ಜನವರಿ 19ರ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 19ರ ವಾರ
ಗೀತೆ 1 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 30, 31 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ನ್ಯಾಯಸ್ಥಾಪಕರು 1-4 (8 ನಿ.)
ನಂ. 1: ನ್ಯಾಯಸ್ಥಾಪಕರು 3:1-11 (3 ನಿಮಿಷದೊಳಗೆ)
ನಂ. 2: ದೇವರ ಬಗ್ಗೆ ನೀವು ತಿಳಿದುಕೊಳ್ಳುವುದು ಹೇಗೆ?—ಕಿರುಪರಿಚಯ ಪುಟ 4 ಪ್ಯಾರ 1-4 (5 ನಿ.)
ನಂ. 3: ಅಹೀತೋಫೆಲ—ವಿಷಯ: ಮೋಸಗಾರರ ಸಂಚನ್ನು ಯೆಹೋವನು ತಪ್ಪಿಸುತ್ತಾನೆ—2ಸಮು 15:12, 31-34; 16:15, 21, 23; 17:1-14, 23 (5 ನಿ.)
❑ ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: ‘ದೀನಮನಸ್ಸಿನಿಂದ ಕರ್ತನ ಸೇವೆ ಮಾಡಿ.’—ಅಪೊಸ್ತಲರ ಕಾರ್ಯಗಳು 20:19.
15 ನಿ: ದೇವರ ವಾಕ್ಯ ಕಾರ್ಯಸಾಧಕವಾದದ್ದು. ಭಾಷಣ. 2003 ನವೆಂಬರ್ 15ರ ಕಾವಲಿನಬುರುಜು, ಪುಟ 11, ಪ್ಯಾರ 13-17ರ ಆಧರಿತ. ಜನರಿಗೆ ತಮ್ಮ ಜೀವನ ರೀತಿಯನ್ನು ಬದಲಾಯಿಸಿಕೊಳ್ಳಲು ಬೈಬಲಿನಲ್ಲಿರುವ ಸಲಹೆಗಳು ಹೇಗೆ ಸಹಾಯ ಮಾಡಬಲ್ಲವು ಎಂದು ತೋರಿಸುವ ಅನುಭವಗಳನ್ನು ತಿಳಿಸಿ. ಎಲ್ಲಾ ರೀತಿಯ ಸೇವೆಯಲ್ಲಿ ಬೈಬಲನ್ನು ಜಾಣ್ಮೆ ಮತ್ತು ವಿವೇಚನೆಯಿಂದ ಉಪಯೋಗಿಸಲು ಸಭಿಕರೆಲ್ಲರನ್ನು ಪ್ರೋತ್ಸಾಹಿಸಿ.
15 ನಿ: “ಸಾರುವ ಕೆಲಸದಲ್ಲಿ ಪ್ರಗತಿ ಮಾಡುತ್ತಾ ಇರಿ.” ಪ್ರಶ್ನೋತ್ತರ.
ಗೀತೆ 20 ಮತ್ತು ಪ್ರಾರ್ಥನೆ