ಬೈಬಲ್ ಅಧ್ಯಯನ ಮತ್ತು ಧ್ಯಾನಕ್ಕಾಗಿ ಸಮಯ ಮಾಡಿಕೊಳ್ಳಿ
ಮಾದರಿ ನಿರೂಪಣೆಗಳು
ವಿಡಿಯೋಗಳು
ಪ್ರಶ್ನೆ: ನಾವು ಇವತ್ತು ತುಂಬಾ ಆಸಕ್ತಿಕರವಾದ ವಿಡಿಯೋಗಳ ಬಗ್ಗೆ ಮಾತಾಡುತ್ತಿದ್ದೇವೆ. ಇವು ಮಕ್ಕಳನ್ನು ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ಬೆಳೆಸಲು ಸಹಾಯ ಮಾಡುತ್ತೆ. ಅಂಥ ಒಂದು ವಿಡಿಯೋ ನೋಡಲು ಇಷ್ಟಪಡುತ್ತೀರಾ?
ಹೀಗೆ ಮಾಡಿ: ಯೆಹೋವ ದೇವರ ಗೆಳೆಯರಾಗೋಣ ಸರಣಿಯ ಯಾವುದಾದರೂ ಒಂದು ವಿಡಿಯೋ ತೋರಿಸಿ. ಆಮೇಲೆ ಮನೆಯವರಿಗೆ jw.org ವೆಬ್ಸೈಟಿನ ಬಗ್ಗೆ ತಿಳಿಸಿ. ವೆಬ್ಸೈಟಿನಲ್ಲಿ ಈ ರೀತಿಯ ವಿಡಿಯೋಗಳು ಎಲ್ಲಿವೆ ಎಂದು ತೋರಿಸಿ ಕೊಡಿ.
ಸತ್ಯವನ್ನು ಕಲಿಸಿ
ಪ್ರಶ್ನೆ: ಜೀವಕ್ಕೆ ನಾವು ಹೇಗೆ ಗೌರವ ತೋರಿಸಬಹುದು?
ವಚನ: ಪ್ರಕ 4:11
ಸತ್ಯ: ಜೀವವು ದೇವರಿಂದ ಬಂದ ಒಂದು ಉಡುಗೊರೆಯಾಗಿದೆ. ಅದಕ್ಕಾಗಿ ನಾವು ಅದನ್ನು ತುಂಬಾ ಅಮೂಲ್ಯವಾಗಿ ಎಣಿಸಬೇಕು. ನಾವು ಜೀವಕ್ಕೆ ಗೌರವ ಕೊಡುವುದರಿಂದ ಸುರಕ್ಷತೆ ಬಗ್ಗೆ ಚಿಂತಿಸುತ್ತೇವೆ. ಉದ್ದೇಶಪೂರ್ವಕವಾಗಿ ಯಾರ ಜೀವಕ್ಕೂ ಹಾನಿ ಮಾಡುವುದಿಲ್ಲ.
ಸುಖ ಸಂಸಾರಕ್ಕೆ ಏನು ಅವಶ್ಯ?
ಪ್ರಶ್ನೆ: ಈ ಕರಪತ್ರದಲ್ಲಿರುವ ಪ್ರಶ್ನೆಯನ್ನು ಮತ್ತು ಅದಕ್ಕಿರುವ ಆಯ್ಕೆಗಳನ್ನು ನೋಡಿ. ನಿಮ್ಮ ಆಯ್ಕೆ ಯಾವುದು?
ವಚನ: ಲೂಕ 11:28
ಕರಪತ್ರ ಕೊಡುವಾಗ ಹೀಗೆ ಹೇಳಿ: ಕುಟುಂಬ ಜೀವನದ ಬಗ್ಗೆ ದೇವರು ಹೇಳುವುದನ್ನು ನಾವು ಏಕೆ ನಂಬಬಹುದು ಅಂತ ಈ ಕರಪತ್ರದಲ್ಲಿ ಇದೆ ಮತ್ತು ಅದರಿಂದ ನಿಮ್ಮ ಕುಟುಂಬಕ್ಕೇನು ಪ್ರಯೋಜನ ಎಂದೂ ಇದರಲ್ಲಿದೆ.
ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.