ಮಾದರಿ ನಿರೂಪಣೆಗಳು
ಕ್ರಿಸ್ತನ ಮರಣದ ಸ್ಮರಣೆಯ ಆಮಂತ್ರಣ ಪತ್ರ ಕೊಡುವಾಗ . . .
“ಯೇಸು ಬಗ್ಗೆ ತುಂಬ ಜನರಿಗೆ ಗೊತ್ತಿದೆ. ಆತ ಅಷ್ಟು ಹೆಸರುವಾಸಿಯಾಗಲು ಏನು ಕಾರಣ ಇರಬಹುದು? ಇದನ್ನು ತಿಳಿದುಕೊಳ್ಳಲು ನಿಮಗೆ ಇಷ್ಟ ಇದ್ದರೆ, ದಯವಿಟ್ಟು ಈ ವಿಶೇಷ ಕಾರ್ಯಕ್ರಮಕ್ಕೆ ಬನ್ನಿ. ಇದು ಏಪ್ರಿಲ್ 3ನೇ ತಾರೀಖು ನಡೆಯುತ್ತದೆ. ಯೇಸುವಿನ ಮರಣದಿಂದ ನಮಗೇನು ಪ್ರಯೋಜನ ಅಂತ ಆವತ್ತು ಒಂದು ಭಾಷಣದಲ್ಲಿ ತಿಳಿಸುತ್ತಾರೆ. ಇದೊಂದು ಉಚಿತ ಕಾರ್ಯಕ್ರಮ. ನೂರಾರು ದೇಶಗಳಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಬರುತ್ತಾರೆ. ನಿಮಗೆ ಹತ್ತಿರವಾಗುವ ಯಾವ ಸ್ಥಳದಲ್ಲಿ ಯಾವ ಸಮಯಕ್ಕೆ ಇದು ನಡೆಯುತ್ತದೆ ಎಂಬ ಮಾಹಿತಿ ಈ ಆಮಂತ್ರಣ ಪತ್ರದಲ್ಲಿದೆ.”