ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಪತ್ರಿಕಾ ಮಾರ್ಗವನ್ನು ಆರಂಭಿಸಿ
ಏಕೆ ಪ್ರಾಮುಖ್ಯ: ಅನೇಕ ಜನರು ನಮ್ಮ ಪತ್ರಿಕೆಗಳನ್ನು ಓದಲು ಇಷ್ಟಪಡುತ್ತಾರೆ. ಆದರೆ ಬೈಬಲ್ ಅಧ್ಯಯನ ಪಡೆದುಕೊಳ್ಳಲು ಇಷ್ಟಪಡುವುದಿಲ್ಲ. ಯಾಕೆಂದರೆ, ಅವರಿಗೆ ತಮ್ಮ ಧರ್ಮವೇ ಸಾಕು ಎನ್ನುವ ಮನೋಭಾವ ಅಥವಾ ಬೈಬಲ್ ಅಧ್ಯಯನ ಪಡೆದುಕೊಳ್ಳಲು ಸಮಯವೇ ಇಲ್ಲ ಎಂಬ ಅನಿಸಿಕೆ ಇರಬಹುದು. ಆದರೆ, ನಮ್ಮ ಪತ್ರಿಕೆಗಳನ್ನು ಕ್ರಮವಾಗಿ ಓದುತ್ತಾ ಇರುವುದಾದರೆ ಅದರಲ್ಲಿರುವ ಯಾವುದಾದರೊಂದು ಲೇಖನದಿಂದ ಅವರ ಮನಸ್ಸು ಬದಲಾಗಬಹುದು ಇಲ್ಲವೆ ಅವರ ಪರಿಸ್ಥಿತಿಯಲ್ಲಿ ಬದಲಾವಣೆಯಾಗಬಹುದು. ಹೀಗೆ, ಕ್ರಮೇಣ ಅವರು ಬೈಬಲ್ ಬಗ್ಗೆ ಕಲಿತುಕೊಳ್ಳಲು ಬಯಸಬಹುದು. (1 ಪೇತ್ರ 2:2) ಆದ್ದರಿಂದ, ಅವರಿಗೆ ಕ್ರಮವಾಗಿ ಪತ್ರಿಕೆಗಳನ್ನು ಕೊಡುತ್ತಾ ಪತ್ರಿಕಾ ಮಾರ್ಗವನ್ನು ಆರಂಭಿಸಿ. ಅವರನ್ನು ಕ್ರಮವಾಗಿ ಭೇಟಿಯಾಗಿ ಒಂದೆರಡು ನಿಮಿಷ ಮಾತಾಡಿದರೂ ಸಾಕು, ಮನೆಯವರಿಗೆ ನಮ್ಮ ಒಳ್ಳೆಯ ಪರಿಚಯವಾಗುತ್ತದೆ. ನಾವು ಸಹ, ಅವರಿಗೆ ಯಾವ ವಿಷಯಗಳು ಇಷ್ಟ, ಯಾವ ಚಿಂತೆಗಳಿವೆ ಎಂದು ತಿಳಿದುಕೊಳ್ಳುತ್ತೇವೆ. ಹೀಗೆ ಮಾಡಿದರೆ, ಸ್ವಲ್ಪ ದಿವಸಗಳಲ್ಲೇ ಅವರೊಂದಿಗೆ ಬೈಬಲ್ ಅಧ್ಯಯನ ಮಾಡುವ ಅವಕಾಶ ಸಿಗಬಹುದು.
ಈ ತಿಂಗಳು ಇದನ್ನು ಮಾಡಲು ಪ್ರಯತ್ನಿಸಿ:
ಯಾರಿಗೆಲ್ಲಾ ಪತ್ರಿಕೆಗಳನ್ನು ಕೊಟ್ಟು ಪತ್ರಿಕಾ ಮಾರ್ಗವನ್ನು ಆರಂಭಿಸಬಹುದು ಎಂದು ಪಟ್ಟಿ ಮಾಡಿ. ಅವರಿಗೆ ಇತ್ತೀಚಿಗಿನ ಸಂಚಿಕೆಯನ್ನು ನೀಡಿ. ಅಲ್ಲಿಂದ ಬರುವಾಗ, ‘ಮುಂದಿನ ಸಂಚಿಕೆಯನ್ನು ಕೊಡಲು ಮತ್ತೆ ಬರುತ್ತೇನೆ’ ಎಂದು ಹೇಳಿ.