ಮಾರ್ಚ್ 30ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮಾರ್ಚ್ 30ರಿಂದ ಆರಂಭವಾಗುವ ವಾರ
ಗೀತೆ 217
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ವಿಮೋಚನಕಾಂಡ 1-6
ನಂ. 1: ವಿಮೋಚನಕಾಂಡ 1:1-19
ನಂ. 2: ರೋಗದ ವಿರುದ್ಧ ಹೋರಾಟ (g04-KA 7/8 ಪು. 3-13)
ನಂ. 3: ಕುಟುಂಬದಲ್ಲಿ ಕ್ರಿಸ್ತಸದೃಶ ತಲೆತನ (fy-KA ಪು. 31-33 ¶11-15)
❑ ಸೇವಾ ಕೂಟ:
ಗೀತೆ 128
5 ನಿ: ಪ್ರಕಟಣೆಗಳು. ಜ್ಞಾಪಕಾಚರಣೆಯ ಕುರಿತ ಯಾವುದೇ ಕೊನೆಯ ಪ್ರಕಟಣೆಗಳನ್ನು ಒಳಗೂಡಿಸಿ.
15 ನಿ: ಜ್ಞಾಪಕಾಚರಣೆಗೆ ಹಾಜರಾಗುವ ಆಸಕ್ತರಿಗೆ ಸಹಾಯಮಾಡಲು ತಯಾರಾಗಿರ್ರಿ. ಹಾಜರಾಗುವ ಬೈಬಲ್ ವಿದ್ಯಾರ್ಥಿಗಳಿಗೆ, ಅಕ್ರಿಯ ಪ್ರಚಾರಕರಿಗೆ, ಪರಿಚಯಸ್ಥರಿಗೆ, ಕುಟುಂಬ ಸದಸ್ಯರಿಗೆ ಹಾಗೂ ಇನ್ನಿತರರಿಗೆ ಸಹಾಯಮಾಡಲಿಕ್ಕಾಗಿ ಪ್ರಚಾರಕರು ಏನು ಮಾಡಸಾಧ್ಯವಿದೆಯೆಂದು ನೆನಪುಹುಟ್ಟಿಸಲು ಸೇವಾ ಮೇಲ್ವಿಚಾರಕನು ನೀಡುವ ಭಾಷಣ. (2008, ಮಾರ್ಚ್ ತಿಂಗಳ ನಮ್ಮ ರಾಜ್ಯದ ಸೇವೆ ಪುಟ 8 ನೋಡಿ.) ಹಾಜರಾದ ಆಸಕ್ತ ವ್ಯಕ್ತಿಯೊಂದಿಗೆ ಬೈಬಲ್ ಅಧ್ಯಯನವನ್ನು ಹೇಗೆ ಆರಂಭಿಸಬಹುದೆಂದು ತೋರಿಸುವ ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯವನ್ನು ಒಳಗೂಡಿಸಿ. ಏಪ್ರಿಲ್ 5ರ ಭಾನುವಾರದಿಂದ ಆರಂಭವಾಗುವ ಜ್ಞಾಪಕಾಚರಣೆಯ ಬೈಬಲ್ ಓದುವಿಕೆಯ ಕುರಿತು ಎಲ್ಲರಿಗೂ ನೆನಪಿಸಿರಿ. ಈ ಓದುವಿಕೆಯನ್ನು ಹೇಗೆ ಮಾಡಬಹುದೆಂಬುದಕ್ಕೆ ವ್ಯಾವಹಾರಿಕ ಸಲಹೆಗಳನ್ನು ನೀಡಬಹುದು.
15 ನಿ: ಮುಪ್ಪಿನಲ್ಲಿಯೂ ಆಧ್ಯಾತ್ಮಿಕವಾಗಿ ಅಭಿವೃದ್ಧಿ ಹೊಂದುವುದು. 2007, ಜೂನ್ 1ರ ಕಾವಲಿನಬುರುಜು ಪುಟ 21-22 ಪ್ಯಾರ 1-6ರ ಮೇಲೆ ಆಧಾರಿತ ಪ್ರೋತ್ಸಾಹದಾಯಕ ಭಾಷಣ. ದೀರ್ಘಕಾಲದಿಂದ ಯೆಹೋವನಿಗೆ ಸೇವೆಸಲ್ಲಿಸಿದ ನಂಬಿಗಸ್ತ ಸೇವಕರೊಬ್ಬರನ್ನು ಇಂಟರ್ವ್ಯೂ ಮಾಡಿ. ಯೆಹೋವನ ಸೇವೆಯಲ್ಲಿ ಆನಂದವನ್ನು ಕಾಪಾಡಿಕೊಳ್ಳಲು ಅವರಿಗೆ ಯಾವುದು ಸಹಾಯಮಾಡಿತು?
ಗೀತೆ 114