ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/06 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2006 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಜುಲೈ 10ರಿಂದ ಆರಂಭವಾಗುವ ವಾರ
  • ಜುಲೈ 17ರಿಂದ ಆರಂಭವಾಗುವ ವಾರ
  • ಜುಲೈ 24ರಿಂದ ಆರಂಭವಾಗುವ ವಾರ
  • ಜುಲೈ 31ರಿಂದ ಆರಂಭವಾಗುವ ವಾರ
  • ಆಗಸ್ಟ್‌ 7ರಿಂದ ಆರಂಭವಾಗುವ ವಾರ
2006 ನಮ್ಮ ರಾಜ್ಯದ ಸೇವೆ
km 7/06 ಪು. 2

ಸೇವಾ ಕೂಟದ ಶೆಡ್ಯೂಲ್‌

ಜುಲೈ 10ರಿಂದ ಆರಂಭವಾಗುವ ವಾರ

ಗೀತೆ 4

10 ನಿ: ಸ್ಥಳಿಕ ಪ್ರಕಟನೆಗಳು. ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ, ಜುಲೈ-ಸೆಪ್ಟೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಜುಲೈ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಒಂದು ಪ್ರತ್ಯಕ್ಷಾಭಿನಯದಲ್ಲಿ, ಮನೆಯವನು ‘ನಾವು ಸಹ ಕ್ರೈಸ್ತರೇ’ ಎಂದು ಹೇಳಿ ಸಂಭಾಷಣೆಯನ್ನು ತಡೆಗಟ್ಟುವಲ್ಲಿ ಹೇಗೆ ಜಾಣ್ಮೆಯಿಂದ ಪ್ರತಿಕ್ರಿಯಿಸಬೇಕೆಂಬುದನ್ನು ತೋರಿಸಿರಿ.​—⁠ಬೈಬಲ್‌ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಎಂಬ ಪುಸ್ತಿಕೆಯ 11ನೇ ಪುಟವನ್ನು ನೋಡಿರಿ.

15 ನಿ: ಸಭೆಯ ಸಂಘಟನೆ ಮತ್ತು ಆಡಳಿತವು ಹೇಗೆ ನಡೆಸಲ್ಪಡುತ್ತದೆ? ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ ಅಧ್ಯಾಯ 4ರ ಮೇಲಾಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ.

20 ನಿ: “ಯೆಹೋವನ ಅಪೂರ್ವ ಗುಣಗಳಿಗಾಗಿ ಗಣ್ಯತೆಯನ್ನು ಬೆಳೆಸಿರಿ.”a ಬೈಬಲ್‌ ಬೋಧಿಸುತ್ತದೆ ಪುಸ್ತಕದ 1ನೇ ಅಧ್ಯಾಯದ ಕೊನೆಯಲ್ಲಿರುವ ಪುನರ್ವಿಮರ್ಶೆಯ ಚೌಕದಲ್ಲಿರುವ ಅಂಶಗಳ ಕುರಿತು ಆಲೋಚಿಸುವಂತೆ ಬೈಬಲ್‌ ವಿದ್ಯಾರ್ಥಿಗೆ ಸಹಾಯಮಾಡಲು ಪ್ರಶ್ನೆಗಳನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ತೋರಿಸುವ ಒಂದು ಪ್ರತ್ಯಕ್ಷಾಭಿನಯವನ್ನು ಒಳಗೂಡಿಸಿರಿ.

ಗೀತೆ 88 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜುಲೈ 17ರಿಂದ ಆರಂಭವಾಗುವ ವಾರ

ಗೀತೆ 99

10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. 2000, ಆಗಸ್ಟ್‌ 15ರ ಕಾವಲಿನಬುರುಜುವಿನ ಪುಟ 32ನ್ನು ಸಂಕ್ಷಿಪ್ತವಾಗಿ ಪರಿಗಣಿಸಿರಿ. ಬೈಬಲನ್ನು ಕ್ರಮವಾಗಿ ​—⁠ರಜೆಯ ಸಮಯದಲ್ಲಿ ಅಥವಾ ನಿತ್ಯದ ಕಾರ್ಯಕಲಾಪಗಳಿಂದ ದೂರವಿರುವ ಸಮಯದಲ್ಲಿ ಸಹ​—⁠ಓದುವುದರಿಂದ ಸಿಗುವ ಪ್ರಯೋಜನಗಳನ್ನು ಎತ್ತಿತೋರಿಸಿರಿ.

