ಸೇವಾ ಕೂಟದ ಶೆಡ್ಯೂಲ್
ಜುಲೈ 11ರಿಂದ ಆರಂಭವಾಗುವ ವಾರ
ಗೀತೆ 49
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಜುಲೈ-ಸೆಪ್ಟೆಂಬರ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಜುಲೈ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಲಿಕ್ಕಾಗಿ ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವುದಾದರೆ) ಉಪಯೋಗಿಸಿರಿ. ಇತರ ಪ್ರಾಯೋಗಿಕ ನಿರೂಪಣೆಗಳನ್ನು ಉಪಯೋಗಿಸಬಹುದು. ಪ್ರತಿಯೊಂದು ನಿರೂಪಣೆಯಲ್ಲಿ, “ನಾನು ಕಾರ್ಯಮಗ್ನನು” ಎಂಬ ಸಂಭವನೀಯ ಸಂಭಾಷಣಾ ತಡೆಗಟ್ಟನ್ನು ಹೇಗೆ ನಿಭಾಯಿಸಬಹುದು ಎಂಬ ವಿವಿಧ ವಿಧಾನವನ್ನು ಪ್ರತ್ಯಕ್ಷಾಭಿನಯಿಸಿರಿ.—ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯ 11-12ನೆಯ ಪುಟಗಳನ್ನು ನೋಡಿರಿ.
15 ನಿ: ಸ್ಥಳಿಕ ಅಗತ್ಯಗಳು.
20 ನಿ: “ಸಾಧ್ಯವಿರುವಷ್ಟು ಹೆಚ್ಚು ಜನರನ್ನು ತಲಪುವುದು.”a ಪ್ಯಾರಗ್ರಾಫ್ 5ನ್ನು ಚರ್ಚಿಸುವಾಗ, ಜೂನ್ 2005ರ ನಮ್ಮ ರಾಜ್ಯದ ಸೇವೆಯ ಪುಟ 8ರಲ್ಲಿರುವ ಸ್ಥಳಿಕ ಕ್ಷೇತ್ರಕ್ಕೆ ಅನ್ವಯಿಸುವ ಸಲಹೆಗಳನ್ನು ಪುನರ್ವಿಮರ್ಶಿಸಿರಿ.
ಗೀತೆ 88 ಮತ್ತು ಸಮಾಪ್ತಿಯ ಪ್ರಾರ್ಥನೆ.
ಜುಲೈ 18ರಿಂದ ಆರಂಭವಾಗುವ ವಾರ
ಗೀತೆ 173
10 ನಿ: ಸ್ಥಳಿಕ ಪ್ರಕಟನೆಗಳು. ಇಸವಿ 2000, ಆಗಸ್ಟ್ 15ರ ಕಾವಲಿನಬುರುಜು ಪತ್ರಿಕೆಯ ಪುಟ 32ನ್ನು ಸಂಕ್ಷಿಪ್ತವಾಗಿ ಪರಿಗಣಿಸಿರಿ. ರಜೆಯಲ್ಲಿರುವಾಗಲೂ ಅಥವಾ ನಮ್ಮ ದೈನಂದಿನ ಕಾರ್ಯತಖ್ತೆಯಿಂದ ದೂರವಿರುವ ಸಮಯದಲ್ಲಿಯೂ ಕ್ರಮವಾಗಿ ಬೈಬಲ್ ಓದುವ ಕಾರ್ಯಕ್ರಮವನ್ನು ಇಟ್ಟುಕೊಳ್ಳುವುದರಿಂದ ಸಿಗುವ ಪ್ರಯೋಜನವನ್ನು ಎತ್ತಿತೋರಿಸಿರಿ.
