ಅಕ್ಟೋಬರ್ 28ರ ವಾರಕ್ಕಾಗಿರುವ ಶೆಡ್ಯೂಲ್
ಅಕ್ಟೋಬರ್ 28ರ ವಾರ
ಗೀತೆ 65 ಮತ್ತು ಪ್ರಾರ್ಥನೆ
□ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 29 ಪ್ಯಾ. 1-10 (30 ನಿ.)
□ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ತಿಮೊಥೆಯ 1–2 ತಿಮೊಥೆಯ 4 (10 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ (20 ನಿ.)
□ ಸೇವಾ ಕೂಟ:
15 ನಿ: ಸುವಾರ್ತೆಯ ಪ್ರಾಯೋಗಿಕ ಮೌಲ್ಯವನ್ನು ಎತ್ತಿಹಿಡಿಯಿರಿ. ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 159ರ ಮೇಲೆ ಆಧರಿತ. ನಿಮ್ಮ ಸೇವಾಕ್ಷೇತ್ರದ ಜನರಿಗೆ ಆಸಕ್ತಿದಾಯಕವಾಗಿ ಕಾಣುವ ವಿಷಯವನ್ನು ಬಳಸಿ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಹೇಗೆ ನೀಡಬಹುದೆಂದು ಒಂದು ಪ್ರಾತ್ಯಕ್ಷಿಕೆ ಮೂಲಕ ತೋರಿಸಿ.
15 ನಿ: ಸಮಯ ಪಾಲಕರಾಗಿರುವುದರ ಪ್ರಾಮುಖ್ಯತೆ. ಚರ್ಚೆ. (1) ಸಮಯಪಾಲನೆ ಮಾಡುವುದರಲ್ಲಿ ಯೆಹೋವ ನಮಗೆ ಹೇಗೆ ಒಳ್ಳೇ ಮಾದರಿ? (ಹಬ. 2:3) (2) ಕೂಟಗಳಿಗೆ ಮತ್ತು ಸೇವೆಗೆ ಸಮಯಕ್ಕೆ ಸರಿಯಾಗಿ ಹೋಗುವುದರಿಂದ ನಾವು ಯೆಹೋವನನ್ನು ಹೇಗೆ ಗೌರವಿಸುತ್ತೇವೆ ಮತ್ತು ಇತರರ ಕಡೆಗೆ ದಯಾಭಾವವನ್ನು ಹೇಗೆ ಪ್ರದರ್ಶಿಸುತ್ತೇವೆ? (3) ಸಭಾಕೂಟಕ್ಕೆ ಅಥವಾ ಕ್ಷೇತ್ರಸೇವಾ ಕೂಟಕ್ಕೆ ಲೇಟಾಗಿ ಬಂದಾಗ ಕ್ಷೇತ್ರಸೇವಾ ಗುಂಪಿಗೆ ಮತ್ತು ಮೇಲ್ವಿಚಾರಕರಿಗೆ ಹೇಗೆ ತೊಂದರೆಯಾಗುತ್ತೆ? (4) ಆಸಕ್ತ ವ್ಯಕ್ತಿಗೆ ಅಥವಾ ನಮ್ಮ ಬೈಬಲ್ ವಿದ್ಯಾರ್ಥಿಗೆ ಇಂಥ ಸಮಯಕ್ಕೆ ಬರುತ್ತೇವೆಂದು ಹೇಳಿದರೆ ಅದೇ ಸಮಯಕ್ಕೆ ಸರಿಯಾಗಿ ಹೋಗುವುದು ಏಕೆ ಪ್ರಾಮುಖ್ಯ? (ಮತ್ತಾ. 5:37) (5) ಸೇವೆಯಲ್ಲಿ ಹೇಳಿದ ಸಮಯಕ್ಕೆ ಸರಿಯಾಗಿ ಮತ್ತು ಕೂಟಕ್ಕೆ ಸರಿಯಾದ ಸಮಯಕ್ಕೆ ಹೋಗುವಂತೆ ಯಾವ ಕಾರ್ಯಸಾಧು ಸಲಹೆಗಳು ನಮಗೆ ಸಹಾಯ ಮಾಡುತ್ತೆ?
ಗೀತೆ 69 ಮತ್ತು ಪ್ರಾರ್ಥನೆ