15 ನಿ: ಪ್ರೀತಿ ಮತ್ತು ನಮ್ರತೆ​—⁠ಶುಶ್ರೂಷೆಗೆ ಅತ್ಯಾವಶ್ಯಕವಾದ ಗುಣಗಳು. 2002, ಆಗಸ್ಟ್‌ 15ರ ಕಾವಲಿನಬುರುಜುವಿನ ಪುಟ 18-20, ಪ್ಯಾರ. 13-20ರ ಮೇಲಾಧಾರಿತವಾದ ಭಾಷಣ.

20 ನಿ: “ನಮ್ಮ ‘ಸಂತೋಷಭರಿತ ದೇವರಾದ’ ಯೆಹೋವನನ್ನು ಅನುಕರಿಸಿರಿ.”b ಸ್ಥಳಿಕ ಟೆರಿಟೊರಿಯಲ್ಲಿ ಸಾರುವಾಗ ಸದಾ ನಗುಮುಖದಿಂದ ಮತ್ತು ಸಕಾರಾತ್ಮಕ ಮನೋಭಾವವುಳ್ಳವರಾಗಿ ಇರಲು ಸಭಿಕರಿಗೆ ಯಾವುದು ಸಹಾಯಮಾಡುತ್ತದೆ ಎಂಬುದರ ಬಗ್ಗೆ ಹೇಳಿಕೆ ನೀಡುವಂತೆ ಅವರನ್ನು ಆಮಂತ್ರಿಸಿರಿ.

ಗೀತೆ 189 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜುಲೈ 24ರಿಂದ ಆರಂಭವಾಗುವ ವಾರ

ಗೀತೆ 218

15 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ, ಜುಲೈ-ಸೆಪ್ಟೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಆಗಸ್ಟ್‌ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದ ಬಳಿಕ, ಮನೆಯವನ ಆಸಕ್ತಿಯನ್ನು ಕೆರಳಿಸಲಿಕ್ಕಾಗಿ ಆರಂಭದಲ್ಲಿ ತಿಳಿಸಲಾದ ಹೇಳಿಕೆಗಳ ಕಡೆಗೆ ಸಭಿಕರ ಗಮನವನ್ನು ಸೆಳೆಯಿರಿ.

10 ನಿ: “ಅವರು ನಂಬಿಗಸ್ತಿಕೆಯ ಮಾದರಿಯನ್ನಿಟ್ಟಿದ್ದಾರೆ.” ನಮ್ಮ ಪ್ರಕಾಶನಗಳಲ್ಲಿ ಬಂದಿರುವ ವಿಶೇಷ ಪಯನೀಯರರ ಕೆಲವು ಅನುಭವಗಳು ಅಥವಾ ನಿಮ್ಮ ಸಭೆಯಲ್ಲಿ ಸೇವೆಸಲ್ಲಿಸುತ್ತಿರಬಹುದಾದ ವಿಶೇಷ ಪಯನೀಯರರ ಇಂಟರ್‌ವ್ಯೂಗಳು ಒಳಗೂಡಿರುವ ಒಂದು ಭಾಷಣ.​—⁠ವಾಚ್‌ ಟವರ್‌ ಪಬ್ಲಿಕೇಷನ್‌ ಇಂಡೆಕ್ಸ್‌ನಲ್ಲಿ “ಸ್ಪೆಷಲ್‌ ಪಯನೀಯರ್ಸ್‌” ಎಂಬ ಶೀರ್ಷಿಕೆಯ ಕೆಳಗೆ ನೋಡಿರಿ.

