ಬೈಬಲಿನಲ್ಲಿರುವ ರತ್ನಗಳು | 2 ಪೂರ್ವಕಾಲವೃತ್ತಾಂತ 33–36
ನಿಜ ಪಶ್ಚಾತ್ತಾಪವನ್ನು ಯೆಹೋವನು ಮಾನ್ಯಮಾಡುತ್ತಾನೆ
ಮುದ್ರಿತ ಸಂಚಿಕೆ
ಮನಸ್ಸೆ
ಅಶ್ಶೂರದವರು ಅವನನ್ನು ಸೆರೆಹಿಡಿದು ಬಾಬೆಲಿಗೆ ಒಯ್ಯುವಂತೆ ಯೆಹೋವನು ಅನುಮತಿಸಿದನು
ಸೆರೆಹೋಗುವ ಮುಂಚಿನ ಆಳ್ವಿಕೆಯಲ್ಲಿ
ಸುಳ್ಳು ದೇವರುಗಳಿಗೆ ಯಜ್ಞವೇದಿಗಳನ್ನು ಕಟ್ಟಿಸಿದನು
ಸ್ವಂತ ಮಕ್ಕಳನ್ನು ಆಹುತಿಕೊಟ್ಟನು
ನಿರಪರಾಧಿಗಳ ರಕ್ತವನ್ನು ಸುರಿಸಿದನು
ಪ್ರೇತ ವ್ಯವಹಾರವನ್ನು ದೇಶದಲ್ಲೆಲ್ಲಾ ಹಬ್ಬಿಸಿದನು
ಬಿಡುಗಡೆಯ ನಂತರದ ಆಳ್ವಿಕೆಯಲ್ಲಿ
ತನ್ನನ್ನು ಬಹಳವಾಗಿ ತಗ್ಗಿಸಿಕೊಂಡನು
ಯೆಹೋವನಿಗೆ ಪ್ರಾರ್ಥಿಸಿದನು, ಯಜ್ಞಗಳನ್ನು ಅರ್ಪಿಸಿದನು
ಸುಳ್ಳುದೇವರುಗಳ ಯಜ್ಞವೇದಿಗಳನ್ನು ಕೆಡವಿಸಿದನು
ಯೆಹೋವನನ್ನೇ ಆರಾಧಿಸುವಂತೆ ಪ್ರಜೆಗಳಿಗೆ ಆಜ್ಞಾಪಿಸಿದನು
ಯೋಷೀಯ
ತನ್ನ ಆಳ್ವಿಕೆಯುದ್ದಕ್ಕೂ
ಯೆಹೋವನನ್ನು ಹುಡುಕಿದನು
ಯೂದ ಮತ್ತು ಯೆರೂಸಲೇಮನ್ನು ಶುದ್ಧಪಡಿಸಿದನು
ಯೆಹೋವನ ಮನೆಯನ್ನು ಜೀರ್ಣೋದ್ಧಾರ ಮಾಡಿಸಿದನು, ಧರ್ಮೋಪದೇಶದ ಗ್ರಂಥವು ಸಿಕ್ಕಿತು