ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಜುಲೈ-ಸೆಪ್ಟೆಂಬರ್
“ಜಗತ್ತಿನಲ್ಲಿರುವ ಕಷ್ಟನೋವುಗಳಿಗೆಲ್ಲಾ ಒಂದು ಕೊನೆಯಿದೆ ಎಂದು ನಿಮಗನಿಸುತ್ತದಾ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಈ ವಿಷಯದಲ್ಲಿ ನಮಗೆ ಆಶಾಕಿರಣವಾಗಿರುವ ದೇವರ ಮಾತೊಂದನ್ನು ನಿಮಗೆ ತೋರಿಸಿಕೊಡಲಾ? [ಮನೆಯವರಿಗೆ ಆಸಕ್ತಿಯಿದೆ ಎಂದು ತಿಳಿದುಬರುವಲ್ಲಿ ಪುಟ 7ರ ಚೌಕದಲ್ಲಿರುವ ಒಂದು ವಚನ ಓದಿ.] ದೇವರು ಯಾವಾಗ ಮತ್ತು ಹೇಗೆ ಕಷ್ಟನೋವುಗಳಿಗೆ ಕೊನೆತರುವನೆಂದು ತಿಳಿಯಲು ಈ ಪತ್ರಿಕೆ ಸಹಾಯಮಾಡುತ್ತದೆ.”
ಎಚ್ಚರ! ಜುಲೈ-ಸೆಪ್ಟೆಂಬರ್
“ಕೆಲವರು ಸೃಷ್ಟಿಕರ್ತನಿದ್ದಾನೆಂದು ನಂಬಿದರೆ ಇನ್ನು ಕೆಲವರು ವಿಜ್ಞಾನ ಯಾವುದೇ ಆಧಾರ ಕೊಡುವುದಿಲ್ಲ, ಅದು ತರ್ಕಬದ್ಧವಲ್ಲವೆಂದು ಹೇಳುತ್ತಾರೆ. ನೀವೇನು ಹೇಳುತ್ತೀರಾ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ನಂಬಿಕೆ ಎಂದರೆ ಏನು ಅಂತ ಪವಿತ್ರ ಗ್ರಂಥ ಹೇಳುವುದನ್ನು ನಿಮಗೆ ಓದಿ ತೋರಿಸಲಾ? [ಮನೆಯವನು ಒಪ್ಪಿದರೆ ಇಬ್ರಿಯ 11:1ನ್ನು ಓದಿ.] ಸೃಷ್ಟಿಕರ್ತನಿದ್ದಾನೆ ಎಂಬದಕ್ಕಿರುವ ಕೆಲವು ರುಜುವಾತುಗಳ ಕುರಿತು ಈ ಲೇಖನ ಚರ್ಚಿಸುತ್ತದೆ.” ಪುಟ 18ರಿಂದ ಆರಂಭವಾಗುವ ಲೇಖನ ತೋರಿಸಿ.