“ತಕ್ಕ ಸಮಯಕ್ಕೆ ಆಹಾರ”
1. ಇತ್ತೀಚಿನ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ ನಿಮಗೂ ಇತರರಿಗೂ ಹೇಗೆ ಸಹಾಯಮಾಡಿದೆ?
1 ವಿಶೇಷ ಸಮ್ಮೇಳನ ದಿನವನ್ನು ಹಾಜರಾದ ಬಳಿಕ, “ನಮಗೆ ಏನು ಬೇಕಾಗಿತ್ತೋ ಅದೇ ಸಿಕ್ಕಿತು” ಎಂದು ನಾವು ಹೆಚ್ಚಾಗಿ ಹೇಳುವುದುಂಟು. ಇತ್ತೀಚಿನ ಸಮ್ಮೇಳನಕ್ಕೆ ಹಾಜರಾದವರಲ್ಲಿ ಕೆಲವರು ತಮ್ಮ ಶುಶ್ರೂಷೆಯನ್ನು ಹೆಚ್ಚಿಸಬೇಕೆಂಬ ಆಸೆ ವ್ಯಕ್ತಪಡಿಸಿದ್ದನ್ನು ಸರ್ಕಿಟ್ ಮೇಲ್ವಿಚಾರಕರೊಬ್ಬರು ವರದಿಸಿದರು. “ಜೀವನದಲ್ಲಿ ಆಯ್ಕೆಗಳನ್ನು ಮಾಡುವಾಗ ಕಾಲಪ್ರವಾಹದಲ್ಲಿ ನಾವೆಲ್ಲಿದ್ದೇವೆಂಬದನ್ನು ಸ್ಪಷ್ಟವಾಗಿ ಮನಸ್ಸಿನಲ್ಲಿಡುವಂತೆ ಈ ಸಮ್ಮೇಳನ ನಮಗೆ ಸಹಾಯಮಾಡಿದೆ” ಎಂದರು ಸಂಚರಣ ಮೇಲ್ವಿಚಾರಕರೊಬ್ಬರು. ಇನ್ನೊಬ್ಬರು ಹೇಳಿದ್ದು: “ವಿಶೇಷ ಸಮ್ಮೇಳನ ದಿನವು ಅತ್ಯಂತ ಪ್ರಮುಖ ಕೆಲಸವಾದ ಶುಶ್ರೂಷೆಯ ಮೇಲೆ ಮನಸ್ಸಿಡುವಂತೆ ತಮ್ಮನ್ನು ಬಡಿದೆಬ್ಬಿಸಿತು ಎಂದು ಅನೇಕ ಪ್ರಚಾರಕರು ನನ್ನ ಬಳಿ ಹೇಳಿಕೊಂಡರು.” ಆ ವಿಶೇಷ ಸಮ್ಮೇಳನ ದಿನ ನಿಮಗೆ ಹೇಗೆ ಸಹಾಯಮಾಡಿತು?
2. ಮುಂದಿನ ಸೇವಾ ವರ್ಷದ ವಿಶೇಷ ಸಮ್ಮೇಳನ ದಿನದಲ್ಲಿ ಯಾವೆಲ್ಲ ವಿಷಯಗಳನ್ನು ಕೇಳಲಿದ್ದೇವೆ?
2 ಬರುವ ಸೇವಾ ವರ್ಷದ ವಿಶೇಷ ಸಮ್ಮೇಳನ ದಿನ ಕೂಡ ನಮಗೆ ಅಗತ್ಯವಾಗಿ ಬೇಕಾದದ್ದನ್ನೇ ಕೊಡಲಿದೆ. ಅದರ ಮುಖ್ಯವಿಷಯ ‘ಯೆಹೋವನನ್ನು ಆಶ್ರಯಿಸಿ.’ ಇದು ಕೀರ್ತನೆ 118:8, 9ರ ಮೇಲೆ ಆಧರಿತ. ನಾವಲ್ಲಿ ಚರ್ಚಿಸಲಿರುವ ಕೆಲವು ವಿಷಯಗಳು ಹೀಗಿವೆ: “ಯೆಹೋವನು ನಮಗೆ ಇಕ್ಕಟ್ಟಿನಲ್ಲಿ ಹೇಗೆ ದುರ್ಗಸ್ಧಾನ ಆಗಿರುವನು?,” “ಯೆಹೋವನ ರೆಕ್ಕೆಗಳಡಿ ಆಶ್ರಯ ಪಡೆಯಲು ಇತರರಿಗೆ ಸಹಾಯಮಾಡಿ,” “ಆಶ್ರಯ ಕೊಡುವುದರಲ್ಲಿ ಯೆಹೋವನನ್ನು ಅನುಕರಿಸಿರಿ,” “ಯುವಜನರೇ, ಯೆಹೋವನನ್ನು ನಿಮ್ಮ ಭರವಸವನ್ನಾಗಿ ಮಾಡಿಕೊಳ್ಳಿರಿ!” ಮತ್ತು “ನಮ್ಮ ಆಧ್ಯಾತ್ಮಿಕ ಪರದೈಸ್—ಆಶ್ರಯ ನೀಡಲು ಯೆಹೋವನು ಮಾಡಿರುವ ಏರ್ಪಾಡು.”