20 ನಿ: ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. (1 ಕೊರಿಂ. 15:58) ಅನೇಕ ವರ್ಷಗಳಿಂದ ನಂಬಿಗಸ್ತಿಕೆಯಿಂದ ಸೇವೆಸಲ್ಲಿಸಿರುವ ಇಬ್ಬರು ಅಥವಾ ಮೂವರು ಪ್ರಚಾರಕರು ಇಲ್ಲವೆ ಪಯನೀಯರರನ್ನು ಇಂಟರ್‌ವ್ಯೂಮಾಡಿರಿ. ಅವರು ಸತ್ಯವನ್ನು ಹೇಗೆ ಕಲಿತುಕೊಂಡರು? ಅವರು ಸಾರುವುದನ್ನು ಆರಂಭಿಸಿದ ಸಮಯದಲ್ಲಿ ಸುವಾರ್ತೆ ಸಾರುವಿಕೆಯ ಕೆಲಸವು ಹೇಗೆ ನಡೆಸಲ್ಪಡುತ್ತಿತ್ತು? ಅವರು ಯಾವ ಪಂಥಾಹ್ವಾನಗಳನ್ನು ಎದುರಿಸಿದರು? ಸತ್ಯಾರಾಧನೆಯಲ್ಲಿ ಸ್ಥಿರಚಿತ್ತರಾಗಿ ಉಳಿದಿದ್ದರಿಂದ ಅವರು ಯಾವ ಆಶೀರ್ವಾದಗಳನ್ನು ಪಡೆದುಕೊಂಡರು?

ಗೀತೆ 12 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜುಲೈ 31ರಿಂದ ಆರಂಭವಾಗುವ ವಾರ

ಗೀತೆ 28

10 ನಿ: ಸ್ಥಳಿಕ ಪ್ರಕಟನೆಗಳು. ಜುಲೈ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿರಿ. ಆಗಸ್ಟ್‌ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯ ಕುರಿತು ತಿಳಿಸಿರಿ.

15 ನಿ: ಸ್ಥಳಿಕ ಅಗತ್ಯಗಳು.

20 ನಿ: “ಒಳ್ಳೇ ಆಧ್ಯಾತ್ಮಿಕ ರೂಢಿಗಳನ್ನು ಬೆಳೆಸಿಕೊಳ್ಳಿರಿ, ಸಮೃದ್ಧ ಆರ್ಶೀವಾದಗಳನ್ನು ಕೊಯ್ಯಿರಿ.”c ಒಳ್ಳೇ ಆಧ್ಯಾತ್ಮಿಕ ರೂಢಿಯನ್ನು ಇಟ್ಟುಕೊಳ್ಳಲು ಮತ್ತು ಅದನ್ನು ಕಾಪಾಡಿಕೊಳ್ಳಲು ಸಭಿಕರು ಯಾವ ಪ್ರಯತ್ನಗಳನ್ನು ಮಾಡಿದ್ದಾರೆ ಹಾಗೂ ಇದರಿಂದ ಯಾವ ಆಶೀರ್ವಾದಗಳನ್ನು ಪಡೆದುಕೊಂಡಿದ್ದಾರೆ ಎಂಬುದರ ಕುರಿತು ಹೇಳಿಕೆಗಳನ್ನು ನೀಡುವಂತೆ ಅವರನ್ನು ಕೇಳಿಕೊಳ್ಳಿರಿ.

ಗೀತೆ 130 ಮತ್ತು ಸಮಾಪ್ತಿಯ ಪ್ರಾರ್ಥನೆ.

ಆಗಸ್ಟ್‌ 7ರಿಂದ ಆರಂಭವಾಗುವ ವಾರ

ಗೀತೆ 209

10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಲ್ಲಿ ಬರುವ ಮಾದರಿ ನಿರೂಪಣೆಗಳನ್ನು ಸ್ಥಳಿಕ ಟೆರಿಟೊರಿಯ ಅಗತ್ಯಗಳಿಗನುಸಾರ ಹೇಗೆ ಹೊಂದಿಸಿಕೊಳ್ಳಬಹುದು ಎಂಬುದನ್ನು ಸಂಕ್ಷಿಪ್ತವಾಗಿ ಪರಿಶೀಲಿಸಿರಿ.​—⁠2005, ಜನವರಿ ತಿಂಗಳ ನಮ್ಮ ರಾಜ್ಯದ ಸೇವೆಯ ಪುಟ 8ನ್ನು ನೋಡಿರಿ.