15 ನಿ: “ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು—ಭಾಗ 11.”b ಅಧ್ಯಯನ ನಡೆಸುವವನು ಮತ್ತು ಒಬ್ಬ ಹೊಸ ಪ್ರಚಾರಕನು ಒಟ್ಟಿಗೆ ಪುನರ್ಭೇಟಿಗಾಗಿ ತಯಾರಿಸುತ್ತಿರುವ ಒಂದು ಪ್ರತ್ಯಕ್ಷಾಭಿನಯವನ್ನು ಸೇರಿಸಿಕೊಳ್ಳಿ. ಅವರು, ಆರಂಭದ ಭೇಟಿಯಲ್ಲಿ ಮಾತಾಡಿದ ವಿಷಯಗಳನ್ನು ಪುನಃ ನೆನಪಿಸಿಕೊಳ್ಳುತ್ತಾರೆ ಮತ್ತು ಪುನರ್ಭೇಟಿಯ ಸಮಯದಲ್ಲಿ ಮಾತಾಡಬಹುದಾದ ಅಂಶಗಳನ್ನು ಆರಿಸಿಕೊಳ್ಳುತ್ತಾರೆ. ಅವರು ಒಂದು ಸರಳವಾದ ಪೀಠಿಕೆಯನ್ನೂ ಭೇಟಿಯ ಅಂತ್ಯದಲ್ಲಿ ಕೇಳಬಲ್ಲ ಒಂದು ಪ್ರಶ್ನೆಯನ್ನೂ ತಯಾರಿಸುತ್ತಾರೆ. ಅವರು ತಾವು ತಯಾರಿಸಿದ ನಿರೂಪಣೆಯನ್ನು ಪೂರ್ವಾಭಿನಯಿಸಲು ಸಿದ್ಧರಾಗುವಾಗ ಪ್ರತ್ಯಕ್ಷಾಭಿನಯವು ಕೊನೆಗೊಳ್ಳುತ್ತದೆ.
20 ನಿ: ಬೈಬಲನ್ನು ಗಣ್ಯಮಾಡುವಂತೆ ಇತರರಿಗೆ ಸಹಾಯಮಾಡಿರಿ. ದೇವರನ್ನು ಆರಾಧಿಸಿರಿ ಪುಸ್ತಕದ ಪುಟ 24-5, ಪ್ಯಾರಗ್ರಾಫ್ 3-6 ರ ಮೇಲಾಧಾರಿತ ಪ್ರಶ್ನೋತ್ತರ ಚರ್ಚೆ. ಪುಸ್ತಕದಲ್ಲಿ ಒದಗಿಸಿರುವ ಅಧ್ಯಯನ ಪ್ರಶ್ನೆಗಳನ್ನು ಉಪಯೋಗಿಸಿರಿ. ಸಕಲ ಜನರಿಗಾಗಿರುವ ಒಂದು ಗ್ರಂಥ ಎಂಬ ಬ್ರೋಷರಿನ ಪುಟ 32ರಲ್ಲಿರುವ ಹೇಳಿಕೆಗಳನ್ನು ಸೇರಿಸಿರಿ.
ಗೀತೆ 10 ಮತ್ತು ಸಮಾಪ್ತಿಯ ಪ್ರಾರ್ಥನೆ.
ಜುಲೈ 25ರಿಂದ ಆರಂಭವಾಗುವ ವಾರ
ಗೀತೆ 138
15 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ ಮತ್ತು ದಾನದ ಅಂಗೀಕಾರದ ಕುರಿತು ಓದಿಹೇಳಿರಿ. ಜುಲೈ-ಸೆಪ್ಟೆಂಬರ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಆಗಸ್ಟ್ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಲಿಕ್ಕಾಗಿ ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವುದಾದರೆ) ಉಪಯೋಗಿಸಿರಿ. ಇತರ ಪ್ರಾಯೋಗಿಕ ನಿರೂಪಣೆಗಳನ್ನು ಉಪಯೋಗಿಸಬಹುದು. ಒಂದು ನಿರೂಪಣೆಯಲ್ಲಿ, ಮಾರುಕಟ್ಟೆಯಲ್ಲಿ ಅಥವಾ ಇನ್ನಾವುದೇ ಸೂಕ್ತ ಸಾರ್ವಜನಿಕ ಕ್ಷೇತ್ರದಲ್ಲಿ ಅನೌಪಚಾರಿಕವಾಗಿ ಪತ್ರಿಕೆಗಳನ್ನು ನೀಡುವುದನ್ನು ಪ್ರತ್ಯಕ್ಷಾಭಿನಯಿಸಿರಿ.
10 ನಿ: ನಿಮ್ಮ ಮಗುವಿನ ಹೃದಯದಲ್ಲಿ ಸತ್ಯವನ್ನು ಬೇರೂರಿಸಿರಿ. (ಧರ್ಮೋ. 6:7) ಹಿರಿಯನಿಂದ, ಆಗಸ್ಟ್ 15, 2002ರ ಕಾವಲಿನಬುರುಜುವಿನ ಪುಟ 30-1ರ ಮೇಲಾಧಾರಿತವಾದ ಭಾಷಣ. ಮಗುವಿನ ತರಬೇತಿಯ ವಿಷಯದಲ್ಲಿ ಅವಿಶ್ವಾಸಿ ಸಂಗಾತಿಯಿರುವ ಕ್ರೈಸ್ತ ಹೆತ್ತವರಿಗೆ ಬೇಕಾಗಿರುವ ಮಾರ್ಗದರ್ಶನವನ್ನು ನೀಡುವ ಶಾಸ್ತ್ರೀಯ ಮೂಲತತ್ತ್ವಗಳನ್ನು ಎತ್ತಿಹೇಳಿರಿ.
