ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಏಪ್ರಿಲ್-ಜೂನ್
“ಭೂಮಿಯ ಪರಿಸರಕ್ಕೆ ಮುಂದೆ ಏನಾಗಲಿದೆ ಎಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಪರಿಸರವನ್ನು ಹಾಳುಮಾಡುತ್ತಿರುವವರನ್ನು ನಿರ್ಮಾಣಿಕನು ಗಮನಿಸುತ್ತಾನೆ ಎಂದು ತೋರಿಸುವ ಒಂದು ವಚನವನ್ನು ತಿಳಿಸಲೋ? [ಮನೆಯವನು ಒಪ್ಪುವಲ್ಲಿ ಪ್ರಕಟನೆ 11:18 ಓದಿ.] ಭೂಮಿಯ ಭವಿಷ್ಯತ್ತಿನ ಕುರಿತು ನಾವು ನಿಶ್ಚಿಂತೆಯಿಂದ ಇರಲು ಈ ಲೇಖನ ಕಾರಣಗಳನ್ನು ಕೊಡುತ್ತದೆ.” 32ನೇ ಪುಟದಲ್ಲಿರುವ ಲೇಖನ ತೋರಿಸಿ.
ಎಚ್ಚರ! ಏಪ್ರಿಲ್-ಜೂನ್
“ನಮ್ಮ ಜೀವನ ಘಟನೆಗಳು ವಿಧಿಲಿಖಿತವೆಂದು ಅನೇಕರು ನಂಬುತ್ತಾರೆ. ನಿಮ್ಮ ಅಭಿಪ್ರಾಯವೇನು? [ಪ್ರತಿಕ್ರಿಯೆಗೆ ಅವಕಾಶಕೊಡಿ.] ನಮ್ಮ ಮುಂದೆ ಒಂದು ಆಯ್ಕೆಯಿದೆ ಎಂದು ತಿಳಿಸುವ ವಚನವನ್ನು ನಿಮಗೆ ತೋರಿಸಲೋ? [ಮನೆಯವನಿಗೆ ಆಸಕ್ತಿಯಿದೆ ಎಂದು ಕಂಡುಬಂದಲ್ಲಿ ಧರ್ಮೋಪದೇಶಕಾಂಡ 30:19 ಓದಿ] ನಮ್ಮ ಜೀವನ ವಿಧಿಲಿಖಿತವೋ ಎಂಬ ವಿಷಯದಲ್ಲಿ ದೇವರ ವಾಕ್ಯ ಏನನ್ನುತ್ತದೆ ಎಂಬುದನ್ನು ಈ ಲೇಖನವು ವಿವರಿಸುತ್ತದೆ.” ಪುಟ 27ರಿಂದ ಆರಂಭಿಸುವ ಲೇಖನವನ್ನು ತೋರಿಸಿರಿ.