15 ನಿ: ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಪ್ರೇರೇಪಿಸುವ ಕೂಟಗಳು. 2002, ಮಾರ್ಚ್‌ 15ರ ಕಾವಲಿನಬುರುಜು, ಪುಟ 24-5ರ ಮೇಲಾಧಾರಿತವಾದ ಭಾಷಣ. ಕೂಟಗಳಿಗೆ ಕ್ರಮವಾಗಿ ಹಾಜರಾಗಲು ಒಬ್ಬ ಪ್ರಚಾರಕನು/ಳು ಯಾವ ಪ್ರಯತ್ನಗಳನ್ನು ಮಾಡುತ್ತಾರೆ ಮತ್ತು ಇದರಿಂದ ಹೇಗೆ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ಎತ್ತಿತೋರಿಸುವ ಒಂದು ಸಂಕ್ಷಿಪ್ತ ಇಂಟರ್‌ವ್ಯೂವನ್ನು ಸೇರಿಸಿರಿ.

20 ನಿ: ನಮ್ಮ ಶುಶ್ರೂಷೆಯಲ್ಲಿ ಪ್ರಗತಿಪರರೂ ಸನ್ನಿವೇಶಗಳಿಗೆ ಹೊಂದಿಕೊಳ್ಳುವವರೂ ಆಗಿರ್ರಿ. 2005, ಡಿಸೆಂಬರ್‌ 1ರ ಕಾವಲಿನಬುರುಜು ಪುಟ 28-30ರ ಮೇಲಾಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಪ್ಯಾರಗ್ರಾಫ್‌ 6-11ರ ಮೇಲಾಧಾರಿತವಾದ ಭಾಷಣದಲ್ಲಿ, ಪೌಲನು ಸಾರುವ ಮತ್ತು ಬೋಧಿಸುವ ಕೆಲಸದಲ್ಲಿ ಹೇಗೆ ಗಮನಕೊಡುವವನಾಗಿದ್ದನು, ಹೊಂದಿಕೊಳ್ಳುವ ಮನೋಭಾವದವನಾಗಿದ್ದನು ಮತ್ತು ವ್ಯವಹಾರ ಚಾತುರ್ಯವುಳ್ಳವನಾಗಿದ್ದನು ಎಂಬುದನ್ನು ಒತ್ತಿಹೇಳಿರಿ. ಅನಂತರ, 12-14ನೇ ಪ್ಯಾರಗ್ರಾಫ್‌ಗಳಿಗಾಗಿರುವ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ. ಪ್ರಚಾರಕರು ಸ್ಥಳಿಕ ಟೆರಿಟೊರಿಯಲ್ಲಿರುವ ಜನರ ಅಗತ್ಯತೆಗಳನ್ನು, ಪರಿಸ್ಥಿತಿಗಳನ್ನು ಮತ್ತು ಸಾಂಸ್ಕೃತಿಕ ಹಿನ್ನೆಲೆಗಳನ್ನು ಗಣನೆಗೆ ತೆಗೆದುಕೊಂಡು ಶುಶ್ರೂಷೆಯಲ್ಲಿ ತಮ್ಮ ಸಮೀಪಿಸುವಿಕೆಯನ್ನು ಹೇಗೆ ಹೊಂದಿಸಿಕೊಳ್ಳಬಹುದು ಎಂಬುದನ್ನು ತೋರಿಸುವ ಒಂದು ಪ್ರತ್ಯಕ್ಷಾಭಿನಯವನ್ನು ಸೇರಿಸಿಕೊಳ್ಳಿರಿ.

ಗೀತೆ 83 ಮತ್ತು ಸಮಾಪ್ತಿಯ ಪ್ರಾರ್ಥನೆ.

[ಪಾದಟಿಪ್ಪಣಿಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