ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2009, ಅಕ್ಟೋಬರ್ 26ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಪರಿಗಣಿಸಲಾಗುವುದು.
1. ಯೆಹೋವನೇ ಬಿಳಾಮನಿಗೆ ಬಾಲಾಕನ ಜನರೊಂದಿಗೆ ಹೋಗುವಂತೆ ಹೇಳಿ, ನಂತರ ಅವನು ಹೋದಾಗ ಅವನ ಮೇಲೆ ಕೋಪಗೊಂಡದ್ದೇಕೆ? (ಅರ. 22:20-22) [w04 8/1 ಪು. 27 ಪ್ಯಾರ. 2]
2. ಫೀನೆಹಾಸನು ‘ಯೆಹೋವನ ಗೌರವವನ್ನು ಕಾಪಾಡಿದ್ದು,’ ದೇವರಿಗೆ ನಾವು ಮಾಡಿರುವ ಸಮರ್ಪಣೆಯ ಕುರಿತು ಯೋಚಿಸುವಂತೆ ಮಾಡುತ್ತದೆ ಹೇಗೆ? (ಅರ. 25:10) [w95 3/1 ಪು. 16 ಪ್ಯಾರ. 13]
3. ಮೋಶೆಯ ಉತ್ತರಾಧಿಕಾರಿಯಾಗಿ ಯೆಹೋಶುವನನ್ನು ಏಕೆ ಆಯ್ಕೆಮಾಡಲಾಯಿತು? (ಅರ. 27:15-19) [w02 12/1 ಪು. 12 ಪ್ಯಾರ. 1]
4. ಅರಣ್ಯಕಾಂಡ 31:27 ಇಂದಿರುವ ಕ್ರೈಸ್ತರಿಗೆ ಹೇಗೆ ಉತ್ತೇಜನದಾಯಕವಾಗಿರಬಲ್ಲದು? [w05 3/15 ಪು. 24]
5. ಆಶ್ರಯನಗರಗಳ ಏರ್ಪಾಡು ಇಸ್ರಾಯೇಲ್ಯ ಜನರಿಗೆ ಯಾವ ವಿಧಗಳಲ್ಲಿ ಪ್ರಯೋಜನವಾಯಿತು? (ಅರ. 35:11, 12) [w95 11/15 ಪು. 14 ಪ್ಯಾರ. 17]
6. ವಿವೇಕವು ಕ್ರೈಸ್ತರಲ್ಲಿರಬೇಕಾದ ಒಂದು ಪ್ರಮುಖ ಗುಣವಾಗಿದೆ ಏಕೆ ಮತ್ತು ಅದು ಯಾವ ಫಲಿತಾಂಶವನ್ನು ತರುತ್ತದೆ? (ಧರ್ಮೋ. 1:13) [w03 1/15 30; w00 10/1 ಪು. 32 ಪ್ಯಾರ. 1-3]
7. ಮೋಶೆಯ ಧರ್ಮಶಾಸ್ತ್ರವು ದೇವರ ನೀತಿಯನ್ನು ಹೇಗೆ ವ್ಯಕ್ತಪಡಿಸಿತು? (ಧರ್ಮೋ. 4:8) [w02 6/1 ಪು. 14 ಪ್ಯಾರ. 8-ಪು. 15 ಪ್ಯಾರ. 9, 10]
8. ಧರ್ಮೋಪದೇಶಕಾಂಡ 6:16-18ಕ್ಕನುಗುಣವಾಗಿ ಯೆಹೋವನನ್ನು ಪರೀಕ್ಷಿಸುವ ಸರಿಯಾದ ಮತ್ತು ತಪ್ಪಾದ ವಿಧವನ್ನು ವಿವರಿಸಿ. [w04 9/15 ಪು. 27 ಪ್ಯಾರ. 1]
9. ಯೆಹೋವನ ಮಾತುಗಳಿಂದ ಇಸ್ರಾಯೇಲ್ಯರ ಅವಶ್ಯಕತೆಗಳು ಹೇಗೆ ಪೂರೈಸಲ್ಪಟ್ಟವು ಮತ್ತು ಆ ಮಾತುಗಳು ಇಂದು ನಮ್ಮನ್ನು ಹೇಗೆ ಪೋಷಿಸಬಲ್ಲವು? (ಧರ್ಮೋ. 8:3) [w99 8/15 ಪು. 25-26]
10. ಒಬ್ಬ ವ್ಯಕ್ತಿಯ ಸ್ವಂತ ರಕ್ತವನ್ನು ಉಪಯೋಗಿಸುವ ವೈದ್ಯಕೀಯ ಕಾರ್ಯವಿಧಾನಗಳ ಕುರಿತಾದ ನಮ್ಮ ದೃಷ್ಟಿಕೋನವನ್ನು ಧರ್ಮೋಪದೇಶಕಾಂಡ 12:16, 24 ಹೇಗೆ ಪ್ರಭಾವಿಸುತ್ತದೆ? [w00 10/15 ಪು. 30 ಪ್ಯಾರ. 7]