3. ಸಮ್ಮೇಳನದಿಂದ ಪೂರ್ಣ ಪ್ರಯೋಜನ ಪಡೆಯಲು ನಾವೇನು ಮಾಡಬೇಕು?
3 ಪ್ರಯೋಜನ ಪಡೆಯಲು: ಸಮ್ಮೇಳನದ ತಾರೀಖು ತಿಳಿದ ಕೂಡಲೆ ಹಾಜರಾಗಲು ಯೋಜನೆಗಳನ್ನು ಮಾಡಿ. ನಿಮ್ಮ ಬೈಬಲ್ ವಿದ್ಯಾರ್ಥಿಗಳನ್ನು ಆಮಂತ್ರಿಸಿ. ‘ತಾಳ್ಮೆಯಿಂದ ಫಲ ಕೊಡಲು’ ನಾವು ಸಮ್ಮೇಳನದಲ್ಲಿ ಕೇಳಿಸಿಕೊಂಡ ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. (ಲೂಕ 8:15) ಅದಕ್ಕಾಗಿ ಗಮನಕೊಟ್ಟು ಆಲಿಸಿ. ಮುಖ್ಯ ಅಂಶಗಳನ್ನು ಮತ್ತು ನಿಮ್ಮ ಜೀವನದಲ್ಲಿ, ಶುಶ್ರೂಷೆಯಲ್ಲಿ ಅಳವಡಿಸಬೇಕೆಂದಿರುವ ನಿರ್ದೇಶನಗಳನ್ನು ಚುಟುಕಾಗಿ ಬರೆದಿಡಿ. ಕಲಿತ ವಿಷಯವನ್ನು ಸಮ್ಮೇಳನದ ನಂತರ ಸಮಯ ಮಾಡಿಕೊಂಡು ಇಡೀ ಕುಟುಂಬವಾಗಿ ಚರ್ಚಿಸಿ. ನೀವೂ ನಿಮ್ಮ ಮನೆಮಂದಿಯೂ ಅನ್ವಯಿಸಬೇಕಾದ ನಿರ್ದಿಷ್ಟ ವಿಷಯಗಳನ್ನು ಪರಿಗಣಿಸಿ.
4. ಮುಂಬರಲಿರುವ ವಿಶೇಷ ಸಮ್ಮೇಳನ ದಿನಕ್ಕಾಗಿ ನಾವೇಕೆ ಕಾತುರದಿಂದ ಕಾಯುತ್ತಿರಬೇಕು?
4 ರುಚಿಕರ, ಪೌಷ್ಟಿಕ ಊಟದಂತೆ ಮುಂದಿನ ವರ್ಷದ ವಿಶೇಷ ಸಮ್ಮೇಳನವನ್ನು ಪ್ರೀತಿ, ಮುಂದಾಲೋಚನೆಗಳಿಂದ ತಯಾರಿಸಲಾಗಿದೆ. ಕ್ರೈಸ್ತ ಶುಶ್ರೂಷಕರ ಆಧ್ಯಾತ್ಮಿಕ ಪೋಷಣೆಗಾಗಿ ‘ತಕ್ಕ ಸಮಯಕ್ಕೆ ಈ ಆಹಾರವನ್ನು’ ಒದಗಿಸಲಾಗುತ್ತಿದೆ. ಅದನ್ನು ಪಡೆಯಲಿಕ್ಕಾಗಿ ಸಮ್ಮೇಳನಕ್ಕೆ ಹಾಜರಾಗಲು ನೀವು ಮಾಡುವ ಪ್ರಯತ್ನಗಳನ್ನು ಯೆಹೋವನು ಹರಸಲಿ.—ಮತ್ತಾ. 24:45.