಲ್ಲಿ ಯೆಹೋವನನ್ನು ಕೊಂಡಾಡಿರಿ.”d ಸಭಾ ಸೆಕ್ರಿಟರಿಯಿಂದ ನಿರ್ವಹಿಸಲ್ಪಡಬೇಕು. ಸಭೆಯ ನೇಮಿತ ಅಧಿವೇಶನದ ಕುರಿತು ತಿಳಿಸಿರಿ. ಸಂಖ್ಯೆ ಹಾಕಿರುವ ಪ್ಯಾರಗ್ರಾಫ್‌ಗಳನ್ನು, ಕಾವಲಿನಬುರುಜು ಅಧ್ಯಯನದ ರೀತಿಯಲ್ಲಿ ನಿರ್ವಹಿಸಿರಿ. ಒಬ್ಬ ನೇಮಿತ ಓದುಗನಿಂದ ಪ್ಯಾರಗ್ರಾಫ್‌ಗಳನ್ನು ಅನ್ನು ಓದಿಸಿರಿ. “ಜಿಲ್ಲಾ ಅಧಿವೇಶನದ ಮರುಜ್ಞಾಪನಗಳು” ಎಂಬ ಚೌಕವನ್ನು ಚರ್ಚಿಸಿರಿ.

ಗೀತೆ 8 ಮತ್ತು ಸಮಾಪ್ತಿಯ ಪ್ರಾರ್ಥನೆ.

ಮೇ 2ರಿಂದ ಆರಂಭವಾಗುವ ವಾರ

ಗೀತೆ 148

10 ನಿ:  ಸ್ಥಳಿಕ ಪ್ರಕಟನೆಗಳು. “ಎಚ್ಚರಿಕೆಯಿಂದಿರಿ! ಬ್ರೋಷರನ್ನು ಅಧ್ಯಯನಮಾಡುವುದು” ಎಂಬ ಪುಟ 6ರಲ್ಲಿರುವ ಲೇಖನವನ್ನು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸಿರಿ. ಈ ಲೇಖನದಲ್ಲಿ ಬ್ರೋಷರಿನ ಪರಿಗಣನೆಗಾಗಿರುವ ಶೆಡ್ಯೂಲ್‌ ನೀಡಲ್ಪಟ್ಟಿದೆ ಎಂಬುದನ್ನು ತಿಳಿಸಿರಿ. ಮೇ 23ನೇ ವಾರದಿಂದ ಆರಂಭಿಸುತ್ತಾ, ಪ್ರತಿ ವಾರದ ಅಧ್ಯಯನಕ್ಕಾಗಿ ಎಲ್ಲರೂ ಉತ್ತಮವಾಗಿ ತಯಾರಿಸುವಂತೆ ಮತ್ತು ಭಾಗವಹಿಸುವಂತೆ ಉತ್ತೇಜಿಸಿರಿ.

20 ನಿ:  ಹೊಸ ಬ್ರೋಷರನ್ನು ಉಪಯೋಗಿಸುತ್ತಾ ಆಸಕ್ತಿಯನ್ನು ಬೆಳೆಸಿರಿ. ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಸೇವಾ ಮೇಲ್ವಿಚಾರಕನಿಂದ ನಿರ್ವಹಿಸಲ್ಪಡಬೇಕಾದ ಭಾಗ. ಎಚ್ಚರಿಕೆಯಿಂದಿರಿ! ಬ್ರೋಷರಿನಲ್ಲಿರುವ ವಿವಿಧ ಚೌಕಗಳನ್ನು ಎತ್ತಿತೋರಿಸಿರಿ ಮತ್ತು ಪುನರ್ಭೇಟಿಗಳನ್ನು ಮಾಡುವಾಗ ಅವುಗಳನ್ನು ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ಚರ್ಚಿಸಿರಿ. ಸಭಿಕರು ಸ್ಥಳಿಕ ಕ್ಷೇತ್ರದಲ್ಲಿರುವ ಜನರಿಗೆ ಬಹಳ ಆಸಕ್ತಿಕರವಾಗಿರಬಹುದು ಎಂದು ನೆನಸುವ ಚೌಕಗಳ ಕುರಿತು ಹೇಳಿಕೆ ನೀಡುವಂತೆ ತಿಳಿಸಿರಿ. ಒಂದು ಚೌಕವನ್ನು ಉಪಯೋಗಿಸುತ್ತಾ ಮಾಡಲ್ಪಡುವ ಒಂದು ಪುನರ್ಭೇಟಿಯನ್ನು ಪ್ರತ್ಯಕ್ಷಾಭಿನಯಿಸಿರಿ. ಪ್ರಚಾರಕನು, ಮುಂದಿನ ಭೇಟಿಯಲ್ಲಿ ಚರ್ಚಿಸಲಿಕ್ಕಾಗಿ ಮನೆಯವರ ಗಮನವನ್ನು ಇನ್ನೊಂದು ಚೌಕದ ಕಡೆಗೆ ತಿರುಗಿಸಿ ತನ್ನ ನಿರೂಪಣೆಯನ್ನು ಮುಕ್ತಾಯಗೊಳಿಸುತ್ತಾನೆ. ಆ ಮುಂದಿನ ಭೇಟಿಯ ಕುರಿತಾದ ಪ್ರತ್ಯಕ್ಷಾಭಿನಯವು ಮುಂದಿನ ಸೇವಾ ಕೂಟದಲ್ಲಿ ತೋರಿಸಲ್ಪಡುವುದು.

15 ನಿ:  “ಪರೋಪಕಾರವನ್ನು ಮಾಡಿರಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿರಿ.”e ಲೇಖನದ ಸ್ಥಳಿಕ ಅನ್ವಯವನ್ನು ಮಾಡಿರಿ. ಇತರರಿಗೆ ಸಹಾಯಮಾಡಸಾಧ್ಯವಿರುವ ಪ್ರಾಯೋಗಿಕ ವಿಧಗಳ ಕುರಿತು ತಿಳಿಸಿರಿ.

ಗೀತೆ 47 ಮತ್ತು ಸಮಾಪ್ತಿಯ ಪ್ರಾರ್ಥನೆ.

[ಪಾದಟಿಪ್ಪಣಿಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.

d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.

e ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