20 ನಿ: “ನಾವು ಇತರರಿಗೆ ತೀರಿಸಬೇಕಾದ ಋಣ.”c ಜುಲೈ 1, 2000ರ ಕಾವಲಿನಬುರುಜುವಿನ ಪುಟ 11, ಪ್ಯಾರಗ್ರಾಫ್ 13ರಲ್ಲಿರುವ ಹೇಳಿಕೆಗಳನ್ನು ಸೇರಿಸಿರಿ.
ಗೀತೆ 82 ಮತ್ತು ಸಮಾಪ್ತಿಯ ಪ್ರಾರ್ಥನೆ.
ಆಗಸ್ಟ್ 1ರಿಂದ ಆರಂಭವಾಗುವ ವಾರ
ಗೀತೆ 187
15 ನಿ: ಸ್ಥಳಿಕ ಪ್ರಕಟನೆಗಳು. ಜುಲೈ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ. ಶುಶ್ರೂಷಾ ಶಾಲೆ ಪುಸ್ತಕದ ಪುಟ 70ನ್ನು ತೆರೆಯುವಂತೆ ಸಭಿಕರನ್ನು ಆಮಂತ್ರಿಸಿರಿ ಮತ್ತು ಪ್ಯಾರಗ್ರಾಫ್ 1-2 ಹಾಗೂ “ಕೂಟಗಳಲ್ಲಿ ಉತ್ತರಗಳನ್ನು ಕೊಡುವ ವಿಧ” ಎಂಬ ಚೌಕವನ್ನು ಸಭಿಕರೊಂದಿಗೆ ಚರ್ಚಿಸಿರಿ.
15 ನಿ: “ಶುಶ್ರೂಷೆಯಲ್ಲಿ ಪ್ರಗತಿಮಾಡುವಂತೆ ನಿಮ್ಮ ಮಕ್ಕಳಿಗೆ ಸಹಾಯಮಾಡಿರಿ.” ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಸರಳವಾದ ಒಂದು ನಿರೂಪಣೆಯನ್ನು ಉಪಯೋಗಿಸುತ್ತಾ ಒಬ್ಬ ಹೆತ್ತವರು ಮತ್ತು ಮಗನ/ಳ ಪ್ರತ್ಯಕ್ಷಾಭಿನಯವನ್ನು ಸೇರಿಸಿರಿ. ದಾನದ ಏರ್ಪಾಡಿನ ಕುರಿತು ಹೆತ್ತವರು ಸಂಕ್ಷಿಪ್ತವಾಗಿ ಮನೆಯವರಿಗೆ ವಿವರಿಸುತ್ತಾ ಸಂಭಾಷಣೆಯನ್ನು ಮುಗಿಸುತ್ತಾರೆ.
15 ನಿ: ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ನಿರೂಪಣೆಯನ್ನು ಉಪಯೋಗಿಸಲು ಪ್ರಯತ್ನಿಸಿದ್ದೀರೊ? ಜನವರಿ 2005ರ ನಮ್ಮ ರಾಜ್ಯದ ಸೇವೆಯ ಪುಟ 6ರ ಮೇಲಾಧಾರಿತ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಒದಗಿಸಲ್ಪಟ್ಟಿರುವ ಸಲಹೆಗಳನ್ನು ಪುನರ್ವಿಮರ್ಶಿಸಿರಿ ಮತ್ತು ಆಗಸ್ಟ್ ತಿಂಗಳಿನ ಸಾಹಿತ್ಯ ನೀಡುವಿಕೆಯಲ್ಲಿ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ಒಂದು ನಿರೂಪಣೆಯನ್ನು ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ತೋರಿಸಿರಿ. ಒಂದು ಅಥವಾ ಎರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ.
ಗೀತೆ 218 ಮತ್ತು ಸಮಾಪ್ತಿಯ ಪ್ರಾರ್ಥನೆ.
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.